Tag: ಬಸ್ ಸಂಚಾರ ಸ್ಥಗಿತ

  • ಕೇರಳ ಉದ್ವಿಗ್ನ- KSRTC ಬಸ್ ಮೇಲೆ ಕಲ್ಲು ತೂರಾಟ, ಸಂಚಾರ ಸ್ಥಗಿತ

    ಕೇರಳ ಉದ್ವಿಗ್ನ- KSRTC ಬಸ್ ಮೇಲೆ ಕಲ್ಲು ತೂರಾಟ, ಸಂಚಾರ ಸ್ಥಗಿತ

    ಬೆಂಗಳೂರು: ಶಬರಿಮಲೆ ವಿಚಾರದಲ್ಲಿ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ಸಂಚರಿಸುತ್ತಿದ್ದ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಬೆಂಗಳೂರಿನಿಂದ 3 ಬಸ್, ಮಂಗಳೂರಿನಿಂದ ಕೇರಳಕ್ಕೆ ಸಂಚಾರ ಮಾಡುತ್ತಿದ್ದ 40ಕ್ಕೂ ಹೆಚ್ಚು ಬಸ್ ಹಾಗೂ ರಾಜ್ಯದ ನಾನಾ ಭಾಗಗಳಿಂದ ಕೇರಳಕ್ಕೆ ಹೋಗಬೇಕಿದ್ದ 20 ಬಸ್‍ಗಳ ಸೇವೆಯನ್ನು ಕೆಎಸ್‌ಆರ್‌ಟಿಸಿ ನಿಲ್ಲಿಸಿದೆ.

    ಕೆಎಸ್‌ಆರ್‌ಟಿಸಿ ಬಸ್‍ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ತ್ರಿಶೂರ್ ನಲ್ಲಿ ಅಂಬಾರಿ ಬಸ್‍ಗೆ ಕಲ್ಲು ಹೊಡೆದ ಪರಿಣಾಮ ಹಿಂಭಾಗದ ಗಾಜು ಪುಡಿ ಪುಡಿಯಾಗಿದೆ. ಅಲ್ಲದೆ ತಿರುವನಂತಪುರಂನ ಪಳ್ಳಿಪುರಂ ಎಂಬಲ್ಲಿ ಇನ್ನೊಂದು ಕೆಎಸ್‌ಆರ್‌ಟಿಸಿ ಬಸ್ ಮೇಲೂ ಕಲ್ಲು ತೂರಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಸ್ ಮೈಸೂರು ಡಿಪೋ ಸೇರಿದ್ದು, ಮೈಸೂರು-ತಿರುವನಂತಪುರಂ ರೂಟ್‍ನಲ್ಲಿ ಸಾಗುತ್ತಿತ್ತು. ಒಟ್ಟು ಕರ್ನಾಟಕದ 2 ಬಸ್‍ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಕೇರಳ ಸಾರಿಗೆಯ 79 ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv