Tag: ಬಾಂಬೆ ರವಿ

  • ತಂದಿಟ್ಟು ತಮಾಷೆ ನೋಡೋದಕ್ಕೆ ಹೇಳಿರ್ತಾರೆ – ಉಮಾಪತಿ ಬಳಿ ಕ್ಷಮೆ ಕೇಳಿದ್ದ ಭೂಗತ ಪಾತಕಿ ರವಿ

    ತಂದಿಟ್ಟು ತಮಾಷೆ ನೋಡೋದಕ್ಕೆ ಹೇಳಿರ್ತಾರೆ – ಉಮಾಪತಿ ಬಳಿ ಕ್ಷಮೆ ಕೇಳಿದ್ದ ಭೂಗತ ಪಾತಕಿ ರವಿ

    ಬೆಂಗಳೂರು: ಕೊರೊನಾದಿಂದ ಸಾಯುವ ಮುನ್ನ ಭೂಗತ ಪಾತಕಿ ಬಾಂಬೆ ರವಿ ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ಬಳಿ ಕ್ಷಮೆಯಾಚಿಸಿದ್ದ.

    ರವಿ ಸಾಯುವ ಕೆಲವು ದಿನಗಳ ಹಿಂದೆ ಅಂದರೆ ಆಗಸ್ಟ್ 5 ರಂದು ಸತ್ಯ ಬಾಯಿ ಬಿಟ್ಟಿದ್ದ ಉಮಾಪತಿಗೆ ಕರೆ ಮಾಡಿ ಸತ್ಯ ಹೇಳಿ ಸ್ವಾರಿ ಕೇಳಿದ್ದ. ಕೆಲವರು ನಮ್ಮ ಮಧ್ಯೆ ತಂದಿಡುವ ಕೆಲಸ ಮಾಡಿದ್ದಾರೆ. ಅವರ ಹೆಸರು ಬೇಡ. ಚಿಲ್ಲರೆ ಕಾಸಿನ ಆಸೆಗೆ ಏನೇನೋ ಹೇಳ್ತಿದ್ದಾರೆ. ನೀವು ಯಾರೂ ಅನ್ನೋದೆ ನನಗೆ ಗೊತ್ತಿಲ್ಲ ಎಂದಿದ್ದಾನೆ.

    ನನ್ನಿಂದ ಗೊತ್ತಿಲ್ಲದೆ ತಪ್ಪಾಗಿದೆ ನಿಮ್ಮ ಪೋಷಕರಲ್ಲಿ ನಾನು ಕ್ಷಮೆ ಕೇಳ್ತಿನಿ. ಮನೆಗೆ ಹೋಗಿ ಫೋನ್ ಸ್ಫೀಕರ್ ಆನ್ ಮಾಡಿ ನಾನ್ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ದೊಡ್ಡ ವ್ಯಕ್ತಿಗಳ ಮಾತು ಕೇಳಿ ರವಿ ಉಮಾಪತಿ ಅವರಿಗೆ ಧಮ್ಕಿ ಹಾಕಿದ್ದಾರೆ ಎಂಬ ಮಾತು ಹೇಳಿಬರುತ್ತಿದೆ. ಇದನ್ನೂ ಓದಿ :ಚಂದನವನದಲ್ಲಿ ಸುದೀಪ್ ಸಿನಿ ಜರ್ನಿ

    ರವಿ ಮತ್ತು ಉಮಾಪತಿ ಸಂಭಾಷಣೆಯ ಆಡಿಯೊ ಲಭ್ಯವಾಗಿದ್ದು, ಇಷ್ಟಕ್ಕೂ ಬಾಂಬೆ ರವಿಗೆ ಉಮಾಪತಿ ಬಗ್ಗೆ ಮಾಹಿತಿ ಕೊಟ್ಟವರು ಯಾರು? ಉಮಾಪತಿ ಬಗ್ಗೆ ಗೊತ್ತಿದ್ದವರೆ ಬಾಂಬೆ ರವಿಗೆ ಮಾಹಿತಿ ಕೊಟ್ರಾ? ರಾಬರ್ಟ್ ಸಿನಿಮಾ ವೇಳೆ ಉಮಾಪತಿಗೆ ಬಾಂಬೆ ರವಿಯಿಂದ ಸುಪಾರಿ ಕೊಟ್ರಾ? ಹೀಗೆ ಹಲವಾರು ಪ್ರಶ್ನೆಗಳು ಇನ್ನು ಹಾಗೆ ಉಳಿದುಕೊಂಡಿವೆ. ಇದನ್ನೂ ಓದಿ : ತಂದೆ ಸಮಾಧಿ ಬಳಿ ಬಾಲಕಿ ಹುಟ್ಟುಹಬ್ಬ ಆಚರಣೆ

    ಆಡಿಯೋದಲ್ಲಿ ಏನಿದೆ?
    ಬಾಂಬೆ ರವಿ: ಹಲೋ ಅಲ್ಲಾರಿ ಉಮಾಪತಿ ನಮಗೂ ನಿಮಗೂ ಏನಿದೆ. ಕೇಳಿಸ್ತಿದೆಯಾ
    ಉಮಾಪತಿ ನಿರ್ಮಾಪಕ: ಹೇಳಿ ಹೇಳಿ ರವಿ ಅವರೇ

    ಬಾಂಬೆ ರವಿ: ನಮ್ಮಿಬ್ಬರಿಗೂ ದುಷ್ಮನ್ ಇದೆಯಾ? ಏನು ನಮ್ಮಿಬ್ಬರದ್ದು
    ಉಮಾಪತಿ: ಆ ತರಹ ಏನು ಇಲ್ಲವಲ್ಲಾ? ನಿಮಗೂ ಗೊತ್ತಿರಬೇಕಲ್ವಾ? ನನ್ನ ಕಡೆಯಿಂದ ಏನಾದ್ರೂ ತೊಂದರೆಯಾಗಿದೆಯಾ?

    ಬಾಂಬೆ ರವಿ: ನೀವು ಯಾರು ಅನ್ನೋದೆ ಗೊತ್ತಿಲ್ಲ. ನಿಮಗೆ ಕೆಲವೊಂದು ಪಿಕ್ಚರ್ ನೋಡಿ, ಒಂದು ಮೆಸೇಜ್ ಮಾಡಿದ್ದೆ. ನಮ್ಮ ಬಗ್ಗೆ ತಪ್ಪಾಗಿ ಮಾತಡಿದ್ದೀರಾ ಅದಕ್ಕೆ ನನಗೂ ಕೋಪ ಬಂತು. ನಾನ್ ಮೆಸೇಜ್ ಮಾಡಿದ್ದೆ.
    ಉಮಾಪತಿ: ನನಗಾ? ಯಾವುದು ಮೆಸೇಜ್ ಬಂದಿಲ್ಲ  ಇದನ್ನೂ ಓದಿ :ಗಂಡನ ಮನೆ ಬಿಟ್ಟು ಹೋದ್ರಾ ಶಿಲ್ಪಾ ಶೆಟ್ಟಿ?

    ಬಾಂಬೆ ರವಿ: ನಾನು ಓಪನ್ ಆಗಿ ಹೇಳ್ತಿನಿ ನೋಡಿ. ನೀವು ನಮ್ಮ ಕಡೆ ಎಲ್ಲಿ ಬೇಕಾದರೂ ಹೇಳ್ತಿನಿ. ಉಮಾಪತಿ ನಮಗೆ ಸಂಬಂಧವಿಲ್ಲ. ಅವರು ಯಾವತ್ತೂ ನಮ್ಮ ಹುಡುಗರಿಗೆ ತೊಂದರೆ ಕೊಟ್ಟವರಲ್ಲ. ಅವರು ಯಾರು ಅನ್ನೋದೆ ಗೊತ್ತಿಲ್ಲ ಇದು ಸತ್ಯ. ನಾನು ಹೇಳ್ತಿನಿ. ಈಗ ನಮ್ಮ ಲೈನೇ ಬೇರೆ. ನಮ್ಮ ದುಷ್ಮನ್ ಬೇರೆ. ನಮ್ಮ ಸೈಕಲ್ ರವಿ ದುಷ್ಮನಿ ಮುಗಿಸಿಕೊಳ್ತಿವೋ? ನಾವೇ ಮುಗಿದು ಹೋಗ್ತಿವೋ? ಅದು ದೇವರಿಗೆ ಸೇರಿದ್ದು.

    ಉಮಾಪತಿ: ಒಂದನ್ನು ಹೇಳ್ತಿನಿ ಕೇಳಿ ರವಿ ಅವರೇ, ನೀವು ಎಲ್ಲದಾರೂ, ಯಾರಾದ್ರೂ ಹೇಳಿದ್ದರೆ, ತಂದಿಟ್ಟು ತಮಾಷೆ ನೋಡೋದಕ್ಕೆ ಹೇಳಿರ್ತಾರೆ ಹೊರತು.

    ಬಾಂಬೆ ರವಿ: ನೋಡಿ ಉಮಾಪತಿ ಅವರೇ ನಾನು ಕ್ಲಾರಿಟಿಯಿಂದ ಮಾತಾಡ್ತಿನಿ. ಸುಮ್ಮನೆ ಯಾರ ಹತ್ತಿರವೂ ಮಾತನಾಡೋಕೆ ಹೋಗಲ್ಲ. ಕ್ಲಾರಿಟಿ ಇದ್ದರೆ ಮಾತನಾಡ್ತಿನಿ. ಕೆಲವರಿಗೆ ಏನ್ ಗೊತ್ತಾ. ಚಿಲ್ಲರೆ ಕಾಸು ಮಾಡಬೇಕು ಇದರಲ್ಲಿ. ಇದೇ ವ್ಯಾಪಾರ ಆಗಿದೆ ಕೆಲವರಿಗೆ. ಕಾಸು ಮಾಡಬೇಕು. ಇವರಿಗೇನು ಮಜಾ

    ಉಮಾಪತಿ: ಅದೊಂದು ಆಡಿಯೋ ಬಂದ ಮೇಲೆ ಎಷ್ಟು ಬೇಜಾರು ಆಗಿತ್ತು. ನಾವು ದುಡ್ಡು ಕೊಟ್ಟು ಸೋತಿದ್ದೀವಿ ಕೆಲವೊಬ್ಬರ ಹತ್ತಿರ. ಯಾರಿಗೂ ಒಂದು ರೂಪಾಯಿ ಯಾಮಾರಿಸಿಲ್ಲ. ಆದರೆ ಯಾರೋ ಸೈಕಲ್ ರವಿ ಅಂತೆ. ಅವನ ಹತ್ರ 10 ಕೋಟಿ ತಗೊಂಡಿದ್ದೀನಿ ಅಂದ್ರೆ. ನಿಜವಾಗಲೂ ಹೆಚ್ಚು ಕಡಿಮೆ ಒಂದು ವಾರ. ನನ್ನ ಕಷ್ಟ ನನಗೆ ಗೊತ್ತು. ಏಕೆಂದರೆ ನಾವು ಕೆಲವೊಬ್ಬರ ಹತ್ತಿರ ವ್ಯಾಪಾರ ಮಾಡ್ತಿವಿ.

    ಬಾಂಬೆ ರವಿ: ಏಕೆಂದರೆ ಉಮಾಪತಿ ಅವರೆ, ನೋಡಿ ಸ್ವಾಮಿ ನಮಗೂ ಕೋಪ ಇತ್ತು. ನೀವು ಯಾರೂ ಅನ್ನೋದು ಗೊತ್ತಿಲ್ಲ. ನಿಮ್ಮ ಹೆಸರನ್ನು ನಾವು ತಗೊಂಡಿಲ್ಲ. ನೀವು ಮಾತಾಡಿ ಬಿಟ್ಟಿರಿ. ನಾವು ಏನೋ ತಪ್ಪು ಮಾಡಿರ್ತಿವಿ ಸರಿನಾ? ಈಗ ನಮ್ಮ ಕಡೆಯಿಂದಲೂ ತಪ್ಪಾಗಿದೆ. ನಾವು ಒಪ್ಪಿಕೊಳ್ತಿವಿ ಇಲ್ಲಾ ಅಂತಾ ಹೇಳ್ತಿಲ್ಲ ನಾವು ಯಾವತ್ತೂ ಒಂದು ದಿಸಾನು ನಿಮ್ಮ ಬಗ್ಗೆ ಆಲೋಚನೆ ಮಾಡಿದೋರಲ್ಲ. ನೋಡಿ ನಂಗೆ ದುಡ್ಡೇ ಬೇಕಿದ್ರೆ, ನಾನು ಸಿಂಪಲ್ ಆಗಿ ಹೇಳ್ತಿನಿ ಕೇಳಿಸ್ಕೊಳಿ. ನನಗೆ ದುಡ್ಡೇ ಬೇಕಿದ್ರೆ ನೇರವಾಗಿ ನಿಮಗೆ ಫೋನ್ ಮಾಡಿ. ನೋಡಿ ಸ್ವಾಮಿ, ದುಡ್ಡು ಬೇಕು. ಹಂಗ್ ಮಾಡಿಸ್ತೀನಿ, ಹಿಂಗ್ ಮಾಡಿಸ್ತಿನಿ ಅಂತಾ ಬೆದರಿಕೆ ಹಾಕಬಹುದಿತ್ತಲ್ಲ. ನೀವು ಸಹಜವಾಗಿ ಆಲೋಚನೆ ಮಾಡಿ, ನಿಮ್ಮ ಮೇಲೆ ನನಗೆ ದುಷ್ಮನಿ ಇಲ್ಲ. ಏನು ಅಂತಾ ಗೊತ್ತಿಲ್ಲ. ನಿಮ್ಮ ಹತ್ರ ದುಡ್ಡಿನ ಇಂಟೆನ್ಷನ್ ಇಲ್ಲ. ನಿಮ್ಮ ನಂಬರ್‍ಗೆ ಯಾವತ್ತೂ ಫೋನ್ ಮಾಡಿಲ್ಲ. ಇವತ್ತೇ ಫೋನ್ ಮಾಡಿರೋದು. ಏನ್ ಫೋನ್ ಮಾಡಿರೋದು ಅಂದ್ರೆ, ಇದು ಇತ್ತೀಚೆಗೆ ಅತಿಯಾಗ್ತಿದೆ. ಯಾರ್ಯಾರೋ ಬರ್ತಾವ್ರೆ, ನಾಳೆ ಇನ್ನೊಬ್ಬ ಹೋಗಿ ಏನೋ ಮಾತಾಡ್ತಾನೆ. ಇದರಲ್ಲಿ ಬಾಂಬೆ ಪಾತ್ರ ಇದೆ ಅನ್ನಬೇಕಾ? ನಿಮ್ಮದೇನೋ ಸಮಸ್ಯೆ ಆದಾಗ ಸತ್ಯವಾಗಿಯೂ, ನಮಗೆ ಎಷ್ಟು ಜನ ಸಂಪರ್ಕ ಮಾಡೋಕೆ ಬಂದರು ಗೊತ್ತಾ? ಸತ್ಯವಾಗಿಯೂ. ಇದನ್ನೂ ಓದಿ :ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರು – ಸಹೋದ್ಯೋಗಿಗಳಿಗೆ ಸಿಎಂ ಮೆಚ್ಚುಗೆ

    ಉಮಾಪತಿ: ಇಲ್ಲ ನನಗೂ ಬಂತು. ನನಗೆ ಏನೋ ನಿಮ್ಮನ್ನು ಯಾರೋ ಕಾಂಟ್ಯಾಕ್ಟ್ ಮಾಡಿದ್ದಾರೆ ಅಂತಾ ಗೊತ್ತಾಯ್ತು
    ಬಾಂಬೆ ರವಿ: ಎಷ್ಟೋ ಜನ ಟ್ರೈ ಮಾಡಿದ್ದಾರೆ. ಎಂತೆಥವರು ಸುಮ್ನೆ ಹೇಳಿದ್ರೆ ತಪ್ಪಾಗಿ ಬಿಡ್ತಾವೆ ಅವೆಲ್ಲಾ. ನಾನು ಬೇಡವೇ ಬೇಡಪ್ಪ ಇಂತವರು. ನನಗೂ ಇದಕ್ಕೂ ಸಂಬಂಧವಿಲ್ಲ ನಂಬರ್ ಕೊಡಬೇಡಿ ಎಂದು ಹೇಳಿದ್ದೀನಿ ಅಷ್ಟೆ. ನಿಮ್ಮ ಮನೆಯವರು ಸಫರ್ ಆಗಿದ್ದಾರೆ ಅಂದ್ರಿ. ನಾನು ನನ್ನ ಕಡೆಯಿಂದ ಸಂಜೆ ಫೋನ್ ಮಾಡ್ತಿನಿ. ಸ್ಪೀಕರ್ ಆನ್ ಮಾಡಿ ಹಾಲ್ ನಲ್ಲಿ ಎಲ್ಲೋ ಇಟ್ಟುಬಿಡಿ. ನಾನು ಒಂದು ಸರಿ ಕ್ಷಮೆಯನ್ನು ಕೇಳ್ತಿನಿ ನಿಮ್ಮ ಪೇರೆಂಟ್ಸ್‍ಗೆ ಅಷ್ಟೆ, ಮುಗಿದೋಯ್ತು. ನಾನು ಫೋನ್  ಮಾಡಲ್ಲ ನಿಮಗೆ.
    ಉಮಾಪತಿ: ಸರಿ ಸರಿ ಇದನ್ನೂ ಓದಿ :ಇನ್‍ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?

    ಬಾಂಬೆ ರವಿ:ನಾನ್ ಯಾವುದಕ್ಕೂ ನಿಮ್ಮ ವಿಚಾರ ಬೇಡದ ವಿಚಾರ ಸ್ವಾಮಿ. ನೀವು ಯಾರು ಅನ್ನೋದೆ ಗೊತ್ತಿಲ್ಲ. ಸುಮ್ನೆ ಏನಕ್ಕೆ ನಾವೆಲ್ಲಾ ಮಾತಾಡಬೇಕು..
    ಉಮಾಪತಿ: ಸರಿ ರವಿ ಅವರೇ. ನಾನು ಹೇಳೋದು ಇಷ್ಟೆ. ನಿಮಗೆ ಒಳ್ಳೆಯದಾಗಬೇಕು. ನಮಗೂ ಒಳ್ಳೆಯದಾಗಬೇಕು.

  • ನಿರ್ಮಾಪಕ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ  ಭೂಗತ ಪಾತಕಿ ಬಾಂಬೆ ರವಿ ಕೊರೊನಾದಿಂದ ಸಾವು

    ನಿರ್ಮಾಪಕ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ ಭೂಗತ ಪಾತಕಿ ಬಾಂಬೆ ರವಿ ಕೊರೊನಾದಿಂದ ಸಾವು

    ಬೆಂಗಳೂರು: ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಭೂಗತ ಪಾತಕಿ ಬಾಂಬೆ ರವಿ ಕೋವಿಡ್ ನಿಂದ ಮೃತಪಟ್ಟಿದ್ದಾನೆ.

    ದೂರದ ದಕ್ಷಿಣ ಆಫ್ರಿಕಾದಲ್ಲಿ ದಲ್ಲಿ ಕೊರೊನಾಗೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಹಲವು ವರ್ಷಗಳಿಂದ ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ ರವಿ, ಕಳೆದ ವರ್ಷ ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ದೀಪಕ್ ಗೆ ಸಹ ಧಮ್ಕಿ ಹಾಕಿದ್ದ. ರವಿ ಹಣಕ್ಕೆ ಧಮ್ಕಿ ಹಾಕಿ ಕೊಲೆ ಸುಪಾರಿ ನೀಡಿದ್ದ.

    ಈ ಸಂಬಂಧ ಜಯನಗರ ಪೊಲೀಸರು ಸುಪಾರಿ ಹುಡುಗರನ್ನು ರೆಂಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಬಾಂಬೆ ರವಿ ಬಂಧನಕ್ಕೂ ಪೊಲೀಸರು ವಿದೇಶಕ್ಕೆ ಹೋಗಿ ಹುಡುಕಾಡಿದ್ದರು. ಎರಡು ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಖಾಸಗಿ ಆಸ್ಪತ್ರೆಯಲ್ಲಿ ರವಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ರಾಜೀನಾಮೆ ಕೊಟ್ಟ ಬಳಿಕ ಬಿಎಸ್‍ವೈ ಸೈಲೆಂಟ್ ಪ್ಲ್ಯಾನ್

    ಉಮಾಪತಿ ಬಳಿ ಕ್ಷಮೆ

    ಆಸ್ಪತ್ರೆ ಸೇರಿದ ಬಳಿಕ ನಿರ್ಮಾಪಕ ಉಮಾಪತಿ ಬಳಿ ಕ್ಷಮೆ ಕೇಳಿದ್ದ ಎನ್ನಲಾಗಿದೆ. ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ಸೋದರ ದೀಪಕ್ ಕೊಲೆ ವಿಚಾರಕ್ಕೆ ಕ್ಷಮೆ ಕೇಳಿದ್ದು, ನನ್ನಿಂದ ತಪ್ಪಾಗಿದೆ ಬೇರೆಯವರ ಮಾತು ಕೇಳಿ ಈ ಕೆಲಸಕ್ಕೆ ಕೈ ಹಾಕಿದೆ. ಇದರಲ್ಲಿ ಕೆಲವರು ನನ್ನನ್ನು ಬಳಸಿಕೊಂಡರು ಎಂದು ಬಾಂಬೆ ರವಿ ಕ್ಷಮೆಯಾಚಿಸಿದ್ದ ಎನ್ನಲಾಗಿದೆ.

    ಉಮಾಪತಿ ಜೊತೆಯಲ್ಲಿದ್ದವರೇ ಬಾಂಬೆ ರವಿಗೆ ಸುಪಾರಿ ನೀಡಿದರಾ ಎಂಬ ಗುಮಾನಿ ಕಾಡೋಕೆ ಆರಂಭಿಸಿದೆ. ಆ ದೊಡ್ಡ ವ್ಯಕ್ತಿಗಳ ಮಾತು ಕೇಳಿ ಉಮಾಪತಿಗೆ ಧಮ್ಕಿ ಹಾಕಿದ್ದನಾ ಬಾಂಬೆ ರವಿ ಅನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಬಾಂಬೆ ರವಿ ಸಾಯುವ ಕೆಲವು ದಿನಗಳ ಹಿಂದೆ ಅಂದರೆ ಆಗಸ್ಟ್ 5 ರಂದು ಸತ್ಯ ಬಾಯಿ ಬಿಟ್ಟಿದ್ದಾನೆ. ಉಮಾಪತಿ ಅವರಿಗೆ ಕರೆ ಮಾಡಿ ಸತ್ಯ ಹೇಳಿ, ಕ್ಷಮೆ ಕೇಳಿದ್ದಾನೆ. ಕೆಲವರು ನಮ್ಮ ಮಧ್ಯೆ ತಂದಿಡುವ ಕೆಲಸ ಮಾಡಿದ್ದಾರೆ. ಅವರ ಹೆಸರು ಬೇಡ. ಚಿಲ್ಲರೆ ಕಾಸಿನ ಆಸೆಗೆ ಏನೇನೋ ಹೇಳುತ್ತಿದ್ದಾರೆ. ನೀವು ಯಾರು ಅನ್ನೋದೆ ನನಗೆ ಗೊತ್ತಿಲ್ಲ ಎಂದು ರವಿ ಹೇಳಿದ್ದಾನೆ.

    ನನ್ನಿಂದ ಗೊತ್ತಿಲ್ಲದೆ ತಪ್ಪಾಗಿದೆ ನಿಮ್ಮ ಪೋಷಕರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಮನೆಗೆ ಹೋಗಿ ಫೋನ್ ಸ್ಪೀಕರ್ ಆನ್ ಮಾಡಿ ನಾನು ಕ್ಷಮೆ ಕೇಳುತ್ತೇನೆ ಎಂದು ಬಾಂಬೆ ರವಿ ಹೇಳಿದ್ದಾನೆ. ಬಾಂಬೆ ರವಿ ಮತ್ತು ಉಮಾಪತಿ ಸಂಭಾಷಣೆಯ ಆಡಿಯೋ ಲಭ್ಯವಾಗಿದ್ದು, ಬಾಂಬೆ ರವಿಗೆ ಉಮಾಪತಿ ಬಗ್ಗೆ ಮಾಹಿತಿ ಕೊಟ್ಟವರು ಯಾರು? ಉಮಾಪತಿ ಬಗ್ಗೆ ಗೊತ್ತಿದ್ದವರೇ ಬಾಂಬೆ ರವಿಗೆ ಮಾಹಿತಿ ಕೊಟ್ಟರಾ? ರಾಬರ್ಟ್ ಸಿನಿಮಾ ಟೈಮ್ ನಲ್ಲಿ ಉಮಾಪತಿಗೆ ಬಾಂಬೆ ರವಿಯಿಂದ ಸುಫಾರಿ ಕೊಟ್ಟರಾ? ಇಂತಹ ಹಲವು ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.