Tag: ಬಸವಲಿಂಗ ಪಟ್ಟದೇವರು

  • ಬಸವಣ್ಣನ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗುವ ಕಾಲ ಬಂದೇ ಬರುತ್ತೆ: ಬಸವಲಿಂಗ ಪಟ್ಟದೇವರು ಬಾಂಬ್

    ಬಸವಣ್ಣನ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗುವ ಕಾಲ ಬಂದೇ ಬರುತ್ತೆ: ಬಸವಲಿಂಗ ಪಟ್ಟದೇವರು ಬಾಂಬ್

    ಬೀದರ್: ಬಸವಣ್ಣನವರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗುವ ಕಾಲ ಬಂದೇ ಬರುತ್ತೆ ಎಂದು ಕಲ್ಯಾಣ ಪರ್ವದಲ್ಲಿ ಬಸವಲಿಂಗ ಪಟ್ಟದೇವರು (Basavalinga Pattadevaru) ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬವಣ್ಣನ (Basavanna) ಕರ್ಮಭೂಮಿ ಬಸವಕಲ್ಯಾಣದಲ್ಲಿ ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ (Lingayat Religion) ಕೂಗು ಮೊಳಗಿದೆ. ಬಸವಕಲ್ಯಾಣದ ಕಲ್ಯಾಣ ಪರ್ವ ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟದೇವರು ಸ್ವಾಮೀಜಿ ಸ್ವತಂತ್ರ ಧರ್ಮದ ಕೂಗು ಎತ್ತಿದ್ದಾರೆ. ಬಸವಣ್ಣನವರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಬಾರದು ಅಂತ ಅನೇಕ ಶಕ್ತಿಗಳು ವಿರೋಧ ಮಾಡುತ್ತಿವೆ. ಆದ್ರೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವ ಕಾಲ ಬಂದೇ ಬರುತ್ತೆ ಎಂದು ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ 6,700 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ

    200 ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸರ್ಕಾರ ಕೆಲವೇ ದಿನಗಳಲ್ಲಿ ಬಸವಣ್ಣರನ್ನ ನಾಯಕ ಎಂದು ಘೋಷಣೆ ಮಾಡಿತು. ಅದೇ ರೀತಿ ಲಿಂಗಾಯತ ಸ್ವತಂತ್ರ ಧರ್ಮ ಆಗುವ ಕಾಲ ಬರುತ್ತೆ. ನಾವೆಲ್ಲಾ ನಿರಾಸೆಯಾಗದೇ ಸ್ವತಂತ್ರ ಧರ್ಮಕ್ಕೆ ಹೋರಾಡಬೇಕು ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಲಿಂಗಾಯತ ಜಾಗೃತಿ ಸಮಾವೇಶ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ತಡೆ – ಅರಸೀಕೆರೆ ಕೆರೆಗಳಿಗೆ ಹರಿಯದ ನೀರು

    12ನೇ ಶತಮಾನದಲ್ಲೇ ಅನುಭವ ಮಂಟಪದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮುದ್ರೆ ಬಿದ್ದಿದೆ. ಇನ್ನು ಸರ್ಕಾರದಲ್ಲಿ ಸ್ವತಂತ್ರ ಧರ್ಮದ ಮುದ್ರೆ ಬೀಳಬೇಕಿದೆ. ಲಿಂಗಾಯತ ಸ್ವತಂತ್ರ ಧರ್ಮ ಅಂತ ಘೋಷಣೆ ಆದ್ರೆ ನಮಗೆ, ನಮ್ಮ ಪರಿವಾರಗಳಿಗೆ ಅನುಕೂಲ ಆಗಲಿದೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ, ಸ್ವತಂತ್ರ ಧರ್ಮ ಹೋರಾಟಕ್ಕೆ ಸ್ವಾಮಿಜೀ ಕರೆ ನೀಡಿದ್ದಾರೆ.

    ಬಸವಣ್ಣನವರ ಕಾಲದಿಂದ ಇಲ್ಲಿಯವರೆಗೂ ಲಿಂಗಾಯತ ಧರ್ಮಕ್ಕೆ ವಿರೋಧ ಮಾಡುವವರು ಇದ್ದೇ ಇದ್ದಾರೆ. ವಿರೋಧದ ಮಧ್ಯೆಯೂ 21ನೇ ಶತಮಾನದವರೆಗೆ ಜಾಗೃತ ಮಾಡುತ್ತಾ ಬಂದಿದ್ದು ಲಿಂಗಾಯತ ಸ್ವತಂತ್ರ ಧರ್ಮ ಮುದ್ರೆ ಪಡೆದೇ ತೀರೋಣ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ. ಇದನ್ನೂ ಓದಿ: ಕ್ಲೋರೇಟ್, ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ CRPF ಶಾಲೆ ಬಳಿ ಸ್ಫೋಟ – NIA ತೀವ್ರ ಶೋಧ

  • ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದ ಏಕೈಕ ವೀರ, ಧೀರ, ಶರಣ ಸಿದ್ದರಾಮಯ್ಯ: ಬಸವಲಿಂಗ ಶ್ರೀ

    ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದ ಏಕೈಕ ವೀರ, ಧೀರ, ಶರಣ ಸಿದ್ದರಾಮಯ್ಯ: ಬಸವಲಿಂಗ ಶ್ರೀ

    – ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಆಗ್ರಹ

    ಬೀದರ್: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದ ಏಕೈಕ ವೀರ, ಧೀರ, ಶರಣ ಯಾರಾದರೂ ಇದ್ದರೆ, ಅದು ಸಿದ್ದರಾಮಯ್ಯ (Siddaramaiah) ಎಂದು ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿ ಬಸವಲಿಂಗ ಪಟ್ಟದೇವರು (Basavalinga Pattadevaru) ಶ್ಲಾಘಿಸಿದ್ದಾರೆ.

    ಕನ್ನಡದ ಸಾಂಸ್ಕೃತಿಕ ನಾಯಕ ಎಂದು ವಿಶ್ವಗುರು ಬಸವಣ್ಣನನ್ನು (Basavanna) ಸರ್ಕಾರ ಘೋಷಣೆ‌ ಮಾಡಿದ ಹಿನ್ನೆಲೆಯಲ್ಲಿ ಬಸವಣ್ಣನ ಕರ್ಮಭೂಮಿ ಕಲ್ಯಾಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಲಾಯಿತು. ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ, ಅಖಿಲ ಭಾರತೀಯ ವೀರಶೈವ – ಲಿಂಗಾಯತ ಮಹಾಸಭಾ ಹಾಗೂ ವಿವಿಧ ಮಠಾಧಿಪತಿಗಳ ಒಕ್ಕೂಟದಿಂದ ಪುಷ್ಪಾರ್ಚನೆ‌ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯಗೆ ವಿಶೇಷ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು.

    ಬಸವಲಿಂಗ ಪಟ್ಟದ್ದೆವರು, ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಮಾತೆ, ಹಾರಕೂಡ್ ಶ್ರೀಗಳು, ತಡೋಳ್ ಶ್ರೀಗಳು, ಸಚಿವರಾದ ಎಂ.ಬಿ ಪಾಟೀಲ್ (MB Patil), ಈಶ್ವರ್ ಖಂಡ್ರೆ, ರಹೀಂ ಖಾನ್, ಶಾಮನೂರು ಶಿವಶಂಕರಪ್ಪ ಅವರು ಸಿಎಂಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಸವಕಲ್ಯಾಣ ತೇರು ಮೈದಾನದಲ್ಲಿ ಸಿಎಂ ಅಭಿನಂದನಾ ಸಮಾರಂಭ ನಡೆಯಿತು. ವಿವಿಧ ಮಠಾಧೀಶರು, ಕಾಂಗ್ರೆಸ್ ಮುಖಂಡರು, ಬಸವಣ್ಣನ ಅನುಯಾಯಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.

    ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಲ್ಯಾಣದಲ್ಲಿ ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿ ಬಸವಲಿಂಗ ಪಟ್ಟದೇವರು ಅವರು, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದ ಏಕೈಕ ವೀರ, ಧೀರ, ಶರಣ ಯಾರಾದರೂ ಇದ್ದರೆ, ಅದು ಸಿದ್ದರಾಮಯ್ಯ. ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದರವರು ಸಿಎಂ ಸಿದ್ದರಾಮಯ್ಯ ಎಂದು ಹಾಡಿಹೊಗಳಿದರು. ಇದನ್ನೂ ಓದಿ: ದೇಶದಲ್ಲೇ ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸುರಕ್ಷಿತ ರಾಜ್ಯ: ಮಮತಾ ಬ್ಯಾನರ್ಜಿ

    ಇದೇ ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕು, ಅನುಭವ ಮಂಟಪಕ್ಕೆ ಜೀವಂತಿಕೆ ತುಂಬಲು ವಚನ ವಿಶ್ವವಿದ್ಯಾಲಯ ಬೇಕೆ ಬೇಕು ಎಂದು ಆಗ್ರಹಿಸಿದರು.

    ಅಭಿನಂದನಾ ಸಮಾರಂಭವಾದ ಬಳಿಕ ದಾಸೋಹ ಭವನ ಉದ್ಘಾಟನೆ ಮಾಡಿದ ಸಿದ್ದರಾಮಯ್ಯ, ಬಳಿಕ ನೂತನ ಅನುಭವ ಮಂಟಪ ಕಾಮಗಾರಿ ವೀಕ್ಷಣೆ ಮಾಡಿ ಕಾಲ ಮಿತಿಯಲ್ಲಿ ಕಾಮಗಾರಿ ಮುಗಿಸುವಂತ್ತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೇಸ್‌; ಪರಪ್ಪನ ಅಗ್ರಹಾರ ಜೈಲು ಸೇರಿದ ನಾಶೀಪುಡಿ