Tag: ಬಸನಗೌಡಾ ಪಾಟೀಲ ಯತ್ನಾಳ್

  • ಡಿಕೆಶಿ, ಆನಂದ್ ಸಿಂಗ್ ಭೇಟಿ ನನಗೂ ಕುತೂಹಲ ಮೂಡಿಸಿದೆ: ಯತ್ನಾಳ್

    ಡಿಕೆಶಿ, ಆನಂದ್ ಸಿಂಗ್ ಭೇಟಿ ನನಗೂ ಕುತೂಹಲ ಮೂಡಿಸಿದೆ: ಯತ್ನಾಳ್

    ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಆನಂದ್ ಸಿಂಗ್ ಭೇಟಿ ನನಗೂ ಕುತೂಹಲ ಮೂಡಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

    ಸೋಮವಾರ ಡಿಕೆಶಿ ನಿವಾಸಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಭೇಟಿ ನೀಡಿದ್ದರು. ಈ ಕುರಿತಂತೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್ ಅವರು, ಸಚಿವ ಆನಂದ್ ಸಿಂಗ್ ನೇರಾ, ನೇರ ವ್ಯಕ್ತಿತ್ವ ಉಳ್ಳವರು. ಅಭಿವೃದ್ದಿ ವಿಚಾರವಾಗಿ ಹೋಗಿದ್ದಾರೋ ಏನೋ ಎಂಬುದು ನನಗೆ ಗೊತ್ತಿಲ್ಲ. ಆನಂದ್ ಸಿಂಗ್ ಡಿಕೆಶಿ ಭೇಟಿ ಕುರಿತು ನನಗೆ ಏನೂ ತಿಳಿದಿಲ್ಲ. ವಿಜಯನಗರ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಆನಂದ್ ಸಿಂಗ್ ಬೇಸರಗೊಂಡಿದ್ದಾರೆ. ನೂತನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ಮಾಡಬೇಕೆಂದು ಆಸೆ ಹೊಂದಿದ್ದರು. ಪಕ್ಷದ ಚೌಕಟ್ಟಿನಲ್ಲಿ ಆಯಾ ಜಿಲ್ಲೆಯ ಸಚಿವರು ಜಿಲ್ಲಾ ಉಸ್ತುವಾರಿ ಬೇಡವೆಂದು ಪಕ್ಷ ತೀರ್ಮಾನಿಸಿದೆ. ಆ ಕಾರಣದಿಂದ ವಿಜಯನಗರ ಉಸ್ತುವಾರಿ ಸ್ಥಾನ ಆನಂದ್ ಸಿಂಗ್ ಅವರಿಗೆ ತಪ್ಪಿದೆ ಎಂದು ತಿಳಿಸಿದ್ದಾರೆ.

    ಅವರ ಬಗ್ಗೆ ಗೌರವಿದೆ, ಅವರೊಬ್ಬ ಒಳ್ಳೆಯ ಮನುಷ್ಯ. ಹಿಂದೆ ಮುಂದೆ ಮಾಡುವ ಮನುಷ್ಯರಲ್ಲ. ಡಿಕೆಶಿ ಹಾಗೂ ಆನಂದ್ ಸಿಂಗ್ ಭೇಟಿ ನನಗೂ ಕುತೂಹಲ ಮೂಡಿಸಿದೆ. ಆನಂದ್ ಸಿಂಗ್ ಬಿಜೆಪಿ ಬಿಟ್ಟು ಹೋಗಲ್ಲ ಎನಿಸುತ್ತಿದೆ. ಬಿಜೆಪಿ ಬಿಟ್ಟು ಹೋಗುವವರ ಲಿಸ್ಟ್ ನಲ್ಲಿ ಆನಂದ್ ಸಿಂಗ್ ಇಲ್ಲ. ಅವರ ಮನಸ್ಸಿಗೆ ಬೇಜಾರಾಗಿ ಡಿಕೆಶಿ ಭೇಟಿ ಮಾಡಿರಬಹುದು ಎಂದಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

    ANAND SINGH

    ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‍ನ ಭಸ್ಮಾಸುರ. ಅಹಿಂದ ನಾಯಕರನ್ನು ಸ್ವಜಾತಿಯ ನಾಯಕರನ್ನಾಗಿ ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ಮುಗಿಸಲು ಕಾಂಗ್ರೆಸ್‍ನಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಡಿಕೆಶಿ ಮೊದಲ ಅಜೆಂಡಾ ಸಿದ್ದರಾಮಯ್ಯರನ್ನು ಮುಗಿಸೋದು. ಸಿದ್ದರಾಮಯ್ಯ ಬಲಿಷ್ಟವಾಗಿದ್ದರೆ ಡಿಕೆಶಿ ಸಿಎಂ ಆಗಲು ಸಾಧ್ಯವಿಲ್ಲ. ಮೇಕೆದಾಟು ಪಾದಯಾತ್ರೆಯ ವೇಳೆ ತಮ್ಮನ್ನು ತಾವು ಹೊಗಳಿ ಕೊಳ್ಳುವ ಕೆಲಸ ಡಿಕೆಶಿ ಮಾಡಿದ್ದಾರೆ. ಪಾದಯಾತ್ರೆ ಜನರಿಗಾಗಿ ಅಲ್ಲ ಎಂದು ಪುನರುಚ್ಛಾರ ಮಾಡಿದರು. ರಾಜ್ಯದ ನಾಯಕತ್ವವನ್ನು ಸಿದ್ದರಾಮಯ್ಯರಿಂದ ಕಸಿದುಕೊಂಡು, ಏಕೈಕ ನಾಯಕನೆಂದು ತೋರಿಸಲು ಪ್ರಯತ್ನಿಸಿದ್ದಾರೆ. ಅದರ ಬದಲಾಗಿ ಇಡೀ ರಾಜ್ಯದಲ್ಲಿ ಕೊರೊನಾ ಹರಡಲು ಕಾರಣವಾದರು ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Union Budget: ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ: ರಣದೀಪ್ ಸುರ್ಜೇವಾಲಾ ವ್ಯಂಗ್ಯ

    ಡಿಕೆಶಿ ಬಹುಕೋಟಿ ರೂಪಾಯಿ ಹಗರಣ ವಿಚಾರ: ಯಾರೇ ಆರೋಪಿಗಳಾಗಿರಬಹುದು, ಅದರಲ್ಲಿಯೂ ಇಡಿಗೆ ಸಿಕ್ಕವರು ಅಷ್ಟು ಸುಲಭವಾಗಿ ಪಾರಾಗುವುದಿಲ್ಲ. ಇಡಿ ಒಳಗೆ ಸಿಕ್ಕವರು ಹೀಗಿಲ್ಲದಿದ್ದರೂ, ಇನ್ನು ಹತ್ತು ವರ್ಷಕ್ಕೆ ನಿಶ್ಚಿತವಾಗಿ ಕ್ರಮ ಆಗೇ ಆಗುತ್ತದೆ. ಮೊನ್ನೆ ಒಬ್ಬ ಬಿಟಿಎಸ್ ಬಸ್ ಕಂಡೆಕ್ಟರ್ ಸಿಕ್ಕಿದ್ದಾರೆ. ಅವರ ಮನೆಯಲ್ಲಿ ಸಾವಿರಾರು ಕೋಟಿ ಸಿಕ್ಕಿದೆ. ಅದು ಯಾರ ದುಡ್ಡು?, ಅದು ಬಹಿರಂಗ ಆಗಬೇಕು. ಒಬ್ಬ ಕಂಡಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ದಾಖಲೆ ಸಿಗುತ್ತವೆ ಎಂದರೆ ಇಂತಹವರೆಲ್ಲಾ ಕಳ್ಳರು ಒಳಗೆ ಹೋಗಬೇಕು. ರಾಜ್ಯದ ಜನರ ಬೊಕ್ಕಸ ಲೂಟಿ ಮಾಡಿ, ದೇಶ, ವಿದೇಶದಲ್ಲಿ ಆಸ್ತಿ ಮಾಡುವ ರಾಜಕಾರಣಿಗಳಿಗೆಲ್ಲ ಶಿಕ್ಷೆ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅಲ್ಲದೇ ಪ್ರಧಾನಮಂತ್ರಿಗಳು ಅದನ್ನೇ ಹೇಳಿದ್ದಾರೆ. ನಾ ಖಾವುಂಗಾ, ನಾ ಖಿಲಾವುಂಗಾ ಎಂಬುವುದು ಮೋದಿ ಅವರ ಘೋಷವಾಕ್ಯವಾಗಿದೆ. ಅದರಂತೆ ಬಿಜೆಪಿ, ಕಾಂಗ್ರೆಸ್ ಅಥವಾ ಯಾವುದೇ ಪ್ರಕ್ಷದವರು ಇದ್ದರೂ ಒಳಗೆ ಹೋಗಬೇಕು ಎಂಬುದು ನನ್ನ ಸ್ಪಷ್ಟವಾದ ವೈಯಕ್ತಿಕ ನಿಲುವು ಎಂದರು.

  • ಕಾಂಗ್ರೆಸ್ ಬಿಡೋರ ಲಿಸ್ಟ್, ಬಿಜೆಪಿ ಬಿಡೋರ ಲಿಸ್ಟ್ ನನ್ನ ಬಳಿ ಇದೆ: ಯತ್ನಾಳ್

    ಕಾಂಗ್ರೆಸ್ ಬಿಡೋರ ಲಿಸ್ಟ್, ಬಿಜೆಪಿ ಬಿಡೋರ ಲಿಸ್ಟ್ ನನ್ನ ಬಳಿ ಇದೆ: ಯತ್ನಾಳ್

    ವಿಜಯಪುರ: ಕಾಂಗ್ರೆಸ್ ಪಕ್ಷ ಬಿಡೋರ ಲಿಸ್ಟ್ ನನ್ನ ಬಳಿ ಇದೆ. ಹಾಗೇ ಬಿಜೆಪಿ ಬಿಡೋರ ಲಿಸ್ಟ್ ಕೂಡ ನನ್ನ ಬಳಿ ಇದೆ. ಕಾಲಕಾಲಕ್ಕೆ ಹೇಳ್ತೀನಿ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

    ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ 6 ತಿಂಗಳು ಇರುವಾಗ ಸಂಪುಟ ಪುನರ್ ರಚನೆ ಮಾಡಿದರೆ ನಾವ್ಯಾರು ಮಂತ್ರಿ ಆಗುವುದಿಲ್ಲ. ಆದಷ್ಟು ಬೇಗ ಸಂಪುಟ ಪುನರ್‍ರಚನೆ ವಿಶ್ವಾಸ ಇದೆ. ಸಿಎಂ ಪ್ರಧಾನಿಗಳನ್ನು ಭೇಟಿ ಮಾಡಬೇಕು. ಪಂಚರಾಜ್ಯ ಚುನಾವಣೆ ಇದೆ. ನಾಳೆ ಸಿಎಂ ದೆಹಲಿಗೆ ಹೊರಟಿದ್ದಾರೆ. ಚರ್ಚೆ ನಡೆಸಿ ಮಾಡಬಹುದು. ಯಾವಾಗ ಆಗುತ್ತೋ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ: ನಲಪಾಡ್ ಅಧಿಕಾರ ಸ್ವೀಕಾರ

    6 ತಿಂಗಳು ಕಾದು ನೋಡಿ ಜಾದೂ ಹೇಗೆ ನಡೆಯುತ್ತದೆ. ಕಾಂಗ್ರೆಸ್‍ನಿಂದ ಪಕ್ಷ ಬಿಡುವವರ ಸಂಖ್ಯೆ ಈಗ ಹೇಳಲು ಆಗುವುದಿಲ್ಲ. ಕಾಂಗ್ರೆಸ್ ನಿಂದ ಸಿದ್ದರಾಮಯ್ಯರೇ ಬಿಟ್ಟರೆ ಅಚ್ಚರಿ ಇಲ್ಲ ಎಂದು ನಿನ್ನೆ ಹೇಳಿದ್ದೇನೆ. ಸಿದ್ದರಾಮಯ್ಯ ಮುಗಿಸುವುದು ಡಿಕೆಶಿ ಅವರ ಪಾದಯಾತ್ರೆಯ ಉದ್ದೇಶ. ಜನರಿಗಾಗಿ ಪಾದಯಾತ್ರೆ ಮಾಡುತ್ತಿಲ್ಲ. ದೇಶ ಆಳಿದ ಕಾಂಗ್ರೆಸ್ಸಿಗರು ಆಗ ಮೇಕೆದಾಟು, ಆಲಮಟ್ಟಿ ಹೋರಾಟ ಮಾಡಲಿಲ್ಲ. ಆವಾಗ ಕಾವೇರಿ ನ್ಯಾಯ ಬಗ್ಗೆ ಗಮನ ಹರಿಸಲಿಲ್ಲ. ಅಧಿಕಾರ ಅನುಭವಿಸಿ, ಲೂಟಿ ಮಾಡಿ ಮತ್ತೆ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಕಾಂಗ್ರೆಸ್ಸಿಗರು 30 ವರ್ಷ ಮಾಡಿದ ಲೂಟಿ ಹಣವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿದರೇ ಎಲ್ಲ ನೀರಾವರಿ ಯೋಜನೆ ಮುಗಿಯುತ್ತವೆ. ಇನ್ನು ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಹೀಗೆ ಮಾಡುತ್ತಿದೆ. ಜನರನ್ನು ಮರಳು ಮಾಡಲು ಹೀಗೆ ಮಾಡುತ್ತಿದ್ದಾರೆ. ಆದರೆ ಜನರು ಹುಚ್ಚರಲ್ಲ, ಅವರಿಗೂ ಎಲ್ಲ ತಿಳಿಯುತ್ತದೆ. ಕಾಂಗ್ರೆಸ್ ಯಶಸ್ವಿಯಾಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    ರೇಣುಕಾಚಾರ್ಯ ಹೈಕಮಾಂಡ್‍ಗೆ ದೂರು ಕೊಟ್ಟರೇ ಅದು ಅವರ ವೈಯಕ್ತಿಕ. ನನಗೂ ಅದಕ್ಕೂ ಸಂಬಂಧ ಇಲ್ಲ. ಇನ್ನು ನಾನು ಯಾವ ಸಚಿವರ ವಿರುದ್ಧವು ದೂರು ಕೊಡಲ್ಲ. ನನ್ನ ಜೊತೆಗೆ ಎಲ್ಲ ಸಚಿವರು ಚೆನ್ನಾಗಿದ್ದಾರೆ. ಸಚಿವರು ಸಹಕಾರ ನೀಡಿದ್ದಾರೆ. ಹೋದಾಗ ಗೌರವ ಕೊಟ್ಟಿದ್ದಾರೆ. ನಾ ಹೇಳಿದಾಗ ಆದಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವ ಸಚಿವರ ಬಗ್ಗೆಯೂ ನನ್ನ ಆರೋಪ, ದೂರು ಇಲ್ಲ. ಇನ್ನು ಸಭೆಯಲ್ಲಿ ಸಚಿವರಿಗೆ ಸಲಹೆ ಕೊಡುವ ಅಧಿಕಾರ ಶಾಸಕರಿಗಿದೆ ಎಂದು ಹೇಳಿದ್ದಾರೆ.

    125 ಕೋಟಿ ಅನುದಾನ ವಾಪಾಸ್ ಪಡೆದಾಗ ನಾನೇ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದ್ದೆ. ಅಭಿವೃದ್ಧಿ ವಿಚಾರದಲ್ಲಿ ಮಾತನಾಡುವುದು ಬೇರೆ. ಅಭಿವೃದ್ಧಿ ಕೆಲಸಗಳಿಗೆ ನ್ಯಾಯ ಸಿಗದೇ ಇದ್ದಾಗ ಹೋರಾಟ ಮಾಡುತ್ತೇವೆ. ಈಗ ಯಾವ ಸಚಿವರ ಬಗ್ಗೆಯೂ ನನ್ನ ಆರೋಪವಿಲ್ಲ. ಸಚಿವ ಸಂಪುಟ ಆದಷ್ಟು ಬೇಗನೆ ಪುನರಚನೆ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

  • ರಾತ್ರಿ ಬಂದು ಮಸಿ ಹಚ್ಚೋ ಅಯೋಗ್ಯರಿಗೆ ಗೃಹ ಸಚಿವರು ಏನು ಮಾಡ್ಬೇಕು: ಯತ್ನಾಳ್

    ರಾತ್ರಿ ಬಂದು ಮಸಿ ಹಚ್ಚೋ ಅಯೋಗ್ಯರಿಗೆ ಗೃಹ ಸಚಿವರು ಏನು ಮಾಡ್ಬೇಕು: ಯತ್ನಾಳ್

    ವಿಜಯಪುರ: ರಾತ್ರಿ ಬಂದು ಮಸಿ ಹಚ್ಚುವ ಅಯೋಗ್ಯರಿಗೆ ಗೃಹ ಸಚಿವರು ಏನ್ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಬೆಳಗಾವಿಯಲ್ಲಿ ಶುಕ್ರವಾರ ತಡ ರಾತ್ರಿ ಎಂಇಎಸ್ ಕಾರ್ಯಕರ್ತರು ನಡೆಸಿರುವ ಹಿಂಸಾಚಾರ ಕೃತ್ಯ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಇಎಸ್, ಶಿವಸೇನೆ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶಿವಸೇನೆ ಭಾಷಾ ವೈಷಮ್ಯಕ್ಕೆ ಬಿದ್ದದ್ದು ದುರ್ದೈವ. ಮಹಾರಾಷ್ಟ್ರ ಸರ್ಕಾರ ಸಲುವಾಗಿ ಶಿವಸೇನೆ ಹೀಗೆ ಮಾಡುತ್ತಿದೆ ಎಂದು ಎಂಇಎಸ್, ಶಿವಸೇನೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಕೊಲ್ಲಾಪುರದಲ್ಲಿ ಧ್ವಜ ಸುಟ್ಟವರ ಮೇಲು ಕ್ರಮಕ್ಕೆ ವಿಧಾನ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಇವೆಲ್ಲಾ ದೇಶ ವಿರೋಧಿ ಚಟುವಟಿಕೆಗಳು. ಉದ್ದೇಶ ಪೂರ್ವಕವಾಗಿ ಶಿವಾಜಿ ಮೂರ್ತಿ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಬಸವಣ್ಣನ ಮೂರ್ತಿಗಳಿಗೆ ಅಪಮಾನ ಮಾಡಲಾಗುತ್ತಿದೆ. ಇದೆಲ್ಲದರ ಹಿಂದೆ ದೊಡ್ಡ ಗುಂಪಿದೆ. ಅದು ಯಾರೇ ಇದ್ದರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ

    ಯಾವುದೇ ಮೂರ್ತಿಯ ಮೇಲೆ ಅಪಮಾನವಾದರು ಕ್ರಮವಾಗಬೇಕು. ರಾಷ್ಟ್ರ ಪುರುಷರ ಮೂರ್ತಿಗಳ ಮೇಲೆ ದಾಳಿ ಮಾಡುವವರ ಮೇಲೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರ ಪುರುಷರ ಮೂರ್ತಿಗೆ ಅಪಮಾನ ಮಾಡುವವರನ್ನು ಎಂದಿಗೂ ಕ್ಷಮಿಸಬಾರದು. ಇಂಥ ಘಟನೆಗಳು ನಡೆದಾಗ ತಕ್ಷಣವೇ ನಿರ್ಣಯ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    ಇದೇ ವೇಳೆ ಕೆಲವರು ಸಂಘಟನೆಗಳನ್ನು ಕಟ್ಟಿಕೊಂಡು ಉದ್ಯೋಗ ಮಾಡಿಕೊಂಡಿದ್ದಾರೆ. ಕೆಲ ಹುಳುಗಳು ಸಂಘಟನೆ ಮಾಡಿಕೊಂಡು ಕೆಟ್ಟ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಬಂದು ಮಸಿ ಹಚ್ಚುವ ಅಯೋಗ್ಯರಿಗೆ ಗೃಹ ಸಚಿವರು ಏನ್ ಮಾಡಬೇಕು. ನಾಳೆ ನಾನು ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡ್ತೇನೆ ಎಂದರು.

  • ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್

    ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್

    ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜೊತೆಗೆ ನಾನು ಸದಾ ಕಾಲ ಇರುತ್ತೇನೆ. ಅವರ ಧ್ವನಿಗೆ ಧ್ವನಿಯಾಗಿ ನಾನು ಸದಾ ಕಾಲ ನಿಲ್ಲುವೆ ಎಂದು ವಿಜಯಪುರದಲ್ಲಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ ಹೊಸ ದಾಖಲೆ

    ನಗರದ ಭೂತನಾಳ ಕೆರೆಯ ಬಳಿ ನೂತನ ತ್ರೀಸ್ಟಾರ್ ಹೋಟೆಲ್‍ಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಯತ್ನಾಳ್ ಅವರಿಗೆ ಒಳ್ಳೆಯ ಅವಕಾಶ ಬರಲಿ. ಅವರ ಜೊತೆಗೆ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವದರ ಜೊತೆಗೆ ನಾನು ಇರುವೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಆಶಾ ಭಾವನೆ ಇದೆ ಎಂದಿದ್ದಾರೆ.

    ಕಲಬುರ್ಗಿ ಏರ್‌ಪೋರ್ಟ್‌ಗೆ ಸ್ವಾಗತಕ್ಕಾಗಿ ಆಗಮಿಸದ ಶಾಸಕರು, ಮುಖಂಡರು ವಿಚಾರಕ್ಕೆ ಪ್ರತಿಕ್ರಿಯಿಸಿ ಇದರಲ್ಲಿ ರಾಜಕೀಯ ಏನು ಇಲ್ಲ. ಕೋವಿಡ್ ಕಾರಣದಿಂದ ಕಲಬುರ್ಗಿಯಲ್ಲಿ ಯಾರಿಗೂ ಮಾಹಿತಿ ಕೊಟ್ಟಿರಲಿಲ್ಲ. ಕಾರ್ಯಕರ್ತರಿಗೆ ಮುಖಂಡರಿಗೆ ಮಾಹಿತಿ ಕೊಟ್ಟಿರಲಿಲ್ಲ. ಹಾಗಾಗಿ ಯಾರು ಬರಲಿಲ್ಲ. ಇದರಲ್ಲಿ ರಾಜಕೀಯ ವಿಶೇಷ ಏನು ಇಲ್ಲಾ. ಇನ್ನು ಸಿಎಂ ವಿರುದ್ಧ ರೆಬಲ್ ಆದೆ ಅನ್ನೋ ಕಾರಣಕ್ಕೆ ಆ ರೀತಿ ಏನಿಲ್ಲ ಎಂದು ಹೇಳಿದ್ದಾರೆ.

     

  • ಸಿಎಂ ಬಿಎಸ್‍ವೈಗೆ ಕಿರುಕುಳ: ಬಸನಗೌಡ ಪಾಟೀಲ್ ಯತ್ನಾಳ್

    ಸಿಎಂ ಬಿಎಸ್‍ವೈಗೆ ಕಿರುಕುಳ: ಬಸನಗೌಡ ಪಾಟೀಲ್ ಯತ್ನಾಳ್

    ವಿಜಯಪುರ: ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಸಿಎಂ ಕನಸು ಕಂಡಿದ್ದಾರೆ. ಆದರೆ ಯಡಿಯೂರಪ್ಪವರಿಗೆ ಕಿರುಕುಳ ಆಗುತ್ತಿದ್ದು, ಎಲ್ಲ ಶಾಸಕರು ಸಹಕಾರ ನೀಡಬೇಕೆಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಿಷಯವನ್ನು ಪರೋಕ್ಷವಾಗಿ ತಿಳಿಸಿದರು.

    ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಅದಕ್ಕಾಗಿ ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ನಮ್ಮನ್ನು ಮಂತ್ರಿ ಮಾಡದೆ ಇದ್ದರೂ ಪರವಾಗಿಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪವರಿಗೆ ಕಿರುಕುಳ ಆಗುತ್ತಿದೆ. ಯಡಿಯೂರಪ್ಪವರಿಗೆ ಎಲ್ಲ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ಇದೇ ವೇಳೆ ಅನರ್ಹ ಶಾಸಕರಿಂದ ನಮ್ಮ ಬಿಜೆಪಿ ಸರ್ಕಾರ ಅಸ್ತಿತ್ವ ಬಂದಿದೆ. ಅನರ್ಹ ಶಾಸಕರು ಸಾಕಷ್ಟು ನೊಂದಿದ್ದಾರೆ. ರಾಜೀನಾಮೆ ನೀಡಿದ ಮೇಲೆ ಅನರ್ಹ ಶಾಸಕರಿಗೆ ಚಿತ್ರಹಿಂಸೆ ಆಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದು ಆಗಲಿ ಎಂದರು. ಅಲ್ಲದೆ ಅನರ್ಹ ಶಾಸಕರು ಮಂತ್ರಿಗಳಾಗಲಿ ಎಂದು ಹಾರೈಸಿದರು.

    ಸಂತ್ರಸ್ತರಿಗೆ 10 ಸಾವಿರ ಹೆಚ್ಚು ಎನ್ನುವ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಬಹಳ ಅನ್ಯಾಯವಾದಾಗ ಧ್ವನಿ ಎತ್ತುತ್ತೇನಿ. ಅದು ನನ್ನ ಪಕ್ಷ ಅಥವಾ ಬೇರೆ ಪಕ್ಷವಿದರೂ ಅನ್ಯಾಯ ಪರಾಕಾಷ್ಠೆ ಬಂದಾಗ ಉತ್ತರ ಕರ್ನಾಟಕದ ಪರ ಧ್ವನಿ ಮಾಡುತ್ತೇನೆ. ಸದ್ಯ ಈಶ್ವರಪ್ಪ ಹೇಳಿಕೆ ಪರ ಹಾಗೂ ವಿರೋಧ ಮಾಡಲ್ಲ. ಅದಕ್ಕಾಗಿ ನನ್ನನ್ನು ಬಲಿಪಶು ಮಾಡಬೇಡಿ ಎಂದು ಹೇಳಿದರು.