Tag: ಬಸವ ಭೂಷಣ ಪ್ರಶಸ್ತಿ

  • ಮುರುಘಾ ಶ್ರೀ ಬಂಧನದ ಬೆನ್ನಲ್ಲೇ ಪ್ರಶಸ್ತಿ ವಾಪಸ್ ಅಭಿಯಾನ!

    ಮುರುಘಾ ಶ್ರೀ ಬಂಧನದ ಬೆನ್ನಲ್ಲೇ ಪ್ರಶಸ್ತಿ ವಾಪಸ್ ಅಭಿಯಾನ!

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶರಣರ ಬಂಧನದ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಶಸ್ತಿ ವಾಪಸ್ ಅಭಿಯಾನ ನಡೆಯುತ್ತಿದೆ.

    ಬಸವ ಭೂಷಣ ಪ್ರಶಸ್ತಿ ವಾಪಸ್ ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ. ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಸಿಎಂಗೆ ಈ ಪತ್ರ ಬರೆದಿದ್ದಾರೆ. ಸಿಎಂ ಅವರು ಮುರುಘಾ ಶ್ರೀಗಳಿಂದ ಬಸವ ಭೂಷಣ ಪ್ರಶಸ್ತಿ ಪಡೆದಿದ್ದರು. ಇದೀಗ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದರಿಂದ ಪ್ರಶಸ್ತಿ ವಾಪಸ್ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.

    ಈಗಾಗಲೇ ಖ್ಯಾತ ಪತ್ರಕರ್ತ ಪೊ.ಸಾಯಿನಾಥ್ ಬಸವಶ್ರೀ ಪ್ರಶಸ್ತಿ ವಾಪಸ್ ನೀಡುವುದಾಗಿ ಘೋಷಿಸಿದ್ದಾರೆ. ಸಿಎಂ ಕೂಡ ಪ್ರಶಸ್ತಿ ವಾಪಸ್ ನೀಡಿ, ತನಿಖೆ ಮಾಡುತ್ತಿರುವ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಬೇಕು. ಮುರುಘಾ ಶ್ರೀಗಳಿಂದ ಅಧಿಕಾರಿಗಳು ಕೂಡ ತಾವು ಪಡೆದ ಪ್ರಶಸ್ತಿಗಳನ್ನ ಹಿಂದಕ್ಕೆ ನೀಡುವಂತೆ ಸುತ್ತೋಲೆ ಹೊರಡಿಸಿ ಎಂದು ಸಿಎಂ ಪತ್ರದಲ್ಲಿ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ – ಮುರುಘಾ ಶ್ರೀಗೆ ಸೋಮವಾರದವರೆಗಿಲ್ಲ ಜಾಮೀನು

    Live Tv
    [brid partner=56869869 player=32851 video=960834 autoplay=true]

  • ಡಿಸಿಪಿ ಚನ್ನಣ್ಣನವರ್ ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿಗೆ ಆಯ್ಕೆ

    ಡಿಸಿಪಿ ಚನ್ನಣ್ಣನವರ್ ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿಗೆ ಆಯ್ಕೆ

    ಬೆಂಗಳೂರು: ಕರ್ತವ್ಯ ನಿಷ್ಠೆಯಿಂದ ಹೆಸರುವಾಸಿಯಾಗಿರುವ ಪಶ್ಚಿಮ ವಲಯದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಅವರು ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಬಸವ ಬಳಗದ ಎನ್.ಎಂ.ಶಿವಪ್ರಕಾಶ್ ಅವರು ಮಂಗಳವಾರ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಬಸವ ಭವನದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಪ್ರತಿವರ್ಷವು ವಿವಿಧ ಕ್ಷೇತ್ರಗಳಲ್ಲಿ ಬಸವ ತತ್ವದಂತೆ ಜೀವನ ನಡೆಸಿದ ಹಾಗೂ ಸಾಧನೆ ಮಾಡಿರುವ ಸಾಧಕರಿಗೆ ಈ ಬಸವ ಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ರವಿ ಡಿ. ಚನ್ನಣ್ಣನವರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಮುಂದಿನ ತಿಂಗಳು ಸೆಪ್ಟೆಂಬರ್ 2ರಂದು ಭಾನುವಾರ ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವಚನ ಚಿಂತನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಬಸವ ಭೂಷಣ ಪ್ರಶಸ್ತಿಯು 11 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

    ಈ ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕ, ಚೊಕ್ಕ ಹನುಮಂತಗೌಡ, ಲೆಕ್ಕಪರಿಶೋಧಕ ಕೆ.ನಾಗನಗೌಡ, ಎರ್ರೆಪ್ಪಗೌಡ ಮತ್ತು ದಿವಾಕರನಾರಾಯಣ ಪಾಲ್ಗೊಂಡಿದ್ದರು. ಈ ಬಗ್ಗೆ ತಿಳಿದ ಚನ್ನಣ್ಣನವರ್ ಅಭಿಮಾನಿಗಳು ಟ್ವಿಟ್ಟರ್ ಮೂಲಕ ಅಭಿನಂದನೆಯನ್ನು ತಿಳಿಸುತ್ತಿದ್ದಾರೆ.

    ಚನ್ನಣ್ಣನವರು ಇದೇ ವರ್ಷ ಮಾರ್ಚ್ 15 ರಂದು ಪಶ್ಚಿಮ ವಿಭಾಗದ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದ್ದರು. ಇದಕ್ಕೂ ಮುನ್ನ ಮೈಸೂರಿನಲ್ಲಿ ನಗರದ ಎಸ್‍ಪಿ ಆಗಿ ಕಾರ್ಯ ನಿರ್ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv