Tag: ಬಸವರಾಜ ಹುಂದ್ರಿ

  • ನಾನು ಜಾತಿ ಪರ ಬಂದಿದ್ದೇನೆ  ಅಂದ್ಕೋಬೇಡಿ : ಕಿಚ್ಚ ಸುದೀಪ್ ಮನವಿ

    ನಾನು ಜಾತಿ ಪರ ಬಂದಿದ್ದೇನೆ ಅಂದ್ಕೋಬೇಡಿ : ಕಿಚ್ಚ ಸುದೀಪ್ ಮನವಿ

    ಬಿಜೆಪಿ (BJP) ಪ್ರಚಾರಕ್ಕೆ ಹೋದಲ್ಲಿ ನಾನು ಬರಿ ಜಾತಿ (Caste) ಪರ ಬಂದಿದ್ದೇನೆ ಅನ್ಕೋಬೇಡಿ ಎಂದು ನಟ ಸುದೀಪ್ (Sudeep) ಮನವಿ ಮಾಡಿದ್ದಾರೆ. ಯಮಕನಮರಡಿ (Yamakanamaradi) ಕ್ಷೇತ್ರದ ವಂಟಮೂರಿ ಗ್ರಾಮದಲ್ಲಿ ರೋಡ್ ಶೋ ಬಳಿಕ ಅಭಿಮಾನಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಸುದೀಪ್,  ‘ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮೊದಲು ಮುಖ್ಯ. ಆವಾಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ’ ಎಂದಿದ್ದಾರೆ.

    ಮುಂದುವರೆದು ಮಾತನಾಡಿದ ಸುದೀಪ್, ‘ಇನ್ನೂ ಯಮಕನಮರಡಿ ಅಭ್ಯರ್ಥಿ ಬಸವರಾಜ ಹುಂದ್ರಿ ಬಡ ಕುಟುಂಬದಿಂದ ಬಂದಿದ್ದಾರೆ. ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಸಹಕಾರ ಹಾಗೂ ಸೇವೆ ಮಾಡಲು ಬಸವರಾಜ‌ ಹುಂದ್ರಿ ಅವರಿಗೆ ಅವಕಾಶ ಕೊಡಿ. ಮತ ಹಾಕಿ ಗೆಲ್ಲಿಸುವದು ಅಷ್ಟೆ ಅಲ್ಲ ಅವರ ಕಡೆಯಿಂದ ಕೆಲಸ ಮಾಡಿಸಿಕೊಳ್ಳುವುದು ಮುಖ್ಯ. ಈ ಊರಲ್ಲಿ ಸರಿಯಾಗಿ ರಸ್ತೆ ಇಲ್ಲ. ಯಮಕನಮರಡಿ ಕ್ಷೇತ್ರದಲ್ಲಿ ತುಂಬಾನೇ ಕೆಲಸ ಬಾಕಿ ಇದೆ. ಗೆದ್ದರೆ ಇಲ್ಲಿ ಕೆಲಸಗಳನ್ನು ಮಾಡಿಕೊಡಿತೀರಾ ಸರ್ ಎಂದು ಅಭ್ಯರ್ಥಿಯನ್ನೇ’ ಸುದೀಪ್ ಕೇಳಿದರು. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ಎಲ್ಲ ಕೆಲಸಗಳನ್ನು ಮಾಡುತ್ತೇನೆ ನನಗೆ ಆಶೀರ್ವಾದ ಮಾಡಿ ಎಂದ ಬಸವರಾಜ ಹುಂದ್ರಿ (Basavaraja Hundri), ಕೆಲಸ ಮಾಡಲಿಲ್ಲಾ ಅಂದ್ರೆ ನಾನೇ ಬರತೀನಿ ಸರ್, ಜನ‌ ನಮ್ಮವರಿದ್ದಾರೆ. ಬಿಟ್ಟು ಕೊಡಲು ಆಗುವುದಿಲ್ಲ ಎಂದು ಸುದೀಪ್ ಹೇಳಿದರು. 25 ವರ್ಷ ಚಿತ್ರರಂಗದಲ್ಲಿ ಇದ್ದೀನಿ ಅಂದ್ರೆ ನಿಮ್ಮಿಂದಾ. ನನ್ನ ಮೊದಲನೇ ಪ್ರೀತಿ ಕನ್ನಡ, ಕನ್ನಡಚಿತ್ರರಂಗ, ಅಭಿಮಾನಿಗಳು. ನನ್ನ ತಂದೆ ತಾಯಿ ಹೆಸರಿಟ್ಟಿದ್ದು ಬಹಳಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲಾ. ಆದರೆ ಕಿಚ್ಚ ಕಿಚ್ಚ ಎನ್ನುವ ಹೊಸ ಜನ್ಮ ಕೊಟ್ಟಿದ್ದೀರಾ ನೀವೆಲ್ಲ. ಕೊನೆವರೆಗೂ ಅದನ್ನ ಕಾಪಾಡಿಕೊಂಡು ಹೋಗುತ್ತೇನೆ ಎಂದರು.

    ಅಭಿಮಾನಿಗಳು ಸುದೀಪ್ ಗೆ ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಒತ್ತಾಯ ಮಾಡಿದರು.  ಮದಕರಿ ಚಿತ್ರದ ಡೈಲಾಗ್ ನೀವು ಕೇಳತೀರಾ. ಆದರೆ ಅದನ್ನ ಹೇಳಿದರೆ ಜಾತಿ ಬಗ್ಗೆ ಮಾತಾಡತೀನಿ ಅನ್ಕೋತಾರೆ. ಇದು ಯಾವ ನ್ಯಾಯ ಎಂದ ಸುದೀಪ್ ಬಳಿಕ  ಅಭಿಮಾನಿಗಳ ಒತ್ತಾಯದ ಮೇರೆಗೆ ಮದಕರಿ ಚಿತ್ರದ ಡೈಲಾಗ್  ಹೇಳಿದರು‌.

  • ನೀರಾವರಿ ಸೌಲಭ್ಯಗಳನ್ನ ಒದಗಿಸಲು ಸತೀಶ್‌ ಜಾರಕಿಹೊಳಿ ವಿಫಲ : ಹುಂದ್ರಿ ಆರೋಪ

    ನೀರಾವರಿ ಸೌಲಭ್ಯಗಳನ್ನ ಒದಗಿಸಲು ಸತೀಶ್‌ ಜಾರಕಿಹೊಳಿ ವಿಫಲ : ಹುಂದ್ರಿ ಆರೋಪ

    ಚಿಕ್ಕೋಡಿ: ಯಮಕನಮರಡಿ ಮತ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಶಾಸಕ ಸತೀಶ್‌ ಜಾರಕಿಹೊಳಿ ವಿಫಲರಾಗಿದ್ದಾರೆ ಎಂದು ಯಮಕನಮರಡಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸವರಾಜ ಹುಂದ್ರಿ (Basavaraj Hundri) ಆರೋಪಿಸಿದರು.

    ಬೆಳಗಾವಿ‌ (Belagavi) ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದ ಹೆಬ್ಬಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ಯಮಕನಮರಡಿ‌ ಕ್ಷೇತ್ರದಲ್ಲಿ ಹೀರಣ್ಯಕೇಶಿ, ಮಾರ್ಕೆಂಡಯ ಹಾಗೂ ಘಟಪ್ರಭಾ ಮೂರು ನದಿಗಳಿದ್ದರೂ, ಕ್ಷೇತ್ರದ ಜನ ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶಾಸಕ ಸತೀಶ್‌ ಜಾರಕಿಹೊಳಿ (Satish Jarkiholi) ಅವರು ಕಳೆದ 15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ‌ಹೀಗಾಗಿ ಜನ ಅವರಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಅಶೋಕ್ ಖೇಣಿಗೆ ಟಿಕೆಟ್ ಮಾರಿಕೊಂಡಿದೆ – ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಾಸಿಂಗ್ ಕಿಡಿ

    ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ. 2013 ಹಾಗೂ 2018 ಎರಡು ಬಾರಿ‌ ನಾನು ಟಿಕೆಟ್ ವಂಚಿತನಾಗಿದ್ದೇನೆ. ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ್ದೇನೆ. ಈ‌ ಬಾರಿ ಟಿಕೆಟ್ ಸಿಗುವ ವಿಶ್ವಾಸವನ್ನು ಬಸವರಾಜ‌ ಹುಂದ್ರಿ ವ್ಯಕ್ತಪಡಿಸಿದರು. ಇನ್ನೂ ವಿಜಯಪುರ ಶಾಸಕ ಯತ್ನಾಳ ಅವರು ಕೊನೆಯಲ್ಲಿ ಹೊಂದಾಣಿಕೆ ಮಾಡಕೊಳ್ಳಬಾರದು ಎನ್ನುವ ಸಂದೇಶ ನೀಡಿದ್ದಾರೆ. ಅವರ ಮಾತಿಗೆ ಬಿಜೆಪಿ (BJP) ಕಾರ್ಯಕರ್ತರ ಬದ್ಧವಿರುವಂತೆ ಮನವಿ ಮಾಡಿದರು. ಇದನ್ನೂ ಓದಿ: ಸಿಎಂ ಮೀಸಲಾತಿ ಗಿಮಿಕ್ ಕೋರ್ಟ್‍ನಲ್ಲಿ ನಿಲ್ಲುವುದಿಲ್ಲ: ಮುಖ್ಯಮಂತ್ರಿ ಚಂದ್ರು