Tag: ಬಸವನಗುಡಿ

  • ಪತ್ನಿ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದ ಪತಿ ವಿರುದ್ಧ ದೂರು

    ಪತ್ನಿ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದ ಪತಿ ವಿರುದ್ಧ ದೂರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿಷ್ಠಿತ ಉದ್ಯಮಿ ಪುತ್ರಿಗೆ ವರದಕ್ಷಿಣೆ ಕಿರುಕುಳ ಆರೋಪವೊಂದು ಕೇಳಿಬಂದಿದೆ.

    ಈ ಸಂಬಂಧ ಉದ್ಯಮಿ ಪುತ್ರಿ ಸಂದೀಪ್ ಎಂಬಾತನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸಂದೀಪ್ ಆಗಾಗ ಮನೆಯಲ್ಲಿ ಸ್ನೇಹಿತರೊಂದಿಗೆ ಡ್ರಗ್ಸ್ ಪಾರ್ಟಿ ಮಾಡಿತ್ತಿರುತ್ತಾನೆ. ಬಳಿಕ ಗೆಳೆಯರ ಮುಂದೇಯೇ ಹಲ್ಲೆ ನಡೆಸಿ ಅಶ್ಲೀಲವಾಗಿ ಬೈಯುತ್ತಾನೆ. ಅಲ್ಲದೆ ತನ್ನ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ ಎಂದು ಪತ್ನಿ ತಿಳಿಸಿದ್ದಾರೆ.

    ದೂರು ನೀಡಿರುವಾಕೆಯ ತಂದೆ ತೆಲಂಗಾಣದಲ್ಲಿ ಪ್ರತಿಷ್ಠಿತ ಬಟ್ಟೆ ಕಂಪನಿ ಹೊಂದಿದ್ದಾರೆ. 2021ರ ಜನವರಿಯಲ್ಲಿ ರಾಮೋಜಿ ಫಿಲಂ ಸಿಟಿಯಲ್ಲಿ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಈ ವೇಳೆ 4 ಕೆಜಿ ಚಿನ್ನ, 200 ಕೆಜಿ ಬೆಳ್ಳಿ, 50 ಲಕ್ಷ ಹಣ, 55 ಲಕ್ಷದ ಮಿನಿಕೂಪರ್ ಕಾರು ವರದಕ್ಷಿಣೆ ನೀಡಿದ್ದರು. ಇದನ್ನೂ ಓದಿ: ದೇವನಹಳ್ಳಿಯಲ್ಲಿ ಒಂಟಿ ಮಹಿಳೆ ಕೊಲೆ – ಕತ್ತು ಕೊಯ್ದು ನಗದು ದೋಚಿದ್ದ ಕೆಲಸಗಾರನ ಬಂಧನ

    ಇಷ್ಟು ವರದಕ್ಷಿಣೆ ಕೊಟ್ಟಿದ್ರೂ ಸಂದೀಪ್‍ಗೆ ಹಣದಾಹ ನೀಗಿರಲಿಲ್ಲ. ಸಂದೀಪ್ ಹೆಸರಿಗೆ ತೆಲಂಗಾಣದಲ್ಲಿ 2 ಬಟ್ಟೆ ಶಾಪ್ ಮಾಡಿಕೊಡಲಾಗಿತ್ತು. ಇಷ್ಟೆಲ್ಲಾ ವರದಕ್ಷಿಣೆ ಕೊಟ್ಟರೂ ಪತಿ ಡ್ರಗ್ ಸೇವಿಸಿ ಪತ್ನಿಗೆ ಹಿಂಸೆ ನೀಡುತ್ತಿದ್ದನು. ಇದೀಗ ಪತಿಯ ಹಿಂಸೆ ತಾಳಲಾರದೆ ನೊಂದ ಪತ್ನಿ ಪೊಲೀಸ್ ಮೆಟ್ಟಿಲು ಹತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಸವನಗುಡಿಯ ರಾಮಕೃಷ್ಣ ಆಶ್ರಮದ ಹರ್ಷಾನಂದ ಮಹಾರಾಜ್ ವಿಧಿವಶ

    ಬಸವನಗುಡಿಯ ರಾಮಕೃಷ್ಣ ಆಶ್ರಮದ ಹರ್ಷಾನಂದ ಮಹಾರಾಜ್ ವಿಧಿವಶ

    ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಆಶ್ರಮದ ಸ್ವಾಮಿ ಹರ್ಷಾನಂದಜೀ ಮಹಾರಾಜ್(91) ವಿಧಿವಶರಾಗಿದ್ದಾರೆ.

    ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದು ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ಚಾಮರಾಜಪೇಟೆಯ ಟಿ ಆರ್ ಮಿಲ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

    ಇವತ್ತು ರಾತ್ರಿ 8 ಗಂಟೆಯವರೆಗೆ ನಾಳೆ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ಆತ್ಮ ರಾಮಕೃಷ್ಣನಲ್ಲಿಗೆ ಸೇರಲು ಗೀತ ಪಠಣ ಇತ್ಯಾದಿ ಸ್ತೋತ್ರಗಳನ್ನು ಪಠಿಸಲಾಗುತ್ತಿದೆ.

    ಶ್ರೀಯುತರು 1962 ರಲ್ಲಿ ರಾಮಕೃಷ್ಣ ಮಠದ 8ನೇ ಅಧ್ಯಕ್ಷ ಸ್ವಾಮಿ ವಿಶುದ್ಧಾನಂದರಲ್ಲಿ ಸನ್ಯಾಸಿ ದಿಕ್ಷೆಯನ್ನು ಸ್ವೀಕರಿಸಿ 1989ರಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹಿಂದೂ ಧರ್ಮದ ಮೇರು ಗ್ರಂಥವಾದ ʼಕನ್ಸೈಸ್ ಎನ್ ಸೈಕ್ಲೊಪೀಡಿಯಾ ಆಫ್ ಹಿಂದೂಯಿಸಮ್ʼ ಅನ್ನು ಸುಮಾರು 26 ವರ್ಷಗಳ ಕಾಲ ರಚನೆ ಮಾಡಿದ್ದರು. ಇಂದಿಗೂ ಕೂಡ ಈ ಗ್ರಂಥ ಹಲವಾರು ಕೃತಿಗಳಿಗೆ ಆಧಾರ ಸ್ಥಂಭವಾಗಿದೆ.

    ಆಧ್ಯಾತ್ಮಿಕದ ಬಗ್ಗೆ ಹಲವಾರು ಕೃತಿಗಳನ್ನ ಶ್ರೀಗಳು ರಚನೆ ಮಾಡಿದ್ದು, ಕನ್ನಡ, ಇಂಗ್ಲಿಷ್, ಸಂಸ್ಕೃತ , ಬೆಂಗಾಲಿ, ತಮಿಳು, ತೆಲುಗು ಸೇರಿದಂತೆ ಎಂಟು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುತ್ತಿದ್ದರು. ದೇಶ ಮತ್ತು ಪ್ರಪಂಚದಾದ್ಯಂತ ಇರುವ ರಾಮಕೃಷ್ಣ ಮಠದ 230 ಶಾಖಾ ಮಠಗಳನ್ನು  ಶ್ರೀಯುತರು ಬಲ್ಲವರಾಗಿದ್ದರು.

  • ಮುದ್ದೆ ತಿನ್ನಿ ಊಟ ಗೆಲ್ಲಿ- ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಇಂದು ಸ್ಪರ್ಧೆ

    ಮುದ್ದೆ ತಿನ್ನಿ ಊಟ ಗೆಲ್ಲಿ- ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಇಂದು ಸ್ಪರ್ಧೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಗಿ ಮುದ್ದೆ ಸ್ಪರ್ಧೆಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಭಾರೀ ಸಿದ್ಧತೆ ನಡೆಸಿದ್ದಾರೆ.

    ಅಪ್ಪಾಜಿ ಕ್ಯಾಂಟೀನ್ ಮೊದಲ ವರ್ಷದ ಆಚರಣೆ ನಿಮಿತ್ತ ‘ಮುದ್ದೆ ತಿನ್ನಿ ಊಟ ಗೆಲ್ಲಿ’ ಎನ್ನುವ ವಿಶಿಷ್ಟ ಸ್ಪರ್ಧೆಯನ್ನು ಟಿ.ಎ.ಶರವಣ ಆಯೋಜಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ನಗರದ ಬಸವನಗುಡಿಯಲ್ಲಿರುವ ಅಪ್ಪಾಜಿ ಕ್ಯಾಂಟೀನ್ ಬಳಿ ಸ್ಪರ್ಧೆ ನಡೆಯಲಿದೆ.

    ಬಹುಮಾನ ಏನು?
    ಪಂದ್ಯದಲ್ಲಿ ಜಯ ಸಾಧಿಸಿದ ಮೂವರಿಗೆ ಬಂಪರ್ ಗಿಫ್ಟ್ ನೀಡಲಾಗುತ್ತದೆ. ಅದು ಏನು ಅಂದರೆ, ಮೊದಲ ಬಹುಮಾನ ಒಂದು ತಿಂಗಳು ಟಿಫನ್, ಮಧ್ಯಾಹ್ನದ ಊಟ ಉಚಿತ. ಇನ್ನು ಎರಡನೇ ಬಹುಮಾನ 20 ದಿನ ಟಿಫನ್, ಊಟ ಮತ್ತು ಮೂರನೇ ಸ್ಥಾನ ಪಡೆದವರಿಗೆ 10 ದಿನ ಟಿಫನ್ ಹಾಗೂ ಊಟ ಉಚಿತವಾಗಿ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡುತ್ತಿದ್ದ ಪೊಲೀಸ್ ಪೇದೆ ಅಮಾನತು

    ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡುತ್ತಿದ್ದ ಪೊಲೀಸ್ ಪೇದೆ ಅಮಾನತು

    ಬೆಂಗಳೂರು: ಬಸವನಗುಡಿಯ ಕಡಲೇಕಾಯಿ ಪರಿಷೆಯಲ್ಲಿ ವ್ಯಾಪಾರಿಗಳಿಂದ ಅಕ್ರಮವಾಗಿ ಕಡ್ಲೆಕಾಯಿಯನ್ನು ಸಂಗ್ರಹಿಸುತ್ತಿದ್ದ ಪೇದೆಯನ್ನು ಅಮಾನತು ಮಾಡಲಾಗಿದೆ.

    ಸಿಎಆರ್ ಪೇದೆ ಎಸ್ ಪಿ ಮಂಡಕ್ಕಿ ಅಮಾನತುಗೊಂಡಿರುವ ಪೇದೆ. ಎಸ್ ಪಿ ಮಂಡಕ್ಕಿ ಅವರನ್ನು ಸಿಎಆರ್ ಡಿಸಿಪಿ ತಿಮ್ಮಣ್ಣನವರ್ ಅಮಾನತು ಮಾಡಿರುವುದಾಗಿ ಆದೇಶ ಹೊರಡಿಸಿದ್ದಾರೆ.

    ಸೋಮವಾರದಿಂದ ಆರಂಭವಾಗಿರುವ ನಗರದ ದೊಡ್ಡ ಜಾತ್ರೆ ಬಸವನಗುಡಿಯ ಕಡ್ಲೆಕಾಯಿ ಪರಿಷೆ ವೇಳೆ ಪೊಲೀಸ್ ಪೇದೆ ಸಣ್ಣದಾದ ಚೀಲವೊಂದನ್ನು ಹಿಡಿದುಕೊಂಡು ಕಡ್ಲೆಕಾಯಿ ಬೇಡುತ್ತಿರುವುದನ್ನು ನೆರೆದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಪೇದೆಯ ವಿರುದ್ಧ ಕಿಡಿ ಕಾರಿ ಕ್ರಮಕ್ಕೆ ಆಗ್ರಹಿಸಿದ್ದರು.

    https://youtu.be/BDrCNJk5Fho

  • ವಿಡಿಯೋ- ಬೆಂಗ್ಳೂರು ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡಿದ ಪೇದೆ!

    ವಿಡಿಯೋ- ಬೆಂಗ್ಳೂರು ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡಿದ ಪೇದೆ!

    ಬೆಂಗಳೂರು: ಕೆಲ ಪೊಲೀಸರು ವಸೂಲಿ ರಾಜರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದ್ರೆ ಕಡ್ಲೆಕಾಯನ್ನೂ ಬಿಡಲ್ಲ ಅಂತಾ ಬಯಲಾಗಿದ್ದು ಇವತ್ತು ಬಯಲಾಗಿದೆ.

    ಹೌದು. ನಗರದ ದೊಡ್ಡ ಜಾತ್ರೆ ಬಸವನಗುಡಿಯ ಕಡ್ಲೆಕಾಯಿ ಪರಿಷೆ ನಿನ್ನೆಯಿಂದ ಆರಂಭವಾಗಿದೆ. ಈ ಜಾತ್ರೆಗೆ ನಗರದ ಹಲವೆಡೆಗಳಿಂದ ಜನರು ಹರಿದುಬರುತ್ತಾರೆ. ಹೀಗೆ ತುಂಬಿ ತುಳುಕುತ್ತಿರೋ ಜನರ ಮಧ್ಯೆ ಪೊಲೀಸ್ ಪೇದೆಯೊಬ್ಬರು ಕಡ್ಲೆಕಾಯಿ ಭಿಕ್ಷೆ ಬೇಡುತ್ತಿರುವುದು ಜನಸಾಮಾನ್ಯರ ಗಮನಕ್ಕೆ ಬಂದಿದೆ.

    ಕಾನ್ಸ್ ಸ್ಟೇಬಲ್ ಸಣ್ಣದಾದ ಚೀಲವೊಂದನ್ನು ಹಿಡಿದುಕೊಂಡು ಕಡ್ಲೆಕಾಯಿ ಬೇಡುತ್ತಿರುವುದುನ್ನು ನೆರೆದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬೆಂಗಳೂರು ದೊಡ್ಡ ಬಸವಣ್ಣ ದೇವಸ್ಥಾನದ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಮಿಠಾಯಿ, ಫ್ಯಾನ್ಸಿ ವಸ್ತುಗಳು, ಭಾವಚಿತ್ರಗಳು, ಕಸೂತಿ ಮಾಡಿದ ಬುಟ್ಟಿ, ಗೃಹ ಬಳಕೆ ವಸ್ತು, ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಮಾಲೆಗಳು, ಹೂಗುಚ್ಛ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಅಂಗಡಿಗಳು ಬಸವನಗುಡಿ ದೊಡ್ಡ ಬಸವಣ್ಣ ದೇವಸ್ಥಾನ ಎದುರು, ಅಕ್ಕಪಕ್ಕದ ರಸ್ತೆಗಳಲ್ಲಿ ಬಿಡಾರ ಹೂಡಿರುವುದನ್ನು ಕಾಣಬಹುದು.

    ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಮಾಗಡಿ, ಮಂಡ್ಯ, ಮೈಸೂರು, ಚಿಂತಾಮಣಿ, ತುಮಕೂರು, ಕುಣಿಗಲ್ ಸೇರಿದಂತೆ ನೆರೆಯ ಆಂಧ್ರ ಪ್ರದೇಶದಿಂದಲೂ ವರ್ತಕರು ಬಂದು ಕಡ್ಲೆಕಾಯಿ ಮಾರುತ್ತಾರೆ. ಉಳಿದ ವಸ್ತುಗಳ ವ್ಯಾಪಾರಿಗಳು ಬೇರೆ ಬೇರೆ ರಾಜ್ಯದಿಂದಲೂ ಆಗಮಿಸಿದ್ದಾರೆ.

    https://www.youtube.com/watch?v=BDrCNJk5Fho