Tag: ಬಾಂಗ್ಲದೇಶ

  • ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್‌ ಇಂದು ಪ್ರಮಾಣ ವಚನ

    ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್‌ ಇಂದು ಪ್ರಮಾಣ ವಚನ

    ಢಾಕಾ: ಬಾಂಗ್ಲಾದೇಶದಲ್ಲಿನ (Bangladesh) ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಮಧ್ಯಂತರ ಸರ್ಕಾರವು ಗುರುವಾರ ಜಾರಿಗೆ ಬರಲಿದೆ.

    ಮುಹಮ್ಮದ್ ಯೂನಸ್ ಅವರು ಗುರುವಾರ ರಾತ್ರಿ 8:00 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಹೇಳಿದ್ದಾರೆ. ಮಧ್ಯಂತರ ಸರ್ಕಾರದ ಸಲಹಾ ಮಂಡಳಿಯು 15 ಸದಸ್ಯರನ್ನು ಒಳಗೊಂಡಿರಬಹುದು ಎಂದು ಸೇನಾ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಚುಕ್ಕಾಣಿ ಹಿಡಿಯಲಿದ್ದಾರೆ ಹಸೀನಾ ಕಟು ಟೀಕಾಕಾರ ಮೊಹಮ್ಮದ್‌ ಯೂನುಸ್‌

    ದೇಶಾದ್ಯಂತ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತಿದೆ. ಇದು ರಾಷ್ಟ್ರದ ಸ್ಥಿರತೆಗೆ ಧನಾತ್ಮಕ ಸಂಕೇತವಾಗಿದೆ ಇದೇ ಸಮಯದಲ್ಲಿ ತಿಳಿಸಿದ್ದಾರೆ. ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದರು. ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು.

    ಅರ್ಥಶಾಸ್ತ್ರಜ್ಞ ಯೂನಸ್ ಅವರಿಗೆ 2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡವರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ನೊಬೆಲ್​ ಶಾಂತಿ ಪ್ರಶಸ್ತಿ ಸಿಕ್ಕಿದೆ. ಇವರು ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಸಹ ಇದೇ ಸಂದರ್ಭದಲ್ಲಿ ಬಹುಮಾನವನ್ನು ಪಡೆದುಕೊಂಡಿತು. ಯೂನಸ್ ವಿರುದ್ಧ ಭ್ರಷ್ಟಾಚಾರ ಸೇರಿ 150 ಕ್ಕೂ ಹೆಚ್ಚು ಪ್ರಕರಣಗಳಿದೆ. ಆರೋಪ ಸಾಬೀತಾದರೆ ಅವರನ್ನು ವರ್ಷಗಳವರೆಗೆ ಜೈಲಿನಲ್ಲಿಡಬಹುದು. ಆದರೆ ಯೂನಸ್ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ವಿಶ್ವದ ಅತಿದೊಡ್ಡ ಯುರೇನಿಯಂ ಗಣಿಗಾರಿಕೆಯನ್ನು ಆಸ್ಟ್ರೇಲಿಯಾ ನಿಷೇಧಿಸಿದ್ದೇಕೆ? 

  • ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ

    ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಆಲ್‍ರೌಂಡರ್ ಆಟಗಾರ, ಕನ್ನಡಿಗ ಸ್ಟುವರ್ಟ್ ಬಿನ್ನಿ ಅಂತರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    ಈ ಬಗ್ಗೆ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದ ಬಿನ್ನಿ “ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುತ್ತಿರುವುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನು ದೇಶವನ್ನು ಪ್ರತಿನಿಧಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ”. ಬಿಸಿಸಿಐ ನನ್ನ ಕ್ರಿಕೆಟ್ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿರುವುದು ಸಂತೋಷ ನೀಡಿದೆ. ಇಷ್ಟು ವರ್ಷಗಳ ಕಾಲ ಅವರ ಬೆಂಬಲ ಹಾಗೂ ನಂಬಿಕೆ ಅಮೂಲ್ಯವಾದದ್ದಾಗಿದೆ. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಬೆಂಬಲ ಇಲ್ಲದೇ ಇದ್ದಿದ್ದರೆ ನನ್ನ ಕ್ರಿಕೆಟ್ ಜೀವನ ಇಷ್ಟು ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ, ರಾಜ್ಯದ ನಾಯಕತ್ವ ವಹಿಸಿ ಟ್ರೋಫಿಗಳನ್ನು ಗೆದ್ದಿರುವುದು ಗೌರವದ ವಿಷಯವಾಗಿದೆ ಎಂದು ಸ್ಟುವರ್ಟ್ ಬಿನ್ನಿ ಹೇಳಿದ್ದಾರೆ. ಇದನ್ನೂ ಓದಿ: ಸ್ಟುವರ್ಟ್ ಬಿನ್ನಿ, ಮಾಯಂತಿ ಲ್ಯಾಂಗರ್ ದಂಪತಿಗೆ ಗಂಡು ಮಗು ಜನನ

    ಕ್ರಿಕೆಟ್ ಆಟ ನನ್ನ ರಕ್ತಗತವಾಗಿದೆ, ಐಪಿಎಲ್ ನಲ್ಲೂ ಕೂಡ ನನ್ನನ್ನು ಆಡಿಸಿರುವಂತಹ ಫ್ರಾಂಚೈಸ್‍ಗಳಾದ ಮುಂಬೈ ಇಂಡಿಯನ್ಸ್, ಆರ್‍ಸಿಬಿ, ಆರ್.ಆರ್ ತಂಡಗಳಿಗೆ ಧನ್ಯವಾದ ತಿಳಿಸುತ್ತೇನೆ. ನನಗೆ ಎಲ್ಲವನ್ನೂ ಕೊಟ್ಟಿರುವ ಕ್ರಿಕೆಟ್‍ಗೆ ನಾನು ಮರಳಿ ಕೊಡುವ ಬಗ್ಗೆ ಸದಾ ಮಗ್ನನಾಗಿರುತ್ತೇನೆ, ನನ್ನ ಮುಂದಿನ ಇನ್ನಿಂಗ್ಸ್ ಗೆ ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ.

    ಬಿನ್ನಿ 2014ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು, ಭಾರತದ ಪರ ಈ ವರೆಗೂ 6 ಟೆಸ್ಟ್, 14 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಏಕದಿನದ ಪಂದ್ಯದಲ್ಲಿ 4 ರನ್ ನೀಡಿ 6 ವಿಕೆಟ್ ಕಿತ್ತಿರುವುದು ಸ್ಟುವರ್ಟ್ ಬಿನ್ನಿ ಅವರ ಅತ್ಯುತ್ತಮ ಸಾಧನೆಯಾಗಿದೆ. ಇದಲ್ಲದೆ ಐಪಿಎಲ್‍ನ 2003-04 ಸೀಸನ್ ನಲ್ಲಿ ರಾಜ್ಯ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಮೊದಲ ಬಾರಿ ಬಿನ್ನಿ ಆಡಿದ್ದರು.  ಇದನ್ನೂ ಓದಿ: ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

    2014ರಿಂದ 2016ರ ವರೆಗೆ ಭಾರತ ತಂಡದ ಪರ ಆಡಿರುವ ಬಿನ್ನಿ ಮೂರು ಮಾದರಿ ಕ್ರಿಕೆಟ್‍ನಿಂದ 24 ವಿಕೆಟ್ ಮತ್ತು 459ರನ್ ಸಿಡಿಸಿದ್ದಾರೆ. 2014ರ ಜೂ.17ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬಿನ್ನಿ ಕೇವಲ ನಾಲ್ಕು ರನ್ ನೀಡಿ 6 ವಿಕೆಟ್ ಪಡೆದಿದ್ದರು. ಈ ಮೂಲಕ ಇನ್ನೋರ್ವ ಕನ್ನಡಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇದನ್ನೂ ಓದಿ: ಜಾವೆಲಿನ್ ಎಸೆತ ಭಾರತಕ್ಕೆ ಅವಳಿ ಪದಕ

  • ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್

    ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್

    ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಶತಕ ಕಾಣದೇ ಇದೀಗ 50ನೇ ಇನ್ನಿಂಗ್ಸ್ ಕಳೆದು ಹೋಗಿದೆ.

    ಭಾರತ ತಂಡದ ಪರ ಯಾವತ್ತು ಅಬ್ಬರಿಸುವ ವಿರಾಟ್ ಬ್ಯಾಟ್ ಕೆಲಪಂದ್ಯಗಳಿಂದ ಸೈಲೆಂಟ್ ಅಗಿದೆ. ಭಾರತದ ರನ್ ಮಿಷಿನ್ ಎಂದೇ ಖ್ಯಾತರಾದ ವಿರಾಟ್ ಬ್ಯಾಟ್‍ನಿಂದ ಸೆಂಚುರಿ ಬರದೆ 50 ಇನ್ನಿಂಗ್ಸ್ ಕಳೆದುಹೋಗಿದೆ. ಕೊನೆಯದಾಗಿ 2019ರಲ್ಲಿ ಬಾಂಗ್ಲದೇಶದ ವಿರುದ್ಧ ಶತಕದ ಬಳಿಕ ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ ಎಂಬುದು ಅಚ್ಚರಿಯಾದರು ಸತ್ಯ.  ಇದನ್ನೂ ಓದಿ: ಇತರೇ 16 ರನ್ – 78 ರನ್‍ಗಳಿಗೆ ಭಾರತ ಆಲೌಟ್

    ಅದಲ್ಲದೆ ಇದೀಗ ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕೂಡ ವಿರಾಟ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಕಳೆದ ನಾಲ್ಕು ಇನ್ನಿಂಗ್ಸ್ ಗಳಿಂದ ವಿರಾಟ್ ಬ್ಯಾಟ್‍ನಿಂದ ಸಿಡಿದಿರುವುದು ಕೇವಲ 69ರನ್ ಮಾತ್ರ ಅದರಲ್ಲೂ ಲಾಡ್ರ್ಸ್ ಟೆಸ್ಟ್ ನಲ್ಲಿ ಸಿಡಿಸಿದ 42ರನ್ ಹೆಚ್ಚಿನ ಗಳಿಕೆಯಾಗಿದೆ. ಇದನ್ನೂ ಓದಿ: ಭಾರತ ತಂಡದ ಶಕ್ತಿಯಾಗಿ ಬೆಳೆದ ವೇಗಿಗಳು

    ವಿರಾಟ್ ಕೊಹ್ಲಿ ಬ್ಯಾಟ್‍ನಿಂದ ರನ್ ಹೊಳೆ ಹರಿದರೆ ಭಾರತಕ್ಕೆ ಯಾವುದೇ ಭಯವಿಲ್ಲ, ಆದರೆ ಇದೀಗ ಕೊಹ್ಲಿ ರನ್ ಗಳಿಸಲು ಪರದಾಡುವುದನ್ನು ಗಮನಿಸುತ್ತಿದ್ದಂತೆ ಭಾರತಕ್ಕೆ ಚಿಂತೆ ಕಾಡುತ್ತಿದೆ. ಕೊಹ್ಲಿ 95 ಟೆಸ್ಟ್ ಪಂದ್ಯಗಳಿಂದ 27 ಶತಕ ಸಹಿತ 7,616ರನ್ ಸಿಡಿಸಿದರೆ, 254 ಏಕದಿನ ಪಂದ್ಯಗಳಿಂದ 43 ಶತಕ ಸಹಿತ 12,169ರನ್ ಬಾರಿಸಿದ್ದಾರೆ. ಇದೀಗ ವಿರಾಟ್ ಅಭಿಮಾನಿಗಳು ಕೊಹ್ಲಿ ಬ್ಯಾಟ್‍ನಿಂದ ಶತಕದಾಟಕ್ಕಾಗಿ ಕಾಯುತ್ತಿದ್ದಾರೆ.

  • ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ಭೋಪಾಲ್: ರಸ್ತೆ ಸುರಕ್ಷೆಗಾಗಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಸರಣಿಗಾಗಿ ಇದೀಗ ವಿಶ್ವದ ಲೆಜೆಂಡ್ ಕ್ರಿಕೆಟರ್ಸ್ ಸಜ್ಜಾಗುತ್ತಿದ್ದಾರೆ.

    ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಘಟಾನುಘಟಿ ಕ್ರಿಕೆಟ್ ತಂಡಗಳಲ್ಲಿ ದಶಕಗಳ ಕಾಲ ಆಡಿ ನಿವೃತ್ತಿ ಹೊಂದಿರುವ ಮಾಜಿ ಆಟಗಾರರು ಮತ್ತೊಮ್ಮೆ ಇದೀಗ ಬ್ಯಾಟ್, ಬಾಲ್ ಹಿಡಿದು ತಮ್ಮ ತಮ್ಮ ದೇಶದ ಪರವಾಗಿ ಕ್ರಿಕೆಟ್ ಆಡಲು ಅಂಗಳಕ್ಕೆ ಇಳಿಯುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯವು ವಿಶ್ವಾದ್ಯಂತ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ಸಂಚಾರದ ಕುರಿತು ಜಾಗರೂಕತೆ ಮತ್ತು ಅವರು ರಸ್ತೆಗಳಲ್ಲಿ ನಡೆಸುವ ವರ್ತನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಕ್ರಿಕೆಟಿಗರು ಸೇರಿ ಆಡುವ ಮೂಲಕ ಜನರಿಗೆ ಸುರಕ್ಷತೆಯ ಪಾಠ ಮಾಡಲು ಹೊರಡುತ್ತಿದ್ದಾರೆ.

    ಕಳೆದ ವರ್ಷ ಈ ಸರಣಿಯಲ್ಲಿ ಭಾಗವಹಿಸಲು ಹಲವು ದೇಶದ ಲೆಜೆಂಡ್ ಕ್ರಿಕೆಟರ್ಸ್ ಸಿದ್ಧವಾಗಿದ್ದರು. ಆದರೆ ಕೊರೊನಾದಿಂದಾಗಿ ಸರಣಿ ನಡೆಯಲಿಲ್ಲ. ಇದೀಗ 2021ರ ಮಾರ್ಚ್ 5 ರಿಂದ ಮಾರ್ಚ್ 21ರವರೆಗೆ ಭಾರತದ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂ ರಾಯ್‍ಪುರ್ ನಲ್ಲಿ ನಡೆಯಲಿದೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಹಲವು ವರ್ಷಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿರುವ ಹಿರಿಯ ಆಟಗಾರರು ಮತ್ತೆ ಪ್ಯಾಡ್ ಕಟ್ಟಿ ಬ್ಯಾಟ್ ಬೀಸಲು ಮುಂದಾದರೆ, ವೇಗಿಗಳು ತಮ್ಮ ಉರಿ ಚೆಂಡಿನ ದಾಳಿಗೆ ಸಿದ್ಧವಾಗುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯದಲ್ಲಿ ಭಾರತ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಬಾಂಗ್ಲಾದೇಶ ಲೆಂಜೆಡ್ಸ್, ಶ್ರೀಲಂಕಾ ಲೆಜೆಂಡ್ಸ್, ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ಸೇರಿ ಒಟ್ಟು 6 ತಂಡಗಳು ಭಾಗವಹಿಸಲಿದೆ.

    ನಿವೃತ್ತಿ ಹೊಂದಿರುವ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಾಂಟಿ ರೋಡ್ಸ್, ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್ ಸೇರಿದಂತೆ ಖ್ಯಾತ ನಾಮ ಆಟಗಾರರು ಮತ್ತೆ ಕ್ರಿಕೆಟ್ ಅಂಕಣದಲ್ಲಿ ಎದುರು ಬದುರಾಗಲಿದ್ದಾರೆ.

    ಈ ಮೂಲಕ ನಿವೃತ್ತಿಯಾದ ಬಳಿಕ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಮಿಸ್ ಮಾಡಿಕೊಂಡಿರುವ ಅಭಿಮಾನಿಗಳಿಗೆ ಮತ್ತೆ ರಂಜಿಸಲು ಈ ಹಿರಿಯ ಆಟಗಾರರು ತಯಾರಾಗಿದ್ದಾರೆ.