Tag: ಬಸ್

  • ಮಂಡ್ಯದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕಾಸರಗೋಡಿನಲ್ಲಿ ಕಲ್ಲೆಸೆತ

    ಮಂಡ್ಯದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕಾಸರಗೋಡಿನಲ್ಲಿ ಕಲ್ಲೆಸೆತ

    ಮಂಗಳೂರು: ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇರಳದ ಕಾಸರಗೋಡಿನಲ್ಲಿ ಕರಾಳ ದಿನ ಆಚರಣೆ ಮಾಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ, ಕರ್ನಾಟಕದಿಂದ ಕೇರಳ ಹಾಗೂ ಕೇರಳದಿಂದ ಕರ್ನಾಟಕದತ್ತ ಬರುತ್ತಿದ್ದ ಬಸ್‍ಗಳ ಮೇಲೆ ಬೈಕ್‍ನಲ್ಲಿ ಬಂದವರು ಕಲ್ಲು ತೂರಾಟ ಮಾಡಿ ಬಂದಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಮಂಗಳೂರು, ಮಡಿಕೇರಿಗೆ ತೆರಳುತ್ತಿದ್ದ ಬಸ್ ಹಾಗೂ ಮಂಡ್ಯದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕೂಡ ಕಲ್ಲು ತೂರಾಟ ನಡೆದಿದ್ದು, ಬಸ್‍ಗಳ ಗಾಜು ಜಖಂಗೊಂಡಿವೆ.

    ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೂ ಕಲ್ಲು ತೂರಾಟ ನಡೆಸಿದ್ದಾರೆ. ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಮುಸ್ಲಿಮ್ ಸಂಘಟನೆಯೊಂದರ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

    ಕುಂಬಳೆ, ಮೊಗ್ರಾಲ್ ಪುತ್ತೂರು, ಮಂಜೇಶ್ವರದಲ್ಲಿ ಘಟನೆ ನಡೆದಿದ್ದು, ಹೆದ್ದಾರಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಸದ್ಯ ಮಂಡ್ಯದ ಅಯ್ಯಪ್ಪ ಭಕ್ತರಿಗೆ ಕಾಸರಗೋಡಿನ ಅಯ್ಯಪ್ಪ ಸೇವಾ ಸಂಘದಲ್ಲಿ ಆಶ್ರಯ ನೀಡಲಾಗಿದೆ.

  • ನೋಡನೋಡ್ತಿದ್ದಂತೆ ಚಲಿಸುತ್ತಿದ್ದ ಬಸ್ ಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ನೋಡನೋಡ್ತಿದ್ದಂತೆ ಚಲಿಸುತ್ತಿದ್ದ ಬಸ್ ಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಹಾಸನ: ಅಪರಿಚಿತ ವ್ಯಕ್ತಿಯೊಬ್ಬರು ಬಸ್‍ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದ್ದು ಘಟನೆ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಸೋಮವಾರ ಬೆಳಗ್ಗೆ ಸುಮಾರು 6.30ರ ವೇಳೆಗೆ ಹಾಸನ ನಗರದ ನೂತನ ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಸ್ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕೆಎಸ್ ಆರ್ ಟಿಸಿ ಬಸ್ ಮಂತ್ರಾಲಯದಿಂದ ಹಾಸನಕ್ಕೆ ಬಂದು ಶಿವಮೊಗ್ಗ ಕಡೆ ಹೋಗಲು ಬಸ್ ನಿಲ್ದಾಣದಿಂದ ಹೊರಟು ಸಮೀಪದ ರೈಲ್ವೆ ಗೇಟ್ ದಾಟಿತ್ತು. ಇದೇ ವೇಳೆ ಸುಮಾರು 40-45ರ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆ ಬದಿ ನಿಂತಿದ್ದರು. ತನ್ನ ಮುಂದೆಯೇ ಬಸ್ ಸಾಗಿದ್ದು, ನೋಡನೋಡ್ತಿದ್ದಂತೆ ಹಿಂಭಾಗದ ಚಕ್ರಕ್ಕೆ ತಲೆ ಕೊಟ್ಟಿದ್ದಾರೆ.

    ತಲೆಯ ಮೇಲೆಯೇ ಬಸ್ ಚಕ್ರ ಹರಿದಿರುವುದರಿಂದ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಯಾರು ಎಂಬುದು ಪತ್ತೆಯಾಗಿಲ್ಲ. ಹಾಗೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ. ಸದ್ಯ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಮತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೈಕ್‍ಗೆ ಬಸ್ ಡಿಕ್ಕಿಯಾಗಿ ಸವಾರರಿಬ್ಬರು ಸಾವು – ಗದ್ದೆಗೆ ಉರುಳಿತು 40 ಪ್ರಯಾಣಿಕರಿದ್ದ ಬಸ್

    ಬೈಕ್‍ಗೆ ಬಸ್ ಡಿಕ್ಕಿಯಾಗಿ ಸವಾರರಿಬ್ಬರು ಸಾವು – ಗದ್ದೆಗೆ ಉರುಳಿತು 40 ಪ್ರಯಾಣಿಕರಿದ್ದ ಬಸ್

    ರಾಯಚೂರು: ನಗರದಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, 40 ಜನರಿಗೆ ಅದರಲ್ಲೂ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಂಧನೂರಿನ ಮಲ್ಲಯ್ಯ ಕ್ಯಾಂಪ್ ಮತ್ತು ವಿರುಪಾಪುರ ಬಳಿ ನಡೆದಿದೆ.

    ಬೈಕ್‍ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಅಪಘಾತ ಜಿಲ್ಲೆಯ ಸಿಂಧನೂರಿನ ಮಲ್ಲಯ್ಯ ಕ್ಯಾಂಪ್ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಮೂಲತಃ ಬಿಹಾರದ ನಿವಾಸಿಗಳಾಗಿದ್ದು, ಅಸ್ಫಾಕ್ (35) ಹಾಗೂ (24) ಮಂಜುನಾಥ ಎಂದು ಗುರುತಿಸಲಾಗಿದೆ.

    ಅಸ್ಫಾಕ್ ಮತ್ತು ಮಂಜುನಾಥ ಇಬ್ಬರು ಒಂದೇ ಬೈಕ್‍ನಲ್ಲಿ ಮಸ್ಕಿಯಿಂದ ಸಿಂಧನೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲಯ್ಯ ಕ್ಯಾಂಪ್ ಬಳಿ ಬರುತ್ತಿದ್ದಂತೆ ವೇಗವಾಗಿ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

    ಇನ್ನೂ ರಾಯಚೂರಿನ ಸಿಂಧನೂರಿನ ವಿರುಪಾಪುರ ಬಳಿ 40 ಪ್ರಯಾಣಿಕರಿದ್ದ ಸಾರಿಗೆ ಬಸ್ ಗದ್ದೆಗೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿ ಅಧಿಕ ಮಂದಿ ವಿದ್ಯಾರ್ಥಿಗಳಿದ್ದು, ಅವರಿಗೆ ಗಂಭೀರವಾಗಿ ಗಾಯಗಳಾಗಿವೆ. ಇನ್ನುಳಿದ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಸಿಂಧನೂರಿಗೆ ಬರುತ್ತಿದ್ದ ಸಾರಿಗೆ ಬಸ್ ನಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರೆ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಬಸ್ ವಿರುಪಾಪುರದ ಬಳಿ ಗದ್ದೆಗೆ ಉರುಳಿದೆ. ತಕ್ಷಣ ಗಾಯಾಳುಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಆರಿಫಾ, ಹುಚ್ಚಪ್ಪ ಎಂಬ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

    ಈ ಎರಡು ಘಟನೆ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದು ಅಡಿ ಮುಂದೆ ಹೋಗಿದ್ರೂ KSRTC ಬಸ್ 20 ಅಡಿ ಆಳದ ಗುಂಡಿಗೆ!

    ಒಂದು ಅಡಿ ಮುಂದೆ ಹೋಗಿದ್ರೂ KSRTC ಬಸ್ 20 ಅಡಿ ಆಳದ ಗುಂಡಿಗೆ!

    ಬೆಂಗಳೂರು: ಕೆಎಸ್‍ಆರ್‍ ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆನೇಕಲ್ ನ ಗುಡ್ನಹಳ್ಳಿ ಕೆರೆ ಏರಿ ಮೇಲೆ ಈ ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಬಸ್ ಹಾಗೂ ಲಾರಿ ಚಾಲಕರಿಗೆ ಗಂಭೀರ ಗಾಯಗಳಾಗಿದೆ. ಸದ್ಯಕ್ಕೆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಆನೇಕಲ್ ಡಿಪೋಗೆ ಸೇರಿದ್ದ ಈ ಬಸ್, ಆನೇಕಲ್‍ನಿಂದ ಹೊಸೂರಿನ ಕಡೆ ತೆರಳುತ್ತಿತ್ತು, ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಎಸ್‍ಆರ್‍ಟಿಸಿ ಬಸ್ ಒಂದು ಅಡಿಯಷ್ಟು ಮುಂದೆ ಹೋಗಿದ್ದರೆ 20 ಅಡಿ ಆಳದ ಗುಂಡಿಗೆ ಬಿದ್ದು ಅಪಾಯ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಬಸ್ ಚಕ್ರ ಕೆಸರಿನಲ್ಲಿ ಹೂತುಕೊಂಡಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

    ಅಪಘಾತ ನಡೆದ ಸ್ಥಳಕ್ಕೆ ಆನೇಕಲ್ ಪೊಲೀಸರು ಬಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • KSRTC ಅಲ್ಲ, ಇದು ಕನ್ನಡ ರಥ- ಬಸ್‍ನಲ್ಲೇ ಸಂಚಾರಿ ಗ್ರಂಥಾಲಯ ತೆರೆದ ಚಿತ್ರದುರ್ಗದ ಚಾಲಕ ನಟರಾಜ್

    KSRTC ಅಲ್ಲ, ಇದು ಕನ್ನಡ ರಥ- ಬಸ್‍ನಲ್ಲೇ ಸಂಚಾರಿ ಗ್ರಂಥಾಲಯ ತೆರೆದ ಚಿತ್ರದುರ್ಗದ ಚಾಲಕ ನಟರಾಜ್

    ಚಿತ್ರದುರ್ಗ: ಆಧುನಿಕ ಕಾಲದಲ್ಲಿ ಮೊಬೈಲ್, ಇಂಟರ್ನೆಟ್ ಅಂತ ಬಂದು ಪುಸ್ತಕ ಓದುವವರ ಸಂಖ್ಯೆ ಕ್ಷೀಣವಾಗಿದೆ. ಆದ್ರೆ ಚಿತ್ರದುರ್ಗದಲ್ಲಿ ನಟರಾಜ್ ಅನ್ನೋವ್ರು ತಾವು ಡ್ರೈವರ್ ಆಗಿರೋ KSRTC ಬಸ್‍ನಲ್ಲೇ ಗ್ರಂಥಾಲಯ ತೆರೆದಿದ್ದಾರೆ. ಇದರ ಜೊತೆಗೆ ಹಲವು ಜನೋಪಕಾರಿ ಕಾರ್ಯ ಮಾಡ್ತಿದ್ದಾರೆ.

    KSRTC ಬಸ್ ಒಳಗೆ ಮೊಬೈಲ್ ಗ್ರಂಥಾಲಯ. ಡ್ರೈವರ್ ನಟರಾಜ್ ಆಸಕ್ತಿಯಿಂದ ಬಸ್‍ನಲ್ಲೇ ಸಂಚಾರಿ ಗ್ರಂಥಾಲಯ ತೆರೆದಿದ್ದಾರೆ. ಇದಕ್ಕೆ ಮಾತೃಭೂಮಿ ಅಂತ ಹೆಸರಿಟ್ಟಿದ್ದು ಪ್ರಯಾಣಿಕರಿಗೆ ಕನ್ನಡ ಪುಸ್ತಕ, ದಿನಪತ್ರಿಕೆ ಹಾಗು ವಾರಪತ್ರಿಕೆಗಳನ್ನ ಓದುವಂತಹ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೆ ಸ್ವಪ್ರೇರಣೆಯಿಂದ ಸುಮಾರು 31 ಬಾರಿ ರಕ್ತದಾನ ಮಾಡಿದ್ದಾರೆ. ಜೊತೆಗೆ, ಬಸ್‍ನಲ್ಲೇ ಎರಡು ಸಾವಿರಕ್ಕೂ ಅಧಿಕ ರಕ್ತದಾನಿಗಳ ವಿಳಾಸ, ಮಾಹಿತಿ ನೇರವಾಗಿ ಓದುಗರ ಕೈಗೆ ಸಿಗುವಂತೆ ಮಾಡಿದ್ದಾರೆ.

    ಬಸ್ಸನ್ನ ಒಂದು ಸುತ್ತು ಹಾಕಿದರೆ ಸಾಕು. ರಾಜ್ಯದ ಇಡೀ ಇತಿಹಾಸವನ್ನ ಓದಿದಷ್ಟು ಅನುಭವವಾಗತ್ತೆ. ಇನ್ನು ರಾಷ್ಟ್ರೀಯ, ನಾಡ ಹಬ್ಬಗಳು, ಜಯಂತಿಗಳನ್ನ ತಪ್ಪದೆ ಕಳೆದ 10 ವರ್ಷಗಳಿಂದ ಆಚರಿಸಿಕೊಂಡು ಬರ್ತಿದ್ದಾರೆ. ನಟರಾಜ್ ಕಾರ್ಯ ಶ್ಲಾಘನೀಯ ಅಂತ ಜನ ಕೊಂಡಾಡ್ತಿದ್ದಾರೆ.

    ಒಟ್ಟಾರೆ ನಟರಾಜ್ ಅವರ ಕನ್ನಡಾಭಿಮಾನಿ ಎಲ್ಲರ ಗಮನ ಸೆಳೆದಿದೆ.

    https://www.youtube.com/watch?v=UGPwUNodlgg

  • ಗ್ರೇಟ್ ಎಸ್ಕೇಪ್: ಜಸ್ಟ್ 2 ಅಡಿ ಮುಂದಕ್ಕೆ ಹೋಗಿದ್ರೆ 100 ಅಡಿ ಬಾವಿಗೆ ಬೀಳ್ತಿತ್ತು ಬಸ್

    ಗ್ರೇಟ್ ಎಸ್ಕೇಪ್: ಜಸ್ಟ್ 2 ಅಡಿ ಮುಂದಕ್ಕೆ ಹೋಗಿದ್ರೆ 100 ಅಡಿ ಬಾವಿಗೆ ಬೀಳ್ತಿತ್ತು ಬಸ್

    ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 30 ಪ್ರಯಾಣಿಕರು ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದಾರೆ. ಹೌದು, ರಸ್ತೆ ಪಕ್ಕದ ಸುಮಾರು 100 ಅಡಿ ಆಳದ ತೆರೆದ ಬಾವಿಯ ಅಂಚಿನಲ್ಲಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬಂದು ನಿಂತಿದೆ.

    ಮಂಗಳವಾರ ಅನಂತಪುರ ಜಿಲ್ಲೆಯ ಮಮಿಲ್ಲಪಲ್ಲಿ ಕುಂಟಾದ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಈ ಬಸ್ ಗೊರಂಟ್ಲಾ ದಿಂದ ಪುಟ್ಟಪರ್ತಿ ಗೆ ತನ್ನ ಪ್ರಯಾಣವನ್ನು ಬೆಳೆಸಿತ್ತು. ಬೈಕಿಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ ಬಸ್ ರಸ್ತೆ ಪಕ್ಕದ ಬಾವಿಯ ಅಂಚಿಗೆ ಬಂದು ನಿಂತಿದೆ. ಬಸ್ ಮುಂದೆ 2 ಅಡಿ ಚಲಿಸಿದ್ರೂ 100 ಅಡಿ ಆಳದ ಬಾವಿಗೆ ಬೀಳುತ್ತಿತ್ತು. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆಯೇ ಹೊರತು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಮುಖ್ಯ ರಸ್ತೆಯಿಂದ ಪಾದಚಾರಿ ಮಾರ್ಗದತ್ತ ತನ್ನ ಪಥ ಬದಲಿಸಿದ ಕೂಡಲೇ ಪಾದಚಾರಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಬಳಿಕ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತದ ಬಳಿಕ ಪ್ರತಿಕ್ರಿಯಿಸಿದ ಬಸ್ ಚಾಲಕ, ಬಾವಿ ಅಂಚಿನಲ್ಲಿ ಬಂದು ನಿಂತಾಗ ಒಂದು ಕ್ಷಣ ಗಾಳಿಯಲ್ಲಿ ತೇಲಾಡಿದಂತಾಯಿತು ಎಂದು ತಂಪು ಪಾನೀಯ ಒಂದರ ಜಾಹೀರಾತಿನ ಡೈಲಾಗ್ ಹೇಳಿದ್ದಾರೆ.

  • ಲೇಡಿಸ್ ಸೀಟ್‍ನಲ್ಲಿ ಕುಳಿತಿದ್ದ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಮಹಿಳೆ

    ಲೇಡಿಸ್ ಸೀಟ್‍ನಲ್ಲಿ ಕುಳಿತಿದ್ದ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಮಹಿಳೆ

    ಮಂಗಳೂರು: ಮಹಿಳೆಯೊಬ್ಬರು ಲೇಡಿಸ್ ಸೀಟ್‍ನಲ್ಲಿ ಕುತಿರೋದಕ್ಕೆ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ತುಂಬಿದ ಸರ್ಕಾರಿ ಬಸ್ ನಲ್ಲಿ ಈ ಹೈಡ್ರಾಮ ನಡೆದಿದ್ದು, ಯುವಕನೋಬ್ಬ ಸೀಟ್ ಇಲ್ಲದೆ ಮಹಿಳೆಯರಿಗೆ ಮೀಸಲಾಗಿದ್ದ ಸೀಟ್ ನಲ್ಲಿ ಕೂತಿದ್ದ. ಬಸ್‍ಗೆ ಹತ್ತಿದ ಮಹಿಳೆಯರು ನಿಂತುಕೊಂಡೇ ಇದ್ದರೂ ಯುವಕ ಮಾತ್ರ ಸೀಟ್ ಬಿಟ್ಟು ಎದ್ದೇಳಿಲ್ಲ.

    ಇದನ್ನು ಕಂಡ ಮಹಿಳೆಯೊಬ್ಬರು ಯುವಕನ ವಿರುದ್ಧ ಆರ್ಭಟಿಸಿ ಸೀಟು ಬಿಟ್ಟು ಕೊಡುವಂತೆ ಏಕಾಏಕಿಯಾಗಿ ರೌದ್ರಾವತರ ತಾಳಿ ಕೂಗಾಡಿದ್ದಾರೆ. ಆದರೆ ನಾನೇನು ಕಡಿಮೆ ಎನ್ನುವಂತೆ ಮಹಿಳೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇಬ್ಬರ ನಡುವೆ ಬಸ್ ಒಳಗಡೆಯೇ ಕಚ್ಚಾಟ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ಇಬ್ಬರ ರಂಪಾಟವನ್ನು ನೋಡಿದ್ದಾರೆ.

    ಮಹಿಳೆ ಕೊನೆಗೆ ಯುವಕನ ಕುತ್ತಿಗೆಪಟ್ಟಿ ಹಿಡಿದು ಸೀಟಿನಿಂದ ಎಬ್ಬಿಸಿದ್ದಾರೆ. ಮಹಿಳೆಯ ವರ್ತನೆ ಕಂಡು ದಂಗಾದ ಯುವಕ ಕೊನೆಗೆ ಗತಿಯಿಲ್ಲದೆ ಸೀಟು ಬಿಟ್ಟು ಎದ್ದು ಹೋಗಿದ್ದಾನೆ. ಆದರೆ ಈ ಜಗಳವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ಆ ವಿಡಿಯೋ ಸಖತ್ ವೈರಲ್ ಆಗಿದೆ.

    ವಿಡಿಯೋ ನೋಡಿ : 

    https://www.youtube.com/watch?v=7-dobyD0k0Q

  • ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಸಾರಿಗೆ ಬಸ್-ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಸಾರಿಗೆ ಬಸ್-ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಶಿವಮೊಗ್ಗ: ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮಲ್ಲಿಕಾ ಬೇಗಂ ಮೃತಪಟ್ಟ ಮಹಿಳೆ. ಮಲ್ಲಿಕಾ ಬೇಗಂ ಇಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ದಾಟುತ್ತಿದ್ದರು. ವೃತ್ತದಲ್ಲಿ ತಿರುವು ತೆಗೆದುಕೊಳ್ಳುವಾಗ ಹಿಂಬದಿಯಿಂದ ಬಸ್ ಮಹಿಳೆಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಈ ಅಪಘಾತಕ್ಕೆ ಕೆಎಸ್‍ಆರ್‍ಟಿಸಿ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಬಸ್ ವೇಗವಾಗಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ಈ ಸಂಬಂಧ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಬಸ್- ಇಬ್ಬರ ಸಾವು, 31 ಮಂದಿಗೆ ಗಾಯ

    ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಬಸ್- ಇಬ್ಬರ ಸಾವು, 31 ಮಂದಿಗೆ ಗಾಯ

    ಲಕ್ನೋ: ಖಾಸಗಿ ಬಸ್‍ವೊಂದು ಫ್ಲೈ ಓವರ್‍ನಿಂದ ಕೆಳಗೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹಾರ್ದೊಯ್ ಜಿಲ್ಲೆಯಲ್ಲಿ ನಡೆದಿದೆ.

    ಗೋಪಾಮುವಿನಿಂದ ಬರುತ್ತಿದ್ದ ಈ ಖಾಸಗಿ ಬಸ್ ನಲ್ಲಿ 35 ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ನಗರದ ರೈಲ್ವೆಗಂಜ್ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್ ಫ್ಲೈ ಓವರ್‍ನಿಂದ ಕೆಳಗೆ ಬಿದ್ದಿದೆ.

    ಬಸ್ ಕೆಳಗೆ ಬಿದ್ದ ತಕ್ಷಣ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಪ್ರಯಾಣಿಕರು ಅಡ್ಡಲಾಗಿ ಬಿದ್ದಿದ್ದ ಬಸ್‍ನ ಬಾಗಿಲಿನಿಂದ ಹೊರಬರುತ್ತಿದ್ದು, ಸಾರ್ವಜನಿಕರು ಅವರಿಗೆ ಸಹಾಯ ಮಾಡಿದ್ದಾರೆ.

    ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಬಂದು ಗಾಯಗೊಂಡಿದ್ದ ಪ್ರಯಾಣಿಕರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

  • 2 ಗಂಟೆಯಾದ್ರೂ ಬಸ್ ಹೊರಡಲಿಲ್ಲ- ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಬಸ್ ಚಾಲಕ, ಕಂಡಕ್ಟರ್ ಕಿರಿಕ್

    2 ಗಂಟೆಯಾದ್ರೂ ಬಸ್ ಹೊರಡಲಿಲ್ಲ- ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಬಸ್ ಚಾಲಕ, ಕಂಡಕ್ಟರ್ ಕಿರಿಕ್

    ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರ ಬಳಿ ಬಸ್ ಚಾಲಕ ಮತ್ತು ಕಂಡಕ್ಟರ್ ಅನುಚಿತವಾಗಿ ನಡೆದುಕೊಂಡಿರುವ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ.

    ಅಲಹಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾಕ್ಟರ್ ಪಟೇಲ್ ಎನ್ನುವ ಎಂಬ ಮಹಿಳೆ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ನಗರದ ಶಾಂತಿನಗರ ಬಸ್ ನಿಲ್ದಾಣಕ್ಕೆ ಬಂದಿದ್ದರು. ತಮಿಳುನಾಡಿನ ವೆಲ್ಲೂರಿಗೆ ಟಿಕೆಟ್ ಕೊಟ್ಟ ಕಂಡಕ್ಟರ್ ಹತ್ತು ನಿಮಿಷದಲ್ಲಿ ಬಸ್ ಹೊರಡುತ್ತೆ ಎಂದು ಹೇಳಿದ್ದರು.

    ಆದರೆ ಎರಡು ಗಂಟೆಯಾದ್ರೂ ಬಸ್ ಹೊರಡದಿರುವುದನ್ನು ಕಂಡ ಡಾಕ್ಟರ್ ಪಟೇಲ್ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಡ್ರೈವರ್ ಮತ್ತು ಕಂಡಕ್ಟರ್ ಇನ್ನೂ ಹತ್ತು ಟಿಕೆಟ್ ಬಾಕಿ ಉಳಿದಿವೆ. ಅದನ್ನು ನೀವೇ ಖರೀದಿಸಿ ಆಗ ಹೋಗೋಣ ಎಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಡಾಕ್ಟರ್ ಪಟೇಲ್ ಆರೋಪಿಸಿದ್ದಾರೆ.