Tag: ಬಸ್ ಮುಷ್ಕರ

  • ಬಸ್ ಮುಷ್ಕರದಲ್ಲಿ ನೌಕರರ ವಜಾ ಮಾಡಿದ ವಿಚಾರ ರಾಜಕೀಯವಾಗಿ ಬಳಕೆ: ಶ್ರೀರಾಮುಲು

    ಬಸ್ ಮುಷ್ಕರದಲ್ಲಿ ನೌಕರರ ವಜಾ ಮಾಡಿದ ವಿಚಾರ ರಾಜಕೀಯವಾಗಿ ಬಳಕೆ: ಶ್ರೀರಾಮುಲು

    ಬೆಂಗಳೂರು: ಬಸ್ ಮುಷ್ಕರದಲ್ಲಿ 4 ನಿಗಮದಿಂದ 1610 ಮಂದಿಯನ್ನು ವಜಾ ಮಾಡಲಾಗಿತ್ತು. ಇದೇ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ತಾರೆ ಎಂದು ಸಚಿವ ಶ್ರೀರಾಮುಲು ಕಿಡಿಕಾರಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಷ್ಕರ ಆಗಬಾರದಿತ್ತು. ಮುಷ್ಕರ ಮಾಡೋರು ಅರ್ಥ ಮಾಡಿಕೊಂಡ ಮಾಡಬೇಕು. ಸರ್ಕಾರದ ಆಸ್ತಿ ನಾಶ ಆಗುತ್ತದೆ. ಏನೇ ಬೇಡಿಕೆ ಇದ್ದರೂ ಮಂತ್ರಿ, ಸಚಿವರು, ಯುನಿಯನ್ ಲೀಡರ್ ಜೊತೆ ಮಾತಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು. ನಮ್ಮ ಮನೆ, ನಮ್ಮ ಸರ್ಕಾರ ಅನ್ನೋ ನಂಬಿಕೆ ಇರಬೇಕು. ಈಗಾಗಲೇ 1500 ಜನರ ಮರು ನೇಮಕಾತಿ ಮಾಡಿಕೊಳ್ಳಲಾಗಿದೆ. ನಿಮ್ಮನ್ನು ಕಳೆದುಕೊಳ್ಳಲು ನಮಗೆ ಇಷ್ಟ ಇಲ್ಲ. ಒಂದು ಬಾರಿ ವಜಾ ಆದ ಮೇಲೆ ಮತ್ತೆ ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.

    ಮುಷ್ಕರಕ್ಕೆ ಮುಂದೆ ನಿಂತವರು ಇವತ್ತು ಓಡಿ ಹೋಗಿದ್ದಾರೆ. ಇವತ್ತು ನಿಮ್ಮ ಜೊತೆ ಸರ್ಕಾರ ಮಾತ್ರ ಇರೋದು. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಮತ್ತೆ ಈ ತಪ್ಪು ಮಾಡಬೇಡಿ. ಯಾರನ್ನು ನಂಬಬೇಡಿ. ಸರ್ಕಾರವನ್ನು ಮಾತ್ರ ನಂಬಿ. ಮೊದಲ ಹಂತದಲ್ಲಿ 100 ಜನರಿಗೆ ಮರು ನೇಮಕ ಮಾಡಲಾಗಿದೆ. ಮುಂದೆ ಹಂತ ಹಂತದಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.

    700 ಜನರಿಗೆ ಮರು ಆದೇಶ: ನಿಮಗೆ ಸಂಬಳ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇವೆ. ಶೀಘ್ರವೇ ಸರಿಯಾದ ಸಮಯಕ್ಕೆ ಸಂಬಳ ಬರುವ ರೀತಿ ನೋಡಿಕೊಳ್ಳುತ್ತೇನೆ. ಈ ತಿಂಗಳಲ್ಲಿ 700 ಜನರಿಗೆ ಮರು ಆದೇಶ ಕೊಡುತ್ತೇನೆ ಎಂದ ಅವರು, ಲೋಕಾ ಅದಾಲತ್ ಕೋರ್ಟ್ ಮೂಲಕ ಪ್ರಕರಣ ಇತ್ಯರ್ಥ ಮಾಡಿ ನೇಮಕಾತಿ ಮಾಡಲಾಗಿದೆ. 1,350 ಮಂದಿಗೆ ಒಟ್ಟಾರೆ ಮರು ನೇಮಕ ಮಾಡಿಕೊಡಲಾಗುತ್ತದೆ. ಮತ್ತೆ ಇಂತಹ ಪ್ರತಿಭಟನೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ

    ಎಲೆಕ್ಟ್ರಿಕ್ ಬಸ್ ಬಂದರು ನಮ್ಮ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡುವುದಿಲ್ಲ. ಕೇಂದ್ರದಿಂದ ಸಬ್ಸಿಡಿ ಮಿಸ್ ಆಗುತ್ತಿದೆ. ಹೀಗಾಗಿ ಕೇಂದ್ರದ ನಿಯಮದ ಪ್ರಕಾರ ಖಾಸಗಿ ಚಾಲಕರ ಬಳಕೆ ಮಾಡಲಾಗುತ್ತಿದೆ. ನಮ್ಮ ಚಾಲಕರನ್ನು ಯಾವುದೇ ಕಾರಣಕ್ಕೂ ತೆಗೆಯೊಲ್ಲ ಎಂದರು. ಇದನ್ನೂ ಓದಿ:  ಖಾಲಿ ಇದ್ದ ಧ್ವಜ ಸ್ತಂಭದಲ್ಲಿ ಓಂಕಾರ ಧ್ವಜ ಹಾರಿಸಲಾಗಿದೆ: ಕಟೀಲ್

    ಬಸ್ ಟಿಕೆಟ್ ದರ ಏರಿಕೆಯಾಗಲ್ಲ: ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮದು ಸೇವೆ ಮಾಡುವ ಇಲಾಖೆಯಾಗಿದೆ. ಸದ್ಯಕ್ಕೆ ಟಿಕೆಟ್ ಹೆಚ್ಚಳ ಮಾಡೋ ಬಗ್ಗೆ ಚರ್ಚೆ ಮಾಡಿಲ್ಲ. ಜನರು ಆತಂಕ ಪಡೆದೇ ಬಸ್‍ಗೆ ಬಂದರೆ ಸಾಕು. ಸದ್ಯಕ್ಕೆ ಟಿಕೆಟ್ ದರ ಹೆಚ್ಚಳ ಇಲ್ಲ ಎಂದು ತಿಳಿಸಿದರು.

  • ನಿಮ್ಮ ತಂದೆ ಕೂಡ ಸಾರಿಗೆ ನೌಕರ, ನಮ್ಮನ್ನು ಬೆಂಬಲಿಸಿ – ಯಶ್‍ಗೆ ಪತ್ರ

    ನಿಮ್ಮ ತಂದೆ ಕೂಡ ಸಾರಿಗೆ ನೌಕರ, ನಮ್ಮನ್ನು ಬೆಂಬಲಿಸಿ – ಯಶ್‍ಗೆ ಪತ್ರ

    ಬೆಂಗಳೂರು: ಕಳೆದ 7 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದ್ದು, ಇದೀಗ ಇಂದು ನೌಕರರು ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಗೆ ಪತ್ರವೊಂದನ್ನು ಬರೆದಿದ್ದಾರೆ.

    ತಮ್ಮ ಮುಷ್ಕರಕ್ಕೆ ಬೆಂಬಲ ನೀಡುವಂತೆ ಸಾರಿಗೆ ನೌಕರರು ಯಶ್ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಏಳು ದಿನಗಳಿಂದ ಮುಷ್ಕರ ಮುಂದುವರಿದಿದೆ. ಕಳೆದೆರಡು ದಿನಗಳಿಂದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನಿಮ್ಮ ತಂದೆ ಕೂಡ ಸಾರಿಗೆ ನೌಕರರಾಗಿದ್ದರು. ಈ ಕುರಿತು ನಿಮ್ಮ ಜೊತೆ ಅನುಭವ, ನೋವು ಹಂಚಿಕೊಂಡಿರಬಹುದು. ನೀವು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದೀರಿ. ಅದೇ ರೀತಿ ನಮಗೆ ನೀವು ಬೆಂಬಲಿಸಿ ಎಂದು ಸಾರಿಗೆ ನೌಕರರ ಒಕ್ಕೂಟ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.

    ಒಟ್ಟಿನಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಸ್ಟಾರ್ ನಟ ಬೆಂಬಲ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • 28 ಸಾರಿಗೆ ನೌಕರರಿಗೆ ಅಂತರಜಿಲ್ಲಾ ವರ್ಗಾವಣೆ ಶಾಕ್

    28 ಸಾರಿಗೆ ನೌಕರರಿಗೆ ಅಂತರಜಿಲ್ಲಾ ವರ್ಗಾವಣೆ ಶಾಕ್

    ಹಾವೇರಿ: ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಹಾವೇರಿ ಜಿಲ್ಲೆಯ 28 ಜನ ಚಾಲಕ ಹಾಗೂ ನಿರ್ವಾಹಕರಿಗೆ ಸಾರಿಗೆ ಇಲಾಖೆ ಅಂತರ ಜಿಲ್ಲಾ ವರ್ಗಾವಣೆ ಮಾಡಿ ಶಾಕ್ ನೀಡಿದೆ.

    ಹಾವೇರಿ ಜಿಲ್ಲೆಯಿಂದ ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇಪ್ಪತ್ತೆಂಟು ಜನ ಚಾಲಕ ಹಾಗೂ ನಿರ್ವಾಹಕರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಆಡಳಿತಾತ್ಮಕ ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

    ಏಪ್ರಿಲ್ 10ರಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ವರ್ಗಾವಣೆ ಆದೇಶ ನೀಡಿದ್ದಾರೆ. ಮುಷ್ಕರಕ್ಕೆ ಬೆಂಬಲ ನೀಡಿದ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಆದರೂ ನೌಕರರು ಮುಷ್ಕರ ಬಿಟ್ಟು ಸೇವೆಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.

  • ನಾಲ್ಕನೇ ದಿನವೂ ಮುಂದುವರಿದ ಬಸ್ ಮುಷ್ಕರ – ಇವತ್ತೂ ಸಿಗಲ್ಲ KSRTC, BMTC ಬಸ್

    ನಾಲ್ಕನೇ ದಿನವೂ ಮುಂದುವರಿದ ಬಸ್ ಮುಷ್ಕರ – ಇವತ್ತೂ ಸಿಗಲ್ಲ KSRTC, BMTC ಬಸ್

    ಬೆಂಗಳೂರು: ಕೆಎಸ್‍ಆರ್ ಟಿಸಿ, ಬಿಎಂಟಿಸಿ ನೌಕರರು ನಡೆಸ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇವತ್ತೂ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಲ್ಲ. ಇವತ್ತಿನಿಂದ ಸಾಲು ಸಾಲು ರಜೆ, ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಮುಷ್ಕರದ ಬಿಸಿ ತಟ್ಟಿದ್ದು, ಪ್ರಯಾಣಿಕರು ಪರದಾಡ್ತಿದ್ದಾರೆ.

    ಏಪ್ರಿಲ್ 12ರಂದು ಸಾರಿಗೆ ನೌಕರರು ತಟ್ಟೆ-ಲೋಟ ಚಳುವಳಿಗೆ ನಿರ್ಧರಿಸಿದ್ದಾರೆ. ಅಂದರೆ ಅಲ್ಲಿವರೆಗೂ ಮುಷ್ಕರ ಕೊನೆ ಆಗುವ ಲಕ್ಷಣಗಳಿಲ್ಲ. ಈ ನಡುವೆ ಮುಷ್ಕರ ನಿರತ ಬಿಎಂಟಿಸಿಯ 120 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಮುಷ್ಕರ ನೇತೃತ್ವ ವಹಿಸಿರುವ ನೌಕರರು ಸೇರಿದಂತೆ ಕೆಎಸ್‍ಆರ್‍ಟಿಸಿ 287 ನೌಕರರನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಶಿಕ್ಷೆ ನೀಡಲಾಗಿದೆ.

    ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ ವರದಿಯಂತೆ ವೇತನ ಹೆಚ್ಚಳ ಸಾಧ್ಯವಿಲ್ಲ ಎಂದಿರುವ ಸಿಎಂ ಯಡಿಯೂರಪ್ಪ ಯಾರೊಂದಿಗೂ ಮಾತುಕತೆ ನಡೆಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸದ್ಯಕ್ಕಂತ ಸಾರಿಗೆ ಮುಷ್ಕರ ಕೊನೆ ಆಗುವ ಸಾಧ್ಯತೆ ಇಲ್ಲ.