Tag: ಬಸನಗೌಡ ಕರೇಗೌಡ

  • ಪಿಎಸ್‌ಐ ಸಮವಸ್ತ್ರ ಧರಿಸಿ ಬಿಲ್ಡಪ್‌ – ಬೆಂಗಳೂರಿನ ಕಾನ್‌ಸ್ಟೇಬಲ್‌ ಅಮಾನತು

    ಪಿಎಸ್‌ಐ ಸಮವಸ್ತ್ರ ಧರಿಸಿ ಬಿಲ್ಡಪ್‌ – ಬೆಂಗಳೂರಿನ ಕಾನ್‌ಸ್ಟೇಬಲ್‌ ಅಮಾನತು

    ಬೆಂಗಳೂರು: ನೇಮಕಾತಿ ಆದೇಶ ಪ್ರತಿ ಸಿಗುವ ಮೊದಲೇ ಪಿಎಸ್ಐ(ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌) ಯೂನಿಫಾರ್ಮ್ ಧರಿಸಿ ಬಿಲ್ಡಪ್‌ ಕೊಟ್ಟಿದ್ದ ಪೇದೆ ಬಸನಗೌಡ ಕರೇಗೌಡನನ್ನು ಅಮಾನತು ಮಾಡಲಾಗಿದೆ.

    ವಿವೇಕನಗರ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿದ್ದ ಬಸನಗೌಡ ಕರೇಗೌಡನನ್ನು ಕೇಂದ್ರ ವಿಭಾಗದ ಡಿಸಿಪಿ ಎಂ. ಎನ್ಅ. ಅನುಚೇತ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ನಿಯಮಾವಳಿಯ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

    ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ಬಸನಗೌಡ ಕರೇಗೌಡ ಪಿಎಸ್‍ಐ ಸಮವಸ್ತ್ರ ಹಾಕಿಕೊಂಡು ಬಿಲ್ಡಪ್‌ ಕೊಟ್ಟಿದ್ದ. ಜನವರಿ 19 ರಂದು ಬಿಡುಗಡೆಯಾಗಿದ್ದ ಪಿಎಸ್‍ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಬಸನಗೌಡ 27ನೇ ರ‍್ಯಾಂಕ್‍ ಸಿಕ್ಕಿತ್ತು. ಇದನ್ನೂ ಓದಿ: ಮಲಯಾಳಂ ಖ್ಯಾತ ನಟಿಯ ಜೀವ ಅಪಾಯದಲ್ಲಿದೆ ಎಂದು ಪೊಲೀಸರ ವಶವಾದ ಡೈರೆಕ್ಟರ್

    ಪಿಎಸ್‍ಐ ಸೆಲೆಕ್ಷನ್ ಆಗಿದ್ದಕ್ಕೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್‍ಐ ಸಮವಸ್ತ್ರ ಧರಿಸಿ  ಬಸನಗೌಡ ಭಾಗವಹಿಸಿ ಭಾಷಣ ಮಾಡಿದ್ದ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ವೈರಲ್ ಆಗಿತ್ತು.

    ಏಪ್ರಿಲ್ 20 ರಂದು ತನಿಖೆಗೆ ಹಾಜರಾಗುವಂತೆ ಸಿಐಡಿ ಸಹಾಯಕ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದರು. ಐವತ್ತು ಜನರಿಗೆ ನೀಡಿದ್ದ ನೋಟಿಸ್ ಪಟ್ಟಿಯಲ್ಲಿದ್ದ ಬಸನಗೌಡ ಕರೇಗೌಡ ಹೆಸರು ಸಹ ಇತ್ತು.