ಕೊಪ್ಪಳ: ಮುಸ್ಲಿಂ ಯುವತಿಯರನ್ನ (Muslim Girls) ಮದ್ವೆಯಾದ್ರೆ 5 ಲಕ್ಷ ರೂ. ಕೊಡುವ ಅಭಿಯಾನ ಆರಂಭಿಸುತ್ತೇವೆ. ಈ ಮೂಲಕ ಹಿಂದೂಗಳನ್ನ ಕೊಲೆ ಮಾಡುವ ಮನಸ್ಥಿತಿಯುಳ್ಳ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ಕೊಪ್ಪಳ ನಗರದ (Koppala City) ಕುರುಬರ ಓಣಿಯಲ್ಲಿನ ಕೊಲೆಯಾದ ಗವಿಸಿದ್ದಪ್ಪ ಮನೆಗೆ ಭೇಟಿ ನೀಡಿದ ನಂತರ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿದರು.
ಮಸೀದಿ ಮುಂದೆಯೇ ಗವಿಸಿದ್ದಪ್ಪ ನಾಯಕ ಕೊಲೆಯಾಗಿದೆ. ಕೊಲೆ ಮಾಡುವಾಗ ತಡೆಯುವ ಕೆಲಸ ಅಲ್ಲಿದ್ದವರು ಮಾಡಿಲ್ಲ. ಕೊಲೆ ಮಾಡಿದ ಆರೋಪಿ ರೀಲ್ಸ್‌ನಲ್ಲಿ ಮಚ್ಚು ತೋರಿಸಿದ್ದಾನೆ. ಈಗ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಆ ಹುಡುಗಿಯನ್ನೂ ಅರೆಸ್ಟ್ ಮಾಡಬೇಕು. ಮಚ್ಚು ಹಿಡಿದು ಓಡಾಡುವವರಿಗೆ ಸರ್ಕಾರ ಬೆಂಬಲ ನೀಡುತ್ತದೆ. ಲವ್ ಜಿಹಾದ್ ಮಾಡಿದಾಗ ಸರ್ಕಾರ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುತ್ತದೆ. ಸರ್ಕಾರ ಮುಸ್ಲಿಂರಿಗೆ ಮಾತ್ರ ರಕ್ಷಣೆ ನೀಡುತ್ತದೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸುತ್ತೇನೆ. ಆ.11ರ ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು. ಇದೇ ನೆಪದಲ್ಲಿ ಗಣೇಶ ಹಬ್ಬಕ್ಕೆ ಅಡ್ಡಿ ಪಡಿಸಬಾರದು ಎಂದು ಆಗ್ರಹಿಸಿದರು.
ಮುಸ್ಲಿಮರು ಅಪರಾಧಿಗಳಲ್ಲ ಎಂದು ಬಿಂಬಿಸದಂತೆ ಪೊಲೀಸರಿಗೆ ಒತ್ತಡವಿದೆ. ಡ್ರಗ್ಸ್ ಗಾಂಜಾದ ಬಗ್ಗೆ ಗೃಹ ಸಚಿವರು ಉಡೊ ಮಾತನಾಡುತ್ತಾರೆ. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾವಿದೆ. ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಏನಾದರೂ ತೊಂದರೆಯಾದ್ರೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸಾಂತ್ವಾನ ಹೇಳಿದ್ರೆ ಸಾಲದು. ಕುಟುಂಬದ ನೆರವಿಗೆ ಬರಬೇಕು ಎಂದು ವಾಗ್ದಾಳಿ ಮಾಡಿದರು.
– ದೇಶದಲ್ಲಿ ವಕ್ಫ್ ವಿರುದ್ಧ ಹೋರಾಟ ಆರಂಭವಾಗಿದ್ದೇ ವಿಜಯಪುರದಿಂದ – ಎಲ್ಲರೂ ಗಟ್ಟಿಯಾದರೆ ರೈತರ, ಮಠಗಳ ಆಸ್ತಿ ಉಳಿಯುತ್ತೆ
ವಿಜಯಪುರ: ವಕ್ಫ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸ್ವಾಮೀಜಿಗಳು ಕೈಜೋಡಿಸಬೇಕು. ಆದರೆ ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿಲ್ಲ. ವಕ್ಫ್ ವಿರುದ್ಧ ದೊಡ್ಡ ಹೋರಾಟ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಕನ್ಹೇರಿ ಸ್ವಾಮಿಜಿ ಮುಂಚೂಣಿ ವಹಿಸಿಕೊಂಡಿದ್ದರೆ, ಇತರೆ ಸ್ವಾಮೀಜಿಗಳು ಕೊಂಕು ಹೇಳುತ್ತಿದ್ದಾರೆ. ಮಠಗಳಿಗೆ ದಾನ ನೀಡುವವರು ಹಿಂದೂಗಳು, ಮುಸ್ಲಿಂರಲ್ಲ. ಮುಸ್ಲಿಂರೆಲ್ಲ ಸ್ವಾಮೀಜಿಗಳಿಗೆ ನಮಸ್ಕಾರ ಮಾಡಲ್ಲ ಎಂದರು.
ಕೇಂದ್ರ ಸಚಿವೆ ಕರಂದ್ಲಾಜೆ (Shobha Karandlaje), ನಾನು ಇತರರು ಸೇರಿ ಅಹೋರಾತ್ರಿ ಹೋರಾಟ ಮಾಡುತ್ತೇವೆ. ವಕ್ಫ್ ಹೋಗುವವರೆಗೂ ಹೋರಾಟ ನಿಲ್ಲಲ್ಲ, ಇದು ಕೂಡ ಚರ್ಚೆಗೆ ಗ್ರಾಸವಾಗಲಿದೆ. ಮುಂದೆ ರಾಜ್ಯದಲ್ಲಿ ನಮ್ಮದೇ ಕಾಂಬಿನೇಷನ್ ನಾಯಕತ್ವ ಎಂದರು.ಇದನ್ನೂ ಓದಿ: ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ – ಕೇಸ್ ದಾಖಲು
ದೇಶದಲ್ಲಿ ವಕ್ಫ್ ವಿರುದ್ಧ ಹೋರಾಟ ಆರಂಭವಾಗಿದ್ದೇ ವಿಜಯಪುರದ (Vijayapura) ಪವಿತ್ರ ಭೂಮಿಯಿಂದ. ವಕ್ಫ್ ಕರಾಳ ಶಾಸನದ ಅನುಭವ ಆಗುತ್ತಿದೆ. ಇದರ ವಿರುದ್ಧ ದೊಡ್ಡ ಹೋರಾಟದ ಅವಶ್ಯಕತೆಯಿದೆ. ಎಲ್ಲರೂ ಗಟ್ಟಿಯಾದರೆ ರೈತರ ಜಮೀನು, ಮಠಗಳು ಉಳಿಯುತ್ತವೆ. ಯಾರ ಪಹಣಿಯೂ ಸಿಗದಂತೆ ಸರ್ವರ್ ಡೌನ್ ಮಾಡಿದ್ದಾರೆ. ಇದರಿಂದ ಸರ್ಕಾರವೇ ಡೌನ್ ಆಗಲಿದೆ. ಜನರೇ ಬುತ್ತಿ ಕಟ್ಟಿಕೊಂಡು ಹೋರಾಟ ಮಾಡೋಣ. ಮುಂದೆ ಧರ್ಮಯುದ್ಧ ಆಗುತ್ತದೆ. ಎಲ್ಲರೂ ಹೋರಾಟದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ನಮ್ಮ ದೇವರ ಕೈಯಲ್ಲಿ ಅಸ್ತ್ರಗಳು ಇವೆ. ಶಿವನ ಕೈಯ್ಯಲ್ಲಿ ಏನಿದೆ? ಚಾಮುಂಡಿ ಕೈಯ್ಯಲ್ಲಿ ಏನಿದೆ? ಬಾಂಗ್ಲಾದಲ್ಲಿ ಹಿಂದೂ ಸರ್ಕಾರಿ ನೌಕರರು ರಾಜೀನಾಮೆ ತೆಗೆದುಕೊಳ್ಳುತ್ತಿದ್ದಾರೆ. ನ.3 ರಂದು ದೆಹಲಿಯಲ್ಲಿ ಮುಸ್ಲಿಂ ಮೌಲ್ವಿಗಳು ಸಭೆ ನಡೆಸಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರಿಗೂ ಮೋದಿ ಅವರು ಜಾರಿಗೆ ತರುವ ಕಾಯ್ದೆಯನ್ನು ಬೆಂಬಲಿಸಬಾರದು. ಆಂಧ್ರದಲ್ಲಿ ಐದು ಲಕ್ಷ ಜನರು ಸೇರಿ ಹೋರಾಟ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಪಾರ್ಟಿಷನ್ ಆಫ್ ಪಾಕಿಸ್ತಾನ ಎಂಬ ಪುಸ್ತಕ ಅಂಬೇಡ್ಕರ್ ಬರೆದಿದ್ದರು. ಭಾರತ ಪಾಕಿಸ್ತಾನ ವಿಭಜನೆ ಬೇಡ ಎಂದಿದ್ದರು. ವಿಭಜನೆ ಮಾಡಿದರೆ ಪಾಕಿಸ್ತಾನದ ಹಿಂದೂಗಳನ್ನು ಇಲ್ಲಿಗೆ ಇಲ್ಲಿರುವ ಮುಸ್ಲಿಂಮರನ್ನು ಪಾಕಿಸ್ತಾನಕ್ಕೆ ರವಾನೆ ಮಾಡಬೇಕೆಂದು ಹೇಳಿದ್ದರು ಎಂದು ತಿಳಿಸಿದರು.
ಜಮೀರ್ ಖಬರಸ್ಥಾನ್ ಹರಾ ರಂಗ್ ಎನ್ನುತ್ತಾರೆ ಎಂದು ಜಮೀರ್ ಮಾತನಾಡುವ ರೀತಿಯನ್ನು ಮಿಮಿಕ್ರಿ ಮಾಡಿದರು. ಸಿಎಂ ಭೇಟಿಗೆ ಹೋಗಿದ್ದಾಗ ಜಮೀರ್ ಮತ್ತು ನನ್ನ ಮಧ್ಯೆ ವಾಗ್ವಾದ ಆಯ್ತು. ಖಬರಸ್ಥಾನ್‌ಗೆ ಹಸಿರು ಬಣ್ಣ ಹಾಕಬೇಕೆಂದು ಜಮೀರ್ ಹೇಳ್ತಾರೆ. ಸೈತಾನ್‌ಗೆ ಅದು ಕಾಣಿಸಬೇಕೆಂದು ಹೇಳುತ್ತಾರೆ. ಖಾವಿ ಹಾಕಿದವರು ನಾವೇ ಸೈತಾನಗಳಾ? ರಾಜ್ಯದಲ್ಲಿ ಒಂದು ಲಕ್ಷ ಎಕರೆ ಭೂಮಿ ಮಾತ್ರ ಇದೆ ಎನ್ನುತ್ತಾರೆ. ಆದರೆ ಜಮೀರ್ ಐದು ಲಕ್ಷಕ್ಕೂ ಅಧಿಕ ಜಮೀನು ಕಬಳಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಜನ್ನತ್ ಕುರಿತು ಮುಸ್ಲಿಂ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ದೇಶ, ಧರ್ಮ ದೊಡ್ಡದು ನಂತರ ನಮ್ಮ ಪಾರ್ಟಿ. ದೇಶ ಉಳಿದರೆ ಎಲ್ಲ ಉಳಿದಂತೆ. ದೇಶಕ್ಕಿಂತ ಕುರಾನ್ ದೊಡ್ಡದು ಎಂದು ಮುಸ್ಲಿಂಮರು ಹೇಳುತ್ತಾರೆ. ಆದರೆ ನಾವು ಸಂವಿಧಾನ ದೊಡ್ಡದು ಎನ್ನುತ್ತೇವೆ. ನಮ್ಮ ಜಿಲ್ಲೆಯಲ್ಲಿ ಶಂಶುದ್ದೀನ್ ಪಟೇಲ್ ಎಂಬ ಮಂತ್ರಿ ಇದ್ದಾನೆ. ಹಾವೇರಿಯಲ್ಲಿ ಮುಗ್ದ ಮುಸ್ಲಿಂ ಮೇಲೆ ಹಿಂದೂಗಳು ಹಲ್ಲೆ ಮಾಡಿದರು ಎಂದು ಹೇಳಿದ್ದಾನೆ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಉತ್ತಮ ಗಾಳಿ ಇರುವ ಟಾಪ್ 10 ಸಿಟಿಗಳಲ್ಲಿ ಚನ್ನರಾಯಪಟ್ಟಣ ನಂ.1!
ಬೆಳಗಾವಿ: ಸಚಿವ ಸ್ಥಾನ ಸೇರಿದಂತೆ ಅನೇಕ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಅವರಾಗಿಯೇ ನೀಡಿದ್ದು, ಅದಕ್ಕಾಗಿ ನಾನು ಯಾರಿಗೂ ಹಣವಾಗಲೀ, ಅರ್ಧ ಕಪ್ ಚಹಾವನ್ನಾಗಲಿ ಕುಡಿಸಿಲ್ಲ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಚಿವರ ಪದವಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಈವರೆಗೆ ನಾನು ಯಾರಿಗೂ ಅರ್ಧ ಕಪ್ ಚಹಾ ಸಹ ಕುಡಿಸಿಲ್ಲ. ಆದರೂ ನಾನು ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ಸೇರಿ ರಾಜ್ಯದ ಹತ್ತಾರು ಹುದ್ದೆಯನ್ನು ನಿರ್ವಹಿಸಿದ್ದೇನೆ. ಏಳೆಂಟು ಜವಾಬ್ದಾರಿ ಇದೆ. ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿದ್ದೇನೆ ಎಂದರು.
ಇಂದಿನವರೆಗೂ ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿದ್ದು, ಅಂಗೈಯಲ್ಲಿ ಕನ್ನಡಿ ಹಿಡಿದರೆ ಹೇಗೆ ಕಾಣ್ತಾರಲ್ಲ ಹಂಗೆ ನಾನು. ಹೆಚ್ಚಿನ ಜವಾಬ್ದಾರಿ ಇರುವುದರಿಂದ ಕೆಆರ್‌ಡಿಎಫ್‍ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನಾನು ಒಂದು ರೂಪಾಯಿ ಯಾರಿಗೂ ಕೊಡದೇ, ಅರ್ಧ ಕಪ್ ಚಹಾ ಕುಡಿಸದೇ ನನಗೆ ಇಷ್ಟು ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಿದರು.
ಯತ್ನಾಳ್ ಅವರು ಸುಳ್ಳು ಹೇಳುತ್ತಿದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಬಹಳ ದೊಡ್ಡವರು. ಅವರು ಏಕೆ ಹೇಳಿದರೋ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದು ಸೂಕ್ತವಲ್ಲ. ಏಕೆ ಅವರು ಈ ರೀತಿ ಹೇಳಿದ್ದಾರೆ, ಯಾರು ಆಫರ್ ನೀಡಿದ್ದಾರೆ ಎನ್ನುವುದರ ಕುರಿತು ಅವರನ್ನು ಕೇಳಿದರೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ:ಸಂಪುಟ ವಿಸ್ತರಣೆ ಕಸರತ್ತು: ನಾಳೆ ದೆಹಲಿಗೆ ಸಿಎಂ
ಸತ್ಯ ಸುಳ್ಳು ನಾನು ಪರಿಶೀಲನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿ ವಿಚಾರ ಮಾಡಿ ಹೇಳಿಕೆ ಕೊಡಬೇಕು. ನಾವೆಲ್ಲರೂ ಕೂಡ ಅರಿತುಕೊಳ್ಳಬೇಕಾಗುತ್ತದೆ. ನಾನು 33 ವರ್ಷ ರಾಜಕಾರಣದಲ್ಲಿ ಇದ್ದೇನೆ. ಸಿಎಂಗಳ ಜೊತೆ ಹತ್ತಿರದಲ್ಲಿ ಕೆಲಸ ಮಾಡಿದ್ದೇನೆ. ಏನು ಬೇಕಾದರೆ ಹೇಳಬಹುದು. ಆದರೆ ಈ ರೀತಿಯ ಹೇಳಿಕೆಯನ್ನು ಸರಿಯಲ್ಲ ಎಂದು ಟಾಂಗ್ ನೀಡಿದರು.
ಇದೇ ವೇಳೆ ಯತ್ನಾಳ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷ ಎಲ್ಲವನ್ನೂ ಅವಲೋಕನ ಮಾಡುತ್ತದೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನ ಪಕ್ಷ ತೆಗೆದುಕೊಳ್ಳುತ್ತದೆ. ಅವರ ವಿರುದ್ಧ ಕ್ರಮದ ಬಗ್ಗೆ ಹಿರಿಯ ನಾಯಕರು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಕೆಲವೊಂದು ಕೋಮುವಾದಿ ಸಂಘಟನೆಗಳು ನಿರಂತರವಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ: ಸಲೀಂ ಅಹ್ಮದ್
ವಿಜಯಪುರ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪುಟಗೋಸಿ. ರಫೇಲ್ ಅಂದರೆ ಅವರಿಗೆ ಏನು ಗೊತ್ತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಯವರು ಎಲ್ಲವನ್ನು ತ್ಯಾಗ ಮಾಡಿದ್ದು, ಕೋಟಿಗಟ್ಟಲೆ ಹಣ ಇಟ್ಟುಕೊಂಡು ಅವರು ಏನು ಮಾಡುತ್ತಾರೆ. ಕಾಂಗ್ರೆಸ್ ಮೋದಿಯವರ ಬಗ್ಗೆ ಸುಮ್ಮನೆ ಅಪವಾದ ಹೊರೆಸುತ್ತಿದೆ ಎಂದು ಕಿಡಿಕಾರಿದರು.
ಬ್ರಿಟನ್ ರಾಣಿಯ ನಂತರ ಸೋನಿಯಾ ಗಾಂಧಿ ಪ್ರಪಂಚದ ಎರಡನೇಯ ಶ್ರೀಮಂತ ಮಹಿಳೆ ಎಂದ ಅವರು, ಸಮ್ಮಿಶ್ರ ಸರ್ಕಾರದ ವಿಧಾನಸೌಧದೊಳಗೆ ಭ್ರಷ್ಟಾಚಾರ ನಡೆಸುತ್ತಿದೆ. ಅಂಬಾನಿಗೆ ಸಹಾಯ ಮಾಡಿದವರು ಕಾಂಗ್ರೆಸ್‍ನವರು. ನೀರವ್ ಮೋದಿಗೆ, ಮಲ್ಯಗೆ ಸಾಲ ನೀಡಿದ್ದು ಕಾಂಗ್ರೆಸ್. ಆದರೆ ಆರೋಪ ಮಾಡುವುದು ಮಾತ್ರ ಬಿಜೆಪಿ ನಾಯಕರ ಮೇಲೆ ಎಂದು ಹರಿಹಾಯ್ದರು.
ಶೀಘ್ರವೇ ದಾವೂದ್ ಇಬ್ರಾಹಿಂನನ್ನು ಹಿಡಿದುಕೊಂಡು ಬರಲಾಗುತ್ತದೆ. ಐಟಿ ರೇಡ್ ಯಾವುದೇ ದ್ವೇಷದಿಂದ ಆಗುತ್ತಿಲ್ಲ. ಪಕ್ಷಾತೀತವಾಗಿ ರೇಡ್ ಆಗುತ್ತಿದೆ. ಮೋದಿ ಅವರು ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಅಂಥವರು ಹಣ ಗಳಿಸಿ ಏನು ಮಾಡಬೇಕು. ಲೋಕಸಭಾ ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ ಆಗುತ್ತದೆ ಎನ್ನುವ ಭರವಸೆ ಇದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಭಸ್ಮಾಸುರ ಇದ್ದಂತೆ. ಅವರು ಕಾಂಗ್ರೆಸ್ ತಲೆ ಮೇಲೆ ಕೈ ಇಟ್ಟಿದ್ದಾರೆ. ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಯಾವುದೇ ಕಾರಣಕ್ಕೆ ನಂಬಬಾರದು. ದೇವೇಗೌಡರಿಗೆ ರಾತ್ರಿ ವೇಳೆ ನಾಯಕರನ್ನು ಭೇಟಿಯಾಗುವ ಚಾಳಿ ಇದೆ. ದೇವೇಗೌಡರ ಆಟ ಬಲ್ಲವರಾರು? ಈ ಬಗ್ಗೆ ಬಿಜೆಪಿ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದರು.
ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ಸಿಗರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್‍ಗೆ ಕಾಲಿಗೆ ಬೀಳುತ್ತಿದೆ ಎಂದು ಹೇಳಿ ವ್ಯಂಗ್ಯವಾಡಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ರಾತ್ರಿ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಾಣದಲ್ಲಿ ಗಮನ ಹರಿಸುತ್ತಿಲ್ಲ. ಸುಪ್ರೀಂ ಕೋರ್ಟ್ ಬಗ್ಗೆ ಗೌರವವಿದೆ. ಆದರೆ ಜನಸಾಮಾನ್ಯನಾಗಿ ನಾನು ಸುಪ್ರೀಂ ಕೋರ್ಟ್ ನಡೆಯನ್ನು ಪ್ರಶ್ನೆ ಮಾಡುತ್ತೇನೆ ಬಸನಗೌಡ ಪಾಟೀಲ್ ಹೇಳಿದರು.
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಮುಸ್ಲಿಮರು ಹೆದರುವ ಅವಶ್ಯಕತೆ ಇಲ್ಲ. ಈ ರೀತಿಯ ಹೇಳಿಕೆ ಶಾಸಕರಿಗೆ ಶೋಭೆ ತರುವುದಿಲ್ಲ. ನಿಮ್ಮ ಏರಿಯಾದಲ್ಲಿ ಅಭಿವೃದ್ಧಿಯಾಗದೇ ಇದ್ದಲ್ಲಿ ನಾವು ನಮ್ಮ ಕಚೇರಿಯಿಂದ ಸೌಲಭ್ಯಗಳನ್ನ ನೀಡುತ್ತೇವೆ. ನಗರದ ಮುಸ್ಲಿಂರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನ ನಾವು ಮಾಡ್ತೇವೆ. ಪ್ಯಾರಲಲ್ ಶಾಸಕರನ್ನ ಹುಟ್ಟುಹಾಕಲು ಬದ್ಧವಾಗಿದ್ದೇವೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಈ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಜೊತೆ ಮಾತನಾಡಿದ್ದೇನೆ. ಆಲಮಟ್ಟಿ ಡ್ಯಾಂ ನಿಂದ ಎಲ್ಲ ಕೆರೆ, ಕೆನಾಲ್‍ಗಳಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿ ಪತ್ರ ಕೂಡ ಬರೆದಿದ್ದೇನೆ. ಈ ಕುರಿತು ಅಧಿಕಾರಿಗಳ ಸಭೆಗಳನ್ನು ಕರೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:ನನ್ನ ಆಫೀಸ್‍ಗೆ ಬುರ್ಖಾ ಧಾರಿಗಳು ಬರೋದೇ ಬೇಡ: ಶಾಸಕ ಯತ್ನಾಳ್
ಹಿಂದಿನ ಬಜೆಟ್‍ನ ಎಲ್ಲ ಯೋಜನೆಗಳನ್ನು ಸಿಎಂ ಕುಮಾರಸ್ವಾಮಿ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗಾಗಿ ಬಜೆಟ್ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಬಹಳ ಕಷ್ಟಪಟ್ಟು ಅಖಂಡ ಕರ್ನಾಟಕ ನಿರ್ಮಾಣ ಮಾಡಲಾಗಿದೆ. ಇಂದು ಬಜೆಟ್ ಸರಿ ಇಲ್ಲ ಅಂತ ಪ್ರತ್ಯೇಕವಾಗುವುದು ಸರಿಯಲ್ಲ. ನಾವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತ ಹೋರಾಟದಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಹಿಂದ ವರ್ಗದ ನಾಯಕರಿಗಿಂತ ಲಿಂಗಾಯತ ಮುಖಂಡರು ಗೆದ್ದು ಬಂದಿದ್ದಾರೆ. ಯಾವ ಕಾರಣದಿಂದ ಯಾರು, ಯಾರು ಸೋತಿದ್ದಾರೆ ಅನ್ನೋದರ ಬಗ್ಗೆ ಪಕ್ಷದ ಒಳಗೆ ಚರ್ಚೆಯಾಗಲಿದೆ. ಅಲ್ಲಿ ನಾವು ಕೂಡ ನಮ್ಮ ವಿಚಾರ ಮಂಡನೆ ಮಾಡಲಿದ್ದೇವೆ ಎಂದು ಹೇಳಿದರು.