Tag: ಬಸವನಗುಡಿ

  • ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ (Basavanagudi Kadlekai Parishe) ದಿನಾಂಕ ನಿಗದಿ ಆಗಿದೆ. ಮುಂದಿನ ತಿಂಗಳು ನವೆಂಬರ್ 17 ಮತ್ತು 18ರಂದು ಎರಡು ದಿನಗಳ ಕಾಲ ಪರಿಷೆ ನಡೆಯಲಿದೆ.

    ಶ್ರೀ ದೊಡ್ಡಗಣಪತಿ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ತನ್ನದೇ ಆದ ವಿಶೇಷ ಇತಿಹಾಸ ಇದೆ. ಪ್ರತಿ ವರ್ಷದಂತೆ ಈ ವರ್ಷವು ಯಾವುದೇ ಅಹಿತಕರ ಘಟನೆ ಆಗದಂತೆ ಅದ್ಧೂರಿ ಆಗಿ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ

    ಇದೇ ಗುರುವಾರ ಕಡಲೆ ಕಾಯಿ ಪರಿಷೆ ಸಂಬಂಧ ಸಾರಿಗೆ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ (Ramalinga Reddy) ನೇತೃತ್ವದಲ್ಲಿ ಸಭೆ ಕೂಡ ನಡೆಯಲಿದ್ದು, ಸಭೆಯಲ್ಲಿ ಸ್ಥಳೀಯ ಶಾಸಕರು ಭಾಗಿಯಾಗಲಿದ್ದಾರೆ. ಜೊತೆಗೆ ವ್ಯಾಪಾರಿಗಳಿಂದ ಯಾವುದೇ ಸುಂಕ ವಸೂಲಾತಿ ಯಾರು ಮಾಡಬಾರದು ಎಂಬುದುನ್ನ ನಿರ್ಧಾರ ಕೈಗೊಳ್ಳುವುದರ ಜೊತೆಗೆ ಏನೆಲ್ಲ ವಿಶೇಷತೆ ಇರುತ್ತೆ ಎಂಬುದನ್ನ ಬಹಿರಂಗ ಪಡಿಸಲಿದ್ದಾರೆ.  ಇದನ್ನೂ ಓದಿ: ರಷ್ಯಾದ ತೈಲ ಆಮದು ಕಡಿಮೆಯಾಗಲಿದೆ, ದೀಪಾವಳಿಯಂದು ಮೋದಿ ಜೊತೆ ಮಾತನಾಡಿದ್ದೇನೆ: ಟ್ರಂಪ್‌

  • ಬಸನವಗುಡಿಯಲ್ಲಿ ಮರದ ಕೊಂಬೆ ಬಿದ್ದು ಸವಾರ ಗಂಭೀರ

    ಬಸನವಗುಡಿಯಲ್ಲಿ ಮರದ ಕೊಂಬೆ ಬಿದ್ದು ಸವಾರ ಗಂಭೀರ

    ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಲೇ ಮರದ (Tree) ಕೊಂಬೆ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಸವನಗುಡಿಯ (Basavanagudi) ಬ್ರಹ್ಮ ಚೈತನ್ಯ ಮಂದಿರದ ಬಳಿ ನಡೆದಿದೆ.

    29 ವರ್ಷದ ಅಕ್ಷಯ್‌ ಗಂಭೀರವಾಗಿ ಗಾಯಗೊಂಡ ಸವಾರ. ಕೊಂಬೆ ಬೀಳುತ್ತಿದ್ದಂತೆ ನಿಯಂತ್ರಣ ತಪ್ಪಿ ಎದುರುಗಡೆ ನಿಲ್ಲಿಸಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: Uttara Kannada | ಪೋಷಕರ ನಿರ್ಲಕ್ಷ್ಯ – 2 ವರ್ಷದ ಮಗು ನಾಲೆಗೆ ಬಿದ್ದು ಸಾವು

    ಡಿಕ್ಕಿ ಹೊಡೆದ ರಭಸಕ್ಕೆ ಪ್ರಶಾಂತ್‌ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪ್ರಶಾಂತ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶ್ರೀನಿವಾಸನಗರದ ನಿವಾಸಿಯಾಗಿರುವ ಅಕ್ಷಯ್‌ ರಾಜಾಜಿನಗರದಲ್ಲಿ ಕಂಪನಿಯೊಂದದರಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: 422 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಫ್ಲೈಓವರ್‌ನ ನಟ್‌, ಬೋಲ್ಟ್‌ ತೆಗೆದ ಮಕ್ಕಳು

    ತಲೆಯ ಮಧ್ಯ ಭಾಗಕ್ಕೆ ತೀವ್ರ ಹಾನಿಯಾಗಿದೆ. ಮೂಗು, ಬಾಯಿ, ಕಿವಿಯಲ್ಲಿ ರಕ್ತಸ್ರಾವವಾಗಿದೆ. ಅಕ್ಷಯ್‌ ತಂದೆಗೆ ಡಯಾಲಿಸಿಸ್ ನಡೆಯುತ್ತಿದ್ದು ಕುಟುಂಬಕ್ಕೆ ಅಕ್ಷಯ್‌ ಆಧಾರವಾಗಿದ್ದರು.

  • ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ

    -ನ.25, 26ರಂದು ಬಸವನಗುಡಿಯಲ್ಲಿ ಪರಿಷೆ, 3 ಲಕ್ಷ ಜನ ಭಾಗಿ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಮತ್ತು ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯ (Kadalekai Parishe) ದಿನಾಂಕವನ್ನ ಮುಜರಾಯಿ ಇಲಾಖೆ (Muzrai Department) ಘೋಷಣೆ ಮಾಡಿದೆ. ಎರಡು ದಿನಗಳ ಕಾಲ ಈ ಪರಿಷೆ ನಡೆಸಲು ನಿರ್ಧರಿಸಿದೆ. ಈ ಬಾರಿಯ ಕಡಲೆಕಾಯಿ ಪರಿಷೆ ಹಲವು ವಿಶೇಷತೆಗಳಿಂದ ಕೂಡಿರಲಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಬಸವನಗುಡಿ ಕಡಲೆಕಾಯಿ ಪರಿಷೆ ಮಾಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ನವೆಂಬರ್ 25 ಮತ್ತು 26ರಂದು ಎರಡು ದಿನಗಳ ಕಾಲ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವಾರು ಸಲಹೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್‌ ಬಂದಿತ್ತು: ಸಿಎಂ ಬಾಂಬ್‌

    ಇನ್ನೂ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನವೆಂಬರ್ 15 ರಿಂದ 3 ದಿನಗಳ ಕಾಲ ನಡೆಯಲಿದೆ. ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ. ಪರಿಷೆಗೆ ಬರುವವರು ಮತ್ತು ವ್ಯಾಪಾರಸ್ಥರು ಪ್ಲಾಸ್ಟಿಕ್ ಬಿಟ್ಟು, ಬಟ್ಟೆ ಚೀಲವನ್ನೆ ಬಳಸಬೇಕು ಎಂಬ ನಿಯಮ ಜಾರಿ ಮಾಡಲಾಗುತ್ತದೆ. ಇನ್ನು ಈ ಪರಿಷೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ರಝಾಕರು ಮುಸ್ಲಿಮರಲ್ಲ, ಸುಟ್ಟಿದ್ದು ನಮ್ಮನೆ, ಹೋಗಿದ್ದು ನಮ್ಮವರ ಜೀವ, ಯೋಗಿಗೆ ಏನಾಗಬೇಕು? – ಪ್ರಿಯಾಂಕ್ ತಿರುಗೇಟು

    ಕಳೆದ ಬಾರಿ ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿರೋ ಆರೋಪ ಎದ್ದಿತ್ತು. ಹೀಗಾಗಿ ಈ ಬಾರಿ ಆ ರೀತಿ ಅಕ್ರಮಗಳು ನಡೆಯದಂತೆ ಕ್ರಮವಹಿಸಿ ಯಶಸ್ವಿಗೊಳಿಸಲು ಪ್ಲ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಗುರುವಾರ ಬಿಎಸ್‌ವೈ, ರಾಮುಲುಗೆ ಬಿಗ್‌ ಡೇ!

  • ನ.25, 26 ರಂದು ನಡೆಯಲಿದೆ ಪ್ರಸಿದ್ಧ ಬಸವನಗುಡಿ ಕಡಲೇಕಾಯಿ ಪರಿಷೆ

    ನ.25, 26 ರಂದು ನಡೆಯಲಿದೆ ಪ್ರಸಿದ್ಧ ಬಸವನಗುಡಿ ಕಡಲೇಕಾಯಿ ಪರಿಷೆ

    ಬೆಂಗಳೂರು: ಪ್ರಸಿದ್ದ ಬಸವನಗುಡಿ ಕಡಲೇಕಾಯಿ ಪರಿಷೆ (Basavanagudi Kadlekai Parishe) ನ.25 ಮತ್ತು 26 ರಂದು ನಡೆಯಲಿದೆ.

    ಮುಜರಾಯಿ ಇಲಾಖೆ ಇಂದು ದಿನಾಂಕ ನಿಗದಿ ಮಾಡಿದೆ. ಎರಡು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಪರಿಷೆಗೆ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಬ್ರೇಕ್ ಹಾಕಲು ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: ಅಧಿಕಾರಿಗಳು ಜಡ್ಜ್‌ ಆಗಲು ಸಾಧ್ಯವಿಲ್ಲ : ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ

    ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಇಂದು ಅಧಿಕಾರಿಗಳ ಜೊತೆ ಸಭೆ ಮಾಡಿ ಕಡಲೆಕಾಯಿ ಪರಿಷೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದಾರೆ.

    ನ.15 ರಿಂದ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ (Malleshwaram Kadlekai Parishe) ಆರಂಭವಾಗಲಿದ್ದು ಸಂಜೆ 4.30ಕ್ಕೆ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದಾರೆ

    ಮಲ್ಲೇಶ್ವರಂನ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಪರಿಷೆಯನ್ನು ಆಯೋಜಿಸಿದೆ. ನವೆಂಬರ್‌ 15 ರಿಂದ 18ರವರೆಗೆ ರೈತಸ್ನೇಹಿ ಕಡಲೆಕಾಯಿ ಪರಿಷೆ ನಡೆಯಲಿದೆ.

     

  • ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ- 3 ದಿನಗಳ ಕಾಲ ಬೆಂಗಳೂರಲ್ಲಿ ಗ್ರಾಮೀಣ ವೈಭವ

    ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ- 3 ದಿನಗಳ ಕಾಲ ಬೆಂಗಳೂರಲ್ಲಿ ಗ್ರಾಮೀಣ ವೈಭವ

    ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ (Kadalekai Parishe)  ಇಂದಿನಿಂದ ಆರಂಭವಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಾಲಯದ ಬಳಿ ಸುಗ್ಗಿಯ ವೈಭವ ಜೋರಾಗಿದ್ದು, ಎತ್ತ ನೋಡಿದ್ರು ಜಾತ್ರಾ ಮೆರುಗು ಸಿಟಿಯ ಮಧ್ಯೆ ಗ್ರಾಮೀಣ ಸೊಬಗನ್ನ ರಂಗೇರಿಸುತ್ತಿದೆ.

    ತನ್ನದೇ ಆದ ಇತಿಹಾಸ ಹೊಂದಿರೋ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಕ್ಕಿದೆ. ದೊಡ್ಡ ಗಣೇಶನ ದೇವಾಲಯದಲ್ಲಿ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ನೀಡಲಾಯ್ತು. ಸಂಸದ ತೇಜಸ್ವಿಸೂರ್ಯ, ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಅಧಿಕೃತ ಚಾಲನೆ ನೀಡಿದ್ರು.

    ಹಿಂದಿನಿಂದಲೂ ಸಂಪ್ರದಾಯದಂತೆ ಕಡಲೆಕಾಯಿ ಉತ್ಸವ ಮಾಡಿಕೊಂಡು ಬರಲಾಗಿದ್ದು, ಈ ಹಿಂದೆ ಜಮೀನುಗಳಿಂದ ಕಡಲೆಕಾಯಿ ತಂದು ಇಲ್ಲಿ ಮಾರಾಟ ಮಾಡಲಾಗ್ತಿತ್ತು. ಆದರೆ 2008ರಿಂದ ಪರಿಷೆಗೆ ಹೊಸ ಆಯಾಮ ಕೊಡಲಾಗಿದೆ. ವಿಶೇಷವಾಗಿ 1 ವಾರದವರೆಗೂ ಜಾತ್ರೆ ನಡೆಯಲಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚು ಜನ ಪರಿಷೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿ ಕೂಡ ಸುಮಾರು 7 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಭ್ರದತೆ ದೃಷ್ಟಿಯಿಂದ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮಹಿಳೆಯರ ಸೇಫ್ಟಿ ದೃಷ್ಟಿಯಿಂದ ಅನೌನ್ಸ್ ಮೆಂಟ್ ಸೇರಿದಂತೆ 50ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇನ್ನೂ ಇಂದು ಸಂಜೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನೆರವೇರಿದೆ.

    ಪರಿಷೆಗೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ (Tejaswi Surya) ಮಾತನಾಡಿ, ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ನಮ್ಮ ನೆಲದ ಸಂಸ್ಕೃತಿ ಇಂದಿಗೂ ಜೀವಂತವಾಗಿರೋದು ಈ ರೀತಿಯ ಆಚರಣೆಯಿಂದಗಳಿಂದಲೇ. ಈ ವರ್ಷವೂ ಲಕ್ಷಾಂತರ ಜನರು ಭಾಗಿಯಾಗ್ತಿದ್ದಾರೆ. ಪ್ರಧಾನ ಮಂತ್ರಿಗಳು ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕತೆ ಉತ್ತೇಜನ ನೀಡುವಲ್ಲಿ ಮುಂದಾಗಿದ್ದಾರೆ. ಅದೇ ರೀತಿ ಕಡಲೆಕಾಯಿ ಪರಿಷೆ ಸಾಕಷ್ಟು ವ್ಯಾಪಾರಿಗಳಿಗೆ ಆದಾಯ ಆಗಲಿದೆ. ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯಲಿದೆ. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕರೆ ತನ್ನಿ ಎಂದ್ರು.

    ಇಂದಿನಿಂದ ಆರಂಭವಾಗಿರೋ ಪರಿಷೆ ಇನ್ನೂ ಮೂರು ದಿನ ನಗರದ ಮಧ್ಯ ಭಾಗದಲ್ಲಿ ಹಳ್ಳಿ ಸೊಬಗನ್ನ ಸೃಷ್ಟಿಸಿರೊದಂತು ಸುಳ್ಳಲ್ಲ. ನೀವು ಭೇಟಿ ಕೊಡಿ, ವೈಭವವನ್ನ ಆನಂದಿಸಿ.

  • ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

    ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

    ಬೆಂಗಳೂರು: : ಬೆಂಗಳೂರು ಬಸವನಗುಡಿ (Basavana Gudi) ಕಡ್ಲೆಕಾಯಿ ಪರಿಷೆ ಅಂದ್ರೆ ಸಿಕ್ಕಾಪಟ್ಟೆ ಫೇಮಸ್. ಪರಿಷೆಯಷ್ಟೇ ಫೇಮಸ್ ಜಾತ್ರೆಯ ತುತ್ತೂರಿ ಸೌಂಡ್. ಆದರೆ ಈ ವರ್ಷದ ಕಡ್ಲೆಕಾಯಿ ಪರಿಷೆಯ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಹೌದು. ಸಿಲಿಕಾನ್ ಸಿಟಿಯ ಬಸವನಗುಡಿ ಪಾರಂಪರಿಕ ಕಡ್ಲೆಕಾಯಿ ಪರಿಷೆ (Kadale Kai Parishe) ಅಂದ್ರೆ ಬೆಂಗಳೂರಿಗೆ ಸಂಭ್ರಮ. ಪರಿಷೆಯಲ್ಲಿ ಕಡ್ಲೆಕಾಯಿ ಸಂಭ್ರಮದ ಜೊತೆಗೆ ಇಡಿ ಜಾತ್ರೆಯಲ್ಲಿ ಸಕತ್ ಸೌಂಡ್ ಮಾಡೋದು ಅಂದರೆ ತುತ್ತೂರಿ ಸೌಂಡ್. ಅದರಲ್ಲೂ ಕಾಲೇಜ್ ಹುಡುಗರಿಗಂತೂ ತುತ್ತೂರಿ ಹಾಟ್ ಫೇವರಿಟ್. ಅದರೆ ಈ ವರ್ಷ ಪರಿಷೆಯ ತುತ್ತೂರಿ ಸೌಂಡ್ ವಿರುದ್ಧ ಬಸವನಗುಡಿ ನಿವಾಸಿಗಳ ಹಿತರಕ್ಷಣಾ ವೇದಿಕೆ ಠಾಣೆಯ ಮೆಟ್ಟಿಲೇರಿದೆ. ತುತ್ತೂರಿ ಬಳಕೆಯಿಂದಾಗಿ ಶಬ್ಧಮಾಲಿನ್ಯವಾಗುತ್ತಿದೆ. ಈ ತುತ್ತೂರಿಯ ಸೌಂಡ್‍ನಿಂದ ಹೃದ್ರೋಗಿಗಳಿಗೆ ಬಿಪಿ ಸಮಸ್ಯೆ ಇರೋರಿಗೆ ತೊಂದರೆಯಾಗುತ್ತೆ ಅನ್ನೋದು ನಿವಾಸಿಗಳ ವಾದ.

    ಇನ್ನು ಈ ವರ್ಷ ತುತ್ತೂರಿ ಬಳಕೆಗೆ ಬ್ರೇಕ್ ಹಾಕೋದಾಗಿ ಪೊಲೀಸರು ಕೂಡ ಭರವಸೆ ನೀಡಿದ್ದಾರಂತೆ. ಒಂದು ವೇಳೆ ಈ ವರ್ಷವೂ ತುತ್ತೂರಿ ಸೌಂಡ್ ಕೇಳಿಸಿದ್ರೇ, ನ್ಯಾಯಲಯದ ಮೆಟ್ಟಿಲೇರೋದಾಗಿ ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ: ತುಳುವನ್ನು ಹೆಚ್ಚುವರಿ ಭಾಷೆಯಾಗಿ ಮಾಡೋದಕ್ಕೆ ಪ್ರಯತ್ನಿಸುತ್ತೇವೆ: ಸಿಎಂ

    ಪರಿಷೆಗೆ ಮುಂಚಿತವಾಗಿ ತುತ್ತೂರಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹಾಕಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ತುತ್ತೂರಿ ಬಗ್ಗೆ ಈ ಬಾರಿ ಏನಾಗಲಿದೆ ಅಂತಾ ಕಾದುನೋಡಬೇಕು.

  • ಇಡೀ ಜಗತ್ತಿಗೆ ಒಂದು ಭಾರತದ ಅವಶ್ಯಕತೆ ಇದೆ: ಮೋಹನ್ ಭಾಗವತ್

    ಇಡೀ ಜಗತ್ತಿಗೆ ಒಂದು ಭಾರತದ ಅವಶ್ಯಕತೆ ಇದೆ: ಮೋಹನ್ ಭಾಗವತ್

    – ಬಸವನಗುಡಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ

    ಬೆಂಗಳೂರು: 77ನೇ ಸ್ವಾತಂತ್ರೋತ್ಸವ ದಿನಾಚರಣೆ (Independence Day) ಹಿನ್ನೆಲೆ ಬೆಂಗಳೂರಿನ (Bengaluru) ಬಸವನಗುಡಿಯಲ್ಲಿ (Basavanagudi) ಆರ್‌ಎಸ್‌ಎಸ್ (RSS) ಮುಖ್ಯಸ್ಥ ಡಾ. ಮೋಹನ್ ಭಾಗವತ್ (Mohan Bhagwat) ಧ್ವಜಾರೋಹಣ ನೆರವೇರಿಸಿದರು. ಮೋಹನ್ ಭಾಗವತ್‌ಗೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಾಥ್ ನೀಡಿದರು.

    ಬಸವನಗುಡಿಯ ವಾಸವಿ ಕನ್ವೆನ್ಶನ್ ಹಾಲ್‌ನಲ್ಲಿ ಸಮರ್ಥ ಭಾರತ ಎಂಬ ಎನ್‌ಜಿಒ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಧ್ವಜಾರೋಹಣದ ಬಳಿಕ ಮಾತನಾಡಿದ ಮೋಹನ್ ಭಾಗವತ್, ವಿಶ್ವಕ್ಕೆ ಬೆಳಕು ನೀಡುವುದಕ್ಕಾಗಿಯೇ ಭಾರತ ಸ್ವಾತಂತ್ರ‍್ಯವಾಗಿದೆ. ಇಡೀ ಜಗತ್ತಿಗೆ ಒಂದು ಭಾರತದ ಅವಶ್ಯಕತೆಯಿದೆ. ಧ್ವಜದ ಸ್ವರೂಪದ ಬಗ್ಗೆ ನಾವು ಯೋಚನೆ ಮಾಡಬೇಕಿದ್ದು, ನಾವು ಸಬಲರಾಗದಿದ್ದರೆ ನಮ್ಮನ್ನು ಒಡೆಯುವ ಶಕ್ತಿಗಳು ಬಲಶಾಲಿಯಾಗುತ್ತವೆ ಎಂದರು.

    ಧ್ವಜದ ಸ್ವರೂಪದ ಬಗ್ಗೆ ನಾವು ಯೋಚಿಸಬೇಕು. ನಿರಂತರವಾಗಿ ಕ್ರಿಯಾಶೀಲರಾಗಿರಬೇಕು. ಇದನ್ನೇ ಕೇಸರಿ ಬಣ್ಣ ಸೂಚಿಸುತ್ತದೆ. ತ್ಯಾಗವನ್ನು ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ. ಮನದ ವಿಕಾರಗಳನ್ನು ನಿರ್ಮೂಲನೆಗೊಳಿಸಲು ಬಿಳಿ ಬಣ್ಣವಿದೆ. ಲಕ್ಷ್ಮಿಯ ಪ್ರೀತಿಗೆ ಹಸಿರು ಬಣ್ಣ ನಮ್ಮ ಸಮೃದ್ಧಿ ಸೂಚಿಸುತ್ತದೆ. ಈ ಸಂದೇಶವನ್ನು ತ್ರಿವರ್ಣ ಧ್ವಜ ನೀಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 77th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

    ನಮ್ಮ ಅಸ್ಮಿತೆಯ ಆಧಾರದಲ್ಲಿ ದೇಶವನ್ನು ಕಟ್ಟಬೇಕು. ನಮಗೆ ಸ್ವಾಧೀನತೆ ಸಿಕ್ಕಿದೆ ಆದರೆ ಸ್ವಾತಂತ್ರ‍್ಯ ಸಿಕ್ಕಿಲ್ಲ. ಜ್ಞಾನ, ಕರ್ಮದ ಆಧಾರದಲ್ಲಿ ಕೆಲಸ ಮಾಡಿದರೆ ಸ್ವತಂತ್ರ್ಯ ಸಿಗುತ್ತದೆ. ನಮ್ಮ ಜಲ, ಅರಣ್ಯ, ಜಾನುವಾರುಗಳನ್ನು ಸುಖಿಯಾಗಿಡಬೇಕು. ಈ ಎಲ್ಲ ವಿಚಾರಗಳನ್ನೂ ಮನಸ್ಸಿನಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕು ಎನ್ನುತ್ತ ಕೇವಲ 8 ನಿಮಿಷದಲ್ಲಿ ಮೋಹನ್ ಭಾಗವತ್ ಭಾಷಣ ಮುಗಿಸಿದರು. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನು ಸಮಾನ ಪ್ರಜೆ, ಪ್ರತಿಯೊಬ್ಬನಿಗೂ ಸಮಾನ ಹಕ್ಕುಗಳಿವೆ: ದ್ರೌಪದಿ ಮುರ್ಮು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

    ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

    ಬೆಂಗಳೂರು: ಪತ್ನಿ ಬೆಳಗ್ಗೆ ತಡವಾಗಿ ಏಳುತ್ತಾಳೆ ಎಂದು ಪತಿಯೊಬ್ಬ (Husband) ತನ್ನ ಪತ್ನಿ (Wife) ವಿರುದ್ಧ ವಿಚಿತ್ರ ದೂರನ್ನು (Complaint) ನಿಡಿದ ಪ್ರಕರಣ ಬಸವನಗುಡಿ (Basavanagudi) ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಮ್ರಾನ್ ಖಾನ್ ಎಂಬಾತ ತನ್ನ ಪತ್ನಿ ಆಯೇಷಾ ಕಳೆದ ಐದು ವರ್ಷಗಳಿಂದಲೂ ನನಗೆ ಹಿಂಸೆ ನೀಡುತಿದ್ದಾಳೆ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

    ರಾತ್ರಿ ಮಲಗಿದರೆ ಮಧ್ಯಾಹ್ನ 12:30ಕ್ಕೆ ಏಳುತ್ತಾಳೆ. ಮತ್ತೆ ಸಂಜೆ 5:30ಕ್ಕೆ ಮಲಗಿ ರಾತ್ರಿ 9:30ರ ತನಕ ನಿದ್ರೆ ಮಾಡುತ್ತಾಳೆ. ಅಡುಗೆ ಕೂಡ ಮಾಡುವುದಿಲ್ಲ. ನನ್ನ ತಾಯಿಗೆ ಅನಾರೋಗ್ಯವಿದೆ, ಆದರೂ ತಾಯಿಯೇ ಮನೆಯಲ್ಲಿ ಅಡುಗೆ ಮಾಡಬೇಕು. ಪ್ರಶ್ನೆ ಮಾಡಿದರೆ ಬೆದರಿಕೆ ಹಾಕುತ್ತಾಳೆ. ತವರು ಮನೆಯವರನ್ನು ಕರೆಸಿ ಗಲಾಟೆ ಮಾಡುತ್ತಾಳೆ ಎಂದು ಎಂದು ಪತಿ ಆರೋಪಿಸಿದ್ದಾನೆ. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ- ಗ್ಯಾಂಗ್ ಲೀಡರ್ ಮೇಲೆ ಫೈರಿಂಗ್

    ಹುಟ್ಟು ಹಬ್ಬಕ್ಕೆ 25 ಜನರನ್ನ ಮನೆಗೆ ಆಹ್ವಾನಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ. ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ. ತನ್ನ ಆಸ್ತಿ ಲಪಟಾಯಿಸಲು ಹಾಗೂ ರಾಯಲ್ ಲೈಫ್ ಅನುಭವಿಸಲು ನನ್ನನ್ನು ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

    ಪತ್ನಿಗೆ ಮದುವೆ (Marriage) ಮುಂಚೆಯೇ ಖಾಯಿಲೆಗಳಿದ್ದವು. ಅದನ್ನು ಮರೆಮಾಚಿ ಮದುವೆ ಮಾಡಿಸಿದ್ದಾರೆ. ಪತ್ನಿಯಿಂದ ಹಾಗೂ ಆಕೆಯ ಕುಟುಂಬದಿಂದ ನರಕಯಾತನೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಇದನ್ನೂ ಓದಿ: ನನ್ನ ಪತ್ನಿಯನ್ನು ಹುಡುಕಿಕೊಡಿ- ಬೆಂಗಳೂರು ಪೊಲೀಸರಿಗೆ ಛತ್ತಿಸ್‌ಗಢ ವ್ಯಕ್ತಿ ದೂರು 

  • ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿಯ ವಿಸ್ಮಯ – ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶ

    ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿಯ ವಿಸ್ಮಯ – ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶ

    ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು (Makar Sankranti) ಬಸವನಗುಡಿಯ (Basavanagudi) ಗವಿಗಂಗಾಧರೇಶ್ವರ ದೇವಾಲಯದಲ್ಲಿ (Gavigangadhareshwara Temple) ಸೂರ್ಯ ರಶ್ಮಿ ದೇವಾಲಯದ ಗರ್ಭಗುಡಿ ಪ್ರವೇಶಿಸಿದ್ದು, ಈ ವಿಸ್ಮಯ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

    ಪ್ರತಿ ವರ್ಷ ಸಂಕ್ರಾಂತಿಯಂದು ನಡೆಯುವ ಪ್ರಕೃತಿಯ ಈ ವಿಸ್ಮಯವನ್ನು ನೋಡಲು ಭಕ್ತ ಸಾಗರವೇ ನೆರೆದಿರುತ್ತದೆ. ಸೂರ್ಯ ರಶ್ಮಿ ಸಂಜೆ 4.58ಕ್ಕೆ ಗರ್ಭಗುಡಿಯ ನಂದಿಯ ಬೆನ್ನಿನ ಭಾಗವನ್ನು ಸ್ಪರ್ಶಿಸಿದ್ದು, ಬಳಿಕ ನಂದಿಯ ಕೊಂಬುಗಳ ಮಧ್ಯೆ ಹಾದು ಲಿಂಗವನ್ನು ತಲುಪಿದೆ. ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶಿಸುತ್ತಲೇ ಗಂಗಾಧರನಿಗೆ ದೀಪಾರಾಧನೆ ಪ್ರಾರಂಭವಾಗಿದೆ.

    ಇದು 30-40 ಸೆಕೆಂಡುಗಳ ಕಾಲ ಮಾತ್ರವೇ ಕಾಣಿಸಿಕೊಳ್ಳುವ ವಿಸ್ಮಯವಾಗಿದೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದಂತೆ ಗವಿಗಂಗಾಧರೇಶ್ವರನ ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ. ಇದನ್ನೂ ಓದಿ: ಯೋಗದಲ್ಲಿ ಕರ್ನಾಟಕ ಗಿನ್ನಿಸ್ ದಾಖಲೆ – ಏಕಕಾಲಕ್ಕೆ 6 ಲಕ್ಷಕ್ಕೂ ಅಧಿಕ ಮಂದಿ ಯೋಗಾಭ್ಯಾಸ

    ಈ ವಿಸ್ಮಯ ಕಣ್ತುಂಬಿಸಿಕೊಳ್ಳಲು ದೇವಸ್ಥಾನದ ಹೊರ ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಟೆಂಟ್, ಶಾಮಿಯಾನದ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ಇದನ್ನೂ ಓದಿ: ಈ ತಿಂಗಳಾಂತ್ಯಕ್ಕೆ ಮತ್ತೆ ಅಮಿತ್ ಶಾ ಎಂಟ್ರಿ – ಸಂಕ್ರಾಂತಿ ಬಳಿಕ ಕ್ರಾಂತಿಗೆ ವೇದಿಕೆ ಸಿದ್ಧ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅವರೆ ಮೇಳದಲ್ಲಿ ಕೇಕ್ ಈ ಬಾರಿಯ ಸ್ಪೆಷಲ್

    ಅವರೆ ಮೇಳದಲ್ಲಿ ಕೇಕ್ ಈ ಬಾರಿಯ ಸ್ಪೆಷಲ್

    ಬೆಂಗಳೂರು: ಯಾವಾಗ್ಲೂ ಪಿಜ್ಜಾ, ಬರ್ಗರ್, ಕೆಎಫ್‍ಸಿ ತಿಂದು ಬೋರಾದ ತಿಂಡಿ ಪ್ರಿಯರಿಗೆ ಈಗ, ಅವರೇ ಫುಡ್ ಸವಿಯೋ ಚಾನ್ಸ್. ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರಲ್ಲಿ ಅವರೇಮೇಳ (Bengaluru Avarebele Mela) ನಡೆಯುತ್ತಿದೆ.

    ಹೌದು. ಮಾಗಡಿ ರೈತರು ಹಾಗೂ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಬಸವನಗುಡಿ ನ್ಯಾಷನಲ್ ಗ್ರೌಂಡ್ ನಲ್ಲಿ ಅವರೆ ಮೇಳ ನಡೆಯುತ್ತಿದೆ. 23ನೇ ಅವರೆಬೇಳೆ ಮೇಳವನ್ನು, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿ (Sudhamurthy), ವಿಧಾನ ಪರಿಷತ್ ಸದಸ್ಯೆ ತಾರಾ (Thara), ನಟಿ ರೂಪಿಕಾ ಸೇರಿದಂತೆ ಇತರರು ಉದ್ಘಾಟಿಸಿದ್ರು. ಜನವರಿ 5 ರಿಂದ ಜನವರಿ 9 ರವರೆಗೆ ಐದು ದಿನಗಳ ಕಾಲ ಅವರೆಬೇಳೆ ಮೇಳ ನಡೆಯಲಿದೆ. ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಲಾಟರಿ ಮಾರಾಟ ಆರಂಭಿಸಿ – 15 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಲಾಟರಿ?

    ಅವರೆಬೇಳೆ ಮೇಳದಲ್ಲಿ ಹಿತಕಿದ ಅವರೆಬೇಳೆ ಖಾರ, ಅವರೆ ಬರ್ಫಿ, ನಿಪ್ಪಟ್, ಖಾಲಿ ದೊಸೆ, ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಹಿತಕಿದ ಅವರೆ ಬೇಳೆ ಜಾಮೂನು, ಹಿತಕಿದ ಅವರೆ ಬೇಳೆ ಹನಿ ಜಿಲೇಬಿ, ಅವರೇ ಬೇಳೆ ಬಜ್ಜಿ, ಹೋಳಿಗೆ ಸೇರಿದಂತೆ 150ಕ್ಕೂ ಹೆಚ್ಚು ಖಾದ್ಯಗಳನ್ನು ಸವಿದು ಎಂಜಾಯ್ ಮಾಡಬೋದು. ಅವರೇ ಬೆಳೆ ಕೇಕ್ ಈ ಬಾರಿಯ ಸ್ಪೆಷಲ್.

    ಒಟ್ಟಿನಲ್ಲಿ ಚುಮು ಚುಮು ಚಳಿಗೆ ಅವರೇಬೆಳೆ ಪುಡ್ಸ್ ಗಳು ಸಖತ್ ಟೆಸ್ಟ್ ಕೊಡ್ತಿದ್ದು, ತಿಂಡಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k