Tag: ಬಸಪ್ಪ

  • 58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು

    58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಸಪ್ಪನ ಮತ್ತೊಂದು ಪವಾಡ ನಡೆದಿದ್ದು, 58 ವರ್ಷದ ಗುಡ್ಡಪ್ಪ ನೇಮಕ ವಿವಾದವನ್ನು ಬಸಪ್ಪ ಇತ್ಯರ್ಥ ಮಾಡಿದೆ.

    basappa

    ಮಂಡ್ಯ ತಾಲೂಕಿನ ದೊಡ್ಡಬಾನಸವಾಡಿ ಗ್ರಾಮದ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಮಾಡುವ ಮೂಲಕ ಹೊನ್ನನಾಯಕನಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸಪ್ಪ ಪವಾಡ ಮಾಡಿದೆ. ದೊಡ್ಡಬಾನಸವಾಡಿ ಗ್ರಾಮದ ಚೌಡೇಶ್ವರಿ, ಪಟ್ಟಲದಮ್ಮ, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಅರ್ಚಕರು ಇರಲಿಲ್ಲ. ಹೀಗಾಗಿ ಅರ್ಚಕರ ಆಯ್ಕೆಗೆ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಯಿತು.

    ಪೂಜಾರಿ ಆಯ್ಕೆ ವಿವಾದದಿಂದ 58 ವರ್ಷದಿಂದ ಪಟ್ಟಲದಮ್ಮನ ಕೊಂಡ, ಬಂಡಿ ಹಬ್ಬಗಳು ನಿಂತಿದ್ದವು. ಪಟ್ಟಲದಮ್ಮ ದೇವಿಯ ಅರ್ಚಕರೊಬ್ಬರ ನಿಧನದ ಬಳಿಕ, ಇಲ್ಲಿ ಈ ಹಬ್ಬ ನಿಂತಿತ್ತು. ವಯೋಸಹಜವಾಗಿ 58 ವರ್ಷದ ಹಿಂದೆ ಅರ್ಚಕರು ಮೃತಪಟ್ಟಿದ್ದರು. ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ದರು. ಆದರೆ ಅರ್ಚಕರ ಮೈ ಮೇಲೆ ದೇವರು ಬಾರದಿದ್ದಕ್ಕೆ 58 ವರ್ಷಗಳಿಂದ ಪಟ್ಟಲದಮ್ಮನ ಹಬ್ಬ ನಿಂತಿತ್ತು. ಇದೀಗ ಮತ್ತೆ ಹಬ್ಬ ಆಚರಣೆ ಮಾಡಬೇಕೆಂದು ದೈವಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಮೊರೆಗೆ ಗ್ರಾಮಸ್ಥರು ಹೋಗಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಊರಿಗೆ ಬಸಪ್ಪ ಬಂದಿತ್ತು. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಊರಿಗೆ ಬಂದ ನಂತರ ದೇವಸ್ಥಾನಗಳ ಅರ್ಚಕರ ನೇಮಕ ಪ್ರಕ್ರಿಯೆಯನ್ನು ಬಸಪ್ಪ ಆರಂಭಿಸಿತು. ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಬಸಪ್ಪ ಗುರುತಿಸಿತು. ಬಳಿಕ ಅವರನ್ನು ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆಯನ್ನು ಮಾಡಿತು. ಬಸಪ್ಪನ ಪವಾಡ ಕಣ್ಣಾರೆ ಕಂಡ ಗ್ರಾಮಸ್ಥರು ಮೂಕವಿಸ್ಮಿತರಾದರು. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನು ಅರ್ಚಕರನ್ನಾಗಿ ಬಸಪ್ಪ ಆಯ್ಕೆ ಮಾಡಿತು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

  • ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ಮಂಡ್ಯ: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಬಸಪ್ಪನ ಆಶೀರ್ವಾದ ಪಡೆದಿದ್ದಾರೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಬಸಪ್ಪನ ಆಶೀರ್ವಾದವನ್ನು ನಟಿ ಪಡೆದಿದ್ದಾರೆ. ಕಾಲಭೈರೇಶ್ವರ ದೇವಾಲಯ ಆವರಣದಲ್ಲಿರುವ ಬಸಪ್ಪ ಪವಾಡಗಳಿಗೆ ಹೆಸರುವಾಸಿಯಾಗಿದ್ದಾನೆ.

    ನಡೆದಾಡುವ ದೇವರು ಎಂದೇ ಬಸಪ್ಪ ಪ್ರಸಿದ್ಧಿ ಪಡೆದಿದ್ದಾನೆ. ಬಸಪ್ಪನ ಆಶೀರ್ವಾದ ಪಡೆದರೆ ಇಷ್ಪಾರ್ಥ ಸಿದ್ದಿಯಾಗಲಿದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಇದೀಗ ಈ ಪವಾಡ ಬಸಪ್ಪನ ಆಶೀರ್ವಾದ ಪಡೆದು ನಟಿ ಪುನೀತರಾಗಿದ್ದಾರೆ.

  • ಮಂಡ್ಯದಲ್ಲಿ ಬಸಪ್ಪನ ಪವಾಡಕ್ಕೆ ಮಾರುಹೋದ ಗ್ರಾಮಸ್ಥರು

    ಮಂಡ್ಯದಲ್ಲಿ ಬಸಪ್ಪನ ಪವಾಡಕ್ಕೆ ಮಾರುಹೋದ ಗ್ರಾಮಸ್ಥರು

    ಮಂಡ್ಯ: ಒಬ್ಬ ಆರ್ಚಕನಾಗಬೇಕೆಂದರೆ ಆತನಿಗೆ ಮಂತ್ರ, ಸ್ತೋತ್ರ, ಶಾಸ್ತ್ರಗಳ ಬಗ್ಗೆ ಜ್ಞಾನವಿರಬೇಕು. ಆಚಾರ- ವಿಚಾರ ಆಚರಣೆ ಸಾಮಾನ್ಯವಾಗಿ ತಿಳಿದಿರಬೇಕು. ಅಲ್ಲದೆ ದೇವಸ್ಥಾನಕ್ಕೆ ಯಾರು ಆರ್ಚಕನಾಗಬೇಕೆಂಬುವುದನ್ನು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸುತ್ತದೆ. ಆದರೆ ಮಂಡ್ಯ ಜಿಲ್ಲೆಯ ದೇವಸ್ಥಾನವೊಂದರಲ್ಲಿ ತನಗೆ ಯಾರು ಪೂಜೆ ಮಾಡಬೇಕೆಂಬುವುದನ್ನು ಸ್ವತಃ ದೇವರೇ ಪರೋಕ್ಷವಾಗಿ ನಿರ್ಧರಿಸುವ ಮೂಲಕ ಪವಾಡ ಸೃಷ್ಟಿಸಿದೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಈರೇಗೌಡನದೊಡ್ಡಿಯಲ್ಲಿ ಕಾಲಬೈರವೇಶ್ವರಸ್ವಾಮಿಯ ಬಸಪ್ಪ ಅಲ್ಲಿನ ಮಾರಮ್ಮ ದೇವಸ್ಥಾನಕ್ಕೆ ಅರ್ಚಕನನ್ನು ನೇಮಿಸುವ ಮೂಲಕ ಬಸವವೊಂದು ಪವಾಡ ಮಾಡಿದೆ. ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಯಾರನ್ನು ಅರ್ಚಕನಾಗಿ ನೇಮಿಸುವುದು ಎಂದು ಗ್ರಾಮಸ್ಥರು ಗೊಂದಲದಲ್ಲಿದ್ದರು. ಈ ಕುರಿತ ಗೊಂದಲ ಬಗೆ ಹರಿಸಲು ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಸ್ಥರು ಕರೆತಂದಿದ್ದಾರೆ. ಈರೇಗೌಡನದೊಡ್ಡಿಯ ಕೃಷ್ಣ ಎಂಬವರನ್ನು ಅರ್ಚಕರನಾಗಿ ಬಸಪ್ಪ ಆಯ್ಕೆ ಮಾಡಿದೆ. ಮೊದಲಿಗೆ ಬಸಪ್ಪನ ಆಯ್ಕೆಯನ್ನು ಕೃಷ್ಣ ತಿರಸ್ಕರಿಸಿದ್ದಾರೆ.

    ನನಗೆ ಸಾಕಷ್ಟು ಕಷ್ಟಗಳು ಇವೆ, ನಾನು ಅರ್ಚಕ ಆಗಲ್ಲ ಎಂದು ಕೃಷ್ಣ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಬಸಪ್ಪ ತನ್ನ ಕೊಂಬುಗಳಿಂದ ತಿವಿಯುವ ಮೂಲಕ ಕೃಷ್ಣನಿಗೆ ತಕ್ಕ ಪಾಠ ಕಲಿಸಿದೆ. ನಂತರ ಬಸಪ್ಪನ ತೀರ್ಪನ್ನು ಕೃಷ್ಣ ಹಾಗೂ ಗ್ರಾಮಸ್ಥರು ಒಪ್ಪಿಕೊಂಡರು. ಬಳಿಕ ಕೃಷ್ಣನನ್ನು ಗ್ರಾಮ ಕಲ್ಯಾಣಿಗೆ ಮುಳುಗಿಸಿ ಸ್ನಾನ ಮಾಡಿದ ಬಳಿಕ ಕೃಷ್ಣನನ್ನು ಅರ್ಚಕನಾಗಿ ನೇಮಕ ಮಾಡಲಾಗಿದೆ.

  • ಪರೀಕ್ಷೆ ಮಾಡಲು ಮುಂದಾದ ಇಬ್ಬರಿಗೆ ಬಸಪ್ಪನಿಂದ ತಕ್ಕ ಶಾಸ್ತಿ

    ಪರೀಕ್ಷೆ ಮಾಡಲು ಮುಂದಾದ ಇಬ್ಬರಿಗೆ ಬಸಪ್ಪನಿಂದ ತಕ್ಕ ಶಾಸ್ತಿ

    – ಕೊನೆಗೆ ಕಾಲು ಹಿಡಿದು ಕ್ಷಮೆ ಕೇಳಿದ್ರು

    ಮಂಡ್ಯ: ಇತ್ತೀಚೆಗೆ ಸಕ್ಕರೆನಾಡು ಮಂಡ್ಯದಲ್ಲಿ ದೇವರ ಬಸಪ್ಪಗಳು ಒಂದಲ್ಲ ಒಂದು ಪವಾಡದ ಮೂಲಕ ಜಿಲ್ಲೆಯಲ್ಲಿ ಪವಾಡ ಮೆರೆಯುತ್ತಿದೆ. ಹೀಗಿರುವಾಗ ಬಸಪ್ಪವೊಂದರ ಪವಾಡವನ್ನೆ ಪರೀಕ್ಷಿಸಲು ಹೋಗಿ ಇಬ್ಬರು ಭಕ್ತರು ಅದರ ಕೋಪಕ್ಕೆ ಗುರಿಯಾಗಿ ಕೊನೆಗೆ ಕಾಲು ಹಿಡಿದು ಕ್ಷಮೆ ಕೋರಿದ ಘಟನೆ ನಡೆದಿದೆ.

    ನಾಗಮಂಗಲ ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಭಕ್ತರು ಊರಿಗೆ ಪಾದಪೂಜೆಗೆಂದು ಬಂದಿದ್ದ ಬಸಪ್ಪನನ್ನು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಓರ್ವ ಬೆಂಗಳೂರಿನ ಪೊಲೀಸ್ ನೌಕರಿಯಲ್ಲಿದ್ದು, ಏನು ಸಮಸ್ಯೆ ಇಲ್ಲದಿದ್ರು ತನಗೆ ಸಮಸ್ಯೆ ಇದೆ ಎಂದು ಹೇಳಿಕೊಂಡು ಬಸಪ್ಪನ ಬಳಿ ಬಂದು ಪಾದ ಕೇಳಿದ್ದಾನೆ. ಇದರಿಂದ ಕೋಪಗೊಂಡ ಬಸಪ್ಪ ಪಾದಪೂಜೆಗೆಂದು ಬಂದಿದ್ದ ರಾಮನಗರದ ಜಯಪುರದ ಆ ವ್ಯಕ್ತಿಯನ್ನು ಕೊಂಬಿನಲ್ಲಿ ತಿವಿಯುತ್ತಾ ಅಟ್ಟಾಡಿಸಿದೆ.

    ಕೊನೆಗೆ ಆ ವ್ಯಕ್ತಿ ತನ್ನ ತಪ್ಪನ್ನು ಮನ್ನಿಸುವಂತೆ ಬಸಪ್ಪನ ಕಾಲು ಹಿಡಿದು ಕ್ಷಮೆ ಕೋರಿದ ಬಳಿಕ ಅದು ಶಾಂತವಾಗಿದೆ. ಇನ್ನು ಪಾದಪೂಜೆ ಬಳಿಕ ಕುಡುಕ ವ್ಯಕ್ತಿಯೊಬ್ಬ ಬಸಪ್ಪನನ್ನು ಛೇಡಿಸಲು ಮುಂದಾಗಿ ಬಸಪ್ಪನ ಪಾದ ಕೇಳಲು ಮುಂದಾಗಿದ್ದಾನೆ. ಇದರಿಂದ ಕೆರಳಿದ ಬಸಪ್ಪ ಆತನ ಎರಡು ಹಸ್ತದ ಮೇಲೆ ಗಂಟೆಗಟ್ಟಲೇ ತನ್ನ ಬಲಕಾಲು ಇಟ್ಟಿದೆ. ಬಸಪ್ಪನ ಈ ಕಾರ್ಯದಿಂದ ಕುಡಿದ ಆ ವ್ಯಕ್ತಿ ಕೊನೆಗೆ ಕಣ್ಣೀರು ಹಾಕಿ ತನ್ನನ್ನು ಕ್ಷಮಿಸಿವಂತೆ ಕೇಳಿಕೊಂಡಿದ್ದಾನೆ.

    ಬಳಿಕ ಆತ ಕುಡಿತದ ದಾಸನಾಗಿರುವ ಬಗ್ಗೆ ಆತನ ಪತ್ನಿ ಬಸಪ್ಪನ ಮುಂದೆ ಹೇಳಿದ್ದಾರೆ. ಮಹಿಳೆ ಹೇಳುತ್ತಿದ್ದಂತೆ ಬಸಪ್ಪ ಆತನನ್ನು ಮನೆಯೊಳಗಡೆ ಅಟ್ಟಾಡಿಸಿಕೊಂಡು ಕೊಂಬಿನಿಂದ ಹೊಡೆದು ತಿವಿದು, ಕೈ ಮೇಲೆ ತನ್ನ ಪಾದವಿಟ್ಟಿದೆ. ಕೊನೆಗೆ ಆತ ಬಸಪ್ಪನ ಬಳಿ ಕ್ಷಮೆ ಕೇಳಿ ಇನ್ಮುಂದೆ ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆ. ಕ್ಷಮೆ ಕೇಳುತ್ತಿದ್ದಂತೆ ಬಸಪ್ಪ ಶಾಂತಗೊಂಡು ಹಸ್ತದ ಮೇಲಿಟ್ಟ ಪಾದ ತೆಗೆದಿದೆ. ಮದ್ಯದ ನಶೆಯಲ್ಲಿದ್ದ ಆ ವ್ಯಕ್ತಿ ಕೊನೆಗೆ ಆ ಬಸಪ್ಪನಿಗೆ ಪೂಜೆ ಸಲ್ಲಿಸಿ ಇನ್ಮುಂದೆ ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆ. ಊರಿಗೆ ಬಂದ ಜಯಪುರದ ಬಸಪ್ಪ ಮಾಡಿದ ಈ ಎರಡು ಕೆಲಸಗಳನ್ನು ಆ ಊರಿನ ಜನರು ಹೊಗಳುತ್ತಾ ಬಸಪ್ಪನ ಪವಾಡವನ್ನು ಕೊಂಡಾಡಿದ್ದಾರೆ.

  • ಪವಾಡಗಳ ಸೃಷ್ಟಿಕರ್ತ ಬಸಪ್ಪನಿಗೆ 6ನೇ ವರ್ಷದ ಹುಟ್ಟುಹಬ್ಬ

    ಪವಾಡಗಳ ಸೃಷ್ಟಿಕರ್ತ ಬಸಪ್ಪನಿಗೆ 6ನೇ ವರ್ಷದ ಹುಟ್ಟುಹಬ್ಬ

    ಮಂಡ್ಯ: ಈ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ತನ್ನ ಪವಾಡಗಳ ಮೂಲಕ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಬಸಪ್ಪನಿಗೆ ಆರನೇ ವರ್ಷದ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ ಇಂದು ಸಂಭ್ರಮಿಸಲಾಗಿದೆ.

    ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿರುವ ಬಸಪ್ಪ, ಹಲವು ಪವಾಡಗಳನ್ನು ಮಾಡುವ ಮೂಲಕ ತನ್ನದೇ ಭಕ್ತ ವೃಂದವನ್ನು ಬೆಳೆಸಿಕೊಂಡಿದೆ. ಈ ಬಸಪ್ಪನಿಗೆ ಇದೀಗ 6ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬಸಪ್ಪನ ಆರನೇ ವರ್ಷದ ಹುಟ್ಟು ಹಬ್ಬವನ್ನು ಭಕ್ತರು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಆಚರಣೆ ಮಾಡಿದರು.

    ಕಾಲಭೈರವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಬಸಪ್ಪನನ್ನು ನಿಲ್ಲಿಸಿ ಕೇಕ್ ಕಟ್ ಮಾಡಿ ಭಕ್ತರು ಕೇಕ್ ತಿನ್ನಿಸಿದರು. ಈ ಮೂಲಕ ಬಸಪ್ಪ ತನ್ನ ಪವಾಡದ ಮೂಲಕ ಜನರನ್ನು ನೆಮ್ಮದಿಯಾಗಿ ಇರುವಂತೆ ನೋಡಿಕೋ ಎಂದು ಭಕ್ತರು ಬಸಪ್ಪನನ್ನು ಬೇಡಿಕೊಂಡರು.

  • ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಂಡ್ಯ: ತಮ್ಮ ಮನೆಯ ಆವರಣದಲ್ಲಿ ಮಾಡಲಾಗಿದೆ ಎನ್ನಲಾದ ಮಾಟ ಮಂತ್ರದ ನಿವಾರಣೆಗಾಗಿ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊನ್ನಲಗೇಗೌಡ ಎಂಬವರೇ ತಮ್ಮ ಮನೆಯಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಬಸವನ ಮೊರೆ ಹೋಗಿದ್ದರು. ರೈತ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ಮನೆಯ ಆವರಣದಲ್ಲಿ ಎಲ್ಲೋ ಒಂದು ಕಡೆ ಹೂತು ಹಾಕಿದ್ದಾರೆ ಎಂಬ ಬಗೆಗೆ ಅನುಮಾನಗೊಂಡಿದ್ದನು. ಈ ರೀತಿಯ ಮಾಟ ಮಂತ್ರಗಳನ್ನ ಗುರುತಿಸಿ ನಿವಾರಿಸುವುದರಲ್ಲಿ ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಬಸವನನ್ನು ಊರಿಗೆ ಕರೆಸಿದ್ದಾರೆ.


    ಊರಿಗೆ ಬಂದ ಬಸಪ್ಪನಿಗೆ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದ ನಂತರ ಬಸಪ್ಪ ಹೊನ್ನಲಗೇಗೌಡರ ಮನೆಯ ಮುಂದೆ ಎರಡು ಕಡೆ ಹೂತಿಟ್ಟಿದ್ದ ಎರಡು ಮಾಟದ ವಸ್ತುಗಳನ್ನು ಪತ್ತೆ ಹಚ್ಚಿದೆ. ಮಾಟ ಮಾಡಿ ಹೂತಿಟ್ಟಿದ್ದ ಸ್ಥಳವನ್ನ ತನ್ನ ಪಾದದ ಮೂಲಕ ತೋರಿಸಿಕೊಟ್ಟಿದೆ. ನಂತರ ಅಲ್ಲಿ ಗುಂಡಿ ತೆಗೆಸಿ ನೋಡಿದಾಗ ಮಾಟ ಮಾಡಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.