Tag: ಬಸವರಾಜ್ ದಡೇಸಗೂರು

  • ಯತ್ನಾಳ್ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಬೇಕು: ಬಸವರಾಜ್ ದಡೇಸಗೂರು

    ಯತ್ನಾಳ್ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಬೇಕು: ಬಸವರಾಜ್ ದಡೇಸಗೂರು

    ಕೊಪ್ಪಳ: ಬಸನಗೌಡ ಪಾಟೀಲ್ ಯತ್ನಾಳ್ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಬೇಕು. ಮುಖ್ಯಮಂತ್ರಿಗಳ ಬಗ್ಗೆ ಗೌರವ ಇಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದು ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯತ್ನಾಳ್ ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಯತ್ನಾಳ್ ಹಿರಿಯರು, ಅವರು ಮುಖ್ಯಮಂತ್ರಿ ಬಗ್ಗೆ ಮಾತಾಡುವಾಗ ಅತ್ಯಂತ ಗೌರವಯುತವಾಗಿ ಮಾತಾಡಬೇಕು. ಪ್ರತಿ ಸಲ ಕೀಳು ಮಟ್ಟದಲ್ಲಿ ಮಾತಾನಡೋದು ಸರಿಯಲ್ಲ ಎಂದರು.

    ನಿಮಗೆ ಇಷ್ಟ ಇಲ್ಲ ಅಂದ್ರೆ ನೀವು ಅರಾಮಾಗಿ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಿ. ದುಷ್ಟ ಸಂಹಾರ ಮಾಡಬೇಕು ಅನ್ನೋದು ಸರಿ ಅಲ್ಲ. ಯತ್ನಾಳ್ ಬಹಳಷ್ಟು ಹಿರಿಯರಿದ್ದಾರೆ, ಪಕ್ಷದ ಸಿಸ್ಟಮ್ ಸರಿ ಇಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದು ಹೇಳಿದರು. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್‍ವೈ ವಿರುದ್ಧ ಗುಡುಗಿದ ಯತ್ನಾಳ್

    ಯಡಿಯೂರಪ್ಪನವರೇ ಎರಡು ವರ್ಷ ಮುಖ್ಯಮಂತ್ರಿ. ಅವರ ಮಗನ ಬಗ್ಗೆ ಮಾತಾಡೋದು ಸರಿ ಅಲ್ಲ. ನಿನ್ನ ಮಗನ ಬಗ್ಗೆ ಯೋಚನೆ ಮಾಡಬೇಕು ಎಂದು ಯತ್ನಾಳ್ ಗೆ ದಡೇಸಗೂರು ಟಾಂಗ್ ನೀಡಿದರು. ಕನಕಗಿರಿ ಕ್ಷೇತ್ರದ 2 ಲಕ್ಷ ಮತದಾರರ ಪರವಾಗಿ ನಾನು ವಿನಂತಿ ಮಾಡುತ್ತೇನೆ. ಯಡಿಯೂರಪ್ಪ ಅವರ ಬಗ್ಗೆ ಗೌರವಯುತವಾಗಿ ಮಾತಾನಾಡಬೇಕೆಂದರು.

  • ಕೊರೊನಾ ಸೋಂಕಿತರ ಕೈಗೆ ಮೊಬೈಲ್ ಕೊಡ್ಬೇಡಿ: ಬಸವರಾಜ್ ದಡೇಸಗೂರು

    ಕೊರೊನಾ ಸೋಂಕಿತರ ಕೈಗೆ ಮೊಬೈಲ್ ಕೊಡ್ಬೇಡಿ: ಬಸವರಾಜ್ ದಡೇಸಗೂರು

    ಕೊಪ್ಪಳ: ಕೊರೊನಾ ಸೋಂಕಿತರ ಕೈಗೆ ಸ್ಮಾರ್ಟ್ ಫೋನ್ ಕೊಡಬೇಡಿ ಎಂದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಅವರು ವೈದ್ಯರಿಗೆ ತಿಳಿಸಿದ್ದಾರೆ.

    ಜನ ಭಯದಿಂದಲೇ ಜಾಸ್ತಿ ಸಾಯುತ್ತಿದ್ದಾರೆ. ಯಾರ ಕಡೆನೂ ಸ್ಮಾರ್ಟ್ ಫೋನ್ ಕೊಡಬೇಡಿ. ರೋಗಿಗಳ ಕೈಯಲ್ಲಿ ಫೋನ್ ಕೊಡಬೇಡಿ ಎಂದು ಶಾಸಕರು ವೈದ್ಯರಿಗೆ ತಿಳಿಸಿದ್ದಾರೆ.

    ಇದೇನು ದೊಡ್ಡ ಕಾಯಿಲೆ ಅಲ್ಲ, ಭಯದಿಂದ ಸಾಯ್ತಿದ್ದಾರೆ. ಎಂಪಿ ಹೇಳಲಿ, ಎಂಎಲ್‍ಎ ಹೇಳಲಿ ಫೋನ್ ಕೊಡಬೇಡಿ. ರೋಗಿಗಳಿಗೆ ನೀವೇ ಧೈರ್ಯ ಹೇಳಿ, ಮೊಬೈಲ್ ಕಟ್ ಮಾಡಿ ಎಂದು ಹೇಳಿದ್ದಾರೆ.

    ನೀವು ಏನೇ ಹೇಳಿದರೂ ಮೊಬೈಲ್ ನೋಡಿದ್ರೆ ಮುಗೀತು. ಮಾತಾಡಬೇಕು ಅಂದ್ರೆ ಅವರ ಕಡೆ ಬೇರೆ ಫೋನ್ ಕೋಡಿ ಎಂದು ಶಾಸಕರು ತಿಳಿಸಿದ್ದಾರೆ.