Tag: ಬಳ್ಳಾರಿ ಸೆಂಟ್ರಲ್ ಜೈಲು

  • ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದ ದರ್ಶನ್ ಮೆಡಿಕಲ್ ರಿಪೋರ್ಟ್

    ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದ ದರ್ಶನ್ ಮೆಡಿಕಲ್ ರಿಪೋರ್ಟ್

    -ಮೆಡಿಕಲ್ ಬೆಡ್, ಚೇರ್ ಬಗ್ಗೆಯೂ ವರದಿಯಲ್ಲಿ ಉಲ್ಲೇಖ

    ಬಳ್ಳಾರಿ: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಆರೋಪಿ ದರ್ಶನ್ (Actor Darshan) ಅವರ ಮೆಡಿಕಲ್ ರಿಪೋರ್ಟ್ ಬಳ್ಳಾರಿ (Ballary)  ಜೈಲಧಿಕಾರಿಗಳ ಕೈ ಸೇರಿದೆ.

    ಕಳೆದ ವಾರವಷ್ಟೇ ಬಳ್ಳಾರಿ ವಿಮ್ಸ್ ಆಸ್ಪತ್ರೆಯ (VIMS) ಆರ್ಥೋಪಿಡಿಷನ್ ಹಾಗೂ ನ್ಯೂರೋ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಇದೀಗ ಮೆಡಿಕಲ್ ರಿಪೋರ್ಟ್ (Medical Report) ಸಲ್ಲಿಸಿರುವ ವೈದ್ಯರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಬೆನ್ನು ನೋವು ನಿಯಂತ್ರಣಕ್ಕೆ ಫಿಜಿಯೋ ಜೊತೆಗೆ ಎರಡು ಬಾರಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು ಹಾಗೂ ಕೆಲವು ಮಾತ್ರೆ, ಮುಲಾಮು ನೀಡುವಂತೆ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ದರ್ಶನ್‌, ಪವಿತ್ರಾಗೆ ನೋ ರಿಲೀಫ್‌ – ಕೋರ್ಟ್‌ ಜಾಮೀನು ನೀಡದ್ದು ಯಾಕೆ?

    ವಿಮ್ಸ್ನ ನರರೋಗ ತಜ್ಞ ವೈದ್ಯ ಡಾ.ವಿಶ್ವನಾಥ್ ಸಲ್ಲಿಕೆ ಮಾಡಿರುವ ಮೆಡಿಕಲ್ ರಿಪೋರ್ಟ್ನಲ್ಲಿ ಆರೋಪಿ ದರ್ಶನ್‌ಗೆ ನರಗಳಿಂದ ಬೆನ್ನು ನೋವಾಗುತ್ತಿದೆ ಹೌದು. ಹೀಗಾಗಿ ಇಂದಿನಿಂದಲೇ ಜೈಲಿನಲ್ಲಿ ಫಿಜಿಯೋಥೆರಪಿ ನೀಡಬೇಕು ಎಂದು ಜೈಲಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ್ತೊಂದೆಡೆ ಮೆಡಿಕಲ್ ಬೆಡ್, ಚೇರ್ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

    ಇನ್ನೂ ದರ್ಶನ್ ಮೆಡಿಕಲ್ ರಿಪೋರ್ಟ್‌ನ್ನು ಬಳ್ಳಾರಿ ಜೈಲಧಿಕಾರಿಗಳು ಮೇಲಧಿಕಾರಿಗಳಿಗೆ ಮೇಲ್ ಮಾಡಿದ್ದಾರೆ. ಜೊತೆಗೆ ಮುಂದಿನ ಚಿಕಿತ್ಸಾ ಕ್ರಮ, ಮೆಡಿಕಲ್ ಬೆಡ್, ಚೇರ್, ವೈದ್ಯಕೀಯ ಸಲಕರಣೆ ಹಾಗೂ ಕೆಲವು ಮಾತ್ರೆಗಳ ನೀಡಲು ಸಲಹೆ ಕೇಳಿದ್ದಾರೆ. ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್, ಚೇರ್ ನೀಡುವ ಸಾಧ್ಯತೆಯಿದೆ.ಇದನ್ನೂ ಓದಿ:ಕೊಲೆ ಆರೋಪಿ ದರ್ಶನ್‌, ಪವಿತ್ರಾಗೆ ಬಿಗ್ ಡೇ – ಜಾಮೀನು ಭವಿಷ್ಯ ಇಂದು ನಿರ್ಧಾರ

  • ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಬಂದ ಅಭಿಮಾನಿ

    ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಬಂದ ಅಭಿಮಾನಿ

    ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballari Central Jail) ಕೊಲೆ ಆರೋಪಿ ನಟ ದರ್ಶನ್ (Darshan) ನೋಡಲು ಟೆಡ್ಡಿಬೇರ್ (Teddy Bear) ವೇಷ ಧರಿಸಿ ಅಭಿಮಾನಿಯೊಬ್ಬ ಬಳ್ಳಾರಿ ಜೈಲಿಗೆ ಬಂದಿದ್ದಾನೆ.

    ಶಿವಮೊಗ್ಗ (Shivamogga) ಜಿಲ್ಲೆ ಸಾಗರದ ಕಾರ್ತಿಕ್ ಎನ್ನುವ ಅಭಿಮಾನಿ ಟೆಡ್ಡಿಬೇರ್ ವೇಷ ಧರಿಸಿ ‘ವಿ ಆರ್ ವೇಟಿಂಗ್ ಫಾರ್ ಯೂ ಡಿ ಬಾಸ್’ ಎಂಬ ಸಂದೇಶದ ಫಲಕ ಹಿಡಿದು, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ. ಇದೇ ವೇಳೆ ಆರೋಪಿ ದರ್ಶನ್ ಭೇಟಿಗೆ ಅವಕಾಶ ಕೇಳಿದ್ದ. ಆದರೆ ಅಭಿಮಾನಿ ಕಾರ್ತಿಕ್‌ಗೆ ಜೈಲು ಸಿಬ್ಬಂದಿ ಅವಕಾಶ ನಿರಾಕರಿಸಿದರು. ಅವರ ಕುಟುಂಬಸ್ಥರ ಒಪ್ಪಿಗೆ ಇಲ್ಲದೇ ಯಾರಿಗೂ ಭೇಟಿಗೆ ಅವಕಾಶ ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಿದರು. ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರುನೇಮಕ

    ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಅದಷ್ಟು ಬೇಗ ನಮ್ಮ ಬಾಸ್ ಜೈಲಿನಿಂದ ಹೊರಬರಬೇಕು ಎಂದು ಹೇಳುತ್ತಾ ಅಭಿಮಾನಿ ಕಾರ್ತಿಕ್ ವಾಪಸ್‌ ತೆರಳಿದ್ದಾನೆ. ಇದನ್ನೂ ಓದಿ: ವಿಜಯೇಂದ್ರ ಏನು ಪುರೋಹಿತನಾ, ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ

  • ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಬೆನ್ನಲ್ಲೇ ದರ್ಶನ್‌ಗೆ ಐಟಿ ಕಂಟಕ

    ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಬೆನ್ನಲ್ಲೇ ದರ್ಶನ್‌ಗೆ ಐಟಿ ಕಂಟಕ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರನ್ನು ಆದಾಯ ತೆರಿಗೆ ಇಲಾಖೆ (Income Tax Department) ವಿಚಾರಣೆ ನಡೆಸಲಿದೆ.

    ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿದ್ದ ದರ್ಶನ್ ಅವರನ್ನು ರಾಜಾತಿಥ್ಯ ಪ್ರಕರಣದ ಬಳಿಕ ಬಳ್ಳಾರಿ ಸೆಂಟ್ರಲ್ ಜೈಲಿಗೆ (Ballary Central Jail) ವರ್ಗಾಯಿಸಲಾಗಿತ್ತು. ಇಂದು (ಸೆ.23ರಂದು) ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.ಇದನ್ನೂ ಓದಿ:ರೇಣುಕಾ ಹತ್ಯೆ ಕೇಸ್‌ – ಮೂವರಿಗೆ ಜಾಮೀನು ಮಂಜೂರು

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 70 ಲಕ್ಷ ರೂ. ಸಿಕ್ಕಿರುವ ಕಾರಣ ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ (Magistrate Court) ಮನವಿ ಸಲ್ಲಿಸಿದ್ದರು. ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ (Darshan) ಅವರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮನವಿಗೆ ಕೋರ್ಟ್ ಒಪ್ಪಿಗೆ ಸೂಚಿಸಿದೆ.

    ಕೋರ್ಟ್ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದರ್ಶನ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಕೇಸ್‌ – ಮೊದಲ ಜಾಮೀನು ಮಂಜೂರು

  • ಬಳ್ಳಾರಿ ಜೈಲಿನಲ್ಲಿ ಚೇರ್‌ಗೆ ಬೇಡಿಕೆ ಇಟ್ಟ ದರ್ಶನ್ – `ದಾಸ’ನ ಆಸೆಗೆ ತಣ್ಣೀರು ಎರಚಿದ ಜೈಲಧಿಕಾರಿಗಳು

    ಬಳ್ಳಾರಿ ಜೈಲಿನಲ್ಲಿ ಚೇರ್‌ಗೆ ಬೇಡಿಕೆ ಇಟ್ಟ ದರ್ಶನ್ – `ದಾಸ’ನ ಆಸೆಗೆ ತಣ್ಣೀರು ಎರಚಿದ ಜೈಲಧಿಕಾರಿಗಳು

    – ಕೋರ್ಟ್ ಆದೇಶ ಬರುವವರೆಗೂ ಚೇರ್ ಕೊಡದಿರಲು ನಿರ್ಧಾರ

    ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೇ ಬೇಡಿಕೆ ಇಡುತ್ತಿರುವ ದರ್ಶನ್ ಇದೀಗ ಚೇರ್‌ಗೆ ಬೇಡಿಕೆ ಇಟ್ಟಿದ್ದು, ದರ್ಶನ್ ಬೇಡಿಕೆಗೆ ಜೈಲಧಿಕಾರಿಗಳು ತಣ್ಣೀರು ಎರಚಿದ್ದಾರೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದ ಕೊಲೆ ಆರೋಪಿ ದರ್ಶನ್‌ಗೆ ಬಳ್ಳಾರಿ ಸೆಂಟ್ರಲ್ ಜೈಲು (Ballary Central Jail) ನರದಕರ್ಶನ ಮಾಡಿಸುತ್ತಿದೆ. ಮ್ಯಾನುವಲ್ ಬಿಟ್ಟು ಹೆಚ್ಚುವರಿಯಾಗಿ ಅದೇನೇ ಬೇಡಿಕೆ ಇಟ್ಟರೂ ಜೈಲಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಜಿಕಲ್ ಕಮೋಡ್, ವಿಟಮಿನ್ ಟ್ಯಾಬ್ಲೇಟ್ ಹಾಗೂ ಟಿವಿ ಬಳಿಕ ಇದೀಗ ಕುಳಿತುಕೊಳ್ಳೋಕೆ ಚೇರ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ದರ್ಶನ್‌ಗೆ ಜೈಲಧಿಕಾರಿಗಳು ನಿಜ ಜೈಲು ಹೇಗಿರುತ್ತದೆ ಎಂಬ ರುಚಿಯನ್ನು ತೋರಿಸುತ್ತಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಾಣಭಿಕ್ಷೆಗೆ ಅಂಗಲಾಚುತ್ತಿರೋದು ‘ಎಐ’ ಫೋಟೊ? – ಆರೋಪಿ ಮೊಬೈಲ್ ಮತ್ತೆ FSL ಪರೀಕ್ಷೆಗೆ

    ಆರೋಪಿ ದರ್ಶನ್ (Actor Darshan) ಎಂತಹ ದೊಡ್ಡ ಸ್ಟಾರ್ ಆಗಿದ್ದರೂ ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ಅವರನ್ನು ಸ್ಟ್ರಿಕ್ಟ್ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಆದ ಕಾರಣ ದರ್ಶನ್ ಜೈಲಿನ ಮ್ಯಾನುವಲ್ ಪ್ರಕಾರವೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಯಾವುದೂ ಸುಲಭವಾಗಿ ಸಿಗದೇ ಇರುವ ಕಾರಣಕ್ಕೆ ಒಂದೊಂದೇ ಬೇಡಿಕೆಯನ್ನ ಜೈಲಧಿಕಾರಿಗಳ ಮುಂದೆ ಇಡುತ್ತಿದ್ದಾರೆ.

    ಜೈಲಧಿಕಾರಿಗಳು ಟಿವಿ ನೀಡಿದ ಬಳಿಕ ವಿಟಮಿನ್ ಟ್ಯಾಬ್ಲೇಟ್ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆರೋಪಿ ದರ್ಶನ್ ಚೇರ್ ಬೇಡಿಕೆ ಇಟ್ಟ ಬಳಿಕ ಜೈಲಧಿಕಾರಿಗಳು ಚೇರ್ ಕೊಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ನಿನ್ನೆ (ಸೆ.17) ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಿದ್ದರಿಂದ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆ ವೇಳೆ ಆರೋಪಿ ದರ್ಶನ್ ಪರ ವಕೀಲರು ದರ್ಶನ್‌ಗೆ ತುಂಬಾ ಬೆನ್ನು ನೋವು ಇದೆ. ನೆಲದ ಮೇಲೆ ಕೂಡುವುದಕ್ಕೂ ಅಗುತ್ತಿಲ್ಲ. ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕೆ ಜೈಲಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಎಲ್ಲ ವ್ಯವಸ್ಥೆ ಇದೆ. ಎನ್‌ಐಎ ಕೇಸ್‌ನಲ್ಲಿರುವ ಆರೋಪಿಗಳಿಗೆ ವ್ಯವಸ್ಥೆ ಇದೆ. ಆದರೆ ದರ್ಶನ್‌ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಫುಲ್ ಹೈ ಸೆಕ್ಯೂರಿಟಿ ಎಂದು ಹೇಳುತ್ತಾರೆ. ಸರಿಯಾದ ವ್ಯವಸ್ಥೆ ಕೂಡ ಸಿಗುತ್ತಿಲ್ಲ ಎಂದು ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ವಿರುದ್ಧ ಮಾರುದ್ದ ಆರೋಪ ಮಾಡಿದ್ದರು.

    ಆರೋಪಿ ದರ್ಶನ್ ಜೈಲಿನಲ್ಲಿ ಚೇರ್ ಕೇಳೇ ಇಲ್ಲವಂತೆ. ಬೆನ್ನು ನೋವಿದೆ ಎಂದು ಒಂದು ದಿಂಬನ್ನು ಕೇಳಿದ್ದರು. ಜೈಲು ಮ್ಯಾನುಯಲ್ ಪ್ರಕಾರ ಇದ್ದರೆ ಕೊಡುತ್ತಾರೆ ಅಂದಿದ್ದರು. ಆದರೆ ಜೈಲಿನ ಮ್ಯಾನುವಲ್ ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಜೈಲಧಿಕಾರಿಗಳು ದಿಂಬನ್ನು ಕೊಟ್ಟಿಲ್ಲ. ಚೇರ್ ಕೊಡುವ ಬಗ್ಗೆ ಕೋರ್ಟ್ ಆದೇಶ ಮಾಡಿದರೆ ಮಾತ್ರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬಳ್ಳಾರಿ ಜೈಲಿನ ಮೂಲಗಳ ಪ್ರಕಾರ ಮಾಹಿತಿ ತಿಳಿದು ಬಂದಿದೆ.

    ಒಟ್ಟಿನಲ್ಲಿ ಆರೋಪಿ ದರ್ಶನ್ ಅವರನ್ನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಇಟ್ಟ ನಂತರ ಭದ್ರತೆ ದೃಷ್ಟಿಯಿಂದ ರಕ್ತ ಸಂಬಂಧಿಕರನ್ನು ಬಿಟ್ಟು ಯಾರೊಬ್ಬರನ್ನು ಭೇಟಿ ಅವಕಾಶ ಇರಲಿಲ್ಲ. ಕೋರ್ಟ್ ಅನುಮತಿ ನೀಡಿದ ಬಳಿಕ ಆಪ್ತರ ಬೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಬಂದಿದ್ದರು.ಇದನ್ನೂ ಓದಿ: ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

    ಇನ್ನೂ ಚೇರ್ ವಿಚಾರದಲ್ಲೂ ಕ್ಲೀಯರ್ ಆಗಿರುವ ಬಳ್ಳಾರಿ ಜೈಲಧಿಕಾರಿಗಳು ಯಾವುದನ್ನೂ ಮೈ ಮೇಲೆ ಎಳೆದುಕೊಳ್ಳದೇ ಕೋರ್ಟ್ ಅವಕಾಶ ಕೊಟ್ಟರೆ ಮಾತ್ರ ಕೊಡುತ್ತೇವೆ ಎಂದು ನಿರ್ಧಾರಕ್ಕೆ ಬಂದಿರುವುದು ದರ್ಶನ್ ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.

  • ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

    ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

    – ಆದಷ್ಟು ಬೇಗ ಜಾಮೀನು ಅರ್ಜಿ ಸಲ್ಲಿಸೋದಾಗಿ ಪತ್ನಿ ವಿಜಯಲಕ್ಷ್ಮಿ ಅಭಯ

    ಬಳ್ಳಾರಿ: ಜೈಲಿನಲ್ಲಿ ಪದೇ ಪದೇ ದುರ್ನಡತೆ ತೋರುತ್ತಿದ್ದ ದಾಸನಿಗೆ ಪತ್ರ ಬರೆಯುವ ಮೂಲಕ ವಕೀಲರು ಪಾಠ ಕಲಿಸಿದ್ದು, ಇದೀಗ ದರ್ಶನ್ ಎಚ್ಚೆತ್ತುಕೊಂಡಿದ್ದಾರೆ.

    ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballary Central Jail) ಕೊಲೆ ಆರೋಪಿ ದರ್ಶನ್ ಪದೇ ಪದೇ ದುರ್ನಡತೆ ತೋರುತ್ತಿದ್ದ ಕಾರಣ ವರ್ತನೆ ಬದಲಾಯಿಸುವ ಕುರಿತು ವಕೀಲರು ಪತ್ರ ಬರೆದಿದ್ದರು. ಇದೀಗ ಆರೋಪಿ ದರ್ಶನ್ (Actor Darshan) ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್‌ ನಿರ್ಧಾರ

    ವಕೀಲರು ದರ್ಶನ್‌ಗೆ ಬರೆದ ಪತ್ರದಲ್ಲಿ ಅನಗತ್ಯ ಕಿರಿಕ್ ಮಾಡಿಕೊಳ್ಳಬೇಡಿ. ಮಾಧ್ಯಮಗಳ ಮೇಲೆ ದುರ್ನಡತೆ ತೋರುವ ಕುರಿತು, ಜೈಲಿನಲ್ಲಿ ಕಿರಿ ಕಿರಿ ಮಾಡಬೇಡಿ. ವರ್ತನೆ ಬದಲಿಸಿಕೊಳ್ಳದಿದ್ದರೇ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತದೆ ಎಂದು ಉಲ್ಲೇಖಿಸಿದ್ದರು.

    ಇದೇ ಕಾರಣಕ್ಕೆ ನಿನ್ನೆ (ಸೆ.17) ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ಆಪ್ತರು ಜೈಲಿಗೆ ಭೇಟಿ ನೀಡಿದ್ದರು. ಅವರ ಭೇಟಿಗೆ ಆರೋಪಿ ದರ್ಶನ್ ನಗು ನಗುತ್ತಾ ಸೆಲ್‌ನಿಂದ ಹೊರ ಬಂದಿದ್ದರು. ಪತ್ನಿ ಹಾಗೂ ಆಪ್ತರ ಭೇಟಿ ಬಳಿಕವೂ ನಗುತ್ತಲೇ ಸೆಲ್‌ಗೆ ಹೋಗಿದ್ದರು. ವಕೀಲರ ಪತ್ರ ತಲುಪಿದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ದರ್ಶನ್ ಜೈಲಿನಲ್ಲಿ ತಮ್ಮ ವರ್ತನೆ ಬದಲಾಯಿಸಿಕೊಂಡಿದ್ದಾರೆ.

    ಇನ್ನೊಂದು ಕಡೆ ದರ್ಶನ್‌ಗೆ ಜಾಮೀನು ಚಿಂತೆಯಾಗಿದ್ದು, ಪತ್ನಿ ವಿಜಯಲಕ್ಷ್ಮಿಯವರು ಭೇಟಿಗೆ ಬಂದಾಗಲೂ ಜಾಮೀನು ವಿಚಾರವಾಗಿ ಚರ್ಚೆ ಮಾಡಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

    ದರ್ಶನ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳ ಬಗ್ಗೆ ದರ್ಶನ್ ಗಮನಕ್ಕೆ ತಂದಿದ್ದ ವಿಜಯಲಕ್ಷ್ಮಿ, ಏನೇ ಸಾಕ್ಷಿ ಸಿಕ್ಕಿದ್ದರೂ ನಮ್ಮ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡುತ್ತಿದ್ದಾರೆ. ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕೋಣ. ಅದರ ಬಗ್ಗೆಯೇ ನಾನು ವಕೀಲರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಯಾವುದಕ್ಕೂ ಆತಂಕ ಪಡಬೇಡಿ, ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಮತ್ತೆ ಶಾಕ್ – ಅಕ್ಟೋಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಸಾಧ್ಯತೆ!

    ಬಹುತೇಕ ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಎಲ್ಲಾ ಸಾಧಕ, ಬಾಧಕಗಳನ್ನು ನೋಡಿಕೊಂಡು ಜಾಮೀನಿಗೆ ಅರ್ಜಿ ಹಾಕುವುದಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರಗಳ ಕುರಿತು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅರ್ಧ ಗಂಟೆ ಚರ್ಚಿಸಿದ್ದಾರೆ.

  • ರಾಜಾತಿಥ್ಯ ಪ್ರಕರಣ; ದರ್ಶನ್ ಶಿಫ್ಟ್ ಆಗ್ತಿರೋ ಬಳ್ಳಾರಿ ಜೈಲು ಹೇಗಿದೆ ಗೊತ್ತಾ?

    ರಾಜಾತಿಥ್ಯ ಪ್ರಕರಣ; ದರ್ಶನ್ ಶಿಫ್ಟ್ ಆಗ್ತಿರೋ ಬಳ್ಳಾರಿ ಜೈಲು ಹೇಗಿದೆ ಗೊತ್ತಾ?

    – ವಿಶೇಷ ಭದ್ರತಾ ವಿಭಾಗದ 15ನೇ ಸೆಲ್‌ನಲ್ಲಿ ‘ದಾಸ’

    ಬಳ್ಳಾರಿ: ಜೈಲಲ್ಲಿ ರಾಜಾತಿಥ್ಯ ಪ್ರಕರಣ ಸಂಬಂಧ ದರ್ಶನ್‌ಗೆ (Darshan) ಮತ್ತಷ್ಟು ಸಂಕಷ್ಟ ಎದುರಾಗಿದೆ. ರೌಡಿಶೀಟರ್‌ಗಳ ಜೊತೆ ಸೇರಿಕೊಂಡು ಸೆರೆಮನೆಯಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ದರ್ಶನ್ ಮತ್ತು ಅವರ ಗ್ಯಾಂಗ್ ಸದಸ್ಯರನ್ನು ಬಳ್ಳಾರಿ (Ballari Central Jail) ಸೇರಿ ವಿವಿಧ ಜೈಲುಗಳಿಗೆ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಇಂದು ಕೋರ್ಟ್ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದ ಬಳಿಕ ದರ್ಶನ್&ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿಂದ ಎತ್ತಂಗಡಿ ಆಗಲಿದೆ.

    ಪವಿತ್ರಾಗೌಡ ವಿರುದ್ಧ ಯಾವುದೇ ಆರೋಪ ಕೇಳಿಬರದ ಹಿನ್ನೆಲೆಯಲ್ಲಿ ಆಕೆಯನ್ನು ಬೆಂಗಳೂರು ಜೈಲಲ್ಲೇ ಇರಿಸಲಾಗುತ್ತದೆ. ದರ್ಶನ್ ಗ್ಯಾಂಗ್ ಬೇರೆ ಜೈಲಿಗೆ ಎತ್ತಂಗಡಿ ಆಗುವವರೆಗೆ ಬೆಂಗಳೂರು ಜೈಲಲ್ಲೇ ವಿಚಾರಣೆಗೆ ಒಳಪಡಿಸಲು ಪೊಲೀಸರು ಕೋರ್ಟ್ ಅನುಮತಿ ಪಡೆದುಕೊಂಡಿದ್ದಾರೆ. ಜೈಲಿಗೆ ತೆರಳಿ ದರ್ಶನ್‌ಗೆ ಡ್ರಿಲ್ ಮಾಡಲು ಪೊಲೀಸರಿಗೆ ಕೋರ್ಟ್ ಅನುಮತಿ ನೀಡಿದೆ. ಪೊಲೀಸರು ತನಿಖೆ ಜೊತೆಗೆ ಸ್ಥಳ ಮಹಜರು ನಡೆಸಲಿದ್ದಾರೆ. ಒಂದೊಮ್ಮೆ ತನಿಖೆಗೆ ಸಹಕರಿಸದಿದ್ದರೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಶಿರೂರಿನಲ್ಲಿ ಮತ್ತೆ ಭೂ ಕುಸಿತ- ಸ್ಥಳೀಯರಲ್ಲಿ ಮತ್ತೆ ಆತಂಕ

    ಬಳ್ಳಾರಿ ಜೈಲು ಹೇಗಿದೆ?
    ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಶಿಫ್ಟ್ ಆಗುತ್ತಿರುವ ಬಳ್ಳಾರಿ ಜೈಲು ಹದಿನಾರು ಎಕರೆಯಲ್ಲಿದೆ. ಅಲ್ಲದೇ ಬಿಗಿ ಭದ್ರತೆಯನ್ನೂ ಹೊಂದಿದೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿರುವ ಬಗ್ಗೆ ಅಲ್ಲಿನ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಬಳ್ಳಾರಿ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ದರ್ಶನ್‌ನ್ನು ಇರಿಸಲಿದ್ದಾರೆ. ದರ್ಶನ್‌ನನ್ನು ವಿಶೇಷ ಭದ್ರತಾ ವಿಭಾಗದ ಹದಿನೈದನೇ ಸೆಲ್‌ನಲ್ಲಿ ಇರಿಸಲಿದ್ದಾರೆ. ಈ ಜೈಲ್‌ನಲ್ಲಿ ಒಟ್ಟು ಹದಿನೈದು ಸೆಲ್‌ಗಳಿದ್ದು, ಜೈಲಾಧಿಕಾರಿಗಳು ದರ್ಶನ್‌ಗೆ ಕೊನೆಯ ಭಾಗದ ಸೆಲ್ ನೀಡಲಿದ್ದಾರೆ. ಇದನ್ನೂ ಓದಿ: ಅಂದು ಶೂಟಿಂಗ್‌ಗೆ ಹೋಗಿದ್ದ ಜೈಲಿಗೆ ದರ್ಶನ್‌ ಶಿಫ್ಟ್‌

    ದರ್ಶನ್ ಭದ್ರತೆಗೆ ಈಗಾಗಲೇ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾಡಿವೋರ್ನ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಕಣ್ಗಾವಲಿರುವ ಸೆಲ್‌ನಲ್ಲಿ ದರ್ಶನ್ ಇರಲಿದ್ದಾರೆ. ಭದ್ರತೆಗೆ ನಿಯೋಜನೆಯಾಗುವ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ಕಡ್ಡಾಯವಾಗಿರಲಿದೆ. ಬಳ್ಳಾರಿ ಜೈಲಿನಲ್ಲಿ ಸೂಪರ್ಡೆಂಟ್ ಸೇರಿ ಒಟ್ಟು ನೂರು ಮಂದಿ ಸಿಬ್ಬಂದಿ, ಅಧಿಕಾರಿಗಳಿದ್ದಾರೆ. ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ; ಮತ್ತೆ ಮೂವರು ಪೊಲೀಸರು ಅಮಾನತು

    ಒಟ್ಟು 385 ಕೈದಿಗಳಿದ್ದು, ಹರ್ಷ ಮರ್ಡರ್ ಕೇಸ್ ಮತ್ತು ಪ್ರವೀಣ್ ಪೂಜಾರಿ ಮರ್ಡರ್ ಕೇಸ್ ಆರೋಪಿಗಳು ಬಳ್ಳಾರಿ ಜೈಲಲ್ಲಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಬಳ್ಳಾರಿ ಕೇಂದ್ರ ಕಾರಾಗೃಹ 800-1000 ಕೈದಿಗಳ ಸಾಮರ್ಥ್ಯ ಹೊಂದಿದೆ. ಸದ್ಯ ವಿಚಾರಣಾಧೀನ, ಸಜಾ ಸಂಬಂಧಿಗಳು ಸೇರಿ ಒಟ್ಟು 385 ಕೈದಿಗಳಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ 5 ಬ್ಲಾಕ್‌ಗಳಿವೆ. ಸಜಾಸಂಬಂಧಿಗಳಿಗೆ 200 ಪ್ರತ್ಯೇಕ ಸೆಲ್‌ಗಳಿವೆ. ಗಣ್ಯವ್ಯಕ್ತಿಗಳನ್ನು ಇರಿಸಲು ‘ಹೈ ಸೆಕ್ಯೂರಿಟಿ’ ಸೌಲಭ್ಯವುಳ್ಳ ಸೆಲ್‌ಗಳು ಕೂಡ ಇವೆ. ಈ ಸೆಲ್‌ಗಳು ನೀರು, ಶೌಚಾಲಯ ಸೌಲಭ್ಯ ಹೊಂದಿದೆ. ಸೆಲ್‌ನಲ್ಲಿದ್ದುಕೊಂಡೇ ಕೋರ್ಟ್ ಕಲಾಪ ವೀಕ್ಷಿಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಈ ಜೈಲು ಒಳಗೊಂಡಿದೆ. ಇದನ್ನೂ ಓದಿ: ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಜೀವನ ಪಠ್ಯಕ್ಕೆ ಸೇರ್ಪಡೆಗೆ ವಿ.ಸೋಮಣ್ಣ ಮನವಿ

    ದರ್ಶನ್ ಶಿಫ್ಟ್ ಆಗುವ ಹಿನ್ನೆಲೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಜೈಲಿನ ಎರಡು ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜೈಲಿನ ಅಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ದರ್ಶನ್ ಅಭಿಮಾನಿಗಳು ಸೇರುವ ಸಾಧ್ಯತೆಯಿರುವ ಹಿನ್ನೆಲೆ ಹೆಚ್ಚಿನ ಸಿಬ್ಬಂದಿ ನಿಯೋಜನೆಗೂ ಯೋಜನೆ ರೂಪಿಸಲಾಗಿದೆ. ಜೈಲಿನ ಸುತ್ತ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ ನಿಯೋಜಸಿಲು ಪ್ಲ್ಯಾನ್ ನಡೆದಿದೆ. ಮತ್ತೊಂದೆಡೆ ಅಂತಿಮ ಹಂತದ ವಿವಿಐಪಿ ಸೆಲ್ ಪರಿಶೀಲನೆ ಹಾಗೂ ಜೈಲಿನ ಸುತ್ತ ಇರುವ ಸಿಸಿ ಕ್ಯಾಮೆರಾಗಳ ವರ್ಕ್ ಕಂಡೀಷನ್ ಪರಿಶೀಲನೆ ಕೂಡ ನಡೆದಿದೆ.‌ ಇದನ್ನೂ ಓದಿ: ಕೋರ್ಟ್‍ಗೆ ಹೋದ್ಮೇಲೆ ಕೊಡ್ತೀನಿ, ಕ್ಯಾಬ್‍ಗೆ 500 ರೂ. ಕಳ್ಸಿ! – ಸಿಜೆಐ ಚಂದ್ರಚೂಡ್ ಹೆಸರಲ್ಲಿ ಆನ್‍ಲೈನ್ ವಂಚಕನ ಕಳ್ಳಾಟ