Tag: ಬಾಕ್ಸ್‌ ಆಫೀಸ್‌ ಗಳಿಕೆ

  • 11 ದಿನದಲ್ಲಿ 250 ಕೋಟಿ ರೂ. ದಾಟಿದ `ಸೈಯಾರಾ’ ಕಲೆಕ್ಷನ್

    11 ದಿನದಲ್ಲಿ 250 ಕೋಟಿ ರೂ. ದಾಟಿದ `ಸೈಯಾರಾ’ ಕಲೆಕ್ಷನ್

    ಮೋಹಿತ್ ಸೂರಿ ನಿರ್ದೇಶನದ `ಸೈಯಾರಾ’ (Saiyaara) ಸಿನಿಮಾ ಯಶಸ್ವಿ 11 ದಿನಗಳನ್ನು ಪೂರೈಸುತ್ತಿದ್ದು, ಈ ಮೂಲಕ ತನ್ನ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 250 ಕೋಟಿ ರೂ. ಬಾಚಿಕೊಂಡಿದೆ.

    ಜು.18ರಂದು ತೆರೆಕಂಡ `ಸೈಯಾರಾ’ ಸಿನಿಮಾ ಮೊದಲ ದಿನವೇ 21.5 ಕೋಟಿ ರೂ. ಗಳಿಸಿತು. ದಿನಗಳೆದಂತೆ ಸಿನಿಮಾ ಕ್ರೇಜ್ ಹೆಚ್ಚುತ್ತಲೇ ಇದೆ. ಇದೀಗ ಎರಡನೇ ವಾರದಲ್ಲಿದ್ದು, ಈವರೆಗೆ ಒಟ್ಟು 250 ಕೋಟಿ ರೂ. ಕಲೆಕ್ಷನ್ ಮಾಡಿದೆ.ಇದನ್ನೂ ಓದಿ: ಚಿಕ್ಕಮಗಳೂರು | ಪಶ್ಚಿಮ ಘಟ್ಟದಲ್ಲಿ ಮಳೆಯಬ್ಬರ – ಕೋಡಿ ಬಿದ್ದ 2 ಸಾವಿರ ಎಕರೆಯ ಬೃಹತ್ ಕೆರೆ

    ಸಾಮಾನ್ಯವಾಗಿ ವಾರದ ದಿನಗಳಲ್ಲಿ ಕಡಿಮೆ ಕಲೆಕ್ಷನ್ ಆದರೂ ಕೂಡ ಈವರೆಗೂ ಎರಡಂಕಿಗಿಂತ ಕೆಳಗಿಳಿದಿಲ್ಲ. ಆದರೆ ವೀಕೆಂಡ್‌ನಲ್ಲಿ ಮಾತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಸೈಯಾರಾ ಮೂಲಕ ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿರುವ ಅಹಾನ್ ಪಾಂಡೆ (Ahaan Panday) ಹಾಗೂ ಅನೀತ್ ಪಡ್ಡಾ (Anit Padda) ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚೊಚ್ಚಲ ಸಿನಿಮಾದಿಂದಲೇ ಭರ್ಜರಿ ಎಂಟ್ರಿಕೊಟ್ಟಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

    ಸೈಯಾರಾ ಸಿನಿಮಾ ದಾಖಲೆಯ ಗಳಿಕೆ ಕಂಡಿದ್ದು, ಈ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ದೃಶ್ಯಂ 2, ದಿ ಕೇರಳ ಫೈಲ್ಸ್, ಕ್ರಿಶ್ 3 ಸಿನಿಮಾಗಳನ್ನು ಹಿಂದಿಕ್ಕಿದೆ. ಸೈಯಾರಾ ಸಿನಿಮಾ ಉತ್ತಮ ಕಥಾಹಂದರವನ್ನು ಹೊಂದಿದ್ದು, ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತನ್ನೆಡೆಗೆ ಸೆಳೆಯುತ್ತದೆ. ಜೊತೆಗೆ ಸಿನಿಮಾದಲ್ಲಿರುವ ಹಾಡುಗಳು ಸಂಗೀತ ಪ್ರಿಯರನ್ನು ಹಿಡಿದಿಟ್ಟುಕೊಳ್ಳುತ್ತದೆ.ಇದನ್ನೂ ಓದಿ: ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಹನುಮಾನ್ ಹುಡುಗನ ಚಿತ್ರ

  • 1000 ಕೋಟಿ ಕ್ಲಬ್ ಸೇರಿತು ಆರ್‌ಆರ್‌ಆರ್ ಸಿನಿಮಾ: ತಂಡದ ಟಾರ್ಗೆಟ್ 2500?

    1000 ಕೋಟಿ ಕ್ಲಬ್ ಸೇರಿತು ಆರ್‌ಆರ್‌ಆರ್ ಸಿನಿಮಾ: ತಂಡದ ಟಾರ್ಗೆಟ್ 2500?

    ಜಾಗತಿಕವಾಗಿ ಈಗಾಗಲೇ ಅನೇಕ ದಾಖಲೆಗಳನ್ನು ಮಾಡಿರುವ ಆರ್‍ಆರ್‍ಆರ್ ಸಿನಿಮಾ ನಿರೀಕ್ಷೆಯಂತೆ 1000 ಕೋಟಿ ಕ್ಲಬ್ ಸೇರಿದಂತೆ. ಈ ಮೂಲಕ 1000 ಕೋಟಿ ಕ್ಲಬ್ ದಾಟಿದ ಕೆಲವೇ ಕೆಲವು ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಇದು ಕೂಡ ಸೇರ್ಪಡೆ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‍ಆರ್‍ಆರ್’ ಸಿನಿಮಾ ಬಿಡುಗಡೆ ಆಗಿ ಇವತ್ತಿಗೆ 16 ದಿನಗಳು ಕಳೆದಿವೆ. ಆದರೂ ಈ ಚಿತ್ರದ ಕ್ರೇಜ್ ನಿಂತಿಲ್ಲ. ಕಾರಣ ಚಿತ್ರದಲ್ಲಿರುವ ಇಬ್ಬರು ಸೂಪರ್ ಸ್ಟಾರ್‌ಗಳಾದ ರಾಮ್‍ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅವರ ಅದ್ಭುತ ನಟನೆ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಅದರಲ್ಲೂ ಚಿತ್ರದಲ್ಲಿ ಬಳಸಿರುವ ಅಡ್ವಾನ್ಸ್ ಲೆವೆಲ್ ವಿಎಫ್‍ಎಕ್ಸ್, ಎಡಿಟಿಂಗ್ಸ್ ನೋಡಿದರೆ ಎಂಥವರಿಗೂ ಒಂದು ಕ್ಷಣ ಮೈ ಜುಮ್ಮೆನಿಸುತ್ತದೆ.

    ಚಿತ್ರವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೋಟಿ ಹೃದಯಗಳನ್ನು ಗೆದ್ದಿದ್ದು, ಚಿತ್ರವು ರೀಲಿಸ್ ಆದ ಮೊದಲನೇ ದಿನದಿಂದ ಈವರೆಗೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಆದರೆ ಇದೆಲ್ಲದರ ನಡುವೇ ಚಿತ್ರಕ್ಕೆ ಕೊಂಚ ಹೊಡೆತ ಬಿದ್ದಿದ್ದೆಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ. ಆದಾಗ್ಯೂ ಚಿತ್ರವು ಇವತ್ತಿಗೆ ವಿಶ್ವದಾದ್ಯಂತ ಬರೋಬ್ಬರಿ ಅಂದಾಜು 1000 ಕೋಟಿ ರೂ. ಗಳನ್ನು ಬಾಚಿ ಯಶಸ್ವಿ 16ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಹಿಂದೆ ಜಾಗತಿಕವಾಗಿ ವಿಶ್ವದಾದ್ಯಂತ 1000 ಕೋಟಿ ರೂ. ದಾಟಿದ ಚಿತ್ರಗಳೆಂದರೆ ‘ದಂಗಲ್’ ಮತ್ತು ‘ಬಾಹುಬಲಿ 2’ ಆಗಿದ್ದವು. ಇದೀಗ ಆ ಪಟ್ಟಿಗೆ ‘ಆರ್‍ಆರ್‍ಆರ್’ ಚಿತ್ರವೂ ಸೇರಿದೆ.

     

    View this post on Instagram

     

    A post shared by RRR Movie (@rrrmovie)

    ವಿಶ್ವಾದ್ಯಂತ ಅತೀ ಹೆಚ್ಚು ಗಳಿಕೆ ಮಾಡಿದ ಹತ್ತು ಭಾರತೀಯ ಚಿತ್ರಗಳು
    ದಂಗಲ್ – ರೂ. 2008.30 ಕೋಟಿ
    ಬಾಹುಬಲಿ 2 – ರೂ. 1754.50 ಕೋಟಿ
    ಆರ್‍ಆರ್‍ಆರ್ – ರೂ. 1000 ಕೋಟಿ ಅಂದಾಜು 16 ದಿನಗಳು ಇನ್ನೂ ಎಣಿಸಲಾಗುತ್ತಿದೆ
    ಭಜರಂಗಿ ಭಾಯಿಜಾನ್ – ರೂ. 902.80 ಕೋಟಿ
    ಸೀಕ್ರೆಟ್ ಸೂಪರ್‍ಸ್ಟಾರ್ – ರೂ. 895.50 ಕೋಟಿ
    ಪಿಕೆ – ರೂ. 762 ಕೋಟಿ
    2.0 – ರೂ. 666.30 ಕೋಟಿ
    ಸುಲ್ತಾನ್ – ರೂ. 616.60 ಕೋಟಿ
    ಸಂಜು – ರೂ. 588.30 ಕೋಟಿ
    ಬಾಹುಬಲಿ: ದಿ ಬಿಗಿನಿಂಗ್ – ರೂ. 581 ಕೋಟಿ

     

    View this post on Instagram

     

    A post shared by RRR Movie (@rrrmovie)

    ಈಗಾಗಲೇ ಈ ಸಿನಿಮಾ ಹಲವು ದಾಖಲೆಗಳನ್ನೂ ಬರೆದಿದೆ. ಡಾಲ್ಬಿ ತಂತ್ರಜ್ಞಾನದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಸಿನಿಮಾ ಇದಾಗಿದೆ. ತೆಲುಗು ಭಾಷೆಯ ಅವಧಿಯ ಆ್ಯಕ್ಷನ್ ಡ್ರಾಮಾ ಚಲನಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರವನ್ನು 2022ರ ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದೆ.

  • ಬರೋಬ್ಬರಿ 900 ಕೋಟಿ ಬಾಚಿ 12ನೇ ದಿನದತ್ತ ಮುನ್ನುಗುತ್ತಿದೆ RRR ಚಿತ್ರ

    ಬರೋಬ್ಬರಿ 900 ಕೋಟಿ ಬಾಚಿ 12ನೇ ದಿನದತ್ತ ಮುನ್ನುಗುತ್ತಿದೆ RRR ಚಿತ್ರ

    ಹೈದರಾಬಾದ್: ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಸಿನಿಮಾವು ಬಿಡುಗಡೆಗೊಂಡು ಇವತ್ತಿಗೆ 11 ದಿನಗಳು ಕಳೆದಿವೆ. ಆದರೂ ಈ ಚಿತ್ರದ ಹವಾ ನಿಂತಿಲ್ಲ. ಕಾರಣ ಚಿತ್ರದಲ್ಲಿರುವ ಇಬ್ಬರು ಸೂಪರಸ್ಟಾರ್‌ಗಳಾದ ರಾಮ್‍ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅವರ ಅದ್ಭುತವಾದ ನಟನೆ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಚಿತ್ರದಲ್ಲಿ ಬಳಸಿರುವ ಅಡ್ವಾನ್ಸ್ ಲೆವೆಲ್ ವಿಎಫ್‍ಎಕ್ಸ್ ಎಡಿಟಿಂಗ್ಸ್‌ಗಳನ್ನು ನೋಡಿದರೆ ಎಂತಹವರಿಗೂ ಒಂದು ಕ್ಷಣ ಮೈ ಜುಮ್ಮೆನ್ನಿಸುತ್ತದೆ.

    ಚಿತ್ರವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೋಟಿ ಹೃದಯಗಳನ್ನು ಗೆದ್ದಿದೆ. ಚಿತ್ರವು ರೀಲಿಸ್ ಆದ ಮೊದಲನೇ ದಿನದಿಂದ ಹಿಡಿದು ಇಲ್ಲಿಯವರೆಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಬರುತ್ತಿದೆ. ಆದರೆ ಇದೆಲ್ಲದರ ನಡುವೇ ಚಿತ್ರಕ್ಕೆ ಕೊಂಚ ಹೊಡೆತ ಬಿದ್ದಿದ್ದೆಂದರೆ ಅದು ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಅಂತಾನೇ ಹೇಳಬಹುದು. ಆದಾಗ್ಯೂ ಚಿತ್ರವು ಇವತ್ತಿಗೆ ಬರೋಬ್ಬರಿ 900 ಕೋಟಿ ರೂ. ಗಳನ್ನು ಬಾಚಿ ಯಶಸ್ವಿ 11ನೇ ದಿನದತ್ತ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ಈ ಕುರಿತು ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯನ್ ಸಾಮಾಜಿಕ ಜಾಲತಾಣದ ಮೂಲಕ ಆರ್‍ಆರ್‍ಆರ್ ಚಿತ್ರವು 11 ದಿನದಲ್ಲಿ ಒಟ್ಟು 900 ಕೋಟಿ ರೂ. ಗಳಿಸಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರದ ಕಲೆಕ್ಷನ್ ಅನ್ನು ಉಡೀಸ್ ಮಾಡಿದೆ. ಆರ್‍ಆರ್‍ಆರ್ ಚಿತ್ರವು ಈಗಾಗಲೇ ದಾಖಲೆಯ 500 ಕೋಟಿ ರೂ. ದಾಟಿದ ಮೊದಲ ಚಿತ್ರವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

    ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಸಾರ್ವಕಾಲಿಕ ಹತ್ತು ಭಾರತೀಯ ಚಲನಚಿತ್ರಗಳನ್ನು ನೋಡೋಣ:
    ದಂಗಲ್ – ರೂ. 2008.30 ಕೋಟಿ
    ಬಾಹುಬಲಿ 2 – ರೂ. 1754.50 ಕೋಟಿ
    ಆರ್‍ಆರ್‍ಆರ್ – ರೂ. 939 ಕೋಟಿ ಅಂದಾಜು 11 ದಿನಗಳು, ಇನ್ನೂ ಎಣಿಸಲಾಗುತ್ತಿದೆ
    ಭಜರಂಗಿ ಭಾಯಿಜಾನ್ – ರೂ. 902.80 ಕೋಟಿ
    ಸೀಕ್ರೆಟ್ ಸೂಪರ್‍ಸ್ಟಾರ್ – ರೂ. 895.50 ಕೋಟಿ
    ಪಿಕೆ – ರೂ. 762 ಕೋಟಿ
    2.0 – ರೂ. 666.30 ಕೋಟಿ
    ಸುಲ್ತಾನ್ – ರೂ. 616.60 ಕೋಟಿ
    ಸಂಜು – ರೂ. 588.30 ಕೋಟಿ
    ಬಾಹುಬಲಿ: ದಿ ಬಿಗಿನಿಂಗ್ – ರೂ. 581 ಕೋಟಿ

    ಎಸ್ ಎಸ್ ರಾಜಮೌಳಿಯವರ ‘ಆರ್‍ಆರ್‍ಆರ್’ ಡಾಲ್ಬಿ ಸಿನಿಮಾದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಿತ್ರವಾಗಿದೆ. ತೆಲುಗು ಭಾಷೆಯ ಅವಧಿಯ ಆಕ್ಷನ್ ಡ್ರಾಮಾ ಚಲನಚಿತ್ರವನ್ನು ಡಿವಿವಿ ಎಂಟರ್‌ಟೈನಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರವನ್ನು 2022ರ ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದೆ.