Tag: ಬಸ್ ಕಂಡಕ್ಟರ್

  • ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ

    ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ

    – ಮಂಗಳವಾರ ಘಟನೆ ಖಂಡಿಸಿ ಕರವೇ ಪ್ರತಿಭಟನೆ

    ಬೆಳಗಾವಿ: ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಪೋಕ್ಸೋ ಕೇಸ್ ದಾಖಲಿಸಿರುವ ಘಟನೆ ಈಗ ಎರಡು ರಾಜ್ಯಗಳ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಈ ಹಿನ್ನೆಲೆ ಇಂದು ಬೆಳಗಾವಿಗೆ (Belagavi) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಘಟನೆಯ ಮಾಹಿತಿ ಪಡೆಯಲಿದ್ದಾರೆ.

    ಸದಾ ಗಡಿ ಹಾಗೂ ಭಾಷೆ ವಿಚಾರದಲ್ಲಿ ಒಂದಿಲ್ಲೊಂದು ಕಿರಿಕ್ ಮಾಡುತ್ತಿದ್ದ ಎಂಇಎಸ್ ಹಾಗೂ ಮರಾಠಿ ಪುಂಡರು ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಟಿಕೆಟ್ ಕೊಡುವ ವಿಚಾರಕ್ಕೆ ಶುರುವಾದ ಜಗಳ ಈಗ ಕರ್ನಾಟಕ, ಮಹಾರಾಷ್ಟ್ರ ಎರಡೂ ರಾಜ್ಯದ ನಡುವಿನ ಶಾಂತಿಗೆ ಭಂಗ ತರುತ್ತಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರ ಬಸ್ಸುಗಳಿಗೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಹೀಗಾಗಿ ಕರ್ನಾಟಕದಿಂದ ಹೊರಡುವ ಬಸ್ಸುಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಉದಯಗಿರಿ ಗಲಭೆ ಕಿಚ್ಚು – ಇಂದು ಮಧ್ಯರಾತ್ರಿವರೆಗೆ ಮೈಸೂರಿನಲ್ಲಿ ನಿಷೇಧಾಜ್ಞೆ

    ಇಂದು ಬೆಳಗಾವಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಘಟನೆಯ ಕುರಿತು ಮಾಹಿತಿ ಪಡೆಯಲಿದ್ದಾರೆ. ಕಂಡ್ಟಕರ್ ಮೇಲೆ ಹಾಕಲಾದ ಪ್ರಕರಣ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಇದನ್ನೂ ಓದಿ: ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ಇನ್ನು ಮಂಗಳವಾರ ಬೆಳಗಾವಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಸಹ ಆಗಮಿಸುತ್ತಿದ್ದಾರೆ. ಕನ್ನಡ ಮಾತಾಡು ಎಂದು ಹೇಳಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ನಾರಾಯಣಗೌಡ ಚಲೋ ಪಂಥಬಾಳೆಕುಂದ್ರಿ ಕರೆ ನೀಡಿದ್ದಾರೆ. ಬೆಳಗಾವಿಯಿಂದ ಪಂಥಬಾಳೆಕುಂದ್ರಿಗೆ ಪ್ರತಿಭಟನಾ ರ‍್ಯಾಲಿ ಆಯೋಜನೆ ಮಾಡಿದ್ದು, ಕಂಡೆಕ್ಟರ್ ಮೇಲೆ ನೆಡದ ಹಲ್ಲೆಯನ್ನು ಖಂಡಿಸಿದ್ದಾರೆ. ಅಲ್ಲದೆ ನಾರಾಯಣಗೌಡ ಬರುತ್ತಿರುವ ಹಿನ್ನೆಲೆ ನೂರಾರು ಕಾರ್ಯಕರ್ತರು ಮಂಗಳವಾರದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಶಹಬ್ಬಾಶ್ ಹುಡುಗ್ರಾ: ಪಾಕ್‌ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಡಿಕೆಶಿ ಅಭಿನಂದನೆ

    ಈ ಮಧ್ಯೆ ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಎಂಇಎಸ್ ಮುಖಂಡ ಶುಭಂ ಶಳಕೆ ವಿರುದ್ಧ ದೂರು ದಾಖಲಾಗಿದೆ. ಕನ್ನಡಿಗರನ್ನು ಕೆರಳಿಸುವ ಭಾಷಾ ವೈಷಮ್ಯ ಹರಡುವ ಶಾಂತಿಗೆ ಭಂಗ ತರುವ ಕಲಂಗಳಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟಿನಲ್ಲಿ ಶಾಂತವಾಗಿದ್ದ ಬೆಳಗಾವಿ ಈಗ ಬಸ್ ಕಂಡಕ್ಟರ್ ಮೇಲಿನ ಹಲ್ಲೆಯಿಂದಾಗಿ ಮತ್ತೆ ಧಗಧಗಿಸುತ್ತಿದೆ. ಇದನ್ನೂ ಓದಿ: ಮಂತ್ರಾಲಯಕ್ಕೆ ಶಿವಣ್ಣ ಭೇಟಿ – ರಾಯರ ವೃಂದಾವನಕ್ಕೆ ವಿಶೇಷ ಪೂಜೆ

  • 10 ರೂ.ಗಾಗಿ ನಿವೃತ್ತ IAS ಅಧಿಕಾರಿಗೆ ಬಸ್‌ ಕಂಡಕ್ಟರ್‌ನಿಂದ ಹಲ್ಲೆ

    10 ರೂ.ಗಾಗಿ ನಿವೃತ್ತ IAS ಅಧಿಕಾರಿಗೆ ಬಸ್‌ ಕಂಡಕ್ಟರ್‌ನಿಂದ ಹಲ್ಲೆ

    ಜೈಪುರ: 10 ರೂ.ಗಾಗಿ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರ (Retired IAS Officer) ಮೇಲೆ ಬಸ್‌ ಕಂಡಕ್ಟರ್‌ ಹಲ್ಲೆ ನಡೆಸಿರುವ ಘಟನೆ ಜೈಪುರದಲ್ಲಿ ನಡೆದಿದೆ.

    ನಿವೃತ್ತ ಅಧಿಕಾರಿ ಆರ್.ಎಲ್. ಮೀನ ಹಲ್ಲೆಗೆ ಒಳಗಾದ ನಿವೃತ್ತ ಅಧಿಕಾರಿ. ಇವರು ಆಗ್ರಾ ರಸ್ತೆಯ ಕನೋಟಾ ಬಸ್ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಕಂಡಕ್ಟರ್ (Bus Conductor) ನಿಲ್ದಾಣ ಬಂದಿದೆ ಎಂದು ತಿಳಿಸಿಲ್ಲ. ನಂತರ ಬಸ್ ನೈಲಾದಲ್ಲಿ ಮುಂದಿನ ನಿಲ್ದಾಣ ತಲುಪಿತು. ಮುಂದಿನ ನಿಲ್ದಾಣಕ್ಕೆ ಹೆಚ್ಚುವರಿ 10 ರೂ. ಪಾವತಿಸಿ ಎಂದು ಕಂಡಕ್ಟರ್‌ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ.

    ಶುಕ್ರವಾರ ಈ ಘಟನೆ ನಡೆದಿದ್ದು, ಆ ಘಟನೆಯ ವೀಡಿಯೋ ವೈರಲ್ ಆಗಿದೆ. ಬಲಿಪಶು ಸರಿಯಾದ ಬಸ್ ನಿಲ್ದಾಣವನ್ನು ತಪ್ಪಿಸಿಕೊಂಡಾಗ, ಮುಂದಿನ ನಿಲ್ದಾಣದವರೆಗೆ ಪ್ರಯಾಣಕ್ಕೆ 10 ರೂ. ಹೆಚ್ಚುವರಿ ಶುಲ್ಕ ಪಾವತಿಸಲು ಕಂಡಕ್ಟರ್‌ ಕೇಳಿದ್ದರು. ಹೆಚ್ಚುವರಿ ಪ್ರಯಾಣ ದರ ನೀಡಲು ನಿರಾಕರಿಸಿದ್ದಕ್ಕೆ, ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ರಸ್ತೆಗಿಳಿದ ಗಜರಾಜ – ನಾಲ್ಕು ಕಿಮೀ ಟ್ರಾಫಿಕ್ ಜಾಮ್!

    ಹೆಚ್ಚುವರಿ ಶುಲ್ಕದ ವಿಚಾರಕ್ಕೆ ಕಂಡಕ್ಟರ್ ಮತ್ತು ನಿವೃತ್ತ ಅಧಿಕಾರಿ ಮೀನ ಅವರ ನಡುವೆ ವಾಗ್ವಾದ ನಡೆಯಿತು. ಆದರೆ, ಮೀನ ಹಣ ನೀಡಲು ನಿರಾಕರಿಸಿದ್ದಾರೆ. ಕಂಡಕ್ಟರ್, ಮೀನ ಅವರನ್ನು ತಳ್ಳುತ್ತಿದ್ದಂತೆ, ಇವರು ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಕಂಡಕ್ಟರ್‌ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಹೆಲ್ಮೆಟ್ ಹಾಕದಿದ್ರೆ ಪೆಟ್ರೋಲ್ ಇಲ್ಲ; ಸಾವು-ನೋವು ತಡೆಗೆ ಯುಪಿ ಸರ್ಕಾರ ಸಜ್ಜು

  • ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷದ ಚಿನ್ನಾಭರಣ – ಪ್ರಯಾಣಿಕನಿಗೆ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್

    ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷದ ಚಿನ್ನಾಭರಣ – ಪ್ರಯಾಣಿಕನಿಗೆ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್

    ಬೀದರ್: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕ ಮರೆತು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮರಳಿಸಿ ಕಂಡಕ್ಟರ್ ಮಾನವೀಯತೆ ಮೆರೆದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.ಇದನ್ನೂ ಓದಿ: Mangaluru| ಖಾಸಗಿ ಬೀಚ್ ರೆಸಾರ್ಟ್‌ನ  ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ

    ಭಾಲ್ಕಿ (Bhalki) ನಿಲ್ದಾಣದಿಂದ ಮಹಾರಾಷ್ಟ್ರದ (Maharashtra) ನಿಲಂಗಾಕ್ಕೆ ಪ್ರಯಾಣ ಬೆಳೆಸಿದ್ದ ಮಹ್ಮದ್ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಬಸ್ಸಿನಲ್ಲಿ ಮೆರೆತು ಹೋಗಿದ್ದರು. ಚಿನ್ನಾಭರಣ ಬಸ್ಸಿನಲ್ಲಿ ಬಿಟ್ಟಿದ್ದು, ನೆನಪಾದ ಬಳಿಕ ಗಾಬರಿಗೊಂಡು ಬಸ್ ನಿಲ್ದಾಣಕ್ಕೆ ವಾಪಸಾಗಿದ್ದಾರೆ. ಬಳಿಕ ನಿರ್ವಾಹಕ ಪ್ರಕಾಶ ಹತ್ತಿರ ಚಿನ್ನಾಭರಣ ಸುರಕ್ಷಿತವಾಗಿರುವ ವಿಷಯ ಗೊತ್ತಾಗಿ ನಿಟ್ಟುಸಿರುಬಿಟ್ಟಿದ್ದಾರೆ.

    ಬೀದರ್ ಜಿಲ್ಲೆಯ ಭಾಲ್ಕಿ ಡಿಪೋದ ಬಸ್‌ನಲ್ಲಿ ಚಿನ್ನಾಭರಣ ಮರೆತು ಹೋಗಿದ್ದ ಪ್ರಯಾಣಿಕನಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮರಳಿ ಕೊಟ್ಟು ನಿರ್ವಾಹಕ ಮಾನವೀಯತೆ ಮರೆದಿದ್ದಾರೆ. ಪ್ರಕಾಶ ಪ್ರಮಾಣಿಕತೆಗೆ ಮೆಚ್ಚಿ ಪ್ರಯಾಣಿಕ ಮಹ್ಮದ್ ಅಜರ್ ಹಾಗೂ ಸಾರಿಗೆ ಅಧಿಕಾರಿಗಳು ಚಾಲಕ ಹಾಗೂ ನಿರ್ವಾಹಕನನ್ನು ಸನ್ಮಾಸಿ ಗೌರವಿಸಿದ್ದಾರೆ.ಇದನ್ನೂ ಓದಿ: ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

  • ಕಂಡಕ್ಟರ್‌ಗಳಿಗೆ ಪಜೀತಿ ತಂದ ಶಕ್ತಿ ಯೋಜನೆ – ಮಹಿಳಾ ಪ್ರಯಾಣಿಕರಿಂದ ಕೆಲಸ ಕಳೆದುಕೊಳ್ಳೋ ಭೀತಿ

    ಕಂಡಕ್ಟರ್‌ಗಳಿಗೆ ಪಜೀತಿ ತಂದ ಶಕ್ತಿ ಯೋಜನೆ – ಮಹಿಳಾ ಪ್ರಯಾಣಿಕರಿಂದ ಕೆಲಸ ಕಳೆದುಕೊಳ್ಳೋ ಭೀತಿ

    ಬೆಂಗಳೂರು: ಶಕ್ತಿ ಯೋಜನೆ (Shakti Scheme) ರಾಜ್ಯದ ಹೆಣ್ಣುಮಕ್ಕಳಿಗೆ ವರದಾನವಾಗಿದೆ. ಆದರೆ ಕಂಡಕ್ಟರ್‌ಗಳಿಗೆ (Conductor) ಮಾತ್ರ ಕೆಲಸ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ದಯಮಾಡಿ ನಮ್ಮನ್ನು ಕಾಪಾಡಿ ಅಂತ ಸಾರಿಗೆ ಸಚಿವರಿಗೆ ಕಂಡಕ್ಟರ್‌ಗಳು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ.

    ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಯೋಜನೆ ತುಂಬಾ ಅನುಕೂಲವಾಗಿದೆ. ಆದರೆ ಅದೇ ಯೋಜನೆ ನಿರ್ವಾಹಕರ ಕೆಲಸಕ್ಕೆ ಕುತ್ತು ತರುತ್ತಿದೆ. ಮಹಿಳಾ ಪ್ರಯಾಣಿಕರು ಮಾಡುವ ಎಡವಟ್ಟಿನಿಂದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗಳು ಕೆಲಸ ಕೆಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಹಿಳಾ ಪ್ರಯಾಣಿಕರು ಯಾವ ಸ್ಥಳಕ್ಕೆ ಹೋಗಬೇಕೋ, ಅಲ್ಲಿಗೆ ಶೂನ್ಯ ದರದ ಟಿಕೆಟ್ ಪಡೆದು, ಬೇರೊಂದು ನಿಲ್ದಾಣಗಳಲ್ಲಿ ಇಳಿದು ಹೋಗುತ್ತಿದ್ದಾರೆ. ಈ ವೇಳೆ ಟಿಕೆಟ್ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬಂದು ಪರಿಶೀಲಿಸಿದಾಗ, ಪ್ಯಾಸೆಂಜರ್ ಇರುವುದಿಲ್ಲ. ಆದರೆ ಟಿಕೆಟ್ ರಿಸಿವ್ ಆಗಿರುತ್ತದೆ. ಇದಕ್ಕೆ ಕಂಡಕ್ಟರ್‌ಗಳನ್ನು ಹೊಣೆಯಾಗಿಸಿ, ತನಿಖಾಧಿಕಾರಿಗಳು ದಂಡ ಹಾಕೋದು, ಅಮಾನತು ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ತಪ್ಪು ಮಾಡದಿದ್ದರೂ ಕಂಡಕ್ಟರ್‌ಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಆಯ್ತು ಈಗ ಪಾಕ್‌ನಲ್ಲಿ ಪ್ರತಿಭಟನೆ – ಇಮ್ರಾನ್‌ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಸಾವಿರಾರು ಬೆಂಬಲಿಗರು

    ಪ್ರಯಾಣದ ವೇಳೆ ಬಸ್‌ಗಳು ಯಾವುದಾದರೂ ಡಾಬಾ, ಹೊಟೇಲ್‌ಗಳಲ್ಲಿ ನಿಲ್ಲಿಸಿದಾಗ, ಒಂದು ಬಸ್‌ನಲ್ಲಿ ಟಿಕೆಟ್ ಪಡೆದು, ಇನ್ನೊಂದು ಬಸ್‌ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಟಿಕೆಟ್ ಪಡೆದ ಬಸ್‌ನಲ್ಲಿ ಆ ಪ್ರಯಾಣಿಕರು ಇಲ್ಲದಿದ್ದಾಗ ಅನಿವಾರ್ಯವಾಗಿ ಅವರಿಗಾಗಿ ಕಾಯುತ್ತಾರೆ. ಇದರಿಂದ ಇತರೆ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಬಸ್ ನಿರ್ವಾಹಕರಿಗೆ ಆಗುತ್ತಿರುವ ಈ ಸಮಸ್ಯೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಗಮನಕ್ಕೂ ಬಂದಿದೆ. ಈ ಬಗ್ಗೆ ನಿಗಮದ ಎಂಡಿ ಜೊತೆ ಮಾತನಾಡಿದ್ದು, ಇದಕ್ಕೊಂದು ಪರಿಹಾರ ಹುಡುಕುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​​ಗೆ 16 ಸದಸ್ಯರ ಭಾರತ ತಂಡ ರೆಡಿ – ಯುವ ಆಟಗಾರರಿಗೆ ಮಣೆ!

  • ಪ್ರವಾದಿಯನ್ನು ಅವಮಾನಿಸಿದ್ದಕ್ಕೆ ಬಸ್ ನಿರ್ವಾಹಕನನ್ನೇ ಹೊಡೆದು ಕೊಂದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಪ್ರವಾದಿಯನ್ನು ಅವಮಾನಿಸಿದ್ದಕ್ಕೆ ಬಸ್ ನಿರ್ವಾಹಕನನ್ನೇ ಹೊಡೆದು ಕೊಂದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಲಕ್ನೋ: ಟಿಕೆಟ್ ವಿಚಾರಕ್ಕೆ ನಡೆದ ಜಗಳದಿಂದ ಬಸ್ ಕಂಡಕ್ಟರ್ ನನ್ನೇ (Bus Conductor) ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಲರೇಬ್ ಹಶ್ಮಿ (20) ಹಾಗೂ ಮೃತ ಬಸ್ ನಿರ್ವಾಹಕನನ್ನು ವಿಶ್ವಕರ್ಮ (24) ಎಂದು ಗುರುತಿಸಲಾಗಿದೆ. ಹಶ್ಮಿ ಮೊದಲ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾನೆ. ಘಟನೆಯಲ್ಲಿ ವಿಶ್ವಕರ್ಮಾ ಅವರ ಕುತ್ತಿಗೆ ಹಾಗೂ ದೇಹದಲ್ಲಿ ಗಂಭೀರ ಗಾಯಗಳಾಗಿರುವುದು ಕಂಡುಬಂದಿದೆ.

    ಉತ್ತರಪ್ರದೇಶದ (Uttarpradesh) ಪ್ರಗ್ಯಾರಾಜ್ ನಲ್ಲಿ (Pragyaraj) ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಬಳಿಕ ಯುವಕ ವೀಡಿಯೋ ಮಾಡಿದ್ದು, ಅದರಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಹತ್ಯೆಗೈದಿರುವುದಾಗಿಯೂ ತಿಳಿಸಿದ್ದಾನೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ!

    ವಿಶ್ವಕರ್ಮನನ್ನು ಕೊಲೆ ಮಾಡಿ ಬಸ್ಸಿನಿಂದ ಹಾರಿದ ಹಶ್ಮಿ ನೇರವಾಗಿ ಕಾಲೇಜು ಆವರಣದೊಳಗೆ ನುಗ್ಗಿದ್ದಾನೆ. ಬಳಿಕ ಅಲ್ಲಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಅದರಲ್ಲಿ ಕೊಲೆಗೆ ಕಾರಣವನ್ನೂ ತಿಳಿಸಿದ್ದಾನೆ. ಇಷ್ಟು ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಹೆಸರನ್ನೂ ಪ್ರಸ್ತಾಪಿಸಿದ್ದಾನೆ. ಕೊಲೆಗೆ ಬಳಸಿದ ಆಯುಧದೊಂದಿಗೆ ಹಶ್ಮಿ ಓಡುತ್ತಿರುವುದು ಇನ್ನೊಂದು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಈ ಸಂಬಂಧ ಬಸ್ ಚಾಲಕ ಮಂಗ್ಲ ಯಾದವ್ ಪ್ರತಿಕ್ರಿಯಸಿ, ಏಕಾಏಕಿ ಬಸ್ ಒಳಗಡೆ ಇಬ್ಬರು ಹೊಡೆದಾಡಿಕೊಂಡರು. ಗಲಾಟೆಯ ಶಬ್ಧ ಕೇಳಿದುತ್ತಿದ್ದಂತೆಯೇ ನಾನು ಬಸ್ ನಿಲ್ಲಿಸಿದೆ ಎಂದು ಹೇಳಿದರು. ಬಳಿಕ ಗಂಭೀರ ಗಾಯಗೊಂಡ ಕಂಡಕ್ಟರ್‍ನನ್ನು ಆಸ್ಪತ್ರೆಗೆ ದಾಖಲಿಸಿದೆವು.

    ಪ್ರಯಾಗ್‍ರಾಜ್‍ನ ಯಮುನಾನಗರ ಪ್ರದೇಶದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಭಿನವ್ ತ್ಯಾಗಿ ಮಾತನಾಡಿ, ಘಟನೆಯನ್ನು ಅನುಸರಿಸಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಗಳ ವಿವರಗಳನ್ನು ಹಂಚಿಕೊಂಡ ಡಿಸಿಪಿ, ಹಶ್ಮಿ ನಗರದ ಯುನೈಟೆಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಪ್ರಯಾಗರಾಜ್‍ನ ಹಾಜಿಗಂಜ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

  • ಸರ್ಕಾರಿ ಬಸ್ ಕಂಡಕ್ಟರ್‌ಗೆ ಮಹಿಳೆಯರಿಂದ ತರಾಟೆ – ವೀಡಿಯೋ ವೈರಲ್

    ಸರ್ಕಾರಿ ಬಸ್ ಕಂಡಕ್ಟರ್‌ಗೆ ಮಹಿಳೆಯರಿಂದ ತರಾಟೆ – ವೀಡಿಯೋ ವೈರಲ್

    ಚಿತ್ರದುರ್ಗ: ಸಾರಿಗೆ ಬಸ್ ನಿರ್ವಾಹಕನನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿರುವ ಘಟನೆ ಧರ್ಮಸ್ಥಳದಲ್ಲಿ (Dharmasthala) ನಡೆದಿದ್ದು, ಘಟನೆಯ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

    ರಾಜ್ಯ ಸರ್ಕಾರ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿ ನೀಡಿರುವ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಭಾನುವಾರ ಮಹಿಳೆಯರು ಹೇರಳವಾಗಿ ಧಾವಿಸಿದ್ದರು. ಈ ವೇಳೆ ಮಹಿಳೆಯರಿಗೆ ಅವಕಾಶ ನೀಡದೆ ಸಾರಿಗೆ ಬಸ್ ಸಂಚಾರ ಮಾಡುತ್ತಿದೆ ಎಂಬ ಆರೋಪದ ಮೇರೆಗೆ ಮಹಿಳೆಯರು ಸಾರಿಗೆ ಬಸ್‌ನ ಕಂಡಕ್ಟರ್ (Bus Conductor) ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ

    ಉಚಿತ ಪ್ರಯಾಣ ಎಂದು ಮಹಿಳೆಯರು ಸಾರಿಗೆ ಬಸ್‌ನಲ್ಲಿ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಆರಂಭಿಸಿದ್ದಾರೆ. ಅದೇ ರೀತಿ ಮಹಿಳಾಮಣಿಗಳು ಧರ್ಮಸ್ಥಳಕ್ಕೂ ಭೇಟಿ ನೀಡಿದ್ದಾರೆ. ಈ ವೇಳೆ ಧರ್ಮಸ್ಥಳದಿಂದ ಚಿತ್ರದುರ್ಗ (Chitradurga) ಮಾರ್ಗವಾಗಿ ಹೊಸಪೇಟೆಗೆ (Hospet) ಹೊರಟಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸಿನ ತುಂಬಾ ಪುರುಷರನ್ನೇ ಹತ್ತಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಹೊರಿಸಿ ಮಹಿಳೆಯರು ಕಂಡಕ್ಟರ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 80 ಅಡಿಗೆ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ – ಕುಡಿಯುವ ನೀರಿಗೆ ಶುರುವಾಗಿದೆ ಆತಂಕ

    ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡಿರುವ ಉಚಿತ ಪ್ರಯಾಣ ಗ್ಯಾರಂಟಿಯಿಂದಾಗಿ ಬಸ್ ನಿರ್ವಾಹಕರು ಭಾರೀ ಸಮಸ್ಯೆ ಎದುರಿಸುವಂತಾಗಿದೆ. ಏಕಾಏಕಿ ಮಹಿಳೆಯರು ಸರ್ಕಾರಿ ಬಸ್‌ಗೆ ಮುಗಿಬೀಳುವುದರಿಂದ ಪ್ರಾಣಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಬಸ್ ನಿರ್ವಾಹಕರು ಆತಂಕ ಹೊರಹಾಕಿದ್ದು, ಸಿಬ್ಬಂದಿಯ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನೌಕರರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಫೋನ್‍ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ ಚಾಲಕ- 26 ಮಂದಿಗೆ ಗಾಯ, ಇಬ್ಬರು ಗಂಭೀರ

  • ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ

    ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ

    ಬೀದರ್: ಕರ್ತವ್ಯ ನಿರತ ಬಸ್ ಕಂಡಕ್ಟರ್ (Bus Conductor) ಗೆ ದಿಢೀರನೆ ಎದೆನೋವು (Chest Pain) ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಸಿಗದೆ ಕಂಡಕ್ಟರ್ ಆಸ್ಪತ್ರೆಯಲ್ಲಿ ನರಳಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಆಸ್ಪತ್ರೆಯಲ್ಲಿ ನಡೆದಿದೆ.

    ಬಸವಕಲ್ಯಾಣದಿಂದ ವಿಕೆ ಸಲಗರ್ ಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಗೋಪಾಲ್ ರೆಡ್ಡಿ ಎಂಬ ಬಸ್ ಕಂಡಕ್ಟರ್ ದಿಢೀರನೆ ಎದೆ ನೋವು ಕಾಣಿಸಿಕೊಂಡ ಬಳಿಕ ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಬಸ್ ಕಂಡಕ್ಟರ್ ಕೆಲವತ್ತು ಚಿಕಿತ್ಸೆ ಸಿಗದೆ ಆಸ್ಪತ್ರೆಯಲ್ಲಿ ನರಳಾಡಿದ್ದಾರೆ.

    ಬಳಿಕ ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಚಿಕಿತ್ಸೆ ಸಿಗದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ: ಸುಮಲತಾ ವಿರುದ್ಧ ರವೀಂದ್ರ ವಾಗ್ದಾಳಿ

  • 5 ರೂಪಾಯಿಗಾಗಿ ಬಡಿದಾಡಿಕೊಂಡ ಕಂಡಕ್ಟರ್-ಪ್ರಯಾಣಿಕ

    5 ರೂಪಾಯಿಗಾಗಿ ಬಡಿದಾಡಿಕೊಂಡ ಕಂಡಕ್ಟರ್-ಪ್ರಯಾಣಿಕ

    ಕೋಲಾರ: ಟಿಕೆಟ್ ಹಿಂದೆ ಬರೆದಿದ್ದ 5 ರೂ. ಚಿಲ್ಲರೆಗಾಗಿ ಕೆಎಸ್‍ಆರ್ ಟಿಸಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾರಾರಿ ನಡೆದಿದೆ.

    ಜಿಲ್ಲೆಯ ಮುಳುಬಾಗಿಲು ಪಟ್ಟಣದ ಹಳೇ ಕೋರ್ಟ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಚಿಲ್ಲರೆ ಹಣಕ್ಕಾಗಿ ಕೆಎಸ್‍ಆರ್‍ಟಿಸಿ ಕಂಡಕ್ಟರ್ ಮತ್ತು ಪ್ರಯಾಣಿಕ ಹೊಡೆದಾಡಿಕೊಂಡಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್ ಕಂಡಕ್ಟರ್ ಟಿಕೆಟ್ ಹಿಂದೆ ಐದು ರೂಪಾಯಿ ಚಿಲ್ಲರೆ ಬರೆದುಕೊಟ್ಟಿದ್ದರು. ನಿಲ್ದಾಣ ಬರುತ್ತಿದ್ದಂತೆ ಪ್ರಯಾಣಿಕ ಚಿಲ್ಲರೆ ಕೊಡುವಂತೆ ಕೇಳಿದ್ದಾರೆ. ಈ ವೇಳೆ ನಿರ್ವಾಹಕ ಐದು ರೂಪಾಯಿ ಚಿಲ್ಲರೆ ಇಲ್ಲ ಎಂದ ಹೇಳಿದ್ದಾರೆ.

    ಐದು ರೂ. ಚಿಲ್ಲರೆಗಾಗಿ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಮಾತ್ರವಲ್ಲದೆ, ನಡು ರಸ್ತೆಯಲ್ಲಿ ಇಬ್ಬರೂ ಹೊಡೆದಾಡಿದ್ದಾರೆ. ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಕಂಡಕ್ಟರ್ ಮಾಡಿದ ಕೊರೊನಾ

    ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಕಂಡಕ್ಟರ್ ಮಾಡಿದ ಕೊರೊನಾ

    ಉಡುಪಿ: ಕಿಡಿಗೇಡಿ ಕೊರೊನಾ ವಿಶ್ವದಲ್ಲಿ ಏನೇನೋ ಅವಾಂತರ ಸೃಷ್ಟಿ ಮಾಡಿದೆ. ಉಡುಪಿಯ ಕ್ಯಾಬಿನೆಟ್ ದರ್ಜೆಯ ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಇದೇ ಕೊರೊನಾ ಕಂಡಕ್ಟರ್ ಮಾಡಿದೆ.

    ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಉಡುಪಿ ನಗರದಲ್ಲಿ ಸಿಟಿ ಬಸ್ಸಿನಲ್ಲಿ ಕಂಡಕ್ಟರ್ ಆಗಿ ರೈಟ್ ರೈಟ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಾಸಕ ರಘುಪತಿ ಭಟ್ ನೇತೃತ್ವದ ಕಡಿಯಾಳಿ ಗಣೇಶೋತ್ಸವ ಸಮಿತಿ ಖಾಸಗಿ ಬಸ್ ಮಾಲೀಕರೊಂದಿಗೆ ಸೇರಿ ಏಳು ದಿನಗಳ ಕಾಲ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಂಡಕ್ಟರ್ ಆಗಿರುತ್ತಾರೆ. ಹೀಗೆ ಕಾರ್ಯಕರ್ತರ ಸೇವೆ ನಡುವೆ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಸಹ ಕಂಡಕ್ಟರ್ ಆಗಿ ಗಮನ ಸೆಳೆದಿದ್ದಾರೆ.

    ಸಾರ್ವಜನಿಕರಿಗೆ ಸ್ಯಾನಿಟೈಸ್ ಮಾಡುವುದು, ಬಸ್ ಡ್ರೈವರಿಗೆ ರೈಟ್‍ರೈಟ್ ಹೇಳಿ ಸೂಚನೆ ನೀಡುವ ಕಾರ್ಯ ಮಾಡಿದ್ದಾರೆ. ಪಂಚಾಯತ್ ಅಧ್ಯಕ್ಷರಾಗುವ ಮೊದಲು ಸರ್ಕಾರಿ ವಾಹನಕ್ಕೆ ಚಾಲಕರಾಗಿ ಸೇವೆ ಸಲ್ಲಿಸಿದ ದಿನಕರ್ ಬಾಬು ಅಧ್ಯಕ್ಷರಾದ ಬಳಿಕವೂ ಸಾಮಾನ್ಯರಂತೆ ಓಡಾಡುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದಿನಕರ ಬಾಬು, ಕೊರೊನಾ ಸಮಯದಲ್ಲಿ ಹಲವಾರು ಸೇವೆ ಮಾಡಿದ್ದೇವೆ. ಇದು ಉಚಿತ ಬಸ್ ವ್ಯವಸ್ಥೆ. ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಒಂದು ವಾರ ಫ್ರೀ ಬಸ್ ಓಡುತ್ತಿದೆ. ಪ್ರಯಾಣಿಕರಿಗೆ ಸ್ಯಾನಿಟೈಸರ್ ಕೊಡುವುದು, ಪ್ರಯಾಣಿಕರಿಗೆ ಊರುಗಳ ಮಾಹಿತಿ ಕೊಡುವುದನ್ನು ಮಾಡಿದ್ದೇನೆ. ಇದೊಂದು ಹೊಸ ಅನುಭವ. ಚಿಕ್ಕಂದಿನಲ್ಲಿ ಡ್ರೈವರ್ ಆಗಬೇಕೆಂಬ ಆಸೆ ಇತ್ತು. ಮುಂದೆ ಚಾಲಕನಾದೆ, ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷನಾದೆ ಎಂದು ಹೇಳಿದರು.

  • ವೃದ್ಧನ ಮೇಲೆ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಗೂಂಡಾಗಿರಿ

    ವೃದ್ಧನ ಮೇಲೆ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಗೂಂಡಾಗಿರಿ

    ಧಾರವಾಡ: ಕೆಎಸ್ಆರ್‌ಟಿಸಿ ನಿರ್ವಾಹಕನೊಬ್ಬ ವೃದ್ಧನ ಮೇಲೆ ಗೂಂಡಾವರ್ತನೆ ತೋರಿದ ಘಟನೆ ಧಾರವಾಡದ ಅಳ್ನಾವರದಲ್ಲಿ ನಡೆದಿದೆ.

    ಹಳಿಯಾಳ-ಚುಂಚವಾಡ ಮಾರ್ಗದ ಬಸ್‍ನಲ್ಲಿ ಹಿರಿಯ ನಾಗರಿಕರ ರಿಯಾಯಿತಿ ಬಸ್ ಪಾಸ್ ಸಂಬಂಧ ವೃದ್ಧ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಸ್ ಅಳ್ನಾವರ ಬಸ್ ನಿಲ್ದಾಣಕ್ಕೆ ಬರ್ತಿದ್ದಂತೆಯೇ ಸಿಟ್ಟಿಗೆದ್ದ ಕಂಡಕ್ಟರ್ ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

    ವೃದ್ಧ ಓಡಿ ಹೋದರೂ ಬಿಡದೇ ಅಟ್ಟಿಸಿಕೊಂಡು ಬಂದು ಕಂಡಕ್ಟರ್ ಗೂಂಡಾಗಿರಿ ಮೆರೆದಿದ್ದಾನೆ. ಪೊಲೀಸ್ ಠಾಣೆ ಎದುರಿನಲ್ಲೇ ಇರುವ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಪೌರುಷ ಸಖತ್ ವೈರಲ್ ಆಗಿದೆ.