ಕೊಪ್ಪಳ: ಆರ್‌ಎಸ್‌ಎಸ್ (RSS) ವಾರ್ ಮಧ್ಯೆ ಇದೀಗ ರಾಜ್ಯದಲ್ಲಿ ಲೆಟರ್ ವಾರ್ (Letter War) ಸಂಚಲನ ಮೂಡಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ವಿರುದ್ಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರು ಸಿಡಿದೆದ್ದಿದ್ದಾರೆ. ಪ್ರತಿದಿನ ಸುಮಾರು 100ರಿಂದ 150 ಟ್ರಕ್ ಮರಳು ಹಾಗೂ ಜಲ್ಲಿ ಕೊಪ್ಪಳ ಜಿಲ್ಲೆಯಿಂದ ಗದಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ ಹಾಗೂ ಬೆಂಗಳೂರು ನಗರಗಳಿಗೆ ಅನಧಿಕೃತವಾಗಿ ಸಾಗಣೆ ಆಗುತ್ತಿದ್ದು, ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ. ಇದರಲ್ಲಿ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದು, ತಕ್ಷಣವೇ ವರ್ಗಾವಣೆ ಮಾಡಬೇಕು ಅಂತಲೂ ಕೋರಿದ್ದರು.ಇದನ್ನೂ ಓದಿ: ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನ ವರ್ಗಾಯಿಸಿ – ಸಿಎಂಗೆ ಬಸವರಾಜ ರಾಯರೆಡ್ಡಿ ಪತ್ರ
ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಚೇರಿ ಮಧ್ಯಪ್ರವೇಶಿಸಿದೆ. ಕೊಪ್ಪಳ ಗಣಿ ಇಲಾಖೆಯ ಹಿರಿಯ ಅಧಿಕಾರಿಗೆ ಮುಖ್ಯಮಂತ್ರಿಗಳ ಆಫೀಸ್‌ನಿಂದ ಕರೆ ಹೋಗಿದೆ. ಕೊಪ್ಪಳದ ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾಗೆ ಕರೆ ಮಾಡಿದ್ದು, ರಾಯರೆಡ್ಡಿ ಆರೋಪದ ಬಗ್ಗೆ ಸಿಎಂ ಕಚೇರಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಳಿಕ ಅಲರ್ಟ್ ಆದ ಹಿರಿಯ ಅಧಿಕಾರಿ ಪುಷ್ಪಲತಾ, ಗಣಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಸಭೆ ಬೆನ್ನಲ್ಲೇ ರಾಯರೆಡ್ಡಿ ಪತ್ರಕ್ಕೆ ಕೌಂಟರ್ ಆಗಿ ಅಧಿಕಾರಿಗಳ ಪತ್ರ ವೈರಲ್ ಆಗಿದೆ. ಕುಕನೂರು ಬೈಪಾಸ್ ರಸ್ತೆಗೆ ಬಳಸುತ್ತಿರುವ ಮರ‍್ರಂ ಖನಿಜಕ್ಕೆ ಸರ್ಕಾರಕ್ಕೆ ರಾಜಧನ ಪಾವತಿಸುವಂತೆ ಸೂಚಿಸಿರುವುದು ಭ್ರಷ್ಟಾಚಾರವೇ ಅಂತ ಪ್ರಶ್ನೆ ಮಾಡಿದ್ದಾರೆ. ತಮ್ಮ ಹಾಗೂ ಬೆಂಬಲಿಗರು ಕೈಗೊಳ್ಳುವ ಕಾಮಗಾರಿಗೆ ಸಾಥ್ ನೀಡಿಲ್ಲ ಅಂತ ಈ ರೀತಿ ಆರೋಪಿಸಲಾಗುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದೆ.ಇದನ್ನೂ ಓದಿ: ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದಬಳಕೆ – ರಮೇಶ್ ಕತ್ತಿ ವಿರುದ್ಧ ರಾಯಚೂರಲ್ಲಿ FIR











