Tag: ಬಸ್

  • ಮದ್ವೆಗೆ ಟಿವಿಎಸ್‍ನಲ್ಲಿ ಹೋಗ್ತಿದ್ದಾಗ ಖಾಸಗಿ ಬಸ್ ಡಿಕ್ಕಿ – ಓರ್ವ ದುರ್ಮರಣ

    ಮದ್ವೆಗೆ ಟಿವಿಎಸ್‍ನಲ್ಲಿ ಹೋಗ್ತಿದ್ದಾಗ ಖಾಸಗಿ ಬಸ್ ಡಿಕ್ಕಿ – ಓರ್ವ ದುರ್ಮರಣ

    ಮಂಡ್ಯ: ಮದುವೆಗೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ಟಿವಿಎಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಸ್ಕೂಟರ್ ಸವಾರನನ್ನು ಹೆಬ್ಬಣಿ ಗ್ರಾಮದ ಮಹದೇವಪ್ಪ(55) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತರ ತಮ್ಮನ ಮಗಳು ಸಿಂಚನಾ(11) ಮತ್ತು ಮೊಮ್ಮಗಳು ಮೌಲ್ಯ(13) ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

    ಮದುವೆ ಸಮಾರಂಭಕ್ಕೆಂದು ಮಳವಳ್ಳಿಗೆ ಬರುತ್ತಿದ್ದ ವೇಳೆ ಪಂಡಿತಹಳ್ಳಿಯ ಶಿಂಷಾ ತಿರುವಿನಲ್ಲಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಇನ್ನು ಘಟನೆಯಲ್ಲಿ ಮೃತಪಟ್ಟ ಮಹದೇವಪ್ಪ ಅವ್ರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ್ಬೇಕು. ಜೊತೆಗೆ ನಿಯಮ ಮೀರಿ ವೇಗವಾಗಿ ಚಲಿಸುವ ಖಾಸಗಿ ಬಸ್ ಗಳ ಚಾಲಕರ ವಿರುದ್ಧ ಕ್ರಮ ವಹಿಸ್ಬೇಕು ಅಂತಾ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    ಸ್ಥಳಕ್ಕೆ ಶಾಸಕ ನರೇಂದ್ರ ಸ್ವಾಮಿ ಭೇಟಿ ನೀಡಿದ್ರು. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಂಗಳೂರು-ಮೈಸೂರು ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಬಳಿ ನಿನ್ನೆ ತಡರಾತ್ರಿಯಷ್ಟೇ ಸಿನಿಮೀಯ ರೀತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ನಾಲ್ಕು ಪಲ್ಟಿ ಹೊಡೆದು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಮೂವರು ಅಪಘಾತಕ್ಕೆ ಬಲಿಯಾಗಿದ್ದಾರೆ.

  • ಖಾಸಗಿ ಬಸ್ ಪಲ್ಟಿ: ಓರ್ವನ ದುರ್ಮರಣ

    ಖಾಸಗಿ ಬಸ್ ಪಲ್ಟಿ: ಓರ್ವನ ದುರ್ಮರಣ

    ಕಾರವಾರ: ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 35 ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಇಳಸೂರಿನಲ್ಲಿ ನೆಡೆದಿದೆ.

    ಮೃತರನ್ನು 35 ವರ್ಷದ ದಿನೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಸ್ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ 35 ಜನ ಪ್ರಯಾಣಿಕರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಬಸ್ ಡ್ರೈವರ್ ಆದ ಸಚಿವ ವಿನಯ ಕುಲಕರ್ಣಿ

    ಬಸ್ ಡ್ರೈವರ್ ಆದ ಸಚಿವ ವಿನಯ ಕುಲಕರ್ಣಿ

    ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಡ್ರೈವರ್ ಆಗಿ ಬಸ್ ಚಾಲನೆ ಮಾಡಿದ್ದಾರೆ.

    ಹೌದು, ಇಂದು ಧಾರವಾಡ ನಗರ ಸಾರಿಗೆಗೆ ಹೊಸ 50 ಮಿನಿ ಬಸ್ ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಬಸ್ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ನಂತರ ತಾವೇ ಬಸ್ ಚಲಾಯಿಸಿದರು.

    ಇಂದು ಧಾರವಾಡ ನಗರ ಸಾರಿಗೆಗೆ ಹೊಸ 50 ಮಿನಿ ಬಸ್‍ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ನಗರದಲ್ಲಿ ಕೆಲವು ಕಡೆ ಚಿಕ್ಕ ರಸ್ತೆಗಳಿರುವುದರಿಂದ ಇವುಗಳು ಸಂಚಾರಕ್ಕೆ ಸೂಕ್ತವಾಗಿವೆ. ನಗರದಲ್ಲಿ ಮಿನಿಬಸ್‍ಗಳ ಚಾಲನೆಯಿಂದ ಕೆಎಸ್‍ಆರ್‍ಟಿಸಿಗೆ ಒಳ್ಳೆಯ ಆದಾಯ ಬರಲಿದೆ ಎಂದು ಸಚಿವ ವಿನಯ ಕುಲಕರ್ಣಿ ತಿಳಿಸಿದರು.

     

  • ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಬಿಎಂಟಿಸಿ ಬಸ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

    ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಬಿಎಂಟಿಸಿ ಬಸ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

    ಬೆಂಗಳೂರು: ಅತಿವೇಗದಿಂದ ಬಂದ ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

    ಬನ್ನೇರುಘಟ್ಟದಿಂದ ಮೆಜೆಸ್ಟಿಕ್ ಕಡೆಗೆ ಹೊರಟಿದ್ದ ಬಸ್ ಬೆಂಗಳೂರಿನ ರಿಚ್‍ಮಂಡ್ ಸರ್ಕಲ್ ಫ್ಲೈಓವರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಪ್ರಯಾಣಿಕರಿಗೆ ಗಂಭೀರ ಸ್ಪರೂಪದ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಾಲಕನ ಅಜಾಗರೂಕತೆಯಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಮಳೆ ಬಂದಿರುವುದರಿಂದ ಡಿವೈಡರ್ ಕಾಣದೆ ಈ ಅಪಘಾತವಾಗಿದೆ. ಡಿವೈಡರ್ ಗಳು ಕಾಣುವಂತೆ ಪೈಂಟ್ ಮಾಡಬೇಕು ಆಗ ಇಂತಹ ಅನಾಹುತಗಳು ತಪ್ಪುತ್ತದೆ ಅಂತಾ ಪ್ರತಕ್ಷ್ಯದರ್ಶಿಯೊಬ್ಬರು ಹೇಳಿದ್ದಾರೆ.

    ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕರ್ತವ್ಯ ನಿರತ ಸರ್ಕಾರಿ ಬಸ್ ಚಾಲಕನಿಗೆ ಹೃದಯಘಾತವಾಗಿ ಸಾವು!

    ಕರ್ತವ್ಯ ನಿರತ ಸರ್ಕಾರಿ ಬಸ್ ಚಾಲಕನಿಗೆ ಹೃದಯಘಾತವಾಗಿ ಸಾವು!

    ಕೊಪ್ಪಳ: ಕರ್ತವ್ಯ ನಿರತ ಸರ್ಕಾರಿ ಬಸ್ ಚಾಲಕರೊಬ್ಬರು ಹೃದಯಘಾತದಿಂದ ಸಾವಿಗೀಡಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕುಷ್ಟಗಿ ಬಸ್ ಡಿಪೋದಲ್ಲಿ ಈ ಘಟನೆ ನಡೆದಿದೆ. 45 ವರ್ಷದ ಕಿರಣ್ ಕುಮಾರ ಯಾದಗಿರಿ ಮೃತ ಚಾಲಕ. ಇವರು ಬಾಗಲಕೋಟೆ ಮೂಲದವರು ಅಂತ ತಿಳಿದುಬಂದಿದೆ.

    ಕುಷ್ಟಗಿ ಡಿಪೋದಲ್ಲಿ ಬಸ್ ನಿಲ್ಲಿಸಿ ವಿಶ್ರಾಂತಿಗೆ ತೆರಳುವಾಗ ಕಿರಣ್ ಅವರಿಗೆ ಹೃದಯಾಘಾತವಾಗಿದೆ. ಕುಷ್ಟಗಿ- ಬೆಂಗಳೂರು ಬಸ್ ಚಾಲಕರಾಗಿರೋ ಇವರು ಬೆಂಗಳೂರಿನಿಂದ ಕುಷ್ಟಗಿ ಡ್ಯೂಟಿ ಮುಗಿಸಿದ ಬಳಿಕ ಹೃದಯಾಘಾತವಾಗಿದೆ. ಕಿರಣ್ ಅವರ ಸಾವಿನ ಸುದ್ದಿ ತಿಳಿದ ಚಾಲಕರು ಹಾಗೂ ನಿರ್ವಾಹಕರು ಮಮ್ಮಲ ಮರುಗಿದ್ದಾರೆ.

  • ಲಾರಿ-ಬಸ್ ಮುಖಾಮುಖಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು

    ಲಾರಿ-ಬಸ್ ಮುಖಾಮುಖಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು

    ಮಡಿಕೇರಿ: ಲಾರಿ ಹಾಗು ಬಸ್ ಮುಖಾಮುಖಿಯಾದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಬಳಿ ನಡೆದಿದೆ.

    ಲಾರಿ ಮತ್ತು ಖಾಸಗಿ ಮಿನಿ ಬಸ್ ನಡುವೆ ಈ ಅಪಘಾತ ಸಂಭವಿಸಿದ್ದು, ಬಸ್‍ನಲ್ಲಿದ್ದ ಮೋಹನಾ(65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಮೂಲತಃ ತಮಿಳುನಾಡಿನ ತಿರುಪೂರ್ ಜಿಲ್ಲೆಯವರು ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ 15 ಜನ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದರು ಎಂದು ಹೇಳಲಾಗಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ.

    ಘಟನೆಯಿಂದ ಬಸ್ಸಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಾಳಗಿವೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಚೆನ್ನೈ: ರೇಸ್ ಟ್ರ್ಯಾಕ್ ನಲ್ಲಿ ಬಸ್ ಗಳು ಸ್ಪರ್ಧೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಈ ರೇಸ್ ಸ್ಪರ್ಧೆ ರಸ್ತೆಯಲ್ಲಿ ನಡೆದರೆ ಹೇಗಿರುತ್ತದೆ ಎನ್ನುವುದಕ್ಕೆ ತಮಿಳುನಾಡಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಯಂಬತ್ತೂರು – ಪುಲೈಚ್ಚಿ ಹೈವೇಯಲ್ಲಿ ಎರಡು ಖಾಸಗಿ ಬಸ್‍ಗಳು ಸ್ಪರ್ಧೆಗೆ ಬಿದ್ದಂತೆ ಸಂಚರಿಸಿದೆ. ಇಬ್ಬರು ಡ್ರೈವರ್ ಗಳು ಓವರ್ ಟೇಕ್ ಮಾಡಲು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಮೇಲೆ ಬಸ್ ಹತ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ಬಸ್‍ಗಳ ಸ್ಪರ್ಧೆಯನ್ನು ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಿದ ಬಳಿಕ ಪುಲ್ಲೈಚ್ಚಿ ಜಿಲ್ಲಾಧಿಕಾರಿ ಗಾಯತ್ರಿ ಕೃಷ್ಣನ್ ಬಸ್ ಮಾಲೀಕರ ಸಭೆಯನ್ನು ಕರೆದಿದ್ದಾರೆ.

    ಮುಂದುಗಡೆ ವಾಹನಗಳು ಬರುತ್ತಿದ್ದರೂ ಜಿದ್ದಿಗೆ ಬಿದ್ದ ಡ್ರೈವರ್‍ಗಳು ಬಸ್ಸನ್ನು ಓಡಿಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    https://www.youtube.com/watch?v=3Qj39Ot1RGs

  • ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಖಾಸಗಿ ಬಸ್- ಪ್ರಯಾಣಿಕರು ಪಾರು

    ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಖಾಸಗಿ ಬಸ್- ಪ್ರಯಾಣಿಕರು ಪಾರು

    ಕೊಪ್ಪಳ: ಇಲ್ಲಿನ ಖಾಸಗಿ ಬಸ್ಸೊಂದರಲ್ಲಿ ಬೆಳ್ಳಂಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ.

    ಕೊಪ್ಪಳ ತಾಲೂಕಿನ ವದಗನಾಳ ಬಳಿ ಘಟನೆ ನಡೆದಿದ್ದು. ಗ್ರೀನ್ ಲೈನ್ ಎಂಬ ಖಾಸಗಿ ಬಸ್ ಬೆಂಗಳೂರಿನಿಂದ ಮುಂಡರಗಿಗೆ ಹೊರಟಿತ್ತು. ಅಂತೆಯೇ ಕೊಪ್ಪಳದ ವದಗನಾಳ ಗ್ರಾಮದ ಬಳಿ ಬಸ್ ಹಿಂದೆ ಬೆಂಕಿ ಕಾಣಿಸಿಕೊಂಡಿದೆ. ಇದು ವಾಯುವಿಹಾರಕ್ಕೆ ಬಂದಿದ್ದ ಕೆಲಜನರ ಕಣ್ಣಿಗೆ ಬಿದ್ದಿದ್ದು, ಕೂಡಲೇ ಅವರು ಬಸ್ ಗೆ ಬೆಂಕಿ ಹೊತ್ತಿದೆ ಅಂತ ಕೂಗಿದ್ದಾರೆ. ತಕ್ಷಣವೇ ಬಸ್ ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.

    ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ರು. ಈ ಬಸ್ ನಲ್ಲಿ ಹತ್ತು ಜನ ಪ್ರಯಾಣಿಕರಿದ್ದು, ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಪ್ರಯಾಣಿಕರ ಲಗೇಜ್ ಮಾತ್ರ ಸುಟ್ಟು ಕರಕಲಾಗಿವೆ.

    https://www.youtube.com/watch?v=H4A22qYs0wA&feature=youtu.be

  • ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ – ವ್ಯಕ್ತಿ ಸಾವು

    ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ – ವ್ಯಕ್ತಿ ಸಾವು

    ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 4ರ 8ನೇ ಮೈಲಿಯ ನವಯುಗ ಟೋಲ್ ಬಳಿ ಈ ಘಟನೆ ನಡೆದಿದೆ. ಹಾಸನದ ಸಕಲೇಶಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಡಕ್ಕಿ ಹೊಡೆದಿದ್ದು, 33 ವರ್ಷದ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಸದ್ಯಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಎಂಟಿಸಿ ದರ ಇಳಿಕೆ: ಒಬ್ಬರಿಗೆ ಬೆಣ್ಣೆ, ಮತ್ತೊಬ್ಬರಿಗೆ ಸುಣ್ಣ..!

    ಬಿಎಂಟಿಸಿ ದರ ಇಳಿಕೆ: ಒಬ್ಬರಿಗೆ ಬೆಣ್ಣೆ, ಮತ್ತೊಬ್ಬರಿಗೆ ಸುಣ್ಣ..!

    ಬೆಂಗಳೂರು: ಬಿಎಂಟಿಸಿ ಬಸ್ ದರ ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ದರ ಇಳಿಕೆ ಮಾಡಿದ್ದೀವಿ ಅಂತಿರೋ ಬಿಎಂಟಿಸಿ, ದರ ಏರಿಕೆಯನ್ನೂ ಸಹ ಮಾಡಿದೆ.

    ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕೋ ನಿಟ್ಟಿನಲ್ಲಿ, ಬಿಎಂಟಿಸಿ ಸಾಮಾನ್ಯ ಬಸ್‍ಗಳಲ್ಲಿ ಎರಡನೇ ಹಂತದ ಪ್ರಯಾಣಿಕರಿಗೆ 12 ರೂಪಾಯಿ ಇದ್ದ ದರವನ್ನು 10 ರೂಪಾಯಿಗೆ ಇಳಿಕೆ ಮಾಡಿದೆ. ಚಿಲ್ಲರೆ ಸಮಸ್ಯೆ ಸರಿದೂಗಿಸೋ ನಿಟ್ಟಿನಲ್ಲಿ ಎರಡು ರೂಪಾಯಿ ಕಡಿಮೆ ಮಾಡಿದ್ರೆ, ಮೂರು ಹಾಗೂ ಆರನೇ ಹಂತದಲ್ಲಿ ಇದೇ ಚಿಲ್ಲರೆ ನೆಪದಲ್ಲಿ ಮೂರು ಹಂತಗಳಲ್ಲಿ 1 ರೂಪಾಯಿ ದರ ಹೆಚ್ಚಿಸಲಾಗಿದೆ.

    ಒಂದಷ್ಟು ಪ್ರಯಾಣಿಕರಿಗೆ ಪರಿಷ್ಕೃತ ದರ ವರವಾದ್ರೆ ಮತ್ತೊಂದಷ್ಟು ಪ್ರಯಾಣಿಕರಿಗೆ ಏರಿಕೆಯ ಬಿಸಿ ತಟ್ಟಿದೆ. ಬಿಎಂಟಿಸಿ ಪರಿಷ್ಕೃತ ದರ ಹೀಗಿದೆ.

    ಬಿಎಂಟಿಸಿ ದರ ಇಳಿಕೆ-ಏರಿಕೆ
    # ಸಾಮಾನ್ಯ ಬಸ್: 12 ರೂ. ಟಿಕೆಟ್ ದರ 10 ರೂಪಾಯಿಗೆ ಇಳಿಕೆ
    # ಸಾಮಾನ್ಯ ಬಸ್: 3,6,9 ಸ್ಟೇಜ್‍ಗಳಲ್ಲಿ ಒಂದು ರೂಪಾಯಿ ಹೆಚ್ಚಳ
    # 3ನೇ ಹಂತ ದರ 14 ರೂ.ನಿಂದ 15 ರೂಪಾಯಿಗೆ ಏರಿಕೆ
    # 6ನೇ ಹಂತ ದರ 19 ರೂ.ನಿಂದ 20 ರೂಪಾಯಿಗೆ ಏರಿಕೆ
    # 9ನೇ ಹಂತ ದರ 21 ರೂ. ನಿಂದ 22 ರೂಪಾಯಿಗೆ ಏರಿಕೆ
    # ಎಲ್ಲ ಹವಾನಿಯಂತ್ರಿತ ಬಸ್: ವೋಲ್ವೋ ಬಸ್‍ಗಳಲ್ಲಿ ಎಲ್ಲಾ ಹಂತದಲ್ಲೂ 5 ರೂಪಾಯಿ ದರ ಇಳಿಕೆ

    ಸಾಮಾನ್ಯ ಬಸ್‍ಗಳಲ್ಲಿ ದರ ಇಳಿಕೆ ಮಾಡಿರೋದಾಗಿ ಹೇಳ್ತಿರೋ ಬಿಎಂಟಿಸಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಂಡು ಕಾಣದ ಹಾಗೆ ದರ ಏರಿಕೆ ಬರೆ ಹಾಕಿದೆ. ಪರಿಷ್ಕೃತ ದರ ಏಪ್ರಿಲ್ 14ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ,

    ಇದನ್ನೂ ಓದಿ: ಮೇ 1 ರಿಂದ ಈ 5 ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಆಗುತ್ತೆ