Tag: ಬಸ್ ಟಿಕೆಟ್ ದರ ಏರಿಕೆ

  • ದರ ಏರಿಕೆ; ಟಿಕೆಟ್ ತೆಗೆದುಕೊಳ್ಳದೇ ಬಸ್‌ನಲ್ಲಿ ಪ್ರಯಾಣಿಸಿ ವಾಟಾಳ್ ಪ್ರತಿಭಟನೆ

    ದರ ಏರಿಕೆ; ಟಿಕೆಟ್ ತೆಗೆದುಕೊಳ್ಳದೇ ಬಸ್‌ನಲ್ಲಿ ಪ್ರಯಾಣಿಸಿ ವಾಟಾಳ್ ಪ್ರತಿಭಟನೆ

    ರಾಮನಗರ: ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಹಿನ್ನೆಲೆ ದರ ಹೆಚ್ಚಳ ಖಂಡಿಸಿ ರಾಮನಗರದಲ್ಲಿ (Ramanagara) ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಪ್ರತಿಭಟನೆ ನಡೆಸಿದ್ದಾರೆ.

    ರಾಮನಗರ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಬಸ್ ಏರಿ ಕುಳಿತು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪುರಷರಿಗೂ ಬಸ್ ಪ್ರಯಾಣ ಉಚಿತ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸ್ವಾಮಿ ಅವಧೇಶಾನಂದ ಗಿರಿ, ಸದ್ಗುರು ಭೇಟಿಯಾದ ಅಮಿತ್‌ ಶಾ

    ಸರ್ಕಾರ ರಾಜ್ಯ ಜನರ ಬಳಿ ಹಗಲು ದರೋಡೆ ಮಾಡುತ್ತಿದೆ. ಪುರುಷರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡಿ ಮಹಿಳೆಯರಿಗೆ ಉಚಿತ ಕೊಡುತ್ತಿದೆ. ಪುರುಷರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವುದು ಸರಿಯಲ್ಲ. ಕೂಡಲೇ ಸರ್ಕಾರ ದರ ಏರಿಕೆಯನ್ನು ಕೈಬಿಡಬೇಕು. ಇಲ್ಲ ಪುರುಷರಿಗೂ ಉಚಿತ ಬಸ್ ಪಯಣ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದರು. ಅಲ್ಲದೇ ಟಿಕೆಟ್ ಖರೀದಿಸದೇ ಬಸ್‌ನಲ್ಲಿ ಪ್ರಯಾಣ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಓಯೋ ಹೊಸ ನಿಯಮ – ಇನ್ಮುಂದೆ ಅವಿವಾಹಿತ ಜೋಡಿಗೆ ಹೋಟೆಲ್‌ ರೂಮ್‌ ಇಲ್ಲ!

  • ಆಂಧ್ರ, ತಮಿಳುನಾಡಿನಲ್ಲಿ ನಮಗಿಂತಲೂ ಹೆಚ್ಚಿನ ದರ ಇದೆ: ಶಿವಾನಂದ ಪಾಟೀಲ್ ಸಮರ್ಥನೆ

    ಆಂಧ್ರ, ತಮಿಳುನಾಡಿನಲ್ಲಿ ನಮಗಿಂತಲೂ ಹೆಚ್ಚಿನ ದರ ಇದೆ: ಶಿವಾನಂದ ಪಾಟೀಲ್ ಸಮರ್ಥನೆ

    ಹಾವೇರಿ: ಪಕ್ಕದ ಆಂಧ್ರ, ತಮಿಳುನಾಡಿನಲ್ಲೂ ನಮಗಿಂತ ದರ ಹೆಚ್ಚಿದೆ. ನಮ್ಮದೇ ಕಡಿಮೆ ಇದೆ ಎಂದು ಬಸ್ ಟಿಕೆಟ್ ದರ (Bus Ticket Price Hike) ಏರಿಕೆಯನ್ನು ಸಚಿವ ಶಿವಾನಂದ ಪಾಟೀಲ್ (Shivanand Patil) ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಬಿಜೆಪಿ ಅವರಿಗೆ ಹೋರಾಟ ಮಾಡೋದು ಬಿಟ್ಟರೆ ಏನು ಕೆಲಸ ಇದೆ ಹೇಳಿ? ಒಂದು ಸಲವಾದರೂ ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾರಾ? ಶಕ್ತಿ ಯೋಜನೆಯಲ್ಲಿ ಜನರನ್ನು ಓಡಾಡಿಸುತ್ತಿದ್ದೇವೆ ಅಂದರೆ ಅಟ್ ಲೀಸ್ಟ್ ನೋ ಪ್ರಾಫಿಟ್ ನೋ ಲಾಸ್‌ನಲ್ಲಿ ಆದರೂ ಉಳಿಸಬೇಕು ಎಂಬ ಉದ್ದೇಶ ಅಷ್ಟೇ. ಹೆಣ್ಣು ಮಕ್ಕಳಿಗೆ, ಬಡವರಿಗೆ ಏನು ಕೊಡಬೇಕೋ ಅದನ್ನು ಆದಷ್ಟು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ – ಪತಿ, ಅತ್ತೆಯ ವಿರುದ್ಧ ಕೊಲೆ ಆರೋಪ

    ದುಡಿಯುವ ಗಂಡಮಕ್ಕಳಿಗೆ 15% ಭಾರ ಆಗಬಹುದು. ನಾನು ಇಲ್ಲ ಅಂತ ಹೇಳಲ್ಲ. ಪ್ರತಿ ನಿತ್ಯ ಓಡಾಡುತ್ತಿರೋದು ಹೆಣ್ಣ ಮಕ್ಕಳೇ ಇದ್ದಾರೆ. ಗಂಡುಮಕ್ಕಳು ಓಡಾಡಲ್ಲ, ನೀವು ಉಲ್ಟಾ ಹೇಳುತ್ತಿದ್ದೀರಿ ಎಂದರು. ಇದನ್ನೂ ಓದಿ: ಆಧಾರವಿಲ್ಲದೆ ವಿಪಕ್ಷಗಳು ಆರೋಪ ಮಾಡಬಾರದು – ಟಿಕೆಟ್ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ

    ಕಾಂಗ್ರೆಸ್‌ನಲ್ಲಿ ಪುನಃ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರು ಸಿಎಂ ಇರಬೇಕು, ಡಿಸಿಎಂ ಇರಬೇಕು ಎಂಬುದನ್ನು ವರಿಷ್ಟರು ತೀರ್ಮಾನ ಮಾಡಬೇಕು. ಈ ಬಗ್ಗೆ ಸಿಎಲ್‌ಪಿನಲ್ಲಿ ನಿರ್ಣಯ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಫೆ.4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ: ಈಶ್ವರಪ್ಪ

  • ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡಲ್ಲ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

    ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡಲ್ಲ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

    – ಕಾಂಗ್ರೆಸ್ ಅವಧಿಯಲ್ಲಿ 60% ಲಂಚ ತಲುಪಿದೆ, ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ

    ಮೈಸೂರು: ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನಸಾಮಾನ್ಯರು. ಸಾರಿಗೆ ದರ ಏರಿಕೆ (Bus Ticket Price Hike) ಜನಸಾಮನ್ಯರಿಗೆ ಹೊರಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy)  ಕಿಡಿಕಾರಿದ್ದಾರೆ.

    ಬಸ್ ಟಿಕೆಟ್ ದರ ಏರಿಕೆ ಕುರಿತು ಮೈಸೂರಿನಲ್ಲಿ (Mysuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿಯನ್ನ ನಿಲ್ಲಿಸಲು ಕಾರಣ ಹುಡುಕುತ್ತಿದೆ. ಹೇಗಾದರು ಮಾಡಿ ಗ್ಯಾರಂಟಿ ನಿಲ್ಲಿಸಲು ನೆಪ ಹುಡುಕುತ್ತಿದ್ದಾರೆ. ಯಾವುದೇ ಕಾರಣಕ್ಕೂ 5 ಗ್ಯಾರಂಟಿ ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರಿಂದಲೇ ಕಿತ್ತು ಅವರಿಗೆ ಕೊಡುವ ಕೆಲಸವನ್ನ ಸರ್ಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಅತ್ತೆದನ್ನ ಅಳಿಯ ದಾನ ಮಾಡಿದ ಅನ್ನೋ ಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡೊಕೆ ಇವರೇ ಆಗಬೇಕಾ? ಬಸ್‌ನಲ್ಲಿ ಓಡಾಡುವವರೆಲ್ಲಾ ಜನಸಾಮಾನ್ಯರು. ದಿನಕ್ಕೆ 10 ರೂ. ಹೆಚ್ಚಿಗೆಯಾದರೂ ಅದು ಅವರಿಗೆ ಹೊರೆಯಾಗಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗುಜರಾತ್‌ನ ಪೋರಬಂದರ್‌ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ, 3 ಸಾವು

    ಕಾಂಗ್ರೆಸ್ ಅವಧಿಯಲಿ 60% ಲಂಚ ತಲುಪಿದೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ಮನೆ ಹಂಚಿಕೆಯಲ್ಲೂ ಲಂಚ ಪಡೆಯಲಾಗುತ್ತಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದ. ಈಗ ವಿಧಾನಸೌಧಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವಾ ಜಯತೇ ಎನ್ನುವ ಸಿದ್ದರಾಮಯ್ಯ ಆ ರೀತಿ ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರು ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ವಾ? ಇದನ್ನು ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಪರ ಗುತ್ತಿಗೆದಾರರು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಭದ್ರತಾ ಪಡೆ ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿ – ಓರ್ವ ಸಿಬ್ಬಂದಿ ಸಾವು

    ವಿರೋಧ ಪಕ್ಷವಾಗಿ ಬಿಜೆಪಿ ವಿಫಲ ವಿಚಾರವಾಗಿ ಪ್ರತಿಕ್ರಿಯಿಸಿ, ಇದನ್ನು ಹೇಳೋದು ನಾನಲ್ಲ. ಜನರು ಇದರ ಬಗ್ಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಎಲ್ಲಿ ಕಂಡ್ರೂ ಆವಾಜ್, ಬೇಸತ್ತು ಜೆಡಿಎಸ್ ಮುಖಂಡನ ಮರ್ಡರ್ – ಆರೋಪಿಗಳು ಅರೆಸ್ಟ್

  • ಮಟನ್‌ 100 ರೂಪಾಯಿ ಇದ್ದದ್ದು 500 ರೂಪಾಯಿ ಆದ್ರೆ ತಗೋತೀರ – ಟಿಕೆಟ್‌ ದರ ಏರಿಕೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

    ಮಟನ್‌ 100 ರೂಪಾಯಿ ಇದ್ದದ್ದು 500 ರೂಪಾಯಿ ಆದ್ರೆ ತಗೋತೀರ – ಟಿಕೆಟ್‌ ದರ ಏರಿಕೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

    ಬೆಂಗಳೂರು: ಡಿಸೇಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್‌ (Mutton) 100 ರೂ. ಇದ್ದದ್ದು 500 ರೂ. ಆದ್ರೆ ತಗೋತೀರ… ಒಂದು ಸರ್ಕಾರದ ತೀರ್ಮಾನಕ್ಕೆ ಈ ರೀತಿ ಮಾತಾಡೋದು ಸರಿನಾ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy,) ಪ್ರಶ್ನಿಸಿದ್ದಾರೆ.

    ಬಸ್‌ ಟಿಕೆಟ್‌ ದರ ಏರಿಕೆ ಕುರಿತು ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಗೂ ಟಿಕೆಟ್‌ ದರ ಏರಿಕೆಗೂ ಸಂಬಂಧ ಇಲ್ಲ. ದರ ಪರಿಷ್ಕರಣೆ ಆಗಿ 10 ರಿಂದ 15 ವರ್ಷ ಆಗಿದೆ. ನೀವು ಡೀಸೆಲ್‌, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್‌ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದ್ರೆ ತಗೋತೀರ, ಬೇಳೆ, ಎಣ್ಣೆ ತಗೋತೀರ.. ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ – ಆರೋಪಿ ಬಂಧನ

    ಆಂಧ್ರ, ಕೇರಳ, ತೆಲಂಗಾಣದಲ್ಲಿ ನಮಗಿಂತಲೂ ಹೆಚ್ಚಾಗಿ ಏರಿಕೆ ಮಾಡಿ ಮಾಡಿದ್ದಾರೆ. ಆದ್ರೆ ನಮ್ಮಲ್ಲಿ 10-15 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಅಲ್ಲದೇ 7ನೇ ವೇತನ ಆಯೋಗದಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಹೀಗೆ ಮಾಡಿದಾಗ, ಸಂಸ್ಥೆ ಚೆನ್ನಾಗಿ ನಡೆಯಬೇಕು ಅಂದ್ರೆ, ಗ್ರಾಮೀಣ ಪ್ರದೇಶಕ್ಕೆ ಸೇವೆ ಒದಗಿಸಬೇಕು, ಸಂಸ್ಥೆಗೆ ಮೂಲ ಸೌಕರ್ಯ ಕೊಡಬೇಕು ಅಂದ್ರೆ ದರ ಏರಿಕೆ ಅನಿವಾರ್ಯ. 2-3 ವರ್ಷಕ್ಕೊಮ್ಮೆ ಹೆಚ್ಚಳ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು

    ಇನ್ನೂ ಸಂಕ್ರಾಂತಿಗೆ ಸರ್ಕಾರ ಇರಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಬಾರಿ ದೇವೇಗೌಡರು ಈ ಸರ್ಕಾರ ಇರಲ್ಲ ಅಂತಿದ್ದರು. ಅಪ್ಪನ ಚಾಳಿ ಮಗನಿಗೆ ಬಂದಿದೆ. ಸರ್ಕಾರವನ್ನು ಕುಮಾರಸ್ವಾಮಿ ನಿರ್ಧಾರ ಮಾಡ್ತಾರಾ..? ಜನರು ತೀರ್ಮಾನ ಮಾಡೋದು. ಅವರ ಸರ್ಟಿಫಿಕೇಟ್‌ ನಮಗೆ ಬೇಕಿಲ್ಲ. ನಮಗೆ ಜನರ ಸರ್ಟಿಫಿಕೇಟ್‌ ಅಷ್ಟೇ ಬೇಕು. ಮೂರು ಚುನಾವಣೆಗಳಲ್ಲಿ ಜನ ಏನು ತೀರ್ಪು ಕೊಟ್ರು? ನೀವೇ ಇದರ ಬಗ್ಗೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ – ಪ್ರಯಾಣಿಕರಿಗೆ ಗುಲಾಬಿ ಕೊಟ್ಟು ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ

    ಇದೇ ವೇಳೆ ಬೆಂಗಳೂರಿನಲ್ಲಿ ಸಚಿವರ ಜೊತೆ ಸಿಎಂ ಡಿನ್ನರ್‌ ಮೀಟಿಂಗ್‌ ವಿಚಾರ ಕುರಿತು ಮಾತನಾಡಿ, ಎಲ್ಲರೂ ನಮಗೆ ಸ್ನೇಹಿತರೇ, ಹಾಗಾಗಿ ಏನು ಮಾತನಾಡಬೇಕೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

  • ಬಸ್ ಟಿಕೆಟ್ ದರ ಏರಿಕೆ – ಪ್ರಯಾಣಿಕರಿಗೆ ಗುಲಾಬಿ ಕೊಟ್ಟು ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ

    ಬಸ್ ಟಿಕೆಟ್ ದರ ಏರಿಕೆ – ಪ್ರಯಾಣಿಕರಿಗೆ ಗುಲಾಬಿ ಕೊಟ್ಟು ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ

    – ತಡೆಯಲು ಹೋದ ಪೊಲೀಸರೊಂದಿಗೆ ವಾಗ್ವಾದ

    ಬೆಂಗಳೂರು: ನಾಲ್ಕು ನಿಗಮಗಳ ಪ್ರಯಾಣ ದರ ಏರಿಕೆ (Bus Ticket Price Hike) ಖಂಡಿಸಿ, ಬೆಂಗಳೂರಿನ (Bengaluru) ಮೆಜೆಸ್ಟಿಕ್ (Mejestic) ಬಸ್ ನಿಲ್ದಾಣದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಬಡವರಿಗೆ ಬಿಜೆಪಿ ಫ್ರೀ ಕೊಟ್ಟಿರಲಿಲ್ಲ. ಕಾಂಗ್ರೆಸ್ ಫ್ರೀ ಕೊಟ್ಟು ದರ ಏರಿಕೆ ಮಾಡಿದೆ. ಹಾಲಿನಲ್ಲಿ ಕಲ್ಲು ಹಾಕಿದ ದುರುಳರು ಇವರು. ಮದ್ಯದ ದರವೂ ಏರಿಕೆ ಮಾಡಿದ್ದೀರಿ. ವಿದ್ಯುತ್, ನೋಂದಣಿ ದರವೂ ಏರಿಕೆ ಮಾಡಿದ್ದೀರಿ. ಈ ಸರ್ಕಾರ ಎಲ್ಲದಕ್ಕೂ ಟ್ಯಾಕ್ಸ್ ಹಾಕಿದೆ. ಬಸ್ ದರ ಏರಿಕೆ ಮೂಲಕ ಬಡ ಜನರಿಗೆ ಸಿಎಂ ಒಳ್ಳೆದು ಮಾಡಿದ್ದಾರೆ. ನಾವು ಪ್ರಯಾಣಿಕರಿಗೆ ಗುಲಾಬಿ ಕೊಡುತ್ತೇವೆ. ನಮ್ಮನ್ನು ಕ್ಷಮಿಸಿ ಬಿಡಿ ಎಂದು ಗುಲಾಬಿ ಕೊಡುತ್ತೇವೆ. ಕಂದಾಯ, ಮನೆ ಬಾಡಿಗೆ ಎಲ್ಲವೂ ದರ ಏರಿಕೆಯಾಗಿದೆ. ನಾನು ಸಾರಿಗೆ ಸಚಿವ ಇದ್ದಾಗ 1 ಸಾವಿರ ಕೋಟಿ ಲಾಭ ಇತ್ತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು

    ಇನ್ನು ಇದೇ ವೇಳೆ ಪ್ರಯಾಣಿಕರಿಗೆ ಹೂ ಕೊಡಲು ಹೋದಾಗ ಅಶೋಕ್ ಅವರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಅಶೋಕ್ ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪೊಲೀಸ್ ದೌರ್ಜನ್ಯ ಬೇಡ. ರೈಟಿಂಗ್‌ನಲ್ಲಿ ಪ್ರತಿಭಟನೆ ಮಾಡಬಾರದು ಎಂದು ಕೊಡಿ. ಸರ್ಕಾರ ಇದೇ ಇರೋದಿಲ್ಲ. ನಾಟಕ ಆಡುತ್ತಿದ್ದೀರಾ ನೀವು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಅಶೋಕ್ ಜೊತೆ ಬಿಜೆಪಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ, ದೇವರೇ ಶಿಕ್ಷೆ ಕೊಡ್ತಾನೆ: ಕುಮಾರಸ್ವಾಮಿ