Tag: ಬಸನಗೌಡ ಯತ್ನಾಳ್

  • ವಕ್ಫ್ ವಿವಾದ; ಬಿಜೆಪಿ ರೆಬಲ್ಸ್ ಟೀಂನಿಂದ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ

    ವಕ್ಫ್ ವಿವಾದ; ಬಿಜೆಪಿ ರೆಬಲ್ಸ್ ಟೀಂನಿಂದ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ

    ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ದೊಡ್ಡದಾಗುತ್ತಿರೋ ಬೆನ್ನಲ್ಲೇ ಬಿಜೆಪಿಯ (BJP) ರೆಬಲ್ಸ್ ಟೀಂ ವಕ್ಫ್ ವಿಚಾರವಾಗಿ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ಮಾಡೋದಾಗಿ ಘೋಷಣೆ ಮಾಡಿದೆ.

    ಬಿಜೆಪಿಯ ರೆಬೆಲ್ಸ್ ನಾಯಕರುಗಳಾದ ಯತ್ನಾಳ್, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೋಳಿ (Ramesh Jarakiholi) ಇಂದು ಸುದ್ದಿಗೋಷ್ಠಿ ನಡೆಸಿ ವಕ್ಫ್ ವಿರುದ್ಧ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಪ್ರಾರಂಭ ಮಾಡೋದಾಗಿ ಘೋಷಣೆ ಮಾಡಿದ್ರು. ನ.25 ರಿಂದ ಡಿ.25ವರೆಗೆ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

    ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ರಾಜ್ಯಾದ್ಯಂತ ಅಭಿಯಾನ ಶುರು ಮಾಡ್ತಿದ್ದೇವೆ. ಇದಕ್ಕಾಗಿ ಒಂದು ವಾರ್ ರೂಂ ಪ್ರಾರಂಭ ಮಾಡ್ತಿದ್ದು, ಯಾರಿಗೆ ಅನ್ಯಾಯ ಆಗಿದೆಯೋ ಅವರು ವಾರ್ ರೂಂಗೆ ದಾಖಲಾತಿ ನೀಡಬಹುದು. ನ.25 ರಿಂದ ಬಸನಗೌಡ ಯತ್ನಾಳ್ ನೇತೃತ್ವದಲ್ಲಿ ಅಭಿಯಾನ ಶುರುವಾಗಲಿದೆ. ಬೀದರ್‌ನಿಂದ (Bidar) ಅಭಿಯಾನ ಪ್ರಾರಂಭ ಆಗಲಿದ್ದು, ಬಳಿಕ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ನಿತ್ಯವೂ ಅಭಿಯಾನ ಮಾಡೋದಾಗಿ ತಿಳಿಸಿದರು. ನಮ್ಮದು ಮೂರು ಬೇಡಿಕೆ ಇದೆ ಅವುಗಳೆಂದರೆ, 1954ರಿಂದ ಆಗಿರೋ ವಕ್ಫ್ನ ಎಲ್ಲಾ ಗೆಜೆಟ್‌ಗಳನ್ನ ರದ್ದು ಮಾಡಬೇಕು. ರೈತರು, ಮಠಗಳು, ಮಂದಿರ, ದಲಿತರು ಸೇರಿ ಜಾಗ ಅಂತ ವಕ್ಫ್ ಮಾಡ್ತಿದೆ ಅದನ್ನ ಕಾಯಂ ಆಗಿ ಜಮೀನು ವಾಪಸ್ ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Waqf Land Row | ವಿವಾದಿತ ಜಮೀನಿನಲ್ಲಿ ಉಳುಮೆ – ರೈತರ ಮೇಲೆ ಕೇಸ್ ದಾಖಲು, ಟ್ರ್ಯಾಕ್ಟರ್ ಜಪ್ತಿ

    ಬಸನಗೌಡ ಯತ್ನಾಳ್ ಮಾತನಾಡಿ, ವಕ್ಫ್ ಬೋರ್ಡ್ನಿಂದ ದೊಡ್ಡ ಅನ್ಯಾಯ ಆಗಿದೆ. ರೈತರು, ಮಠಗಳು ಸೇರಿ ಎಲ್ಲರಿಗೂ ಇದರಿಂದ ಸಮಸ್ಯೆ ಆಗಿದೆ. ವಕ್ಫ್ ನ್ಯಾಯಮಂಡಳಿ ರದ್ದಾಗಬೇಕು. ವಕ್ಫ್ ನ್ಯಾಯಮಂಡಳಿ ಒಂದು ಶಾಪ ಆಗಿದೆ. ಹೀಗಾಗಿ ನ್ಯಾಯಾಲಯದ ಮೂಲಕವೇ ಎಲ್ಲವೂ ಇತ್ಯರ್ಥ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

    ಈಗ 2700 ಎಕರೆ ಜಾಗ ಖಬರ್‌ಸ್ತಾನಗೆ ಕೊಡೋಕೆ ಸರ್ಕಾರ, ಕಂದಾಯ ಇಲಾಖೆ ನಿರ್ಣಯ ಮಾಡಿದೆ. ವಕ್ಫ್ಗೆ ಎಷ್ಟು ಜಾಗ ತಗೋಬೋದು ಎಂದು ಅವರು ಪಟ್ಟಿ ಮಾಡಿದ್ದಾರೆ. ಅವರು ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿ ಮಾಡಲು ಮುಂದಾಗಿದ್ದಾರೆ. ನಾವು ಅಭಿಯಾನ ಮಾಡಿ ಮಾಹಿತಿ ಪಡೆದು ಜೆಪಿಸಿಗೆ ನಾವು ವರದಿ ಕೊಡ್ತೀವಿ. ಜನಜಾಗೃತಿಗಾಗಿ ಈ ಅಭಿಯಾನ ಮಾಡ್ತಿದ್ದೇವೆ. ರಾಜ್ಯ, ಕೇಂದ್ರ ಸರ್ಕಾರ ಎರಡಕ್ಕೂ ನಾವು ಈ ಒತ್ತಾಯ ಮಾಡ್ತಿದ್ದೇವೆ ಎಂದರು. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

    ಇದು ಬಿಜೆಪಿ ಪಕ್ಷದಿಂದಲೇ ನಡೆಯುವ ಹೋರಾಟ. ನಮ್ಮ ಅಭಿಯಾನಕ್ಕೆ ವರಿಷ್ಠರ ಅನುಮತಿ ಪ್ರಶ್ನೆ ಬರೋದಿಲ್ಲ. ನಮ್ಮ ಗೃಹ ಸಚಿವರು, ಜೆಪಿಸಿ ಸಮಿತಿ ನಮ್ಮ ಹೋರಾಟಕ್ಕೆ ಕೈಜೋಡಿಸಿದೆ. ಹೀಗಾಗಿ ನಮ್ಮ ಅಭಿಯಾನಕ್ಕೆ ಅವರ ಬೆಂಬಲವೂ ಇದೆ ಅಂತ ಅರ್ಥ. ಯಾರಿಗೆ ರೈತರು, ಮಠ ಮಾನ್ಯಗಳು ಪರ ಕಳಕಳಿ ಇದೆಯೋ ಪಕ್ಷಾತೀತವಾಗಿ ನಮ್ಮ ಜೊತೆ ಬಂದು ಸೇರಬಹುದು. ಪಕ್ಷ ಅಂತ ಏನಿಲ್ಲ. ಯಾರು ಬೇಕಾದ್ರು ಬರಬಹುದು. ರಾಜ್ಯಾಧ್ಯಕ್ಷ ಆಗಲಿ ಯಾರೇ ಆಗಲಿ ಬರಬಹುದು. ಯಾರೋ ಒಬ್ಬ ವ್ಯಕ್ತಿ ಅಂತ ಇಲ್ಲ ಎಂದು ವಿಜಯೇಂದ್ರಗೂ ಪರೋಕ್ಷವಾಗಿ ತಿರುಗೇಟು ಕೊಟ್ಟರು. ಇದನ್ನೂ ಓದಿ: ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

  • ವಕ್ಫ್ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಿ – ಪ್ರಧಾನಿ ಮೋದಿಗೆ ಯತ್ನಾಳ್ ಪತ್ರ

    ವಕ್ಫ್ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಿ – ಪ್ರಧಾನಿ ಮೋದಿಗೆ ಯತ್ನಾಳ್ ಪತ್ರ

    – ದೇಶದಲ್ಲಿ ಮತ್ತೊಂದು ಪಾಕಿಸ್ತಾನ ಆಗಲು ಬಿಡಬಾರದು ಎಂದ ಶಾಸಕ

    ವಿಜಯಪುರ: ವಕ್ಫ್ ಬೋರ್ಡ್‌ನಿಂದ (Waqf Board ಭಾರತೀಯರಿಗೆ ಅನ್ಯಾಯವಾಗುತ್ತಿದ್ದು, ವಕ್ಫ್ ಆಸ್ತಿಯನ್ನ ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸುವಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ (Basangouda Patil Yatnal)  ಪ್ರಧಾನಿ ಮೋದಿಗೆ (Narendra Modi) ಪತ್ರ ಬರೆದಿದ್ದಾರೆ.

    ವಕ್ಫ್ ಬೋರ್ಡ್‌ನಿಂದಾಗಿ ಜಮೀನು ಮಾಲಿಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲಿಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್ಫ್ ಆಕ್ರಮಿಸಿಕೊಳ್ಳುತ್ತದೆ. ವಕ್ಫ್ ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್ಫ್ ಬೋರ್ಡ್‌ಗೆ ಅನಿಯಂತ್ರಿತ, ಪರಿಮಿತ ಅಧಿಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಂದು ಪಾಕಿಸ್ತಾನ ಆಗುವುದಕ್ಕೆ ನಾವು ಬಿಡಬಾರದು. ಅದಕ್ಕಾಗಿ ನಾನು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.

    ಧಾರವಾಡದ ಉಪ್ಪಿನಬೆಟಗೇರಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಎಂಬುವವರು ಕಳೆದ ವರ್ಷ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಇದನ್ನೂ ಓದಿ: ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!

    ಉಪ್ಪಿನಬೆಟಗೇರಿ ಗ್ರಾಮದ ಅನೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರು ಉಲ್ಲೇಖಿಸಲಾಗಿತ್ತು. ಇದಕ್ಕಾಗಿ ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಕೃಷ್ಣಪ್ಪ ಪ್ರಧಾನಿ ಮೋದಿ ಗಮನಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು
    ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಹಾಗೂ ಯಾವ ಮಾನದಂಡದ ಮೇಲೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ ಕೃಷ್ಣಪ್ಪ ಪತ್ರ ಬರೆದಿದ್ದರು. 2023ರ ನ.28ರಂದು ಪ್ರಧಾನಿಗೆ ಪತ್ರ ಕಳುಹಿಸಿದ್ದರು. ಡಿ.2ರಂದು ಪತ್ರ ಪ್ರಧಾನಿ ಕಚೇರಿ ತಲುಪಿದ್ದು, ಡಿ.8ರಂದು ಕೃಷ್ಣಪ್ಪಗೆ ಪಿಎಂ ಕಚೇರಿಯಿಂದ ಕರೆ ಬಂದಿತ್ತು. ಪತ್ರ ಬರೆದು, ದೂರು ಕೊಡುತ್ತಿರುವುದು ನೀವೆನಾ? ಎಂದು ಸಿಬ್ಬಂದಿ ಪ್ರಶ್ನಿಸಿ, ಖಚಿತಪಡಿಸಿಕೊಂಡಿದ್ದರು. ಜೊತೆಗೆ ನಿಮ್ಮ ದೂರು ಪ್ರಧಾನಿಗಳ ಗಮನಕ್ಕೆ ತರುವುದಾಗಿ ಸಿಬ್ಬಂದಿ ತಿಳಿಸಿದ್ದರು.  ಇದನ್ನೂ ಓದಿ: Canada | ಗಾಯಕ ಎಪಿ ಧಿಲ್ಲೋನ್ ಮನೆ ಎದುರು ಗುಂಡು ಹಾರಿಸಿದ್ದ ವಿಡಿಯೋ ವೈರಲ್
  • ಕಾಂಗ್ರೆಸ್‌ ಮಂತ್ರಿಗಳ ಜೊತೆ ನಮ್ಮ ಅಡ್ಜಸ್ಟ್‌ಮೆಂಟ್‌ ರಾಜಕೀಯ ಇಲ್ಲ: ಯತ್ನಾಳ್‌

    ಕಾಂಗ್ರೆಸ್‌ ಮಂತ್ರಿಗಳ ಜೊತೆ ನಮ್ಮ ಅಡ್ಜಸ್ಟ್‌ಮೆಂಟ್‌ ರಾಜಕೀಯ ಇಲ್ಲ: ಯತ್ನಾಳ್‌

    ಬೆಂಗಳೂರು: ವಿಧಾನ ಸಭೆಯಲ್ಲಿ ಕಾಂಗ್ರೆಸ್‌ ಸರ್ಕಾರದ (Congress Government) ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ವಿಜಯಪುರದ (Vijayapura) ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಕಾಂಗ್ರೆಸ್ ಸರ್ಕಾರದ ಯಾವ ರಾಜಕಾರಣಿ ಅಥವಾ ಮಂತ್ರಿಗಳ ಜೊತೆಯೂ ನಮ್ಮ ಅಡ್ಜಸ್ಟ್‌ಮೆಂಟ್‌ ರಾಜಕೀಯ ಇಲ್ಲ ಎಂದು ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ನಾವು ಎಲ್ಲಾ ಬಿಜೆಪಿ ಶಾಸಕರು ಸದನದಲ್ಲಿ ಸಮರ್ಥವಾಗಿ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹಾಗೂ ಸರ್ಕಾರದ ವೈಫಲ್ಯದ ಕುರಿತು ನಮ್ಮ ಎಲ್ಲಾ ಶಾಸಕ ಮಿತ್ರರು ಸಮರ್ಥವಾಗಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

    ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಹಾಗೂ ಆಯವ್ಯಯದ ಕುರಿತು ಚರ್ಚೆಗಳು ಬಾಕಿ ಇದೆ ಎಂದು ಯತ್ನಾಳ್‌ ಅಚ್ಚರಿಯ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್

    ಮಂಗಳವಾರ ವಿಜಯಪುರ ಪಾಲಿಕೆಗೆ ಹೊಸ ಆಯುಕ್ತರ ವರ್ಗಾವಣೆ ವಿಚಾರ ಪ್ರಸ್ತಾಪಿಸಿ ಯತ್ನಾಳ್ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದರು. ವಿಜಯಪುರ ಪಾಲಿಕೆಗೆ ಅರ್ಹತೆಯಿಲ್ಲದ, ಐಎಎಸ್, ಕೆಎಎಸ್ ಕೇಡರ್ ಅಲ್ಲದ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಆ ಅಧಿಕಾರಿ ಸೌಜನ್ಯಕ್ಕೂ ನನ್ನ ಬಂದು ಮಾತಾಡಿಸಿಲ್ಲ. ಈ ವರ್ಗಾವಣೆ ಮೂಲಕ ಸಚಿವರು ವ್ಯಾಪಾರ ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸಚಿವ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಸಹ ಸಹ ಸಿಟ್ಟಿಗೆದ್ದು ಯತ್ನಾಳ್ ಹೇಳಿಕೆ ಖಂಡಿಸಿದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ: ಯತ್ನಾಳ್‍ ವಿರುದ್ಧ ನಿರಾಣಿ ಏಕವಚನದಲ್ಲೇ ಗುಡುಗು

    ಬಿಜೆಪಿ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ: ಯತ್ನಾಳ್‍ ವಿರುದ್ಧ ನಿರಾಣಿ ಏಕವಚನದಲ್ಲೇ ಗುಡುಗು

    ಬೆಂಗಳೂರು: ಪಕ್ಷದ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ? ರಾಜೀನಾಮೆ ಕೊಟ್ಟು ಹೋಗು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagouda Patil Yatnal) ಸಚಿವ ಮುರುಗೇಶ್ ನಿರಾಣಿ (Murugesh Nirani) ಏಕವಚನದಲ್ಲೇ ಕಿಡಿಕಾರಿದರು.

    ರಾಜ್ಯದಲ್ಲಿ ಮೀಸಲಾತಿ ಕದನ ತಾರಕಕ್ಕೇರಿದೆ. ಅದರಲ್ಲೂ ಬಿಜೆಪಿಯಲ್ಲಿ (BJP) ಯತ್ನಾಳ್ ಹಾಗೂ ನಿರಾಣಿ ಪರಸ್ಪರ ವಾಗ್ವಾದ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಪಿಂಪ್ ಅಂತ ಆರೋಪ ಮಾಡಿದ್ದ ಯತ್ನಾಳ್‍ಗೆ ನಿರಾಣಿ ಏಕವಚನದಲ್ಲಿ ನಿಂದಿಸಿದ್ದಾರೆ. ತಾಕತ್ತ್ ಇದ್ರೆ ಕೊರ್ಟ್‍ನಲ್ಲಿರೋ ಸ್ಟೇ ತೆರವು ಮಾಡಲು ಸವಾಲು ಹಾಕಿದ್ದಾರೆ. ಪಕ್ಷದ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ಯಾಕೆ ಇರ್ತೀಯಾ? ರಾಜೀನಾಮೆ ಕೊಟ್ಟು ಹೋಗು ಎಂದು ಕಿಡಿಕಾರಿದರು.

    ಬಿಜೆಪಿ ಪಕ್ಷ ನಮಗೆ ಸಂಸ್ಕೃತಿ ಕಲಿಸಿದೆ. ಅವರಪ್ಪಗೆ ಅವರು ಹುಟ್ಟಿದ್ರೆ ಈ ಮಾತು ಆಡ್ತಿರ್ಲಿಲ್ಲ. ಸುಸಂಸ್ಕೃತ ಆಗಿದ್ದಿದ್ರೆ ಅವರು ಹೀಗೆ ಮಾತಾಡ್ತಿರ್ಲಿಲ್ಲ. ಅವರು ಸುಸಂಸ್ಕೃತರಾಗಿ ಮಾತಾಡ್ತಿಲ್ಲ ಅಂದ್ರೆ ಅವರು ಪಿಂಪ್‍ಗೆ ಹುಟ್ಟಿರಬೇಕು ಅಥವಾ ಬೇರೆ ಯಾರಿಗೋ ಹುಟ್ಟಿರಬೇಕು. ನಿಮ್ಮಪ್ಪನಿಗೆ ನೀವು ಹುಟ್ಟಿದ್ರೆ ನೀವು ಕೋರ್ಟ್‍ನಲ್ಲಿ ತಂದಿರುವ ಸ್ಟೇ ತೆರವು ಮಾಡಿ. ನಿಮ್ಮ ಜತೆ ಕುಮಾರ್ ಅಂತ ಒಬ್ಬ ಡ್ರೈವರ್ ಇದ್ದ, ಆತನ ಕೊಲೆ ಆಗಿದೆ. ಆತನ ಕೊಲೆ ಯಾಕಾಯ್ತು, ಯಾರು ಮಾಡಿದ್ದು ಅಂತ ಹೇಳಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಸಿಡಿ ಭಯ- ರವಿ ಹತ್ರ ಸಿಡಿ ಇವೆಯಾ..!?

    ನಿಮ್ಮದು ಡ್ರಾಮಾ ಕಂಪೆನಿ. ಜೆಡಿಎಸ್‍ಗೆ ಹೋದಾಗ ಟಿಪ್ಪು ಟೋಪಿ ಹಾಕ್ತೀರ. ಇಲ್ಲಿದ್ರೆ ಟಿಪ್ಪು ವಿರೋಧಿಸ್ತೀರಾ?, ಇಷ್ಟು ದಿನ ನಾನು, ನನ್ನ ಪಕ್ಷ ಸಹನೆಯಿಂದ ಇದ್ದೇವೆ. ನಮ್ಮ ಪಕ್ಷದ ಬಗ್ಗೆ ಗೌರವ ಇಲ್ಲ ಅಂದ್ರೆ ಈ ಪಕ್ಷದಲ್ಲಿ ನೀನು ಯಾಕೆ ಇರ್ತೀಯಾ?, ರಾಜೀನಾಮೆ ಕೊಟ್ಟು ಹೊರಗಿಂದ ಹೋರಡು, ರಾಜಕೀಯ ದೊಂಬರಾಟ ನಿಲ್ಲಿಸು ಎಂದು ಗುಡುಗಿದರು.

    ಮುಂದಿನ ದಿನಗಳಲ್ಲಿ ಪಕ್ಷದಿಂದ ಯತ್ನಾಳ್ ವಿರುದ್ಧ ಕಠಿಣ ಕ್ರಮ ತಗೋತಾರೆ. ಯತ್ನಾಳ್ ನೀಚ. ಎಲ್ಲರ ಬಗ್ಗೆಯೂ ಯತ್ನಾಳ್ ಮಾತಾಡ್ತಾನೆ ಎಂದು ಏಕವಚನದಲ್ಲಿ ನಿಂದಿಸಿದರು. ಇದನ್ನೂ ಓದಿ: ವೈಯಕ್ತಿಕ ನಿಂದನೆ ಮಾಡೋದು ರಾಜ್ಯದ ಸಂಸ್ಕೃತಿ ಅಲ್ಲ – ಯತ್ನಾಳ್ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ: ಸಿಎಂ ವಾರ್ನಿಂಗ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ, ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಬಸನಗೌಡ ಯತ್ನಾಳ್

    ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ, ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಬಸನಗೌಡ ಯತ್ನಾಳ್

    ಹಾವೇರಿ: ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ. ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನೇ ಮುಖ್ಯಮಂತ್ರಿಯಾಗಿರುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಜೀವನದಲ್ಲಿ ಮಂತ್ರಿಯಾಗುವ ಸಲುವಾಗಿ ಬ್ಲಾಕ್ ಮೇಲ್ ಮಾಡಿಲ್ಲ. ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ, ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನೇ ಮುಖ್ಯಮಂತ್ರಿ ಆಗಿರುತ್ತಿದ್ದೆ. ಸೋಮವಾರ ಬೊಮ್ಮಾಯಿಯವರು ನಮ್ಮ ಸಮಾಜದ ಸಚಿವ ಸಿ.ಸಿ.ಪಾಟೀಲರನ್ನು ಕರೆದು ಮತ್ತೊಂದು ಅವಕಾಶ ಕೇಳಿದ್ದಾರೆ ಎಂದು ತಿಳಿದ್ದಾರೆ. ಇದನ್ನೂ ಓದಿ: 10 ಭಾಷೆಗಳಲ್ಲಿ ‘ಟಾಪಿಕ್ಸ್’ ವೈಶಿಷ್ಟ್ಯವನ್ನು ಪರಿಚಯಿಸಿದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆ ಕೂ

    ಧ್ವನಿಯಿಲ್ಲದ ಸಮಾಜಗಳಿಗೆ ನಮ್ಮ ಸ್ವಾಮೀಜಿ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಹೋರಾಟ ಕುರಿತು ಇಂದು ನಿರ್ಣಯ ಮಾಡುತ್ತೇವೆ. ಮುಂದಿನ ಎರಡು ತಿಂಗಳಲ್ಲಿ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ನಿರ್ಣಯ ಮಾಡುತ್ತೇವೆ. ಯಾ ಮಗಗ ಬೇಕೈತ್ರಿ ಮಂತ್ರಿಗಿರಿ. ಆರು ತಿಂಗಳಲ್ಲಿ ಏನು ಕಿಸಿದು ಐತ್ರಿ. ನಮ್ಮ ಬಗ್ಗೆ, ಗುರುಗಳ ಬಗ್ಗೆ ಯಾರೂ ಸಂಶಯ ಪಡಬ್ಯಾಡ್ರಿ. ಹಿಂದೊಬ್ಬ ಮುಖ್ಯಮಂತ್ರಿ ನಮಗೆ ಮೋಸ ಮಾಡಿದ ಅಂತಾ ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾರ್ಯಾರು ಮಂತ್ರಿ ಆಗಬೇಕು, ಮಜಾ ಮಾಡಬೇಕು ಅಂತೀರಾ ಇಪ್ಪತ್ತೈದು ಲಕ್ಷ ಜನರು ಸೇರಿದಾಗ ಬನ್ನಿ. ಸಮಾಜಕ್ಕೆ ಮೀಸಲಾತಿ ಕೊಡಿಸಲು ಆಗದಿದ್ದರೆ ನೀವು ಶಾಶ್ವತವಾಗಿ ಮಾಜಿ ಮಂತ್ರಿಗಳು, ಶಾಸಕರಾಗುತ್ತೀರಾ. ಇತ್ತೀಚೆಗೆ ಸಿದ್ದರಾಮಯ್ಯನವರು ಶಕ್ತಿ ಪ್ರದರ್ಶನ ಮಾಡಿದ ಮೇಲೆ ಜಾದೂನೆ ಆಗಿದೆ. ನಾವೂ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ಜಾದೂ ಮಾಡೋಣ. ಒಂದು ಕೋಟಿ ಇರುವ ದೊಡ್ಡ ಸಮುದಾಯ ನಮ್ಮದು. ನಾನು ಮೊನ್ನೆ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಲ್ಕಿಸ್‌ ಬಾನು ಕೇಸ್‌ – ಅಪರಾಧಿಗಳ ಬಿಡುಗಡೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

    ನಮ್ಮ ಗುರುಗಳು ಬಿ.ಎಲ್.ಸಂತೋಷರನ್ನು ಭೇಟಿಯಾಗಿದ್ದಾರೆ. ಕೇಂದ್ರದವರು ಕೊಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ಬೊಮ್ಮಾಯಿ ಸಾಹೇಬರು ಯಾಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ತಿರುಪತಿಯಲ್ಲಿ ಏನಾಗಿದೆಯೋ, ಶಿಮ್ಲಾ ಒಪ್ಪಂದ ಏನಾಗಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಹೇಳುವೆ. ಪರೋಕ್ಷವಾ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅದು ಕೆಪಿಸಿಸಿ ಅಲ್ಲ, ಕೆಪಿಟಿಸಿ ಕರ್ನಾಟಕ ಪ್ರದೇಶ ಟೂಲ್ ಕಿಟ್ ಕಮಿಟಿ: ಕಾಂಗ್ರೆಸ್ ವಿರುದ್ಧ ಸಿಟಿ ರವಿ ಕಿಡಿ

    ಅದು ಕೆಪಿಸಿಸಿ ಅಲ್ಲ, ಕೆಪಿಟಿಸಿ ಕರ್ನಾಟಕ ಪ್ರದೇಶ ಟೂಲ್ ಕಿಟ್ ಕಮಿಟಿ: ಕಾಂಗ್ರೆಸ್ ವಿರುದ್ಧ ಸಿಟಿ ರವಿ ಕಿಡಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಟೂಲ್ ಕಿಟ್ ನಡೆಯುತ್ತಿದೆ. ಅದು ಕೆಪಿಸಿಸಿ ಅಲ್ಲ. ಕೆಪಿಟಿಸಿ ಆಗಿ ಮಾರ್ಪಾಡಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಬದಲಾಗಿ ಕರ್ನಾಟಕ ಪ್ರದೇಶ ಟೂಲ್ ಕಿಟ್ ಕಮಿಟಿ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಅಧ್ಯಕ್ಷರಾದ ಮೇಲೆ, ಕೆಪಿಸಿಸಿ ಹೋಗಿ ಕೆಪಿಟಿಸಿ ಆಗಿದೆ. ಕರ್ನಾಟಕ ಪ್ರದೇಶ್ ಟೂಲ್ ಕಿಟ್ ಕಮಿಟಿ ಆಗಿದೆ. ಈಗ ಗೊತ್ತಾಗುತ್ತಿದೆ. 2014ರಿಂದ ಮಾಡ್ತಿದ್ದಾರೆ. ಆಗ ಬಿಜೆಪಿ ಸರ್ಕಾರ ಇರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಹಾಗಾಗಿ ಪಿಎಸ್‍ಐ ಹಗರಣದ ವಿಚಾರಣೆ ಮಾಡಲು ಸಿಐಡಿ ತನಿಖೆಗೆ ನೀಡಲಾಗಿದೆ. ಕಾಂಗ್ರೆಸ್‍ನವರಿಗೆ ಸಿಐಡಿ ತನಿಖೆ ನಂಬಿಕೆ ಇಲ್ಲದಿದ್ರೆ, ಹೈಕೋರ್ಟಿಗೆ ಹೋಗಿ ನಮ್ಮ ಬಳಿ ಈ ರೀತಿಯ ಸಾಕ್ಷಿ ಇದೆ ಅಂತ ದಾಖಲೆ ಕೊಡಲಿ ಹೈಕೋರ್ಟ್ ಮೂಲಕವೇ ತನಿಖೆ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು

    Siddaramaiah

    ಕಾಗಕ್ಕ, ಗೂಬಕ್ಕ ಕಥೆ ಹೇಳೋದು ಬೇಡ. ಯಾರ ಬಳಿ ಸಾಕ್ಷಿ ಇದೆ ಕೊಡಲಿ. ಸುಮ್ಮನೆ ಮಾತನಾಡೋದು ಬೇಡ. ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲದಿದ್ರೆ, ದಾಖಲೆ ಹೈಕೋರ್ಟ್‍ಗೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ. ಸಿದ್ದರಾಮಯ್ಯ ಅವರೇ ಕಿಂಗ್ ಪಿನ್ ಅಂತ ನಾನು ಹೇಳಲಾ? ನಾನು ಆ ರೀತಿ ಹೇಳಲ್ಲ, ತನಿಖೆ ನಡೆಯುತ್ತಿದೆ. ವಿಚಾರಣೆಗೆ ಹೋಗೋದು ಅಪಮಾನದ ಸಂಗತೀನಾ ಎಂದು ಪ್ರಶ್ನಸಿದರು. ಇದನ್ನೂ ಓದಿ: ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ

    ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನಾ ಅಧಿಕಾರ. ಪಕ್ಷದ ಜೊತೆ ಸಮಾಲೋಚನೆ ಮಾಡಿ ಅಭಿಪ್ರಾಯ ಪಡೆದು ಸ್ವಯಂ ನಿರ್ಣಯ ಮಾಡಬೇಕು. ಒಂದೇ ವಿಚಾರ ಹೇಳೋದಾದ್ರೆ ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಸ್ವತಂತ್ರವಾಗಿ ನಿರ್ಣಯ ಮಾಡಬೇಕು. ಇನ್ನು ಎಂಟು, ಒಂಭತ್ತು ತಿಂಗಳು ಸಿಗಲಿದೆ. ಕೆಲಸ ಮಾಡಬೇಕು ಅಷ್ಟೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಊಹಾ ಪೂಹಕ್ಕೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಮೊನ್ನೆ ಇಲ್ಲೇ ಶಾ ಬಂದಾಗ ರಾಜಕಾರಣ ಜೊತೆ ರಾಜ್ಯದ ಅಭಿವೃದ್ಧಿ, ದೇಶದ ಹಿತದೃಷ್ಟಿಯಿಂದ ಸಮಾಲೋಚನೆ ಮಾಡೋದು ಸ್ವಾಭಾವಿಕ ಎಂದರು.

    ನಮ್ಮ ಪಕ್ಷ ಹತ್ತಾರು ಆಲೋಚನೆ ಮಾಡಿ ನಿರ್ಣಯ ತಗೋತಾರೆ. ಯತ್ನಾಳ್ ಅವರು ಚರ್ಚೆ ಮಾಡಿದ್ದಾರೆ, ಸಿಎಂ ಆಯ್ಕೆ ವೇಳೆ ಅನೇಕರು ಇದ್ದರು, ಎಲ್ಲಾ ಶಾಸಕರು ಉಪಸ್ಥಿತಿ ಇದ್ದರು ಯಾರನ್ನೂ ಮರೆಮಾಚಿ ಸಿಎಂ ಆಯ್ಕೆ ಮಾಡಿಲ್ಲ. ಕೆಲವರು ಸಂತೆ ಮಾತನಾಡ್ತಾರೆ. ಬೇರೆ ಪಕ್ಷದವರ ದಾರಿ ತಪ್ಪಿಸಲು ಈ ರೀತಿ ಹೇಳಿರಬಹುದು. ಯತ್ನಾಳ್ ಹೇಳಿರೋದು ತಪ್ಪು ಈ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಬೇಕು. ವಿಪಕ್ಷಗಳಿಗೆ ಈ ಹೇಳಿಕೆಗಳು ಆಹಾರವಾಗಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಅಂದು ಕಿತ್ತಾಡಿಕೊಂಡಿದ್ದ ಸಾರಾ ಮಹೇಶ್, ಎಚ್. ವಿಶ್ವನಾಥ್ ಇಂದು ದೋಸ್ತಿಗಳು

    ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಆಗ್ತಿದೆ. ಇಂದು ಮಂಡ್ಯ ಮತ್ತು ಕೋಲಾರ ಜಿಲ್ಲೆಯಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಂಡ್ಯ ಗೆಲ್ಲದೆ ನಮ್ಮ ಗೆಲುವು ಪರಿಪೂರ್ಣ ಆಗದು. ಬಹಳ ಜನ ಬರ್ತಾರೆ ಕಾದು ನೋಡಿ. ನಮ್ಮ ಮಿಷನ್ 150ಗೆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಂಡ್ಯವನ್ನ ಬಿಜೆಪಿ ಭದ್ರಕೋಟೆ ಮಾಡಿಕೊಳ್ಳಲಿದ್ದೇವೆ ಎಂದರು.

  • 2,500 ಕೋಟಿ ರೂ. ತನಿಖೆಗೆ ಭಾಸ್ಕರ್ ರಾವ್ ಆಗ್ರಹ

    2,500 ಕೋಟಿ ರೂ. ತನಿಖೆಗೆ ಭಾಸ್ಕರ್ ರಾವ್ ಆಗ್ರಹ

    ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಯವರು ಹಣ ಪಡೆದು ಮಾರಾಟ ಮಾಡುತ್ತಾರೆಂದು ಅವರ ಪಕ್ಷದ ಶಾಸಕರೇ ಬಹಿರಂಗ ಪಡಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಿಎಸ್‍ಐ ಹಾಗೂ ಇತರೆ ಸರ್ಕಾರಿ ಹುದ್ದೆಗಳನ್ನು ಹಣ ಪಡೆದು ಬಿಕರಿ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಈಗ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್‍ರವರು ಸಿಎಂ ಹುದ್ದೆಯನ್ನೂ ಹಣಕ್ಕೆ ಮಾರಾಟ ಮಾಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 2,500 ಕೋಟಿ ರೂಪಾಯಿ ಕೊಟ್ಟರೆ ಸಿಎಂ ಸ್ಥಾನ ಸಿಗುತ್ತದೆ ಎಂದಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ಬಿಜೆಪಿಯಿಂದ ಸಿಎಂ ಆದವರು ಹೇಗೆ ಹೊಂದಿಸಿದ್ದಾರೆ ಹಾಗೂ ಹಣ ಪಡೆದ ಹೈಕಮಾಂಡ್ ಅದರಿಂದ ಏನು ಮಾಡಿದೆ ಎಂಬುದು ಬಯಲಾಗಬೇಕು ಎಂದು ಹೇಳಿದರು. ಇದನ್ನೂ ಓದಿ:  ಮಾಡೆಲಿಂಗ್‍ನ್ನು ವೃತ್ತಿ ಮಾಡಿಕೊಂಡಿದ್ದಕ್ಕೆ ಸಹೋದರಿಯನ್ನೇ ಹತ್ಯೆಗೈದ ಸಹೋದರ

    ಪ್ರಜಾಪ್ರಭುತ್ವಕ್ಕೆ ಬಿಜೆಪಿಯು ಅತ್ಯಂತ ಮಾರಕವಾಗಿ ಪರಿಣಮಿಸಿದೆ. ಮುಖ್ಯಮಂತ್ರಿಯಂತಹ ಹುದ್ದೆಯನ್ನು ಹೆಚ್ಚು ಹಣ ಕೊಟ್ಟವರಿಗೆ ನೀಡುವ ಪ್ರವೃತ್ತಿ ಒಳ್ಳೆಯದಲ್ಲ. ಪದೇ, ಪದೇ ಕರ್ನಾಟಕಕ್ಕೆ ಬರುವ ಅಮಿತ್ ಶಾರವರು ಯತ್ನಾಳ್ ಬಹಿರಂಗ ಪಡಿಸಿರುವ ವಿಷಯದ ಕುರಿತು ಪ್ರತಿಕ್ರಿಯಿಸಬೇಕು. ಇದರಲ್ಲಿ ಅವರಿಗೆ ಎಷ್ಟು ಪರ್ಸೆಂಟ್ ತಲುಪಿದೆ ಎನ್ನುವುದು ಬಯಲಾಗಬೇಕು ಎಂದರು. ಇದನ್ನೂ ಓದಿ:  ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ

  • ಮೋಜು, ಮಸ್ತಿಗಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಯತ್ನಾಳ್

    ಮೋಜು, ಮಸ್ತಿಗಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಯತ್ನಾಳ್

    ವಿಜಯಪುರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಚುನಾವಣಾ ಸ್ಟಂಟ್ ಆಗಿದೆ. ಕಾಂಗ್ರೆಸ್ಸಿಗರ ಆರೋಗ್ಯಕ್ಕಾಗಿ ಹಾಗೂ ಅವರ ಮೋಜು, ಮಸ್ತಿಗಾಗಿ ಪಾದಯಾತ್ರೆಯಾಗಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಪಾದಯಾತ್ರೆಯಲ್ಲಿ ಅಸಹ್ಯಕರ ವರ್ತನೆ ಮಾಡುತ್ತಿದ್ದಾರೆ. ಕುಣಿದು ಕುಪ್ಪಳಿಸಿ ಪಾದಯಾತ್ರೆ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಪಾದಯಾತ್ರೆಯಲ್ಲಿ ಗಂಭೀರತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಪಾದಯಾತ್ರೆಯಲ್ಲಿ ನಡೆಯುವುದರಿಂದ ಕಾಂಗ್ರೆಸ್ ನಾಯಕರ ತೂಕ ಕಡಿಮೆಯಾಗಬಹುದಷ್ಟೇ. ತೂಕ ಕಡಿಮೆ ಮಾಡಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ, ಎಂ ಬಿ ಪಾಟೀಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ಪಾದಯಾತ್ರೆಯಾಗಿದೆ. ರಾಜ್ಯದ ಆರೋಗ್ಯಕ್ಕಾಗಿ ಅಲ್ಲ ಎಂದು ವ್ಯಂಗ್ಯವಾಡಿದರು.

    ದೇಶ, ರಾಜ್ಯದ ಆರೋಗ್ಯಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿಯೇ ಇಲ್ಲ. ಶರೀರದ ಆರೋಗ್ಯ ಕಾಪಾಡಲು ಪಾದಯಾತ್ರೆ ಮಾಡುತ್ತಿದೆ. ಮುಂದಿನ ಚುನಾವಣೆಯ ತಯಾರಿಗೆ ಮೇಕೆದಾಟು ಪಾದಯಾತ್ರೆಯಾಗಿದೆ. ಚುನಾವಣೆ ಘೋಷಣೆಯಾದರೆ ದಿಢೀರ್ ಎಂದು ಇವರಿಗೆ ನಡೆಯೋಕು ಆಗಲ್ಲ. ಹೀಗಾಗಿ ಪಾದಯಾತ್ರೆ ಮೂಲಕ ತಯಾರಿಯಾಗಿದೆ. ಪಾದಯಾತ್ರೆ ಚುನಾವಣೆಯ ಪ್ರಾಕ್ಟಿಸ್ ಎಂದರು.

    ಇದೇ ಸಂದರ್ಭದಲ್ಲಿ ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಅವರು, ನಿನ್ನೆ ಪ್ರಧಾನಿಗಳು ಕ್ಯಾಬಿನೆಟ್ ಸಭೆ ಮಾಡಿ ನಾಲ್ಕು ಕೇಂದ್ರ ಮಂತ್ರಿಗಳನ್ನು ಅಲ್ಲಿ ಡೆಪ್ಯೂಟ್ ಮಾಡಿದ್ದಾರೆ. ಸಂತೋಷದ ವಿಷಯ ಅಂದರೆ ಭಾರತೀಯರು, ಇಂಡಿಯನ್ಸ್ ಎಂದರೆ ಯಾವುದೇ ತೊಂದರೆ ಆಗುತ್ತಿಲ್ಲ. ಭಾರತೀಯರು ಎಂದರೆ ನಮ್ಮ ಮಕ್ಕಳಿಗೆ ಎಲ್ಲಾ ದೇಶಗಳು ಗೌರವ ಕೊಡುತ್ತವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಪವಾಡ ಎಂದು ಹೇಳಿದರು. ಇದನ್ನೂ ಓದಿ: ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

    ಪಾಕಿಸ್ತಾನ ಹೆಸರು ಹೇಳಿದರೆ ಅವರನ್ನು ಹೊರಗೆ ಬಿಡುತ್ತಿಲ್ಲ. ಪಾಕಿಸ್ತಾನದವರು ಭಾರತದ ಹೆಸರು ಹೇಳಿ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಇಲ್ಲಿಯ ಅನ್ನ ತಿಂದು ಪಾಕಿಸ್ತಾನದ ಪರ ಮಾತನಾರುವವರಿಗೆ ಇದು ಒಳ್ಳೆ ಬುದ್ಧಿವಾದವಾಗಿದೆ. ಪಾಕ್ ಪರ ಮಾತನಾಡೋರು ಇನ್ನಾದರೂ ಬುದ್ಧಿ ಕಲಿಯಲಿ ಎಂದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

  • ಕೋರ್ಟ್ ತೀರ್ಪು ಬರೋವರೆಗೂ ಕಾಲೇಜುಗಳಿಗೆ ರಜೆ ಕೊಡಿ: ಯತ್ನಾಳ್

    ಕೋರ್ಟ್ ತೀರ್ಪು ಬರೋವರೆಗೂ ಕಾಲೇಜುಗಳಿಗೆ ರಜೆ ಕೊಡಿ: ಯತ್ನಾಳ್

    ವಿಜಯಪುರ: ಕೋರ್ಟ್ ತೀರ್ಪು ಬರೋವರೆಗೂ ಕಾಲೇಜುಗಳಿಗೆ ರಜೆ ಕೊಡಿ ಎಂದು ಶಾಸಕ ಬಸನಗೌಡ ಯತ್ನಾಳ್ ಆಗ್ರಹಿಸಿದರು.

    ಹೋರಾಟದಿಂದ ಸಂಘರ್ಷಕ್ಕೆ ತಿರುಗಿದ ಹಿಜಬ್ ಮತ್ತು ಕೇಸರಿ ಶಾಲು ವಿಚಾರ ಕಾಲೇಜುಗಳಲ್ಲಿ ಕಲ್ಲು ತೂರಾಟ ನಡೆದಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಒಂದು ವಾರಗಳ ಕಾಲ ಕಾಲೇಜುಗಳಿಗೆ ರಜೆ ನೀಡಿ. ಕೋರ್ಟ್ ತೀರ್ಪು ಬರೋವರೆಗೂ ಕಾಲೇಜುಗಳಿಗೆ ರಜೆ ಕೊಡಿ. ಒಂದು ವಾರಗಳ ಕಾಲ ರಜೆ ಘೋಷಣೆ ಮಾಡೋದು ಒಳ್ಳೆಯದು. ಉದ್ದೇಶಪೂರ್ವಕವಾಗಿ ಗಲಾಟೆ ನಡೆಸುತ್ತಾರೆ. ಹಿಜಬ್ ಬೆಂಬಲಿಸೋರ ಉದ್ದೇಶವೇ ಗಲಾಟೆಯಾಗಿದೆ. ಅಶಾಂತಿ ಮೂಡಿಸೋದು ಅವರ ಉದ್ದೇಶ. ಕೋರ್ಟ್ ಶೀಘ್ರದಲ್ಲೇ ನ್ಯಾಯ ಕೊಡಲಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: HDK ಕಿಡಿ

    ವಾರ ತಿಂಗಳವರೆಗೆ ಕೋರ್ಟ್ ಜಡ್ಜ್ ಮೆಂಟ್ ಮುಂದುವರೆದರೆ ಸಂಘರ್ಷ ಉಂಟಾಗುತ್ತೆ. ಶೀಘ್ರವಾಗಿ ತೀರ್ಪು ನೀಡಲಿ. ನ್ಯಾಯಾಲಯ ಸೂಕ್ತ ತೀರ್ಪು ನೀಡಲಿದೆ. ನ್ಯಾಯಾಲಯ ನೀಡಿದ ತೀರ್ಪನ್ನ ಎಲ್ಲರೂ ಪಾಲಿಸಲೇಬೇಕು. ತೀರ್ಪು ಪಾಲಿಸದಿದ್ದರೇ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಇದೆಲ್ಲವು ಉದ್ದೇಶ ಪೂರ್ವಕವಾಗಿ ಮಾಡಲಾಗ್ತಿದೆ. ದೇಶದಲ್ಲಿ ಶಾಂತಿ ಹಾಳು ಮಾಡಲು ಹಿಜಬ್ ವಿವಾದ ಸೃಷ್ಟಿಸಲಾಗಿದೆ. ತುಕುಡೆ ತುಕುಡೆ ಗ್ಯಾಂಗ್ ಕಾಂಗ್ರೆಸ್‍ನ ವ್ಯವಸ್ಥಿತ ಹುನ್ನಾರ ಇದಾಗಿದೆ. ದೇಶದಲ್ಲಿ ಅಸ್ಥಿರತೆ ತರಲು ನಡೆದ ಪ್ರಕ್ರಿಯೆ ಇದು. ಕಾಂಗ್ರೆಸ್ ನ ಷಡ್ಯಂತ್ರ ಎಂದು ಕಿಡಿಕಾರಿದರು.

    ಹಿಜಬ್ ಹಾಕಲೇಬೇಕು ಅನ್ನೋದರ ಹಿಂದೆ ಕಾಂಗ್ರೆಸ್‍ನ ಶಕ್ತಿ ಇದೆ. ದೇಶ ವಿರೋಧಿ ಸಂಘಟನೆಗಳ ಬೆಂಬಲ ಇದೆ. ಹೈದ್ರಾಬಾದ್ ತಂಡ ಬಂದು, ಉಡುಪಿಯಲ್ಲಿ ಸಭೆ ನಡೆಸಿ ಹಿಜಬ್‍ಗೆ ಬೆಂಬಲಿಸಿದೆ. ರೈತರ ಹೋರಾಟ, ಸಿಎಎ ಹೋರಾಟದಲ್ಲಿಯು ಇದೆ ರೀತಿ ನಡೆದಿತ್ತು ಎಂದು ವಿವರಿಸಿದರು. ಇದನ್ನೂ ಓದಿ: ರಾಜವಂಶದ ಆಚೆಗೆ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ: ಮೋದಿ ವಾಗ್ದಾಳಿ

    ದೇಶದಲ್ಲಿ ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟಿರೋದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಆಡಳಿತ ನೋಡಲಾಗದೆ ಉದ್ದೇಶಪೂರ್ವಕವಾಗಿ ವಿರೋಧ ಪಕ್ಷಗಳು ಹೀಗೆಲ್ಲ ಮಾಡ್ತೀವೆ. ಮುಸ್ಲಿಂರಿಗೆ ದೇಶ ಭಕ್ತಿ ಇಲ್ಲ. ಅವರಿಗೆ ದೇಶಭಕ್ತಿಯನ್ನ ನಾವು ಕಲಿಸಲಿಲ್ಲ. ವಕ್ಫ ಬೋರ್ಡ್, ಕಾಶ್ಮೀರ 370, ಅಲ್ಪ ಸಂಖ್ಯಾತ ಆಯೋಗ, ಇಲಾಖೆ ಅವರಿಗಾಗಿ ಪ್ರತ್ಯೇಕ ನಿಧಿ ಕೊಟ್ಟು ಹೀಗೆಲ್ಲ ನಡೆಯುತ್ತಿದೆ. ಅವರು ಸಂವಿಧಾನವನ್ನು ಒಪ್ಪುವುದಿಲ್ಲ. ಸಂವಿಧಾನ ಒಪ್ಪದವರಿಗೆ ಈ ದೇಶದಲ್ಲಿ ಇರಲು ನೈತಿಕತೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

  • ಮಂತ್ರಿಗಳು ಇಡೀ ರಾಜ್ಯದಲ್ಲಿ ಯಾವ ಜಿಲ್ಲೆ ಕೊಟ್ರು ಕೆಲಸ ಮಾಡಬೇಕು: ಹಾಲಪ್ಪ ಆಚಾರ್

    ಮಂತ್ರಿಗಳು ಇಡೀ ರಾಜ್ಯದಲ್ಲಿ ಯಾವ ಜಿಲ್ಲೆ ಕೊಟ್ರು ಕೆಲಸ ಮಾಡಬೇಕು: ಹಾಲಪ್ಪ ಆಚಾರ್

    ಕೊಪ್ಪಳ: ಉಸ್ತುವಾರಿ ಬದಲಾವಣೆ ಬಗ್ಗೆ ಅನಾವಶ್ಯಕವಾಗಿ ಚರ್ಚೆ ಮಾಡೋದು ಅರ್ಥ ಇಲ್ಲ. ಮಂತ್ರಿಗಳು ಇಡೀ ರಾಜ್ಯದಲ್ಲಿ ಯಾವ ಜಿಲ್ಲೆ ಕೊಟ್ಟರೂ ಕೆಲಸ ಮಾಡಬೇಕೆಂದು ಗಣಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾ ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಅನಾವಶ್ಯಕ ಚರ್ಚೆ ಮಾಡಬಾರದು. ಸರ್ಕಾರ ಜವಾಬ್ದಾರಿ ಕೊಟ್ಟಿದೆ. ಬೇರೆ ಜಿಲ್ಲೆಗೂ ಹೋಗಿ ಕೆಲಸ ಮಾಡಬೇಕೆಂದರು.

    ಆನಂದ್ ಸಿಂಗ್ ಅಭಿಮಾನಿಗಳು ಅಲ್ಲೇ ಇರಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅದು ಹೊಸದೇನಲ್ಲ. ಆದರೆ ಆನಂದ್ ಸಿಂಗ್ ಕೊಪ್ಪಳಕ್ಕೆ ಬರುತ್ತಾರೆ. ಇಲ್ಲಿ ಕೆಲಸ ಮಾಡುತ್ತಾರೆ. ಅದರಲ್ಲಿ ಯಾವ ಪ್ರಶ್ನೆ ಇಲ್ಲ ಎಂದ ಅವರು ನಾನು ಖುಷಿಯಿಂದ ಹೋಗುತ್ತಿದ್ದೇನೆ. ಇದರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಬಸನಗೌಡ ಯತ್ನಾಳ್ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅವರ ಬಗ್ಗೆ ನಾನು ಮಾತಾಡುವುದಿಲ್ಲ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದ ವಿಷಯವೇ ಗೊತ್ತಿಲ್ಲ. ಆದರೂ ಯಾಕೆ ನಮ್ಮ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಸೇರುತ್ತಾರೆ ಎಂಬ ಹೇಳಿಕೆಗೆ ಟಾಂಗ್ ನೀಡಿದರು. ಇದನ್ನೂ ಓದಿ: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    ಕಾಂಗ್ರೆಸ್ ಸರ್ಕಾರ ಇದ್ದಾಗ ಕೆಲವು ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಆಗಲೇ ಅವರಿಗೆ ಗೊತ್ತಾಗಲಿಲ್ಲ. ಈಗ ನಮ್ಮ ಬಗ್ಗೆ ಯಾಕೆ ಯೋಚನೆ ಮಾಡುತ್ತಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು 2023ರವರೆಗೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ