Tag: ಬಾಂಬ್ ಬ್ಲಾಸ್ಟ್

  • ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ

    ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಬಾಂಬ್ ಬೆದರಿಕೆ

    ಬೀದರ್: ಜಿಲ್ಲೆಯ ಐತಿಹಾಸಿಕ ಗುರುದ್ವಾರಕ್ಕೆ (Gurudwara) ಇ-ಮೇಲ್ ಮೂಲಕ ಬಾಂಬ್ ಬ್ಲಾಸ್ಟ್ ಬೆದರಿಕೆ ಬಂದಿದೆ.

    ಶನಿವಾರ ಬೆದರಿಕೆ ಮೇಲ್ ಬಂದ ಬೆನ್ನಲ್ಲೇ ಗುರುದ್ವಾರದ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗುರುದ್ವಾರದ ಅಮೃತಕುಂಡ, ಸರೋವರ, ಯಾತ್ರಿ ನಿವಾಸದಲ್ಲಿ ಬಾಂಬ್ ಬ್ಲಾಸ್ಟ್ ನಡೆಯಲಿದೆ ಎಂದು ವಕೀಲ ಅಲೀಂ ಅಲ್ ಬುಕಾರಿ ಎಂಬ ವ್ಯಕ್ತಿಯಿಂದ ಮೇಲ್ ಬಂದಿದೆ. ಇದನ್ನೂ ಓದಿ: ಸಾಧನಾ ಸಮಾವೇಶ ಮುಗಿಸಿ ವಾಪಸ್‌ ಬರುವಾಗ ಡಿಕೆಶಿ ಬೆಂಗಾವಲು ವಾಹನ ಪಲ್ಟಿ – ಪ್ರಾಣಾಪಾಯದಿಂದ ಪಾರು

    ಈ ಕುರಿತು ಗುರುದ್ವಾರದ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕಾಡ್ ಸೇರಿ ವಿಶೇಷ ತಂಡದಿಂದ ತೀವ್ರ ಪರಿಶೀಲನೆ ಮಾಡಲಾಗುತ್ತಿದೆ.

    ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಸೇರಿ 50ಕ್ಕೂ ಹೆಚ್ಚು ಪೊಲೀಸರಿಂದ ಪರಿಶೀಲನೆ ಮಾಡಲಾಗುತ್ತಿದ್ದು, ಪೊಲೀಸರ ಪರಿಶೀಲನೆ ವೇಳೆ ಯಾವುದೇ ರೀತಿ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ತಮಿಳುನಾಡಿನ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್, ಕೃತಿಗಾ ಉದಯನಿಧಿ ಹೆಸರು ಮೇಲ್‌ನಲ್ಲಿ ಉಲ್ಲೇಖಿಸಲಾಗಿದ್ದು, ನಿವೇತಾ ಪೇತುರಾಜ್, ಉದಯನಿಧಿ ಪ್ರಕರಣಗಳನ್ನು ಬೇರೆಡೆ ಸೆಳೆಯಲು ಸ್ಫೋಟ ಎಂದು ಮೇಲ್ ಕಳಿಸಲಾಗಿದೆ.

    ಪಾಕ್‌ನ ಐಎಸ್‌ಐ ಸೆಲ್ಸ್‌ಗಳು ಬಾಂಬ್ ಸ್ಫೋಟದ ಸಂಚು ರೂಪಿಸಿವೆ ಎಂದು ಹೇಳಲಾಗುತ್ತಿದ್ದು, ಭಕ್ತರ ಮೈಕ್ರೋ ಮೊಬೈಲ್ ಫೋನ್ ಸಿಗ್ನಲ್ ಬಳಸಿ ಸ್ಫೋಟಗೊಳಿಸಲಿದ್ದಾರೆಂದು ಮೇಲ್‌ನಲ್ಲಿ ಬರೆಯಲಾಗಿದೆ.ಇದನ್ನೂ ಓದಿ: ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ

  • ಬಲೂಚಿಸ್ತಾನದಲ್ಲಿ ಆರ್ಮಿ ಸ್ಕೂಲ್ ಬಸ್ ಮೇಲೆ ಬಾಂಬ್ ದಾಳಿ – 4 ಮಕ್ಕಳು ಸಾವು

    ಬಲೂಚಿಸ್ತಾನದಲ್ಲಿ ಆರ್ಮಿ ಸ್ಕೂಲ್ ಬಸ್ ಮೇಲೆ ಬಾಂಬ್ ದಾಳಿ – 4 ಮಕ್ಕಳು ಸಾವು

    ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ(Balochistan) ಸೇನಾ ಶಾಲಾ ಬಸ್ ಮೇಲೆ ಬಾಂಬ್ ದಾಳಿ ನಡೆದಿದೆ. ದಾಳಿಯಲ್ಲಿ 4 ಮಕ್ಕಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

    ಬಲೂಚಿಸ್ತಾನ್ ಪ್ರಾಂತ್ಯದ ಖುಜ್ದಾರ್‌ನಲ್ಲಿ(Khuzdar) ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಬಾಂಬ್ ಇರಿಸಿದ್ದ ಕಾರು ಬಂದು ಡಿಕ್ಕಿ ಹೊಡೆದಿದೆ. ಈ ಬಾಂಬ್ ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಉಪ ಆಯುಕ್ತ ಯಾಸಿರ್ ಇಕ್ಬಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ- ಶ್ರೀವಲ್ಲಿ ಬ್ಯೂಟಿಗೆ ಫ್ಯಾನ್ಸ್ ಫಿದಾ

    ಸ್ಫೋಟ ಸಂಭವಿಸಿದಾಗ ಸೇನಾ ಸ್ವಾಮ್ಯದ ಶಾಲೆಗೆ ಹೋಗುತ್ತಿದ್ದ ಬಸ್‌ನಲ್ಲಿ ಸುಮಾರು 40 ವಿದ್ಯಾರ್ಥಿಗಳು ಇದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪರಾಧದ ಆದಾಯದಿಂದ ಸೋನಿಯಾ, ರಾಹುಲ್‌ 142 ಕೋಟಿ ಲಾಭ ಪಡೆದಿದ್ದಾರೆ: ಇಡಿ

    ಪಾಕಿಸ್ತಾನದ(Pakistan) ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಗ್ದ ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಸಂಪೂರ್ಣ ಅನಾಗರಿಕತೆಯ ಕೃತ್ಯ ಎಂದು ದಾಳಿಕೋರರ ವಿರುದ್ಧ ಕಿಡಿಕಾರಿದ್ದಾರೆ.

  • ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ – ನಾಲ್ವರಿಗೆ ಗಾಯ

    ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ – ನಾಲ್ವರಿಗೆ ಗಾಯ

    ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ರೈಲು ಹೈಜಾಕ್ ಪ್ರಕರಣದ ಬೆನ್ನಲ್ಲೇ ಪಾಕಿಸ್ತಾನ (Pakistan) ವಜರಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಜಮಿಯತ್ ಉಲೇಮಾ-ಎ-ಇಸ್ಲಾಂ(ಜೆಯುಐ) ಜಿಲ್ಲಾ ಮುಖ್ಯಸ್ಥ ಅಬ್ದುಲ್ಲಾ ನದೀಮ್ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

    ಅಜಮ್ ವಾರ್ಸಾಕ್ ಬೈಪಾಸ್ ರಸ್ತೆಯಲ್ಲಿರುವ ಮೌಲಾನಾ ಅಬ್ದುಲ್ ಅಜೀಜ್ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಮಾ. 14ರ ಶುಕ್ರವಾರದಂದು ಪ್ರಾರ್ಥನೆಯ ಸಮಯದಲ್ಲಿ ಮಸೀದಿಯ ಪ್ರವಚನ ಪೀಠದಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಕೇಂದ್ರದ 2 ಸಾವಿರ ಕೋಟಿ ಕಳೆದುಕೊಂಡರೂ ನಾವು ನಮ್ಮ ಸಿದ್ಧಾಂತದಲ್ಲಿ ರಾಜಿಯಾಗಲ್ಲ: ತಮಿಳುನಾಡು

    ಸ್ಥಳಕ್ಕಾಗಮಿಸಿದ ರಕ್ಷಣಾ ತಂಡಗಳು ಗಾಯಾಳುಗಳನ್ನು ವಾನಾದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತನಿಖೆಯ ಅಂಗವಾಗಿ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಸಿವೆ. ಇದನ್ನೂ ಓದಿ: 2ನೇ ಏರ್‌ಪೋರ್ಟ್‌ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರಕ್ಕೆ ಗ್ರೀನ್‌ ಸಿಗ್ನಲ್‌ – ಹೊಸೂರು ಬಳಿ 2 ಸ್ಥಳ ಫೈನಲ್‌

    ಕಳೆದ ಒಂದು ತಿಂಗಳ ಹಿಂದೆ ಪಾಕಿಸ್ತಾನದ ನೌಶೇರಾ ಜಿಲ್ಲೆಯ ದಾರುಲ್ ಉಲೂಮ್ ಹಕ್ಕಾನಿಯಾ ಸೆಮಿನರಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಜೆಯುಐ-ಎಸ್ ನಾಯಕ ಮೌಲಾನಾ ಹಮೀದುಲ್ ಹಕ್ ಹಕ್ಕಾನಿ ಸೇರಿ ಆರು ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದಿಂದ 1402 ಕೋಟಿ ರೂ.ಚೆಕ್ ಹಸ್ತಾಂತರ

    ಕೆಲ ದಿನಗಳ ಹಿಂದೆ ಬಲೂಚಿಸ್ತಾನದಲ್ಲಿ ಬಲೂಚ್ ಪ್ರತ್ಯೇಕತಾ ವಾದಿ ಉಗ್ರರ ಗುಂಪು ರೈಲನ್ನು ಹೈಜಾಕ್ ಮಾಡಿತ್ತು. ಈ ಎಲ್ಲಾ ದಾಳಿಗಳ ಹಿಂದೆ ಕಾಬೂಲ್‌ನ ಕೈವಾಡವಿದೆ ಎಂದು ಪಾಕಿಸ್ತಾನ ಸರ್ಕಾರ ಆರೋಪಿಸಿದೆ.

  • ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 25ಕ್ಕೂ ಅಧಿಕ ಸಾವು

    ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 25ಕ್ಕೂ ಅಧಿಕ ಸಾವು

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕ್ವೆಟ್ಟಾ ರೈಲು ನಿಲ್ದಾಣದಲ್ಲಿ (Quetts Bomb Blast) ಬಾಂಬ್ ಸ್ಫೋಟಗೊಂಡಿದ್ದು, 25ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

    ಇಂದು (ನ.9) ನೈಋತ್ಯ ಪಾಕಿಸ್ತಾನ್‌ನ ಕ್ವೆಟ್ಟಾ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ (Ticket Booking Counter) ಹಾಗೂ ಪ್ಲಾಟ್‌ಫಾರಂ ಬಳಿ ಎರಡು ಬಾಂಬ್ ಸ್ಫೋಟಗೊಂಡಿದೆ.ಇದನ್ನೂ ಓದಿ: ಮುಡಾದಲ್ಲಿ ಫೈಲ್ ಸುಟ್ಟು ಹಾಕಿದ್ದಾರೆ! – 50:50 ಅನುಪಾತದಲ್ಲಿ ಮನೆ ಕಟ್ಟುವುದಕ್ಕೆ ಅನುಮತಿ ಕೊಡಬೇಡಿ: ಶ್ರೀವತ್ಸ

    ಪೊಲೀಸ್ ಕಾರ್ಯಾಚರಣೆಯ ಹಿರಿಯ ಅಧೀಕ್ಷಕ ಮುಹಮ್ಮದ್ ಬಲೋಚ್ ಮಾತನಾಡಿ, ಪೇಶಾವರಕ್ಕೆ ಹೋಗುವ ಎಕ್ಸ್ಪ್ರೆಸ್ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಜೊತೆಗೆ ಪ್ಯಾಸೆಂಜರ್ ರೈಲಿಗಾಗಿ ಹಲವು ಜನ ಕಾಯುತ್ತಿದ್ದರು. ಇದರಿಂದಾಗಿ ನಿಲ್ದಾಣ ಭಾರೀ ಜನಸಂದಣಿಯಿಂದ ಕೂಡಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಒಂದರ ಹಿಂದೆ ಒಂದರಂತೆ ಒಟ್ಟು ಎರಡು ಬಾಂಬ್ ಸ್ಫೋಟಗೊಂಡಿವೆ. ಮೊದಲ ಬಾಂಬ್ ಸ್ಫೋಟಗೊಂಡಾಗ 4 ಜನ ಹಾಗೂ ಎರಡನೇ ಬಾಂಬ್ ಸ್ಫೋಟಗೊಂಡಾಗ 21ಕ್ಕೂ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಸ್ಫೋಟದಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಬಾಂಬ್ ನಿಷ್ಕ್ರಿಯ ದಳ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ.

    ಬೆಳಗ್ಗೆ ಒಂಭತ್ತು ಗಂಟೆ ಸಮಯದಲ್ಲಿ ಮೂರು ಬಾಂಬ್‌ಗಳು ಸ್ಫೋಟಗೊಂಡಿದ್ದು, ಅವಘಡದ ಬಳಿಕ ರೈಲು ನಿಲ್ದಾಣದಲ್ಲಿ ಸಂಚಲನ ಉಂಟಾಗಿ ಜನ ದಿಕ್ಕೆಟ್ಟು ಓಡತೊಡಗಿದರು. ಜನರು ತೀವ್ರವಾಗಿ ಗಾಯಗೊಂಡಿರುವ ಹಿನ್ನಲೆ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು ಎನ್ನಲಾಗಿದೆ.

    ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ದಾಳಿಯನ್ನು ಖಂಡಿಸಿದ್ದು, ಇದು ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಕೃತ್ಯ ಎಂದು ಖಂಡಿಸಿದ್ದಾರೆ. ಈ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ಸಾಮಾನ್ಯ ನಾಗರಿಕರು, ಕಾರ್ಮಿಕರು, ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚಾಗಿ ಭಯೋತ್ಪಾದಕರು ಗುರಿಯಾಗಿಸುತ್ತಿದ್ದಾರೆ. ಘಟನೆಗೆ ಕಾರಣವಾದವರನ್ನು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಕ್ವೆಟ್ಟಾ ಸ್ಫೋಟದ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿದೆ. ಸಂಘಟನೆಯ ಗುಂಪಿನ ವಕ್ತಾರ ಜೀಯಂಡ್ ಬಲೋಚ್, ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದ ಹೊಣೆಯನ್ನು ನಾವು ವಹಿಸಿಕೊಳ್ಳುತ್ತೇವೆ. ಇನ್‌ಫೆಂಟ್ರಿ ಶಾಲೆಯಲ್ಲಿ ಕೋರ್ಸ್ ಮುಗಿಸಿ ಜಾಫರ್ ಎಕ್ಸ್‌ಪ್ರೆಸ್ ಮೂಲಕ ಹಿಂತಿರುಗುತ್ತಿದ್ದ ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದಾಳಿಯನ್ನು ನಮ್ಮ ಫಿದಾಯಿ ಘಟಕ ಮತ್ತು ಮಜೀದ್ ಬ್ರಿಗೇಡ್ ಕಾರ್ಯಗತಗೊಳಿಸಿತು. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರಿನ ಸಿಂಗನಗಳ್ಳಿ ಶೆಡ್‌ನಲ್ಲಿ ಡಬಲ್ ಮರ್ಡರ್ – ಖಾಸಗಿ ಬಸ್‌ ಸಿಬ್ಬಂದಿ ಕೊಲೆ

  • ಬಾಂಬ್ ಬ್ಲಾಸ್ಟ್ ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ – ಭರವಸೆ ಕೊಟ್ಟು ಸರ್ಕಾರ ಸೈಲೆಂಟ್

    ಬಾಂಬ್ ಬ್ಲಾಸ್ಟ್ ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ – ಭರವಸೆ ಕೊಟ್ಟು ಸರ್ಕಾರ ಸೈಲೆಂಟ್

    – ನಾಲ್ವರು ಗಾಯಾಳುಗಳು ಡಿಸ್ಚಾರ್ಜ್ ಆದರೂ ಸಂದಾಯವಾಗದ ಹಣ

    ಬೆಂಗಳೂರು: ಬಾಂಬ್ ಬ್ಲಾಸ್ಟ್ (Bomb Blast) ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸೋದಾಗಿ ಸಿದ್ದರಾಮಯ್ಯ (Siddaramaiah) ಸರ್ಕಾರ ಘೋಷಣೆ ಮಾಡಿತ್ತು. ಆದರೆ ಘಟನೆ ನಡೆದು ಮೂರು ದಿನ ಆಗಿದೆ. ನಾಲ್ವರು ಗಾಯಾಳುಗಳು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಆಸ್ಪತ್ರೆ ಅವರಿಗೆ ಇದುವರೆಗೂ ಹಣ ಸಂದಾಯ ಆಗಿಲ್ಲ. ಸರ್ಕಾರದ ಪ್ರತಿನಿಧಿಗಳು ಯಾರೂ ವೆಚ್ಚದ ಬಗ್ಗೆ ಮಾತನಾಡಿಲ್ಲ. ಇದರಿಂದ ಮಾಜಿ ಶಾಸಕರು, ಆಸ್ಪತ್ರೆಯವರು ಅಸಮಾಧಾನ ಹೊರಹಾಕುತ್ತಿದ್ದಾರೆ.

    ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಬ್ಲಾಸ್ಟ್ ಆಗಿ 9 ಜನ ಗಾಯಾಳುಗಳು ಆಸ್ಪತ್ರೆ ಸೇರಿದ್ದರು. ವೈದೇಹಿಯಲ್ಲಿ ಆರು ಜನ, ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಮೂರು ಜನ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸೋದಾಗಿ ಘೋಷಣೆ ಮಾಡಿದ್ದರು. ಆದರೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳು ಗುಣಮುಖರಾಗಿದ್ದಾರೆ. ವೈದೇಹಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಮಿ, ಶ್ರೀನಿವಾಸ್, ಮೋಹನ್ ಮತ್ತು ಬ್ರೂಕ್ ಫೀಲ್ಡ್ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪಾಂಶು ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ – ಎನ್‌ಐಎಗೆ ಕೇಸ್‌ ವರ್ಗಾವಣೆ

    ಗಾಯಾಳುಗಳು ಡಿಸ್ಚಾರ್ಜ್ ಆದರೂ ಇನ್ನೂ ಆಸ್ಪತ್ರೆ ಅವರಿಗೆ ಹಣ ಸಂದಾಯ ಆಗಿಲ್ಲ. ಸರ್ಕಾರದ ಪ್ರತಿನಿಧಿಗಳು ಯಾರೂ ಕೂಡ ಹೋಗಿ ವೆಚ್ಚ ಭರಿಸೋ ಬಗ್ಗೆ ಮಾತನಾಡಿಲ್ಲ. ವೆಚ್ಚ ಭರಿಸೋ ಬೆಳವಣಿಗೆ ಕಾಣಿಸುತ್ತಿಲ್ಲ. ಸರ್ಕಾರ ಬೇಗ ಸಂವಹನ ಮಾಡಬೇಕು ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಯಿಂದ 15+ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಫೈನಲ್

    ಇನ್ನೂ ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರ ಅಥವಾ ಅಧಿಕಾರಿಗಳು ಯಾರೂ ಬಂದು ವೆಚ್ಚಭರಿಸೋ ಬಗ್ಗೆ ಮಾತನಾಡಿಲ್ಲ ಎಂದು ಬ್ರೂಕ್ ಫೀಲ್ಡ್ ನಿರ್ದೇಶಕ ಡಾ.ಪ್ರದೀಪ್ ಹೇಳಿದ್ದಾರೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

  • ಶಂಕಿತ ಉಗ್ರನ ಜಾಡು ಪತ್ತೆ ಹಚ್ಚಲು BMRCL ಮೊರೆ ಹೋದ ಪೊಲೀಸರು

    ಶಂಕಿತ ಉಗ್ರನ ಜಾಡು ಪತ್ತೆ ಹಚ್ಚಲು BMRCL ಮೊರೆ ಹೋದ ಪೊಲೀಸರು

    ಬೆಂಗಳೂರು: ರಾಮೇಶ್ವರ ಕೆಫೆ (Rameshwaram Cafe) ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ (Suspected Terrorist) ಜಾಡು ಪತ್ತೆ ಹಚ್ಚಲು ಪೊಲೀಸರು ಬಿಎಂಆರ್‌ಸಿಎಲ್ (BMRCL) ಮೊರೆ ಹೋಗಿದ್ದಾರೆ.

    ಶಂಕಿತ ಉಗ್ರ ಮೆಟ್ರೋ ಸ್ಟೇಷನ್ ಮುಂಭಾಗ ಓಡಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆ ಬಿಎಂಆರ್‌ಸಿಎಲ್‌ನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಮೆಟ್ರೋ ಕಡೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪಡೆದುಕೊಂಡಿದ್ದಾರೆ. ಕುಂದಲಹಳ್ಳಿ, ಹೂಡಿ, ಸೀತಾರಾಮ ಪಾಳ್ಯ, ಮೆಟ್ರೋ ಸ್ಟೇಷನ್ ಮುಂಭಾಗದ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ತೆರೆಯುತ್ತೇವೆ: ಮಾಲೀಕ ರಾಘವೇಂದ್ರ ರಾವ್‌

    ಬಿಎಂಟಿಸಿಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದ ಬಳಿಕ ಶಂಕಿತ ಆರೋಪಿ ಮೆಟ್ರೋ ಸ್ಟೇಷನ್ ಮುಂಭಾಗ ಓಡಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಘಟನೆ ನಡೆದ ಹಿಂದಿನ ದಿನದ ವಿಷ್ಯುವಲ್ಸ್ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ

  • ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ

    ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ

    – ದಿಕ್ಕು ತಪ್ಪಿಸಲು ಡಮ್ಮಿ ಫೋನ್ ಬಳಕೆ

    ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾಮಾರಿಸಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಆರೋಪಿ ಶರ್ಟ್ ಮತ್ತು ಮತ್ತು ಪ್ಯಾಂಟ್ ಬದಲಿಸಿ ಹೋಗಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ದಾರಿ ಮಧ್ಯೆ ಆರೋಪಿ ಬಟ್ಟೆ (Clothes) ಬದಲಿಸಿ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಶರ್ಟ್ ಮೇಲೆ ಶರ್ಟ್, ಪ್ಯಾಂಟ್ ಮೇಲೆ ಪ್ಯಾಂಟ್ ಹಾಕಿಕೊಂಡು ಮುಂದೆ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ. ಅಲ್ಲದೇ 3-4 ಬಸ್ ಬದಲಿಸಿ ಪ್ರಯಾಣ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಗಡಿ ಬಿಟ್ಟು ಹೊರರಾಜ್ಯಕ್ಕೆ ಎಸ್ಕೇಪ್ ಆಗಿರುವ ಬಗ್ಗೆ ಶಂಕಿಸಿದ್ದು, ಸಿಸಿಬಿ, ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ತಲಾಶ್ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಬಾಂಬರ್‌ ಒಂಟಿ ತೋಳ ಭಯೋತ್ಪಾದಕ!

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 48 ಗಂಟೆಗಳು ಕಳೆದರೂ ಈವರೆಗೂ ಆರೋಪಿಯ ಬಗ್ಗೆ ಸುಳಿವು ಸಿಕ್ಕಿಲ್ಲ. ಸಿಸಿಟಿವಿ, ಮೊಬೈಲ್ ಟವರ್ ಡಂಪ್ ಅನಾಲಿಸಿಸ್ ಮಾಡಿದರೂ ಯಾವುದೇ ಸುಳಿವು ದೊರೆತಿಲ್ಲ. ಇದನ್ನೂ ಓದಿ: ಹೋಟೆಲ್ ಉದ್ಯಮದಲ್ಲಿ ನಾವೆಲ್ಲ ಅಣ್ಣ-ತಮ್ಮಂದಿರು, ಅನ್ನ ನೀಡುತ್ತೇವೆ ಹೊರತು ಕಿತ್ತುಕೊಳ್ಳುವುದಿಲ್ಲ: ರಾಮೇಶ್ವರಂ ಕೆಫೆ ಮಾಲೀಕ

    ಸಿಸಿಟಿವಿಯಲ್ಲಿ ಆತ ಯಾರೊಂದಿಗೂ ಫೋನಿನಲ್ಲಿ ಮಾತನಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಆದರೆ ತನಿಖೆಗೆ ಇಳಿದಾಗ ಆತ ಡಮ್ಮಿ ಫೋನ್ ಅನ್ನು ಬಳಸಿದ್ದು, ಈ ಫೋನ್ ಬಳಸಿದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಮ್ಮ ಕಾಲ್‌ ಮಾಡದಿದ್ದರೆ…- ಕೆಫೆ ಬ್ಲಾಸ್ಟ್‌ ಭಯಾನಕ ಸತ್ಯ ಬಿಚ್ಚಿಟ್ಟ ಟೆಕ್ಕಿ

    ಸಿಸಿಟಿವಿಯಲ್ಲಿ ಮೊಬೈಲ್ ತೋರಿಸಿರುವ ದೃಶ್ಯ ಕಂಡು ತನಿಖಾಧಿಕಾರಿಗಳು ಆರೋಪಿ ಸಿಕ್ಕಿಬಿದ್ದ ಎಂಬ ವಿಶ್ವಾಸದಲ್ಲಿದ್ದರು. ಆದರೆ ಬಾಂಬರ್ ಪಕ್ಕಾ ಪ್ಲಾನ್ ಮಾಡಿಕೊಂಡು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಇದೀಗ ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ, ಬಸ್‌ನಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿ ಆರೋಪಿಯ ವಾಕಿಂಗ್ ಸ್ಟೈಲ್ ಆಧರಿಸಿ ಸುಳಿವು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಸಿಸಿಟಿವಿ ದೃಶ್ಯ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

  • ಕೆಫೆ ಬ್ಲಾಸ್ಟ್; ಮತ್ತೆ ಈ ರೀತಿ ಕೃತ್ಯ ಆಗದಂತೆ ಸರ್ಕಾರ ನೋಡಿಕೊಳ್ಳುತ್ತೆ: ಈಶ್ವರ್ ಖಂಡ್ರೆ

    ಕೆಫೆ ಬ್ಲಾಸ್ಟ್; ಮತ್ತೆ ಈ ರೀತಿ ಕೃತ್ಯ ಆಗದಂತೆ ಸರ್ಕಾರ ನೋಡಿಕೊಳ್ಳುತ್ತೆ: ಈಶ್ವರ್ ಖಂಡ್ರೆ

    ಬೀದರ್: ಬಾಂಬ್ ಸ್ಫೋಟದ (Bomb Blast) ಕೃತ್ಯ ಮಾಡಿದವರು ಎಲ್ಲಿ ಇದ್ದರೂ ಹುಡುಕಿ ಕಾನೂನು ಕ್ರಮ ಜರಗಿಸುತ್ತೇವೆ ಎಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.

    ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮಾಡಿ ಯಾರೇ ಆರೋಪಿಗಳು ಇದ್ದರೂ ಕಠಿಣವಾದ ಶಿಕ್ಷೆ ಕೊಡುತ್ತೇವೆ. ಜೊತೆಗೆ ಮತ್ತೆ ಈ ರೀತಿ ಪ್ರಕರಣಗಳು ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಮಂಗಳೂರು ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಲಿಂಕ್ ಕಾಣ್ತಿದೆ: ಡಿಕೆಶಿ

    ಇನ್ನು ವಿಧಾನಸೌಧದಲ್ಲಿ (Vidhan Soudha) ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ದೇಶ ವಿರೋಧ, ಸಮಾಜಘಾತುಕ ಶಕ್ತಿಗಳು ಇದ್ದಾರೋ ಅಂಥವರ ಮೇಲೆ ಅತ್ಯಂತ ಕಠಿಣವಾದ ಕ್ರಮ ಜರಗಿಸುತ್ತೇವೆ. ದೊಡ್ಡ ವ್ಯಕ್ತಿ ಇದ್ದರೂ, ಸಂಘಟನೆಗಳಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಎಂಟಿಸಿಯಿಂದ ಸಿಕ್ತಾ ಶಂಕಿತನ ಸುಳಿವು?- ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಪೊಲೀಸರ ಮನವಿ

    ಘೋಷಣೆ ಹಾಕಿದ ವ್ಯಕ್ತಿಯನ್ನು ಪತ್ತೆ ಹಚ್ಚುತ್ತಿದ್ದೇವೆ. ರಾಷ್ಟ್ರಪ್ರೇಮ, ದೇಶಭಕ್ತಿ ಯಾರ ಸ್ವತ್ತಲ್ಲಾ. 140 ಕೋಟಿ ಜನರು ರಾಷ್ಟ್ರ ಭಕ್ತರೇ ಇದ್ದಾರೆ ಎಂದು ಬಿಜೆಪಿ ನಾಯಕರಿಗೆ ಖಂಡ್ರೆ ಟಾಂಗ್ ನೀಡಿದರು. ಇದರ ಹಿಂದೆ ಯಾರ ಕೈವಾಡವಿದೆ? ಯಾರು ಆರೋಪ ಮಾಡುತ್ತಾರೆ ಅವರ ಕೈವಾಡವಿರುತ್ತೆ ಎಂದು ಬಿಜೆಪಿ (BJP) ವಿರುದ್ಧ ಖಂಡ್ರೆ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್

  • ಬಿಎಂಟಿಸಿಯಿಂದ ಸಿಕ್ತಾ ಶಂಕಿತನ ಸುಳಿವು?- ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಪೊಲೀಸರ ಮನವಿ

    ಬಿಎಂಟಿಸಿಯಿಂದ ಸಿಕ್ತಾ ಶಂಕಿತನ ಸುಳಿವು?- ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಪೊಲೀಸರ ಮನವಿ

    ಬೆಂಗಳೂರು: ರಾಮೇಶ್ವರ ಕೆಫೆ (Rameshwaram Cafe) ಸ್ಫೋಟಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯಲ್ಲಿ (BMTC) ಶಂಕಿತ ಆರೋಪಿ ಪ್ರಯಾಣಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಬಿಎಂಟಿಸಿಯಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ.

    ಶಂಕಿತ ಓಡಾಡಿರುವ ಬಿಎಂಟಿಸಿ ಬಸ್ ಆಧರಿಸಿ ಸಿಸಿಟಿವಿ ವಿಡಿಯೋ ಕೊಡುವಂತೆ ಪೊಲೀಸರಿಂದ ಬಿಎಂಟಿಸಿಯ ಭದ್ರತಾ ವಿಭಾಗಕ್ಕೆ ಮನವಿ ಸಲ್ಲಿಸಲಾಗಿದೆ. ಪೊಲೀಸರು ಮಾಹಿತಿ ಕೇಳುತ್ತಿದ್ದಾರೆ. ಮಾಹಿತಿ ಕೊಡುತ್ತೇವೆ. ಎಲ್ಲಾ ಚೆಕ್ ಮಾಡುತ್ತಿದ್ದೇವೆ ಎಂದು ಬಿಎಂಟಿಸಿ ಭದ್ರತಾ ವಿಭಾಗದ ಅಧಿಕಾರಿ ಶಿವಪ್ರಕಾಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್

    ಇನ್ನು ಈ ಕುರಿತು ಬಿಎಂಟಿಸಿ ಎಂಡಿ ರಾಮಚಂದ್ರ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬಿಎಂಟಿಸಿಯಲ್ಲಿ ಶಂಕಿತ ಓಡಾಡಿದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿರಬೇಕಾದರೆ ನಾನು ಮಾತನಾಡೋದು ಸರಿಯಲ್ಲ. ತನಿಖೆ ಮಾಡುತ್ತಿದ್ದಾರೆ, ಮಾಡಲಿ. ಪರೋಕ್ಷವಾಗಿ ಶಂಕಿತನ ಸುಳಿವು ನೀಡಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ಗು ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿಎಂ

  • ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್

    ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್

    ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಬ್ಲಾಸ್ಟ್ (Bomb Blast) ಪ್ರಕರಣದ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ (G Parameshwar) ಪ್ರತಿಕ್ರಿಯೆ ನೀಡಿದ್ದು, ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬ್ಲಾಸ್ಟ್ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತು ಬಹಳ ಸೀರಿಯಸ್ ಆಗಿ, ಆಳವಾಗಿ ತನಿಖೆ ನಡೆಯುತ್ತಿದೆ. ಸಾಕಷ್ಟು ಕುರುಹುಗಳು ಸಿಕ್ಕಿವೆ. ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಸುಮಾರು 28 ಬಸ್‌ಗಳು ಒಡಾಡಿವೆ. ಆತ ಬಸ್‌ನಲ್ಲಿ (Bus) ಬಂದಿರುವ ಸಾಧ್ಯತೆಗಳಿವೆ. ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ಆತನನ್ನು ಯಾವ ಕಾರಣಕ್ಕೂ ಬಿಡೋದಿಲ್ಲ ಎಂದರು. ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ಗು ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿಎಂ

    ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಬಿಡೋದಿಲ್ಲ. ಈ ಘಟನೆ ವೈಯಕ್ತಿಕ ಆಗಿದೆಯೋ, ಏನು ಎಂದು ತನಿಖೆ ನಡೆಯುತ್ತಿದೆ. ಹೋಟೆಲ್ ಅವರು 3-4 ಕಡೆಗಳಲ್ಲಿ ಯಶಸ್ವಿಯಾಗಿರುವುದರಿಂದ ಮಾಡಿರಬಹುದೇನೋ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಲಾಸ್ಟ್‌ ಪ್ರಕರಣ- ನಾಲ್ವರ ವಶಕ್ಕೆ ಪಡೆದು ವಿಚಾರಣೆ

    ಯಾವ ಸಂಘಟನೆ ಮಾಡಿದೆ ಅಂತಾ ಈಗಲೇ ಹೇಳಲು ಆಗೋದಿಲ್ಲ. ಸ್ಥಳಕ್ಕೆ ಹೋದಾಗ ಅಲ್ಲಿ ಕೆಲವರು ಹೋಟೆಲ್‌ನವರು ಸಕ್ಸಸ್ ಆಗಿದ್ದಕ್ಕೆ ಹೊಟ್ಟೆ ಉರಿಯಿಂದ ಮಾಡಿರಬಹುದು ಎಂದು ಹೇಳಿದರು. ಅದೆಲ್ಲದರ ಬಗ್ಗೆಯೂ ತನಿಖೆ ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

    ವಿಪಕ್ಷಗಳಿಂದ ರಾಜೀನಾಮೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ರಾಜೀನಾಮೆ ಕೇಳುತ್ತಾ ಇರುತ್ತಾರೆ. 2022ರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಇವರು ರಾಜೀನಾಮೆ ಕೊಟ್ಟಿದ್ರಾ? ರಾಜೀನಾಮೆ ಕೇಳೋದು ಇವರಿಗೆ ಅಭ್ಯಾಸ ಆಗಿಬಿಟ್ಟಿದೆ. ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಿ ಎನ್ನುತ್ತಾರೆ. ನಮಗೆ ಜವಾಬ್ದಾರಿ ಇದೆ. ಶುಕ್ರವಾರ ಕೂಡ ಅಪೀಲ್ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ಸಹಕಾರ ನೀಡಿ ಅಂಥಾ ಕೇಳಿದ್ದೇವೆ ಎಂದರು. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ – ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

    ಇದು ರಾಜ್ಯದ, & ಬೆಂಗಳೂರಿನ ಸೇಫ್ಟಿಯ ಪ್ರತಿಷ್ಠೆ. ಬೆಂಗಳೂರು ಶುಡ್ ಬಿ ಸೇಫ್ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಮಾಡಿದೇವೆ. ಆ ಭಾಗದಲ್ಲಿರುವ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಲಾಗಿದೆ. ನಮ್ಮಲ್ಲಿ ಸಮರ್ಥ ಪೊಲೀಸರು ಇದ್ದಾರೆ. ಎಫ್‌ಎಸ್‌ಎಲ್ ಅವರು ಎಲ್ಲರೂ ಮುಂದೆ ಇದ್ದಾರೆ. ದೊಡ್ಡ ತಂಡದಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಟೈಮರ್ ಇಟ್ಟಿದ್ದು, ಅದಕ್ಕೆ ಎಷ್ಟು ಕೆಪಾಸಿಟಿ ಇತ್ತು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಇದೆಲ್ಲವೂ ತನಿಖೆಗೆ ಸಹಕಾರ ಆಗಲಿದೆ. ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಆರೋಪಕ್ಕೂ ಇದಕ್ಕೂ ಸಾಮ್ಯತೆ ಇದೆಯೋ ಇಲ್ವೋ, ಅದೆಲ್ಲಾ ಊಹೆ ಮಾಡಿ ಹೇಳೋದಿಲ್ಲ. ಈ ಘಟನೆ ಮಾಡಿದವರನ್ನ ಹಿಡಿತೇವೆ. ಅಷ್ಟು ಮಾತ್ರ ಹೇಳಬಹುದು. ಇವತ್ತು ಸಿಎಂ ಜೊತೆ ಮೀಟಿಂಗ್ ಮಾಡಿ ಚರ್ಚಿಸುತ್ತೇವೆ. ಅಲ್ಲಿ ಇದರ ಬಗ್ಗೆ ಕೆಲವು ಸೂಚನೆಗಳನ್ನು ಕೊಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Public TV Exclusive: ಬೆಂಗ್ಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಶಂಕಿತನ ಫೋಟೋ ‌ಲಭ್ಯ