Tag: ಬಾಂಗ್ಲಾ ಗಡಿ

  • ಬಾಂಗ್ಲಾ ಗಡಿಯಲ್ಲಿ ಧಾರವಾಡದ BSF ಯೋಧ ಹೃದಯಾಘಾತದಿಂದ ಸಾವು

    ಬಾಂಗ್ಲಾ ಗಡಿಯಲ್ಲಿ ಧಾರವಾಡದ BSF ಯೋಧ ಹೃದಯಾಘಾತದಿಂದ ಸಾವು

    ಹುಬ್ಬಳ್ಳಿ: ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬಿಎಸ್‍ಎಫ್ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ತಾಲೂಕಿನ ರೊಟ್ಟಿಗವಾಡ ಗ್ರಾಮದ ಸೈನಿಕ ಗಂಗಾಧರಯ್ಯ ಹಿರೇಮಠ (49) ಹೃದಯಾಘಾತದಿಂದ ಸಾವನ್ನಪ್ಪಿರುವ ಯೋಧ. ಗಂಗಾಧರಯ್ಯನವರು ಬಿಎಸ್‍ಎಫ್ ಬೆಟಾಲಿಯನ್ 138ರಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸದ್ಯ ವೆಸ್ಟ್ ಬೆಂಗಾಲದ ಕುಚ್ ಬಿಹಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಕರ್ತವ್ಯದಲ್ಲಿದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ – ಗೋಧಿ ಹಿಟ್ಟು, ಮೈದಾ, ರವೆ ರಫ್ತು ನಿಷೇಧ

    ಇಂದು ರಾತ್ರಿ ಸ್ವಗ್ರಾಮ ರೊಟ್ಟಿಗವಾಡಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆಯಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ: ಸಿಎಂ

    Live Tv
    [brid partner=56869869 player=32851 video=960834 autoplay=true]

  • ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಕಲಬುರಗಿ ಯೋಧ ಹುತಾತ್ಮ

    ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಕಲಬುರಗಿ ಯೋಧ ಹುತಾತ್ಮ

    ಕಲಬುರಗಿ: ಬಾಂಗ್ಲಾ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಯೋಧ ರಾಜಕುಮಾರ.ಎಂ.ಮಾವಿನ ಅವರು ಇಂದು ಹುತ್ಮಾತರಾಗಿದ್ದಾರೆ.

    ತ್ರಿಪುರಾ ರಾಜ್ಯದ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿರುವ ಧಲಾಯಿ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ಸಮಯದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ ವೇಳೆ ಎದೆಗೆ ಗುಂಡು ತಾಕಿ ಸ್ಥಳದಲ್ಲಿಯೇ ಹುತಾತ್ಮರಾದರು ಎನ್ನಲಾಗಿದೆ.

    ವೀರ ಯೋಧನ ಸಾವಿನ ಸುದ್ದಿ ತಿಳಿದು ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಯೋಧನ ಪಾರ್ಥಿವ ಶರೀರ ಗುರುವಾರ ಗ್ರಾಮಕ್ಕೆ ಆಗಮಿಸುವ ಸಾಧ್ಯತೆಯಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.