Tag: ಬಾಕ್ಸ್ ಆಫೀಸ್

  • ‘ಕಾಂತಾರ’ ಸಿನಿಮಾದ ನಾಲ್ಕನೇ ದಿನದ ಕಲೆಕ್ಷನ್ ಕೂಡ ಕೋಟಿ ಕೋಟಿ

    ‘ಕಾಂತಾರ’ ಸಿನಿಮಾದ ನಾಲ್ಕನೇ ದಿನದ ಕಲೆಕ್ಷನ್ ಕೂಡ ಕೋಟಿ ಕೋಟಿ

    ಸ್ಯಾಂಡಲ್ ವುಡ್ ನಲ್ಲಿ ಇದೀಗ ಕಾಂತಾರ (Kantara) ಸಿನಿಮಾದ ಕಲೆಕ್ಷನ್ ಕುರಿತಾದದ್ದೇ ಮಾತು. ಶುಕ್ರವಾರದಿಂದ ಸೋಮವಾರದವರೆಗೂ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಾಲ್ಕನೇ ದಿನ ಕೂಡ ಭರ್ಜರಿಯಾಗಿಯೇ ಕಲೆಕ್ಷನ್ ಮಾಡಿದ್ದು, ನಾಲ್ಕು ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ನಾಲ್ಕನೇ ದಿನವೂ ಕೂಡ ಉತ್ತಮ ಕಲೆಕ್ಷನ್ ಆಗಿದೆ.

    ಸಿನಿಮಾ ತಂಡವೇ ಹೇಳಿಕೊಂಡಂತೆ ರಿಷಬ್ ಶೆಟ್ಟಿ (Rishabh Shetty) ಅವರ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರಕ್ಕೆ ಹೆಚ್ಚು ಹಣ ಬಂದಿದೆಯಂತೆ. ಅದರಲ್ಲೂ ಮೊದಲ ಮೂರು ದಿನಗಳಲ್ಲೂ ಅತೀ ಹೆಚ್ಚು ಹಣ ಮಾಡಿದೆಯಂತೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ಮೂರು ದಿನಗಳ ಕಾಲ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮುಂದಿನ ಮೂರು ದಿನಗಳ ಟಿಕೆಟ್ ಫಾಸ್ಟ್ ಫಿಲ್ಲಿಂಗ್ ಆಗುತ್ತಿವೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಸ್ಯಾಂಡಲ್ ವುಡ್ ಟ್ರೇಡ್ ಅನಲಿಸ್ಟ್ ಗಳ ಪ್ರಕಾರ ಈ ಸಿನಿಮಾ ರಿಲೀಸ್ ಆದ ದಿನ (ಶುಕ್ರವಾರ) 5 ರಿಂದ 6 ಕೋಟಿ ರೂಪಾಯಿ ಬಂದಿದೆ ಎಂದು ಹೇಳಲಾಗಿತ್ತು. ಎರಡನೇ ದಿನ (ಶನಿವಾರ) 8 ಕೋಟಿ, ಮೂರನೇ ದಿನ (ರವಿವಾರ) 10 ಕೋಟಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಮೂರನೇ ದಿನಕ್ಕೆ 23 ಕೋಟಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ.

    ರಿಷಬ್ ಶೆಟ್ಟಿ ನಿರ್ದೇಶಿಸಿ, ಈ ಸಿನಿಮಾದಲ್ಲಿ ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅಚ್ಯುತ್ ಕುಮಾರ್ (Achyut Kumar), ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದು, ಅದ್ದೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ವಿಜಯ್ ಕಿರಗಂದೂರ್, ತೆಲುಗಿನ ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ನಟರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ತಮಿಳಿನ ಮಣಿರತ್ನಂ (Mani Ratnam) ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾ ಈ ವಾರ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ರಿಲೀಸ್ ಆಗಿ ಮೂರೇ ದಿನಕ್ಕೆ 230 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮೂರೇ ದಿನಕ್ಕೆ ಬಾಕ್ಸ್ ಆಫೀಸಿನಲ್ಲಿ(Box Office) ಧೂಳೆಬ್ಬಿಸಿದೆ.

    ತಮಿಳು ಸಿನಿಮಾ ರಂಗದ ವಿಶ್ಲೇಷಕ ರಮೇಶ್ ಬಾಲಾ ಈ ಕುರಿತು ಬರೆದುಕೊಂಡಿದ್ದು, ಪೊನ್ನಿಯಿನ್ ಸೆಲ್ವನ್ (PS1) ಸಿನಿಮಾ ಬಹುತೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸಿನಲ್ಲಿ 130 ಕೋಟಿಗಳನ್ನು ಗಳಿಸಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಇದು ವಿಶ್ವದಾದ್ಯಂತ ಗಳಿಸಿದ ಬಾಕ್ಸ್ ಆಫೀಸ್ ರಿಪೋರ್ಟ್ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಕಾದಂಬರಿಕಾರ ಕಲ್ಕಿ ಕೃಷ್ಣಮೂರ್ತಿ (Kalki Krishnamurthy) ಅವರ ಕಾದಂಬರಿಯನ್ನು ಆಧರಿಸಿ ಪೊನ್ನಿಯಿನ್ ಸೆಲ್ವನ್ ಸಿನಿಮಾವನ್ನು ತಯಾರಿ ಮಾಡಿದ್ದು, ಐಶ್ವರ್ಯ ರೈ (Aishwarya Rai) , ತ್ರಿಶಾ, ಚಿಯಾನ್ ವಿಕ್ರಮ್, ಕಾರ್ತಿ ಸೇರಿದಂತೆ ದಿಗ್ಗಜ ಕಲಾವಿದರೇ ಈ ಸಿನಿಮಾದಲ್ಲಿ ಇದ್ದಾರೆ. ಎ.ಆರ್.ರೆಹಮಾನ್ (Rahman) ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರವಿವರ್ಮನ್ ಅವರ ಸಿನಿಮಾಟೋಗ್ರಫಿ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದೆ.

    Live Tv
    [brid partner=56869869 player=32851 video=960834 autoplay=true]

  • ಮೂರು ದಿನಕ್ಕೆ ‘ಕಾಂತಾರ’ ಬಾಕ್ಸ್ ಆಫೀಸ್ ಗಳಿಕೆ : ಸಿನಿ ಪಂಡಿತರ ಪಕ್ಕಾ ಲೆಕ್ಕಾಚಾರ

    ಮೂರು ದಿನಕ್ಕೆ ‘ಕಾಂತಾರ’ ಬಾಕ್ಸ್ ಆಫೀಸ್ ಗಳಿಕೆ : ಸಿನಿ ಪಂಡಿತರ ಪಕ್ಕಾ ಲೆಕ್ಕಾಚಾರ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದೇ ರೀತಿಯ ಥಿಯೇಟರ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ (Box Office) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಶುಕ್ರವಾರ ಕಡಿಮೆ ಸಂಖ್ಯೆಯ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಆಗಿತ್ತು. ನೋಡುಗರು ಅದ್ಭುತ ಪ್ರತಿಕ್ರಿಯೆ ಕೊಟ್ಟಿದ್ದರಿಂದ, ಸಂಖ್ಯೆ ಹೆಚ್ಚಾಗಿದೆ.

    ಸಿನಿಮಾ ತಂಡವೇ ಹೇಳಿಕೊಂಡಂತೆ ರಿಷಬ್ ಶೆಟ್ಟಿ (Rishabh Shetty) ಅವರ ಈವರೆಗಿನ ಸಿನಿಮಾಗಳಿಗಿಂತಲೂ ಈ ಚಿತ್ರಕ್ಕೆ ಹೆಚ್ಚು ಹಣ ಬಂದಿದೆಯಂತೆ. ಅದರಲ್ಲೂ ಮೊದಲ ಮೂರು ದಿನಗಳಲ್ಲೂ ಅತೀ ಹೆಚ್ಚು ಹಣ ಮಾಡಿದೆಯಂತೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ಮೂರು ದಿನಗಳ ಕಾಲ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮುಂದಿನ ಮೂರು ದಿನಗಳ ಟಿಕೆಟ್ ಫಾಸ್ಟ್ ಫಿಲಿಂಗ್ ಆಗುತ್ತಿವೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಸ್ಯಾಂಡಲ್ ವುಡ್ ಟ್ರೇಡ್ ಅನಲಿಸ್ಟ್ ಗಳ ಪ್ರಕಾರ ಈ ಸಿನಿಮಾ ರಿಲೀಸ್ ಆದ ದಿನ (ಶುಕ್ರವಾರ) 5 ರಿಂದ 6 ಕೋಟಿ ರೂಪಾಯಿ ಬಂದಿದೆ ಎಂದು ಹೇಳಲಾಗಿತ್ತು. ಎರಡನೇ ದಿನ (ಶನಿವಾರ) 8 ಕೋಟಿ, ಮೂರನೇ ದಿನ (ರವಿವಾರ) 10 ಕೋಟಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಮೂರನೇ ದಿನಕ್ಕೆ 23 ಕೋಟಿಗೂ ಅಧಿಕ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ.

    ರಿಷಬ್ ಶೆಟ್ಟಿ ನಿರ್ದೇಶಿಸಿ, ಈ ಸಿನಿಮಾದಲ್ಲಿ ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣ ಮಾಡಿದೆ. ಅಚ್ಯುತ್ ಕುಮಾರ್ (Achyut Kumar), ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದು, ಅದ್ದೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ವಿಜಯ್ ಕಿರಗಂದೂರ್, ತೆಲುಗಿನ ಪ್ರಭಾಸ್ ಸೇರಿದಂತೆ ಅನೇಕ ಸ್ಟಾರ್ ನಟರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಮತ್ತೊಂದು ಸಿನಿಮಾ ಸಾವಿರ ಕೋಟಿ ಲೆಕ್ಕಾಚಾರ: ವಿದೇಶಗಳಿಂದಲೂ ‘ಕಬ್ಜ’ಗೆ ಬೇಡಿಕೆ

    ಕನ್ನಡದ ಮತ್ತೊಂದು ಸಿನಿಮಾ ಸಾವಿರ ಕೋಟಿ ಲೆಕ್ಕಾಚಾರ: ವಿದೇಶಗಳಿಂದಲೂ ‘ಕಬ್ಜ’ಗೆ ಬೇಡಿಕೆ

    ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್ (Kiccha Sudeep) ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾದ ಟೀಸರ್ ಕೆಲವೇ ಗಂಟೆಗಳಲ್ಲಿ 25 ಮೀಲಿಯನ್ ದಾಟುತ್ತಿದ್ದಂತೆಯೇ ಸಿನಿಮಾದ ಲೆಕ್ಕಾಚಾರವೇ ಬದಲಾಗುತ್ತಿದೆ. ಈ ಸಿನಿಮಾ ಮೊದಲು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಬರೋಬ್ಬರಿ ಒಂಬತ್ತು ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆರ್.ಚಂದ್ರು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ಬದಲಾಗಿದೆ.

    ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಈ ಸಿನಿಮಾದ ಮೇಕಿಂಗ್ ಮತ್ತು ಗುಣಮಟ್ಟವನ್ನು ಕೆಜಿಎಫ್ ಚಿತ್ರಕ್ಕೆ ಹೋಲಿಸಲಾಯಿತು. ಅದ್ಧೂರಿ ಮೇಕಿಂಗ್, ಕ್ಯಾಮೆರಾ ವರ್ಕ್, ಶೂಟಿಂಗ್ ಮಾಡಿರುವ ಶೈಲಿ, ಹಿನ್ನೆಲೆ ಸಂಗೀತ, ಭಾರೀ ಸೆಟ್ ಇದೆಲ್ಲವನ್ನೂ ಗಮನಿಸಿ ಕನ್ನಡದ ಮತ್ತೊಂದು ಕೆಜಿಎಫ್ (KGF 2) ಸಿನಿಮಾ ಎಂದು ಕಬ್ಜವನ್ನು ಬಣ್ಣಿಸಲಾಯಿತು. ಹೀಗಾಗಿ ಸಿನಿಮಾ ವಿದೇಶದಲ್ಲೂ ಡಿಮಾಂಡ್ ಕ್ರಿಯೇಟ್ ಮಾಡಿದೆ. ಕೆಜಿಎಫ್ ಚಿತ್ರವು ಯಾವೆಲ್ಲ ದೇಶಗಳಲ್ಲಿ ಬಿಡುಗಡೆ ಆಯಿತೋ ಅಷ್ಟು ದೇಶಗಳಿಂದ ಕಬ್ಜ ಸಿನಿಮಾಗೆ ಬೇಡಿಕೆ ಬಂದಿದೆ.

    ಕಬ್ಜ ಸಿನಿಮಾದ ಟೀಸರ್ (Teaser) ಮಾಡಿದ ಮೋಡಿಯಿಂದಾಗಿ ಭಾರತದಲ್ಲೂ ಚಿತ್ರಕ್ಕೆ ಸಖಯ್ ಡಿಮಾಂಡ್ ಕ್ರಿಯೇಟ್ ಆಗಿದೆ ಎನ್ನಲಾಗುತ್ತಿದೆ. ಬಾಲಿವುಡ್, ತಮಿಳು ಹಾಗೂ ತೆಲುಗು ಸಿನಿಮಾ ರಂಗದ ಖ್ಯಾತ ವಿತರಕ ಸಂಸ್ಥೆಗಳು ಈಗಾಗಲೇ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಕುರಿತು ಮಾತನಾಡಿದ ನಿರ್ದೇಶಕ ಆರ್.ಚಂದ್ರು, (R. Chandru) ‘ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಮಾಡಲು ವಿತರಕರು ಮುಂದೆ ಬಂದಿದ್ದಾರೆ. ಇನ್ನೂ ಅದು ಮಾತುಕತೆ ಹಂತದಲ್ಲಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚೆ ಸಿನಿಮಾಗೆ ಡಿಮಾಂಡ್ ಕ್ರಿಯೆಟ್ ಆಗಿದೆ. ಅಲ್ಲದೇ, ಬೇರೆ ಬೇರೆ ದೇಶಗಳಿಂದಲೂ ಡಿಮಾಂಡ್ ಬರುತ್ತಿದೆ’ ಎನ್ನುತ್ತಾರೆ.

    ಈಗಾಗಲೇ ಕನ್ನಡದ ಕೆಜಿಎಫ್ 2 ಸಿನಿಮಾ ಸರ್ವ ರೀತಿಯಲ್ಲೂ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್ (Box Office) ಅನ್ನೇ ನಡುಗಿಸಿದೆ. ಸಾವಿರಾರು ಕೋಟಿ ಬ್ಯುಸಿನೆಸ್ ಮಾಡುವ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಕಬ್ಜ ಸಿನಿಮಾದ ಲೆಕ್ಕಾಚಾರ ಕೂಡ ಇದೀಗ ಸಾವಿರ ಕೋಟಿಯಲ್ಲಿ ಶುರುವಾಗಿದೆ. ಬಾಲಿವುಡ್ ಚಿತ್ರ ವಿಮರ್ಶಕರು ಹಾಗೂ ಸಿನಿ ಟ್ರೇಡ್ ಅನಾಲಿಸಿಸ್ ಕೂಡ ಕೆಜಿಎಫ್ ಸಿನಿಮಾದೊಂದಿಗೆ ಕಬ್ಜವನ್ನು ಕಂಪೇರ್ ಮಾಡುತ್ತಿರುವುದರಿಂದ ಕಬ್ಜ ಕೂಡ ಮಾರುಕಟ್ಟೆಯನ್ನು ವಿಸ್ತರಿಸಬಹುದು ಎಂದು ವಿವರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಜನ ಗಣ ಮನ’ ಅನ್ನುವುದು ಅನುಮಾನ : 8 ಕೋಟಿ ನೀರಿನಲ್ಲಿ ಹೋಮ

    ವಿಜಯ್ ದೇವರಕೊಂಡ ‘ಜನ ಗಣ ಮನ’ ಅನ್ನುವುದು ಅನುಮಾನ : 8 ಕೋಟಿ ನೀರಿನಲ್ಲಿ ಹೋಮ

    ಟ ವಿಜಯ್ ದೇವರಕೊಂಡ (Vijay Devarakonda) ಮತ್ತು ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್ ನ ‘ಲೈಗರ್’ (Ligar) ಸಿನಿಮಾ ಬಾಕ್ಸ್ ಆಫೀಸಿನಲ್ಲಿ (Box Office) ಮಕಾಡೆ ಮಲಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಘಟಾನುಘಟಿಗಳೇ ಈ ಸಿನಿಮಾದ ಬೆನ್ನಿಗೆ ನಿಂತಿದ್ದರು. ಆದರೆ, ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ನಿರ್ಮಾಪಕರಿಗೂ ಕಾಸು ತಂದುಕೊಡಲಿಲ್ಲ. ಹೀಗಾಗಿ ಈ ಕಾಂಬಿನೇಷನ್ ನ ಮತ್ತೊಂದು ಸಿನಿಮಾ ಬರುವುದು ಅನುಮಾನ ಎನ್ನಲಾಗುತ್ತಿದೆ.

    ಲೈಗರ್ ಸಿನಿಮಾದ ಬೆನ್ನಲ್ಲೇ ವಿಜಯ್ ದೇವರಕೊಂಡು ಹಾಗೂ ಪೂರಿ ಜಗನ್ನಾಥ್ (Puri Jagannath) ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದರು. ಈ ಚಿತ್ರಕ್ಕೆ ‘ಜನ ಗಣ ಮನ’ ಎಂದು ಹೆಸರು ಇಡಲಾಗಿತ್ತು. ಅದ್ದೂರಿಯಾಗಿ ಮುಹೂರ್ತವನ್ನು ಮಾಡಿದ್ದರು. ಬರೋಬ್ಬರಿ ಎಂಟು ಕೋಟಿ ಖರ್ಚು ಮಾಡಿ ಕೆಲವು ದೃಶ್ಯಗಳನ್ನೂ ಶೂಟ್ ಮಾಡಿತ್ತು. ಆದರೆ, ಇದೀಗ ಆ ಸಿನಿಮಾ ಮುಂದುವರೆಯುವುದು ಡೌಟು ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

     

    ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಬೆಂಗಳೂರಿಗೆ (Bangalore) ಆಗಮಿಸಿದ್ದರು. ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದ ವಿಜಯ್ ಅವರನ್ನು ಮಾಧ್ಯಮದವರು ‘ಜನ ಗಣ ಮನ’ (Jana Gana Mana) ಸಿನಿಮಾದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆ ಸಿನಿಮಾದ ಬಗ್ಗೆ ಮಾತನಾಡದ ವಿಜಯ್, ‘ಆ ವಿಷ್ಯ ಬಿಟ್ಟಾಕಿ, ಇದೀಗ ಬಂದಿರುವುದು ಪ್ರಶಸ್ತಿ ಸಮಾರಂಭಕ್ಕೆ. ಈ ಗಳಿಗೆಯನ್ನು ಎಂಜಾಯ್ ಮಾಡೋಣ’ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಏನೂ ಮಾತನಾಡದೇ ಅಲ್ಲಿಂದ ತೆರಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬ್ರಹ್ಮಾಸ್ತ್ರ’ ಕಲೆಕ್ಷನ್ ಎಲ್ಲಾ ಬುರುಡೆ ಎಂದು ಟೀಕೆ ಮಾಡಿದ ನಟಿ ಕಂಗನಾ ರಣಾವತ್

    ‘ಬ್ರಹ್ಮಾಸ್ತ್ರ’ ಕಲೆಕ್ಷನ್ ಎಲ್ಲಾ ಬುರುಡೆ ಎಂದು ಟೀಕೆ ಮಾಡಿದ ನಟಿ ಕಂಗನಾ ರಣಾವತ್

    ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ‘ಬ್ರಹ್ಮಾಸ್ತ್ರ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಕಳೆದ ಎರಡು ದಿನಗಳಿಂದ ಚರ್ಚೆ ಆಗುತ್ತಿದೆ. ಸಿನಿಮಾ ರಿಲೀಸ್ ಆಗಿ ಮೊದಲನೇ ದಿನವೇ ನೂರು ಕೋಟಿ ಕ್ಲಬ್ ಗೆ ಸಿನಿಮಾ ಸೇರಿತು ಎಂದು ಹೇಳಲಾಗಿತ್ತು. ಇದೀಗ ಮೂರು ದಿನಗಳ ಒಟ್ಟು ಕಲೆಕ್ಷನ್ 125 ಕೋಟಿ ಎಂದು ವರದಿಯಾಗಿದೆ. ಸಿನಿಮಾ ತಂಡವು ಅಧಿಕೃತ ಮಾಹಿತಿ ಕೊಡದೇ ಇರುವ ಕಾರಣಕ್ಕಾಗಿ ಈ ಕಲೆಕ್ಷನ್ ಸೋಮವಾರಕ್ಕೆ 200 ಕೋಟಿ ತಲುಪಿದೆ.

    ಸಿನಿಮಾದ ನಿರ್ಮಾಪಕ ಕರಣ್ ಜೋಹಾರ್ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ದಾಖಲೆ ರೀತಿಯಲ್ಲಿ  ಆಗಿದೆ. ಮೊದಲ ದಿನವೇ ನೂರು ಕೋಟಿ ಕ್ಲಬ್‍ಗೆ ಸೇರಿದ್ದು ನಿಜ ಎಂದು ಹೇಳಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ವೀಕೆಂಡ್ ನಲ್ಲಿ ಪ್ರೇಕ್ಷಕರು ಸಿನಿಮಾ ಒಪ್ಪಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಹಾಗಾಗು ಶುಕ್ರವಾರ, ಶನಿವಾರ ಮತ್ತು ಭಾನುವಾರದ ಒಟ್ಟು ಕಲೆಕ್ಷನ್ ಅಂದಾಜು 200 ಕೋಟಿ ಎಂದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

     

    ಇದೆಲ್ಲವನ್ನೂ ಬಾಲಿವುಡ್ ನಟಿ ಕಂಗನಾ ರಣಾವತ್ ಅಲ್ಲಗಳೆಯುತ್ತಾರೆ. ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಫೇಕ್, ಅದೊಂದು ಬುರುಡೆ ಪುರಾಣ ಎಂದು ಟೀಕೆ ಮಾಡಿದ್ದಾರೆ. ಸುಖಾಸುಮ್ಮನೆ ಕಲೆಕ್ಷನ್ ಬಗ್ಗೆ ಗಾಸಿಪ್ ಹಬ್ಬಿಸಲಾಗುತ್ತಿದೆ. 350 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ ಎಂದು ಕೇಳಲ್ಪಟ್ಟಿದ್ದೆ. ಈವರೆಗೂ ನೂರೇ ಕೋಟಿ ಬಂದಿದೆ ಎಂದರೂ, ಇನ್ನೂ 250 ಕೋಟಿ ಬರಬೇಕು. ಈಗಲೇ ಸಿನಿಮಾ ಗೆದ್ದಿದೆ ಅಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಟೀಕೆ ಮಾಡಿದ್ದಾರೆ.

     

     

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ್ ರೋಣ’ ಕಲೆಕ್ಷನ್ 200 ಕೋಟಿ: ಹಲವು ಅಡೆತಡೆಗಳ ನಡುವೆಯೂ ಗೆದ್ದ ಸುದೀಪ್

    ‘ವಿಕ್ರಾಂತ್ ರೋಣ’ ಕಲೆಕ್ಷನ್ 200 ಕೋಟಿ: ಹಲವು ಅಡೆತಡೆಗಳ ನಡುವೆಯೂ ಗೆದ್ದ ಸುದೀಪ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾಗೆ ಆದ ತೊಂದರೆ ಒಂದಾ, ಎರಡಾ? ಸಿನಿಮಾ ಸೋಲಿಸಲು ವಿರೋಧಿಗಳು ಏನೆ‍ಲ್ಲ ಕಸರತ್ತು ಮಾಡಿದರು. ಪೈರಸಿ ಕಾಪಿಯಿಂದ ಹಿಡಿದು ನೆಗೆಟಿವ್ ಪ್ರಚಾರ ಕೂಡ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಸೋಲಿಸಲು ಏನೆಲ್ಲ ತಂತ್ರಗಳನ್ನು ಹೆಣೆಯಲಾಯಿತು. ಆದರೂ, ಸಿನಿಮಾ ಸೋಲಲಿಲ್ಲ. ಅಚ್ಚರಿ ಎನ್ನುವಂತೆ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ.

    ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಎಷ್ಟು ಕಲೆಕ್ಷನ್ ಮಾಡಿರಬಹುದು ಎನ್ನುವ ಪ್ರಶ್ನೆ ಕಿಚ್ಚನ ಅಭಿಮಾನಿಗಳಲ್ಲಿ ಮೂಡಿತ್ತು. ಊಹಾಪೋಹಗಳು ಏನೇ ಇದ್ದರೂ, ಅಧಿಕೃತ ಮಾಹಿತಿಯು ಅವರಿಗೆ ಬೇಕಿತ್ತು. ಇದೀಗ ಅಧಿಕೃತ ಮಾಹಿತಿಯೇ ಹೊರಬಿದ್ದಿದೆ. ಇನ್ನೇನು ಜೀ 5 ಓಟಿಟಿಯಲ್ಲಿ ಸಿನಿಮಾ ಪ್ರಸಾರ ಕಾಣಲಿದ್ದು, ಇದು 200 ಕೋಟಿ ಗಳಿಸಿದ ಸಿನಿಮಾ ಎಂದು ಪ್ರೊಮೊ ರಿಲೀಸ್ ಮಾಡಲಾಗಿದೆ. ಅಲ್ಲಿಗೆ ವಿಕ್ರಾಂತ್ ರೋಣ ಡಬಲ್ ನೂರು ಕೋಟಿ ಕ್ಲಬ್ ಸೇರಿದಂತಾಗಿದೆ. ಇದನ್ನೂ ಓದಿ:ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಇತ್ತೀಚಿನ ದಿನಗಳಲ್ಲಿ ಸುದೀಪ್ ಅವರ ಸಿನಿಮಾ ರಿಲೀಸ್ ಆದಾಗ ನೆಗೆಟಿವ್ ಪ್ರಚಾರಗಳನ್ನು ವಿರೋಧಿಗಳು ಮಾಡುತ್ತಿದ್ದಾರೆ. ಸಿನಿಮಾವನ್ನು ಪೈರಸಿ ಮಾಡಿ, ಆ ಲಿಂಕ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಈ ಹಿಂದೆ ಪೈಲ್ವಾನ್ ಸಿನಿಮಾಗೂ ಅಷ್ಟೇ ಕಾಟವನ್ನು ನೀಡಲಾಗಿತ್ತು. ವಿಕ್ರಾಂತ್ ರೋಣವನ್ನೂ ಅವರು ಬಿಡಲಿಲ್ಲ. ವಿರೋಧಿಗಳು ಏನೇ ಮಾಡಿದರೂ ಕಿಚ್ಚ ಈ ಸಲವೂ ಅವೆಲ್ಲವನ್ನೂ ವಿರೋಧಿಸಿ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ: 200 ಕೋಟಿ ಆಫರ್ ಟ್ವಿಟ್ ವೈರಲ್

    ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ: 200 ಕೋಟಿ ಆಫರ್ ಟ್ವಿಟ್ ವೈರಲ್

    ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಲೈಗರ್ ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿತ್ತು. ಬಾಕ್ಸ್ ಆಫೀಸಿನಲ್ಲಿ ಈ ಚಿತ್ರ ಭಾರೀ ಸೌಂಡ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿಯೇ ಈ ಸಿನಿಮಾ ಕೊಳ್ಳಲು ಮುಗಿಬಿದ್ದಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎನ್ನುತ್ತಿವೆ ಮೂಲಗಳು. ನೋಡುಗರು ಕೂಡ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ರಿಲೀಸ್ ಆದ ಮೊದಲ ದಿನವೇ ಸಿನಿಮಾ ಮುಗ್ಗರಿಸಿದೆ.

    ಈ ನಡುವೆ ವಿಜಯ್ ದೇವರಕೊಂಡ ಮಾಡಿದ್ದ ಟ್ವಿಟ್ ವೊಂದು ಸಖತ್ ವೈರಲ್ ಆಗುತ್ತಿದೆ. ಹಲವು ತಿಂಗಳ ಹಿಂದೆ ಲೈಗರ್ ಸಿನಿಮಾದ ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿಜಯ್ ದೇವರಕೊಂಡ ಟ್ವಿಟ್ ಮಾಡಿದ್ದರು. ಅದರಲ್ಲಿ ‘ಓಟಿಟಿ ಸಂಸ್ಥೆಯೊಂದು 200 ಕೋಟಿ ರೂಪಾಯಿಗೆ ಲೈಗರ್ ಸಿನಿಮಾ ಕೇಳಿದೆ. ಇದು ಸಣ್ಣ ಮೊತ್ತದ ಹಣ. ಥಿಯೇಟರ್ ನಲ್ಲಿ ನಾವು ನೋಡಿಕೊಳ್ಳುತ್ತೇವೆ’ ಎಂದು ಟ್ವಿಟ್ ಮಾಡಿದ್ದರು. ಆದರೆ, ಈಗಿನ ಬಾಕ್ಸ್ ಆಫೀಸ್ ರಿಪೋರ್ಟ್ ನೋಡಿದರೂ, ಆ ಮೊತ್ತದ ಕಾಲು ಭಾಗವಾದರೂ ದುಡ್ಡು ಬರತ್ತಾ ಎನ್ನುವಂತಾಗಿದೆ. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ವಿಜಯ್ ದೇವರಕೊಂಡ ಆ ವೇಳೆಯಲ್ಲಿ ಹೆಮ್ಮೆಯಿಂದ ಬರೆದುಕೊಂಡರೋ, ಅಥವಾ ಅಹಂನಿಂದ ಬರೆದುಕೊಂಡರೋ ಬೇರೆ ಮಾತು. ಆದರೆ, ನೆಟ್ಟಿಗರು ಅದೇ ಟ್ವಿಟ್ ತಗೆದುಕೊಂಡು ಈಗ ಗೇಲಿ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡಗೆ ಇಷ್ಟೊಂದು ಕಾನ್ಫಿಡೆನ್ಸ್ ಇರಬಾರದು ಎಂದು ಪಾಠ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ವಿಜಯ್ ದೇವರಕೊಂಡಗೆ ವಿಜಯ ದೊರೆಯಲಿ ಎಂದೂ ಹಲವರು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಲಾಲ್ ಸಿಂಗ್ ಚಡ್ಡಾ’ ಸೋತಿಲ್ಲ, ನಷ್ಟವೂ ಆಗಿಲ್ಲ ಎಂದ ನಿರ್ಮಾಣ ಸಂಸ್ಥೆ

    ‘ಲಾಲ್ ಸಿಂಗ್ ಚಡ್ಡಾ’ ಸೋತಿಲ್ಲ, ನಷ್ಟವೂ ಆಗಿಲ್ಲ ಎಂದ ನಿರ್ಮಾಣ ಸಂಸ್ಥೆ

    ಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತಿದೆ, ಬಾಕ್ಸ್ ಆಫೀಸಿನಲ್ಲಿ ಅದು ಮಕಾಡೆ ಮಲಗಿದೆ ಎಂದೆಲ್ಲ ಮಾತುಗಳು ಕೇಳಿ ಬಂದವು. ಥಿಯೇಟರ್ ಖಾಲಿ ಹೊಡೀತಿವೆ ಎಂದೂ ಸುದ್ದಿ ಆಗಿತ್ತು. ಸಾವಿರಾರು ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದೂ ಹೇಳಲಾಗಿತ್ತು. ಹೀಗಾಗಿ ನಿರ್ಮಾಪಕರಿಗೆ ಈ ಸಿನಿಮಾ ಭಾರೀ ನಷ್ಟ ಮಾಡಿದೆ ಎಂದು ವರದಿ ಆಗಿತ್ತು.

    ಆದರೆ, ಅಸಲಿ ವಿಷಯವೇ ಬೇರೆ ಇದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ನಾವು ನಿರೀಕ್ಷೆ ಮಾಡಿದಷ್ಟು ಹಣ ಬಾರದೇ ಇರಬಹುದು. ಆದರೆ, ಸಿನಿಮಾ ನಿರ್ಮಾಣ ಸಂಸ್ಥೆಗೆ ಲಾಸ್ ಮಾಡಿಲ್ಲ. ನಷ್ಟವನ್ನೂ ಮಾಡಿಲ್ಲ. ನಾವು ಹಾಕಿರುವ ಬಂಡವಾಳ ಈಗಾಗಲೇ ಬಂದಿದೆ. ಹಾನಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಹೇಳಿಕೊಂಡಿದೆ. ಕಪೋಕಲ್ಪಿತ ವಿಷಯಗಳನ್ನು ನಂಬಬೇಡಿ ಎಂದು ಹೇಳಿದೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಇತ್ತೀಚಿನ ವರ್ಷಗಳಲ್ಲಿ ಆಮೀರ್ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದವು. ಆದರೆ, ಲಾಲ್ ಸಿಂಗ್ ಚಡ್ಡಾ ಅಷ್ಟೇನೂ ದುಡ್ಡು ಮಾಡದೇ ಇದ್ದರೂ, ನಿರ್ಮಾಪಕರಿಗೆ ಲಾಸ್ ಅಂತೂ ಮಾಡಿಲ್ಲ ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಈ ಮೂಲಕ ಈ ಸಿನಿಮಾ ಲಾಭ ಹಾನಿಯ ಬಗ್ಗೆ ಮಾತನಾಡುವವರು ಬಾಯಿ ಮುಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • 100 ಕೋಟಿ ಕ್ಲಬ್ ಸೇರಿದೆಯಾ ‘ವಿಕ್ರಾಂತ್ ರೋಣ’ ಸಿನಿಮಾ; ಸಿನಿ ಪಂಡಿತರ ಲೆಕ್ಕಾಚಾರವೇನು?

    100 ಕೋಟಿ ಕ್ಲಬ್ ಸೇರಿದೆಯಾ ‘ವಿಕ್ರಾಂತ್ ರೋಣ’ ಸಿನಿಮಾ; ಸಿನಿ ಪಂಡಿತರ ಲೆಕ್ಕಾಚಾರವೇನು?

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಇಂದಿಗೆ ಐದು ದಿನಗಳು ಕಳೆದಿವೆ. ಪೈರಸಿ, ನೆಗೆಟಿವ್ ಪ್ರಚಾರ ಸೇರಿದಂತೆ ಹಲವು ಅಡೆತಡೆಗಳನ್ನು ಸಿನಿಮಾ ಎದುರಿಸುತ್ತಿದ್ದರೂ, ಈ ನಡುವೆ 100 ಕೋಟಿ ಕ್ಲಬ್ ಸೇರಿದಂತೆ ಎಂದು ಅಭಿಮಾನಿಗಳು ಸಂಭ್ರಮಾಚಾರಣೆ ಮಾಡುತ್ತಿದ್ದಾರೆ. ಸಿನಿಮಾ ಟೀಮ್ ಅಧಿಕೃತವಾಗಿ ಈ ಮಾಹಿತಿಯನ್ನು ಕೊಡದೇ ಇದ್ದರೂ, ಸಿನಿಮಾ ರಿಲೀಸ್ ಆಗಿ ನಾಲ್ಕೇ ದಿನಕ್ಕೆ ನೂರು ಕೋಟಿ ಬಾಚಿದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ ರಿಲೀಸ್ ಆದ ದಿನ ಬರೋಬ್ಬರಿ 35 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂತು ಎಂದು ಹೇಳಲಾಯಿತು. ಹೆಚ್ಚು ಕಡಿಮೆ ಸಿನಿಮಾ ಟೀಮ್ ಕೂಡ ಅದನ್ನು ಒಪ್ಪಿಕೊಂಡಿತು. ಗುರುವಾರ ನಂತರ ಕಲೆಕ್ಷನ್ ವಿಚಾರದಲ್ಲಿ ಮತ್ತಷ್ಟು ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿತ್ರ ರಿಲೀಸ್ ಆದ ನಾಲ್ಕೇ ದಿನಕ್ಕೆ ಅಂದಾಜು 100 ಕೋಟಿ ರೂಪಾಯಿ ವಿತರಕರ ಜೇಬಿಗೆ ಬಂದಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇದನ್ನೂ ಓದಿ:ಹುಲಿ ಜೊತೆ `777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ

    ಆದರೆ, ಸ್ಯಾಂಡಲ್ ವುಡ್ ವಿತರಕರು ಹೇಳುವುದೇ ಬೇರೆ. ಮೊದಲ ದಿನ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಆಗಿದೆ. ಎರಡನೇ ದಿನ ಕೊಂಚ ಮಟ್ಟಿಕೆ ಇಳಿಕೆ ಕಂಡಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಇರುವುದರಿಂದ ಕಲೆಕ್ಷನ್ ಹೆಚ್ಚಿದೆ. ಹೀಗಾಗಿ ಸೋಮವಾರದ ಕಲೆಕ್ಷನ್ ಒಟ್ಟು ಮಾಡಿದರೆ, ಬಹುಶಃ ಐದು ದಿನದ ಗಳಿಕೆ ಒಟ್ಟು 100 ಕೋಟಿ ಎನ್ನಬಹುದು. ಹೀಗಾಗಿ ಐದು ದಿನಕ್ಕೆ ವಿಕ್ರಾಂತ್ ರೋಣ 100 ಕೋಟಿ ಕ್ಲಬ್ ಸೇರಿದೆ ಎಂದು ಹೇಳಲು ಅಡ್ಡಿಯಿಲ್ಲ ಎನ್ನುತ್ತಾರೆ.

    ಈ ಹಿಂದೆ ಸಿನಿಮಾ ತಂಡವೇ ಹೇಳಿಕೊಂಡಂತೆ ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ಸಿನಿಮಾ ರಿಲೀಸ್ ಗೂ ಮುನ್ನ ವಾಪಸ್ಸು ಬಂದಿದೆ. ಹಾಗಾಗಿ ಥಿಯೇಟರ್ ನಿಂದ ಬಂದ ಹಣ ಲಾಭ ಎನ್ನಬಹುದೆ? ಅಥವಾ ವಿತರಕರು ಅಡ್ವಾನ್ಸ್ ಕೊಟ್ಟಿದ್ದ ಹಣವನ್ನೂ ಹಿಡಿದು 100 ಕೋಟಿ ರೂಪಾಯಿ ಲೆಕ್ಕಾಚಾರ ಹಾಕಲಾಗುತ್ತಿದೆಯಾ ಎನ್ನುವುದು ಕ್ಲ್ಯಾರಿಟಿ ಸಿಕ್ಕಿಲ್ಲ. ಆದರೂ, ಕನ್ನಡದ ಮತ್ತೊಂದು ಸಿನಿಮಾ ಈ ವರ್ಷ 100 ಕೋಟಿ ಕ್ಲಬ್ ಸೇರುವ ಮೂಲಕ ಸಿನಿ ಇತಿಹಾಸದಲ್ಲಿ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]