Tag: ಬಸವರಾಜ್ ಹೊರಟ್ಟಿ

  • ಯಾರದ್ದೋ ಮಾತು ಕೇಳಿ ಪಾಕ್ ವಿರುದ್ಧ ಸಂಘರ್ಷ ನಿಲ್ಲಿಸಬಾರದಿತ್ತು: ಹೊರಟ್ಟಿ ಅಸಮಾಧಾನ

    ಯಾರದ್ದೋ ಮಾತು ಕೇಳಿ ಪಾಕ್ ವಿರುದ್ಧ ಸಂಘರ್ಷ ನಿಲ್ಲಿಸಬಾರದಿತ್ತು: ಹೊರಟ್ಟಿ ಅಸಮಾಧಾನ

    – ಪಾಕಿಸ್ತಾನದವರು ಸಾಯುವವರೆಗೂ ವೈರಿಗಳೇ ಎಂದ ಸಭಾಪತಿ

    ಚಿಕ್ಕೋಡಿ: ಯಾರದ್ದೋ ಮಾತು ಕೇಳಿ ಪಾಕ್ (Pakistan) ವಿರುದ್ಧ ಭಾರತ ಸಂಘರ್ಷ ನಿಲ್ಲಿಸಬಾರದಿತ್ತು ಎಂದು ಪ್ರಧಾನಿ ಮೋದಿ (Narendra Modi) ವಿರುದ್ಧ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಅಸಮಾಧಾನ ಹೊರಹಾಕಿದ್ದಾರೆ.

    ಈ ಕುರಿತು ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಘರ್ಷದಲ್ಲಿ ಪಾಕಿಸ್ತಾನವನ್ನು ನಾಶ ಮಾಡಬೇಕಿತ್ತು. ಕದನ ವಿರಾಮದ ನಂತರ ಮತ್ತೆ ದಾಳಿ ಮಾಡಿದ್ದಾರೆ. ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೊತೆ ನಡೆಸುತ್ತಿದ್ದ ಸಂಘರ್ಷ ಕೈ ಬಿಟ್ಟಿದ್ದು ತಪ್ಪು. ಪಾಕಿಸ್ತಾನದವರು ಸಾಯುವವರೆಗೂ ವೈರಿಗಳೇ. ಅವರು ಎಂದಿಗೂ ನಮಗೆ ಒಳ್ಳೆಯದು ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಪಾಕ್ ಹಾಗೂ ಭಾರತದ ನಡುವೆ ಸಂಧಾನದಲ್ಲಿ ಟ್ರಂಪ್ (Donald Trump) ಮಧ್ಯಸ್ಥಿಕೆ ವಹಿಸಲು ಅವರು ಯಾರು? ಅಮೆರಿಕದ ವಿಚಾರದಲ್ಲಿ ನಾವು ಏನಾದರೂ ಹೇಳಿದರೆ ಅವರು ಕೇಳುತ್ತಾರಾ? ಮೋದಿಯವರು ಕಠಿಣ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಟ್ರಂಪ್ ಮಾತು ಕೇಳಿದ್ದು ತಪ್ಪು. ಭಯೋತ್ಪಾದಕರ ವಿಚಾರದಲ್ಲಿ ಎಲ್ಲಾ ದೇಶಗಳು ಶೃಂಗಸಭೆಯನ್ನ ನಡೆಸಿ ಭಯೋತ್ಪಾದಕರನ್ನು ನಾಶ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

  • ಸಿ.ಟಿ ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಕರಣದಲ್ಲಿ ನನ್ನ ನಿರ್ಧಾರ ನೂರಕ್ಕೆ ನೂರು ಸರಿಯಿದೆ: ಹೊರಟ್ಟಿ

    ಸಿ.ಟಿ ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಕರಣದಲ್ಲಿ ನನ್ನ ನಿರ್ಧಾರ ನೂರಕ್ಕೆ ನೂರು ಸರಿಯಿದೆ: ಹೊರಟ್ಟಿ

    ಕಾರವಾರ: ಸಿ.ಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಕರಣವನ್ನು ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ನೀಡಲಾಗಿದೆ. ಅವರು ವೀಡಿಯೋ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

    ಶಿರಸಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಉಪ ಸಭಾಪತಿಗಳು ಅಧ್ಯಕ್ಷರಾಗಿರುವ ಸದನದ ನೀತಿ ನಿರೂಪಣಾ ಸಮಿತಿಗೆ ಪ್ರಕರಣವನ್ನು ವಹಿಸಲಾಗಿದೆ. ಅದರಲ್ಲಿ ಸಿ.ಟಿ ರವಿಯೂ ಸದಸ್ಯರಾಗಿದ್ದರು. ಅವರನ್ನು ಈಗ ಹೊರಗೆ ಇಡಲಾಗಿದೆ. ಸಮಿತಿಯವರು ಸದನದ ಆಡಿಯೋ, ವೀಡಿಯೋ ಪರಿಶೀಲನೆ ಮಾಡಲಿದ್ದಾರೆ. ಮಾಧ್ಯಮದವರೂ ಸಹ ವೀಡಿಯೋ ನೀಡಿದ್ದಾರೆ. ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರದಲ್ಲಿ ಪ್ರಕರಣದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.‌

    ಮೊದಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿ.ಟಿ ರವಿ ವಿರುದ್ಧ ಅವಾಚ್ಯ ಪದ ಬಳಸಿದ ಕುರಿತು ದೂರು ದಾಖಲಿಸಿದ್ದರು. ಬಳಿಕ ಸಿ.ಟಿ ರವಿಯವರೂ ಸಹ ಪ್ರತಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಸಮಿತಿಗೆ ಸತ್ಯಾಸತ್ಯತೆ ಪರಿಶೀಲನೆಗೆ ತಿಳಿಸಲಾಗಿದೆ. ಅಲ್ಲಿನ ವರದಿ ಆಧರಿಸಿ ಮುಂದಿನ ಕ್ರಮ ಆಗಲಿದೆ. ಸಭಾಪತಿಗಳು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತುಕೊಂಡಂತೆ. ಅವರು ಪಕ್ಷಪಾತ ಮಾಡಬಾರದು. ಸಿ.ಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ನಾನು ತೆಗೆದುಕೊಂಡ ನಿರ್ಧಾರವನ್ನು ಬಿಹಾರದ ಶಾಸಕಸಭೆಯಲ್ಲೂ ಶ್ಲಾಘಿಸಲಾಗಿದೆ. ನಿರ್ಧಾರವು ನೂರಕ್ಕೆ ನೂರರಷ್ಟು ಸರಿಯಿದೆ. ಯಾರೇ ನಿರ್ಧಾರ ತಪ್ಪು ಎಂದರೂ ಅದು ಅವರ ಅಭಿಪ್ರಾಯ ಎಂದು ಪ್ರತಿಕ್ರಿಯಿಸಿದರು.

    ಸಭಾಪತಿಯಾಗಿ ಯಾವ ಪಕ್ಷದ ಪರವಾಗಿಯೂ ಇಲ್ಲ. ನಿಷ್ಪಕ್ಷಪಾತವಾಗಿ ಕಾರ್ಯ ಮಾಡುತ್ತಿದ್ದೇನೆ. ಯಾರಿಂದಲೂ ಒಂದೇ ಒಂದು ದೂರು ಇಲ್ಲ. ಸಭಾಪತಿಯಾಗಿ ಆಯ್ಕೆ ಆದ ತಕ್ಷಣ ನನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಅಂದೇ ರಾಜೀನಾಮೆ ನೀಡಿದ್ದೇನೆ. ಸಾಂವಿಧಾನಿಕ ಹುದ್ದೆ ಸಭಾಪತಿ, ಸಭಾಧ್ಯಕ್ಷ ಎಂಬುದು ಸರ್ಕಾರ ಬದಲಾದ ತಕ್ಷಣ ಬದಲಾಯಿಸುವುದು, ಅವಿಶ್ವಾಸ ಮಾಡುವುದು ಒಳ್ಳೆಯ ಸಂಪ್ರದಾಯ ಅಲ್ಲ. ನನ್ನನ್ನು ಬದಲಾಯಿಸುತ್ತಾರೆ ಎಂಬ ವರದಿಗಳನ್ನೂ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಭಾಪತಿ ಪಕ್ಷಾತೀತವಾಗಿ ಇರಬೇಕು. ನಾನೂ ಸಭಾಪತಿಯಾಗಿ ಹಾಗೇ ಇದ್ದೇನೆ. ವೈಯಕ್ತಿಕವಾಗಿ ಯಾರೆ ಏನೇ ಹೇಳಿದರೂ ನಾನು ಮಾತನಾಡುವುದಿಲ್ಲ ಎಂದರು.

  • ಸಾಮಾಜಿಕ ಹಾಗೂ ಬೌದ್ಧಿಕವಾಗಿ ಶಕ್ತಿ ತುಂಬುವವಳು ತಾಯಿ: ಥಾವರ್ ಚಂದ್ ಗೆಹ್ಲೋಟ್

    ಸಾಮಾಜಿಕ ಹಾಗೂ ಬೌದ್ಧಿಕವಾಗಿ ಶಕ್ತಿ ತುಂಬುವವಳು ತಾಯಿ: ಥಾವರ್ ಚಂದ್ ಗೆಹ್ಲೋಟ್

    ಬೆಂಗಳೂರು: ತಾಯಿ ವಿಶ್ವದ ಅತ್ಯಂತ ಮಧುರವಾದ ಪದ. ಈ ಜಗತ್ತು ಇರುವುದು ತಾಯಿಯಿಂದ (Mother) ಮಾತ್ರ. ಅವಳು ನಮ್ಮನ್ನು ಚಿಕ್ಕ ಮಗುವಿನಿಂದ ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿ ಬಲವಾದ ವ್ಯಕ್ತಿಯಾಗಿ ಪರಿವರ್ತಿಸುತ್ತಾಳೆ. ತಾಯಿ ನಮಗೆ ಮೊದಲ ಗುರು ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದರು.

    ಅವ್ವ ಸೇವಾ ಟ್ರಸ್ಟ್ (Avva Seva Trust) ಆಯೋಜಿಸಿದ್ದ ಅವ್ವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ಕವಿಗಳು ತಾಯಿಯ ಬಗ್ಗೆ ‘ನಾನು ಸ್ವರ್ಗವನ್ನು ನೋಡಿಲ್ಲ, ಆದರೆ ತಾಯಿ ಮತ್ತು ಅವಳ ಪ್ರೀತಿಯನ್ನು ನೋಡಿದ್ದೇನೆ’ ಎಂದು ಬಹಳ ಸುಂದರವಾಗಿ ಹೇಳಿದ್ದಾರೆ. ಅನೇಕ ತಾಯಂದಿರು ತಮ್ಮ ಮಕ್ಕಳನ್ನು ತ್ಯಾಗ ಮತ್ತು ಸಮರ್ಪಣೆಯಿಂದ ಬೆಳೆಸಿದರು ಮತ್ತು ಈ ದೇಶಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದ್ದಾರೆ. ತಾಯಿಯೇ ನಮಗೆ ಸಮಾಜದಲ್ಲಿ ಮಾನವೀಯತೆ ಮೌಲ್ಯಗಳಿಂದ ಬದುಕುವುದನ್ನು ಕಲಿಸುತ್ತಾಳೆ. ಅಂತಹ ತಾಯಿಗೆ ನಾವು ಚಿರಋಣಿಯಾಗಿರಬೇಕು ಎಂದರು.

    ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು (Basavaraj Horatti) ತಮ್ಮ ಬಾಲ್ಯದಲ್ಲಿ ತಂದೆ ಶಿವಲಿಂಗಪ್ಪನನ್ನು ಕಳೆದುಕೊಂಡಿದ್ದರು. ತಾಯಿ ಗುರುವ್ವ ಅವರು ಹೊರಟ್ಟಿ ಅವರನ್ನು ಬಹಳ ತಾಳ್ಮೆ ಮತ್ತು ಧೈರ್ಯದಿಂದ ಹಸುಗಳನ್ನು ಸಾಕುವುದರ ಮೂಲಕ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದರು. ಮತ್ತು ಅವರ ಮಗ ಬಸವರಾಜ ಹೊರಟ್ಟಿ ಅವರನ್ನು ಶ್ರೇಷ್ಠ ನಾಗರಿಕರನ್ನಾಗಿ ಮಾಡಿದರು. ಮಾತಾಜಿಯವರ ಆಶೀರ್ವಾದದಿಂದ ಬಸವರಾಜ ಹೊರಟ್ಟಿಯವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. 1980 ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಸತತ 8 ನೇ ಅವಧಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರ ದಿಂದ ಎಂಎಲ್‌ಸಿ ಯಾಗಿ ಆಯ್ಕೆಯಾದರು ಎಂದು ತಿಳಿಸಿದರು. ಇದನ್ನೂ ಓದಿ: ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದ ಟಿಕೆಟ್ ಘೋಷಣೆ – ಡಿ.ಕೆ.ಸುರೇಶ್

    ಕರ್ನಾಟಕ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಬಸವರಾಜ್ ಹೊರಟ್ಟಿ ಅವರು ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡಿದ್ದಾರೆ. ಹೊರಟ್ಟಿಯವರು ತಮ್ಮ ತಾಯಿಯ ಬಗ್ಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದರು. ಅಮ್ಮನ ಕನಸನ್ನು ನನಸು ಮಾಡಲು ಅವರ ಸ್ಮರಣಾರ್ಥ ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಅವ್ವ ಸೇವಾ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಮಾಡುತ್ತಿದೆ. ಆರೋಗ್ಯ ಜಾಗೃತಿ ಅಭಿಯಾನವನ್ನು ನಡೆಸುವುದರೊಂದಿಗೆ, ಅಂಗವಿಕಲರ ಸಬಲೀಕರಣಕ್ಕಾಗಿ ಟ್ರಸ್ಟ್ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ. ಅಗತ್ಯವಿರುವ ಅಂಗವಿಕಲರಿಗೆ ಸಹಾಯ ಮಾಡಲು ಅಗತ್ಯ ಉಪಕರಣಗಳ ವಿತರಣೆಯನ್ನು ಸಹ ಮಾಡಲಾಗುತ್ತದೆ. ಇದಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡುವವರನ್ನು ಸನ್ಮಾನಿಸುವ ಕೆಲಸವೂ ಟ್ರಸ್ಟ್ ವತಿಯಿಂದ ನಡೆಯುತ್ತಿದೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಗಂಗಾ ಮಹಾಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಖಾಸಗಿ ಬಸ್ ಏಜೆಂಟ್ ಆಗಿದ್ರು

  • ಹಿಜಬ್ ಪ್ರಕರಣ ಸಿಜೆಐಗೆ ಒಪ್ಪಿಸಿದ್ರಿಂದ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ: ಹೊರಟ್ಟಿ

    ಹಿಜಬ್ ಪ್ರಕರಣ ಸಿಜೆಐಗೆ ಒಪ್ಪಿಸಿದ್ರಿಂದ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ: ಹೊರಟ್ಟಿ

    ಹುಬ್ಬಳ್ಳಿ: ಹಿಜಬ್ ವಿವಾದ ಈಗ ಸಿಜೆಐ (CJI)ಗೆ ಹೋಗಿರುವುದರಿಂದ ಸರ್ಕಾರ ಯಾವುದೇ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳೇ ಅಂತಿಮ ನಿರ್ಧಾರದ ಮೂಲಕ ತೀರ್ಪನ್ನು ನೀಡಬೇಕಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

    ಹಿಜಬ್ (Hijab) ಕುರಿತು ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠದ ತೀರ್ಪಿನ ಕುರಿತು ನಗರದಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಲಯ ತೀರ್ಪು ಕೊಟ್ಟು ಪುನಃ ಸಿಜೆಐಗೆ ಒಪ್ಪಿಸಿದೆ ಅಂದರೆ ಕೇಸ್ ಇನ್ನೂ ಪೆಂಡಿಂಗ್ ಇದೆ ಅಂತ ಅರ್ಥ. ಈಗ ಸಿಜೆಐ ಬಳಿಗೆ ಅಲ್ಲಿ ಅಂತಿಮ ತೀರ್ಮಾನ ಕೈಗೊಂಡ ಮೇಲೆಯೇ ಹಿಜಬ್ ವಿವಾದಕ್ಕೆ ತೆರೆ ಬಿಳಲಿದೆ. ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡಿ ಹಾಗೇ ಬಿಟ್ಟಿದ್ದರೇ ಮುಂದಿನ ಹಂತದಲ್ಲಿ ಸರ್ಕಾರ ಏನಾದರೂ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಈಗ ಕೋರ್ಟ್ ಸಿಜೆಐಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಹಿಜಬ್‌ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?

    ಈಗಾಗಲೇ ಹಿಜಬ್ ಕುರಿತು ದ್ವಿ ಸದಸ್ಯ ಪೀಠ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು, ಸಿಜೆಐಗೆ ಒಪ್ಪಿಸಿದೆ. ಸಿಜೆಐ ಈ ಪ್ರಕರಣದ ಆಳಗಲವನ್ನು ಅಧ್ಯಯನ ಮಾಡಿ ತೀರ್ಪನ್ನು ನೀಡಲಿದೆ. ಅಲ್ಲಿಯವರೆಗೆ ಕಾಯಬೇಕು ಅಷ್ಟೇ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಇಸ್ರೇಲ್‌ನಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ, ಸಂಜೆ ನೇಣಿಗೆ ಹಾಕ್ತಾರೆ: ಬಸವರಾಜ್ ಹೊರಟ್ಟಿ

    ಇಸ್ರೇಲ್‌ನಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ, ಸಂಜೆ ನೇಣಿಗೆ ಹಾಕ್ತಾರೆ: ಬಸವರಾಜ್ ಹೊರಟ್ಟಿ

    ಹಾವೇರಿ: ಕರಾವಳಿ ಭಾಗದಲ್ಲಿ ನಡೆದ ಘಟನೆ ಬಹಳ ನೋವು ತಂದಿದೆ. ಇಂತಹ ಕೃತ್ಯ ಮಾಡಿದವರಿಗೆ ಶಿಕ್ಷೆ ಆಗಿರುವುದು ಇವತ್ತಿನವರೆಗೂ ಗೊತ್ತಾಗಿಲ್ಲ. ಶಿಕ್ಷೆ ಆದರೆ ಮಾತ್ರ ಇಂತಹ ಘಟನೆಗಳು ಕಡಿಮೆ ಆಗುತ್ತವೆ. ಅದಕ್ಕೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಎಂಬ 20 ಕಾನೂನುಗಳು ಇವೆ. 10-15 ವರ್ಷ ಆಗುವುದರಲ್ಲಿ ಜನರು ಅದನ್ನು ಮರೆತು ಬಿಡುತ್ತಾರೆ. ನಾನು ಸಹ ಇಸ್ರೇಲ್‌ಗೆ ಹೋಗಿದ್ದೆ. ಅಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ ಸಂಜೆ ಗಲ್ಲಿಗೆ ಹಾಕುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದರು.

    ಹಾವೇರಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳು ಆಗಬಾರದು. ಇಂತಹ ಸಮಯದಲ್ಲಿ ಇಂಟೆಲಿಜೆನ್ಸಿಯವರು ಪೊಲೀಸರಿಗಿಂತ ಹೆಚ್ಚಿನ ಕೆಲಸ ಮಾಡಿ ಸರ್ಕಾರಕ್ಕೆ ಮಾಹಿತಿ ಕೊಡಬೇಕು. ಇವೆಲ್ಲಾ ನಡೆಯಬಾರದಾದರೂ ನಡಿಯುತ್ತಿವೆ. ಯಾವುದೇ ಜಾತಿ ಇರಲಿ, ಏನೇ ಇರಲಿ. ತಪ್ಪಿತಸ್ಥರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೊರಟ್ಟಿ ಹೇಳಿದರು.

    ನಮ್ಮಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು. ಇಲ್ಲದಿದ್ದರೆ ಇಂತಹ ಘಟನೆಗಳು ಮತ್ತಷ್ಟು ಆಗುತ್ತವೆ. ಇಂತಹ ಸಮಯದಲ್ಲಿ ಎಲ್ಲಾ ಪಕ್ಷಗಳು ಒಂದಾಗಿ ಶಾಂತಿ ಕಾಪಾಡಬೇಕು. ನಾ ಹಾಗೆ ಮಾಡಿದೆ, ನೀ ಹೀಗೆ ಮಾಡಿದೆ ಎಂದು ಒಬ್ಬರನ್ನೊಬ್ಬರು ಎತ್ತಿ ಕಟ್ಟುವ ಪರಿಸ್ಥಿತಿ ಆಗಬಾರದು. ವಿರೋಧ ಪಕ್ಷ ಬರೀ ಟೀಕೆ ಮಾಡುತ್ತಾ ಕುಳಿತರೆ ಸರಿಯಲ್ಲ. ಸಿಎಂ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಹಿಂದೂಗಳ ನರಮೇಧಕ್ಕೆ ಕಾರಣವೇ ಸಿದ್ದರಾಮಯ್ಯ – ಬಿಜೆಪಿ ಕಾರ್ಯಕರ್ತ ಚಂದ್ರಹಾಸ್

    ನಾನು ಯೋಗಿಯಂತೆ ಮತ್ತೊಬ್ಬರನ್ನು ನೋಡಿಲ್ಲ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು. ಅದನ್ನು ಮಾಧ್ಯಮದವರ ಮೂಲಕ ಜನರಿಗೆ ಗೊತ್ತು ಮಾಡಬೇಕು. ಹಾಗಾದಾಗ ಇಂತಹ ಘಟನೆಗಳು ನಡೆಯುವುದಿಲ್ಲ. ಯಾವುದೇ ಪಕ್ಷ, ಸಂಘದಲ್ಲಿದ್ದವರನ್ನು ಕೊಲೆ ಮಾಡುವುದು ಸರಿಯಲ್ಲ. ಬಹಳ ನೋವಿನ ಸಂಗತಿಯಿದು. ಕೋಳಿ, ಕುರಿಯಂತೆ ಮನುಷ್ಯನ ಜೀವನ ಹೋಗುತ್ತಿದೆ. ಸರ್ಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೈದರಾಬಾದ್‌ನಲ್ಲಿ ನಮ್ಮ ಸಜ್ಜನ ಶೂಟೌಟ್ ಮಾಡಲಿಲ್ಲವೇನು? ಇಂತಹ ಸಮಯದಲ್ಲಿ ಪೊಲೀಸರು ಸಣ್ಣ ತಪ್ಪು ಮಾಡಿದರೆ, ಇಂತಹ ಘಟನೆಗಳು ಆಗುವುದು ನಿಂತರೆ ನಾನೇನು ಅದನ್ನು ತಪ್ಪು ಎನ್ನುವುದಿಲ್ಲ ಎಂದು ಬಸವರಾಜ್ ಹೊರಟ್ಟಿ ಹೇಳಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ರಾಜಕೀಯಕ್ಕಾಗಿ ಕೊಲೆ ನಡೆದಿವೆ: ಮಾಧುಸ್ವಾಮಿ

    Live Tv
    [brid partner=56869869 player=32851 video=960834 autoplay=true]

  • ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು: ಕತ್ತಿಗೆ ಹೊರಟ್ಟಿ ತಿರುಗೇಟು

    ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು: ಕತ್ತಿಗೆ ಹೊರಟ್ಟಿ ತಿರುಗೇಟು

    ಹುಬ್ಬಳ್ಳಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು. ಏಕೀಕರಣ ಹೋರಾಟದ ಉದ್ದೇಶ ಸಹಬಾಳ್ವೆ. ಆ ಉದ್ದೇಶ ಮರೆತು ಮಾತನಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸಚಿವ ಉಮೇಶ್ ಕತ್ತಿಗೆ ತಿರುಗೇಟು ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ 2009ರಲ್ಲಿ ಹೀಗೆಯೇ ಹೇಳಿದ್ದರು. ನನ್ನ ಮಗ ಮುಖ್ಯಮಂತ್ರಿ ಆಗುತ್ತಾನೆ ಎಂದಿದ್ದರು. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು. ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸರ್ಕಾರಕ್ಕೆ ಕೇಳೋಣ. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    ಪಠ್ಯ ಪುಸ್ತಕ ಪೂರೈಕೆ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ಉಂಟಾಗಿ ವಿಳಂಬವಾಗಿದೆ. ಈ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡುವೆ. ಪಠ್ಯ ವಿಚಾರದಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಸಮಿತಿಗೆ ಬಿಡಬೇಕು. ಅದರಲ್ಲಿ ಸರ್ಕಾರ ಹಾಗೂ ರಾಜಕಾರಣಿಗಳು ಭಾಗವಹಿಸುವುದು ಸರಿಯಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾನಿಯಾಗಬಾರದು ಎಂದರು. ಇದನ್ನೂ ಓದಿ: ಮೋದಿಯವರ ವ್ಯಕ್ತಿತ್ವ, ಜೀವನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ: ಗೆಹ್ಲೋಟ್

    ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಸಭೆ ಕರೆದಿದ್ದೇನೆ. ಬಳಿಕ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೆನೆ ಎಂದರು.

    Live Tv

  • ಯಾರ‍್ರೀ ಆ ಡಿಸಿ?: ಪಿಎಸ್‌ಐಗೆ ಹೊರಟ್ಟಿ ಪ್ರಶ್ನೆ

    ಯಾರ‍್ರೀ ಆ ಡಿಸಿ?: ಪಿಎಸ್‌ಐಗೆ ಹೊರಟ್ಟಿ ಪ್ರಶ್ನೆ

    ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದ ಶಾರದಾ ಹೈಸ್ಕೂಲ್‌ಗೆ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹಾಗೂ ಮಹಿಳಾ ಪಿಎಸ್‌ಐ ಕವಿತಾ ಬಂದಿದ್ದು, ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಚುನಾವಣಾಧಿಕಾರಿ ಮಾಡಿದ ಆದೇಶವನ್ನು ತಮ್ಮ ಬೆಂಬಲಿಗರು ಪಾಲನೆ ಮಾಡುತ್ತಿಲ್ಲ, ಮತಗಟ್ಟೆ ಕೇಂದ್ರದಿಂದ 200 ಮೀಟರ್ ದೂರದಲ್ಲಿರಬೇಕು ಎಂದು ಪಿಎಸ್‌ಐ ಹೇಳುತ್ತಿದ್ದಂತೆ ಹೊರಟ್ಟಿ ಅವರು ಪಿಎಸ್‌ಐ ಕವಿತಾ ಅವರಿಗೆ, ಯಾರ‍್ರೀ ಅವಾ ಡಿಸಿ? ಎಂದು ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ – ಶೀಘ್ರವೇ ಕಾಂಗ್ರೆಸ್‌ ಸೇರಲಿದ್ದಾರೆ ಮಾಜಿ ಎಂಎಲ್‌ಸಿ

    1 ಟೇಬಲ್ ಹಾಗೂ 2 ಖುರ್ಚಿಗಳನ್ನು ಹಾಕಿಕೊಂಡು ಕುಳಿತುಕೊಳ್ಳಲು ಅವಕಾಶ ಇದೆ. ಜಾಸ್ತಿ ಜನ ಕುಳಿತುಕೊಳ್ಳುವಂತಿಲ್ಲ ಎಂದು ಡಿಸಿ ಹೇಳಿದ್ದಾರೆ ಎಂದು ಪಿಎಸ್‌ಐ ಹೇಳುತ್ತಿದ್ದಂತೆ ಹೊರಟ್ಟಿ ಯರ‍್ರೀ ಅವಾ ಡಿಸಿ ಎಂದು ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶ: ಪ್ರತಾಪ್ ಸಿಂಹ

    ಕೊನೆಗೆ, ನಿಮ್ಮ ಕಾನೂನು ಪ್ರಕಾರ ನೀವು ಏನು ಮಾಡಬೇಕೋ ಅದನ್ನು ಮಾಡಿ. 1 ಟೇಬಲ್, 2 ಖುರ್ಚಿ ಹಾಕಿಕೊಂಡು ನಮ್ಮವರು ಕುಳಿತುಕೊಳ್ಳುತ್ತಾರೆ ಎಂದು ಹೊರಟ್ಟಿ ಹೇಳಿ ಅಲ್ಲಿಂದ ತೆರಳಿದರು.

  • ಬಹುಮತ ಇಲ್ಲದಿದ್ದರೂ ಮೂರು ಪಕ್ಷದ ಬೆಂಬಲದಿಂದ ಸಭಾಪತಿಯಾಗಿದ್ದೆ: ಬಸವರಾಜ ಹೊರಟ್ಟಿ

    ಬಹುಮತ ಇಲ್ಲದಿದ್ದರೂ ಮೂರು ಪಕ್ಷದ ಬೆಂಬಲದಿಂದ ಸಭಾಪತಿಯಾಗಿದ್ದೆ: ಬಸವರಾಜ ಹೊರಟ್ಟಿ

    ಹಾವೇರಿ: ಹಿಂದಿನಿಂದಲೂ ಬಿಜೆಪಿ ನನಗೆ ಸಪೋರ್ಟ್ ಮಾಡುತ್ತಿತ್ತು. ಬಹುಮತ ಇಲ್ಲದಿದ್ದರೂ ಮೂರು ಪಕ್ಷದವರ ಬೆಂಬಲದಿಂದ ನಾನು ಸಭಾಪತಿಯಾಗಿದ್ದೆ ಎಂದು ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಬಸವರಾಜ ಹೊರಟ್ಟಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರ ಬೆಂಬಲವಿದೆ. ನನ್ನ ವಿಚಾರದಲ್ಲಿ ಪಕ್ಷ ಬರುವುದಿಲ್ಲ. ಎಲ್ಲಿಯಾದರೂ ನಿಂತುಕೊಳ್ಳಿ ಸರ್ ನಿಮಗೆ ಬೆಂಬಲವಿದೆ ಅಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‍ನಲ್ಲಿದ್ದ ಕೆಲವರೂ ನನ್ನ ಪರವಾಗಿದ್ದಾರೆ. ಯಾವ ಶಿಕ್ಷಕರಾದರೂ ನನಗೆ ಹತ್ತು ರೂಪಾಯಿ ಕೊಟ್ಟಿದ್ದಾರೆ ಅಂದರೆ ನಾನು ರಾಜೀನಾಮೆ ನೀಡುತ್ತೇನೆ ಎಂದರು.

    ಪ್ರತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ನನಗೆ ಸ್ಪರ್ಧೆ ಇರುತ್ತಿತ್ತು. ಪ್ರತಿಬಾರಿ ಬಿಜೆಪಿ ಮತ್ತು ನನ್ನ ನಡುವೆ ಕೆಲವೊಂದು ವೋಟುಗಳು ಹಂಚಿ ಹೋಗುತ್ತಿದ್ದವು. ಈಗ ನಾನೇ ಬಿಜೆಪಿ ಅಭ್ಯರ್ಥಿ ಆಗಿದ್ದರಿಂದ ಕಳೆದ ಚುನಾವಣೆಗಳಿಗಿಂತಲೂ ಈ ಬಾರಿ ಶೇಕಡಾ ನಾಲ್ವತ್ತರಷ್ಟು ಹೆಚ್ಚು ಮತಗಳು ನನಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಸಿದರು. ಇದನ್ನೂ ಓದಿ: ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿದ್ದು ಸತ್ಯ: ಸಿದ್ದಗಂಗಾ ಶ್ರೀ

    ನನ್ನ ಬಗ್ಗೆ ಮಾತನಾಡುತ್ತಿರುವ ಪ್ರತಿಪಕ್ಷದ ಅಯೋಗ್ಯರ ಹೇಳಿಕೆಗಳಿಗೆ ನಾನು ಉತ್ತರ ಕೊಡೋದಿಲ್ಲ. ಅವರು ಚುನಾವಣೆ ಬಂದಿದೆ ಎಂದು ಬಂದಿದ್ದಾರೆ. ಅವರು ಹೋದಲ್ಲೆಲ್ಲ ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಹೇಳುತ್ತಿದ್ದಾರೆ. ಮತದಾರರು ಬದಲಾವಣೆ ಬಯಸಿಲ್ಲ, ಅವರು ಬದಲಾವಣೆ ಬಯಸಿದ್ದಾರೆ. ನಾನು ಮಂತ್ರಿ ಇದ್ದಾಗ ರಾಜ್ಯ ಹುಟ್ಟಿದಾಗಿನಿಂದ ಯಾರೂ ಮಾಡಲಾಗದಷ್ಟು ಕೆಲಸಗಳನ್ನು ಮಾಡಿದ್ದೇನೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಯಲಹಂಕ ವಾಯುನೆಲೆ ಸುತ್ತಮುತ್ತಲಿರುವ ಕಟ್ಟಡಗಳಿಗೆ BBMP ನೋಟಿಸ್

  • ಯಾರಿಗೆ ದುಡ್ಡು ಜಾಸ್ತಿ ಇರುತ್ತೋ ರಾಜ್ಯಸಭೆ ಆರಿಸಿ ಬರ್ತಾರೆ: ಬಸವರಾಜ್ ಹೊರಟ್ಟಿ

    ಯಾರಿಗೆ ದುಡ್ಡು ಜಾಸ್ತಿ ಇರುತ್ತೋ ರಾಜ್ಯಸಭೆ ಆರಿಸಿ ಬರ್ತಾರೆ: ಬಸವರಾಜ್ ಹೊರಟ್ಟಿ

    ಕಾರವಾರ: ಯಾರಿಗೆ ದುಡ್ಡು ಜಾಸ್ತಿ ಇರುತ್ತೊ ಅವರು ರಾಜ್ಯಸಭೆಯನ್ನು ಆರಿಸಿ ಬರ್ತಾರೆ ಎಂದು ಉತ್ತರಕನ್ನಡ ಜಿಲ್ಲೆಯ ಅಂಕೋಲದಲ್ಲಿ ಬಿಜೆಪಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹೇಳಿದರು.

    ಬಿಜೆಪಿ ಪಕ್ಷಕ್ಕೆ ಬಂದ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಕರ ಮಾತು ಕೇಳಿ ಬಿಜೆಪಿ ಪಕ್ಷಕ್ಕೆ ಬಂದೆ. ಆಕಸ್ಮಿಕವಾಗಿ ಆದ ಬದಲಾವಣೆಯಿಂದ ನಾನು ಇಲ್ಲಿಗೆ ಬರಬೇಕಾಯಿತು. ಪರಿಸ್ಥಿತಿ ಬದಲಾವಣೆಗೆ ಹೊಂದಿಕೊಳ್ಳಬೇಕು. ಹಾಗೆ ಆಯಿತು ಬಂದಿದ್ದೇನೆ ಎಂದರು. ಇದನ್ನೂ ಓದಿ: ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್ 

    ಯಾರಿಗೆ ದುಡ್ಡು ಜಾಸ್ತಿ ಇರುತ್ತೋ ಅವರು ರಾಜ್ಯಸಭೆಯನ್ನು ಆರಿಸಿ ಬರ್ತಾರೆ. ಮಳೆಗಾಲದಲ್ಲಿ ಒಂದು ಹವಾ ಇರುತ್ತದೆ. ಬೇಸಿಗೆಯಲ್ಲಿ ಒಂದು ಹವಾ ಇರುತ್ತದೆ. ಹವಾ ಹೇಗಿರುತ್ತೋ ಹಾಗೆ ಹೊಂದಿಕೊಳ್ಳಬೇಕು. ನನಗೆ ಯಾವ ಆಕಾಂಕ್ಷೆ ಇಲ್ಲ, ನನ್ನ ಸೀನಿಯಾರಿಟಿ, ಯೋಗ್ಯತೆ ನೋಡಿ ಏನಾದ್ರು ಉಪಯೋಗ ಮಾಡಿಕೊಂಡ್ರೆ ಮಾಡಿಕೊಳ್ಳಲಿ. ಇಲ್ಲದಿದ್ರೆ ಪ್ರಾಮಾಣಿಕ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಪಠ್ಯದಲ್ಲಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ವಿಷಯದಲ್ಲಿ ಯಾವುದೇ ಸರ್ಕಾರ, ಯಾವುದೇ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

  • ನಾನು ಚುನಾವಣೆಗೆ ನಿಲ್ಲುತ್ತೇನೆ, ಗೆಲ್ಲುತ್ತೇನೆ: ಹೊರಟ್ಟಿ

    ನಾನು ಚುನಾವಣೆಗೆ ನಿಲ್ಲುತ್ತೇನೆ, ಗೆಲ್ಲುತ್ತೇನೆ: ಹೊರಟ್ಟಿ

    ಹಾವೇರಿ: ನಾನು ಚುನಾವಣೆಗೆ ನಿಲ್ಲುತ್ತೇನೆ, ಗೆಲ್ಲುತ್ತೇನೆ. ಶಿಕ್ಷಕರು ನನ್ನನ್ನು ಎಂದಿಗೂ ಕೈಬಿಟ್ಟಿಲ್ಲ, ಬಿಡುವುದಿಲ್ಲ. 24 ಗಂಟೆ ಕೆಲಸ ಮಾಡುವವನನ್ನು ಬಿಟ್ಟು ಬೇರೆಯವರಿಗೆ ಯಾಕೆ ವೋಟು ಹಾಕುತ್ತಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದರು.

    ಸಭಾಪತಿ ಇದ್ದವನು ಪಕ್ಷಾಂತರ ಮಾಡಿ ಹೋಗಬೇಕಾ? ಹಾಗಿದ್ದರೆ ರಾಜೀನಾಮೆ ಕೊಟ್ಟು ಹೋಗುವೆ. ಬರುವ ಚುನಾವಣೆಯಲ್ಲಿ ಬಿಜೆಪಿಗೆ ಹೋಗುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ. ಅನೇಕ ಸ್ನೇಹಿತರು ಕರೆಯುತ್ತಿದ್ದಾರೆ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಸಂವಿಧಾನಬದ್ಧ ಹುದ್ದೆಯಲ್ಲಿದ್ದು ಎಲ್ಲೋ ಬಾರ್‌ನಲ್ಲಿ ಹೋಗಿ ಕೂತರೆ ಹುದ್ದೆ ಮುರಿದ ಹಾಗೆ. ಅಕ್ರಮ ಚಟುವಟಿಕೆ ಮಾಡಿದರೆ ಸಂವಿಧಾನಬದ್ಧ ಹುದ್ದೆಯನ್ನು ಮುರಿದಂತೆ ಎಂದರು. ಇದನ್ನೂ ಓದಿ: ಲವ್ ಜಿಹಾದ್ ಆರೋಪ – ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಹೈಕೋರ್ಟ್

    ನಾನು ಅಚ್ಚುಕಟ್ಟಾಗಿ ಕಟ್ಟುನಿಟ್ಟಿನಿಂದ ಸದನ ನಡೆಸಿದ್ದೇನೆ. ಸದನ ನಡೆಸಿದ ರೀತಿಯನ್ನು ನೀವು ನೋಡಿರಬಹುದು. ಯಾವುದರಲ್ಲೂ ನಿಯಮ ಬಿಟ್ಟು ಏನೂ ಮಾಡಿಲ್ಲ. ಇಡಿ ರಾಜ್ಯವೇ ನನಗೆ ಒಳ್ಳೆಯವರು ಎನ್ನುತ್ತಿರುವಾಗ ಇನ್ನೊಬ್ಬರು ಕೆಟ್ಟವರು ಎನ್ನುವುದರ ಬಗ್ಗೆ ಏನೂ ಮಾಡಲು ಆಗುವುದಿಲ್ಲ. ಪ್ರಜಾಪ್ರಭುತ್ವ ಬೇರೆಯವರ ಬಗ್ಗೆ ಟೀಕೆ ಮಾಡುವುದಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ನನ್ನ ತಕರಾರು ಇಲ್ಲ. ನನ್ನ ನಿರ್ಧಾರದ ಪ್ರಕಾರ ನಾನು ಸರಿಯಿದ್ದೇನೆ ಎಂದರು.

    ಕೆಲವರು ನನ್ನನ್ನು ಬಿಜೆಪಿಗೆ ಸೇರುವಂತೆ ಕೇಳಿದರು. ಪಕ್ಷೇತರ ನಿಂತರೂ ಸಪೋರ್ಟ್ ಮಾಡುತ್ತೇವೆ ಎಂದಿದ್ದಾರೆ. ರಾಷ್ಟ್ರೀಯ ಪಕ್ಷ ನಮ್ಮದು, ನಮ್ಮ ಪಕ್ಷದಿಂದಲೇ ಯಾಕೆ ನಿಲ್ಲಬಾರದು ಎಂದು ಕೇಳಿದರು. ಈ ಬಗ್ಗೆ ವಿಚಾರ ಮಾಡಿ ಹೇಳುತ್ತೇನೆ ಎಂದಿದ್ದೇನೆ. ಕೆಲವರು ನಂಬಿಗೆ ಇಟ್ಟು ಹೇಳಿರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ನವರೇ ಕಾರಣ: ಬಿಎಸ್‍ವೈ

    ಬೆಡ್ ರೂಂ ಬೇರೆ ಅಂಗಳವೇ ಬೇರೆ. ಬೆಡ್ ರೂಂನಲ್ಲಿ ಮಾಡುವುದು ಬೆಡ್ ರೂಂನಲ್ಲಿಯೇ ಮಾಡಬೇಕು. ನನಗೆ ಈವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲ. ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ. ಮಾಧ್ಯಮದ ಮುಂದೆ ಹೋಗಬೇಡಿ ಎಂದು ನನಗೆ ಕೆಲವರು ವಾರ್ನಿಂಗ್ ಕೊಟ್ಟಿದ್ದಾರೆ. ಅಧಿಕಾರ ಶಾಶ್ವತವಲ್ಲ, ಪ್ರೀತಿ ವಿಶ್ವಾಸ ಮುಖ್ಯ ಎಂದು ಬಸವರಾಜ್ ಹೊರಟ್ಟಿ ಹೇಳಿದರು.