ಹುಬ್ಬಳ್ಳಿ: ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ ಸಭಾಪತಿ ಬಸವರಾಜ್ ಹೊರಟ್ಟಿಗೆ ಶಾಕ್ ಆಗಿದೆ. ಜೆಡಿಎಸ್ ಬಿಟ್ಟು ಬಿಜೆಪಿಗೆ ಹೊರಟಿದ್ದ ಹೊರಟ್ಟಿಗೆ ಆರಂಭಿಕ ಆಘಾತ ಉಂಟಾಗಿದೆ.
ಹೊರಟ್ಟಿ ಅತ್ತ ಬಿಜೆಪಿ ಸೇರ್ಪಡೆ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ಸ್ಫೋಟವಾಗಿದೆ. ಯಾರ ಮಾತು ನಂಬಲೇ ಬೇಡಿ ನನಗೆ ಮತ ನೀಡಿ. ಹೊರಟ್ಟಿಗೆ ಬಿಜೆಪಿಗೆ ಸೇರಲು ಯಾವ ಅರ್ಹತೆ ಇಲ್ಲ. ಅವರು ಈ ಬಾರಿ ಸೋಲಿನ ಭಯದಿಂದ ಬಿಜೆಪಿಗೆ ಬರುತ್ತಿದ್ದಾರೆ. ಇದಕ್ಕೆ ನಾನು ಸೇರಿದಂತೆ ಪಕ್ಷದ ಕಾರ್ಯಕರ್ತರ ಅಸಮಾಧಾನಯಿದೆ ಎಂದು ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಇನ್ನೂ ಚುನಾವಣೆ ಘೋಷಣೆಯಾಗದೇ ಇದ್ದರೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಕಣ ರಂಗೇರಿದೆ. ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಘೋಷಿಸಿಕೊಂಡಿದ್ದಾರೆ. ಬಿ ಫಾರ್ಮ್ ಸಿಗದೆ ಅಧಿಕೃತ ಅಭ್ಯರ್ಥಿ ನಾನೇ ಅಂತ ಕ್ಷೇತ್ರದಲ್ಲಿ ಪ್ರಚಾರ ಆರಂಭ ಮಾಡಿದ್ದಾರೆ ಎಂದು ಹೇಳಿದರು.
ಹಾವೇರಿ: ಬಸವರಾಜ್ ಹೊರಟ್ಟಿ ಈಗಾಗಲೇ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ. ಅವರಿಗೆ ಸ್ವಾಗತ ಮಾಡುತ್ತೇನೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಮೆಡಿಕಲ್ ಕಾಲೇಜ್ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದ ಅವರು, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಈ ವಾರದಲ್ಲಿ ಉನ್ನತಮಟ್ಟದ ಸಭೆ ಕರೆಯಲಿದ್ದಾರೆ. ಉನ್ನತಮಟ್ಟದ ಸಭೆ ನಂತರ ದಿನಾಂಕ ಅಂತಿಮವಾಗಬಹುದು. ಸಮ್ಮೇಳನವನ್ನು ಐತಿಹಾಸಿಕವಾಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಇದೇ ಪ್ರಥಮ ಬಾರಿಗೆ ಸರ್ಕಾರ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ. ಅನುದಾನವನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ
ಜಿಲ್ಲೆಯಲ್ಲಿ ಸ್ವಲ್ಪ ವಸತಿ ಸಮಸ್ಯೆ ಇರುವ ಕಾರಣ ಸಮ್ಮೇಳನದ ಪೂರ್ವ ತಯಾರಿ ನಡೆಸಬೇಕಿದೆ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳನ್ನು ಸಮಾಧಾನವಾಗಿ ಕಳಿಸುವ ಜವಾಬ್ದಾರಿ ಇದೆ. ಹೀಗಾಗಿ ಸಮ್ಮೇಳನಕ್ಕೆ ಎಚ್ಚರಿಕೆ ರೀತಿಯಲ್ಲಿ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಇತಿಹಾಸ ಅರ್ಥ ಮಾಡಿಕೊಳ್ಳಬೇಕು: ಡಾ.ಕೆ. ಸುಧಾಕರ್
ಹಾವೇರಿ ಮೆಡಿಕಲ್ ಕಾಲೇಜ್ ಕಾಮಗಾರಿ ಡಿಸೆಂಬರ್ ಅಂತ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಬರುವ ವರ್ಷದಿಂದ ಮೆಡಿಕಲ್ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಮೆಡಿಕಲ್ ಓದಲಿದ್ದಾರೆ. ಹಿಜಬ್, ಹಲಾಲ ಕಟ್, ಪ್ರಾರ್ಥನಾ ಮಂದಿರಗಳ ಧ್ವನಿವರ್ಧಕ ಸೇರಿದಂತೆ ಯಾವುದೇ ವಿವಾದಾತ್ಮಕ ವಿಚಾರಗಳಿಗೆ ನಾನು ಪ್ರತಿಕ್ರಿಯೆ ನೀಡುವದಿಲ್ಲ ಎಂದು ತಿಳಿಸಿದರು.
– ಜೆಪಿ ನಡ್ಡಾಗೆ ಬಿಜೆಪಿ ಪ್ರಮುಖರಿಂದ ಪತ್ರ – ಹೊರಟ್ಟಿ ವಿರುದ್ಧ ದಾಖಲೆ ಸಹಿತ ಗಂಭೀರ ಆರೋಪ
ಹುಬ್ಬಳ್ಳಿ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಮೇಲ್ಮನೆ ಸದಸ್ಯತ್ವದ ಅವಧಿ ಮುಗಿಯುತ್ತಿದ್ದು, ಇದೀಗ ಅವರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಊಹಾಪೋಹಗಳು ಎದ್ದಿವೆ.
ಒಂದು ಕಡೆ ಪಕ್ಷಕ್ಕೆ ಹೊರಟ್ಟಿ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿಕೆ ನೀಡಿದ್ದಾರೆ. ಮತ್ತೊಂದು ಕಡೆ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಕೆಲವು ಬಿಜೆಪಿಗರೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹತ್ತು ಅಂಶಗಳು:
1) ಬಸವರಾಜ್ ಹೊರಟ್ಟಿಗೆ 76 ವರ್ಷ. ಪಕ್ಷದ ನಿಯಮದಂತೆ ಇವರಿಗೆ ಟಿಕೆಟ್ ನೀಡಲು ಅವಕಾಶವಿಲ್ಲ.
2) ಈ ಹಿಂದೆ ಹೊರಟ್ಟಿ ಒಂದೇ ಸಮಯದಲ್ಲಿ ಎರಡೆರಡು ವೇತನ ಪಡೆದಿದ್ದರು. 1980ರಲ್ಲಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರೂ 1999ರ ವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದರು.
3) ಧಾರವಾಡದಲ್ಲಿ ಎಸ್‌ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಸಿದ ಆರೋಪ ಇವರ ಮೇಲಿದೆ.
4) ಶಿಕ್ಷಣ ಸಂಸ್ಥೆ ವಿಚಾರದಲ್ಲಿ ಇವರ ಮೇಲೆ ಎಫ್‌ಐಆರ್ ದಾಖಲಾಗಿದೆ.
5) ಹಿಂದುತ್ವ ವಿರುದ್ಧದ ಚಳುವಳಿಯಲ್ಲಿ ಕಾಂಗ್ರೆಸ್ ಜೊತೆ ಹೊರಟ್ಟಿ ಗುರುತಿಸಿಕೊಂಡಿದ್ದರು.
6) ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಇವರು ಒಪ್ಪಿಕೊಂಡಿಲ್ಲ.
7) ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ.
8) ಕ್ಷೇತ್ರದಲ್ಲಿ 17 ಶಾಸಕರು, 3 ಸಂಸತ್ ಸದಸ್ಯರು, 4 ಪರಿಷತ್ ಸದಸ್ಯರು, ಓರ್ವ ಸಭಾಪತಿ, 3 ಕ್ಯಾಬಿನೆಟ್ ಸಚಿವರು, ಒಬ್ಬ ಕೇಂದ್ರ ಸಚಿವ, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿದ್ದಾರೆ.
9) ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಯಾರೊಬ್ಬರೂ ಶಾಸಕರಿಲ್ಲ.
10) ಬಸವರಾಜ್ ಹೊರಟ್ಟಿ ಒಬ್ಬ ಕಳಂಕಿತ ವ್ಯಕ್ತಿ, ಇಂತಹ ಕಳಂಕಿತ ವ್ಯಕ್ತಿಗೆ ಟಿಕೆಟ್ ಕೊಟ್ಟು ಸಾಧಿಸುವುದು ಏನಿದೆ? ಇದನ್ನೂ ಓದಿ: 21 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ- ರಾಜ್ಯದಲ್ಲಿಂದು 92 ಮಂದಿಗೆ ಕೊರೊನಾ, ಇಬ್ಬರು ಸಾವು
ಹೀಗೆ ಪತ್ರದ ಜೊತೆಗೆ ಹಲವು ದಾಖಲೆಗಳನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಹೊರಟ್ಟಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಬಾರದು ಎಂದು ಮನವಿ ಮಾಡಲಾಗಿದೆ.
ಬೆಂಗಳೂರು: ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಎಫ್‍ಐಆರ್ ದಾಖಲು ಮಾಡಿರುವ ಪ್ರಕರಣದಲ್ಲಿ ನಿಯಮಾವಳಿ ಪಾಲನೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಸಭಾಪತಿಗಳ ಘನತೆ ಎತ್ತಿಹಿಡಿಯುವ ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ವಿಷಯ ಪ್ರಸ್ತಾಪ ಮಾಡಿದರು. ದೂರು ಬಂದಿರುವುದು ಸಭಾಪತಿಗಳ ವಿರುದ್ಧ. ಪೂರ್ವಾನುಮತಿ ಪಡೆಯದೇ ಎಫ್‍ಐಆರ್ ದಾಖಲು ಮಾಡಿದ್ದು ಸರಿಯಲ್ಲ. ಸಭಾಪತಿ ಅವರಿಗೇ ಈ ರೀತಿ ಆಗಿರುವುದು ಸರಿಯಲ್ಲ. ಕೂಡಲೇ ತನಿಖಾಧಿಕಾರಿ ವಿರುದ್ಧ ಕ್ರಮ ಆಗಲೇಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್
ವಿಪಕ್ಷ ನಾಯಕ ಹರಿಪ್ರಸಾದ್ ಈ ವೇಳೆ ಮಾತನಾಡಿ, ಈ ಪ್ರಕರಣದಲ್ಲಿ ದಲಿತ ಎಸ್‍ಐನ ಅಮಾನತುಗೊಳಿಸಿ, ಬಲಿಪಶು ಮಾಡಲಾಗಿದೆ. ಯಾರೋ ಒಬ್ಬ ಹರಕೆಯ ಕುರಿ ಸಿಕ್ಕ ಎಂದು ಮಾಡುವುದು ಸರಿಯಲ್ಲ. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಎಫ್‍ಐಆರ್ ದಾಖಲಾದರೆ ಎಷ್ಟು ಸಮಯದಲ್ಲಿ ಎಸ್‍ಪಿ ಕಚೇರಿಗೆ ಮಾಹಿತಿ ಹೋಗಲಿದೆ. ಯಾಕೆ ಎಸ್‍ಪಿ ತನಿಖೆಗೆ ಆದೇಶಿಸಲಿಲ್ಲ. ಗೃಹ ಸಚಿವರ ಗಮನಕ್ಕಾದರೂ ತರಬಹುದಿತ್ತು. ಆದರೆ ಅವರು ಆ ಕೆಲಸವನ್ನೂ ಮಾಡಿಲ್ಲ. ಎಸ್‍ಪಿ ಜವಾಬ್ದಾರಿ ಕೂಡ ಇದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ಅವರು, ಸಭಾಪತಿ ಸ್ಥಾನ ಬಹಳ ಮುಖ್ಯ. ರಾಜ್ಯಪಾಲರ ನಂತರದ ಸ್ಥಾನ ಅದು. ಸಾಂವಿಧಾನಿಕ ಹುದ್ದೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ನಿಯಮ ಪಾಲಿಸಬೇಕು. ಅದಕ್ಕಾಗಿಯೇ ಪೆÇ್ರೀಟೋಕಾಲ್ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ
ಈ ಕೇಸ್‍ನಲ್ಲಿ ಪ್ರೊಸೀಜರ್ ಫಾಲೋ ಆಗಿಲ್ಲ. ಹಾಗಾಗಿ ಎಫ್‍ಐಆರ್ ದಾಖಲಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಐಒ, ಡಿವೈಎಸ್‍ಪಿ ಇರುತ್ತಾರೆ ಹಾಗಾಗಿ ಎಲ್ಲ ಪರಿಶೀಲಿಸಲಾಗುತ್ತಿದೆ. ಸಭಾಪತಿ ಹುದ್ದೆ ಘನತೆ ಎತ್ತಿಹಿಡಿದು ಮತ್ತೆ ಇಂತಹ ಘಟನೆ ಮರುಕಳಿಸದಂತೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಧಾರವಾಡ: ಮಕ್ಕಳ ಮನಸ್ಸು ತುಂಬಾ ಮೃದುವಾಗಿದೆ. ವಿವಾದದಿಂದ ಮಕ್ಕಳ ಭವಿಷ್ಯಕ್ಕೆ ಕೆಟ್ಟ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ತಂದೆ-ತಾಯಿ ಮತ್ತು ರಾಜಕೀಯ ಪಕ್ಷಗಳು ವಿಚಾರ ಮಾಡಬೇಕಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಅಲ್ಲಾ ಹು ಅಕ್ಬರ್ ಅಂತಾರೆ, ಈ ಕಡೆ ಜೈ ಶ್ರೀರಾಮ ಅಂತಾರೆ, ಮಕ್ಕಳ ಮಧ್ಯೆ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಇದು ಮುಂದುವರಿದರೆ ಕಾಲೇಜ್‍ಗಳಲ್ಲಿ ಹೆಣಗಳು ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಕ್ತಪಾತವೂ ಆಗಬಹುದು. ಎಲ್ಲ ರಾಜಕೀಯ ವ್ಯವಸ್ಥೆ ಬಿಟ್ಟು ಹಿಜಬ್ ಕೇಸರಿ ವಿವಾದ ಬಗೆ ಹರಿಸಬೇಕು ಎಂದರು. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!
ಸರ್ಕಾರ ಕೂಡಲೇ ವಿರೋಧ ಪಕ್ಷ ಮತ್ತು ಪಾಲಕರ ಸಭೆ ಕರೆಯಬೇಕು. ಇದು ಪಾರ್ಲಿಮೆಂಟ್‍ಗೂ ಹೋಗಿದೆ. ಹೀಗಾದರೆ ರಾಜ್ಯದ ಮರ್ಯಾದೆ ಏನಾಗುತ್ತದೆ, ಸರ್ಕಾರ ಅಧಿವೇಶನ ಸಹ ನಿಲ್ಲಿಸಿ ಈ ಕಡೆ ನೋಡಬೇಕು. ಇದರಲ್ಲಿ ರಾಜಕೀಯ ಬೆರಸಬಾರದು. ಪಾಕಿಸ್ತಾನಕ್ಕೆ ಇದೇ ಬೇಕಲ್ವಾ, ಇಂತಹುದೇ ಅವರಿಗೆ ಬೇಕು ಎಂದರು.
ಮಕ್ಕಳು ಮತ್ತು ಪಾಲಕರ ಮನಸ್ಸು ಕ್ಲಿಯರ್ ಮಾಡಬೇಕಿದೆ. ಬೇರೆ, ಬೇರೆ ಜಾತಿ ಮೇಲೆ ತೆಗೆದುಕೊಂಡಲ್ಲಿ ನಾಳೆ ಬೆಂಕಿ ಹತ್ತಿ ಉರಿಯುತ್ತದೆ. ಕೋರ್ಟ್‍ಗೂ ಸಹ ನಾವು ಇತ್ಯರ್ಥ ಮಾಡಿಕೊಳ್ಳುತ್ತೇವೆ ಅಂತ ಸರ್ಕಾರ ಹೇಳಬೇಕು. ರಾಜಕೀಯ ನಾಯಕರು ಹೇಳಿಕೆಗಳನ್ನು ನಿಲ್ಲಿಸಬೇಕು. ಮಕ್ಕಳ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟರೆ ಹೇಗೆ? ಶಾಸಕರು ಇರುವುದು ಏತಕ್ಕೆ? ನಾಲ್ಕು ಮಂದಿಗೆ ಒಳ್ಳೆದಾಗಲಿ ಅಂತ ಆರಿಸಿ ಕಳುಹಿಸಿದ್ದಾರೆ. ಭಾಷಣ ಬೇಕಾದರೆ ಎಲೆಕ್ಷನ್‍ದಲ್ಲಿ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!
ಬಿಕನಿ ಬಗ್ಗೆ ಪ್ರಿಯಂಕಾ ಗಾಂಧಿ ಟ್ವೀಟ್: ಇದು ಎಲ್ಲವೂ ರಾಜಕೀಯ, ಅವರವರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಯಾವ ಬಟ್ಟೆ ಹಾಕಬೇಕು ಅಂತಾ ತಾಯಿ-ತಂದೆ ಕಲಿಸಬೇಕು. ತಾಯಿ ಸ್ಥಾನದಲ್ಲಿಯೂ ಪ್ರಿಯಾಂಕಾ ಇದ್ದಾರೆ. ಅಂಥವರು ಬಿಕನಿ ಬಗ್ಗೆ ಹೇಳುವುದು ತಪ್ಪು. ಹಕ್ಕು ಎಲ್ಲರಿಗೂ ಇದೆ. ಯಾವ, ಯಾವ ಜಾಗಕ್ಕೆ ಏನಿರಬೇಕೋ ಅದು ಇರಬೇಕು. ಸಮುದ್ರ ದಂಡೆಯಲ್ಲಿ ಬಿಕನಿ ಹಾಕಿಕೊಂಡರೆ ಯಾರು ಕೇಳುತ್ತಾರೆ, ಕಾಲೇಜ್‍ಗೆ ಬಿಕನಿ ಹಾಕಿಕೊಂಡು ಹೋಗಿ ಅಂದರೆ ಹೇಗೆ? ಯಾರನ್ನು ಓಲೈಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣಾ ಕಾವು ಏರುತ್ತಿದೆ. ಚುನಾವಣೆಗೆ ಆರೇಳು ತಿಂಗಳು ಬಾಕಿ ಇದೆ. ಆದ್ರೆ ತಮ್ಮ ತಮ್ಮ ಅಭ್ಯರ್ಥಿಗಳ ಪರ ಅಭಿಮಾನಿಗಳು ಬ್ಯಾಟ್ ಬೀಸುತ್ತಿದ್ದಾರೆ. ಈ ವಿಚಾರವಾಗಿಯೇ ಬಸವರಾಜ ಹೊರಟ್ಟಿ ಬೆಂಬಲಿಗರೊಬ್ಬರು, ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೊರಟ್ಟಿಯವರ ಬೆಂಬಲಿಗ ಗಜಾನನ ಅನ್ವೇಕರ್, ರವೀಂದ್ರ ಪಾಟೀಲ್ ಎಂಬವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಬಸವರಾಜ್ ಹೊರಟ್ಟಿಯವರು ವಿರುದ್ಧ ಸಂಘ ಕಟ್ಟಿಕೊಂಡು ಅವರ ವಿರುದ್ಧ ಬರುವ ಚುನಾವಣೆಯಲ್ಲಿ ಪ್ರಚಾರ ಮಾಡಬಾರದು ಎಂದು ಗಜಾನನ ಅನ್ವೇಕರ್, ರವೀಂದ್ರ ಪಾಟೀಲ್‍ಗೆ ಧಮ್ಕಿ ಹಾಕಿರುವ ಬಗ್ಗೆ ಆರೋಪವಿದೆ. ಇದನ್ನೂ ಓದಿ: ಅಮರೀಂದರ್ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ
ತನ್ನ ಸಹರಚರೊಂದಿಗೆ ಆಗಮಿಸಿದ ಗಜಾನನ ಹಾಗೂ ತನ್ನಿಬ್ಬರು ಸಹಚರರು ರವೀಂದ್ರ ಪಾಟೀಲ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ
ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಉಮಾದೇವಿ ಶೆಲ್ಲಿಕೇರಿ ಎಂಬವರು ಮಕ್ಕಳೊಂದಿಗೆ ಕಳೆದ 29 ರಂದು ಮಲಪ್ರಭಾ ನದಿಗೆ ಹಾರಿದ್ದರು. ಇದರಲ್ಲಿ ಮಹಿಳೆ ಬದುಕುಳಿದಿದ್ದು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ವರ್ಷದ ಶ್ರೇಷ್ಠಾ ಎಂಬ ಮಗು ಮೃತಪಟ್ಟಿದೆ. ಇಬ್ಬರು ಮಕ್ಕಳು ಬಚಾವ್ ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ್ ಹೊರಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳಿದರು.
ನೀನು ನಮ್ಮ ತಂಗಿ ಸಮ, ಈಗಾದ ತಪ್ಪು ಮತ್ತೊಮ್ಮೆ ಆಗದಿರಲಿ. ಮತ್ತೊಮ್ಮೆ ಜೀವನದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ. ನಿಮ್ಮ ಸಹಾಯಕ್ಕೆ ನಾವಿರುತ್ತೆವೆ ಎದೆಗುಂದದಿರು ಎಂದು ಧೈರ್ಯ ತುಂಬಿದರು. ಇದನ್ನೂ ಓದಿ: ಸಭೆಗೆ ಕೋಟಾ ಶ್ರೀನಿವಾಸ ಪೂಜಾರಿ ಗೈರು- ಕಾದು ಸುಸ್ತಾದ ಅಧಿಕಾರಿಗಳು
ಮಕ್ಕಳನ್ನು ಮುಂದಿಟ್ಟುಕೊಂಡು ಜೀವನ ನಡೆಸು ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ. ಜೀವನದಲ್ಲಿ ಜಿಗುಪ್ಸೆ, ಕಷ್ಟದ ನಿರ್ಧಾರ ಕೈಬಿಡು. ಗಂಡನ ಪೆನ್ಸೆನ್‍ಗೆ ವ್ಯವಸ್ಥೆ ಮಾಡಿದೆ. ಮಕ್ಕಳ ಶಿಕ್ಷಣ ನೋಡಿಕೊಳ್ಳುತ್ತೇನೆ. ಮತ್ತೊಮ್ಮೆ ಹೀಗೆ ಮಾಡಿದರೆ ನಿನ್ನ ಯಾರೂ ಕ್ಷಮಿಸುವುದಿಲ್ಲ. ಮುಂದೆ ಮಕ್ಕಳು ಕ್ಷಮಿಸುವುದಿಲ್ಲ. ಆ ದೇವರು ಕ್ಷಮಿಸಲ್ಲ. ಮಕ್ಕಳೊಂದಿಗೆ ಮೃತಪಟ್ಟಿದ್ದರೇ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿದ್ದೀಯಾ? ಅಂತ ಪ್ರಶ್ನೆ ಮಾಡಿದರು.
ಮತ್ತೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಸಾಂತ್ವನಕ್ಕೆ ಮಹಿಳೆ ಕೈ ಮುಗಿದು ಕಣ್ಣೀರಿಟ್ಟರು. ಹೊರಟ್ಟಿಯವರ ಬಳಿ ತನ್ನ ಎರಡು ಮಕ್ಕಳಾದ ತನುಶ್ರೀ ಹಾಗೂ ಅನುಶ್ರೀ ಮಕ್ಕಳನ್ನು ನೋಡಿ ಬಿಕ್ಕಿ, ಬಿಕ್ಕಿ ಅತ್ತಳು. ವೈದ್ಯರು ಹಾಗೂ ಸಿಬ್ಬಂದಿಗೆ ಇವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಇದನ್ನೂ ಓದಿ: 10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ
ಧಾರವಾಡ: ಚಳಿಗಾಲದ ಅಧಿವೇಶನ ಬೆಳಗಾವಿದಲ್ಲಿ ನಡೆಯುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸಿಎಂ ಇದ್ದಾಗಲೂ ನಾನು ಬೆಳಗಾವಿ ಅಧಿವೇಶನದ ಬಗ್ಗೆ ಪತ್ರ ಬರೆದಿದ್ದೆ, ತೀರ್ಮಾನ ಮಾಡುವಂತೆ ಒತ್ತಾಯ ಮಾಡಿದ್ದೆ. ಆದರೆ ಒಟ್ಟು 900 ಅಧಿಕಾರಿಗಳು, ಶಾಸಕರು ಸೇರಿ ಬಹಳ ಜನ ಆಗುತ್ತಾರೆ. ಈಗ ಮಳೆಗಾಲ ಇದೆ, ಕೋವಿಡ್ ಕೂಡ ಇದೆ ಎಂದು ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಿದರು ಎಂದರು.
ಈ ಬಾರಿ ಸಿಎಂ ನಮ್ಮ ಕಡೆಯವರಿದ್ದಾರೆ, ಸಭಾಪತಿ ಸಹ ನಮ್ಮ ಕಡೆಯವರು. ನವೆಂಬರ್, ಡಿಸೆಂಬರ್ ನಲ್ಲಿ ಸಂಪೂರ್ಣ ಬೆಳಗಾವಿಯಲ್ಲೇ ಅಧಿವೇಶನ ಆಗುತ್ತದೆ. ಬೆಳಗಾವಿಯಲ್ಲಿ ಅಧಿವೇಶನ ಮಾಡಿಯೇ ತಿರುತ್ತೇವೆ ಎಂದು ಸಭಾಪತಿ ಹೊರಟ್ಟಿ ಹೇಳಿದರು. ಇದನ್ನೂ ಓದಿ: ನಟ ಅಕ್ಷಯ್ ಕುಮಾರ್ಗೆ ಮಾತೃವಿಯೋಗ
ಈಗಾಗಲೇ ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಸಹ ಮಾಡಿದ್ದಾರೆ, 9 ಕಚೇರಿ ಸ್ಥಳಾಂತರ ಮಾಡಲು ನಾನು ಕೇಳಿದ್ದೆ. ಅದರಲ್ಲಿ ಈಗ ಮೂರು ಕಚೇರಿ ಸ್ಥಳಾಂತರ ಆಗಿವೆ ಎಂದರು.
ಹುಬ್ಬಳ್ಳಿ: ಮನೆ ಕೊಡುವಂತೆ ನಾನು ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ನಾನು ಇನ್ನು ಮುಂದೆ ಮನೆ ಕೇಳುವುದಿಲ್ಲ. ಇಂದು ಮತ್ತೆ ಸರ್ಕಾರಕ್ಕೆ ಪತ್ರ ಬರೆಯುವೆ. ಇದು ನನ್ನ ಕೊನೇಯ ಪತ್ರ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮನೆ ನೀಡುವ ವಿಚಾರವಾಗಿ ಸರ್ಕಾರ ವಿಳಂಬ ಮಾಡುತ್ತಿರುವುದರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ
ಶಾಲೆಗಳ ಆರಂಭದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 1 ರಿಂದ 6 ನೇ ತರಗತಿಯ ಶಾಲೆಗಳನ್ನು ಆರಂಭ ಮಾಡಬೇಕು. ಶಾಲೆ ಆರಂಭ ಮಾಡುವ ಅವಶ್ಯಕತೆ ಇದೆ. ನಾನು ಈ ಹಿಂದೆಯೇ ಶಾಲೆ ಆರಂಭ ಮಾಡಬೇಕು ಎಂದು ಸಲಹೆ ನೀಡಿದ್ದೆ ಎಂದರು.
ಮೌಲ್ಯಧಾರಿತ ರಾಜಕಾರಣ ಕುಸಿಯುತ್ತಿದೆ. ಗೆದ್ದ ಅಭ್ಯರ್ಥಿಗಳು ಸ್ವಾರ್ಥ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕು. ಜನಪರವಾದ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೆ ನಡೆಯುತ್ತೆ. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಜನಪರ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಹಾವೇರಿ: ಶಾಲೆಗಳನ್ನು ಪ್ರಾರಂಭ ಮಾಡುವಂತೆ ಮೊದಲು ಹೇಳಿದವನೇ ನಾನು. ಕೊರೊನಾದಿಂದ ಶಾಲೆಗಳು ಬಂದ್ ಆದಾಗ ಶಾಲೆ ಮತ್ತು ಮಕ್ಕಳ ಸಂಬಂಧ ಕಡಿತವಾಯ್ತು. ಎಲ್ಲರೂ ಪಾಸ್ ಆಗಲು ಶುರುವಾಯಿತು. ಮಕ್ಕಳ ಮತ್ತು ಶಾಲೆಯ ಸಂಬಂಧ ತಪ್ಪಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮೊದಲು ವಿದ್ಯಾಗಮ ಯೋಜನೆಯೂ ಬೇಡವೆಂದು ಹೇಳಿದ್ದೆ ಹಾಗೂ ಹತ್ತತ್ತು ಮಕ್ಕಳನ್ನು ಕೂರಿಸಿ ಪಾಠ ಮಾಡುವಂತೆ ತಿಳಿಸಿದ್ದೇನೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹೊಸ ಶಿಕ್ಷಣ ಮಂತ್ರಿಗಳು ಬಂದು ಮೊದಲು ನನ್ನನ್ನೇ ಭೇಟಿ ಮಾಡಿದರು. ಆವಾಗಲೂ ಶಾಲೆ ಆರಂಭ ಮಾಡುವಂತೆ ಹೇಳಿದ್ದೇನೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಲೆಗಳ ಆರಂಭದ ಬಗ್ಗೆ ಸಮಿತಿ ರಚನೆ ಮಾಡುವಂತೆ ತಿಳಿಸಿದ್ದೇನೆ. ಮಕ್ಕಳಿಗೆ ಏನಾದರೂ ಆದರೆ ಸಮಿತಿ ಜವಾಬ್ದಾರಿ. ಮಕ್ಕಳ ಬಗ್ಗೆ ಅವರ ಪಾಲಕರು ಜವಾಬ್ದಾರಿ ತೆಗೆದುಕೊಳ್ಳಬೇಕು. ಶಾಲೆಗಳನ್ನು ಆರಂಭಿಸಬೇಕು ಎಂದಿದ್ದಾರೆ. ಇದನ್ನೂ ಓದಿ:ಹೋಟೆಲಿನ ವಾಶ್ ರೂಮಿನಲ್ಲಿ ಅವಿತಿದ್ದ ನಟಿ ಸೋನಿಯಾ ವಶಕ್ಕೆ
ಸರ್ಕಾರಗಳು ಬದಲಾದಂತೆ ಶಿಕ್ಷಣ ನೀತಿ ಬದಲಾಗಬಾರದು. ಈಗಿನ ಹೊಸ ಶಿಕ್ಷಣ ನೀತಿ ಸರಿಯಿಲ್ಲ. ಹಿಂದಿನ ಶಿಕ್ಷಣ ನೀತಿಯೇ ಸರಿ ಇತ್ತು. ವರದಿಯನ್ನ ವಿಸ್ತೃತವಾಗಿ ಅಧ್ಯಯನ ಮಾಡಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಪೂರ್ಣತೆಯಿಂದ ಕೂಡಿಲ್ಲ. ನಾನು ನೂರು ದೇಶಗಳನ್ನು ತಿರುಗಿದ್ದೇನೆ. ಅಲ್ಲಿ ಸರ್ಕಾರ ಬದಲಾದಂತೆ ಶಿಕ್ಷಣ ನೀತಿಗಳು ಬದಲಾಗುವುದಿಲ್ಲ. ಸರ್ಕಾರ ಬದಲಾದಂತೆ ನೀತಿ ಬದಲಾದರೆ ಶಿಕ್ಷಣ ವ್ಯವಸ್ಥೆ ಸರಿಯಾಗುವುದಿಲ್ಲ. ನಮ್ಮ ದೇಶದಲ್ಲಿ ಮೂರು ಹಂತದ ಶಿಕ್ಷಣವೇ ಉತ್ತಮ. ಹಿಂದಿನ ಶಿಕ್ಷಣ ಪದ್ದತಿಯೇ ಉತ್ತಮವಾಗಿದೆ ಎಂದು ನುಡಿದಿದ್ದಾರೆ.