Tag: ಬಸನ ಗೌಡ ಯತ್ನಾಳ್

  • ವಕ್ಫ್ ತಿದ್ದುಪಡಿ ಮಾಡೋಕೆ ಕೇಂದ್ರ ರೆಡಿಯಾಗಿದೆ: ಪ್ರತಾಪ್‌ಸಿಂಹ

    ವಕ್ಫ್ ತಿದ್ದುಪಡಿ ಮಾಡೋಕೆ ಕೇಂದ್ರ ರೆಡಿಯಾಗಿದೆ: ಪ್ರತಾಪ್‌ಸಿಂಹ

    ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಸರ್ಕಾರ ವಕ್ಫ್‌ಗೆ ಕುಮ್ಮಕ್ಕು ನೀಡಿದೆ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ (Pratap Simha) ಆರೋಪಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜನಪ್ರಿಯ ನೇತಾರ ಯತ್ನಾಳ್ ಅವರು ವಕ್ಫ್ ವಿರುದ್ಧ ಧ್ವನಿ ಎತ್ತಿ ಧರಣಿ ಆರಂಭ ಮಾಡಿದ್ದಾರೆ. ಅದಕ್ಕೆ ಸ್ಪಂದಿಸಿ ಇವತ್ತು ಕೇಂದ್ರದಿಂದ ಕಮಿಟಿ ಬಂದಿದೆ. ಇವತ್ತು ವಿಜಯಪುರ (Vijayapura) ಜಿಲ್ಲೆಯ ರೈತರಿಗೆ ಯಾವ ರೀತಿ ಅನ್ಯಾಯ ಆಗುತ್ತಿದೆ, ಸಿದ್ದರಾಮಯ್ಯ ಸರ್ಕಾರ ವಕ್ಫ್‌ಗೆ ಹೇಗೆ ಕುಮ್ಮಕ್ಕು ನೀಡಿದೆ ಅನ್ನುವುದನ್ನು ಹೇಳುವುದಕ್ಕೆ ಇವತ್ತು ಒಂದು ಅವಕಾಶ ಸಿಕ್ಕಿದೆ. ಇದು ನಿಮ್ಮ ಹೋರಾಟದ ಫಲವಾಗಿದೆ. ಯತ್ನಾಳ್ ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಸರ್‌ ಎಂ.ವಿಶ್ವೇಶ್ವರಯ್ಯ ಓದಿದ್ದ ಸರ್ಕಾರಿ ಶಾಲೆಯೂ ವಕ್ಫ್‌ ಹೆಸರಿಗೆ

    ಯತ್ನಾಳ್ ನೇತೃತ್ವದಲ್ಲಿ ಕರ್ನಾಟಕದ ಎಲ್ಲ ರೈತರಿಗೆ ನ್ಯಾಯ ಸಿಗುತ್ತದೆ. ವಕ್ಫ್ ತಿದ್ದುಪಡಿ ಮಾಡುವುದಕ್ಕೆ ಕೇಂದ್ರ ತಯಾರಾಗಿದೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಆಗಬಹುದು. ಸಿಎಂ ಲೋಕಾಯುಕ್ತ ವಿಚಾರಣೆ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಆರೋಪಕ್ಕೆ ಒಳಗಾದವರು ವಿಚಾರಣೆ ಒಳಗಾಗುವುದು ಸಹಜ. ಸಿದ್ದರಾಮಯ್ಯ ಕೂಡಾ ಕಾನೂನಿಗೆ ತಲೆಬಾಗಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಷ್ಟ್ರದ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಅವಘಡ – 16 ಕಾರ್ಮಿಕರಿಗೆ ಗಾಯ

  • ಯತ್ನಾಳ್ ಹೇಳಿಕೆಯ ಹಿಂದೆ ಕಾಂಗ್ರೆಸ್ ಪಿತೂರಿ ಇದೆ: ರೇಣುಕಾಚಾರ್ಯ

    ಯತ್ನಾಳ್ ಹೇಳಿಕೆಯ ಹಿಂದೆ ಕಾಂಗ್ರೆಸ್ ಪಿತೂರಿ ಇದೆ: ರೇಣುಕಾಚಾರ್ಯ

    – ಯಡಿಯೂರಪ್ಪ ಎಂಟಿಆರ್ ಫುಡ್ ಅಲ್ಲ

    ದಾವಣಗೆರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಹಿಂದೆ ಕಾಂಗ್ರೆಸ್ ಪಿತೂರಿ ಇದೆ. ಯತ್ನಾಳ್‍ಗೆ ಮಾನಸಿಕ ಸ್ಥಿತಿ ಸರಿ ಇಲ್ಲ. ತಾಕತ್ ಇದ್ದರೆ ಈಗ ರಾಜಿನಾಮೆ ನೀಡಿ ಮತ್ತೆ ವಿಜಯಪುರದಿಂದ ಗೆದ್ದು ಬರಲಿ, ಆಮೇಲೆ ಮಾತಾಡುವಂತೆ ಏಕವಚನದಲ್ಲಿಯೇ ಶಾಸಕ ರೇಣುಕಾಚಾರ್ಯ ಸವಾಲೆಸೆದರು.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಳೆಹರಳಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಮುಖ್ಯಮಂತ್ರಿ ಬದಲಾವಣೆ ಅಂತ ಹೇಳ್ತಿದ್ದೀರಲ್ವ, ತಾಕತ್ ಇದ್ದರೆ ಮಾಡಿ. ಯಡಿಯೂರಪ್ಪ ಒಬ್ಬ ಎಂಟಿಆರ್ ಫುಡ್ ಅಲ್ಲ. ಪಕ್ಷವನ್ನು ತಳಮಟ್ಟದಿಂದ ಅಧಿಕಾರಕ್ಕೆ ತಂದವರು ಯಡಿಯೂರಪ್ಪ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದು ನೀವಾ ಯತ್ನಾಳ್. ಮುಖ್ಯಮಂತ್ರಿ ಮಾಡಿದ್ದು, ಮೋದಿ ಅಮಿತ್ ಶಾ. ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಯತ್ನಾಳ್ ನೀವು ಭ್ರಷ್ಟ, ನಿಮ್ಮ ಮಗನನ್ನು ಹಿಡಿದುಕೊಂಡು ರಾಜಕೀಯ ಮಾಡ್ತೀರಾ. ನೀವು ನಿಮ್ಮ ಹೆಂಡತಿ ಮಕ್ಕಳನ್ನು ಹೊರಗೆ ಕಳಿಸಿ ಅಮೇಲೆ ಮಾತಾಡಿ. ನೀವು ವರ್ಜಿನಲ್ ಬಿಜೆಪಿಯಲ್ಲ. ನಿಮ್ಮನ್ನು ಪಕ್ಷ ಉಚ್ಚಾಟನೆ ಮಾಡಿದಾಗ ಪಕ್ಷಕ್ಕೆ ಕರೆ ತಂದಿದ್ದು ಯಡಿಯೂರಪ್ಪ. ಅವರು ಸಂಪೂರ್ಣ ಅವಧಿ ಪೂರೈಸುತ್ತಾರೆ. ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ ಎಂದರು.

    ಕಾಂಗ್ರೆಸ್ ಏಜೆಂಟ್ ಆಗಿ ಯತ್ನಾಳ್ ವರ್ತನೆ ಮಾಡುತ್ತಾರೆ. ಇವರ ಹೇಳಿಕೆಯಿಂದ ಉಪ ಚುನಾವಣೆಗೆ ಪರಿಣಾಮ ಬೀರುತ್ತದೆ. ಸೋಮವಾರ ವಿಧಾನಸಭೆಯ ಪಡಸಾಲೆಯಲ್ಲಿ ಶಾಸಕರು ಸಭೆ ಸೇರಿ ನಿನಗೆ ಸರಿಯಾದ ಉತ್ತರ ಕೊಡ್ತಿವಿ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಗರಂ ಆದರು.