Tag: ಬಹ್ರೈಚ್

  • 20 ದಿನಗಳಲ್ಲಿ 11 ದಾಳಿ, ಇಬ್ಬರು ಬಾಲಕಿಯರು ಸಾವು – ಬಹ್ರೈಚ್‌ನಲ್ಲಿ ಮತ್ತೆ ನರಭಕ್ಷಕ ತೋಳಗಳ ಹಾವಳಿ

    20 ದಿನಗಳಲ್ಲಿ 11 ದಾಳಿ, ಇಬ್ಬರು ಬಾಲಕಿಯರು ಸಾವು – ಬಹ್ರೈಚ್‌ನಲ್ಲಿ ಮತ್ತೆ ನರಭಕ್ಷಕ ತೋಳಗಳ ಹಾವಳಿ

    – ಇಲ್ಲಿನ ತೋಳಗಳು ನರಭಕ್ಷಕಗಳಾಗಿದ್ದು ಹೇಗೆ? – ದಾಳಿಯ ʻಸೇಡಿನ ಕಥೆʼ

    ಲಕ್ನೋ: ರುದ್ರಪ್ರಯಾಗದಲ್ಲಿ ನರಭಕ್ಷಕ ಚಿರತೆಗೆ ಹೆದರಿದ್ದ ಜನ ಸಂಜೆ ಹೊತ್ತಾದ್ರೆ ಸಾಕು ಮನೆಯಿಂದಾಚೆಗೆ ಕಾಲಿಡುವುದಕ್ಕೂ ಹೆದರುತ್ತಿದ್ದರು. ಅದೇ ಪರಿಸ್ಥಿತಿ ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ಮತ್ತೆ ಶುರುವಾಗಿದೆ. ನರಭಕ್ಷಕ ತೋಳಗಳ ಹಾವಳಿ ಮುಂದುವರಿದಿದ್ದು, ಬ್ರಹ್ರೈಚ್‌ನ ಕೈಸರ್‌ಗಂಜ್ ಮತ್ತು ಮಹ್ಸಿ ತಹಸಿಲ್‌ಗಳಲ್ಲಿರುವ ಹಳ್ಳಿಗಳ ಜನರಲ್ಲಿ ಭೀತಿ ಉಂಟುಮಾಡಿದೆ.

    ಕಳೆದ 20 ದಿನಗಳಲ್ಲಿ 11 ದಾಳಿ ನಡೆದಿದ್ದು, ಇಬ್ಬರು ಹುಡುಗಿಯರು ಸಾವನ್ನಪ್ಪಿದ್ದಾರೆ. 9 ಮಂದಿ ತೋಳಗಳ ದಾಳಿಗೆ ಸಿಕ್ಕಿ ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ನರಭಕ್ಷಕ ತೋಳಗಳನ್ನ (Wolf) ಸೆರೆ ಹಿಡಿಯಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು (Forest Department Officers) ಹಾಗೂ ಅಂತಾರಾಜ್ಯ ತಜ್ಞರು ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    Wolves IN UP 2

    ಈ ಕುರಿತು ಮಾತನಾಡಿರುವ ದೇವಿಪಟನ್ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ ಸಿಮ್ರಾನ್, ಕಾರ್ಯಾಚರಣೆ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಕಂಟ್ರೋಲ್‌ ರೂಮ್‌ ಸ್ಥಾಪಿಸಲಾಗಿದೆ. ಜೊತೆಗೆ ಡ್ರೋನ್‌ (Drone), ನೈಟ್‌ ವಾಚ್‌ಕ್ಯಾಮೆರಾಗಳನ್ನೂ ಕಣ್ಗಾವಲಿಗೆ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಘಟನೆ ಬೆಳಕಿಗೆ ಬಂದಿದ್ದು ಯಾವಾಗ?
    ಕಳೆದ ವರ್ಷ ಸೆಪ್ಟಂಬರ್‌ನಲ್ಲೇ ನರಭಕ್ಷಕ ತೋಳಗಳು ಬಹ್ರೈಚ್‌ನ (Bahraich) ಜನರನ್ನ ಕಾಡಿದ್ದವು. ಈ ವರ್ಷ ಸೆಪ್ಟೆಂಬರ್‌ನಲ್ಲಿ ಮತ್ತೆ ತೋಳಗಳ ಹಾವಳಿ ಹೆಚ್ಚಾಗಿದೆ. ಇದೇ ಸೆ.9ರಂದು ಜ್ಯೋತಿ ಎಂಬ ನಾಲ್ಕು ವರ್ಷದ ಬಾಲಕಿಯನ್ನ ತೋಳವೊಂದು ಹೊತ್ತೊಯ್ದಿತ್ತು. ಮರುದಿನ ಬೆಳಗ್ಗೆ ಆಕೆಯ ಮೃತದೇಹ ಪತ್ತೆಯಾಗಿತ್ತು. ನಂತ್ರ ಸೆ.11ರಂದು ಮೂರು ತಿಂಗಳ ಸಂಧ್ಯಾ ಎಂಬ ಹೆಣ್ಣು ಮಗುವನ್ನು ಆಕೆಯ ತಾಯಿ ಕಂಕುಳಲ್ಲಿ ಇರಿಸಿಕೊಂಡಿದ್ದಾಗಲೇ ಕಚ್ಚಿಕೊಂಡು ಎಳೆದೊಯ್ದಿತ್ತು. ಆ ನಂತರ ತೋಳಗಳ ಹಾವಳಿ ಮತ್ತೆ ಶುರುವಾಗಿರುವುದು ಕಂಡುಬಂದಿತು. ಅಧಿಕಾರಿಗಳು ಡ್ರೋನ್‌ ಕಾರ್ಯಾಚರಣೆ ವೇಳೆ 2 ತೋಳಗಳ ದೃಶ್ಯ ಸೆರೆಯಾಗಿತ್ತು. ಆದ್ರೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ವಿಫಲರಾದ್ರು.

    Wolves IN UP 4

    ಇಲ್ಲಿನ ತೋಳಗಳು ನರಭಕ್ಷಕಗಳಾಗಿದ್ದು ಹೇಗೆ?
    ಇಲ್ಲಿನ ಸಾಯಿ ನದಿ ತಟದ ಜಾನ್‌ ಪುರ, ಪ್ರತಾಪ್‌ಗಢ ಮತ್ತು ಸುಲ್ತಾನ್‌ ಪುರದ ಗಡಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಗಳು ಅಂದು ತೋಳಗಳ ಆವಾಸಸ್ಥಾನವಾಗಿತ್ತು. ನರಿಗಳೂ ಸಹ ಇಲ್ಲಿ ವಾಸಿಸುತ್ತಿದ್ದವು. ಸಾಮಾನ್ಯವಾಗಿ ಸುಲಭವಾಗಿ ಆಹಾರ ಹುಡುಕಾಟದಲ್ಲಿದ್ದಾಗ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಅದೇ ರೀತಿ ಇಲ್ಲಿಯೂ ಆಗಿದೆ. ಇಲ್ಲಿನ ಹೆಣ್ಣು ತೋಳವೊಂದು ಮರಿಗಳಿಗೆ ಜನ್ಮ ನೀಡಿತ್ತು. ಈ ಸಮಯದಲ್ಲಿ ಹೆಣ್ಣು ತೋಳಗಳು ಬೇಟೆಯಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಗಂಡು ತೋಳದ ಆಶ್ರಯ ಬಯಸಿತ್ತು. ಒಮ್ಮೆ ಆಹಾರ ಹುಡುಕಿಕೊಂಡು ಹೊರಟಿದ್ದ ಗಂಡು ತೋಳ ಮಗುವೊಂದನ್ನು ಬೇಟೆಯಾಡಿ, ಭಾಗಶಃ ತಾನು ತಿಂದು ಉಳಿದ ಮಾಂಸವನ್ನು ಮರಿಗಳಿಗಾಗಿ ಹೊತ್ತೊಯ್ದಿತ್ತು. ಆದ್ರೆ ಮರಿಗಳು ಮನುಷ್ಯನ ಆಹಾರ ತಿನ್ನುತ್ತಿದ್ದಂತೆ ವಾಂತಿ ಮಾಡಿಕೊಂಡಿದ್ದವು, ಕ್ರಮೇಣ ಅದೇ ಆಹಾರಕ್ಕೆ ಒಗ್ಗಿಕೊಂಡವು. ಆ ನಂತರದಲ್ಲಿ ತೋಳಗಳು ಮಕ್ಕಳನ್ನು ಬೇಟೆಯಾಟಲು ಮುಂದುವರಿಸಿದವು.

    ತೋಳಗಳು ನರಭಕ್ಷಕವೇ?
    ಭಾರತೀಯ ತೋಳಗಳು ಪ್ರಾಚೀನ ವಂಶಾವಳಿ ಹೊಂದಿವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ತೋಳಗಳಲ್ಲಿ ಬೂದು ತೋಳ ಹಾಗೂ ನಾಯಿ ತೋಳ ಎಂಬ ಸಂತತಿಗಳಿವೆ. ಅವುಗಳನ್ನು ದೇಹದ ಆಕಾರ, ಬಣ್ಣಗಳಿಂದ ಪ್ರತ್ಯೇಕಿಸಬಹುದು. ಈ ಎರಡು ಉಪಜಾತಿಗಳ ಪೈಕಿ ನಾಯಿ ತೋಳಗಳು ನರಭಕ್ಷಕ ತೋಳಗಳಾಗಿವೆ. ಇವು ಅತ್ಯಂತ ಚುರುಕು ಬುದ್ಧಿ ಹೊಂದಿರುತ್ತವೆ. ಇವುಗಳನ್ನು ಸೆರೆ ಹಿಡಿಯುವಾಗ ಮೀನಿಗೆ ಗಾಳ ಹಾಕಿದಂತೆ, ಮಾಂಸವನ್ನು ಬಳಸಿ ಎಚ್ಚರಿಕೆಯಿಂದ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

    ದಾಳಿ ಹಿಂದಿದೆ ʻಸೇಡಿನ ಕಥೆʼ:
    ಬಹ್ರೈಚ್‌ ಜಿಲ್ಲೆಯ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಜ್ಞಾನ್ ಪ್ರಕಾಶ್ ಸಿಂಗ್ ತೋಳಗಳ ದಾಳಿಯ ಬಗ್ಗೆ ರೋಚಕ ಸಂಗತಿಯೊಂದನ್ನ ಈ ಹಿಂದೆಯೇ ಬಿಚ್ಚಿಟ್ಟಿದ್ದರು. ತೋಳಗಳು ಇತರ ಕಾಡು ಪ್ರಾಣಿಗಳಿಗಿಂತ ಭಿನ್ನವಾಗಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದ್ರೆ, ತೋಳಗಳು ಸೇಡು ತೀರಿಸಿಕೊಳ್ಳುತ್ತವೆ. ಈ ಹಿಂದೆ ಮನುಷ್ಯರು ತೋಳಗಳಿಗೆ ಯಾವುದೋ ಒಂದು ರೀತಿಯಲ್ಲಿ ತೊಂದರೆ ಕೊಟ್ಟಿರುವುದರಿಂದ ಈ ದಾಳಿಗಳು ನಡೆಯುತ್ತಿವೆ ಎಂದಿದ್ದಾರೆ.

    wolf

    ಸುಮಾರು 25 ವರ್ಷಗಳ ಹಿಂದೆ ಉತ್ತರ ಪ್ರದೇಶದ ಚೌನ್‌ಪುರ ಮತ್ತು ಪ್ರತಾಪ್‌ ಗಢ ಜಿಲ್ಲೆಗಳ ಸಾಯಿ ನದಿಯ ಜಲಾನಯನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ತೋಳಗಳು ಕೊಂದಿದ್ದವು. ಈ ಬಗ್ಗೆ ತನಿಖೆ ಮಾಡಿದ ನಂತರ ಕೆಲವು ಮಕ್ಕಳು ಎರಡು ತೋಳದ ಮರಿಗಳನ್ನು ಗುಹೆಯಲ್ಲಿ ಕೊಂದಿರುವುದು ಕಂಡುಬಂದಿತು. ಬಳಿಕ ತೋಳದ ಮರಿಗಳ ಪೋಷಕರು ತುಂಬಾ ಆಕ್ರಮಣಕಾರಿಯಾದವು ಮತ್ತು ಆ ಪ್ರದೇಶದಲ್ಲಿ ವಾಸಿಸುವ ಮನುಷ್ಯರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಕೆಲವು ತೋಳಗಳನ್ನು ಹಿಡಿಯಲಾಯಿತು ಆದರೆ, ಎರಡು ನರಭಕ್ಷಕ ತೋಳಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಅಂತಿಮವಾಗಿ ಆ ತೋಳಗಳನ್ನು ಗುರುತಿಸಿ, ಗುಂಡಿಕ್ಕಿ ಕೊಲ್ಲಲಾಯಿತು ಎಂದು ಜ್ಞಾನ್ ಪ್ರಕಾಶ್ ಸಿಂಗ್ ಹೇಳಿದ್ದರು.

  • ಯುಪಿಯಲ್ಲಿ 7 ಮಕ್ಕಳನ್ನು ಕೊಂದ ತೋಳ – ಆಪರೇಷನ್ ಭೇಡಿಯಾ ನಡೆಸಿ ಸೆರೆ

    ಯುಪಿಯಲ್ಲಿ 7 ಮಕ್ಕಳನ್ನು ಕೊಂದ ತೋಳ – ಆಪರೇಷನ್ ಭೇಡಿಯಾ ನಡೆಸಿ ಸೆರೆ

    ಲಕ್ನೋ: ಕಾಡಿನಿಂದ ಬಂದ ತೋಳಗಳು 7 ಮಕ್ಕಳನ್ನು ಕೊಂದು ಮಹಿಳೆಯೊಬ್ಬಳನ್ನು ಗಾಯಗೊಳಿಸಿದ್ದ ಘಟನೆ ಬಹ್ರೈಚ್‌ (Bahraich) ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳನ್ನು ಕೊಂದ ತೋಳಗಳಿಗೆ ಆಪರೇಷನ್ ಭೇಡಿಯಾ ನಡೆಸಿ ಸೆರೆ ಹಿಡಿಯಲಾಗಿದೆ.

    ಕಳೆದ ಎರಡು ತಿಂಗಳಲ್ಲಿ ಬಹ್ರೈಚ್‌ ಜಿಲ್ಲೆಯ 7 ಮಕ್ಕಳನ್ನು ಕೊಂದು ಮಹಿಳೆಯೊಬ್ಬರನ್ನು ತೋಳಗಳು ಗಾಯಗೊಳಿಸಿದ್ದವು. ಮಂಗಳವಾರ ರಾತ್ರಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಪಟಾಕಿ ಸಿಡಿಸುವ ಮೂಲಕ ತೋಳಗಳನ್ನು ಸೆರೆಹಿಡಿಯಲಾಗಿದ್ದು, ಅವುಗಳಿಗೆ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮುಡಾ ಹಗರಣ ಮುಚ್ಚಾಕಲು ಕಾಂಗ್ರೆಸ್ ಷಡ್ಯಂತ್ರ: ನಿಖಿಲ್

    ತೋಳಗಳನ್ನು ಹಿಡಿಯಲು ಸುಮಾರು 16 ತಂಡಗಳನ್ನು ರಚಿಸಲಾಗಿತ್ತು. ಆಪರೇಷನ್‌ಲ್ಲಿ ಡ್ರೋನ್ ಕ್ಯಾಮೆರಾ ಮತ್ತು ನಕ್ಷೆಗಳ ಉಪಯೋಗ ಮಾಡಿಕೊಳ್ಳಲಾಗಿತ್ತು. ಅರಣ್ಯ ಇಲಾಖೆಯ ಡಂಗ್ ಮತ್ತು ಉರಿನೆ ಹೆಸರಿನ ಆನೆಗಳನ್ನು ಬಳಸಿಕೊಂಡು ಅಧಿಕಾರಿಗಳು ತೋಳಗಳನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಆಪರೇಷನ್ ಮೇಲೆ ನಿಗಾ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

    ಹಳ್ಳಿಗಳಲ್ಲಿ ರಾತ್ರಿ ಗಸ್ತು ತಿರುಗುತ್ತಾ, ಜನರಲ್ಲಿ ಎಚ್ಚರಿಕೆ ಮೂಡಿಸಲು ಆಶಾ ಕಾರ್ಯಕರ್ತರನ್ನು ಈ ತೋಳ ಹಿಡಿಯುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿ ಮೋನಿಕಾ ರಾಣಿ ಹೇಳಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಕ್ಕ – ಅವರ ಪಾಪ ಅವರನ್ನು ಸುಮ್ಮನೆ ಬಿಡಲ್ಲ: ವಿಜಯೇಂದ್ರ

  • ಮದುವೆಯಾಗಿ ಕೊಠಡಿ ಸೇರಿದ ನವದಂಪತಿ ಶವವಾಗಿ ಪತ್ತೆ – ಇಬ್ಬರಿಗೂ ಹೃದಯಾಘಾತ!

    ಮದುವೆಯಾಗಿ ಕೊಠಡಿ ಸೇರಿದ ನವದಂಪತಿ ಶವವಾಗಿ ಪತ್ತೆ – ಇಬ್ಬರಿಗೂ ಹೃದಯಾಘಾತ!

    ಲಕ್ನೋ: ಮದುವೆಯಾಗಿ ಮೊದಲ ರಾತ್ರಿ ತಮ್ಮ ಕೊಠಡಿ ಸೇರಿದ್ದ ದಂಪತಿಯಿಬ್ಬರಿಗೂ (Newly married couple) ಹೃದಯಾಘಾತವಾಗಿ (Heart Attack) ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್ (Bharaich) ಜಿಲ್ಲೆಯಲ್ಲಿ ನಡೆದಿದೆ.

    ಪ್ರತಾಪ್ ಯಾದವ್ (22) ಹಾಗೂ ಪುಷ್ಪಾ (20) ಸಾವನ್ನಪ್ಪಿರುವ ದಂಪತಿ. ಮದುವೆಯಾದ ಮೊದಲನೇ ರಾತ್ರಿ ತಮ್ಮ ಕೊಠಡಿ ಸೇರಿದ ಬಳಿಕ ಮರುದಿನ ಇಬ್ಬರೂ ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

    ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯಲ್ಲಿ ಪತಿ-ಪತ್ನಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಹುಟ್ಟು ಹಬ್ಬದ ದಿನವೇ ಕಾಂಪೌಂಡ್ ಕುಸಿದುಬಿದ್ದು ಬಾಲಕ ಸಾವು

    ಪ್ರತಾಪ್ ಹಾಗೂ ಪುಷ್ಪಾ ಅಂತ್ಯಕ್ರಿಯೆಯನ್ನು ಬಳಿಕ ಪ್ರತಾಪ್ ಅವರ ಗ್ರಾಮದಲ್ಲಿ ಒಟ್ಟಿಗೆ ನೆರವೇರಿಸಲಾಗಿದೆ. ನವದಂಪತಿಯ ಸಾವಿನ ಸುದ್ದಿ ಕೇಳಿ ಸ್ಥಳಕ್ಕೆ ಅಪಾರ ಜನರು ಸೇರಿದ್ದರು. ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಶಹಾಪುರದಲ್ಲಿ 20 ಟನ್ ಪಡಿತರ ಅಕ್ಕಿ ಕಳ್ಳತನ ಪ್ರಕರಣ – ಖಾಲಿ ಲಾರಿ ಬಿಟ್ಟು ಖದೀಮರು ಪರಾರಿ

  • ಧಾರ್ಮಿಕ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ – 5 ಸಾವು

    ಧಾರ್ಮಿಕ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ – 5 ಸಾವು

    ಲಕ್ನೋ: ಧಾರ್ಮಿಕ ಮೆರವಣಿಗೆ (Procession) ವೇಳೆ ವಿದ್ಯುತ್ ಸ್ಪರ್ಶಿಸಿ (Electrocution) ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್ (Bahraich) ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

    ವರದಿಗಳ ಪ್ರಕಾರ ಮೆರವಣಿಗೆ ಸಾಗುತ್ತಿದ್ದ ವೇಳೆ ಮೆರವಣಿಗೆಯ ಗಾಡಿಗೆ ಅಳವಡಿಸಲಾಗಿದ್ದ ಹೈಟೆನ್ಷನ್ ತಂತಿಯ ಕಬ್ಬಿಣದ ರಾಡ್ ಅನ್ನು ವ್ಯಕ್ತಿಯೊಬ್ಬರು ಸ್ಪರ್ಶಿಸಿದ್ದಾರೆ. ಬಳಿಕ ಇನ್ನೂ ನಾಲ್ವರಿಗೆ ವಿದ್ಯುತ್ ಸ್ಪರ್ಶವಾಗಿದೆ. ಇದನ್ನೂ ಓದಿ: ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ವಿದ್ಯುತ್ ಸ್ಪರ್ಶವಾದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕೊನೆಯ ವ್ಯಕ್ತಿಯನ್ನು ಚಿಕಿತ್ಸೆಗೆಂದು ಲಕ್ನೋಗೆ ಸಾಗಿಸುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 2024ರೊಳಗೆ UPಯ ರಸ್ತೆಗಳನ್ನು ಅಮೆರಿಕಗಿಂತಲೂ ಉತ್ತಮಗೊಳಿಸುತ್ತೇವೆ: ಗಡ್ಕರಿ

    ಬಹ್ರೈಚ್‌ನಲ್ಲಿ ನಡೆದ ದುರ್ಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಸೂಚನೆಯನ್ನೂ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]