Tag: ಬಸವನಗೌಡ ಯತ್ನಾಳ್

  • ಸಿದ್ದರಾಮಯ್ಯ ಮುಳುಗುತ್ತಿರುವ ಹಡಗು: ಸಚಿವ ಅಂಗಾರ

    ಸಿದ್ದರಾಮಯ್ಯ ಮುಳುಗುತ್ತಿರುವ ಹಡಗು: ಸಚಿವ ಅಂಗಾರ

    ಉಡುಪಿ: ಸಿದ್ದರಾಮಯ್ಯ ಏನು ಬೇಕಾದರೂ ಹೇಳಬಹುದು. ಮುಳುಗುವ ಹಡಗು ಸಿದ್ದರಾಮಯ್ಯ ಅವರು ಎಂದು ಮೀನುಗಾರಿಕಾ ಬಂದರು ಸಚಿವ ಎಸ್. ಅಂಗಾರ ತಿರುಗೇಟು ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಗೆ ಸ್ಪಷ್ಟತೆ ಇದೆ. ಉದ್ದೇಶ ವಿಚಾರ ಧಾರೆ ಇದೆ. ಸಿದ್ದರಾಮಯ್ಯ ಮುಳುಗುವ ಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಎಲ್ಲರೂ ಮುಳುಗಿದಂತೆ ಕಾಣುತ್ತಿರಬಹುದು ಎಂದು ಟಾಂಗ್ ಕೊಟ್ಟರು.

    ಡಿ.ಕೆ. ಶಿವಕುಮಾರ್ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಇದ್ದು, ರೆಸಾರ್ಟ್‍ನಲ್ಲಿ ಇಬ್ಬರು ಬಿಜೆಪಿಯ ನಾಯಕರು ಡಿಕೆಶಿ ಜೊತೆ ಚರ್ಚೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯಿಸಿ, ಅಪಪ್ರಚಾರ ಏನು ಬೇಕಾದರೂ ಮಾಡಬಹುದು. ನಾಳೆ ನಾನು ಕೂಡ ಡಿಕೆಶಿ ಜೊತೆಗಿದ್ದೇನೆ ಎಂದು ಹೇಳಬಹುದು. ಅಂಗಾರ ಏನು ಎಂದು ಜನಗಳಿಗೆ ಗೊತ್ತುಂಟು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡೋದು ಬೇಡ. ಯತ್ನಾಳ್ ಏನಾದರೂ ಹೇಳಬಹುದು, ಅದನ್ನು ನಂಬಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಘಟನೆಯ ವ್ಯವಸ್ಥೆಯಲ್ಲಿ ನಾವೆಲ್ಲ ಅಧಿಕಾರ ಪಡೆದಿದವರು. ನಾವು ಹೇಗೆ ನಡೆದುಕೊಳ್ಳಬೇಕು ಎಂದು ಮೊದಲು ಆಲೋಚಿಸಬೇಕು. ನಾವೇ ಅನಗತ್ಯ ವಿವಾದ ಮಾಡಿದರೆ ಹೊರ ಹೋಗಬೇಕಾಗುತ್ತದೆ ಎಂದು ಸಲಹೆ ನೀಡಿದರು.

    ನಮ್ಮ ತಪ್ಪುಗಳಿಗೆ ಸಂಘಟನೆ ಹೊಣೆಯಾಗುವುದಿಲ್ಲ. ಸಂಘಟನೆಗೆ ನಿಷ್ಠರಾಗಿದ್ದರೆ, ಸಂಘಟನೆ ನಮ್ಮ ಕೈ ಬಿಡುವುದಿಲ್ಲ. ಯಾರಾದರೂ ಸಂಘಟನೆ ಕೈಬಿಡುವಂತೆ ವರ್ತಿಸಿದರೆ ನಾವು ಹೊಣೆಗಾರರಲ್ಲ ಎಂದರು. ಇದನ್ನೂ ಓದಿ: ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ

    ಉಸ್ತುವಾರಿ ಹಂಚಿಕೆಯ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಂಗಾರ, ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ. ಎಲ್ಲವು ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು. ಉಸ್ತುವಾರಿ ಸಿಗದಿದ್ದರೂ ಚುನಾಯಿತ ಪ್ರತಿನಿಧಿಯಾಗಿ ನನ್ನ ಕೆಲಸ ನಾನು ಮಾಡಬೇಕು. ನನ್ನ ಕ್ಷೇತ್ರದ ಕೆಲಸದ ಜೊತೆ ಹೆಚ್ಚುವರಿಯಾಗಿ ಉಸ್ತುವಾರಿ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಗಣರಾಜ್ಯೋತ್ಸವ – ಶಾಲೆಯಲ್ಲಿ ವಿದ್ಯುತ್ ಅವಘಡ, ವಿದ್ಯಾರ್ಥಿ ಸಾವು

  • ವಿಜಯಪುರದ ಶಾಸಕ ಫೋನ್ ಮಾಡಿ ನಾನೇ ಮುಖ್ಯಮಂತ್ರಿ ಅಂದ್ರು: ರೇಣುಕಾಚಾರ್ಯ

    ವಿಜಯಪುರದ ಶಾಸಕ ಫೋನ್ ಮಾಡಿ ನಾನೇ ಮುಖ್ಯಮಂತ್ರಿ ಅಂದ್ರು: ರೇಣುಕಾಚಾರ್ಯ

    ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲಗಳ ನಡುವೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ವಿಜಯಪುರ ಶಾಸಕರೊಬ್ಬರು ಕೆಲ ಎಂಎಲ್‍ಎಗಳಿಗೆ ಫೋನ್ ಮಾಡಿ, ನಾನೇ ಮುಂದಿನ ಸಿಎಂ ನನಗೆ ಬೆಂಬಲ ನೀಡಿ ಎಂದಿದ್ದಾರೆ. ಹೈಕಮಾಂಡ್ ನಿಂದ ಸ್ಪಷ್ಟ ಸೂಚನೆ ಬಂದಿದ್ದರೂ, ಈ ರೀತಿ ಮಾತನಾಡುತ್ತಾರೆ. ಕೆಲವರು ಸಿಎಂ ಆಗಬೇಕು ಅಂತ ಈಗಾಗಲೇ ಸೂಟೂಬೂಟು ಹೊಲೆಸಿದ್ದಾರೆ ಎಂದು ಶಾಸಕ ಬಸವನಗೌಡ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

    ಅರುಣ್ ಸಿಂಗ್ ಅವರಿಗೆ ಇಂದು ಕರೆ ಮಾಡಿದ್ದೆ, ಸಂಜೆ 4-30ಕ್ಕೆ ಭೇಟಿಯಾಗಲು ಬನ್ನಿ ಎಂದಿದ್ದರು. ಆದರೆ ನಾನು ಕೋವಿಡ್ ಕೇರ್ ಸೆಂಟರ್ ನಲ್ಲರುವುದರಿಂದ ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಇದೇ ತಿಂಗಳು 17ಕ್ಕೆ ಸಮಯ ನೀಡಿದ್ದಾರೆ. ಕೆಲವರು ಅರುಣ್ ಸಿಂಗ್ ರಾಜ್ಯಕ್ಕೆ ಬಂದರೂ ದೆಹಲಿಗೆ ಹೋಗಿರುವುದಾಗಿ ತಿಳಿಸಿದರು. ಇದನ್ನೂ ಓದಿ: ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಜಮೀರ್ ಪಾಕಿಸ್ತಾನದ ಪರ ಇರುವ ಕಾಂಗ್ರೆಸ್ಸಿಗರು: ಈಶ್ವರಪ್ಪ

    ಯಡಿಯೂರಪ್ಪನವರು ರಾಜ್ಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ರಾಷ್ಟ್ರೀಯ ನಾಯಕರು ಹೇಳಿದ ಮೇಲು ಬಹಿರಂಗವಾಗಿ ಭಿನ್ನಮತ ನಡೆಸುತ್ತಾರೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ರೇಣುಕಾಚಾರ್ಯ ಕೋವಿಡ್ ಕಾರ್ಯಕ್ಕೆ ದುಬೈ ಕನ್ನಡಿಗರು ಫಿದಾ- ಮೆಚ್ಚುಗೆಯ ಮಹಾಪೂರ

  • ಸಿಡಿ ಕೈಯಲ್ಲಿ ಇದ್ದರೆ ಬಿಡುಗಡೆ ಮಾಡಲಿ, ಗೊಂದಲ ಬೇಡ: ಮುನಿರತ್ನ

    ಸಿಡಿ ಕೈಯಲ್ಲಿ ಇದ್ದರೆ ಬಿಡುಗಡೆ ಮಾಡಲಿ, ಗೊಂದಲ ಬೇಡ: ಮುನಿರತ್ನ

    ದಾವಣಗೆರೆ: ಸಿಡಿ ಕೈಯಲ್ಲಿ ಇದ್ದರೆ ಬಿಡುಗಡೆ ಮಾಡಲಿ. ಸಿಡಿ ಇದೆ ಎಂದು ಗೊಂದಲ ಸೃಷ್ಟಿಸುವುದು ಬೇಡ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.

    ಯತ್ನಾಳ್ ಸಿಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿ.ಡಿ ಇದ್ದಿದ್ದೇ ಆದರೆ ಅದನ್ನು ಬಿಡುಗಡೆ ಮಾಡಲಿ. ಸುಳ್ಳು, ಆಧಾರರಹಿತ ಆರೋಪ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.

    ಇನ್ನು ಸಚಿವ ಸ್ಥಾನ ಕೈ ತಪ್ಪಿದ ಕುರಿತು ಮಾತನಾಡಿದ ಶಾಸಕರು, ಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯ. ಪಕ್ಷ, ಸಂಘಟನೆ, ಕ್ಷೇತ್ರದ ಬಗ್ಗೆ ನಾನು ತಲೆಕಡಿಸಿಕೊಳ್ಳುತ್ತೇನೆ. ಸಚಿವ ಸ್ಥಾನ ಬಗ್ಗೆ ಚರ್ಚೆ ಬೇಡ ಕಾಲ ಕೂಡಿ ಬರುತ್ತೆ. ಎಲ್ಲದಕ್ಕೂ ದೈವ ಕೃಪೆ ಬೇಕು ಅದು ಬರುತ್ತೆ. ಯಾವಾಗ ಕಾಲ ಕೂಡಿ ಬರುತ್ತೆ ನೋಡೊಣ. ನನಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಕಾರಣ ಏನೂ ಇಲ್ಲ. ಆದರೂ ಯಾಕೆ ಕೈ ಬಿಟ್ಟರು ಗೊತ್ತಿಲ್ಲ. ಸಮಯ ಬಂದಾಗ ಎಲ್ಲಾ ಸರಿ ಹೋಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅಧಿಕಾರ ಸಿಗಲಿಲ್ಲ ಅಂತ ಆರೋಪ-ಪ್ರತ್ಯಾರೋಪ ಮಾಡಲ್ಲ. ವರಿಷ್ಟರು, ಸಿಎಂ ಅವರು ನನಗೆ ಸಚಿವ ಸ್ಥಾನ ನೀಡಲು ಬದ್ಧ ಇದ್ದಾರೆ. ಎಲ್ಲದಕ್ಕೂ ಕಾಲ ಕೂಡಿ ಬರುತ್ತೆ. ಸದ್ಯಕ್ಕೆ ಕ್ಷೇತ್ರದ ಖುಣ ತೀರಿಸಲು ಗಮನ ಕೊಡುತ್ತೇನೆ. ಸಿಎಂ ಹೇಳಿದ್ದಾರೆ ಅವರ ಮೇಲೆ ನಂಬಿಕೆ ಇದೆ. ಕಾರಣಾಂತರ ವಿಳಂಬ ಆಗಿದೆ ಅಷ್ಟೆ, ಎಲ್ಲಾ ಸರಿ ಹೋಗುತ್ತೆ ಎಂದರು.

    ವೀಕ್ ಸಿಎಂ ಹೇಳಿಕೆ ಬಗ್ಗೆ ಮಾತನಾಡಿದ ಅವರು, ರಾಜಕೀಯವಾಗಿ ಆರೋಪ ಇದ್ದಿದ್ದೇ, ಈ ರೀತಿ ಮಾತನಾಡಲೇಬೇಕು. ಈ ರೀತಿ ಮಾತನಾಡಿದರೆ ಅವರು ರಾಜಕೀಯದಲ್ಲಿ ಇದ್ದಾರೆ ಅಂತ ಅರ್ಥ. ಆದರೆ ಆಧಾರ ಇಟ್ಟುಕೊಂಡು ಮಾತನಾಡಬೇಕು. ಊಹಾಪೋಹ ಮಾತನಾಡೊದು ಬೇಡ. ಸುಭದ್ರ ಸರಕಾರ ಇರುತ್ತೆ ಅಂತ ಅರುಣ್ ಸಿಂಗ್ ಅವರೇ ಹೇಳಿದ್ದಾರೆ. ಸಿಎಂ ಬದಲಾವಣೆ ಆಗಲ್ಲ ಬಿಎಸ್ ವೈ ಅವರೇ ಮುಂದುವರಿಯುತ್ತಾರೆ.