Tag: ಬಾಂಗ್ಲಾ ಯುವತಿ

  • ಪ್ರಿಯತಮನನ್ನು ಮದುವೆಯಾಗಲು ಬಾಂಗ್ಲಾದಿಂದ ಭಾರತಕ್ಕೆ ಈಜಿಕೊಂಡೇ ಬಂದ್ಳು!

    ಕೋಲ್ಕತ್ತಾ: ನಾವು ಈ ಹಿಂದೆ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹುಡುಕಲು ಸಪ್ತ ಸಾಗರವನ್ನೇ ದಾಟಿ ಬರುವಂತಹ ಕಥೆಗಳನ್ನು ಕೇಳಿರುತ್ತೇವೆ. ಆದರೆ ಅವು ಕಾಲ್ಪನಿಕ ಕಥೆಗಳೇ ಹೊರತು ನಿಜವಲ್ಲ. ಆದರೆ ಇಲ್ಲೊಬ್ಬ ಬಾಂಗ್ಲಾದೇಶದ ಯುವತಿ ಭಾರತದಲ್ಲಿರುವ ತನ್ನ ಗೆಳೆಯನನ್ನು ಮದುವೆಯಾಗಲು ಈಜಿಕೊಂಡೇ ಬಂದಿದ್ದಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೇ 1 ಗಂಟೆ ನದಿಯಲ್ಲಿ ಈಜುವ ಮೂಲಕ ಭಾರತ ಪ್ರವೆಶಿಸಿ ತನ್ನ ಪ್ರಿಯತಮನನ್ನು ಕೊನೆಗೂ ಭೇಟಿಯಾಗಿದ್ದಾಳೆ.

    ಹೌದು, ಬಾಂಗ್ಲಾದೇಶದ ಯುವತಿ ಕೃಷ್ಣ ಮಂಡಲ್ ಭಾರತದ ಯುವಕ ಅಭಿಕ್ ಮಂಡಲ್‌ನನ್ನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿ, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕೃಷ್ಣ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಆಕೆ ತನ್ನ ಗೆಳೆಯನನ್ನು ಭೇಟಿಯಾಗಲು ಅಕ್ರಮವಾಗಿ ಭಾರತ ಪ್ರವೇಶಿಸಿಲು ನಿರ್ಧರಿಸಿದಳು. ಇದನ್ನೂ ಓದಿ: ಪ್ರೀತಿಸಿ ಮೋಸ ಮಾಡ್ತಾರೆ, ಕೈಗೊಂದು ಮಗು ಕೊಟ್ಟು ಓಡಿ ಹೋಗ್ತಾರೆ – ಲವ್‌ಜಿಹಾದ್ ವಿರುದ್ಧ ಶೋಭಾ ಗುಡುಗು

    ಕೃಷ್ಣ ಮೊದಲು ರಾಯಲ್ ಬೆಂಗಾಲ್ ಟೈಗರ್ಸ್ಗೆ ಹೆಸರುವಾಸಿಯಾಗಿರುವ ಸುಂದರಬನ್ಸ್ ಪ್ರವೆಶಿಸಿದ್ದಳು. ಬಳಿಕ ತನ್ನ ಗೆಳೆಯನನ್ನು ತಲುಪಲು ನದಿಯಲ್ಲಿ ಸುಮಾರು 1 ಗಂಟೆ ಈಜಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ಮುಂದೇನಾಯ್ತು?
    ಕೃಷ್ಣ 3 ದಿನಗಳ ಹಿಂದೆ ತನ್ನ ಗೆಳೆಯ ಅಭಿಕ್‌ನನ್ನು ಕೋಲ್ಕತ್ತಾದ ಕಾಳಿಘಾಟ್ ದೇವಾಲಯದಲ್ಲಿ ವಿವಾಹವಾಗಿದ್ದಾಳೆ. ಆದರೆ ಆಕೆ ಅಕ್ರಮವಾಗಿ ಭಾರತ ಪ್ರವೇಶಿಸಿರುವುದರಿಂದ ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಕೃಷ್ಣಳನ್ನು ಬಾಂಗ್ಲಾದೇಶದ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

  • ಬೆಂಗ್ಳೂರಿನಲ್ಲೊಂದು ನಿರ್ಭಯಾ ಪ್ರಕರಣ – ಅತ್ಯಾಚಾರಗೈದು ಗುಪ್ತಾಂಗಕ್ಕೆ ಬಾಟಲ್ ಇರಿಸಿ ವಿಕೃತಿ!

    ಬೆಂಗ್ಳೂರಿನಲ್ಲೊಂದು ನಿರ್ಭಯಾ ಪ್ರಕರಣ – ಅತ್ಯಾಚಾರಗೈದು ಗುಪ್ತಾಂಗಕ್ಕೆ ಬಾಟಲ್ ಇರಿಸಿ ವಿಕೃತಿ!

    – ಅಸ್ಸಾಂ, ಬಾಂಗ್ಲಾದಲ್ಲಿ ವಿಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ
    – ಬಾಂಗ್ಲಾ ಮೂಲದ ಯುವತಿ ಮೇಲೆ ಪರಿಚಿತ ಯುವಕರಿಂದ ಅತ್ಯಾಚಾರ
    – ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರ ಸಾಥ್

    ಬೆಂಗಳೂರು: ರಾಜಧಾನಿಯಲ್ಲಿ ನಿರ್ಭಯಾ ರೀತಿಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ವಿಕೃತಿ ಮರೆದಿದ್ದಾರೆ. 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ.

    ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರದ ವೀಡಿಯೋ ವೈರಲ್ ಆಗಿತ್ತು. ಅಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಸ್ಸಾಂ ರಾಜ್ಯದ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ವೀಡಿಯೋದಲ್ಲಿ ಬಾಂಗ್ಲಾ ಪ್ರಜೆಗಳು ಭಾಗಿಯಾಗಿದ್ದರಿಂದ ಅಲ್ಲಿನ ಪೊಲೀಸರಿಗೂ ಮಾಹಿತಿ ರವಾನಿಸಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ತೆಯ ಕುಟುಂಬಸ್ಥರನ್ನ ಪತ್ತೆ ಮಾಡಿದ್ದಾರೆ. ಆ ನಂತರ ಘಟನೆ ಬೆಂಗಳೂರಿನಲ್ಲಿ ನಡೆದಿರೋದ ಬಗ್ಗೆ ತಿಳಿದು ಬಂದಿದೆ.

    ಆರೋಪಿಗಳು ಬೆಂಗಳೂರಿನ ಆವಲಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದರು. ಸದ್ಯ ರಾಮಮೂರ್ತಿ ನಗರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ನಾಲ್ವರನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಆರೋಪಿಗಳು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.