Tag: ಬಳ್ಳಾರಿ ಸೆಂಟ್ರಲ್‌

  • ಹೊರಗೆ ಹೋದ್ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ – ದರ್ಶನ್ ಪಶ್ಚಾತ್ತಾಪದ ಮಾತು

    ಹೊರಗೆ ಹೋದ್ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ – ದರ್ಶನ್ ಪಶ್ಚಾತ್ತಾಪದ ಮಾತು

    -ನನ್ನದು ಸಾಯಿಸುವ ಮನಸಲ್ಲ, ನಾನಂತೂ ಕೊಲೆ ಮಾಡಿಲ್ಲ ಎಂದ ಆರೋಪಿ

    ಬಳ್ಳಾರಿ: ಹೊರಗಡೆ ಹೋದ್ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ ಎಂದು ಕೊಲೆ ಆರೋಪಿ ದರ್ಶನ್ (Actor Darshan) ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಆರೋಪದ (Renukaswamy Murder Case) ಹಿನ್ನೆಲೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballary Central Jail) ದರ್ಶನ್, ರೇಣುಕಾಸ್ವಾಮಿ ಹತ್ಯೆ ಬಗ್ಗೆ ಪಶ್ಚಾತಾಪ ಕಾಡಲಾರಂಭಿಸಿದೆ. ನಾನು ಇಲ್ಲಿಂದ ಹೊರಗಡೆ ಹೋದಮೇಲೆ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗ್ತೀನಿ, ಸಹಾಯ ಮಾಡ್ತೀನಿ ಎಂದು ಜೈಲು ಸಿಬ್ಬಂದಿಯೊಬ್ಬರ ಜೊತೆ ಮನ ಬಿಚ್ಚಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ಆರೋಪ – ಭಾರತಕ್ಕೆ ಅಮೆರಿಕ ಕೋರ್ಟ್ ಸಮನ್ಸ್

    ಏನೋ ಮಾಡಲು ಹೋಗಿ ಏನೋ ಆಗಿದೆ. ನನ್ನದು ಸಾಯಿಸುವ ಮನಸಲ್ಲ, ನಾನಂತೂ ಕೊಲೆ ಮಾಡಿಲ್ಲ, ಮೇಲೊಬ್ಬನಿದ್ದಾನೆ ಎಂದು ಜೈಲು ಸಿಬ್ಬಂದಿಯೊಬ್ಬರ ಜೊತೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ದಿನದಿಂದ ಆಕ್ಟೀವ್ ಆಗಿರುವ ದರ್ಶನ್ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಬಳಿಯೂ ಮಾತನಾಡಿದ್ದಾರೆ. ಕಳೆದ ಬಾರಿ ಪತ್ನಿ ಬಂದಾಗಲೂ ರೇಣುಕಾಸ್ವಾಮಿ ಪತ್ನಿ ಹಾಗೂ ಕುಟುಂಬದ ನೋವು, ಸಮಸ್ಯೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.

    ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಾಧ್ಯತೆ:
    ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ಬಳ್ಳಾರಿ ಸೆಂಟ್ರಲ್ ಜೈಲು ಕಾದ ಕಬ್ಬಿಣದಂತಾಗಿದೆ. ಏನು ಕೇಳಿದರೂ ಕಷ್ಟ ಎನ್ನುವಂತ ಸ್ಥಿತಿ ಬಂದಿದೆ. ಇದೀಗ ಆರೋಪಿ ದರ್ಶನ್ ಜೈಲಧಿಕಾರಿಗಳಿಗೆ ಬೆಡ್, ತಲೆದಿಂಬು ಮತ್ತು ಚೇರ್‌ಗೆ ಬೇಡಿಕೆ ಇಟ್ಟಿದ್ದು, ಅಧಿಕಾರಿಗಳು ಸರಾಸಗಟವಾಗಿ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಬಳ್ಳಾರಿ ಜೈಲಧಿಕಾರಿಗಳ ಮೇಲೆಯೇ ದರ್ಶನ್ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (Karnataka State Human Rights Commision) ದೂರು ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

    ಇನ್ನೂ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣದಿಂದಾಗಿ ಜೈಲಧಿಕಾರಿಗಳ ತಲೆದಂಡ ಆಗಿತ್ತು. ಹೀಗಾಗಿ ಬಳ್ಳಾರಿ ಸೆಂಟ್ರಲ್ ಜೈಲು ಸಿಬ್ಬಂದಿ ಭೀತಿಯಲ್ಲಿದ್ದಾರೆ. ಜೊತೆಗೆ ದರ್ಶನ್ ಬೇಡಿಕೆಯನ್ನು ತಿರಸ್ಕರಿಸುತ್ತಿರುವುದು ಹಾಗೂ ಮ್ಯಾನುವಲ್‌ನಲ್ಲಿರುವ ಸೌಲಭ್ಯ ಕೊಡುವ ವಿಚಾರದಲ್ಲೂ ಅಷ್ಟೇ ಗಮನಹರಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಬಳ್ಳಾರಿ ಜೈಲಿನ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಎಚ್ಚರಿಕೆ ನಡೆ ಇಡುತ್ತಿದ್ದಾರೆ.ಇದನ್ನೂ ಓದಿ: ಹೃದಯಾಘಾತದಿಂದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಧನ

    ಈ ಕಾರಣದಿಂದಾಗಿ ದರ್ಶನ್ ಕುಟುಂಬಸ್ಥರು ಜೈಲಧಿಕಾರಿಗಳು ಮೇಲೆ ಕೋಪ ತೋರಿಸುತ್ತಿದ್ದಾರೆ. ಸೌಲಭ್ಯ ಕೊಟ್ಟರೆ ಇಲಾಖೆ ಮತ್ತು ಸರಕಾರದಿಂದ ತಲೆದಂಡ ಆಗೋ ಭೀತಿ ಇದೆ. ಇದರ ನಡುವೆ ಸೌಲಭ್ಯ ಕೊಡುತ್ತಿಲ್ಲವೆಂದು ಹೇಳಿ ದರ್ಶನ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುವ ಸಾಧ್ಯತೆಯಿದೆ.