Tag: ಬಸವರಾಜೇಂದ್ರ

  • ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಜೆಪಿಯವರೇ ಒತ್ತಡ ಹಾಕಿರಬಹುದು: ಎಚ್.ಆಂಜನೇಯ

    ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಜೆಪಿಯವರೇ ಒತ್ತಡ ಹಾಕಿರಬಹುದು: ಎಚ್.ಆಂಜನೇಯ

    ಚಿತ್ರದುರ್ಗ: ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಜೆಪಿಯವರೇ ಒತ್ತಡ ಹಾಕಿರಬಹುದು ಎನ್ನುವ ಸಂಶಯವಿದೆ ಎಂದು ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

    ಜಿಲ್ಲೆಯ ಪಂಚಾಯತ್‍ರಾಜ್ ರಜತ ಮಹೋತ್ಸವದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಆಯ್ಕೆಯಾಗಲಿದೆ. ಈಗಾಗಲೇ ಸಿ ಫೋರ್ ಸಮೀಕ್ಷೆ ಬಂದಿದೆ. ನಮ್ಮ ಪಕ್ಷದ ಸಮೀಕ್ಷೆಯಲ್ಲಿ ನಾವು 150 ಸ್ಥಾನ ಗೆಲ್ಲುತ್ತೇವೆ ಎನ್ನುವ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಡಿನೋಟಿಫೈ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಬಿಎಸ್‍ವೈ ವಿರುದ್ಧ ಸುಳ್ಳು ಹೇಳಲು ಭೂಸ್ವಾಧೀನಾಧಿಕಾರಿಗೆ ಒತ್ತಡ?

    ಬಿಜೆಪಿಯವರು ಮಿಷನ್ 150 ಎನ್ನುತ್ತಿದ್ದಾರೆ. ಅದ್ಯಾವ ಮಿಷನ್ ನಾವು ನೋಡುತ್ತೇವೆ. ಮುಂದಿನ ಸರ್ಕಾರ ಬಿಜೆಪಿ ರಚಿಸಲು ಮತ ಹಾಕೋದು ಜನ. ಅವರೇ ಹಾಕಿಸಿಕೊಳ್ಳಲು ಬರಲ್ಲ. ನಾವು ನಾಲ್ಕು ವರ್ಷಗಳ ಕಾಲ ಬಡವರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಜನ ನಮ್ಮ ಕೈ ಹಿಡಿಯುತ್ತಾರೆ. ಐಟಿ ರೇಡ್ ಆದ ತಕ್ಷಣ ಅಪರಾಧಿ ಆಗಲ್ಲ. ಬಿಜೆಪಿಯವರು ಜೈಲಿಗೆ ಹೋಗಿದ್ದಾರೆ. ದ್ವೇಷ ರಾಜಕಾರಣ ನಾವು ಮಾಡಲ್ಲ. ಅಭಿವೃದ್ಧಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

    ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಎಸಿಬಿ ದುರುಪಯೋಗ: ಸಿಎಂ ವಿರುದ್ಧ ಬಿಜೆಪಿಯಿಂದ ಭಾರೀ ಪ್ರತಿಭಟನೆ 

  • ಡಿನೋಟಿಫೈ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಬಿಎಸ್‍ವೈ ವಿರುದ್ಧ ಸುಳ್ಳು ಹೇಳಲು ಭೂಸ್ವಾಧೀನಾಧಿಕಾರಿಗೆ ಒತ್ತಡ?

    ಡಿನೋಟಿಫೈ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಬಿಎಸ್‍ವೈ ವಿರುದ್ಧ ಸುಳ್ಳು ಹೇಳಲು ಭೂಸ್ವಾಧೀನಾಧಿಕಾರಿಗೆ ಒತ್ತಡ?

    ಬೆಂಗಳೂರು: ಗಣಿ ಉಪಕಾರ್ಯದರ್ಶಿ ಹಾಗೂ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಎಂಬವರು ಸಿಡಿಸಿರೋ ಹೊಸ ಬಾಂಬ್‍ನಿಂದ ರಾಜ್ಯದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದ್ಯಾ ಎನ್ನುವ ಪ್ರಶ್ನೆಗೆ ಈಗ ಎದ್ದಿದೆ.

    2010ರಿಂದ 14 ತಿಂಗಳು ಭೂಸ್ವಾಧೀನಾಧಿಕಾರಿಯಾಗಿದ್ದ ಬಸವರಾಜೇಂದ್ರ ಅವರು ಮುಖ್ಯಕಾರ್ಯದರ್ಶಿ ಕುಂಠಿಯ ಅವರಿಗೆ ಪತ್ರ ಬರೆದಿದ್ದಾರೆ. ಬಿಎಸ್ ಯಡಿಯೂರಪ್ಪ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಎಸಿಬಿಯ ಇಬ್ಬರು ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜೇಂದ್ರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಒಂದು ವೇಳೆ, ಬಿಎಸ್‍ವೈ ವಿರುದ್ಧ ಸುಳ್ಳು ಹೇಳದಿದ್ದರೆ ನನ್ನನ್ನು ಆರೋಪಿಯನ್ನಾಗಿ ಮಾಡಿ ಜೈಲಿಗೆ ಹಾಕುತ್ತೇವೆ ಎಂದು ಡಿವೈಎಸ್ಪಿ ಬಾಲರಾಜ್ ಹಾಗೂ ಆಂಥೋಣಿ ಒತ್ತಡ ಹೇರಿದ್ದಾರೆ ಎಂದು ರಾಜ್ಯಪಾಲ ವಾಲಾ ಹಾಗೂ ಮುಖ್ಯ ಕಾರ್ಯದರ್ಶಿ ಕುಂಠಿಯಾ ಬಸವರಾಜೇಂದ್ರ ದೂರು ನೀಡಿದ್ದಾರೆ.

    ಇಷ್ಟೇ ಅಲ್ಲದೇ ಸುಳ್ಳು ಹೇಳದೇ ಇದ್ದರೆ ಬಡ್ತಿ ನೀಡುವುದಿಲ್ಲ ಎಂದು ಸರ್ಕಾರದಿಂದ ಬ್ಲಾಕ್‍ಮೇಲ್ ಮಾಡಿದ್ದಾರೆ ಎನ್ನುವ ವಿಚಾರವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಬಸವರಾಜೇಂದ್ರ ಅವರು ದೂರು ನೀಡಿದ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.