Tag: ಬಸ್‌ ಟಿಕೆಟ್‌ ದರ

  • ಗಮನಿಸಿ – ದಸರಾ ಪ್ರಯುಕ್ತ ಮೈಸೂರು KSRTC ಬಸ್‌ ಟಿಕೆಟ್‌ ದರ ಏರಿಕೆ

    ಗಮನಿಸಿ – ದಸರಾ ಪ್ರಯುಕ್ತ ಮೈಸೂರು KSRTC ಬಸ್‌ ಟಿಕೆಟ್‌ ದರ ಏರಿಕೆ

    – ಗ್ಯಾರಂಟಿ ಸರ್ಕಾರದಿಂದ ಜನಕ್ಕೆ ಶಾಕ್‌; ಯಾವ್ಯಾವ ಬಸ್‌ ಟಿಕೆಟ್‌ ದರ ಎಷ್ಟಿದೆ?

    ಬೆಂಗಳೂರು: ಗ್ಯಾರಂಟಿ ಸರ್ಕಾರ ರಾಜ್ಯದ ಜನರಿಗೆ ಮತ್ತೆ ದರ ಏರಿಕೆ ಬರೆ ಎಳೆದಿದೆ. ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆ ಮಾಡಿದೆ. ಬರೋಬ್ಬರಿ 20 ರೂ. ಏರಿಕೆ ಮಾಡಿದ್ದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.

    ದಸರಾ ಹಬ್ಬದ ಪ್ರಯುಕ್ತ ಟಿಕೆಟ್ ದರ ಇಳಿಕೆ ಮಾಡಿ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕಾಗಿತ್ತು ಸರ್ಕಾರ. ಆದರೆ ಸಾರಿಗೆ ಇಲಾಖೆ ಮೈಸೂರು ಮಾರ್ಗದ ಕೆಎಸ್ ಆರ್ಟಿಸಿ ಬಸ್ ದರವನ್ನ ಏರಿಕೆ ಮಾಡಿದೆ. ಎಲ್ಲಾ ಕೆಎಸ್ ಆರ್ಟಿಸಿ ಬಸ್ ದರ ಬರೋಬ್ಬರಿ ೨೦ ರೂಪಾಯಿ ಏರಿಕೆ ಮಾಡಿದೆ. ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಿರೋದಕ್ಕೆ ಆಕ್ರೋಶ ಹೊರ ಹಾಕ್ತಾ ಇದ್ದಾರೆ.

    ಇನ್ನೂ ಕೆಎಸ್‌ಆರ್‌ಟಿಸಿ ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಎಲ್ಲಾ ಬಸ್‌ಗಳ ದರ ಏರಿಕೆ ಆಗಿದೆ. ದಸರಾ ಮುಗಿಯುವವರೆಗೂ ದರ ಏರಿಕೆ ಇರಲಿದೆ.

    ಯಾವ್ಯಾವ ಬಸ್‌ ಟಿಕೆಟ್‌ ದರ ಎಷ್ಟಿದೆ?
    ಕರ್ನಾಟಕ ಸಾರಿಗೆ ವೇಗದೂತ – 170 ರೂ. ನಿಂದ 190 ರೂ.ಗೆ
    ತಡೆ ರಹಿತ ಸಾರಿಗೆ – 210 ರಿಂದ 240 ರೂ.
    ರಾಜಾಹಂಸ – 270 ರಿಂದ 290 ರೂ.
    ಐರಾವತ – 430 ರಿಂದ 450 ರೂ.
    ಐರಾವತ ಕ್ಲಬ್ ಕ್ಲಾಸ್ – 440 ರಿಂದ 460 ರೂ.

    ದಸರಾ ಪ್ರಯುಕ್ತ ಟಿಕೆಟ್ ದರ ಇಳಿಕೆ ಮಾಡಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡಬೇಕು.‌ ಆದ್ರೆ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿರೋದು ಸರಿಯಲ್ಲ.

  • BMTC Ticket Price Hike| ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ.? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    BMTC Ticket Price Hike| ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ.? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಪ್ರಯಾಣಿಕರೇ ಗಮನಿಸಿ, ಇಂದು ಮಧ್ಯರಾತ್ರಿಯಿಂದಲೇ ಬಿಎಂಟಿಸಿ (BMTC) ಪ್ರಯಾಣ ದುಬಾರಿಯಾಗಲಿದೆ.

    ಇಲ್ಲಿಯವರೆಗೆ ಬಿಎಂಟಿಸಿ ದರ ಒಂದು ಸ್ಟೇಜ್‌ಗೆ 5 ರೂ. ಇತ್ತು. ಈಗ 1 ರೂಪಾಯಿ ಹೆಚ್ಚಳವಾಗಿ 6 ರೂ. ಆಗಿದೆ. ಹೀಗಾಗಿ ಬಸ್ಸು ಹತ್ತಿದ ನಂತರ ಬರುವ ಮೊದಲ ಸ್ಟೇಜ್‌ಗೆ 6 ರೂ. ದರವನ್ನು ನಿಗದಿ ಪಡಿಸಲಾಗಿದೆ. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    ಬಿಎಂಟಿಸಿ ಬಸ್ಸಿನಲ್ಲಿ ಅತೀ ಹೆಚ್ಚು ಅಂದರೆ  25 ಸ್ಟೇಜ್ ಮಾತ್ರ ಇದೆ. ಬೆಂಗಳೂರಲ್ಲಿ ಪ್ರತಿನಿತ್ಯ ಸುಮಾರು 5,800 ಬಿಎಂಟಿಸಿ ಬಸ್ಸುಗಳು 1,800 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ.

    ಎಷ್ಟು ಏರಿಕೆ?
    ಮೆಜೆಸ್ಟಿಕ್‌ನಿಂದ (Majestic) ಜೆಪಿನಗರ 6ನೇ ಹಂತಕ್ಕೆ 20 ರೂ. ಇದ್ದರೆ ಈಗ ಇನ್ನು ಮುಂದೆ 24 ರೂ. ಆಗಲಿದೆ. ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆ 25 ರೂ. ಇದ್ದರೆ ಭಾನುವಾರದಿಂದ 30 ರೂ. ಆಗಲಿದೆ.

     

  • ರಾಜ್ಯದ ಜನರಿಗೆ ಮತ್ತೊಂದು ಶಾಕ್‌ – ಬಸ್‌ ಪ್ರಯಾಣ ದರ ಹೆಚ್ಚಿಸಲು KSRTCಯಿಂದ ಪ್ರಸ್ತಾವನೆ ಸಲ್ಲಿಕೆ

    ರಾಜ್ಯದ ಜನರಿಗೆ ಮತ್ತೊಂದು ಶಾಕ್‌ – ಬಸ್‌ ಪ್ರಯಾಣ ದರ ಹೆಚ್ಚಿಸಲು KSRTCಯಿಂದ ಪ್ರಸ್ತಾವನೆ ಸಲ್ಲಿಕೆ

    ಬೆಂಗಳೂರು: ಸದ್ಯ ಪೆಟ್ರೋಲ್‌, ಡೀಸೆಲ್‌ ತೈಲ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳುತ್ತಿರುವ ಕರುನಾಡಿನ ಜನರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಬಸ್‌ ಪ್ರಯಾಣ ದರ ಹೆಚ್ಚಿಸಲು ಕೆಎಸ್‌ಆರ್‌ಟಿಸಿ (KSRTC) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಬಸ್‌ ಪ್ರಯಾಣ ದರ 15% ರಿಂದ 20% ವರೆಗೆ ಹೆಚ್ಚಿಸಲು ಜುಲೈ 14ರಂದೇ ರಾಜ್ಯ ಸರ್ಕಾರಕ್ಕೆ (Karnataka Govt) ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರಿಂದು ಪ್ರತಿಕ್ರಿಯಿಸಿದ್ದು, ಪ್ರಸ್ತಾವನೆ ಬಂದಿದೆ. ನಾನಿನ್ನೂ ಅದನ್ನ ನೋಡಿಲ್ಲ, ದರ ಏರಿಕೆ ಮಾಡುವ ಬಗ್ಗೆ ಸಧ್ಯಕ್ಕೆ ಯಾವುದೇ ನಿರ್ಧಾರವೂ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics 2024: ಚಿನ್ನಕ್ಕೆ ಗುರಿಯಿಟ್ಟ ಶೂಟರ್‌ – ಚೀನಾಗೆ ಮೊದಲ ಚಿನ್ನದ ಪದಕ

    ನಿರ್ಮಲಾ ಸೀತಾರಾಮನ್‌ಗೆ ಕೃತಜ್ಞತೆ ಇಲ್ಲ:
    ಇದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಬಿಜೆಪಿ ಪಕ್ಷದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ದಿನದಿಂದ ಬಿಜೆಪಿ (BJP) ಅನ್ಯಾಯ ಆಗುತ್ತಿದೆ. ರಾಜ್ಯಕ್ಕೆ ಕಾಯಂ ಆಗಿ ಚೊಂಬು ಸಿಗುತ್ತಿದೆ. ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್‌ ಆಯ್ಕೆ ಆಗಿದ್ದರೂ ಕೃತಜ್ಞತೆ ಇಲ್ಲ. ನರೇಂದ್ರ ಮೋದಿ ಏನ್ ಮಾಡಿಲ್ಲ ಅಂದರೂ 19 ಜನರನ್ನು ಜನ ಸಂಸದರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ ಇದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ ಮನೆ ಮುರುಕರು ಯಾರು ಅಂತ ಜನರಿಗೆ ಗೊತ್ತಾಗಿದೆ: ಬೊಮ್ಮಾಯಿ ಕಿಡಿ

    ಬಿಜೆಪಿ ದೇಶದ ಆಸ್ತಿಯನ್ನೇ ಮಾರುತ್ತಿದೆ:
    10 ವರ್ಷಗಳ ಹಿಂದೆ ಮೋದಿ ಏನು ಹೇಳಿರೋ ಈಗ ಅದೆಲ್ಲವನ್ನೂ ಮರೆತ್ತಿದ್ದಾರೆ. ಗಾಳಿ, ಬೆಳಕು ಬಿಟ್ಟು ಎಲ್ಲದಕ್ಕೂ ಜಿಎಸ್‌ಟಿ (GST) ಹಾಕಿದ್ದಾರೆ. ದೇಶದ ಸಂಪತ್ತನ್ನ ಲೂಟಿ ಮಾಡೋಕೆ ಬಿಟ್ಟಿದ್ದಾರೆ. ಅಂಬಾನಿ ಮೂಲಕ ಲೂಟಿ ಮಾಡೋಕೆ ಬಿಟ್ಟಿದ್ದಾರೆ. ದೇಶದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ. ಅನೇಕ ರಾಜ್ಯಗಳಿಗೆ ಬಜೆಟ್ ನಲ್ಲಿ ಹಣ ಕೊಟ್ಟಿಲ್ಲ. ಬಿಹಾರ ಆಂಧ್ರಪ್ರದೇಶಕ್ಕೆ ಹೆಚ್ಚಿನ ಹಣ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾಸ್ತಿ ದಿನ ಉಳಿಯಲ್ಲ. ಬಿಜೆಪಿ ಸರ್ಕಾರ ಇರುವರಿಗೆ ರಾಜ್ಯಕ್ಕೆ ಮಾರಕ ಎಂದು ಎಚ್ಚರಿಸಿದ್ದಾರೆ.

    140 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನ ಮೋದಿ ಮಾಡಿದ್ದಾರೆ. ಬಿಜೆಪಿ ಇರುವರಿಗೆ ನಮಗೆ ಭವಿಷ್ಯ ಇಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗ್ತಿದೆ. ರಾಜ್ಯದ ಜನತೆ ಬಗ್ಗೆ ಬಿಜೆಪಿಗೆ ಕೃತಜ್ಞತೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ (Lok Sabha Elections) 19 ಸೀಟ್ ನೀಡಿದ್ರೂ ರಾಜ್ಯದ ಜನತೆ ಬಗ್ಗೆ ಕೃತಜ್ಞತೆ ಇಲ್ಲ. ಈ ಬಗ್ಗೆ ರಾಜ್ಯದ ಸಂಸದರಿಗೆ ಮಾತನಾಡುವ ಶಕ್ತಿಯೂ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಅತಿಹೆಚ್ಚು ಸ್ಟಾರ್ಟಪ್‌ಗಳು ನೋಂದಣಿಯಾಗಿರುವ ಎರಡನೇ ರಾಜ್ಯ ಕರ್ನಾಟಕ

  • ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಬೆಳಗಾವಿ: ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ (Raju Kage) ತಿಳಿಸಿದ್ದಾರೆ.

    ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಂತರ ಬಸ್ ಟಿಕೆಟ್ ದರ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ರಾಜು ಕಾಗೆ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡಿಸೇಲ್ ಹಾಗೂ ಬಸ್ ಸ್ಪೇರ್ ಪಾರ್ಟ್ಸ್‌ಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

    ನಿಗಮದ ಆಸ್ತಿಗಳನ್ನು ಪರಭಾರೆ ಮಾಡ್ತೀವಿ. ಸಂಸ್ಥೆಗೆ ಸೇರಿದ ಹಳೆ ಬಿಲ್ಡಿಂಗ್ ನವೀಕರಿಸಿ ಬಾಡಿಗೆ ಕೊಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

    ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕೆಲ ವಾರಗಳ ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದದ್ದು, ಈಗ 29.84% ಗೆ ಏರಿಕೆ (3.9% ಹೆಚ್ಚಳ)ಯಾಗಿದೆ. ಅಂತೆಯೇ ಡಿಸೇಲ್ ಈ ಹಿಂದೆ- 14.34% ಇದ್ದದ್ದು, ಈಗ 18.44%ಗೆ ಏರಿಕೆ ಕಂಡಿದೆ (4.1% ರಷ್ಟು ಏರಿಕೆ). ಇದನ್ನೂ ಓದಿ: ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 9 ಮಂದಿ ಅಸ್ವಸ್ಥ – ಕಾಕಲವಾರ ಗ್ರಾಪಂ ಪಿಡಿಒ ಅಮಾನತು