Tag: ಬಸವರಾಜ ಬೊಮ್ಮಾಯಿ

  • `ಒಂದು ದೇಶ ಒಂದು ಚುನಾವಣೆ’, ಪ್ರಧಾನಿ ಮೋದಿಯವರ ದಿಟ್ಟ ನಿರ್ಧಾರ: ಬೊಮ್ಮಾಯಿ

    `ಒಂದು ದೇಶ ಒಂದು ಚುನಾವಣೆ’, ಪ್ರಧಾನಿ ಮೋದಿಯವರ ದಿಟ್ಟ ನಿರ್ಧಾರ: ಬೊಮ್ಮಾಯಿ

    ನವದೆಹಲಿ: `ಒಂದು ದೇಶ ಒಂದು ಚುನಾವಣೆ’ (One Nation, One Election) ವ್ಯವಸ್ಥೆ ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಈ ತೀರ್ಮಾನವನ್ನು ವಿರೋಧಿಸುವವರು ದೇಶದ ಅಭಿವೃದ್ಧಿ ವಿರೋಧಿಗಳು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸಚಿವ ಸಂಪುಟದಲ್ಲಿ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒಪ್ಪಿಗೆ ನೀಡಿದೆ. ಅದನ್ನು ಇದೇ ಸಂಸತ್ ಅಧಿವೇಶನದಲ್ಲಿ (Parliament Session) ಮಂಡಿಸುವ ವಿಚಾರ ಇದೆ. ಇದು ಬಹಳ ಪ್ರಮುಖವಾದದ್ದು, ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿ ಆಗಬೇಕಾದರೆ ಪ್ರತಿನಿತ್ಯ ಚುನಾವಣೆ ಮಾಡಲು ಆಗುವುದಿಲ್ಲ.

    ಈ ದೇಶದಲ್ಲಿ ಸಹಕಾರಿ ವ್ಯವಸ್ಥೆಯಿಂದ ಹಿಡಿದು, ಪಂಚಾಯತಿ ಚುನಾವಣೆ, ವಿಧಾನಸಭೆ ಲೋಕಸಭೆವರೆಗೆ ಒಂದಿಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತವೆ. ಪ್ರತಿ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ ಅಷ್ಟೇ ಅಲ್ಲ ಆ ದಿನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಯಾದರೆ ಆಡಳಿತದಲ್ಲಿ ಸ್ಥಿರತೆ ಬರುತ್ತದೆ. ಅಭಿವೃದ್ಧಿ ಸ್ಥಿರತೆ ಬಹಳ ಮುಖ್ಯ. ಬೇರೆ ಯಾವ ದೇಶಗಳಲ್ಲಿಯೂ ಈ ರೀತಿಯ ವ್ಯವಸ್ಥೆ ಇಲ್ಲ. ಆದ್ದರಿಂದ ಇದಕ್ಕೆ ಇತಿಶ್ರೀ ಹಾಡಬೇಕೆಂದು ದಶಕಗಳಿಂದ ಚರ್ಚೆ ನಡೆಯುತ್ತಿತ್ರು. ನಮ್ಮ ಪ್ರಧಾನಮಂತ್ರಿಗಳು ಒಂದು ದಿಟ್ಟ ನಿರ್ಧಾರ ಮಾಡಿದ್ದು, ಇದು ದೂರಗಾಮಿಯಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಈ ದೇಶಕ್ಕೆ ಒಳ್ಳೆಯ ದಾಗುವಂತಹ ನಿರ್ಧಾರ. ಇದಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯ ಶಿಫಾರಸ್ಸಿನ ಅನ್ವಯ ಈ ಬದಲಾವಣೆ ತರುತ್ತಿದ್ದಾರೆ.

    ಇದಕ್ಕೆ ಎಲ್ಲರೂ ಚರ್ಚೆ ಮಾಡಬೇಕು, ಸ್ವಾಗತ ಮಾಡಬೇಕು. ದೇಶದ ಎಲ್ಲ ಜನರೂ ಸ್ವಾಗತಿಸಬೇಕು. ಇದನ್ನು ವಿರೋಧಿಸುವವರು ದೇಶದ ಅಭಿವೃದ್ಧಿಯ ವಿರೋಧಿಗಳಾಗಿದ್ದಾರೆ. ರಾಜಕೀಯ ಕಾರಣಗಳಿಗೆ ಇದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ, ಇಡೀ ದೇಶ ಈ ಬದಲಾವಣೆಯ ಪರವಾಗಿ ನಿಲ್ಲಬೇಕು. ಈ ದಿಟ್ಟ ತೀರ್ಮಾನ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

  • ಎಸ್‌ಎಂಕೆ ಅಗಲಿಕೆಯಿಂದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬಸವರಾಜ ಬೊಮ್ಮಾಯಿ

    ಎಸ್‌ಎಂಕೆ ಅಗಲಿಕೆಯಿಂದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬಸವರಾಜ ಬೊಮ್ಮಾಯಿ

    ನವದೆಹಲಿ: ಕರ್ನಾಟಕ (Karnataka) ಕಂಡಂತಹ ಅತ್ಯಂತ ಧೀಮಂತ, ಹಿರಿಯ ರಾಜಕಾರಣಿ, ಸ್ವಾತಂತ್ರ‍್ಯ ಪೂರ್ವದ ತಲೆಮಾರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತಾತ್ಮಕ ಅನೇಕ ಹುದ್ದೆ ಅಲಂಕರಿಸಿದ್ದ ನಮ್ಮ ಕನ್ನಡದ ಹೆಮ್ಮೆಯ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖ ಹಾಗೂ ದಿಗ್ಭ್ರಮೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಎಸ್.ಎಂ.ಕೃಷ್ಣ (SM Krishna) ಅವರ ಅಗಲಿಕೆಯಿಂದ ದೇಶ ಒಬ್ಬ ಹಿರಿಯರು, ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಾಗಿದೆ. ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪರಿಶುದ್ಧವಾದ ಬದುಕು ನಡೆಸಿ, ಆದರ್ಶಮಯ ಜೀವನ ನಡೆಸಿ, ಇಡೀ ಭಾರತಕ್ಕೆ ಪ್ರಿಯರಾಗಿರುವಂತಹವರು. ಕೃಷ್ಣ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ನಂತರ ತಮ್ಮ ಸಮಾಜವಾದಿ ಮನೋಭಾವನೆ ಬಿಟ್ಟುಕೊಡದೇ ಪಥಮ ಬಾರಿಗೆ ಸ್ವತಂತವಾಗಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ನಾಲ್ಕೂ ಸದನಗಳಲ್ಲಿ ಸೇವೆ ಮಾಡಿದ್ದಾರೆ. ರಾಜ್ಯದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ದೇಶದ ಸೇವೆ ಹಾಗೂ ರಾಜ್ಯದ ಸೇವೆ ಮಾಡಿದ್ದಾರೆ.ಇದನ್ನೂ ಓದಿ: ರಾಜಕಾರಣದ ಮೊದಲು ಗುರು, ಮಗನ ರೀತಿ ನೋಡುತ್ತಿದ್ದರು : ಎಸ್‌ಎಂಕೆ ನೆನೆದು ಡಿಕೆಶಿ ಕಣ್ಣೀರು

    ರಾಜಕಾರಣಿಗಳಿಗೆ ಆದರ್ಶವಾಗಿರುವ, ಆಡಳಿತಗಾರರಿಗೆ ಮಾರ್ಗದರ್ಶನವಾಗಿರುವ ಅವರ ಭಾಷೆ, ಮಿತವ್ಯಯದ ಮಾತು, ಅವರ ನಡವಳಿಗೆ ನಮ್ಮ ಯುವ ರಾಜಕಾರಣಿಗಳಿಗೆ ಅತ್ಯಂತ ಅವಶ್ಯವಿದೆ. ಅವರು ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬೆಂಗಳೂರಿನ ಬೆಳವಣಿಗೆ, ಐಟಿ-ಬಿಟಿ ವಿಚಾರದಲ್ಲಿ ಅವರು ನೀಡಿದ ಕೊಡುಗೆ ಅಪಾರ, ಅವರು ಜಾರಿಗೆ ತಂದಿರುವ ಮಿಡ್ ಡೆ ಮೀಲ್ ಯೋಜನೆ ಯಶಸ್ವಿಯಾಗಿದೆ. ಅವರು ರಾಜಕಾರಣದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ಕೂಡ ತಮ್ಮ ವ್ಯಕ್ತಿತ್ವವನ್ನು ಬಿಟ್ಟುಕೊಡದೇ ಅತ್ಯಂತ ಸ್ವಾಭಿಮಾನದ ಬದುಕು ನಡೆಸಿದರು.

    ಅವರು ಬಿಜೆಪಿ ಸೇರಿ ನಮ್ಮ ಪಧಾನ ಮಂತ್ರಿಗಳಿಗೆ ಅತ್ಯಂತ ಹತ್ತಿರದ ನಾಯಕರಾಗಿದ್ದರು. ಹಿಂದಿನ ಪೀಳಿಗೆಯ ಮಹತ್ವದ ಘಟ್ಟ ಕಳೆದುಕೊಂಡಂತಾಗಿದೆ. ಬರುವಂತಹ ದಿನಗಳಲ್ಲಿ ಅವರ ಬದುಕು ನಮಗೆ ಆದರ್ಶವಾಗಲಿ, ಎಸ್.ಎಂ. ಕೃಷ್ಣ ಅವರು ನನಗೆ ವಯಕ್ತಿಕವಾಗಿ ಅತ್ಯಂತ ಹತ್ತಿರವಾಗಿದ್ದ ನಾಯಕರು, ನಮ್ಮ ತಂದೆಯ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದ ನಾಯಕರಾಗಿದ್ದರು. ಅವರ ಅಗಲಿಗೆ ನನಗೆ ಬಹಳ ನೋವು ತಂದಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಪ್ರತಿ ವರ್ಷ ಸಂಗಿತೋತ್ಸವಕ್ಕೆ ದಂಪತಿ ಸಮೇತ ಬರುತ್ತಿದ್ದರು: ಶರಣ ಪ್ರಕಾಶ್ ಪಾಟೀಲ್ ಸಂತಾಪ

  • ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ತೇನೆ: ಬೊಮ್ಮಾಯಿ

    ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ತೇನೆ: ಬೊಮ್ಮಾಯಿ

    ಹುಬ್ಬಳ್ಳಿ: ಶಿಗ್ಗಾಂವಿ (Shiggaon) ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ತೇನೆ, ಸ್ವೀಕಾರ ಮಾಡ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್‌ಗೆ (Yasir Khan Pathan) ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದ ಜನರ ಸ್ಪಂದನೆ ನೋಡಿದರೆ ನಮಗೆ ಗೆಲ್ಲುವಂತಹ ನಿರೀಕ್ಷೆ ಇತ್ತು. ಆದರೆ ಕಾಂಗ್ರೆಸ್ ಪಕ್ಷದವರು ವಿಪರೀತ ಹಣದ ಹೊಳೆಯನ್ನು ಎರಡು ದಿನ ಹರಿಸಿ ಇಂದು ಗೆಲುವು ಸಾಧಿಸಿದ್ದಾರೆ. ಸರ್ಕಾರ ಅವರದ್ದೇ ಇದೆ, ಆಡಳಿತ ಪಕ್ಷದ ಶಾಸಕರು ಜನ ಆಯ್ಕೆ ಮಾಡಿದ್ದಾರೆ. ನಾವು ಶಿಗ್ಗಾಂವಿ, ಸವಣೂರು (Savanuru) ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಆ ಅಭಿವೃದ್ಧಿ ಪರ್ವ ಹಾಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಎಂದು ಬಯಸುತ್ತೇನೆ. 10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು ಬಂದಿದ್ದರು. ಸರ್ಕಾರದ ಯಂತ್ರ, ಹಣದಿಂದ ಅವರು ಗೆದ್ದಿದ್ದಾರೆ ಎಂದರು. ಇದನ್ನೂ ಓದಿ: ನನ್ನಂಥ ಮುಸ್ಲಿಂ ಸಮುದಾಯದ ಬಡ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ: ಯಾಸಿರ್ ಪಠಾಣ್

    ಮಹಾರಾಷ್ಟ್ರದಲ್ಲಿ (Maharashtra) ನಿರೀಕ್ಷೆಯಂತೆ ಮುನ್ನಡೆಯಲ್ಲಿ ಗೆಲ್ಲುತ್ತಾ ಇದ್ದೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವ ಹಾಗೂ ಮೂರು ಪಕ್ಷದ ಒಗ್ಗಟ್ಟಿನಿಂದ ಕಳೆದ ಮೂರು ವರ್ಷದ ಸರ್ಕಾರದ ಅಭಿವೃದ್ಧಿ ಮೇಲೆ ಜಯ ಸಿಕ್ಕಿದೆ. ಲೋಕಸಭಾ ನಂತರ ನರೇಂದ್ರ ಮೋದಿಯವರ ಪರ ಜನ ನಿಂತಿರೋದು ಗೊತ್ತಾಗುತ್ತಿದೆ. ವಿರೋಧ ಪಕ್ಷದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೀಟು ಹೆಚ್ಚಿಸಿ ಬೀಗುತ್ತಿದ್ದರೋ ಅವರಿಗೆ ಅವರ ಸ್ಥಾನವನ್ನು ಮಹಾರಾಷ್ಟ್ರದ ಜನ ತೋರಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? – ದೇವೇಂದ್ರ ಫಡ್ನವಿಸ್‌ ಹೇಳಿದ್ದೇನು?

    ಶಿಗ್ಗಾಂವಿಯಲ್ಲಿ ಲೋಕಸಭಾ ಚುನಾವಣೆ ನಂತರ ನಾವು ಚೆನ್ನಾಗಿ ಕೆಲಸ ಮಾಡಿದ್ದೇವೆ. ಆದರೆ ಇಡೀ ಸರ್ಕಾರನೇ ಬಂತು, ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಅನುಕೂಲ ಇರುತ್ತದೆ. ನಾವು ಕೂಡ ಒಂದು ಕಾಲದಲ್ಲಿ 17 ಬೈಎಲೆಕ್ಷನ್‌ನಲ್ಲಿ 13ನ್ನು ಗೆದ್ದಿದ್ದೆವು. ಸರ್ಕಾರದ ಕೆಲಸದ ಮೇಲೆ ವೋಟ್ ಬರುತ್ತೆ ಎಂದೇನಿಲ್ಲ. ನಾವು ಅಷ್ಟು ಗೆದ್ದು ನಂತರ ಸರ್ಕಾರ ಕಳೆದುಕೊಂಡಿದ್ದೆವು. ಅದಕ್ಕೆ ಕಾಂಗ್ರೆಸ್ (Congress) ಸರ್ಕಾರ ಒಂದುವರೆ ವರ್ಷದ ಆಡಳಿತಕ್ಕೆ ಪ್ರಮಾಣ ಪತ್ರ ಎಂದು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ

  • ಅನ್ನಭಾಗ್ಯ ಎಂದು ಹೇಳಿ ಜನರ ಅನ್ನ ಕಸಿದುಕೊಳ್ಳುತ್ತಿದೆ ಕಾಂಗ್ರೆಸ್ ಸರ್ಕಾರ – ಬಸವರಾಜ ಬೊಮ್ಮಾಯಿ

    ಅನ್ನಭಾಗ್ಯ ಎಂದು ಹೇಳಿ ಜನರ ಅನ್ನ ಕಸಿದುಕೊಳ್ಳುತ್ತಿದೆ ಕಾಂಗ್ರೆಸ್ ಸರ್ಕಾರ – ಬಸವರಾಜ ಬೊಮ್ಮಾಯಿ

    ಬೆಂಗಳೂರು: ಅನ್ನಭಾಗ್ಯ ಎಂದು ಹೇಳಿ ಜನರ ಅನ್ನ ಕಸಿದುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಕರ್ನಾಟಕದ ಜನರ ಜೀವನ ನರಕ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

    ರೇಷನ್ ಕಾರ್ಡ್ ರದ್ದಾಗಿರುವ (Ration Card) ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸ್ಲಮ್‌ನಲ್ಲಿ ವಾಸಿಸಲು ಆಗದ ಜಾಗದಲ್ಲಿ ಜನರು ವಾಸವಾಗಿದ್ದಾರೆ. ಅಂಥವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಅವರು ತೆರಿಗೆ ಕಟ್ಟುವವರು ಎಂದು ಹೇಳುತ್ತಾರೆ. ಅವರೆಲ್ಲ ತೆರಿಗೆ ಕಟ್ಟುತ್ತಾರಾ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಕಲುಷಿತ ನೀರು ಸೇವನೆ: ನಿಪ್ಪಾಣಿ ತಾಲೂಕಿನ ಕಸನಾಳದಲ್ಲಿ 30 ಜನ ಅಸ್ವಸ್ಥ

    ಬಿಪಿಎಲ್ ಕಾರ್ಡ್ ರದ್ದಾದರೆ ಕೇವಲ ಅಕ್ಕಿ ಮಾತ್ರ ರದ್ದಾಗುವುದಿಲ್ಲ. ಔಷಧಿ, ಆಸ್ಪತ್ರೆ ಸೌಲಭ್ಯ ಎಲ್ಲವೂ ಸ್ಥಗಿತಗೊಳ್ಳುತ್ತವೆ. ಜನರ ಕಷ್ಟ ಅವರಿಗೆ ಅರ್ಥ ಆಗುತ್ತಿಲ್ಲ. ಮುಡಾ ಎಂದು ಹೇಳಿ ಸೈಟ್ ವಾಪಸ್ ನೀಡಿದ್ದರು. ಈಗ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೆ ಅರ್ಜಿ ಹಾಕಬೇಕಂತೆ ಇದೇನು ಮುಖ್ಯಮಂತ್ರಿಗಳೆ? ಇದು ಅತ್ಯಂತ ಜನ ವಿರೋಧಿ ಸರ್ಕಾರ. ಇದು ಯೂಟರ್ನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

    ಕಾರ್ಡ್ ರದ್ದು ಮಾಡಿರುವುದನ್ನು ವಿರೋಧಿಸಿದ ಮೇಲೆ ಈಗ ವಾಪಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಾರೆ. ರೇಷನ್ ಕಾರ್ಡ್ ರದ್ದಾದವರು ಅರ್ಜಿ ಹಾಕಿದರೆ ತಕ್ಷಣ ವಾಪಸ್ ಕೊಡಲಾಗುವುದು ಎಂದು ಹೇಳುತ್ತಾರೆ. ಅರ್ಜಿ ಹಾಕಿದ ಮೇಲೆ ಕಾರ್ಡ್ ಬರುವುದು ಯಾವಾಗ? ಅಲ್ಲಿಯ ತನಕ ಕಾರ್ಡ್ ರದ್ದಾಗಿರುವ ಬಡವರು ಏನು ತಿನ್ನಬೇಕು ಎಂದು ಕಿಡಿಕಾರಿದರು.

    ಈ ಸರ್ಕಾರ ಹೀಗೆ ಮಾಡಿದರೆ ಹೆಚ್ಚು ದಿನ ಇರುವುದಿಲ್ಲ. ಕೇಂದ್ರ ಸರ್ಕಾರದ (Central Government) ಮಾನದಂಡದ ಪ್ರಕಾರ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಅನ್ನ ಕೊಡುತ್ತಿದೆ. ಬೇರೆ ರಾಜ್ಯದಲ್ಲಿ ಎಲ್ಲಿ ರೇಷನ್ ಕಾರ್ಡ್ ರದ್ದಾಗಿದೆ? ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ರದ್ದಾಗಿದೆ? ಪ್ರಧಾನಿ ನರೇಂದ್ರ ಮೋದಿ ಅಕ್ಕಿ ಕೊಟ್ಟರು. ರಾಜ್ಯ ಸರ್ಕಾರ ಹತ್ತು ಕೆಜಿ ಕೊಡುತ್ತೇವೆ ಎಂದು ಹೇಳಿದ್ದರು. ಬಳಿಕ ಅದರ ಬದಲು ಹಣ ಕೊಡುತ್ತೇವೆ ಎಂದರು. ಇವರಿಗೆ ಅಕ್ಕಿಗೆ ಹಣ ಕೊಡಲು ದುಡ್ಡಿಲ್ಲ. ಅದನ್ನು ಮರೆಮಾಚಲು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಇವರು ಪಾಪದ ಕೃತ್ಯ ಮಾಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಅಮೆರಿಕದ ಆರೋಪ ಆಧಾರರಹಿತ: ಅದಾನಿ ಸಮೂಹ

  • ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ: ಬೊಮ್ಮಾಯಿ

    ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ: ಬೊಮ್ಮಾಯಿ

    – ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ

    ಹುಬ್ಬಳ್ಳಿ: ಈ ಉಪಚುನಾವಣೆ ಬಿಜೆಪಿ (BJP) ಬಸವರಾಜ ಬೊಮ್ಮಾಯಿ (Basavaraj Bommai) ವರ್ಸಸ್ ಕಾಂಗ್ರೆಸ್ ಸರ್ಕಾರ. ಇದು ಕಾಂಗ್ರೆಸ್‌ನ ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಣದ ಹೊಳೆ ಹರಿಸೋಕೆ ಆರಂಭ ಮಾಡಿದ್ದಾರೆ. ಹಣ ಹಂಚುವುದರಲ್ಲಿ ಅವರಲ್ಲೇ ಪೈಪೋಟಿ ನಡೆದಿದೆ. ಸಮುದಾಯವಾರು ಶಾಸಕರು, ಸಚಿವರು ಹಣ ಹಂಚುತ್ತ ಇದ್ದಾರೆ. ಇಂತಹ ಹಣದ ಹೊಳೆ ಎಲ್ಲೂ ನೋಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: Haveri| ನೀರಿನ ತೊಟ್ಟಿಯಲ್ಲಿ ಮುಳುಗಿ ಬಾಲಕ ಸಾವು

    ವಕ್ಫ್ ಹಿನ್ನೆಲೆ ಹಾವೇರಿ (Haveri) ರೈತನ ಸಾವಿನ ವಿಚಾರವಾಗಿ ಮಾತನಾಡಿ, ಇದು ಸತ್ಯವಾದದ್ದು, ಕೋರ್ಟ್ಗೆ ಹೋಗುವುದಕ್ಕಾಗಲ್ಲ. ಅದಾಲತ್‌ಗೆ ಹೋಗಬೇಕು ಅಲ್ಲಿ ಸಿಗಲ್ಲ. ಅಧಿಕಾರಿಗಳು ಮಾತು ಕೇಳಲ್ಲ. ಇಂತಹ ಪರಿಸ್ಥಿತಿ ಸಿಲುಕಿದ ರೈತರು ಏನು ಮಾಡುತ್ತಾರೆ? ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ ಮೇಲೆ ಅವರ ಮೇಲೆ ಕೇಸ್ ಹಾಕುತ್ತಾರೆ. ಇದು ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ಹಿಂದೆ ಎಮರ್ಜೆನ್ಸಿಯಲ್ಲಿ ಇದೆಲ್ಲ ಆಗಿದೆ. ಆಮೇಲೆ ಪರಿಸ್ಥಿತಿ ಹೇಗಾಗಿದೆ ಅನ್ನೋದು ಗೊತ್ತಿದೆ. ಅದೇ ಈ ಸರ್ಕಾರಕ್ಕೂ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ – ಖತರ್ನಾಕ್ ಕಳ್ಳರ ಬಂಧನ

    ಯತ್ನಾಳ್ ಮೇಲೆ ಪ್ರಾಸಿಕ್ಯೂಷನ್ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷ ಧಮನ ಮಾಡಬೇಕು. ಅವರ ನೈತಿಕತೆ ಕುಗ್ಗಿಸುವ ಪ್ರಯತ್ನ ಸಾಧ್ಯವಾಗಲ್ಲ. ಎಷ್ಟು ಒತ್ತಡ ಹಾಕಿದರೂ ಪುಟಿದು ಏಳುತ್ತೇವೆ. ಕೋವಿಡ್ ವೇಳೆ ಪಿಪಿಇ ಕಿಟ್ ಉತ್ಪಾದನೆ ಇರಲಿಲ್ಲ. ವೈದ್ಯರು, ನರ್ಸ್ಗಳಿಗೆ ಪಿಪಿಇ ಕಿಟ್ ಇಲ್ಲದೇ ಕೆಲಸ ಮಾಡೋಕೆ ಆಗಲ್ಲ. ಹೀಗಾಗಿ ಪಿಪಿಇ ಕಿಟ್ ತಂದಿರೋದು ನಿಜ. ಈ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಆಗಿದೆ. ಕಾರಣಗಳನ್ನು ಆಗಲೇ ಆರೋಗ್ಯ ಸಚಿವರು ಕೊಟ್ಟಿದ್ದಾರೆ. ನ್ಯಾಷನಲ್ ಡಿಸಾಸ್ಟರ್ ಮಾಡಿದ್ರು, ಎನ್‌ಡಿಆರ್‌ಎಫ್ ಇಂದ ಹಣ ತಗೊಂಡಿದ್ದೆವು. ಎಲ್ಲಾ ಮುಗಿದ ಮೇಲೆ ಅದನ್ನ ವಿಶ್ಲೇಷಣೆ ಮಾಡೋದು ಬೇರೆ. ಜನರ ಪ್ರಾಣ ಉಳಿಸಲು ಕೆಲವು ನಿರ್ಣಯ ತಗೊಂಡಿದ್ದೇವೆ. ಅದೇ ಒಂದು ಅಪರಾಧ ಅಂತಾ ಬಿಂಬಿಸೋದು ಎಷ್ಟು ಸರಿ? ಇವೆಲ್ಲ ಕಾನೂನಿನ ಪ್ರಕಾರ ಆಗಿದೆ ಎಂದರು. ಇದನ್ನೂ ಓದಿ: ಮುಡಾದಲ್ಲಿ ಸಿಎಂ ಪ್ರಭಾವಕ್ಕೆ ಮತ್ತೊಂದು ಸಾಕ್ಷಿ – ಸಿಎಂ ಪತ್ನಿ ಕ್ರಯಪತ್ರದ ಮುದ್ರಾಂಕ ಶುಲ್ಕ ತಹಶೀಲ್ದಾರ್‌ರಿಂದಲೇ ಪಾವತಿ

    ಚುನಾವಣೆ ವೇಳೆ ಕಾಂಗ್ರೆಸ್ (Congress) ಮೇಲೆ ಬಂದಂತಹ ಆರೋಪದ ವಿಚಾರವಾಗಿ ಮಾತನಾಡಿ, ಒಬ್ಬೊಬ್ಬ ಸಚಿವರ ಮೇಲೆ ಆರೋಪ ಬರ್ತಾ ಇದೆ. ಬೇರೆಡೆ ಸೆಳೆಯೋದಕ್ಕೆ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡ್ತಾ ಇದ್ದಾರೆ. ನರೇಂದ್ರ ಮೋದಿಯವರು ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಉತ್ತರ ಕೊಡೋಕೆ ಆಗದೆ ವರದಿ ಕ್ಯಾಬಿನೆಟ್‌ನಲ್ಲಿ ಒಪ್ಪಿಕೊಳ್ಳದೆ ಲೀಕ್ ಮಾಡಿದ್ದಾರೆ. ಇಷ್ಟು ದಿನ ಬಿಟ್ಟು ಈಗ್ಯಾಕೆ ಲೀಕ್ ಮಾಡಿದ್ದಾರೆ? ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ. ಆದೇಶದಲ್ಲಿ ಎಲ್ಲೂ ಕೂಡ ಗೆಜೆಟ್ ನೋಟಿಫಿಕೇಟಿನ್ ರದ್ದಾಗಿಲ್ಲ. ಎಲ್ಲಿಯವರೆಗೂ ಗೆಜೆಟ್ ನೋಟಿಫಿಕೇಟಿನ್ ರದ್ದಾಗೋದಿಲ್ಲ ಅಲ್ಲಿಯವರೆಗೂ ತೂಗು ಕತ್ತಿ ಇರೋದೇ. ನೋಟಿಸ್ ವಾಪಸ್ ಪಡೆದಿದ್ದು, ಮತ್ತೆ ಕೊಡೋಕೆ ಎಷ್ಟೊತ್ತು ಬೇಕು? ಗೆಜೆಟ್ ವಾಪಸ್ ಆಗದೆ ಹೋದ್ರೆ ರೈತರಿಗೆ ಮೋಸ ಮಾಡಿದಂತೆ ಎಂದು ಹೇಳಿದರು. ಇದನ್ನೂ ಓದಿ: ಜಮೀರ್‌ನನ್ನು ಗಡಿಪಾರು ಮಾಡೋದು ಬೇಡ ಆಲದ ಮರಕ್ಕೆ ನೇಣು ಹಾಕಿ: ಮುತಾಲಿಕ್ ಕಿಡಿ

  • ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರು: ಬೊಮ್ಮಾಯಿ ಟೀಕೆ

    ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರು: ಬೊಮ್ಮಾಯಿ ಟೀಕೆ

    -ಸಿಎಂ ಗೌರವ ಕಡಿಮೆ ಆಗಿದೆ

    ಹುಬ್ಬಳ್ಳಿ: ಮುಡಾ ಕೇಸನ್ನು (MUDA Case) ಏಕಸದಸ್ಯ ಪೀಠ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರಾಗಿದ್ದು, ಸಿಎಂ ಗೌರವ ಕಡಿಮೆ ಆಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟೀಕಿಸಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮುಡಾ ಪ್ರಕರಣದಲ್ಲಿ ಸಿಎಂಗೆ ವಿಚಾರಣೆ ಬಗ್ಗೆ ಮಾತನಾಡಿ, ಆ ಕೇಸನ್ನು ಏಕಸದಸ್ಯ ಪೀಠ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರಾಗಿದ್ದು, ಸಿಎಂ ಗೌರವ ಕಡಿಮೆ ಮಾಡಿದೆ. ಇತರ ಹಲವಾರು ಪ್ರಕರಣಗಳು ಇವೆ. ಸರ್ಕಾರಿ ನೌಕರರು ರಾಜಕೀಯ ಒತ್ತಡದಿಂದ ಕುಗ್ಗಿದ್ದಾರೆ. ಅವರಿಗೆ ಕಾನೂನುಬಾಹಿರ ಕೆಲಸ ಮಾಡಲು ಒತ್ತಡ ಇದೆ. ನಮ್ಮ ಶಿಗ್ಗಾಂವಿ ಕ್ಷೇತ್ರದಲ್ಲಿ ಸಹ ಹೀಗೆ ಆಗುತ್ತಿದೆ. ಶಾಲೆಯ ಶಿಕ್ಷಕರಿಗೆ ಮಂಥ್ಲಿ ಫಿಕ್ಸ್ ಮಾಡಲು ಹೊರಟಿದ್ದಾರೆ. ಇದಕ್ಕಿಂತ ಅಧಿಪತನ ಏನು ಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: US Election: ಗೆಲುವಿನ ಸನಿಹದಲ್ಲಿ ಟ್ರಂಪ್‌ – ಸ್ವಿಂಗ್‌ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ

    ಗುತ್ತಿಗೆದಾರರು ನಮ್ಮ ಮೇಲೆ ಆರೋಪ ಮಾಡಿದ್ದರು. ಇವತ್ತಿನವರಗೆ ಏನೂ ಸಾಬೀತು ಮಾಡಲು ಆಗಲಿಲ್ಲ. ಅದನ್ನ ರಾಜಕೀಯವಾಗಿಯೂ ಬಳಕೆ ಮಾಡಿಕೊಂಡರು. ಈಗ ಲಿಕ್ಕರ್ ಅಸೋಸಿಯೇಷನ್ ಆರೋಪ ಮಾಡಿದೆ, ಸಿಎಂ ಉತ್ತರ ಕೊಡಬೇಕಲ್ಲಾ? ಸಿಎಂ ಅವರ ಕೈಯಲ್ಲಿ ನೇರವಾಗಿ ಫೈನಾನ್ಸ್ ಇದೆ. ಒಂದೊಂದು ಲಿಕ್ಕರ್ ಲೈಸೆನ್ಸ್ಗೆ ಎಷ್ಟು ದುಡ್ಡು ಹೋಗಿದೆ ಎಂದು ತನಿಖೆ ಆಗಬೇಕು. ಈಗ ಏನು ಹೇಳುತ್ತಾರೆ ಅವರು? ಪೇ ಸಿಎಂ ಅಂತಿದ್ರು, ಈಗ ಪೇ ಡಬಲ್ ಸಿಎಂ ಹಾಗೂ ಸಚಿವರಿಗೆ ಅನ್ನುತ್ತೇವೆ. ಭ್ರಷ್ಟಾಚಾರದಲ್ಲಿ ಇಡೀ ಸರ್ಕಾರ ಮುಳುಗಿದೆ. ಯಾವ ಇಲಾಖೆಯಲ್ಲಿ ಕೇಳಿದರೂ ಭ್ರಷ್ಟಾಚಾರ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂಗೆ ಕೆಲ ನಿರ್ದಿಷ್ಟ ಪ್ರಶ್ನೆ ಕೇಳಲೇಬೇಕು, ಇಲ್ಲದಿದ್ದರೆ ತನಿಖಾಧಿಕಾರಿ ವಿರುದ್ಧವೇ ಕಾನೂನು ಹೋರಾಟ: ಸ್ನೇಹಮಯಿ ಕೃಷ್ಣ

    ಶಿಗ್ಗಾಂವಿ (Shiggaon) ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಜನ ಅನುಭವಿಸಿದ್ದಾರೆ, ಕಾಂಗ್ರೆಸ್ ಹಾಗೂ ಶಿಗ್ಗಾಂವಿ ಜನರ ಬಗ್ಗೆ ಬಹಳ ಅಂತರ ಇದೆ. ಕಾಂಗ್ರೆಸ್ ಸರ್ಕಾರ ಇದೆ, ಯಾವುದೇ ಕ್ಷೇತ್ರದಲ್ಲಿ ಏನಾಗಿದೆ ಎಂದು ನೋಡಲಿ. ಅವರು ಸವಣೂರಲ್ಲಿ 250 ಬೆಡ್ ಆಸ್ಪತ್ರೆ, ಶಿಗ್ಗಾಂವಿಯಲ್ಲಿ ಟ್ರೈನಿಂಗ್ ಸೆಂಟರ್, ಟೆಕ್ಸ್ಟೈಲ್ ಪಾರ್ಕ್, ಸವಣೂರಲ್ಲಿ ಆಯುರ್ವೇದ ಕಾಲೇಜ್ ಆಗಿದೆ ಅದನ್ನು ನೋಡಲಿ. 12 ಸಾವಿರ ಮನೆ ಕಟ್ಟಿದ್ದೇನೆ. ಇಲ್ಲಿ ಬೆಂಗಳೂರಿಗಿಂತ ಚೆನ್ನಾಗಿ ರಸ್ತೆ ಇದೆ. ಸಿಎಂ ಕಾರಿನಲ್ಲಿ ಹೋಗುವಾಗ ನಿದ್ದೆ ಮಾಡುತ್ತಾರೇನೋ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾರು, ಪಿಕಪ್ ವಾಹನ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು

    ಕಾಂಗ್ರೆಸ್ (Congress) ನಾಯಕರು ಹತಾಶರಾಗಿದ್ದಾರೆ, ಎಲ್ಲ ಸಚಿವ ಶಾಸಕರು ಹಾಗೂ ಈ ಸರ್ಕಾರ ನನ್ನ ಮೇಲೆ ದಂಡೆತ್ತಿ ಬಂದಿದೆ. ನಾನು ಪ್ರಶ್ನೆ ಮಾಡುತ್ತೇನೆ, ನನ್ನ ಕ್ಷೇತ್ರದ ಅಭಿವೃದ್ಧಿ ಏನಾಗಿದೆ ಎಂದು ನಾನು ಹೇಳುತ್ತೇನೆ. ಸಿಎಂ ಕ್ಷೇತ್ರದ ವರುಣಾದಲ್ಲಿ ಏನು ಅಭಿವೃದ್ಧಿ ಆಗಿದೆ ಎಂದು ಹೇಳಲಿ. ಸಚಿವರು ತಮ್ಮ ಕ್ಷೇತ್ರದ ಬಗ್ಗೆ ಹೇಳಲಿ. ಅಲ್ಪಸಂಖ್ಯಾತರ ಬಗ್ಗೆ ಇಷ್ಟೆಲ್ಲಾ ಮಾತಾಡುತ್ತಾರಲ್ಲಾ ಮಸೀದಿ ದರ್ಗಾಗಳಿಗೆ 10 ಸಾವಿರ ರೂಪಾಯಿ ಕೊಟ್ಟಿದ್ದೇನೆ. ಇವರ ಸರ್ಕಾರ ಬಂದ ಮೇಲೆ ವಾಪಸ್ ತೆಗೆದುಕೊಂಡರಲ್ವಾ? ಹಾಲುಮತದ ಸಮಾಜದ ಬಗ್ಗೆ ಸಿಎಂಗೆ ಮಾತಾನಾಡಲು ಹಕ್ಕೇ ಇಲ್ಲಾ ಎಂದರು. ಇದನ್ನೂ ಓದಿ: ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್

    ಕನಕದಾಸರ ಹುಟ್ಟುರು, ಕಾಗಿನೆಲೆ ಎರಡನ್ನೂ ಅಭಿವೃದ್ಧಿ ಮಾಡಿದ್ದು ಯಡಿಯೂರಪ್ಪ. ಕನಕಪೀಠದ ನಮ್ಮ ಗುರುಗಳಿಗೆ ಸಿಎಂ ಆಗಿ ದಾಷ್ಟದ ಮಾತನ್ನು ಆಡೋದು ಅವಮಾನವಾಗಿದೆ. ನಮ್ಮ ಗುರುಗಳು ಅವರು, ಇಲ್ಲಿ ಗುರು ಮತ್ತು ಭಕ್ತರ ಸಂಬಂಧ ಇದೆ. ಸೋಲಿನ ಭಯದಲ್ಲಿ ಇವರು ಗುರುಗಳನ್ನು ಎಳೆದು ತಂದಿದ್ದಾರೆ. ಸಿಎಂ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Gujarat| ನಿರ್ಮಾಣ ಹಂತದಲ್ಲಿದ್ದ ಬುಲೆಟ್ ರೈಲು ಸೇತುವೆ ಕುಸಿತ- ಮೂವರು ಕಾರ್ಮಿಕರು ಸಾವು

  • ಪಿಎಂಗೆ ಯಾವ ರೀತಿ ಸಂಬೋಧಿಸಬೇಕು ಎಂಬುದು ಸಿಎಂ ಮರೆತಿದ್ದಾರಂದ್ರೆ, ಇದು ದುರ್ದೈವದ ಸಂಗತಿ- ಬೊಮ್ಮಾಯಿ

    ಪಿಎಂಗೆ ಯಾವ ರೀತಿ ಸಂಬೋಧಿಸಬೇಕು ಎಂಬುದು ಸಿಎಂ ಮರೆತಿದ್ದಾರಂದ್ರೆ, ಇದು ದುರ್ದೈವದ ಸಂಗತಿ- ಬೊಮ್ಮಾಯಿ

    ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಅವರು ಈ ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿಯಾಗಿ ಪ್ರಧಾನ ಮಂತ್ರಿಗೆ ಯಾವ ರೀತಿ ಸಂಬೋಧಿಸಬೇಕು ಎಂಬುದು ಕೂಡ ಮರೆತಿದ್ದಾರೆ. ಇದು ದುರ್ದೈವದ ಸಂಗತಿ ಎಂದು ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯ ಬಂದರೆ, ನಾವು ಮುಖ್ಯಮಂತ್ರಿಗಳಿಗೆ ಯಾವ ರೀತಿ ಗೌರವ ಕೊಡುತ್ತೇವೆ. ಅದೇ ರೀತಿ ಅವರು ಪ್ರಧಾನಮಂತ್ರಿಗೆ ಗೌರವ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ದೆಹಲಿಗೆ ಕಲುಷಿತ ನೀರು ಪೂರೈಕೆ – ಸಿಎಂ ಮನೆ ಮುಂದೆ ಕೊಳಕು ನೀರು ಸುರಿದ ಸ್ವಾತಿ ಮಲಿವಾಲ್

    ಇಷ್ಟು ಕೂಡ ಸೌಜನ್ಯ ಇಲ್ಲದೆ ಹೋದರೆ ಪ್ರಜಾಪ್ರಭುತ್ವಕ್ಕೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಇದು ಶೋಭೆ ತರುವಂತದ್ದಲ್ಲ ಎಂದರು. ಇದನ್ನೂ ಓದಿ: ಕೆಟ್ಟು ನಿಂತ ಕಾರಿಗೆ ಲಾರಿ ಡಿಕ್ಕಿ – ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

  • ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣ ಪರಿಚಯಿಸಿದ್ದೇ ಕಾಂಗ್ರೆಸ್: ಬೊಮ್ಮಾಯಿ

    ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣ ಪರಿಚಯಿಸಿದ್ದೇ ಕಾಂಗ್ರೆಸ್: ಬೊಮ್ಮಾಯಿ

    ಹಾವೇರಿ: ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣವನ್ನು ಪರಿಚಯ ಮಾಡಿಕೊಟ್ಟು ಕರಗತ ಮಾಡಿರುವುದೇ ಕಾಂಗ್ರೆಸ್ (Congress) ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಶಿಗ್ಗಾಂವಿಯಲ್ಲಿ (Shiggaon) ಮಾಧ್ಯಮಗಳೊಂದಿಗೆ ರಾಜ್ಯ ಸರ್ಕಾರದ ಸಚಿವರು ಉಪಚುನಾವಣೆಯಲ್ಲಿ ಅಕ್ರಮ ತಡೆಯಲು ಬರುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ. ಚುನಾವಣಾ ಅಕ್ರಮ ತಡೆಯಲು ಎಲೆಕ್ಷನ್ ಕಮಿಷನ್ ಇದೆ. ಅವರು ಅವರ ಕಾರ್ಯವನ್ನು ಮಾಡುತ್ತಿದ್ದಾರೆ. ಆಡಳಿತ ಮಾಡುವ ಸಚಿವರು ಕೆಲಸ ಬಿಟ್ಟು ಅದನ್ನು ಸಚಿವರು ಮಾಡಲು ಬರುತ್ತಿರುವುದು ಹಾಸ್ಯಸ್ಪದ. ಇಡೀ ದೇಶಕ್ಕೆ ಕತ್ತಲ ರಾತ್ರಿ ರಾಜಕಾರಣ ಪರಿಚಯಿಸಿದವರೇ ಕಾಂಗ್ರೆಸ್‌ನವರು ಎಂದು ಹೇಳಿದರು. ಇದನ್ನೂ ಓದಿ: ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ – ಯತ್ನಾಳ್, ಪ್ರತಾಪ್ ಸಿಂಹ, ಯದುವೀರ್, ಸುಮಲತಾಗೆ ಕೊಕ್

    ವಕ್ಫ್ ಆಸ್ತಿ ವಿಚಾರದಲ್ಲಿ ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತದೆ. ಸಾಧನೆ ಸರ್ಕಾರದ್ದು ಇರುತ್ತದೆ, ವಿರೋಧ ಪಕ್ಷ ತನ್ನ ಕೆಲಸ ಮಾಡುತ್ತದೆ. ರೈತರಿಗೆ ಯಾರು ನೋಟಿಸ್ ಕೊಟ್ಟರು. 2024ರಲ್ಲಿ ರೈತರ ಪಹಣಿಯಲ್ಲಿ ದಾಖಲೆ ಕೂತಿದೆ. ಅದನ್ನು ಯಾವ ಸರ್ಕಾರ ಮಾಡಿದೆ ಎನ್ನುವುದು ಗೊತ್ತಾಗಿದೆ. ತಾವು ಮಾಡಿದ ತಪ್ಪು ಅವ್ಯವಹಾರ ತಾವು ಮಾಡುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಹಾಕುವ ಪ್ರವೃತ್ತಿ ಈ ಸರ್ಕಾರ ಮಾಡುತ್ತಿದೆ. ಎಲ್ಲವೂ ಸ್ಪಷ್ಟವಾಗಿದೆ. ತುಷ್ಟೀಕರಣ ರಾಜಕಾರಣ ಜನರಿಗೆ ಗೊತ್ತಿದೆ. ವಕ್ಫ್ ವಿಚಾರ ಉಪಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರು ಮಾತ್ರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ

    ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಅನುದಾನ ಬಿಡುಗಡೆಯ ದಾಖಲೆ ಇದೆ ಎಂದು ಹೇಳಿರುವ ಸಚಿವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಕೊಟ್ಟಿರುವ ದಾಖಲೆ ಕೊಡಲಿ. ಯಾವ ಯಾವ ಇಲಾಖೆಯಲ್ಲಿ ಎಷ್ಟು ವಿಶೇಷ ಅನುದಾನ ಕೊಟ್ಟಿದ್ದಾರೆ ದಾಖಲೆ ಕೊಡಲಿ. ಜನರು ಕೇಳುತ್ತಿದ್ದಾರೆ, ಯಾಕೆ ಮುಚ್ಚಿಡುತ್ತಾರೆ? ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ಹೇಳುವುದಲ್ಲ. ನೂರು ಕೋಟಿ ವಿಶೇಷ ಅನುದಾನ ಕೊಟ್ಟಿರುವ ದಾಖಲೆ ನೀಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

    ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ದಿನ ಜನರ ವಿಶ್ವಾಸ, ಪ್ರೀತಿ ಹೆಚ್ಚಾಗುತ್ತಿದೆ. ಮುಂದೆ ಹೋಗುತ್ತ ಜನಸಾಗರವೇ ಸೇರಿ ಕ್ಷೇತ್ರದಲ್ಲಿ ಗೆಲುವಿನ ಯಾತ್ರೆ ಮುಂದುವರೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ; ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧ

  • Waqf Row| ಬಿಜೆಪಿ ಅವಧಿಯಲ್ಲಿ ರೈತರಿಗೆ ನೋಟಿಸ್‌ – ಕಾಂಗ್ರೆಸ್‌ ದಾಖಲೆ ಬಿಡುಗಡೆ

    Waqf Row| ಬಿಜೆಪಿ ಅವಧಿಯಲ್ಲಿ ರೈತರಿಗೆ ನೋಟಿಸ್‌ – ಕಾಂಗ್ರೆಸ್‌ ದಾಖಲೆ ಬಿಡುಗಡೆ

    ವಿಜಯಪುರ: ವಕ್ಫ್‌ ವಿಚಾರದಲ್ಲಿ (Waqf Row) ಕಾಂಗ್ರೆಸ್‌ ಈಗ ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಸಿಎಂ ಬೊಮ್ಮಾಯಿ (CM Basavaraj Bommai) ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್‌ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ.

    ವಿಜಯಪುರ (Vijayapura) ನಗರದ ಮಹಲ್ ಬಾಗಾಯತ್ ಹಳ್ಳಿಯ 10 ರೈತರಿಗೆ 2022 ರ ಸೆಪ್ಟೆಂಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ನೀಡಲಾಗಿದ್ದ ವಕ್ಫ್‌ ನೋಟಿಸ್‌ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ಆನಂದ ಹಡಪದ್, ಅಶೋಕ ಬಣ್ಣದ, ಬಡೈಲ್ ಲಾಹೋರಿ, ಗೋವಿಂದ ಲಿಂಗಸಾ, ಗಿರಮಲ್ಲ ಚನ್ನಾಳ, ಸಂಜಯಕುಮಾರ್ ಜೈನ್, ಮಹಾವೀರ ಶಂಕರಲಾಲ್, ರವಿ ಮಾದರ್, ಬಸಪ್ಪ ಬಣಾರಿ, ಮಾಲಿಂಗಯ್ಯ ಹಿರೇಮಠ ಎಂಬುವರಿಗೆ ಬಸವರಾಜ್ ಬೊಮ್ಮಾಯಿ ಸಿಎಂ‌ ಇದ್ದಾಗ ನೋಟಿಸ್‌ ನೀಡಲಾಗಿತ್ತು. ಇದನ್ನೂ ಓದಿ: ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ಬಿಜೆಪಿ ನಾಯಕರು ರಾಜಕೀಯಕ್ಕಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕ ರಾಜು ಆಲಗೂರ್ ಕಿಡಿಕಾರಿದ್ದಾರೆ.

     

  • ಕಾಂಗ್ರೆಸ್‌ನ ಪಠಾಣ್ ರೌಡಿಶೀಟರ್ ಅಂದಿದ್ದು ಅವರ ಪಕ್ಷದವರೇ, ಅವ್ರೇ ಸ್ಪಷ್ಟೀಕರಣ ಕೊಡಲಿ- ಬೊಮ್ಮಾಯಿ

    ಕಾಂಗ್ರೆಸ್‌ನ ಪಠಾಣ್ ರೌಡಿಶೀಟರ್ ಅಂದಿದ್ದು ಅವರ ಪಕ್ಷದವರೇ, ಅವ್ರೇ ಸ್ಪಷ್ಟೀಕರಣ ಕೊಡಲಿ- ಬೊಮ್ಮಾಯಿ

    ಹಾವೇರಿ: ಯಸೀರ್ ಖಾನ್ ಪಠಾಣ್ (Yasir Khan Pathan) ರೌಡಿಶೀಟರ್ ಎಂದು ಅವರ ಪಕ್ಷದವರೇ ಮಾತಾಡಿದ್ದಾರೆ. ಅವರ ಪಕ್ಷದವರೇ ಸ್ಪಷ್ಟೀಕರಣ ಕೊಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavraj Bommai) ಹೇಳಿದ್ದಾರೆ.

    ಶಿಗ್ಗಾಂವಿ ಉಪಚುನಾವಣೆ (Shiggoan By Election) ಕಾವು ದಿನದಿಂದ ದಿನಕ್ಕೆ ರಂಗುಪಡೆಯುತ್ತಿದೆ. ಶಿಗ್ಗಾಂವಿಯಲ್ಲಿ ಲಿಂಗಾಯತ ಪಂಚಮಸಾಲಿ ಮುಖಂಡರ ಮನೆಮನೆಗೆ ಭೇಟಿ ನೀಡಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದ್ದಾರೆ. ಪುತ್ರ ಭರತ್ ಬೊಮ್ಮಾಯಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಡಿ.6ಕ್ಕೆ ದಿಲ್ಜಿತ್ ಶೋ; ಅಕ್ರಮ ಟಿಕೆಟ್‌ ಮಾರಾಟ ಆರೋಪ – ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ED ದಾಳಿ

    ಹಾವೇರಿಯಲ್ಲಿ (Haveri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಗ್ಯಾರಂಟಿನೂ ಕೈ ಹಿಡಿದಿಲ್ಲ, ಏನೂ ಹಿಡಿದಿಲ್ಲ. ನಾನು ಹೆಚ್ಚಿನ ಸಮಯ ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಇದ್ದ ಕಾರಣ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದೆ. ಈ ಎಲ್ಲಾ ವಿಚಾರ ನಮ್ಮ ಕಾರ್ಯಕರ್ತರಿಗೆ ಮನದಟ್ಟಾಗಿದೆ. ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ವಾತಾವರಣ ಇದೆ. ಕಾಂಗ್ರೆಸ್‌ನವರು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗಲ್ಲ ಎಂದರು. ಇದನ್ನೂ ಓದಿ: ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿದ ಗೆಳೆಯ

    ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಒಂದೇ ಒಂದು ಮನೆ ಕೊಟ್ಟಿಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಹಾಸ್ಯಾಸ್ಪದ ಅಷ್ಟೆ, ಹೋಗಿ ನೋಡಿಕೊಂಡು ಬರಲಿ. ಕಾಂಗ್ರೆಸ್ ನಾಯಕರ ಭಾಷಣ ಸುಳ್ಳಿನ ಕಂತೆ ಅಷ್ಟೆ. ನಾವು ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ. ನನಗಿಂತ ಹೆಚ್ಚು ಬೆಂಬಲ ಭರತ್‌ಗೆ (Bharath Bommai) ಸಿಕ್ಕಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲಾ ಸಮುದಾಯದವರು ಭರತ್‌ಗೆ ಬೆಂಬಲ ವ್ಯಕ್ತಪಡಿಸ್ತಿದ್ದಾರೆ. ಹೆಚ್ಚು ಮತಗಳ ಅಂತರದಿಂದ ಭರತ್ ಗೆಲ್ಲುತ್ತಾನೆ. ಖಾದ್ರಿ ಮನವೊಲಿಕೆ ಆದರೆ ಅದು ನಮಗೇನೂ ಪರಿಣಾಮ ಬೀರಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಭೇಟಿಯಾದ ಉಪರಾಷ್ಟ್ರಪತಿ

    ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರ ದಂಡೇ ಪ್ರಚಾರಕ್ಕೆ ಬರುವ ವಿಚಾರ ಕೇಳಿದಾಗ, ದಯವಿಟ್ಟು ಬರಲಿ ಬಂದರೆ ಸ್ವಾಗತ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶ| ರೈಲು ಹಳಿಗಳ ಮೇಲೆ 6 ಕೆಜಿ ಮರದ ತುಂಡು ಇರಿಸಿ ಹಳಿ ತಪ್ಪಿಸಲು ಯತ್ನ