ನಗರದ ಬಾರ್‌ವೊಂದರಲ್ಲಿ ಸ್ನೇಹಿತರ ಜೊತೆ ಅಶೋಕ್ ಕುಳಿತಿದ್ದ. ಈ ವೇಳೆ ಕೈಯಲ್ಲಿ ಚಾಕು ಹಿಡಿದುಕೊಂಡೆ ಬಾರ್‌ಗೆ ನುಗ್ಗಿದ್ದ ಆರೋಪಿ ದಯಾನಂದ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಅಶೋಕ್ ಆರೋಪಿ ದಯಾನಂದನಿಗೆ 10 ಸಾವಿರ ರೂ. ಸಾಲ ನೀಡಿದ್ದ. ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ.
ಚಾಕು ಇರಿದ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಗಾಯಾಳು ಅಶೋಕ್‌ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಬೀದರ್: ಹಣಕಾಸಿನ ವ್ಯವಹಾರ ವಿಚಾರಕ್ಕೆ ಮನನೊಂದು ಬಿಜೆಪಿ (BJP) ಮುಖಂಡ ಹಾಗೂ ಉದ್ಯಮಿ ನಾಪತ್ತೆಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ಪಟ್ಟಣದಲ್ಲಿ ನಡೆದಿದೆ.
ಬಿಜೆಪಿ ಮುಖಂಡ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ್ ಆಪ್ತರಾಗಿರುವ ಸಂಜೀವಕುಮಾರ್ ಸುಗೂರೆ (Sanjeevkumar Sugure) ನಾಪತ್ತೆಯಾಗಿದ್ದು, ಜಿಲ್ಲಾ ಹಾಗೂ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ಜೊತೆ ಸುಗೂರೆ ಉತ್ತಮ ಒಡನಾಟ ಹೊಂದಿದ್ದಾರೆ. ಅ.13 ಭಾನುವಾರದಿಂದ ತಮ್ಮ ಮನೆಯಿಂದಲೇ ನಾಪತ್ತೆಯಾಗಿದ್ದಾರೆ.ಇದನ್ನೂ ಓದಿ: ‘ಕೆರಳಿದ ಸಿಂಹ’ ಚಿತ್ರದ ನಿರ್ದೇಶಕ ಚಿ.ದತ್ತರಾಜ್ ನಿಧನ
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾಲ್ಕೈದು ಜನರ ಹೆಸರು ಉಲ್ಲೇಖಿಸಿ ಪತ್ರ ಬರೆದಿರುವ ಮಾಹಿತಿ ಲಭಿಸಿದೆ. ಮೊಬೈಲ್, ಕಾರು ಸೇರಿದಂತೆ ಯಾವುದನ್ನು ತೆಗೆದುಕೊಂಡು ಹೋಗದೇ ನಡೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ತಮ್ಮ ನಿವಾಸದಿಂದ ಹೊರಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಹುತೇಕ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ಬೀದರ್: ತಡರಾತ್ರಿ ಧಾರಾಕಾರ ಮಳೆಗೆ (Rain) ಸಣ್ಣ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನ ಅಟ್ಟೂರು ಗ್ರಾಮದ ಬಳಿ ನಡೆದಿದೆ
ಮಳೆಗೆ ಗ್ರಾಮದ ಹಲವು ರೈತರ ಜಮೀನಿನಲ್ಲಿದ್ದ ಬಾವಿಗಳು ತುಂಬಿದ್ದು ಕೆರೆ ನೀರಿನ ರಭಸಕ್ಕೆ ಅಟ್ಟೂರು ಹಾಗೂ ಅಟ್ಟೂರು ತಾಂಡಾದ ಮಧ್ಯೆ ಇರುವ ರಸ್ತೆ ಸೇತುವೆ ಕೊಚ್ಚಿ ಹೋಗಿದೆ. ಕೋಹಿನೂರು ಹೊಬಳಿಯಲ್ಲೇ ತಡರಾತ್ರಿ 180 ಮಿಲಿ ಮೀಟರ್ ಮಳೆಯಾಗಿದೆ.
ಬೀದರ್: ವಿಶ್ವಗುರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ (Basavakalyan) ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಬಿಜೆಪಿಯಿಂದ (BJP)ಮತ್ತೊಮ್ಮೆ ಶರಣು ಸಲಗರ್ (Sharanu Salagar) ಅಗ್ನಿ ಪರೀಕ್ಷೆಗೆ ಇಳಿದರೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಎನ್ ಧರಂ ಸಿಂಗ್ (Dharam Singh) ಪುತ್ರ ವಿಜಯ್ ಸಿಂಗ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ (JDS) ಈಗಾಗಲೇ ಸೈಯದ್ ಯಾಸ್ರಬ್ ಅಲಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಬಸವಕಲ್ಯಾಣ ಕ್ಷೇತ್ರದಲ್ಲಿ ಹುಲಸೂರು ಮತ ಕ್ಷೇತ್ರದ ಕೆಲವು ಗ್ರಾಮಗಳ ವಿಲೀನಗೊಂಡಿದೆ. ಹೀಗಾಗಿ ಕ್ಷೇತ್ರದ ಸ್ವರೂಪವೂ ಬದಲಾಗಿದೆ. ಒಟ್ಟಾರೆ ಬಸವಕಲ್ಯಾಣ ಕ್ಷೇತ್ರ ಜಿಲ್ಲೆಯ ಪ್ರಮುಖ ರಾಜಕೀಯ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ.
1957ರಿಂದ ಬಸವಕಲ್ಯಾಣ ಕ್ಷೇತ್ರ ಒಟ್ಟು 15 ಚುನಾವಣೆಗಳನ್ನು ಕಂಡಿದ್ದು 16ನೇ ಚುನಾವಣೆಗೆ ಕ್ಷೇತ್ರದಲ್ಲಿ 2.41 ಲಕ್ಷ ಮತದಾರರಿದ್ದಾರೆ. ಮತದಾರ 5 ಬಾರಿ ಕಾಂಗ್ರೆಸ್‍ನ ಕೈ ಹಿಡಿದರೆ, 7 ಬಾರಿ ಜನತಾ ಪರಿವಾರಕ್ಕೆ ಮಣೆ ಹಾಕಿದ್ದಾನೆ. ಒಂದು ಬಾರಿ ಪಕ್ಷೇತರ, ಎರಡು ಸಲ ಕಮಲ ಅರಳಿದೆ. ಜಿಲ್ಲೆಯಲ್ಲೇ ಮೊದಲ ಬಾರಿ ಮಹಿಳಾ ಪ್ರತಿನಿಧಿಯನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ ಸಮಾನತೆ ಸಾರಿದ ಕ್ಷೇತ್ರ ಎನ್ನುವುದು ವಿಶೇಷ.
ಬಸವಕಲ್ಯಾಣ ಕ್ಷೇತ್ರದದಲ್ಲಿ ಈಗ ಅನುಭವ ಮಂಟಪ ಕಾಮಗಾರಿ ಭರದಿಂದ ಸಾಗುತ್ತಿದ್ದು ಜನತಾ ಪರಿವಾರದಿಂದ ಬಸವರಾಜ ಪಾಟೀಲ್ ಅಟ್ಟೂರು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ಒಂದು ಬಾರಿ ಉಪ ಚುನಾವಣೆ ನಡೆದಿದೆ.
2018ರಲ್ಲಿ ಶೇ.42.27ರಷ್ಟು ಮತ ಪಡೆದು ಕಾಂಗ್ರೆಸ್‌ನ ಬಿ. ನಾರಾಯಣರಾವ್ (B. Narayan Rao) ಗೆಲುವು ಪಡೆದಿದ್ದರು. ಬಿಜೆಪಿಯ ಮಲ್ಲಿಕಾರ್ಜುನ ಖೂಬಾಗೆ ಶೇ.30.38 ರಷ್ಟು ಮತ ಬಿದ್ದರೆ ಜೆಡಿಎಸ್ ಪಿಜಿ ಆರ್ ಸಿಂಧಿಯಾ 21.62 ರಷ್ಟು ಮತ ಪಡೆದಿದ್ದರು. 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಶೇ.41.17ರಷ್ಟು ಮತ ಪಡೆದು ಗೆದ್ದರೆ ಕಾಂಗ್ರೆಸ್‍ನ ಮಾಲಾ ಬಿ ನಾರಾಯಣರಾವ್ ಶೇ.34.17 ಮತಗಳನ್ನು ಪಡೆದು ಎರಡನೇಯ ಸ್ಥಾನ ಪಡೆದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 2,43,089 ಮತದಾರರು ಇದ್ದು ಇದರಲ್ಲಿ 1,26,681 ಪುರುಷ ಮತದಾರರು ಹಾಗೂ 1,16,408 ಮಹಿಳಾ ಮತದಾರರು ಇದ್ದಾರೆ. 60 ಸಾವಿರ ಲಿಂಗಾಯತ, 45 ಸಾವಿರ ಮರಾಠ, 50 ಸಾವಿರ ಮುಸ್ಲಿಂ, 35 ಸಾವಿರ ಎಸ್‌ಸಿ, 15 ಸಾವಿರ ಎಸ್‌ಟಿ, 18 ಸಾವಿರ ಕೋಳಿ, ಇತರೆ 20 ಸಾವಿರ ಮತದಾರರು ಇದ್ದಾರೆ. ಒಟ್ಟಾರೆಯಾಗಿ ಲಿಂಗಾಯತರು, ಮುಸ್ಲಿಮರು ಹಾಗೂ ಮರಾಠಿಗ ಮತದಾರರೇ ಇಲ್ಲಿ ಪಕ್ಷಗಳ ಗೆಲುವಿಗೆ ನಿರ್ಣಾಯಕ.
ಬಿಜೆಪಿ ಧನಾತ್ಮಕ ಅಂಶಗಳು
ಚುನಾವಣಾ ಚಾಣಕ್ಯ ಅಮಿತ್ ಶಾ ಕಲ್ಯಾಣ ಅನುಭವ ಮಂಟಪದಿಂದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಕೊಟ್ಟಿದ್ದು ಬಿಜೆಪಿಗೆ ವರದಾನ. ಎಲ್ಲರ ಜೊತೆ ಕೆಲಸ ಮಾಡುವ ಬಿಜೆಪಿಯ ಶರಣು ಸಲಗರ್ ಕಡೆ ಜನರ ಒಲವಿದೆ. ಕಲ್ಯಾಣದ ನೂತನ ಅನುಭವ ಮಂಟಪಕ್ಕೆ ಬಿಜೆಪಿ ಸರ್ಕಾರ 500 ಕೋಟಿ ರೂ. ಅನುದಾನ ನೀಡಿದ್ದು ಕಾಮಗಾರಿ ಕಾರ್ಯ ಭರದಿಂದ ಸಾಗುತ್ತಿದ್ದು ಲಿಂಗಾಯತರ ಮತಗಳು ಬಿಜೆಪಿಗೆ ಬೀಳಬಹುದು. ಮರಾಠಿಗರನ್ನು ಸೆಳೆಯಲು ಶಿವಾಜಿ ಪಾರ್ಕ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತಂದು ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ.
ಬಿಜೆಪಿ ಋಣಾತ್ಮಕ ಅಂಶಗಳು
ಕಾಂಗ್ರೆಸ್‌ನಿಂದ ವಿಜಯ್ ಸಿಂಗ್‌ಗೆ ಟಿಕೆಟ್ ಸಿಕ್ಕಿದ್ದರಿಂದ ನೇರಾನೇರ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಕೊನೆಯ ಕ್ಷಣದಲ್ಲಿ ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ಸಿಕ್ಕರೆ ತ್ರಿಕೋನ ಸ್ಪರ್ಧೆ ನಡೆಯಬಹುದು. ಕಳೆದ ಬಾರಿ ಟಿಕೆಟ್ ಸಿಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ಶಾಸಕ ಸಲಗರ್ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಹಿನ್ನಡೆಯಾಬಹುದು. ಕಾಂಗ್ರೆಸ್ ಮಾಜಿ ಸಿಎಂ ಪುತ್ರನಿಗೆ ಟಿಕೆಟ್ ಸಿಕ್ಕಿದ್ದು ಮರಾಠ, ಅಲ್ಪಸಂಖ್ಯಾತರು, ಒಬಿಸಿ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಧನಾತ್ಮಕ ಅಂಶಗಳು
ಮಾಜಿ ಸಿಎಂ ಧರಂಸಿಂಗ್ ಪುತ್ರ ವಿಜಯ್ ಸಿಂಗ್‌ಗೆ ಟಿಕೆಟ್ ಸಿಕ್ಕಿದೆ. ಮರಾಠರು, ಅಲ್ಪಸಂಖ್ಯಾತರು ಹಾಗೂ ಒಬಿಸಿ ಮತದಾರರು ಹೆಚ್ಚಾಗಿದ್ದಾರೆ. ವಿಜಯ್ ಸಿಂಗ್ ತಮ್ಮದೇಯಾದ ಕಾರ್ಯಕರ್ತರ ಹಾಗೂ ಯುವಕರ ಪಡೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಪತಿಯನ್ನು ತಬ್ಬಿ ಕಣ್ಣೀರಿಟ್ಟ ಶಿಲ್ಪಾ ಜಗದೀಶ್
ಮಲ್ಲಿಕಾರ್ಜುನ ಖೂಬಾ ಜೆಡಿಎಸ್‌ಗೆ ಮತ್ತೆ ಬಂದಿದ್ದು ಟಿಕೆಟ್ ಸಿಕ್ಕರೆ ಕಾಂಗ್ರೆಸ್ ಮತಗಳು ಜೆಡಿಎಸ್ ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. ಈ ಬಾರಿ ದಿವಂಗತ ಬಿ. ನಾರಾಯಣರಾವ್ ಅನುಕಂಪ ಮತಗಳು ಕಾಂಗ್ರೆಸ್‌ಗೆ ಬೀಳುವುದು ಅನುಮಾನ. ನೂತನ ಅನುಭವ ಮಂಟಪ ಸೇರಿದಂತೆ ವಿವಿಧ ಬಿಜೆಪಿ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು.
ಜೆಡಿಎಸ್ ಧನಾತ್ಮಕ ಅಂಶಗಳು
ವಿಜಯ್ ಸಿಂಗ್‌ಗೆ ಕಾಂಗ್ರೆಸ್ ನಿಂದ ಟಿಕೆಟ್ ಘೋಷಣೆಯಾಗಿದ್ದು ಲಿಂಗಾಯತ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಜೆಡಿಎಸ್ ಋಣಾತ್ಮಕ ಅಂಶಗಳು
ಕಲ್ಯಾಣ ನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಯಾತ್ರೆಗಳನ್ನು ಮಾಡಿದರೂ ಜೆಡಿಎಸ್‌ನಿಂದ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ನಡೆದಿಲ್ಲ. ಇನ್ನೂ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದರೂ ಯಾರಿಗೆ ಬಿ ಫಾರಂ ಸಿಗುತ್ತದೆ ಎಂಬ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿಗೆ ಬಿದ್ದಂತೆ ಪ್ರಚಾರ ಮಾಡುತ್ತಿದ್ದರೂ ಜೆಡಿಎಸ್‌ನಿಂದ ದೊಡ್ಡ ಮಟ್ಟದ ಪ್ರಚಾರ ನಡೆದಿಲ್ಲ.
ಬೆಂಗಳೂರು: 3 ವರ್ಷಗಳಲ್ಲಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಆಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಡಾ. ಚಂದ್ರಶೇಖರ್ ಬಿ ಪಾಟೀಲ್ ಪ್ರಶ್ನೆ ಕೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರು 2020ರಲ್ಲಿ ಅನುಭವ ಮಂಟಪ ನಿರ್ಮಾಣ ಮಾಡೋದಾಗಿ ಘೋಷಣೆ ಮಾಡಿದ್ದರು. ಈವರೆಗೂ ಕೆಲಸ ಪ್ರಾರಂಭ ಆಗಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಕೂಡಾ ಆಗಿಲ್ಲ. ಕೂಡಲೇ ಅನುಭವ ಮಂಟಪ ನಿರ್ಮಾಣದ ಕೆಲಸ ಪ್ರಾರಂಭ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ:ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ
ಇದಕ್ಕೆ ಉತ್ತರ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಪ್ರಕ್ರಿಯೆ ಪ್ರಾರಂಭ ಆಗಿದೆ. ಫೆಬ್ರವರಿ 12, 2022 ರಂದು 560 ಕೋಟಿ ವೆಚ್ಚದ DPRಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.2022 ರ ಮಾರ್ಚ್ 3 ರಂದು ಟೆಂಡರ್‌ಗೆ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. 3 ವರ್ಷಗಳಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಟೆಂಡರ್‌ನಲ್ಲಿ ನಿಬಂಧನೆ ಹಾಕಲಾಗಿದೆ ಅಂತ ತಿಳಿಸಿದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ಬ್ಯಾನರ್ ಹಾಕಿದವರು ಹೇಡಿಗಳು: ಖಾದರ್
ಈಗಾಗಲೇ 200 ಕೋಟಿ ಅನುದಾನ ಅನುಭವ ಮಂಟಪದ ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗಿದೆ. 101 ಎಕರೆ ಜಾಗದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತದೆ.ಇದು ಯಡಿಯೂರಪ್ಪನವರ ಕನಸ್ಸಿನ ಯೋಜನೆ. ಈಗಾಗಲೇ ಭೂಸ್ವಾಧೀನ ಮಾಡಿಕೊಳ್ಳಲು ಡಿಸಿಗೆ ಸೂಚನೆ ನೀಡಲಾಗಿದೆ. ಭೂಸ್ವಾಧೀನದಲ್ಲಿ ಏನಾದ್ರು ಸಮಸ್ಯೆ ಇದ್ದರೆ ಅದನ್ನ ಪರಿಹಾರ ಮಾಡಿ ಅನುಭವ ಮಂಟಪ ನಿರ್ಮಾಣದ ಕೆಲಸ ಮಾಡುತ್ತೇವೆ ಅಂತ ಸಚಿವರು ತಿಳಿಸಿದರು.
ಬೀದರ್: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು ಉಕ್ತಯನಲ್ಲಿ ಸಿಲುಕಿರುವ ಕನ್ನಡಿಗರು ಯಾವಾಗ ಏನಾಗುತ್ತೋ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಗಡಿ ಜಿಲ್ಲೆ ಬೀದರ್ ನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು ಅವರ ಪೋಷಕರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಮಕ್ಕಳಿಂದ ಪೋಷಕರು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದು ಸದ್ಯ ಪರಿಸ್ಥಿತಿ ಬಗ್ಗೆ ಪೋಷಕರು ಆಂತಕಗೊಂಡಿದ್ದಾರೆ. ಉಕ್ರೇನ್ ನೆಲ ಮಹಡಿಯಲ್ಲಿ ನಮ್ಮ ಮಕ್ಕಳು ವಾಸವಾಗಿದ್ದು, ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಆದಷ್ಟು ಬೇಗ ಸರ್ಕಾರ ನಮ್ಮ ಮಗನನ್ನು ಭಾರತಕ್ಕೆ ಕರೆದುಕೊಂಡು ಬಂದ್ರೆ ಒಳ್ಳೆಯದು, ಯಾಕೆಂದರೆ ನಮ್ಮ ಮಕ್ಕಳನ್ನು ನೋಡಬೇಕು ಅನಿಸುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:Russia-Ukraine Crisis: 4 ಬಸ್‍ಗಳಲ್ಲಿ 240 ವಿದ್ಯಾರ್ಥಿಗಳು ರೊಮೇನಿಯಾಗೆ ಶಿಫ್ಟ್
ಇತ್ತ ಉಕ್ರೇನ್ ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿನಿ ಜೊತೆ ಬಸವಕಲ್ಯಾಣ ತಹಶೀಲ್ದಾರ್ ವೀಡಿಯೋ ಕಾಲ್ ಮೂಲಕ ಮಾತನಾಡಿ ಅತ್ಮಸ್ಥೈರ್ಯ ತುಂಬಿದ್ದಾರೆ. ಬಸವಕಲ್ಯಾಣ ತಾಲೂಕಿನಲ್ಲಿ ನಾರಾಯಣಪೂರ್ ಗ್ರಾಮದ ವೈಷ್ಣವಿ ವಿಷ್ಣುರೆಡ್ಡಿ ಮನೆಗೆ ಭೇಟಿ ನೀಡಿದ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗಾರ ವೈಷ್ಣವಿ ಜೊತೆ ವೀಡಿಯೋ ಕಾಲ್ ನಲ್ಲಿ ಮಾತನಾಡಿದ್ರು. ಇದನ್ನೂ ಓದಿ: ನವಜಾತ ಶಿಶುಗಳಿಗೂ ಯುದ್ಧದ ಬಿಸಿ – ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದ ಹಾಲುಗಲ್ಲದ ಕಂದಮ್ಮಗಳು
ವೀಡಿಯೋ ಕಾಲ್ ಮಾಡಿದ ತಹಶೀಲ್ದಾರ್ ಗೆ ಉಕ್ರೇನ್ ನಲ್ಲಿರುವ ಸದ್ಯದ ಪರಿಸ್ಥಿತಿ ಬಗ್ಗೆ ವೈದ್ಯಕೀಯ ವಿದ್ಯಾರ್ಥಿನಿ ವೈಷ್ಣವಿ ವಿವರಣೆ ನೀಡಿದರು. ನೀವು ಒಂಥರಾ ಯೋಧರಿದ್ದಂತೆ, ಯಾವುದಕ್ಕೂ ಭಯಪಡೆಬೇಡಿ, ತಾಯ್ನಾಡಿಗೆ ನಿಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೆವೆ, ಯಾವ ಸಮಯದಲ್ಲಿ ಬೇಕಾದ್ರು ನನ್ನ ನಂಬರ್ ಗೆ ಫೋನ್ ಮಾಡಬಹುದು ಎಂದು ಹೇಳುವ ಮೂಲಕ ತಹಶೀಲ್ದಾರ್ ಧೈರ್ಯ ತುಂಬಿದ್ದಾರೆ.
ಬೀದರ್: ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಅವರು ಬಸವಕಲ್ಯಾಣದಿಂದ 20,629 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ್ದು, ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ
ಬಿಜೆಪಿ 71,012 ಮತಗಳನ್ನು ಪಡೆದರೆ ಕಾಂಗ್ರೆಸ್ 50,383 ಮತ, ಜೆಡಿಎಸ್ 11,402 ಮತಗಳನ್ನು ಪಡೆದಿದೆ. ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ವಿಸೋಮಣ್ಣ ಹಾಗೂ ಸಂಸದ ಭಗವಂತ್ ಖೂಬಾ ಈ ಚುನಾವಣೆಗೆ ರಣತಂತ್ರ ಹೆಣೆದಿದ್ದರು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು. @BJP4Karnataka
2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಿ ನಾರಾಯಣ ರಾವ್ ಈ ಕ್ಷೇತ್ರದಿಂದ ಗೆದ್ದಿದ್ದರು. ಕಾಂಗ್ರೆಸ್ 61,425 ಮತಗಳನ್ನು ಪಡೆದರೆ ಬಿಜೆಪಿ 44,153 ಮತಗಳನ್ನು ಪಡೆದಿತ್ತು.
ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಬಸವಕಲ್ಯಾಣ ಉಪಚುನಾವಣೆಯಲ್ಲಿ ಸುಸ್ಪಷ್ಟ ಜನಾದೇಶದೊಂದಿಗೆ ಗೆಲುವು ಸಾಧಿಸಿರುವ ಶ್ರೇ @salagar_sharanu ಅವರಿಗೆ ಅಭಿನಂದನೆಗಳು. ಕಾರ್ಯಕರ್ತರ ಅವಿರತ ಪರಿಶ್ರಮಗಳ ಜೊತೆಗೆ ಮುಖ್ಯಮಂತ್ರಿ ಶ್ರೀ @BSYBJP, ರಾಜ್ಯಾಧ್ಯಕ್ಷ ಶ್ರೀ @nalinkateel ಮತ್ತು ಎಲ್ಲಾ ನಾಯಕರ ಮೇಲೆ ವಿಶ್ವಾಸವಿಟ್ಟು ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ನನ್ನ ಧನ್ಯವಾದಗಳು pic.twitter.com/E6k5YoeMGS
— Vijayendra Yediyurappa (@BYVijayendra) May 2, 2021
ಬಸವಕಲ್ಯಾಣ ಉಪಚುನಾವಣೆಯಲ್ಲಿ ಸುಸ್ಪಷ್ಟ ಜನಾದೇಶದೊಂದಿಗೆ ಗೆಲುವು ಸಾಧಿಸಿರುವ ಶರಣು ಸಲಗಾರ ಅವರಿಗೆ ಅಭಿನಂದನೆಗಳು. ಕಾರ್ಯಕರ್ತರ ಅವಿರತ ಪರಿಶ್ರಮಗಳ ಜೊತೆಗೆ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಶ್ರೀ ನಳೀನ್ ಕುಮಾರ್ ಕಟೀಲ್ ಮತ್ತು ಎಲ್ಲಾ ನಾಯಕರ ಮೇಲೆ ವಿಶ್ವಾಸವಿಟ್ಟು ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ನನ್ನ ಧನ್ಯವಾದಗಳು ಎಂದು ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಶ್ರೀ ಶರಣು ಸಲಗರ ಅವರಿಗೆ ಅಭಿನಂದನೆಗಳು.
ಶ್ರೀ ಶರಣು ಸಲಗರ ಅವರನ್ನು ವಿಜಯಶಾಲಿಯಾಗಿಸಿದ ಕ್ಷೇತ್ರದ ಮತದಾರರಿಗೂ, ಗೆಲುವಿಗೆ ಶ್ರಮಿಸಿದ ಪಕ್ಷದ ನಾಯಕರು ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೂ ಅನಂತಾನಂತ ಧನ್ಯವಾದಗಳು. pic.twitter.com/F3jsikoG0S
ಬೆಂಗಳೂರು: ಉಪಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಅಂಚೆ ಮತ ಎಣಿಕೆಯಲ್ಲಿ ಬೆಳಗಾವಿ, ಮಸ್ಕಿ ಮತ್ತು ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿದೆ.
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಮತ್ತು ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಮಧ್ಯೆ ಟಫ್ ಸ್ಪರ್ಧೆ ನಡೆಯುತ್ತಿದೆ.
ಆಪರೇಷನ್ ಕಮಲದಿಂದ ತೆರವಾಗಿದ್ದ ಮಸ್ಕಿ ವಿಧಾನಸಭೆಗೆ ನಡೆದ ಬೈ ಎಲೆಕ್ಷನ್‍ನಲ್ಲಿ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ ಮತ್ತು ಕಾಂಗ್ರೆಸ್‍ನ ಬಸನಗೌಡ ತುರ್ವೀಹಾಳ್ ನಡುವೆ ನೆಕ್ ಟು ನೆಕ್ ಫೈಟ್ ನಡೆದಿದೆ. ಇಬ್ಬರು ಗೆಲ್ಲಲು ಇಲ್ಲಿ ಸಮಾನ ಅವಕಾಶಗಳಿವೆ.
ಕಾಂಗ್ರೆಸ್ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಮಲ್ಲಮ್ಮ ಮತ್ತು ಬಿಜೆಪಿಯ ಶರಣು ಸಲಗಾರ ನಡುವೆ ಸ್ಪರ್ಧೆಯಿದೆ. ಇಲ್ಲಿಯೂ ಫೋಟೋ ಫಿನಿಷ್ ಫಲಿತಾಂಶ ಹೊರಬೀಳುವ ಸಂಭವ ಹೆಚ್ಚಿದೆ. ಕೋವಿಡ್ 19 ನಿಯಮಗಳಿಂದ ಈ ಬಾರಿ ಸ್ವಲ್ಪ ತಡವಾಗಿ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಯ ಪಬ್ಲಿಕ್ ಲೆಕ್ಕ ಬಯಲಾಗಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ನಡೆದ ಉಚಪ ಚುನಾವಣೆಯಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಪಬ್ಲಿಕ್ ಟಿವಿಯ ಮತಗಟ್ಟೆ ಸಮೀಕ್ಷೆ ಹೇಳುತ್ತಿದೆ.
ಕಾಂಗ್ರೆಸ್ ಸತೀಶ್ ಜಾರಕಿಹೊಳಿ ನೀಡಿದ ಟಫ್ ಫೈಟ್ , ರೇಪ್ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಿನ ಹೊರತಾಗಿಯೂ ಸುರೇಶ್ ಅಂಗಡಿ ಪತ್ನಿ ಮಂಗಲಾ ಅಂಗಡಿ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.
ಆಪರೇಷನ್ ಕಮಲದಿಂದ ತೆರವಾಗಿದ್ದ ಮಸ್ಕಿ ವಿಧಾನಸಭೆಗೆ ನಡೆದ ಬೈ ಎಲೆಕ್ಷನ್‍ನಲ್ಲಿ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ ಮತ್ತು ಕಾಂಗ್ರೆಸ್‍ನ ಬಸನಗೌಡ ತುರ್ವೀಹಾಳ್ ನಡುವೆ ನಿಕಟ ಫೈಟ್ ನಡೆದಿದೆ. ಇಬ್ಬರು ಗೆಲ್ಲಲು ಇಲ್ಲಿ ಸಮಾನ ಅವಕಾಶಗಳಿವೆ
ಕಾಂಗ್ರೆಸ್ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಮಲ್ಲಮ್ಮ ಮತ್ತು ಬಿಜೆಪಿಯ ಶರಣು ಸಲಗಾರ ನಡುವೆ ಟಫ್ ಫೈಟ್ ನಡೆದಿದೆ. ಇಲ್ಲಿಯೂ ಫೋಟೋ ಫಿನಿಷ್ ಫಲಿತಾಂಶ ಹೊರಬೀಳುವ ಸಂಭವ ಹೆಚ್ಚಿದೆ. ಮೇ 2 ರಂದು ನಿಖರ ಫಲಿತಾಂಶ ತಿಳಿದುಬರಲಿದೆ.
ಮಸ್ಕಿ `ಪಬ್ಲಿಕ್’ ಎಕ್ಸಿಟ್ ಫೋಲ್
* ಬಿಜೆಪಿ- 49% ಕಾಂಗ್ರೆಸ್- 51%
* ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು
ಬಸವಕಲ್ಯಾಣ `ಪಬ್ಲಿಕ್’ ಎಕ್ಸಿಟ್ ಫೋಲ್
* ಬಿಜೆಪಿ- 49% ಕಾಂಗ್ರೆಸ್- 51%
* ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು
ಬೆಳಗಾವಿ `ಪಬ್ಲಿಕ್’ ಎಕ್ಸಿಟ್ ಫೋಲ್
* ಬಿಜೆಪಿ- ಮುನ್ನಡೆ * ಕಾಂಗ್ರೆಸ್- ಹಿನ್ನಡೆ
* ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಬಹುದು
ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಾದ ಬೆಳಗಾವಿ, ಮಸ್ಕಿ, ಬಸವಕಲ್ಯಾಣದ ಉಪಚುನಾವಣೆಗೆ ತೆರೆ ಬಿದ್ದಿದೆ.
ಬೆಳಗಾವಿಯಲ್ಲಿ ಶೇ.60, ಬಸವಕಲ್ಯಾಣ ಶೇ.65 ಹಾಗೂ ಮಸ್ಕಿಯಲ್ಲಿ ಶೇ.71ರಷ್ಟು ಮತದಾನವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಸೇರಿದಂತೆ ಕುಟುಂಬಸ್ಥರು ಮತ ಚಲಾಯಿಸಿ, ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.
ಗೋಕಾಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತದಾನ ಮಾಡಿದ್ರು. ಸೋಂಕು ಪೀಡಿತ ಸವದತ್ತಿ ಶಾಸಕ ಆನಂದ್ ಮಾಮನಿ ಪಿಪಿಇ ಕಿಟ್ ಧರಿಸಿ ಓಟ್ ಮಾಡಿದ್ರು. ಆಸ್ಪತ್ರೆಯಲ್ಲಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ 9 ರಂದೇ ಅಂಚೆ ಮತ ಚಲಾಯಿಸಿದ್ದಾರೆ.
ರಾಯಚೂರಿನ ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಗೌಡ ಪಿಪಿಇ ಕಿಟ್ ಧರಿಸಿ ಓಟ್ ಮಾಡಿದ್ರು. ತುರವಿಹಾಳ್ ಗ್ರಾಮದಲ್ಲಿ ಮತಯಂತ್ರದಲ್ಲಿನ ದೋಷದಿಂದ ಅರ್ಧ ಗಂಟೆ ಮತದಾನ ಸ್ಥಗಿತಗೊಳಿಸಲಾಯ್ತು. ನಂತರ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರವಿಹಾಳ ಮತ ಚಲಾಯಿಸಿದ್ರು.
ಚುನಾವಣಾ ಕರ್ತವ್ಯಕ್ಕೆ ಗೈರಾದ 29 ಮಂದಿ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಬೀದರ್‍ನ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಮತಚಲಾಯಿಸಿ ನೂರಕ್ಕೆ ನೂರು ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಇತ್ತ ಎಲೆಕ್ಷನ್ ನಡೆಯುತ್ತಿದ್ದ ಹೊತ್ತಲ್ಲೇ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನ ಬಿಜೆಪಿ ಉಚ್ಛಾಟಿಸಿದೆ. ಪಶ್ಚಿಮ ಬಂಗಾಳದಲ್ಲೂ 5ನೇ ಹಂತದಲ್ಲಿ ಶೇ.79ರಷ್ಟು ಮತದಾನವಾಗಿದೆ.