Tag: ಬಸ್

  • ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್ – 19 ಪ್ರಯಾಣಿಕರು ಸಜೀವ ದಹನ

    ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್ – 19 ಪ್ರಯಾಣಿಕರು ಸಜೀವ ದಹನ

    ಜೈಪುರ: ಚಲಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ (Bus) ಬೆಂಕಿ ಕಾಣಿಸಿಕೊಂಡ ಪರಿಣಾಮ 19 ಮಂದಿ ಪ್ರಯಾಣಿಕರು ಸಜೀವ ದಹನವಾಗಿರುವ ಘಟನೆ ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ (Jaisalmer–Jodhpur Highway) ನಡೆದಿದೆ.

    ಒಟ್ಟು 57 ಮಂದಿ ಪ್ರಯಾಣಿಕರನ್ನು ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಬಸ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದಾನೆ. ಅಷ್ಟುಹೊತ್ತಿಗಾಗಲೇ ಬೆಂಕಿ ಸಂಪೂರ್ಣ ಬಸ್ ಅನ್ನು ಆವರಿಸಿಕೊಂಡಿದ್ದು, 19 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಟ್ರಂಪ್‌ಗೆ ಗೂಗಲ್‌ ಟಕ್ಕರ್‌| ವಿಶಾಖಪಟ್ಟಣದಲ್ಲಿ ಎಐ-ಹಬ್‌ಗಾಗಿ 1500 ಕೋಟಿ ಡಾಲರ್‌ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

    ಘಟನೆ ನಡೆದ ತಕ್ಷಣವೇ ಸ್ಥಳೀಯರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಲ್ಲದೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಜೈಸಲ್ಮೇರ್‌ನ ಜವಾಹರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: Udupi | ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು

    ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಜೈಸಲ್ಮೇರ್ ಜಿಲ್ಲಾಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಿದೆ. ಇದನ್ನೂ ಓದಿ: ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ – ಸ್ಪೀಕರ್‌ಗೆ ಕೊಟ್ಟಿಲ್ಲ ಟಿಕೆಟ್

    ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ. ಮಾಹಿತಿ ತಿಳಿದ ತಕ್ಷಣ ಸಿಎಂ ಭಜನ್‌ಲಾಲ್ ಶರ್ಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಇದನ್ನೂ ಓದಿ: ಅ.22 ರಂದು ಶಬರಿಮಲೆಗೆ ದ್ರೌಪದಿ ಮುರ್ಮು ಭೇಟಿ

    ರಾಜ್ಯಪಾಲ ಹರಿಭಾವು ಬಗಾಡೆ, ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಮತ್ತು ಇತರ ನಾಯಕರು ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಮೀನಿಗೆ ತೆಂಗಿನಕಾಯಿ ಕೀಳಲು ಹೋಗಿದ್ದಾಗ ಅವಘಡ – ಅಕ್ರಮ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು

  • ಹಬ್ಬಕ್ಕೆ ಸಾಲು ಸಾಲು ರಜೆ – ಖಾಸಗಿ ಬಸ್ ಪ್ರಯಾಣ ದರ ಏರಿಕೆ, ನಿಮ್ಮೂರಿಗೆ ಎಷ್ಟು ನೋಡಿ!

    ಹಬ್ಬಕ್ಕೆ ಸಾಲು ಸಾಲು ರಜೆ – ಖಾಸಗಿ ಬಸ್ ಪ್ರಯಾಣ ದರ ಏರಿಕೆ, ನಿಮ್ಮೂರಿಗೆ ಎಷ್ಟು ನೋಡಿ!

    ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಕುಟುಂಬದವರೊಂದಿಗೆ ಹಬ್ಬ ಆಚರಿಸಲು ಜನ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಇದೇ ಶುಕ್ರವಾರವೇ ಹೊರಡುತ್ತಿದ್ದಾರೆ. ಆದ್ರೇ ಇದನ್ನೇ ಬಂಡವಾಳವಾಗಿಸಿಕೊಂಡ ಪ್ರೈವೇಟ್‌ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆಗಿಳಿದಿವೆ.

    ಅಜ್ಞಾನವನ್ನು ಕಳೆದು ಬದುಕಿಗೆ ಬೆಳಕನ್ನು ಕೊಡೋ ಬೆಳಕಿನ ಹಬ್ಬ ದೀಪಾವಳಿಗೆ ಕೌಂಟ್‌ಡೌನ್ ಶುರು ಆಗಿದೆ. ಬೆಂಗಳೂರಿನ ಜನ ತಮ್ಮ ಕುಟುಂಬದವರೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ಹೊರಡಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ರಜೆಯ ಯೋಜನೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಇದೇ ಶುಕ್ರವಾರ 17ರಂದು ರಾತ್ರಿಯೇ ಹೊರಡೋ ಪ್ಲಾನ್‌ ಮಾಡಿದ್ದಾರೆ. 18 ಶನಿವಾರ, 19 ಭಾನುವಾರ, 20 ನರಕ ಚತುರ್ದಶಿ, 21 ಅಮಾವ್ಯಾಸೆ, 22 ದೀಪಾವಳಿಯಿದೆ. ಹೀಗಾಗಿ ಸಾಲು ಸಾಲು ರಜೆ ಬಂದಿವೆ. ಇದನ್ನೂ ಓದಿ: ದೀಪಾವಳಿಗೆ ಬೆಂಗಳೂರಿನಿಂದ ಹೆಚ್ಚುವರಿ KSRTC ಬಸ್ – ನಿಮ್ಮ ಊರಿಗೂ ಇದ್ಯಾ ಪರಿಶೀಲಿಸಿ

    ಪ್ರತಿ ಸಲ ಯಾವುದೇ ಹಬ್ಬ ಬಂದ್ರೂ ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಿಸಿ, ಪ್ರಯಾಣಿಕರ ಜೇಬಿಗೆ ಬರೆ ಹಾಕೋದು ಮಾಮೂಲಿಯಾಗಿದೆ. ಅದ್ರಂತೆ ಇದೇ ಶುಕ್ರವಾರ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ತೆರಳೋ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ದುಪ್ಪಟು ಮಾಡಿವೆ. ಇನ್ನೂ ಕೆಲ ಬಸ್‌ಗಳು 50% ಟಿಕೆಟ್ ದರ ಏರಿಕೆ ಮಾಡಿದ್ದು, ಈ ಸೀಜನ್ 30%ವರೆಗೂ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಅಂತಾರೆ ಖಾಸಗಿ ಬಸ್‌ಗಳ ಮಾಲೀಕರು.

    ಖಾಸಗಿ ಬಸ್ ದುಪ್ಪಟ್ಟು ದುಬಾರಿ
    ಬೆಂಗಳೂರು-ಹುಬ್ಬಳ್ಳಿ
    ಹಳೆ ದರ: 900-1,000 ರೂ.
    ಹೊಸ ದರ: 2,500-3,000 ರೂ.

    ಬೆಂಗಳೂರು-ಬೆಳಗಾವಿ
    ಹಳೆ ದರ: 1,500-1,600ರೂ.
    ಹೊಸ ದರ: 2,600-4,000ರೂ.

    ಬೆಂಗಳೂರು-ಗದಗ
    ಹಳೆ ದರ: 1,100-1,200ರೂ.
    ಹೊಸ ದರ: 1,800-2,000ರೂ.

    ಬೆಂಗಳೂರು-ಮಂಗಳೂರು
    ಹಳೆ ದರ: 1,300-1,400ರೂ.
    ಹೊಸ ದರ: 2,300-2,700ರೂ.

    ಬೆಂಗಳೂರು-ಉಡುಪಿ
    ಹಳೆ ದರ: 1,500-1,700ರೂ.
    ಹೊಸ ದರ: 2,000-2,300ರೂ.

    ಬೆಂಗಳೂರು-ಬೀದರ್
    ಹಳೆ ದರ: 1,700-1,800ರೂ.
    ಹೊಸ ದರ:- 2,500-3,500ರೂ.

    ಬೆಂಗಳೂರು-ರಾಯಚೂರು
    ಹಳೆ ದರ: 1,000-1,200ರೂ.
    ಹೊಸ ದರ: 1,900-2,700ರೂ

    ಬೆಂಗಳೂರು-ಕಲಬುರಗಿ
    ಹಳೆ ದರ: 1,700-1,800ರೂ.
    ಹೊಸ ದರ: 2,500-2,600ರೂ.

    ಇನ್ನೂ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಟಿಕೆಟ್ ದರ ಏರಿಕೆ ಸರಿಯಲ್ಲ. ಸಾರಿಗೆ ಇಲಾಖೆಯಿಂದ ಟಿಕೆಟ್ ದರ ಏರಿಕೆ ಮಾಡಿದ ಬಸ್‌ಗಳ ಕಾರ್ಯಾಚರಣೆ ಮಾಡ್ತೇವೆ. ಜನರಿಗೆ ಸಹಾಯವಾಗಲಿ ಅಂತಾನೇ 2,500 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

    ಹಬ್ಬಕ್ಕೆ ಊರಿಗೆ ಹೋಗೋದೇ ಕಷ್ಟವಾಗಿದೆ. ತಿಂಗಳೆಲ್ಲಾ ಕಷ್ಟಪಟ್ಟು ದುಡಿದ ಹಣವನ್ನು ಬಸ್‌ಗಳಿಗೆ ಹಾಕೋದಾ? ಎಂದು ಪ್ರಯಾಣಿಕರು ಬೇಸರ ಹೊರಹಾಕ್ತಿದ್ದಾರೆ. ಒಟ್ನಲ್ಲಿ ಪ್ರತಿ ಸಲ ಹಬ್ಬ ಬಂದಾಗಲೂ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿರೋದಂತೂ ಸತ್ಯ.

  • Kolar | ಮದುವೆ ಮುಗಿಸಿ ವಾಪಸ್ ಹೋಗುತ್ತಿದ್ದ ಬಸ್ ಪಲ್ಟಿ – 30ಕ್ಕೂ ಹೆಚ್ಚು ಮಂದಿಗೆ ಗಾಯ

    Kolar | ಮದುವೆ ಮುಗಿಸಿ ವಾಪಸ್ ಹೋಗುತ್ತಿದ್ದ ಬಸ್ ಪಲ್ಟಿ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಕೋಲಾರ: ಮದುವೆ ಆರತಕ್ಷತೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಬಸ್ (Bus) ನಿಯಂತ್ರಣ ತಪ್ಪಿ ಕಾಲುವೆಗೆ (Canal) ಬಿದ್ದ ಪರಿಣಾಮ ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೋಲಾರ (Kolar) ತಾಲೂಕು ಸುಗಟೂರು (Sugatur) ಗ್ರಾಮದ ಬಳಿ ನಡೆದಿದೆ.

    ಕೋಲಾರದ ವಧು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವರನ ಮದುವೆ ಆರತಕ್ಷತೆ ಕೋಲಾರ ಹೊರವಲಯದ ರತ್ನ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. ಆರತಕ್ಷತೆಗೆ ಮೂರು ಖಾಸಗಿ ಬಸ್‌ಗಳಲ್ಲಿ ಬಂದಿದ್ದ ಜನರು ಆರತಕ್ಷತೆ ಮುಗಿಸಿಕೊಂಡು ಸಂಭ್ರಮದಿಂದ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಬಸ್‌ನಲ್ಲಿ ಸುಮಾರು 55 ಜನರಿದ್ದು, ಆ ಪೈಕಿ 30 ಜನರಿಗೆ ಗಾಯಗಳಾಗಿದೆ. ಹತ್ತು ಜನರಿಗೆ ಗಂಭೀರ ಗಾಯಗಳಾಗಿವೆ. ಈ ಪೈಕಿ 15 ಜನ ಮಹಿಳೆಯರು ಸೇರಿದ್ದಾರೆ. ಭೀಕರ ಅಪಘಾತದಲ್ಲಿ ಬಸ್ ಕಾಲುವೆಗೆ ಉರುಳಿದ ಪರಿಣಾಮ ಬಸ್ ನಲ್ಲಿದ್ದ ಜನರೆಲ್ಲರೂ ಬಹುತೇಕ ನೀರಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬುಕ್ ಆದ ರೈಲ್ವೆ ಟಿಕೆಟ್ ದಿನಾಂಕ ಬದಲಿಸಲು ಅವಕಾಶ

    ಘಟನೆ ನಡೆದ ವೇಳೆ ಬಸ್‌ನಲ್ಲಿದ್ದ ಜನರು ಗಾಬರಿಯಾಗಿ ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯರು ಹಾಗೂ ಬಸ್‌ನಲ್ಲಿದ್ದ ಜನರನ್ನು ರಕ್ಷಣೆ ಮಾಡಿ ಕೂಡಲೇ ಗಾಯಳುಗಳನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ಮಹಿಳೆಯರು ಮದುವೆಗೆಂದು ಹಾಕಿಕೊಂಡು ಬಂದಿದ್ದ ಚಿನ್ನದ ಒಡವೆ ಹಾಗೂ ಮೊಬೈಲ್‌ಗಳು ನೀರಿನಲ್ಲಿ ಬಿದ್ದಿವೆ ಎನ್ನಲಾಗಿದೆ. ಸದ್ಯ ಅಪಘಾತದಿಂದ ಮದುವೆ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದ ಸಂಬಂಧಿಗಳು ಆಸ್ಪತ್ರೆಗೆ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: LPG ತುಂಬಿದ್ದ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ – ಸಿಲಿಂಡರ್‌ಗಳ ಸರಣಿ ಸ್ಫೋಟ, ಕಿ.ಮೀಗಟ್ಟಲೇ ಕಾಣಿಸಿದ ಜ್ವಾಲೆ

  • ಕಲಬುರಗಿ | ದಸರಾ ಹಬ್ಬದ ಪ್ರಯುಕ್ತ 500 ಹೆಚ್ಚುವರಿ ಬಸ್ ನಿಯೋಜನೆ

    ಕಲಬುರಗಿ | ದಸರಾ ಹಬ್ಬದ ಪ್ರಯುಕ್ತ 500 ಹೆಚ್ಚುವರಿ ಬಸ್ ನಿಯೋಜನೆ

    – 4ಕ್ಕಿಂತ ಹೆಚ್ಚು ಟಿಕೆಟ್‌ ಒಟ್ಟಿಗೆ ಬುಕ್‌ ಮಾಡಿದ್ರೆ ಡಿಸ್ಕೌಂಟ್‌

    ಕಲಬುರಗಿ: ದಸರಾ ಹಬ್ಬ, ವಾರಾಂತ್ಯ ಹಾಗೂ ಸಾಲು ರಜೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (KKRTC_ ಪ್ರದೇಶದ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು ಮತ್ತು ಸೋಲಾಪೂರದ ತುಳಜಾಪುರಕ್ಕೆ ಹೋಗಿ ಬರಲು ಪ್ರಯಾಣಿಕರ ಅನುಕೂಲಕ್ಕಾಗಿ 500 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ ಸುಶೀಲಾ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸೆಪ್ಟೆಂಬರ್ 29ರ ವರೆಗೆ ಸಂಸ್ಥೆ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು (Bengaluru), ತುಳಜಾಪೂರ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ ಸೆಪ್ಟೆಂಬರ್ 26 (ಇಂದಿನಿಂದ) ರಿಂದ ಸೆ.27 ಹಾಗೂ ಸೆ.30 ರಂದು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿ ವಾಹನಗಳನ್ನ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ. ಇನ್ನು ಹಬ್ಬ ಮತ್ತು ರಜೆ ಮುಗಿದ ನಂತರ ಅಕ್ಟೋಬರ್ 3 ರಿಂದ 5ರ ವರೆಗೆ ಸಹ ಸಂಚಾರ ದಟ್ಟಣೆಗೆ ಅನುಗುಣವಾಗಿ ವಾಹನಗಳ ಕಾರ್ಯಾಚರಣೆ ನಡೆಯಲಿದೆ ಎಂದಿದ್ದಾರೆ.

    ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ನಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶವಿದ್ದು, ಪ್ರಯಾಣಿಕರು ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿರುವ 18 ಗಣಕೀಕೃತ ಬುಕ್ಕಿಂಗ್ ಕೌಂಟರ್‌ಗಳ ಮುಖಾಂತರ ಆಸನ ಬುಕಿಂಗ್‌ ಮಾಡಬಹುದಾಗಿದೆ. 4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ಅಥವಾ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯತಿ ನೀಡಲಾಗುತ್ತಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ, ಪಿಕ್ ಅಪ್ ಪಾಯಿಂಟ್ ಸ್ಥಳ ಮತ್ತು ಹೆಸರು ಗಮನಿಸಬೇಕೆಂದು ಅವರು ತಿಳಿಸಿದ್ದಾರೆ.

  • ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು

    ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು

    – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಬಿಹಾರ ಸಿಎಂ

    ಕೋಲ್ಕತ್ತಾ: ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ (Bus) ಗುದ್ದಿದ್ದ ಪರಿಣಾಮ ಬಸ್ಸಿನಲ್ಲಿದ್ದ 10 ಮಂದಿ ಯಾತ್ರಿಕರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಬುರ್ದ್ವಾನ್‌ನಲ್ಲಿ ನಡೆದಿದೆ.

    ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿನ ಯಾತ್ರಿಕರು ದಕ್ಷಿಣ 24 ಪರಗಣ ಜಿಲ್ಲೆಯ ಗಂಗಾಸಾಗರ್‌ಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಎಂಟು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌| ಜೈನ ಧರ್ಮದ ಬಗ್ಗೆ ಅವಹೇಳನ – ಯುವಕ ಅರೆಸ್ಟ್‌

    ಅಪಘಾತದಲ್ಲಿ 6 ಮಕ್ಕಳು ಸೇರಿ 35 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಗಸ್ಟ್ 8 ರಂದು ಮೋತಿಹಾರಿಯಿಂದ ಯಾತ್ರಿಕರು ದಿಯೋಘರ್‌ಗೆ ಭೇಟಿ ನೀಡಿ, ನಂತರ ಗಂಗಾಸಾಗರ್‌ಗೆ ತೆರಳಿ ಹಿಂತಿರುಗುತ್ತಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜಕೀಯದ ಬಗ್ಗೆ ಚರ್ಚೆ ಬೇಡ – ರಾಜಣ್ಣ ಬಗ್ಗೆ ಕೇಳಿದ್ದಕ್ಕೆ ಜಾರಕಿಹೊಳಿ ಉತ್ತರ

    ಘಟನೆ ಕುರಿತು ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ.

  • Shivamogga | ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ – ಇಬ್ಬರು ದುರ್ಮರಣ, 13ಕ್ಕೂ ಹೆಚ್ಚು ಮಂದಿಗೆ ಗಾಯ

    Shivamogga | ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ – ಇಬ್ಬರು ದುರ್ಮರಣ, 13ಕ್ಕೂ ಹೆಚ್ಚು ಮಂದಿಗೆ ಗಾಯ

    ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಗೆ (Lorry) ಬಸ್ (Bus) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶಿವಮೊಗ್ಗದ (Shivamogga) ತೀರ್ಥಹಳ್ಳಿ (Thirthahalli) ರಸ್ತೆಯಲ್ಲಿ ನಡೆದಿದೆ.

    ಶಿವಮೊಗ್ಗ ತಾಲೂಕಿನ ಗಾಜನೂರು ಅಗ್ರಹಾರದ ಬಳಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ ಕಂಡಕ್ಟರ್ ಅಣ್ಣಪ್ಪ (40), ಪ್ರಯಾಣಿಕರಾದ ಹರ್ಷಿತ (35) ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉಮೇಶ್ (50), ಪ್ರಸಾದ್ (40), ವಿಷ್ಣು (21), ಮಂಜುನಾಥ್ (45), ಸುಜಾತ (40), ಆನಂದ್ ನಾಯ್ಕ್ (50), ನೀಲಾಂಬಿಕಾ (45), ಪ್ರಸಾದ್ (43), ಬಿಂದು (20), ಶಂಶಾಂಕ್ (20), ಲಕ್ಷ್ಮೀ (35), ಶ್ರೀರಾಮುಲು (42) ಹಾಗೂ ಕಾರ್ತಿಕ್ (32) ಎಂಬವರು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್

    ದುರ್ಗಾಂಬ ಬಸ್ ಮಂಗಳೂರಿನಿಂದ ಚಳ್ಳಕೆರೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿ ಅಮಾನತು

  • ಫ್ರೀ ಬಸ್ ಎಫೆಕ್ಟ್ – ಉಸಿರುಗಟ್ಟಿ ಕಾಪಾಡಿ ಎಂದು ಕೂಗಿಕೊಂಡ ಮಹಿಳೆ

    ಫ್ರೀ ಬಸ್ ಎಫೆಕ್ಟ್ – ಉಸಿರುಗಟ್ಟಿ ಕಾಪಾಡಿ ಎಂದು ಕೂಗಿಕೊಂಡ ಮಹಿಳೆ

    ತುಮಕೂರು: ಮಹಿಳಾ ಪ್ರಯಾಣಿಕರಿಗಾಗಿ ಸರ್ಕಾರ ನೀಡಿರುವ ಫ್ರೀ ಬಸ್ ಯೋಜನೆ (Shakti Scheme) ಹಲವು ಫಜೀತಿ ಸೃಷ್ಟಿ ಮಾಡುತ್ತಿದೆ. ಮೈಸೂರಿನಿಂದ ತುಮಕೂರಿಗೆ (Tumakuru) ಸಂಚರಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯೊಬ್ಬರು ಉಸಿರುಗಟ್ಟಿ ಕಿರುಚಾಡಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ (Kunigal) ಪಟ್ಟಣದಲ್ಲಿ ನಡೆದಿದೆ.

    ಅತಿಯಾದ ಜನಸಂದಣಿಯಲ್ಲಿ ಬಸ್‌ನೊಳಗೆ ಉಂಟಾದ ತೀವ್ರ ನೂಕಾಟ-ತಳ್ಳಾಟದಿಂದ ಮಹಿಳೆಯೊಬ್ಬರಿಗೆ ಉಸಿರಾಡಲು ತೀವ್ರ ತೊಂದರೆ ಉಂಟಾಗಿದೆ. ನನ್ನನ್ನು ಕಾಪಾಡಿ, ಬಸ್ಸಿನಿಂದ ಕೆಳಗಿಳಿಸಿ ಎಂದು ಜೋರಾಗಿ ಮಹಿಳಾ ಪ್ರಯಾಣಿಕರೊಬ್ಬರು ಕೂಗಿಕೊಂಡಿದ್ದಾರೆ. ತಕ್ಷಣವೇ ಬಸ್ಸು ನಿಲ್ಲಿಸಿದ ನಿರ್ವಾಹಕರು ಮಹಿಳೆಯನ್ನು ಕೆಳಗಿಳಿಸಿದ್ದಾರೆ. ಇದನ್ನೂ ಓದಿ: ಹಳೆ ಬೇರು ಹೊಸ ಚಿಗುರು ರೀತಿ ವಿಜಯೇಂದ್ರ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತಿದ್ದಾರೆ: ರೇಣುಕಾಚಾರ್ಯ

    ಈ ಬಸ್ ಮೈಸೂರು ತುಮಕೂರು ಮಾರ್ಗದಲ್ಲಿ ಸಂಚರಿಸುತ್ತಿತ್ತು. ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿದ್ದ ಮಹಿಳಾ ತಂಡ ಈ ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.  ಇದನ್ನೂ ಓದಿ: ಕಾಡಾನೆ ದಾಳಿ – ಮನೆ ಮೇಲೆ ತೆಂಗಿನ ಮರ ಬಿದ್ದು ಲಕ್ಷಾಂತರ ರೂ. ನಷ್ಟ

  • J&K | ಮೂರು ಬಸ್‌ಗಳ ನಡುವೆ ಅಪಘಾತ – 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರಿಗೆ ಗಾಯ

    J&K | ಮೂರು ಬಸ್‌ಗಳ ನಡುವೆ ಅಪಘಾತ – 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರಿಗೆ ಗಾಯ

    ಶ್ರೀನಗರ: ಮೂರು ಬಸ್‌ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು (Amarnath Yatra) ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ (Jammu And Kashmir) ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ನಡೆದಿದೆ.

    ಗಾಯಾಳು ಯಾತ್ರಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲ್ಲಾ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರು | ಕಸ ವಿಲೇವಾರಿ ವಾಹನಗಳನ್ನು ಕದ್ದೊಯ್ದ ಕಳ್ಳರು

    ಅಮರನಾಥ ಯಾತ್ರೆಗಾಗಿ ಬೇಸ್ ಕ್ಯಾಂಪ್‌ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂರು ಬಸ್‌ಗಳು ಹಾನಿಗೊಳಗಾಗಿವೆ. ಬಸ್ಸಿನಲ್ಲಿದ್ದ ಉಳಿದ ಯಾತ್ರಿಕರಿಗೆ ಮೀಸಲು ಬಸ್ ವ್ಯವಸ್ಥೆ ಮಾಡಲಾಗಿದ್ದು, ಯಾತ್ರಿಕರು ಪ್ರಯಾಣ ಮುಂದುವರಿಸಿದ್ದಾರೆ. ಇದನ್ನೂ ಓದಿ: ಜಸ್ಟ್‌ 5 ಸಾವಿರಕ್ಕೆ ಸ್ನೇಹಿತರಿಂದಲೇ ಉತ್ತರ ಕರ್ನಾಟಕದ ಯುವ ಗಾಯಕ ಮಾರುತಿ ಲಠ್ಠೆ ಬರ್ಬರ ಕೊಲೆ

  • ಪ್ರಪಾತದ ಬಳಿ ಬಸ್ ಪಲ್ಟಿ – ಪ್ರಾಣಾಪಾಯದಿಂದ 25 ಪ್ರಯಾಣಿಕರು ಪಾರು

    ಪ್ರಪಾತದ ಬಳಿ ಬಸ್ ಪಲ್ಟಿ – ಪ್ರಾಣಾಪಾಯದಿಂದ 25 ಪ್ರಯಾಣಿಕರು ಪಾರು

    ಕಾರವಾರ: ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಲಾರಿಗೆ ಡಿಕ್ಕಿಯಾಗಿ ಅಪಘಾತವಾಗಿದ್ದು, ದೊಡ್ಡ ದುರ್ಘಟನೆಯಿಂದ ಪಾರಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಬೆಂಗಳೂರಿನಿಂದ 25 ಪ್ರಯಾಣಿಕರನ್ನು ಗೋವಾದ ಕಡೆ ಕರೆದೊಯ್ಯುತ್ತಿದ್ದ ಬಸ್ ಅರೆಬೈಲ್ ಘಟ್ಟದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಲಾರಿಗೆ ಗುದ್ದಿ ಪಲ್ಟಿಯಾಗಿದೆ. ಇದನ್ನೂ ಓದಿ: ಕೈದಿಗಳು 6 ಸಾವಿರ ಕೊಟ್ರೆ ಕೀ ಪ್ಯಾಡ್ ಫೋನ್, 15,000ಕ್ಕೆ ಆ್ಯಂಡ್ರಾಡ್ ಫೋನ್ – ಮೈಸೂರು ಕೇಂದ್ರ ಕಾರಾಗೃಹದ ಸ್ಥಿತಿ ಬಿಚ್ಚಿಟ್ಟ ಸರ್ಕಾರಿ ಸದಸ್ಯ

    ಈ ವೇಳೆ ಬಸ್ ಪ್ರಪಾತಕ್ಕೆ ಬೀಳದೆ ಅರ್ಧದಲ್ಲೇ ನಿಂತಿದ್ದು, 25 ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿದೆ ಬಚಾವ್ ಆಗಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Davanagere | ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ – 40ಕ್ಕೂ ಹೆಚ್ಚು ಮಂದಿಗೆ ಗಾಯ

    Davanagere | ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ – 40ಕ್ಕೂ ಹೆಚ್ಚು ಮಂದಿಗೆ ಗಾಯ

    ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಇಲಾಖೆಯ ಬಸ್ (Bus) ಪಲ್ಟಿಯಾದ ಪರಿಣಾಮ 40ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

    ದಾವಣಗೆರೆ ತಾಲೂಕಿನ ಆಲೇಕಲ್ಲು (Alekallu) ಗ್ರಾಮದ ಬಳಿ ಘಟನೆ ನಡೆದಿದೆ. ಎದುರಿಗೆ ಕುರಿಹಿಂಡು ಬಂದ ಹಿನ್ನೆಲೆ ಪಕ್ಕ ತೆಗದುಕೊಳ್ಳಲು ಹೋಗಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

    ಬಸ್ ಹುಲಿಕಟ್ಟೆಯಿಂದ ದಾವಣಗೆರೆಗೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಬಸ್ಸಿನಲ್ಲಿದ್ದ ಜನರನ್ನು ಸ್ಥಳೀಯರು ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ