Tag: ಬಳ್ಳಾರಿ

  • ನೇಪಾಳದಲ್ಲಿ ಸಿಲುಕಿದೆ ಹೊಸಪೇಟೆಯ ಕುಟುಂಬ

    ನೇಪಾಳದಲ್ಲಿ ಸಿಲುಕಿದೆ ಹೊಸಪೇಟೆಯ ಕುಟುಂಬ

    ಬಳ್ಳಾರಿ: ನೇಪಾಳದ ಪೋಕ್ರಾದಲ್ಲಿ(Pokhara) ವಿಜಯನಗರ ಜಿಲ್ಲೆಯ ಹೊಸಪೇಟೆಯ ಗಿರೀಶ್‌ ಅವರ ಕುಟುಂಬ‌ ಸಿಲುಕಿಕೊಂಡಿದೆ.

    ಹೊಸಪೇಟೆಯಿಂದ (Hosapete) ಸೆ.6 ರಂದು ನೇಪಾಳಕ್ಕೆ (Nepal) ಪ್ರಯಾಣ ಬೆಳೆಸಿದ್ದ ಕುಟುಂಬ ಪೋಕ್ರಾದ ಹೋಟೆಲ್‌ನಲ್ಲಿ ಉಳಿದುಕೊಂಡಿದೆ. ಕನ್ನಡಿಗರು ಇದ್ದ ಹೋಟೆಲಿನ ಸಮೀಪದಲ್ಲೇ ಇದ್ದ ಮತ್ತೊಂದು ಹೊಟೇಲ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಗಿರೀಶ್‌ ಕುಟುಂಬ ಆತಂಕದಲ್ಲಿದೆ. ಇದನ್ನೂ ಓದಿ: ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

    ಮೊಬೈಲ್ ನೆಟ್ವರ್ಕ್‌  ಇಲ್ಲದೇ ಹೋಟೆಲಿನಿಂದ  ಹೊರ ಹೋಗಲಾಗದೇ ಆತಂಕದಲ್ಲಿದ್ದಾರೆ. ಸೆ.9 ರರಂದು ಪೋಕ್ರಾದಿಂದ ಕಠ್ಮಂಡುಗೆ ಹೋಗಲು ಗಿರೀಶ್ ಕುಟುಂಬ ಪ್ಲಾನ್ ಮಾಡಿತ್ತು.

    ಗಿರೀಶ್ ಜಿಂದಾಲ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ನೇಪಾಳದಲ್ಲಿ ರಸ್ತೆಗಳು ಕ್ಲಿಯರ್ ಆಗಿರುವ ಮಾಹಿತಿ ಇದ್ದು, ಸೈನಿಕರ‌ ಸಹಾಯದಿಂದ ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರಿಗೆ ಗಿರೀಶ್ ಮಾಹಿತಿ ನೀಡಿದ್ದಾರೆ‌. ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

  • Ballari | ಮಟ್ಕಾ ದಂಧೆ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಟ್ರಾಸಿಟಿ ಕೇಸ್

    Ballari | ಮಟ್ಕಾ ದಂಧೆ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಟ್ರಾಸಿಟಿ ಕೇಸ್

    ಬಳ್ಳಾರಿ: ಅಕ್ರಮ ಜೂಜಾಟ (Gambling) ಬಯಲು ಮಾಡಿದ ವ್ಯಕ್ತಿ ಮೇಲೆಯೇ ಪೊಲೀಸರು ಅಟ್ರಾಸಿಟಿ ಕೇಸ್ (Atrocity Case) ದಾಖಲಿಸಿರುವ ಘಟನೆ ಬಳ್ಳಾರಿಯ (Ballari) ಕಂಪ್ಲಿಯಲ್ಲಿ (Kampli) ಬೆಳಕಿಗೆ ಬಂದಿದೆ. ಕಂಪ್ಲಿ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

    ಕಳೆದ ವಾರ ಕಂಪ್ಲಿಯಲ್ಲಿ ಮಟ್ಕಾ ನಡೆಯುವ ಐದು ಸ್ಥಳಗಳಿಗೆ ಹೋಗಿ ನಾರಾಯಣಸ್ವಾಮಿ ಎಂಬವರು ವೀಡಿಯೋ ಮಾಡಿ, ಧಂದೆಯ ಕರಾಳ ಮುಖ ಬಯಲು ಮಾಡಿದ್ದರು. ಆದರೆ ಮಟ್ಕಾ ದಂಧೆ ಬಯಲಿಗೆಳೆದ ನಾರಾಯಣಸ್ವಾಮಿ ಮೇಲೆಯೇ ಮಟ್ಕಾ ಬರೆಸುತ್ತಿದ್ದ ಆರೋಪಿ ಜಂಬಣ್ಣ ಎನ್ನುವಾತ ಅಟ್ರಾಸಿಟಿ ಕೇಸ್ ಹಾಕಿದ್ದಾನೆ. ಮಟ್ಕಾ ದಂಧೆಕೋರ ಜಂಬಣ್ಣನಿಂದಲೇ ನಾರಾಯಣಸ್ವಾಮಿ ವಿರುದ್ಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಕುರ್ಚಿಯಲ್ಲಿ ಕುಳಿತು ನ್ಯಾಯ ಕೊಡುವುದು ಮುಖ್ಯ: ಬಿ.ವೈ.ವಿಜಯೇಂದ್ರ ಅಭಿಪ್ರಾಯ

    ಇದೇ ಮಟ್ಕಾ ದಂಧೆಕೋರ ಜಂಬಣ್ಣನ ವಿರುದ್ಧ ಮಟ್ಕಾ ಬರೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ನಿರಂತರವಾಗಿ ಮಟ್ಕಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದ ಕಾರಣಕ್ಕೆ ನಾರಾಯಣಸ್ವಾಮಿ ರಹಸ್ಯವಾಗಿ ವೀಡಿಯೋ ಮಾಡಿಕೊಂಡು ಬಂದಿದ್ದ. ಇದನ್ನೇ ನೆಪವಾಗಿ ಇಟ್ಟುಕೊಂಡ ಮಟ್ಕಾ ಬುಕ್ಕಿ ಜಂಬಣ್ಣ ನಾರಾಯಣಸ್ವಾಮಿ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾನೆ. ಹೀಗಾಗಿ ಜೀವ ಭಯದಲ್ಲಿ ಸಾಮಾಜಿಕ ಹೋರಾಟಗಾರ ನಾರಾಯಣ ಸ್ವಾಮಿ ಓಡಾಡುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | 3 ವರ್ಷಗಳಲ್ಲಿ 536 ಮಂದಿ ಆತ್ಮಹತ್ಯೆ – ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು!

    ಇನ್ನೂ ವೀಡಿಯೋ ಮಾಡುವ ವೇಳೆ ನಾರಾಯಣಸ್ವಾಮಿ ಮೇಲೆ ದಂಧೆಕೋರರು ಹಲ್ಲೆ ಮಾಡಿದ್ದರು. ಅಷ್ಟೆಲ್ಲಾ ಆದಮೇಲೂ ಪೊಲೀಸರು ರಕ್ಷಣೆ ನೀಡಿಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಕಂಪ್ಲಿ ಪೊಲೀಸರೇ ಮಟ್ಕಾ ಬುಕ್ಕಿಗಳಿಗೆ ಸಾಥ್ ನೀಡುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ಮುಂದೆ ನಾರಾಯಣಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಕಂಪ್ಲಿ ಸಿಪಿಐ ಮಟ್ಕಾಗೆ ಸಾಥ್ ಕೊಟ್ಟಿದ್ದಾರೆ. ಅದಕ್ಕೆ ನನ್ನ ಮೇಲೆ ಅಟ್ರಾಸಿಟಿ ಕೇಸ್ ಹಾಕಲಾಗಿದೆ. ಮಟ್ಕಾ ಬುಕ್ಕಿಗಳಿಂದ ನನಗೆ ಜೀವಭಯ ಇದೆ ಎಂದು ನಾರಾಯಣಸ್ವಾಮಿ ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಗದಗ | ಕಾರಿನ ಮೇಲೆ ಪಾಕ್ ಧ್ವಜ ಪ್ರದರ್ಶನ – ಅಪ್ರಾಪ್ತನ ವಿರುದ್ಧ ಕೇಸ್

  • ಸಂಡೂರಿನ ನಾರಿಹಳ್ಳದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ

    ಸಂಡೂರಿನ ನಾರಿಹಳ್ಳದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ

    ಬಳ್ಳಾರಿ: ಸಂಡೂರು ತಾಲೂಕಿನ ನಾರಿಹಳ್ಳದ ತಟದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆಯಾಗಿದೆ.

    10ನೇ ಶತಮಾನದ ವಿರುಪಾಕ್ಷ, ವಿಷ್ಣು ಆರಾಧನೆಯ ಶಿಲಾ ಶಾಸನ ಇದಾಗಿದ್ದು, ನಾರಿಹಳ್ಳದ ಬಳಿಯ ಬಂಡಿ ಬಸವೇಶ್ವರ ದೇವರ ಆವರಣದಲ್ಲಿ ಪತ್ತೆಯಾಗಿದೆ. ಶಾಸನದಲ್ಲಿ ಸೂರ್ಯ ಚಂದ್ರ ಶಿವಲಿಂಗ ನಕ್ಷತ್ರಗಳನ್ನ ಕಾಣಬಹುದಾಗಿದೆ.

    ಹತ್ತು ಅಡಿ ಎತ್ತರ ಇರುವ ಕಲ್ಲಿನಲ್ಲಿ ಆರು ಸಾಲುಗಳು ಬರೆದಿರುವ ಶಾಸನ ಇದಾಗಿದೆ. ದೇವರ ಆರಾಧನೆ ಹಾಗೂ ಮರುಜನ್ಮ ಮತ್ತು ಮೋಕ್ಷಕ್ಕೆ ಸಂಬಂಧಿಸಿದ ಶಾಸನ ಎನ್ನಲಾಗಿದ್ದು, ಈ ಶಾಸನದ ಕಾಲಾವಧಿ ಉಲ್ಲೇಖವಾಗಿಲ್ಲ‌. ಇದನ್ನೂ ಓದಿ: ಕತಾರ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ನಾಯಕನ ಪುತ್ರ ಸೇರಿ 6 ಮಂದಿ ಬಲಿ ಟಾಪ್‌ ಲೀಡರ್‌ ಪಾರು

    ಲಿಪಿಯ ಶೈಲಿ ಹಾಗೂ ದುರ್ಮುಖಿ ಸಂವತ್ಸರ ಮಾರ್ಗಶಿರಾ ಕಾರ್ತಿಕ ಎಂದು ಉಲ್ಲೇಖವಾಗಿರುವುದರಿಂದ  ಇದು 10ನೇ ಶತಮಾನದ್ದು ಎಂದು ಹೇಳಲಾಗುತ್ತಿದೆ. ವಿಜಯನಗರ ತಿರುಗಾಟ ಅಲೆಮಾರಿ ಸಂಶೋಧನಾ ತಂಡದ ಡಾ. ಪ್ರೊಫೆಸರ್ ತಿಪ್ಪೇಸ್ವಾಮಿ, ಡಾ. ಕೃಷ್ಣಗೌಡ ಇವರ ನೇತೃತ್ವದ ತಂಡ ಈ ಶಾಸನ ಪತ್ತೆ ಹಚ್ಚಿದೆ.

  • ಶಿಕ್ಷಣ ಸಚಿವರೇ ಗಮನಿಸಿ, ಉದುರಿ ಬೀಳ್ತಿದೆ ಮೇಲ್ಛಾವಣಿ – ಆತಂಕದಲ್ಲಿಯೇ ಹಾಜರಾಗುತ್ತಿದ್ದಾರೆ ವಿದ್ಯಾರ್ಥಿಗಳು

    ಶಿಕ್ಷಣ ಸಚಿವರೇ ಗಮನಿಸಿ, ಉದುರಿ ಬೀಳ್ತಿದೆ ಮೇಲ್ಛಾವಣಿ – ಆತಂಕದಲ್ಲಿಯೇ ಹಾಜರಾಗುತ್ತಿದ್ದಾರೆ ವಿದ್ಯಾರ್ಥಿಗಳು

    ಬಳ್ಳಾರಿ: ಮಳೆ ಬಂದ್ರೆ ಸೋರುತ್ತದೆ, ಮೇಲ್ಛಾವಣಿಯಿಂದ ಆಗಾಗ ಬೀಳುತ್ತಿದೆ ಸಿಮೆಂಟಿನ ಪದರು – ಸರ್ಕಾರಿ ಶಾಲೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ ಸಿರುಗುಪ್ಪ ತಾಲ್ಲೂಕಿನ ಗಜಗಿನಹಾಳು ಗ್ರಾಮದ ಸರ್ಕಾರಿ ಶಾಲೆ.

    ಹೌದು. ಕೊಠಡಿಯ ಮೇಲ್ಛಾವಣಿ ಉದುರಿ ಬೀಳುತ್ತಿದ್ದರೂ ಆತಂಕದಲ್ಲೇ ಪಾಠ ಕೇಳುವ ಅನಿವಾರ್ಯತೆ ಗಜಗಿನಹಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳದ್ದು.

    ಮಳೆ ಬಂದರೆ ಶಾಲೆಯ ಮೇಲ್ಚಾವಣಿಯಿಂದ ತಟ್ ತಟ್ ಅಂತಾ ನೀರು ಸೋರುತ್ತೆ. ಅಲ್ಲದೇ ಮೇಲ್ಛಾವಣಿಯ ಸಿಮೆಂಟ್ ಪದರು ಆಗಾಗ ಉದುರಿಯೂ ಬೀಳುತ್ತಿದೆ. ಇದನ್ನೂ ಓದಿ:ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ

    ಶಾಲೆಯ ಮೇಲ್ಛಾವಣಿ ಉದುರಿ ಬೀಳುತ್ತಿರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಹಿಂದೇಟು ಹಾಕುತ್ತಿದ್ದಾರೆ. ಕೊಠಡಿ ಸಮಸ್ಯೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ಜೀವಕ್ಕೆ ಅಪಾಯವಾದಾಗಲೇ ಎಚ್ಚೆತ್ತುಕೊಳ್ತಾರಾ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿದ್ಯಾರ್ಥಿಗಳು ಸಹಿತ ಕೊಠಡಿಯಲ್ಲಿ ಕುಳಿತುಕೊಳ್ಳುವ ಭಯ ಆಗುತ್ತಿದೆ. ನಮಗೆ ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

     

  • ಶಿರಗುಪ್ಪದಲ್ಲಿ ಧರ್ಮಸಭೆ; ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ತಡೆ

    ಶಿರಗುಪ್ಪದಲ್ಲಿ ಧರ್ಮಸಭೆ; ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ತಡೆ

    ಕಲಬುರಗಿ: ಬಳ್ಳಾರಿಯ ಶಿರಗುಪ್ಪದಲ್ಲಿ ಆಯೋಜನೆಗೊಂಡಿದ್ದ ಹಿಂದೂ ಮಹಾಗಣಪತಿ ಧರ್ಮ ಸಭೆಯಲ್ಲಿ ಭಾಗಿಯಾಗಲು ಹೊರಟಿದ್ದ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ (Siddalinga Swamiji) ಬಳ್ಳಾರಿ (Ballary) ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

    ಬುಧವಾರ ಬೆಳಗ್ಗೆ ಶಿರಗುಪ್ಪದಲ್ಲಿ ಹಿಂದೂ ಮಹಾಗಣಪತಿಯ ಪೂಜೆಗೆ ಹೊರಟಿದ್ದ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಆದೇಶ ಪ್ರಕಾರ ಸೆಪ್ಟೆಂಬರ್ 3ರಿಂದ 10 ವರೆಗೆ 8 ದಿನಗಳವರೆಗೆ ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌ಗೆ ʻಕರ್ನಾಟಕ ರತ್ನʼ..?

    ಕಾಂಗ್ರೆಸ್ ಸರ್ಕಾರ ಮುಂದುವರೆದ ಹಿಂದೂ ಧಮನ ನೀತಿಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದುಗಳ ಧಾರ್ಮಿಕ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ಸರ್ಕಾರದ ಷಡ್ಯಂತ್ರ ಇದು. ಹಿಂದೂ ಸಮುದಾಯದ ಧರ್ಮಸಭೆಗೆ ನಿಷೇಧ ಹೇರುವುದರಿಂದ ಜನರ ಮನೋಭಾವನೆಗಳನ್ನು ದಮನಗೊಳಿಸುವ ಯತ್ನ ನಡೆಯುತ್ತಿದೆ ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಐತಿಹಾಸಿಕ ಗೆಲುವಿನ ಸಂತೋಷದ ಕ್ಷಣ ದುರಂತವಾಯ್ತು – ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಟ್ವೀಟ್

     ಇತ್ತೀಚಿಗಷ್ಟೇ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಿವಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದರು.

  • ದಿಢೀರ್‌ 1 ಸಾವಿರ ರೂ. ಇಳಿಕೆ – ಕಟಾವು ಮಾಡದೇ ಕಣ್ಣೀರಿಡುತ್ತಿದ್ದಾರೆ ಈರುಳ್ಳಿ ಬೆಳೆಗಾರರು

    ದಿಢೀರ್‌ 1 ಸಾವಿರ ರೂ. ಇಳಿಕೆ – ಕಟಾವು ಮಾಡದೇ ಕಣ್ಣೀರಿಡುತ್ತಿದ್ದಾರೆ ಈರುಳ್ಳಿ ಬೆಳೆಗಾರರು

    ಬಳ್ಳಾರಿ: ದಿಢೀರ್‌ ಬೆಲೆ ಕುಸಿತದಿಂದಾಗಿ ಈರುಳ್ಳಿ (Onion) ಬೆಳೆದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಅನ್ನದಾತರು (Farmers) ಕಣ್ಣೀರು ಹಾಕಿದ್ದಾರೆ.

    ಮಾರುಕಟ್ಟೆಯಲ್ಲಿ ತಿಂಗಳ ಹಿಂದೆ ಕ್ವಿಂಟಾಲ್‌ಗೆ 2500-3000 ಸಾವಿರ ರೂ. ಇದ್ದ ದರ ಈಗ ಏಕಾಏಕಿ 1,500 ರೂ.ಗೆ ಕುಸಿದಿದೆ. ಬಳ್ಳಾರಿ (Ballari) ಹಾಗೂ ವಿಜಯನಗರ (Vijayangara) ಜಿಲ್ಲೆಯಲ್ಲಿ 35,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ದರ ಇಲ್ಲದ ಕಾರಣ ಹೊಲದಲ್ಲಿಯೇ ಈರುಳ್ಳಿ ಬೆಳೆ ಬಿಟ್ಟಿದ್ದಾರೆ. ಇದನ್ನೂ ಓದಿ: ಯಾವ ಕ್ಷಣದಲ್ಲಾದ್ರೂ ಸೂಪಾ ಡ್ಯಾಮ್‌ನಿಂದ ನೀರು ಬಿಡುಗಡೆ ಪ್ರವಾಹದ ಬಗ್ಗೆ ಕೆಪಿಟಿಸಿಎಲ್‌ನಿಂದ ಅಂತಿಮ ಎಚ್ಚರಿಕೆ

    ಕಟಾವು ಮಾಡಿ ಮಾರುಕಟ್ಟೆಗೆ ಸಾಗಾಟ ಮಾಡಿದರೆ ನಷ್ಟ ಅನುಭವಿಸುವ ಭೀತಿಯಲ್ಲಿ ರೈತರಿದ್ದಾರೆ. ಸದ್ಯ ಇರುವ ಬೆಲೆಗೆ ಈರುಳ್ಳಿ ಮಾರಾಟ ಮಾಡಿದರೆ ಖರ್ಚು ಮಾಡಿದಷ್ಟೂ ಹಣ ಬರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಸೂಕ್ತ ಬೆಲೆ ನಿಗದಿ ಮಾಡಿ ಕೇಂದ್ರ- ರಾಜ್ಯ ಸರ್ಕಾರಗಳು ಈರುಳ್ಳಿ ಬೆಳೆಗಾರ ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

  • ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ- ಸಂಚಾರಕ್ಕೆ ಕಂಪ್ಲಿ ಸೇತುವೆ ಮುಕ್ತ

    ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ- ಸಂಚಾರಕ್ಕೆ ಕಂಪ್ಲಿ ಸೇತುವೆ ಮುಕ್ತ

    ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) ಹೊರ ಹರಿವು ಇಳಿಕೆಯಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕಂಪ್ಲಿ ಸೇತುವೆಯನ್ನು(Kampli Bridge) ತೆರೆಯಲಾಗಿದೆ.

    ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಿದ್ದರಿಂದ ಕಂಪ್ಲಿ ಸೇತುವೆ ಜಲಾವೃತವಾಗಿತ್ತು. ನಿನ್ನೆ ಸಂಜೆಯಿಂದ ನದಿಗೆ ಹೊರಹರಿವು ಕಡಿಮೆ ಮಾಡಿದ್ದರಿಂದ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.ಇದನ್ನೂ ಓದಿ: ಅಪಾಯ‌ಮಟ್ಟ ಮೀರಿದ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಗಳು ಪ್ರವಾಹ ಭೀತಿಯಲ್ಲಿ ಜನ

     

    ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಬಳ್ಳಾರಿ-ಗಂಗಾವತಿ (Ballari-Gangavathi) ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮಲೆ‌ನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದ ಕಾರಣ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಇದನ್ನೂ ಓದಿ: ಬೆಂಗಳೂರು | ಗಣೇಶ ಚತುರ್ಥಿಯ ಪ್ರಯುಕ್ತ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಸುಗಳ ಸಂಚಾರ

    ನಾಲ್ಕು ದಿನಗಳ ಕಾಲ ಕಂಪ್ಲಿ ಸೇತುವೆ ಜಲಾವೃತ ಆಗಿತ್ತು. ನಿನ್ನೆ ಸಂಜೆಯಿಂದ ಹಂತ ಹಂತವಾಗಿ ನದಿ ನೀರಿನ ಮಟ್ಟ ಇಳಿಕೆಯಾಗಿದ್ದರಿಂದ ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೇತುವೆ ಮೇಲೆ ವಾಹನ ಓಡಾಟಕ್ಕೂ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.

  • ಪೋಷಕರಿಗೆ ಸೆಡ್ಡು – ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನೇ ನಿಲ್ಲಿಸಿದ ಬಾಲಕಿ

    ಪೋಷಕರಿಗೆ ಸೆಡ್ಡು – ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನೇ ನಿಲ್ಲಿಸಿದ ಬಾಲಕಿ

    – ಎಸ್‌ಎಸ್‌ಎಲ್‌ಸಿಯಲ್ಲಿ 94% ಅಂಕ ಪಡೆದಿದ್ದ ವಿದ್ಯಾರ್ಥಿನಿ
    – ಮನೆಗೆ ಅಧಿಕಾರಿಗಳ ಭೇಟಿ, ಶಿಕ್ಷಣಕ್ಕೆ ಸಹಾಯ

    ಬಳ್ಳಾರಿ: ಪೋಷಕರ ನಿರ್ಧಾರಕ್ಕೆ ಸೆಡ್ಡು ಹೊಡೆದು ಬಾಲಕಿಯೇ ತನ್ನ ಬಾಲ್ಯ ವಿವಾಹವನ್ನು ನಿಲ್ಲಿಸಿದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

    ಪೋಷಕರು ವಿವಾಹ ಮಾಡುತ್ತಿರುವ ವಿಚಾರ ಗೊತ್ತಾಗಿ ಬಾಲಕಿಯೇ ಧೈರ್ಯ ಮಾಡಿ ತನ್ನ ಮದುವೆ ನಿಲ್ಲಿಸಿ ಎಂದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಳು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬಂದ ತಹಶೀಲ್ದಾರ್‌, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮದುವೆಗೆ ಬ್ರೇಕ್ ಹಾಕಿದ್ದಾರೆ.

     

    ಎಸ್‌ಎಸ್‌ಎಲ್‌ಸಿಯಲ್ಲಿ 94% ಅಂಕ ಪಡೆದಿದ್ದ ಬಾಲಕಿ ಉನ್ನತ ವ್ಯಾಸಂಗದ ಕನಸು ಕಂಡಿದ್ದಳು. ಆದರೆ ಪೋಷಕರು ಮದುವೆ ಮಾಡಿ ಕೈ ತೊಳೆದುಕೊಳ್ಳಲು ಯೋಚನೆ ಮಾಡಿದ್ದರು. ಹುಡುಗನನ್ನು ನೋಡಿ ಇನ್ನೇನು ಒಂದು ತಿಂಗಳೊಳಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದರು.   ಇದನ್ನೂ ಓದಿ: ಟೀಚರ್ಮೇಲೆ ಸಿಕ್ಕಾಪಟ್ಟೆ ಲವ್ ದೂರು ನೀಡಿದ್ದಕ್ಕೆ ಪೆಟ್ರೋಲ್ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ

    ತನ್ನ ಮದುವೆಯಾಗಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಆಕೆ ಧೈರ್ಯ ಮಾಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ತಕ್ಷಣ ಎಚ್ಚೆತ್ತ ಹಗರಿಬೊಮ್ಮನಹಳ್ಳಿಯ ತಾಲೂಕು ಆಡಳಿತ ಬಾಲಕಿ ಮನೆಗೆ ದೌಡಾಯಿಸಿದ್ದಾರೆ.

    ಪೋಷಕರಿಗೆ ಬುದ್ಧಿ ಹೇಳುವ ಮೂಲಕ ಅಧಿಕಾರಿಗಳು ಬಾಲಕಿಗೆ ಕಾಲೇಜೊಂದರಲ್ಲಿ ಸೀಟ್ ಕೊಡಿಸಿ ಹಾಸ್ಟೆಲ್ ವ್ಯವಸ್ಥೆ ಮಾಡಿದ್ದಾರೆ. ಬಾಲಕಿಯ ದಿಟ್ಟ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

  • ಕರ್ತವ್ಯ ನಿರತ ASI ಹೃದಯಾಘಾತಕ್ಕೆ ಬಲಿ

    ಕರ್ತವ್ಯ ನಿರತ ASI ಹೃದಯಾಘಾತಕ್ಕೆ ಬಲಿ

    ಬಳ್ಳಾರಿ: ರಾಜಸ್ಥಾನದ (Rajastan) ಜೋಧ್‌ಪುರಕ್ಕೆ ಕರ್ತವ್ಯ ನಿಮಿತ್ತ ತೆರಳಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆಯ ಗ್ರಾಮೀಣ ಠಾಣೆ ಎಎಸ್‌ಐ (ASI) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್‌ಐ ಹಾಲಪ್ಪ (56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆ.17ರಂದು ಕರ್ತವ್ಯದ ಮೇಲೆ ಹೊಸಪೇಟೆಯಿಂದ ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದರು. ಇದನ್ನೂ ಓದಿ: ದೆಹಲಿ ಸಿಎಂಗೆ ಕಪಾಳಮೋಕ್ಷ – ತಿಹಾರ್‌ ಜೈಲಿನಲ್ಲಿದ್ದ ತನ್ನ ಸಂಬಂಧಿ ಬಿಡಿಸೋದಕ್ಕಾಗಿ ರೇಖಾ ಗುಪ್ತಾ ಭೇಟಿಗೆ ಬಂದಿದ್ದ ವ್ಯಕ್ತಿ

    ಹೊಸಪೇಟೆಯ ಗ್ರಾಮೀಣ ಠಾಣೆಯ ಎಎಸ್‌ಐ ಹಾಲಪ್ಪ ಅವರು ಸೇರಿದಂತೆ ಪೊಲೀಸ್ ಕಾನ್ಸ್ಟೇಬಲ್‌ ಹಾಗೂ ಹೆಡ್ ಕಾನ್ಸ್ಟೇಬಲ್‌ ತೆರಳಿದ್ದರು. ಕರ್ತವ್ಯದಲ್ಲಿದ್ದ ವೇಳೆಯೇ ಹಾಲಪ್ಪ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

    ಮೃತ ಎಎಸ್‌ಐ ಹಾಲಪ್ಪ ಅವರು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದವರಾಗಿದ್ದರು. ನಾಳೆ ಸ್ವಗ್ರಾಮ ಹಿರೇಹಡಗಲಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ತುಂಗಭದ್ರಾ ಜಲಾಶಯದಿಂದ 1.15 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಕಂಪ್ಲಿ ಸೇತುವೆ ಮುಳುಗಡೆ

    ತುಂಗಭದ್ರಾ ಜಲಾಶಯದಿಂದ 1.15 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಕಂಪ್ಲಿ ಸೇತುವೆ ಮುಳುಗಡೆ

    – ಬಳ್ಳಾರಿ – ಗಂಗಾವತಿ ಸಂಪರ್ಕ ಕಡಿತ

    ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಒಳ ಹರಿವು ಹೆಚ್ಚಳವಾಗಿದ್ದರಿಂದ ಜಲಾಶಯದಿಂದ ನದಿಗೆ 1,17,057 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

    ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಸದ್ಯ ತುಂಗಭದ್ರಾ ಜಲಾಶಯಕ್ಕೆ 1,15,722 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಪಾರ ಪ್ರಮಾಣದ ನೀರು ಹರಿದು ಬರ್ತಿರೋದ್ರಿಂದ ಜಲಾಶಯದಿಂದ ನದಿಗೆ 1,17,057 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ.

    ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್ ಮಾಡಿರುವುದರಿಂದ ಬಳ್ಳಾರಿ-ಗಂಗಾವತಿ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಬಳ್ಳಾರಿ-ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಮತ್ತೊಂದೆಡೆ ಕಂಪ್ಲಿ ಪಟ್ಟಣದ ನದಿ ತೀರದ ಮೀನುಗಾರರ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನದಿ ಪಾತ್ರದ ಜನ, ಜಾನುವಾರು ನದಿ ತೀರಕ್ಕೆ ತೆರಳದಂತೆ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ.