Tag: ಬಸವಲಿಂಗ ಸ್ವಾಮೀಜಿ

  • ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

    ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

    – ಡೆತ್ ನೋಟ್‍ನಲ್ಲಿ ಇಬ್ಬರು ಶ್ರೀ ಎಂದು ಉಲ್ಲೇಖ
    – ಹಾಗಾದ್ರೆ ಆ ಮತ್ತೊಬ್ಬ ಶ್ರೀ ಯಾರು?

    ರಾಮನಗರ: ಬಂಡೇಮಠದ (BandeMutt) ಬಸವಲಿಂಗ ಸ್ವಾಮೀಜಿ (BasavalingaSwamiji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

    ಶ್ರೀಗಳ ಆತ್ಮಹತ್ಯೆ ಹಿಂದೆ ಮತ್ತೊಬ್ಬ ಪ್ರತಿಷ್ಠಿತ ಮಠವೊಂದರ ಪ್ರಭಾವಿ ಸ್ವಾಮೀಜಿಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬಂಡೆ ಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಸಂಬಂಧ ಮೂವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಡೆತ್‍ನೋಟ್‍ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ ಆಗುತ್ತಿದೆ ಎಂದು ಬಸವಲಿಂಗ ಶ್ರೀ ಉಲ್ಲೇಖಿಸಿದ್ದಾರೆ. ಇದನ್ನು ಬೆನ್ನತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗೂ ಗಾಳ ಹಾಕಿದ್ದಾರೆ. ಬಂಧಿತ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?

    ಬಸವಲಿಂಗ ಶ್ರೀಗೆ ಕಿರುಕುಳ ನೀಡಿದ್ದ ಆ ಮತ್ತೊಂದು ಮಠದ ಶ್ರೀ ಯಾರು? ಬಂಡೇ ಮಠಕ್ಕೂ ಆ ಮತ್ತೊಬ್ಬ ಶ್ರೀಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗಳನ್ನು ವಿಚಾರಣೆ ನಡೆಸಿದ್ದಾರೆ. ಅದು ಕುಣಿಗಲ್ ತಾಲೂಕಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಆದರೆ ಈ ಕುರಿತು ಮತ್ಯಾವ ಸ್ವಾಮೀಜಿಯನ್ನೂ ವಿಚಾರಣೆ ನಡೆಸಿಲ್ಲ ಎಂದು ಪೊಲೀಸರು ಹೇಳಿತ್ತಿದ್ದಾರೆ. ಇನ್ನೂ ಆತ್ಮಹತ್ಯೆ ಕೇಸ್‍ನಲ್ಲಿ ಬಗೆದಷ್ಟು ಟ್ವಿಸ್ಟ್ ಮೇಲೆ ಟ್ವಿಸ್ಟ್ ದೊರೆಯುತ್ತಿದೆ. ಸದ್ಯ ವಿಚಾರಣೆಯಲ್ಲಿರುವ ಆರೋಪಿಗಳು ಮತ್ತಷ್ಟು ಜನರ ಹೆಸರುಗಳನ್ನು ಬಾಯ್ಬಿಡ್ತಾರಾ? ಆ ಮತ್ತೊಬ್ಬ ಸ್ವಾಮೀಜಿಯ ಬಂಧನವೂ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಮುರಿದು ಬಿದ್ದ ಪುರಾತನ ವೀರಭದ್ರೇಶ್ವರ ಸ್ವಾಮಿಯ ರಥದ ಚಕ್ರ – ಅದೃಷ್ಟವಶಾತ್ ಭಕ್ತರು ಪಾರು

    Live Tv
    [brid partner=56869869 player=32851 video=960834 autoplay=true]

  • ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?

    ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?

    ರಾಮನಗರ: ಬಂಡೆ ಮಠ (Bande Mutt) ದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ತನಿಖೆ ಮುಂದುವರಿದಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಸವಲಿಂಗ ಶ್ರೀ (Basavalinga Shree) ಗಳನ್ನು ಖೆಡ್ಡಾಗೆ ಕೆಡವಲು ಮತ್ತೊಂದು ಮಠದ ಸ್ವಾಮೀಜಿ ಕೂಡ ಕೈ ಜೋಡಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿದ್ದಂತೆ. ಆ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ ಎಂಬ ವಿಚಾರಗಳು ಹರಿದಾಡುತ್ತಿದೆ.

    ದಿನ ಕಳೆದಂತೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್ ಬಗ್ಗೆ ಊಹಾಪೋಹಗಳ ಜೊತೆ ವದಂತಿಗಳೂ ಹೆಚ್ಚುತ್ತಿವೆ. ಒಂದೆಡೆ ಪೊಲೀಸರ ವಿಚಾರಣೆ ತೀವ್ರಗೊಂಡರೆ ಮತ್ತೊಂದೆಡೆ ಶ್ರೀಗಳನ್ನು ಖೆಡ್ಡಾಗೆ ಕೆಡವಿದ ಟೀಂ ಬಗ್ಗೆ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬರ್ತಿವೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಮತ್ತೊಂದು ಮಠದ ಸ್ವಾಮೀಜಿ ಎಂಬ ವಿಚಾರ ಇದೀಗ ಚರ್ಚೆಗೆ ಬಂದಿರೋದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಪ್ರಕರಣದಲ್ಲಿ ಓರ್ವ ಸ್ವಾಮೀಜಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

    ಇತ್ತ ಪೊಲೀಸರ ವಿಚಾರಣೆ ತೀವ್ರಗೊಳ್ತಿದ್ದಂತೆಯೇ ಆ ಸ್ವಾಮೀಜಿಗೆ ನಡುಕ ಉಂಟಾಗಿದೆ. ಬಸವಲಿಂಗ ಶ್ರೀ ಮೇಲಿನ ದ್ವೇಷಕ್ಕೆ ಹನಿಟ್ರ್ಯಾಪ್ ಅಸ್ತ್ರವನ್ನ ಬಳಸಿದವರಲ್ಲಿ ಪ್ರಮುಖ ಪಾತ್ರ ವಹಿಸಿರೋದು ಮತ್ತೊಂದು ಮಠದ ಶ್ರೀಗಳು ಎಂದು ಹೇಳಲಾಗ್ತಿದೆ. ಆದರೆ ಆ ಮತ್ತೊಂದು ಮಠದ ಸ್ವಾಮೀಜಿ ಯಾರು.? ಬಂಡೇ ಮಠಕ್ಕೂ ಮತ್ತೊಬ್ಬ ಸ್ವಾಮೀಜಿಗೂ ಏನು ಸಂಬಂಧ ಅನ್ನೊದು ನಿಗೂಢವಾಗಿದೆ. ಇನ್ನು ವಿಚಾರಣೆ ಎದುರಿಸುತ್ತಿರುವಾಗಲೇ ಆ ಮತ್ತೊಬ್ಬ ಶ್ರೀ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಅಂತಲೂ ಹೇಳಲಾಗ್ತಿದೆ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಅಲ್ಲದೇ ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಓರ್ವ ಶಾಸಕನಿಗೂ ಕರೆ ಮಾಡಿ ತಮ್ಮನ್ನು ಟ್ರ್ಯಾಪ್ ನಲ್ಲಿ ಸಿಲುಕಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸಹಾಯ ಮಾಡಿ ಅಂತಲೂ ಕೇಳಿಕೊಂಡಿದ್ದಾರೆ ಎಂದು ಶ್ರೀಗಳು ಮನವಿ ಮಾಡಿದ್ದರಂತೆ. ಅಷ್ಟಕ್ಕೂ ಆ ಶಾಸಕರಾದ್ರೂ ಯಾರು.? ಶಾಸಕರಿಗೂ ಹಾಗೂ ಶ್ರೀಗಳಿಗೂ ಏನು ಸಂಬಂಧ ಆನ್ನೋ ಹೊಸ ಚರ್ಚೆ ಕೂಡಾ ಮಠದ ಸುತ್ತಮುತ್ತ ನಡೆಯುತ್ತಿದೆ. ಒಟ್ಟಾರೆ ಶ್ರೀಗಳ ಆತ್ಮಹತ್ಯೆ ಕುರಿತು ಹಲವು ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಿದೆ. ಶ್ರೀಗಳಿಗೆ ಖೆಡ್ಡಾ ತೋಡಿದ ಆ ಗ್ಯಾಂಗ್ ಯಾವುದು, ಅದರಲ್ಲಿ ಯಾರೆಲ್ಲಾ ಇದ್ದಾರೆ.? ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂಬುದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಸವಲಿಂಗ ಶ್ರೀ ಆಪ್ತ ಚಾಲಕ ಸೇರಿ ನಾಲ್ವರ ವಿಚಾರಣೆ, ಮೊಬೈಲ್ ವಶಕ್ಕೆ

    ಬಸವಲಿಂಗ ಶ್ರೀ ಆಪ್ತ ಚಾಲಕ ಸೇರಿ ನಾಲ್ವರ ವಿಚಾರಣೆ, ಮೊಬೈಲ್ ವಶಕ್ಕೆ

    ರಾಮನಗರ: ಮಾಗಡಿ (Magadi) ತಾಲೂಕಿನ ಬಂಡೆಮಠದ ಶ್ರೀಗಳ (Kanchugal Bande Mutt) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ಸಂಬಂಧ ಪೊಲೀಸ್ ತನಿಖೆ ಚುರುಕುಗೊಂಡಿದ್ದು, ಶ್ರೀಗಳ ಆಪ್ತ ಚಾಲಕ, ಮಠದ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ಈ ನಡುವೆ ಶ್ರೀಗಳ ಬಳಿ 10 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು ಎನ್ನುವ ಮಾಹಿತಿ ಬಹಿರಂಗವಾಗ್ತಿದ್ದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

    ಕಂಚುಗಲ್ ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ನಾಲ್ಕು ದಿನ ಕಳೆದಿದೆ. ಶ್ರೀಗಳ ಆತ್ಮಹತ್ಯೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು ಮತ್ತಷ್ಟು ಅನುಮಾನಗಳನ್ನು ಹೆಚ್ಚಿಸಿದೆ. ಇದರ ಜೊತೆಗೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಶ್ರೀಗಳ ಆಪ್ತವಲಯದಲ್ಲೇ ಗುರುತಿಸಿಕೊಂಡಿದ್ದ ಪ್ರಭಾವಿಗಳೇ ಸಂಚು ರೂಪಿಸಿ ಖೆಡ್ಡಾಕ್ಕೆ ಕೆಡವಿದ್ದಾರೆ ಎನ್ನಲಾಗುತ್ತಿದೆ. ಶ್ರೀಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕೆಲ ವ್ಯಕ್ತಿಗಳೇ ಮಹಿಳೆಯನ್ನು ಶ್ರೀಗಳಿಗೆ ಪರಿಚಯ ಮಾಡಿಕೊಟ್ಟಿದ್ದರು ಎನ್ನಲಾಗ್ತಿದೆ. ಈ ಕುರಿತಾಗಿ ಈಗಾಗಲೇ 7 ಜನರ ವಿಚಾರಣೆ ನಡೆಸಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

    ಬಸವಲಿಂಗ ಶ್ರೀಗಳ (Basavalinga Swamiji) ವೀಡಿಯೋವೊಂದು (Video) ವೈರಲ್ ಆಗಿರುವ ಹಿನ್ನೆಲೆಯಲ್ಲಿ ವೀಡಿಯೋ ವೈರಲ್ ಮಾಡಿರುವ ಬಗ್ಗೆಯೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಲ್ಲದೇ ವೀಡಿಯೋ ಮಾಡಿಕೊಂಡಿದ್ದ ಟೀಮ್ ಶ್ರೀಗಳ ಬಳಿ 10 ಕೋಟಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ. ವೀಡಿಯೋವನ್ನು ಸ್ವಾಮೀಜಿ ಮೊಬೈಲ್‍ಗೆ ಕಳುಹಿಸಿ ಬೆದರಿಕೆ ಹಾಕಿ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಹತ್ತು ದಿನದ ಹಿಂದೆಯೇ ಬಸವಲಿಂಗ ಸ್ವಾಮೀಜಿ ಮೊಬೈಲ್‍ಗೆ ಮಠದ ಆಪ್ತನೇ ವೀಡಿಯೋ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡ ಮೊತ್ತದ ಹಣವನ್ನು ಹೊಂದಿಸುವಲ್ಲಿ ಸ್ವಾಮೀಜಿ ವಿಫಲರಾಗಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

    ಇನ್ನೂ ಬಸವಲಿಂಗ ಸ್ವಾಮೀಜಿಯ ಆಪ್ತ ಚಾಲಕ ಸೇರಿದಂತೆ ನಾಲ್ವರ ಮೊಬೈಲ್ ಫೋನನ್ನು ವಶಕ್ಕೆ ಪಡೆದಿರುವ ಪೊಲೀಸರು ಮೊಬೈಲ್‍ಗಳ ಪರಿಶೀಲನೆ ನಡೆಸಿದ್ದಾರೆ. ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿ ಊರು ಬಿಟ್ಟು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆಪ್ತಚಾಲಕ ಮತ್ತು ಸಿಬ್ಬಂದಿಯಿಂದ ಸ್ವಾಮೀಜಿಯ ಚಲನಾವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ಮಠಕ್ಕೆ ಬಂದು ಹೋಗ್ತಿದ್ದವರ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆಹಾಕಲಾಗ್ತಿದೆ. ಇದನ್ನೂ ಓದಿ: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ – 10 ಕೋಟಿಗೆ ಬೇಡಿಕೆ ಇಟ್ಟಿತ್ತಾ ಮಹಿಳೆ ಆ್ಯಂಡ್ ಟೀಂ?

    ಒಟ್ಟಾರೆ ದಿನ ಕಳೆದಂತೆ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ರೆಕ್ಕೆಪುಕ್ಕಗಳು ಹೆಚ್ಚಾಗುತ್ತಿವೆ. ತನಿಖೆ ಬಗ್ಗೆ ಸಾಕಷ್ಟು ಊಹಾಪೋಹಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ಮಠದ ಕೆಲ ಮುಖಂಡರು ಸಿಎಂ ಭೇಟಿಯಾಗಿ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮುಗಿಸುವಂತೆ ಮನವಿ ಮಾಡುವ ಬಗ್ಗೆ ಮಾಹಿತಿ ದೊರೆತಿದೆ. ಇನ್ನಾದರೂ ತನಿಖೆ ಮತ್ತಷ್ಟು ತೀವ್ರಗೊಳ್ಳಲಿದ್ಯಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

    Live Tv
    [brid partner=56869869 player=32851 video=960834 autoplay=true]

  • ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ – 10 ಕೋಟಿಗೆ ಬೇಡಿಕೆ ಇಟ್ಟಿತ್ತಾ ಮಹಿಳೆ ಆ್ಯಂಡ್ ಟೀಂ?

    ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ – 10 ಕೋಟಿಗೆ ಬೇಡಿಕೆ ಇಟ್ಟಿತ್ತಾ ಮಹಿಳೆ ಆ್ಯಂಡ್ ಟೀಂ?

    ಬೆಂಗಳೂರು/ನೆಲಮಂಗಲ: ಮಾಗಡಿ ಬಂಡೆ ಮಠದ (Bande Math) ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣದ ಸುತ್ತ ದಿನ ಕಳೆದಂತೆ ಅನುಮಾನ ಹುತ್ತ ಸೃಷ್ಠಿಯಾಗುತ್ತಿದೆ.

    ಮಂಗಳವಾರ ಶ್ರೀಗಳು ಬರೆದಿದ್ದಾರೆ ಎನ್ನಲಾದ ಡೆತ್‍ನೋತ್‍ನ ಒಂದು ಪುಟ ವೈರಲ್ ಆದ ಬೆನ್ನಲ್ಲೆ, ಬುಧವಾರ ಶ್ರೀಗಳ ವೀಡಿಯೋ ಕಾಲ್ ತುಣುಕೊಂದು ವೈರಲ್ ಆಗಿದ್ದು, ಇದೀಗ ಈ ಬಗ್ಗೆ ಸಾಕಷ್ಟು ಅನುಮಾನ ಹುಟ್ಟುಕೊಂಡಿದೆ. ಮಹಿಳೆಯೊಬ್ಬಳ ಜೊತೆ ಸ್ವಾಮೀಜಿ ವೀಡಿಯೋ ಕಾಲ್‍ನಲ್ಲಿ ಮಾತನಾಡುತ್ತಿರುವ ವೀಡಿಯೋ ದೊರೆತಿದ್ದು, ಇದರ ಹಿಂದಿರುವ ಕಾಣದ ಕೈಗಳ ಹುಡುಕಾಟ ಶುರುವಾಗಿದೆ.

    ಬಸವಲಿಂಗ ಸ್ವಾಮೀಜಿ ಮಹಿಳೆ ಜೊತೆಗೆ ಮಾತನಾಡಿದ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ನಂತರ ವೀಡಿಯೋವನ್ನು ಸ್ವಾಮೀಜಿ ಮೊಬೈಲ್‍ಗೆ ಕಳುಹಿಸಿ ಮಹಿಳೆಯ ಗ್ಯಾಂಗ್ ಬೆದರಿಕೆ ಹಾಕಿತ್ತಾ? ಹತ್ತು ದಿನದ ಹಿಂದೆ ಬಸವಲಿಂಗ ಸ್ವಾಮೀಜಿ ಮೊಬೈಲ್‍ಗೆ ದುಷ್ಕರ್ಮಿಗಳು ವೀಡಿಯೋ ಕಳುಹಿಸಿದ್ದು, ಈ ಬಗ್ಗೆ ಯಾರ ಬಳಿನೂ ಹೇಳಿಕೊಳ್ಳಲಾಗದೇ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.  ಇದನ್ನೂ ಓದಿ: ಬಂಡೆಮಠ ಸ್ವಾಮೀಜಿ ಆತ್ಮಹತ್ಯೆಗೆ ಟ್ವಿಸ್ಟ್- ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್

    ವೀಡಿಯೋ ಮಾಡಿದ ಮಹಿಳೆ ಆ್ಯಂಡ್ ಟೀಂ ಬಸವಲಿಂಗ ಸ್ವಾಮೀಜಿಗೆ ಬರೋಬ್ಬರಿ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿತ್ತಾ? ಟೀಂನಲ್ಲಿದ್ದ ಮುಖಂಡನೇ ಸ್ವಾಮೀಜಿ ಬಳಿ ಡೀಲ್ ನೆಪದಲ್ಲಿ ಬಂದಿದ್ದನಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸ್ವಾಮೀಜಿ ಮಠದ ಅಭಿವೃದ್ಧಿ ಜೊತೆಗೆ ಅಂತಹ ದೊಡ್ಡ ಮೊತ್ತದ ಹಣ ಕೂಡ ಇರಲಿಲ್ಲ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಹೊಂದಿಸುವಲ್ಲಿ ಸ್ವಾಮೀಜಿ ವಿಫಲರಾಗಿದರು ಎಂಬ ಮಾಹಿತಿ ತಿಳಿದುಬಂದಿದೆ.

    ಬೇಕಂತಾಲೇ ನಾಲ್ವರು ಹೆಣೆದ ಖೆಡ್ಡಾಗೆ ಸ್ವಾಮೀಜಿ ತಗಲಾಕಿಕೊಂಡು ಒದ್ದಾಡಿದ್ರಾ? ಸ್ವಾಮೀಜಿ ಬರೆದಿರುವ ಮೂರು ಪುಟಗಳ ಡೆತ್‍ನೋಟ್‍ನಲ್ಲಿ ಎಲ್ಲವೂ ಅಡಗಿದ್ಯ? ಪೊಲೀಸರ ತನಿಖೆಯಿಂದ ಸತ್ಯಸತ್ಯೆ ಹೊರಬರುತ್ತ ಎಂಬ ಪ್ರಶ್ನೆ ಮಠದ ಭಕ್ತರಲ್ಲಿ ಮೂಡಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

    ಬುಧವಾರ ವೈರಲ್ ಆದ ವೀಡಿಯೋ ಬಗ್ಗೆ ಇದೀಗ ಸಾಕಷ್ಟು ಸಂಶಯಗಳು ಮೂಡುತ್ತಿದ್ದು, ಪೊಲೀಸರ ತನಿಖೆಗೆ ದಾರಿ ತಪ್ಪಿಸಲು ಹುನ್ನಾರ ನಡೆಯುತ್ತಿದ್ಯಾ? ವೀಡಿಯೋ ವೈರಲ್ ಮಾಡಿದ ವ್ಯಕ್ತಿ ಯಾರು? ಯಾವ ನಂಬರ್‍ನಿಂದ ವೀಡಿಯೋ ಲೀಕ್ ಆಯಿತು? ವೀಡಿಯೋ ಲೀಕ್ ಮಾಡಿದ ಹಿಂದೆ ಇನ್ನೂ ಷಡ್ಯಂತ್ರ ನಡೆದಿದ್ಯಾ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಗಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಮಠದ ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರೀಗಳ ಮೊಬೈಲ್ ಕಾಲ್ ಹಾಗೂ ಡೆತ್‌ನೋಟ್ (Death Note) ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಹನಿಟ್ರ‍್ಯಾಪ್ (Honeytrap) ಸುಳಿವು ನೀಡಿದ್ದು, ಇನ್ನು 2-3 ದಿನಗಳಲ್ಲಿ ಶ್ರೀಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

    ರಾಜ್ಯದಲ್ಲಿ ಕೆಲ ಸ್ವಾಮೀಜಿಗಳು ಹನಿಟ್ರ‍್ಯಾಪ್ ಜಾಲಕ್ಕೆ ಒಳಗಾಗಿದ್ದು, ಮುರುಘಾ ಶ್ರೀಗಳ ಪ್ರಕರಣದ ಬಳಿಕ ಈ ಜಾಲ ಇನ್ನಷ್ಟು ವಿಸ್ತಾರಗೊಂಡಿದೆ ಎನ್ನುವುದು ಖಾತ್ರಿಯಾಗಿದೆ. 6-7 ತಿಂಗಳ ಹಿಂದೆ ಮಾಗಡಿಯ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಮೃತದೇಹ ಸಹ ಕಿಟಕಿಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಬಂಡೇ ಮಠದ ಸ್ವಾಮೀಜಿ ಸಹ ಅದೇ ಮಾದರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿಯ ಆತ್ಮಹತ್ಯೆ ಸಂಬಂಧ ಇಡೀ ಪ್ರಕರಣಕ್ಕೆ ರೋಚಕ ತಿರುವು ನೀಡಿರುವುದು ಡೇತ್‌ನೋಟ್. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಪ್ರಕರಣದ ದಿಕ್ಕನ್ನು ಬದಲಿಸಿವೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೇತ್‌ನೋಟ್ ಕೂಡಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾನು ಮಠದ ಉತ್ತರಾಧಿಕಾರಿಯಾದ ಬಳಿಕ ಯಾವುದೇ ಹಗರಣವನ್ನು ಮಾಡಿಲ್ಲ. ಸಿದ್ದಗಂಗಾ ಮಠಕ್ಕೆ ನಂಬುಗೆಯಿಂದಲೇ ಕೆಲಸ ಮಾಡಿದ್ದೇನೆ. ಆದರೆ ಕೆಲವರು ಇತ್ತೀಚೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಮಹಿಳೆಯೊಬ್ಬಳು 6-7 ತಿಂಗಳಿನಿಂದ ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ವೈರಲ್ ಆಗಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಡೆತ್‌ನೋಟ್ ನಿಜವಾದುದಲ್ಲ, ಕೇವಲ 1-2 ಅಂಶಗಳು ಸಾಮ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಡೆತ್‌ನೋಟ್‌ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೆಖ ಮಾಡಲಾಗಿದೆ. ಆದರೆ ಅವರು ಸಾವಿಗೆ ಕಾರಣ ಎಂದು ಬರೆದಿಲ್ಲ. ಒಬ್ಬ ಅನಾಮಧೇಯ ಹೆಸರನ್ನು ಸ್ಪಷ್ಟವಾಗಿ ಉಲ್ಲೆಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಪ್ರಕರಣ ಸಂಬಂಧ 306 ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.

    ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ನೋಟ್‌ನ ಕೆಲ ಅಂಶಗಳನ್ನು ತನಿಖೆಯ ದಿಕ್ಕನ್ನೇ ಬದಲಿಸಿವೆ. ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗಿದ್ರೆ, ಮತ್ತೊಂದೆಡೆ ಮಠದ ಅಧಿಕಾರ ಹಿಡಿಯಲು ಕೆಲವರು ಸಂಚು ರೂಪಿಸಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ. ಇದನ್ನೂ ಓದಿ: ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    Live Tv
    [brid partner=56869869 player=32851 video=960834 autoplay=true]

  • ಕನಸಾಗಿಯೇ ಉಳಿಯಿತು ಬಸವಲಿಂಗ ಸ್ವಾಮೀಜಿ ಕನಸು

    ಕನಸಾಗಿಯೇ ಉಳಿಯಿತು ಬಸವಲಿಂಗ ಸ್ವಾಮೀಜಿ ಕನಸು

    ಬೆಂಗಳೂರು: ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಬಂಡೇಮಠದ ಬಸವಲಿಂಗ ಸ್ವಾಮೀಜಿ (Basavalinga Swamiji) ಯ ಕನಸು ಕನಸಾಗಿಯೇ ಉಳಿದಿದೆ.

    ಹೌದು. ಇದೇ ತಿಂಗಳ 26 ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (B.S Yediyurappa) ಅವರು ಮಠಕ್ಕೆ ಆಗಮಿಸುವವರಿದ್ದರು. ವಿದ್ಯಾರ್ಥಿ ನಿಲಯ ಪ್ರಸಾದ ನಿಲಯ ಹಾಗೂ ಅತಿಥಿ ಗೃಹಗಳ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದರು. ಗುದ್ದಲಿ ಪೂಜೆಗೆ ಬರುವುದಾಗಿ ಯಡಿಯೂರಪ್ಪ ಕೂಡ ಭರವಸೆ ನೀಡಿದ್ದರು.

    ಬಸವಲಿಂಗ ಸ್ವಾಮೀಜಿ ಅಂತ್ಯಸಂಸ್ಕಾರ ಆದ ಸ್ಥಳದ ಹಿಂಭಾಗದಲ್ಲಿ ನಿರ್ಮಾಣದ ನಕ್ಷೆ ಮಾಡಲಾಗಿತ್ತು. ಒಟ್ಟಿನಲ್ಲಿ ಬಸವಲಿಂಗ ಸ್ವಾಮೀಜಿ ಮಠದ ಅಭಿವೃದ್ಧಿಗೆ ಸಾಕಷ್ಟು ಚಿಂತನೆ ಮಾಡಿದ್ದರು. ಆದರೆ ಇಂದು ಮಠದ ಆವರಣದಲ್ಲಿ ನೀರವ ಮೌನ ಆವರಿಸಿದೆ. ಸ್ವಾಮೀಜಿ ಆತ್ಮಹತ್ಯೆಯಿಂದ ಮಠದ ಭಕ್ತರು ಮಕ್ಕಳು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಆತ್ಮಹತ್ಯೆ ಪ್ರಕರಣ- ಮೂರು ಪುಟಗಳ ಡೆತ್‍ನೋಟ್ ಪತ್ತೆ

    ಭಾನುವಾರ ರಾತ್ರಿ ಬಂಡೇಮಠದ ಬೆಟ್ಟ (Bandemutt Hills) ದ ಮೇಲಿನ ವಿಶ್ರಾಂತಿ ನಿಲಯದಲ್ಲಿ ಮೂರು ಪುಟಗಳ ಡೆತ್ ನೋಟ್ ಬರೆದು ನಂತರ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಕಳೆದ ಆರು ತಿಂಗಳಿನಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

    ಶತ್ರುಗಳಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅದನ್ನ ತಡೆಯಲು ಸಾಧ್ಯವಾಗದೆ ಆತ್ಮಹತ್ಯೆಗೆ ದಾರಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಯಾರು ಯಾರು ಎಂದು ಶತ್ರುಗಳು ಎಂದು ಹೆಸರು ಉಲ್ಲೇಖ ಮಾಡಿದ್ದಾರೆ. ಸದ್ಯ ಡೆತ್ ನೋಟ್ ಕುದೂರು ಪೊಲೀಸರ ಕೈ ಸೇರಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ವಾಮೀಜಿ ಆತ್ಮಹತ್ಯೆ ಪ್ರಕರಣ- ಮೂರು ಪುಟಗಳ ಡೆತ್‍ನೋಟ್ ಪತ್ತೆ

    ಸ್ವಾಮೀಜಿ ಆತ್ಮಹತ್ಯೆ ಪ್ರಕರಣ- ಮೂರು ಪುಟಗಳ ಡೆತ್‍ನೋಟ್ ಪತ್ತೆ

    ಬೆಂಗಳೂರು: ಬಂಡೇಮಠದ ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡೆತ್ ನೋಟ್ ಪತ್ತೆಯಾಗಿದೆ.

    ಮೂರು ಪುಟಗಳ ಡೆತ್ ನೋಟ್ (Death Note) ಬರೆದಿದ್ದು, ಅದರಲ್ಲಿ ಕಳೆದ ಆರು ತಿಂಗಳಿನಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ!

    ಶತ್ರುಗಳಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅದನ್ನ ತಡೆಯಲು ಸಾಧ್ಯವಾಗದೆ ಆತ್ಮಹತ್ಯೆಗೆ ದಾರಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಯಾರು ಯಾರು ಎಂದು ಶತ್ರುಗಳು ಎಂದು ಹೆಸರು ಉಲ್ಲೇಖ ಮಾಡಿದ್ದಾರೆ. ಸದ್ಯ ಡೆತ್ ನೋಟ್ ಕುದೂರು ಪೊಲೀಸರ ಕೈ ಸೇರಿದೆ. ಪೊಲೀಸರ ತನಿಖೆ ನಂತರ ಡೆತ್ ನೋಟ್ ರಹಸ್ಯ ಬಹಿರಂಗವಾಗಲಿದೆ.

    ಕಳೆದ ರಾತ್ರಿ ಬಂಡೇಮಠದ ಬೆಟ್ಟದ ಮೇಲಿನ ವಿಶ್ರಾಂತಿ ನಿಲಯದಲ್ಲಿ ಮೂರು ಪುಟಗಳ ಡೆತ್ ನೋಟ್ ಬರೆದು ನಂತರ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಂಡೇಮಠದ ಆವರಣದಲ್ಲಿ ಮಧ್ಯಾಹ್ನ 3:30 ನಂತರ ಅಂತ್ಯಸಂಸ್ಕಾರದ ಗದ್ದುಗೆ ನಿರ್ಮಾಣ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ!

    ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ!

    ಬೆಂಗಳೂರು: ಬಂಡೇಮಠದ ಬಸವಲಿಂಗ ಸ್ವಾಮೀಜಿ (Basavalinga Swamiji) (56) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಂಡೇಮಠ ಸ್ವಾಮೀಜಿಯ ಆತ್ಮಹತ್ಯೆ (Suicide) ಪ್ರಕರಣ ಇದೀಗ ತೀವ್ರ ಅನುಮಾನ ಹುಟ್ಟಿಸಿದೆ. ಇದನ್ನೂ ಓದಿ: ಪೊಲೀಸರ ಮನೆಗೇ ಕನ್ನ ಹಾಕಿದ ಕಳ್ಳರು – ಚಿನ್ನ, ಹಣ, ಪೆಟ್ರೋಲ್‌ ಕಳ್ಳತನ

    ಸ್ವಾಮೀಜಿ ಬಂಡೇಮಠದ ಬೆಟ್ಟದ ಮೇಲಿನ ಮನೆಯ ಕಿಟಕಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಮೂರು ತಿಂಗಳ ಹಿಂದೆ ಕಡಲೆ ಮಠದ ಸ್ವಾಮೀಜಿ ಕೂಡ ಇದೇ ರೀತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ರು. ಇದೀಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]