Tag: ಬಸ್ ಕಂಡಕ್ಟರ್

  • ಕಂಡಕ್ಟರ್‌ನಿಂದ ಬಸ್ಸಲ್ಲೇ ಗಾನಾ ಬಜಾನ – ಯಾದಗಿರಿಯ ಪರಶುರಾಮ್ ಪಬ್ಲಿಕ್ ಹೀರೋ

    ಕಂಡಕ್ಟರ್‌ನಿಂದ ಬಸ್ಸಲ್ಲೇ ಗಾನಾ ಬಜಾನ – ಯಾದಗಿರಿಯ ಪರಶುರಾಮ್ ಪಬ್ಲಿಕ್ ಹೀರೋ

    ಯಾದಗಿರಿ: ಕುರಿಗಾಯಿ ಹನುಮಂತ ಆಯಿತು, ಕೊಪ್ಪಳದ ಗಂಗಮ್ಮ ಆಯಿತು. ಈಗ ಇವರ ಸಾಲಿಗೆ ಮತ್ತೊಂದು ಗಾನ ಕೋಗಿಲೆ ಸೇರಿಕೊಂಡಿದೆ. ಸರ್ಕಾರಿ ನೌಕರಿ ಮಾಡುತ್ತಲೇ, ಸಂಗೀತ ಸರಸ್ವತಿಯ ಸೇವೆ ಮಾಡುತ್ತಾ ಯಾದಗಿರಿಯ ಬಸ್ ಕಂಡಕ್ಟರ್ ಪರಶುರಾಮ್ ಪಬ್ಲಿಕ್ ಹೀರೋ ಆಗಿದ್ದಾರೆ.

    ಹೌದು. ಯಾದಗಿರಿ- ಕಲಬುರಗಿ ಮಧ್ಯೆ ಸಂಚರಿಸುತ್ತಿರುವ ಈಶಾನ್ಯ ಸಾರಿಗೆ ಬಸ್ ಹತ್ತಿದರೆ ನಿಮಗೆ ಫುಲ್ ಎಂಟರ್‌ಟೈನ್‌ಮೆಂಟ್ ಸಿಗೋದು ಗ್ಯಾರಂಟಿ. ಯಾಕಂದ್ರೆ ಬಸ್‍ನ ಕಂಡಕ್ಟರ್ ಕಂಠದಿಂದ ಹೊರಹೊಮ್ಮುವ ಹಾಡುಗಳು ಎಲ್ಲರ ಮನಸೋರೆಗೊಳ್ಳುತ್ತವೆ. ಬಸ್ಸಲ್ಲೇ ಕರೋಕೆ ಮ್ಯೂಸಿಕ್ ಹಾಕಿಕೊಂಡು ಕೈಯಲ್ಲಿ ಮೈಕ್ ಹಿಡ್ಕೊಂಡು ಹಾಡೋಕೆ ಶುರು ಮಾಡ್ತಾರೆ.

    ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರಿನವರಾದ ಪರಶುರಾಮ್, ಕಳೆದ ಎಂಟು ವರ್ಷದಿಂದ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪರಶುರಾಮ್‍ಗೆ ಶಾಲಾ ದಿನಗಳಿಂದಲೂ ಹಾಡು ಹೇಳೋ ಹುಚ್ಚು. ಹೀಗಾಗಿ ಇದೀಗ ಇಲಾಖೆಯ ಅನುಮತಿ ಪಡೆದು ಬಸ್ಸಲ್ಲೂ ಗಾಯನ ಮುಂದುವರಿಸಿದ್ದಾರೆ.

    ಅಂದ ಹಾಗೇ ಪರಶುರಾಮ್ ಎಲ್ಲೂ ಹೋಗಿ ಸಂಗೀತ ಕಲಿತಿಲ್ಲ. ಆದರೂ ಶೃತಿ, ರಾಗ, ಲಯ ತಪ್ಪದಂತೆ ಹಾಡಿ ನಿತ್ಯ ನೂರಾರು ಪ್ರಯಾಣಿಕರನ್ನು ರಂಜಿಸುತ್ತಾರೆ. ಈ ಮೂಲಕ ಅಭಿಮಾನಿಗಳನ್ನೂ ಗಳಿಸಿಕೊಂಡಿದ್ದಾರೆ. ಈ ಭಾಗದಲ್ಲಿ ನಿತ್ಯ ಸಂಚರಿಸೋ ಸರಕಾರಿ ನೌಕರರು, ವಿದ್ಯಾರ್ಥಿಗಳು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಈ ಬಸ್ ಹತ್ತುವುದಾಗಿ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

    ಒಟ್ಟಿನಲ್ಲಿ ಪರಶುರಾಮ್ ತನ್ನ ಗಾಯನದ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ವೃತ್ತಿಯ ಜೊತೆಗೆ ತನ್ನ ಹವ್ಯಾಸ ಮುಂದುವರಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.

  • 16ರ ಹುಡುಗಿಯ ಮೇಲೆ 7 ತಿಂಗಳ ಕಾಲ ನಾಲ್ವರಿಂದ ಗ್ಯಾಂಗ್‍ರೇಪ್

    16ರ ಹುಡುಗಿಯ ಮೇಲೆ 7 ತಿಂಗಳ ಕಾಲ ನಾಲ್ವರಿಂದ ಗ್ಯಾಂಗ್‍ರೇಪ್

    ಮುಂಬೈ: ನಾಲ್ವರು ಬಸ್ ನಿರ್ವಾಹಕರು ಏಳು ತಿಂಗಳ ಕಾಲ 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

    ಆರೋಪಿಗಳನ್ನು ಉಮೇಶ್ ಅಲಿಯಾಸ್ ವರ್ಷಾಪಾಲ್ ಮೊರೇಶ್ವರ್ ಮೆಶ್ರಾಮ್ (22), ಧರ್ಮಪಾಲ್ ದಾದರಾವ್ ಮೆಶ್ರಾಮ್ (22), ಆಶಿಶ್ ಕಾಶಿನಾಥ ಲೋಕಾಂಡೆ (25) ಮತ್ತು ಅಜಯ್ (22) ಎಂದು ಗುರುತಿಸಲಾಗಿದ್ದು, ನಾಲ್ವರನ್ನು ಮಂಕಪುರ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ನಾಗ್ಪುರ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದು, ಸ್ಟಾರ್ ಬಸ್ ಮೂಲಕ ಪ್ರಯಾಣಿಸುತ್ತಿದ್ದಳು. ದಿನಾ ಟ್ರಾವೆಲ್ ಮಾಡುತ್ತಿದ್ದರಿಂದ ಬಸ್ ಕಂಡಕ್ಟರ್ ಆರೋಪಿ ಧರ್ಮಾಪಾಲ್ ಮೆಶ್ರಾಮ್ ಮೊದಲಿಗೆ ಆಕೆಯನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡಿದ್ದಾನೆ. ಈ ವೇಳೆ ಆತ ತನ್ನ ಗುರುತನ್ನು ಮರೆಮಾಚಲು ‘ಅತುಲ್’ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ನಂತರ ಇಬ್ಬರು ಮೊಬೈಲ್ ನಂಬರ್ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜುಲೈ 1, 2018 ರಂದು ಬಾಡಿಗೆ ಮನೆಯಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ತಾನು ಅತ್ಯಾಚಾರ ಮಾಡಿದ ವಿಷಯದ ಬಗ್ಗೆ ಸ್ನೇಹಿತರಿಗೆ ಹೇಳಿದ್ದಾನೆ. ಬಳಿಕ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಮೇಲೆ ಜುಲೈ 1, 2018 ರಿಂದ ಜನವರಿ 31, 2019 ರವರೆಗೆ ಗ್ಯಾಂಗ್‍ರೇಪ್ ಮಾಡಿದ್ದು, ಏಳು ತಿಂಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದಾರೆ.

    ಸಂತ್ರಸ್ತೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಶಂಕಿಸಿದ್ದಾಳೆ. ಆದರೆ ಅವರು ಕುಟುಂಬದವರು ದಿನಕೂಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ತಿಳಿದರೆ ಭಯ ಪಡುತ್ತಾರೆ ಎಂದು ಫೆಬ್ರವರಿ 28 ರಂದು ಮನೆ ಬಿಟ್ಟು ಹೋಗಿದ್ದಾಳೆ. ಮಗಳು ಮನೆ ಬಿಟ್ಟು ಹೋದ ನಂತರ ಆಕೆಯ ಪೋಷಕರು ಪೊಲೀಸರಿಗೆ ನಾಪತ್ತೆ ದೂರನ್ನು ದಾಖಲಿಸಿದ್ದಾರೆ.

    ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ವೇಳೆ ಹುಡುಗಿ ರಾಯ್ಪುರದಲ್ಲಿ ಇರುವ ಬಗ್ಗೆ ಮಾಹಿತಿ ದೊರೆತಿದೆ. ನಂತರ ಪೊಲೀಸ್ ತಂಡವು ರಾಯ್ಪುರದಿಂದ ನಾಗ್ಪುರಕ್ಕೆ ಸಂತ್ರಸ್ತೆಯನ್ನು ಕರೆದುಕೊಂಡು ಬಂದಿದ್ದಾರೆ. ತನಿಖೆ ಸಂದರ್ಭದಲ್ಲಿ ಸಂತ್ರಸ್ತೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ.

    ಸದ್ಯಕ್ಕೆ ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಸೆಕ್ಷನ್ 376 (2) ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • KSRTC ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆ

    KSRTC ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆ

    ತುಮಕೂರು: ಕುಡಿದ ಮತ್ತಿನಲ್ಲಿದ್ದ ಐವರು ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಕಬ್ಬಿಣದ ಉಕ್ಕಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.

    ಕುಣಿಗಲ್ ಡಿಪೋ ನಿರ್ವಾಹಕ ಧನಂಜಯ್ ತಲೆಗೆ ಗಂಭೀರ ಗಾಯವಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿಂದ ತುಮಕೂರಿಗೆ ಹೊರಟಿದ್ದ ಬಸ್ಸಲ್ಲಿ ಸಂತೆಮಾವತ್ತೂರು ಬಳಿ ಐವರು ಪಾನಮತ್ತ ಪ್ರಯಾಣಿಕರು ಹತ್ತಿಕೊಂಡಿದ್ದರು.

    ನಂತರ ಬಸ್ ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದೇ ಸಮನೆ ಐವರು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಂಡಕ್ಟರ್ ಧನಂಜಯ್ ಸುಮ್ಮನಿರುವಂತೆ ತಾಕೀತು ಮಾಡಿದಕ್ಕೆ ಆಕ್ರೋಶಗೊಂಡ ಪಾನಮತ್ತರು ತಮ್ಮ ಬಳಿ ಇದ್ದ ಕಬ್ಬಿಣದ ಉಕ್ಕಿನಿಂದ ಕಂಡಕ್ಟರ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ಉಕ್ಕು ಕಂಡಕ್ಟರ್ ತಲೆಗೆ ಚುಚ್ಚಿಕೊಂಡು ರಕ್ತಸ್ರಾವವಾಗಿದೆ.

    ಬಸ್‍ನಲ್ಲಿದ್ದ ಇನ್ನುಳಿದ ಪ್ರಯಾಣಿಕರು ತಕ್ಷಣ ಗಾಯಗೊಂಡ ಕಂಡಕ್ಟರ್‍ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಕುರಿತು ಪ್ರಯಾಣಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಯಾಣಿಕರ ಗಮನಕ್ಕೆ: ಯಾರ ಗಮನಕ್ಕೂ ಬಾರದ ನಿಗೂಢವಿದೆ ಇಲ್ಲಿ…!

    ಪ್ರಯಾಣಿಕರ ಗಮನಕ್ಕೆ: ಯಾರ ಗಮನಕ್ಕೂ ಬಾರದ ನಿಗೂಢವಿದೆ ಇಲ್ಲಿ…!

    ಸದ್ಯ ಪ್ರೇಕ್ಷಕರ ವಲಯದಲ್ಲಿ ಕುತೂಹಲದ ತೀವ್ರತೆಯನ್ನು ಕಾಯ್ದಿಟ್ಟುಕೊಂಡಿರುವ ಚಿತ್ರ ‘ಪ್ರಯಾಣಿಕರ ಗಮನಕ್ಕೆ’. ಅರ್ಜುನ್ ಸರ್ಜಾ ಕುಟುಂಬದ ಭರತ್ ಸರ್ಜಾ ನಾಯಕನಾಗಿರುವ ಈ ಚಿತ್ರ ತೆರೆ ಕಾಣುವ ಸನಿಹದಲ್ಲಿರುವಾಗಲೇ ಚಿತ್ರ ತಂಡ ಕಥೆಯ ಬಗೆಗಿನ ಕೆಲ ಸುಳಿವನ್ನು ಬಿಟ್ಟುಕೊಡುವ ಮೂಲಕ ಪ್ರೇಕ್ಷಕರು ಮತ್ತಷ್ಟು ಆಕರ್ಷಿತರಾಗುವಂತೆಯೂ ಮಾಡುತ್ತಿದೆ.

    ಮನೋಹರ್ ನಿರ್ದೇಶನದ ಈ ಚಿತ್ರದ ಶೀರ್ಷಿಕೆ, ಪೋಸ್ಟರುಗಳು ಇದೊಂದು ಹೊಸಾ ಅಲೆಯ ಚಿತ್ರ ಎಂಬುದನ್ನು ಜಾಹೀರು ಮಾಡಿವೆ. ಇದು ಒಂದು ಪ್ರಯಾಣದ ಸಂದರ್ಭದಲ್ಲಿ ಮುಖಾಮುಖಿಯಾಗುವ ಕೆಲ ಪಾತ್ರಗಳ ನಟುವೆ ನಡೆಯೋ ಕಥಾ ಹಂದರ ಹೊಂದಿದೆ. ಒಂದು ಬಸ್ಸಿನೊಳಗೆ ಬೇರೆ ಬೇರೆ ಥರದ ಬದುಕು ಭಾವಗಳನ್ನು ಅನಾವರಣಗೊಳಿಸಿರೋ ಈ ಚಿತ್ರದಲ್ಲಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ನದ್ದೇ ಪ್ರಧಾನ ಪಾತ್ರ.

    ಕಣ್ಣೆದುರೇ ಇದ್ದರೂ ಕಣ್ಣರಳಿಸಿ ನೋಡದಂಥಾ ಅದೆಷ್ಟೋ ವೈಚಿತ್ರ್ಯಗಳು ನಮ್ಮ ಸುತ್ತಲೇ ಇರುತ್ತವೆ. ಅಂಥವನ್ನೆಲ್ಲ ತೀರಾ ಸಹಜವಾಗಿ ಕಾಣಿಸಬೇಕೆಂಬ ಉದ್ದೇಶದಿಂದ ಚಿತ್ರ ತಂಡ ಹಲವಾರು ರಿಸ್ಕಿ ಸವಾಲುಗಳನ್ನೂ ಯಶಸ್ವಿಯಾಗಿ ಸ್ವೀಕರಿಸಿದೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರಯಾಣದ ಪರಿಕಲ್ಪನೆಗೆ ಅತ್ಯಂತ ಸೂಕ್ತ ಸ್ಥಳ. ಇಲ್ಲಿ ಕತ್ತಲಾವರಿಸುತ್ತಲೇ ಬೇರೆಯದ್ದೇ ಲೋಕ ತೆರೆದುಕೊಳ್ಳುತ್ತದೆ. ಅದನ್ನು ಹಾಗೆಯೇ ಸೆರೆ ಹಿಡಿಯುವ ಉದ್ದೇಶದಿಂದ ಅದೆಷ್ಟೋ ರಾತ್ರಿಗಳಲ್ಲಿ ಕ್ಯಾಮೆರಾ ಮರೆಯಾಗಿಸಿಕೊಂಡು ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆಯಂತೆ. ಇಂಥಾ ಹಲವಾರು ವಿಶಿಷ್ಟವಾದ ಪ್ರಯೋಗಗಳ ಮೊತ್ತವಾಗಿ ಮೂಡಿ ಬಂದಿರೋ ಈ ಚಿತ್ರ ಥೇಟರು ತಲುಪೋ ಕ್ಷಣಗಳು ಸಮೀಪಿಸುತ್ತಿವೆ.

    https://youtu.be/tw-Yw-0l40w

    https://youtu.be/nSFjVroEYKk