Tag: ಬಸ್ಕಿ

  • ನಿರ್ಬಂಧದ ನಡುವೆ ಭರಚುಕ್ಕಿ ನೋಡಲು ಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು

    ನಿರ್ಬಂಧದ ನಡುವೆ ಭರಚುಕ್ಕಿ ನೋಡಲು ಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು

    ಚಾಮರಾಜನಗರ: ಕಾವೇರಿ ಹೊರಹರಿವು ಹೆಚ್ಚಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

    ಕಾವೇರಿ ರುದ್ರ ರಮಣೀಯತೆ ಕಾಣಲು ನಿರ್ಬಂಧದ ನಡುವೆಯೂ ಜನರು ಕಳ್ಳದಾರಿ ಹಿಡಿದಿದ್ದಾರೆ. ಮಹಿಳೆಯರು ಸೇರಿದಂತೆ ಸೆಲ್ಫಿ ಹುಚ್ಚಾಟದಲ್ಲಿ ತೊಡಗಿದ್ದವರಿಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. 30ಕ್ಕೂ ಹೆಚ್ಚು ಮಂದಿಗೆ ಬುದ್ಧಿವಾದ ಹೇಳಿ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸಾವಿರ ಗಡಿದಾಟಿದ ಕೊರೊನಾ – ಬೆಂಗ್ಳೂರಲ್ಲಿ 1,013 ಕೇಸ್, 1,104 ಮಂದಿ ಡಿಸ್ಚಾರ್ಜ್

    ಕಳ್ಳದಾರಿ ಹಿಡಿದು ನಿರ್ಬಂಧವನ್ನು ಉಲ್ಲಂಘಿಸಿದವರ ಪೈಕಿ ಪುಂಡರಂತೆ ಕಂಡ 7-8 ಮಂದಿಗೆ ಪೊಲೀಸರು ಬಸ್ಕಿ ಹೊಡೆಸಿದ್ದಾರೆ. ಕಾನೂನು ಉಲ್ಲಂಘಿಸದಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಭರಚುಕ್ಕಿಯಲ್ಲಿ ಸೆಲ್ಫಿ ತೆಗೆಯಲು ಬಂದವರು ಬಸ್ಕಿ ಹೊಡೆದು ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಜೀವನಾಡಿ KRS ಭರ್ತಿ- ನಾಳೆ ಸಿಎಂ ಬಾಗಿನ ಅರ್ಪಣೆ

    Live Tv
    [brid partner=56869869 player=32851 video=960834 autoplay=true]

  • ಹೊರಗೆ ಓಡಾಡ್ತಿದ್ದ ಯುವಕನಿಗೆ ಬಸ್ಕಿ ಶಿಕ್ಷೆ

    ಹೊರಗೆ ಓಡಾಡ್ತಿದ್ದ ಯುವಕನಿಗೆ ಬಸ್ಕಿ ಶಿಕ್ಷೆ

    ಹಾವೇರಿ: ಕೊರೊನಾ ಸೋಂಕು ಹರಡೋದನ್ನ ತಡೆಯಲು ಪ್ರಧಾನಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಗೆ ಕರೆ ನೀಡಿದ್ರೂ ಮುಖಕ್ಕೆ ಕರ್ಚೀಫ್ ಕಟ್ಕೊಂಡು ಬೈಕಿನಲ್ಲಿ ಮನೆಯಿಂದ ಹೊರಗೆ ಓಡಾಡ್ತಿದ್ದ ಯುವಕನಿಗೆ ಮಹಿಳಾ ಎಎಸ್‍ಐಯೊಬ್ಬರು ಐವತ್ತು ಬಸ್ಕಿ ಹೊಡೆಸಿ ಸರಿಯಾಗಿ ಪಾಠ ಕಲಿಸಿದ ಘಟನೆ ನಡೆದಿದೆ.

    ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಲೋನ್ ಕಟ್ಟಬೇಕು ಅಂತ ಸಬೂಬು ಹೇಳ್ಕೊಂಡು ಯುವಕ ಬೈಕಿನಲ್ಲಿ ಓಡಾಡ್ತಿದ್ದ. ಇದನ್ನ ಗಮನಿಸಿದ ಹಂಸಭಾವಿ ಪೊಲೀಸ್ ಠಾಣೆ ಎಎಸ್‍ಐ ಎ.ಎಂ.ಅಸಾದಿ ಯುವಕನನ್ನ ತಡೆದು ಸರಿಯಾಗಿ ಚಾರ್ಜ್ ಮಾಡಿದ್ದಾರೆ.

    ರಸ್ತೆಯಲ್ಲೇ ಯುವಕನಿಗೆ 50 ಬಾರಿ ಬಸ್ಕಿ ಹೊಡೆಸಿ ನೀರಿಳಿಸಿದ್ದಾರೆ. ನಂತರ ಯುವಕ ಸಬೂಬು ಹೇಳಲು ಮುಂದಾದಾಗ ದೂರ ನಿಂತ್ಕೋ ಎಂದು ದೂರ ನಿಲ್ಲಿಸಿ ಪ್ರಧಾನಿ ಆದೇಶ ಮಾಡ್ತಾರಾ ಅಂದ್ರೆ ಗೊತ್ತಾಗೋದಿಲ್ವಾ.? ಹೊರಗೆ ಓಡಾಡಬೇಡ. ಮಾಸ್ಕ್ ಹಾಕ್ಕೊ ಎಂದು ಸರಿಯಾಗಿ ಪಾಠ ಮಾಡಿ ಕಳಿಸಿದ್ದಾರೆ.

    ಎಎಸ್‍ಐ ಹೊಡೆಸಿದ ಬಸ್ಕಿಗೆ ಕಂಗಾಲಾದ ಯುವಕ ಎದ್ನೋ ಬಿದ್ನೋ ಎಂದು ಬೈಕ್ ಏರಿ ಮನೆಯತ್ತ ಹೊರಟು ಹೋಗಿದ್ದಾನೆ.