Tag: ಬಳ್ಳಾರಿ ಪೊಲೀಸ್‌

  • ಬಾಡಿಗೆ ಪಡೆದು ಕಾರು ವಂಚನೆ – 46 ಕಾರು ವಶಕ್ಕೆ, ಆರೋಪಿ ಪರಾರಿ

    ಬಾಡಿಗೆ ಪಡೆದು ಕಾರು ವಂಚನೆ – 46 ಕಾರು ವಶಕ್ಕೆ, ಆರೋಪಿ ಪರಾರಿ

    – 700ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿರುವ ಶಂಕೆ

    ಬಳ್ಳಾರಿ: ನೂರಾರು ಕಾರುಗಳನ್ನು ಬಾಡಿಗೆ (Car Rental Fraud) ಪಡೆದು ಸಿನಿಮೀಯ ರೀತಿಯಲ್ಲಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಪೊಲೀಸರು (Ballari Police) ಬರೋಬ್ಬರಿ 46 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

    ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಜಾಹೀದ್‌ ಅಲಿಯಾಸ್ ಸೋನು ವಂಚನೆ ಮಾಡಿದ್ದು ಈಗ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಡೈರಿಯಲ್ಲಿ ಅವ್ಯವಹಾರ ಆರೋಪ –  ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದು ಗ್ರಾಮಸ್ಥರ ಪ್ರತಿಭಟನೆ

    ವಂಚನೆ ಎಸಗಿದ ಸಿಂಧನೂರು ಮೂಲದ ಜಾಹೀದ್‌
    ವಂಚನೆ ಎಸಗಿದ ಸಿಂಧನೂರು ಮೂಲದ ಜಾಹೀದ್‌

    ತಿಂಗಳಿಗೆ 50-60 ಸಾವಿರ ರೂ. ಬಾಡಿಗೆ ನೀಡುವುದಾಗಿದ್ದ ಹೇಳಿ ಜಾಹಿದ್‌ ಕಾರುಗಳನ್ನು ಬಾಡಿಗೆ ಪಡೆದು ಹಲವೆಡೆ ಮಾರಾಟ ಮಾಡಿದ್ದ. ಆ ಬಳಿಕ ಬ್ರಾಂಡೆಡ್ ಕಾರುಗಳನ್ನು 4-10 ಲಕ್ಷದವರೆಗೂ ಮಾರಾಟ ಮಾಡಿ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದ. ಇದನ್ನೂ ಓದಿ:  ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್‌ ಕಿಶೋರ್‌

    ಆರಂಭದಲ್ಲಿ ಕಾರುಗಳ ಮಾಲೀಕರಿಗೆ ಒಂದು ತಿಂಗಳು ಬಾಡಿಗೆ ಕೊಟ್ಟು ನಂತರ ಜಾಹೀದ್‌ ಫೋನ್ ಸ್ವಿಚ್ ಆಫ್‌ ಮಾಡಿಕೊಂಡಿದ್ದ. ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಕಾರು ಮಾರಾಟ ಮಾಡಿದ್ದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ತನಿಖೆಗೆ ಇಳಿದಾಗ ಜಹೀದ್ 107 ಕಾರುಗಳ ಮಾಲೀಕರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು.

    ತನಿಖೆ ಚುರುಕುಗೊಳಿಸಿ ಕಾರುಗಳನ್ನು ಪತ್ತೆ ಮಾಡಿರುವ ಪೊಲೀಸರು ಮಾಲೀಕರಿಗೆ ಕಾರುಗಳನ್ನು ಹಿಂತಿರುಗಿಸಿದ್ದಾರೆ. ಆರೋಪಿ ಜಹೀದ್ 700ಕ್ಕೂ ಹೆಚ್ಚು ಕಾರುಗಳನ್ನ ಬಾಡಿಗೆ ಪಡೆದು ಮಾರಾಟ ಮಾಡಿರುವ ಶಂಕೆ ಇದೆ.

  • ಬಳ್ಳಾರಿಯ ಮೋಕಾ ಪಿಎಸ್‌ಐ ಪತ್ನಿ ಆತ್ಮಹತ್ಯೆ

    ಬಳ್ಳಾರಿಯ ಮೋಕಾ ಪಿಎಸ್‌ಐ ಪತ್ನಿ ಆತ್ಮಹತ್ಯೆ

    ಬಳ್ಳಾರಿ: ಪಿಎಸ್‌ಐ ಪತಿ (PSI Wife) ಹಾಗೂ ಇಬ್ಬರು ಮಕ್ಕಳನ್ನ ರೆಡಿ ಮಾಡಿ, ಧ್ವಜಾರೋಹಣಕ್ಕೆ ಕಳಿಸಿದ ಬಳಿಕ ಪಿಎಸ್‌ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಮೋಕಾದಲ್ಲಿ ನಡೆದಿದೆ.

    ಮೋಕಾ ಪೊಲೀಸ್ ಠಾಣೆಯ (Moka Police Station) ಪಿಎಸ್‌ಐ ಕೆ.ಕಾಳಿಂಗ ಪತ್ನಿ ಚೈತ್ರಾ (36) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಸಹೋದರ ಹಾಗೂ ಇಬ್ಬರು ಸಹೋದರಿಯರ ಸಾವಿನಿಂದ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎನ್ನಲಾಗಿದೆ. ಇದನ್ನೂ ಓದಿ: ನಿಗೂಢ ಸ್ಫೋಟ | ಬಹು ಅಂಗಾಂಗ ಡ್ಯಾಮೇಜ್‌ನಿಂದ ಬಾಲಕ ಸಾವು, ಮತ್ತೊಬ್ಬನಿಗೆ 45% ಸುಟ್ಟ ಗಾಯ – ವೈದ್ಯರ ಪ್ರತಿಕ್ರಿಯೆ

    2 ತಿಂಗಳ ಹಿಂದೆ ಚೈತ್ರಾ ಅವರ ಏಕೈಕ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ. 2 ವರ್ಷಗಳ ಅಂತರದಲ್ಲಿ ಇದ್ದ ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರು ಮೃತಪಟ್ಟಿದ್ರು. ಹೀಗಾಗಿ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಅಂತ ತಿಳಿದುಬಂದಿದೆ. ಇದನ್ನೂ ಓದಿ: ಮಹಾದಾಸೋಹಿ ಶರಣಬಸಪ್ಪ ಅಪ್ಪ ಅಂತಿಮ ದರ್ಶನ ಪಡೆದ ಡಿಕೆಶಿ

    ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಶಿವಮೊಗ್ಗದಲ್ಲಿ (Shivamogga) ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಚಿಕಿತ್ಸೆ ಕೊಡಿಸಿದ ಬಳಿಕ ನಿನ್ನೆ ಸಂಜೆ ತವರು ಮನೆ ಮಲಪನಗುಡಿಯಿಂದ ಮೋಕಾಗೆ ಬಂದಿದ್ರು. ಮೋಕಾಗೆ ಬಂದಾಗಿನಿಂದ ಪತಿ ಕಾಳಿಂಗ ಹಾಗೂ ಮಕ್ಕಳ ಜೊತೆ ಚೈತ್ರಾ ಚೆನ್ನಾಗಿಯೇ ಇದ್ರು. ಇಂದು ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಬೆಳಗ್ಗೆ ಮಕ್ಕಳನ್ನ ರೆಡಿ ಮಾಡಿದ್ದ ಚೈತ್ರಾ ಪತಿಯ ಜೊತೆ ಧ್ವಜಾರೋಹಣಕ್ಕೆ ಕಳಿಸಿದ್ರು. ಮಕ್ಕಳು ಹಾಗೂ ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಚೈತ್ರಾ ನೇಣಿಗೆ ಶರಣಾಗಿದ್ದಾರೆ.

    ಪತ್ನಿ ಕಳೆದುಕೊಂಡ ಪತಿ ಕಾಳಿಂಗ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ರಾಜಕೀಯಕ್ಕೆ ಬಳಸಲು ಸಾಧ್ಯವಿಲ್ಲ: ಹೆಚ್.ಕೆ ಪಾಟೀಲ್

  • ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

    ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

    ಬಳ್ಳಾರಿ: ಪೋಲಿಸ್ ಹೆಡ್‌ಕಾನ್ಸ್‌ಟೇಬಲ್‌ (Police Constable) ಒಬ್ಬ ಕಳ್ಳರ ಜೊತೆ ಕೈಜೋಡಿಸಿ, ಕದ್ದ ಮಾಲನ್ನೇ ತನ್ನ ಮನೆಗೆ ಸಾಗಿಸಿ ಲಕ್ಷ ಲಕ್ಷ ಲೂಟಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

    ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯ (BrucePet Police Station) ಮೆಹಬೂಬ್ ಪಾಷಾ ಕಳ್ಳತನದಲ್ಲಿ ಭಾಗಿಯಾಗಿ ಸದ್ಯ ಬಂಧನಕ್ಕೊಳಗಾದ ಮುಖ್ಯಪೇದೆ. ಇದನ್ನೂ ಓದಿ: ಪೇಜರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಟ್ಟಿಸ್ಟ್‌ – ಘಟನೆ ಹಿಂದೆ ಭಾರತೀಯ ಮೂಲದ ಉದ್ಯಮಿಯ ಕೈವಾಡ ಇರೋದು ನಿಜವೇ?

    ಏನಿದು ಘಟನೆ?
    ಇದೇ ಸೆಪ್ಟೆಂಬರ್‌ 12ರಂದು ಬೆಳಗ್ಗಿನ ಜಾವ ಬಳ್ಳಾರಿಯ (Bellary) ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗ್ತಿರುವಾಗ ರಘು ಎನ್ನುವ ವ್ಯಕ್ತಿ ಕಣ್ಣಿಗೆ ಕಾರದ ಪುಡಿ ಎರಚಿ 22.99 ಲಕ್ಷ ರೂ. ನಗದು ಮತ್ತು 318 ಗ್ರಾಂ ಬಂಗಾರ ದರೋಡೆ ಮಾಡಲಾಗಿತ್ತು. ತೌಸೀಫ್, ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ 7 ಜನರಿಂದ ದರೋಡೆ ನಡೆದಿತ್ತು. ಈ ದರೋಡೆ ಟೀಮ್ ಜೊತೆಗೆ ಸೇರಿ ಹೆಡ್ ಕಾನ್ಸ್‌ಟೇಬಲ್‌ ಮೆಹಬೂಬ್ ಪಾಷಾ ಹಣ ಕೊಳ್ಳೆ ಹೊಡೆದಿದ್ದ. ಈ ದರೋಡೆ ಗ್ಯಾಂಗ್‌ನ ಕಿಂಗ್ ಪಿನ್ ಆರೀಫ್‌ಗೆ ದರೋಡೆ ಮಾಡೋದಕ್ಕೆ ಬೈಕ್ ಕೊಟ್ಟು ಕಳಿಸಿದ್ದೇ ಈ ಹೆಡ್ ಕಾನ್ಸ್‌ಟೇಬಲ್ ಮೆಹಬೂಬ್ ಪಾಷಾ ಎಂದು ಹೇಳಲಾಗಿದೆ.

    ಮೆಹಬೂಬ್ ಪಾಷಾ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರು. ಆಸೀಫ್ ಈ ಹಿಂದೆ ಹೋಮ್ ಗಾರ್ಡ್ ಆಗಿ ಕೆಲಸದಿಂದ ವಜಾಗೊಂಡಿದ್ದ. ಈತನ ಜೊತೆ ಮೆಹಬೂಬ್ ಪಾಷಾ ನಿಕಟ ಸಂಪರ್ಕ ಹೊಂದಿದ್ದ. ಕಳ್ಳತನದ ಪ್ರಕರಣ ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದಂತೆ ಪ್ರಕರಣದ ಅಸಲೀಯತ್ತು ಬಟಾಬಯಲಾಗಿದೆ. ಇದನ್ನೂ ಓದಿ: ಮಹಿಳಾ ಪಿಎಸ್‍ಐ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನ – ಕೊಲೆ ಆರೋಪಿಗೆ ಗುಂಡೇಟು

    ದರೋಡೆ ಮಾಡಿದ ಹಣದಲ್ಲಿ ಮೆಹಬೂಬ್ ಪಾಷಾ 9 ಲಕ್ಷ ಹಣ ಪಡೆದಿದ್ದ. ಸದ್ಯ ಮೆಹಬೂಬ್ ಪಾಷನಿಂದ 6.25 ಲಕ್ಷ ರೂ. ವಶಕ್ಕೆ ಪಡೆಯಲಾಗಿದ್ದು, ಬಂಧಿತ ಎಲ್ಲಾ ಆರೋಪಗಳಿಂದ ಒಟ್ಟು 15.91 ಲಕ್ಷ ನಗದು, 116 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕಳ್ಳತನದಲ್ಲಿ ತನ್ನ ಪಾಲಿನ ಬಗ್ಗೆ ಒಪ್ಪಿಕೊಂಡಿರುವ ಆರೋಪಿ ಹೆಡ್ ಕಾನಸ್ಟೇಬಲ್ ಮೆಹಬೂಬ್ ಪಾಷಾ ನನ್ನ ಬಂಧಿಸಿದ ನಂತರ, ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುನಿರತ್ನ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ – ನಿಖಿಲ್ 

  • ನಕಲಿ ಇ-ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ 2.11 ಕೋಟಿ ಪಂಗನಾಮ – ಸಿಕ್ಕಿಬಿದ್ದ ಸೈಬರ್‌ ವಂಚಕ

    ನಕಲಿ ಇ-ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ 2.11 ಕೋಟಿ ಪಂಗನಾಮ – ಸಿಕ್ಕಿಬಿದ್ದ ಸೈಬರ್‌ ವಂಚಕ

    ಬಳ್ಳಾರಿ: ಇಲ್ಲಿನ ಸೈಬರ್ ಕ್ರೈಮ್ ಇತಿಹಾಸದಲ್ಲಿ ಸೈಬರ್ ಪೋಲಿಸರು (Bellary Cyber Police) ಅತಿದೊಡ್ಡ ಭೇಟೆಯಾಡಿದ್ದು, ಮಧ್ಯಪ್ರದೇಶದವರೆಗೂ (Madhya Pradesh) ಹೋಗಿ ಕೋಟಿ ಕೋಟಿ ವಂಚನೆ ಮಾಡಿದ್ದ ಆರೋಪಿಯನ್ನ ಖೆಡ್ಡಕ್ಕೆ ಕೆಡುವುದರಲ್ಲಿ ಸಫಲರಾಗಿದ್ದಾರೆ. ನಕಲಿ ಈ ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ 2 ಕೋಟಿ 11 ಲಕ್ಷದ 50 ಸಾವಿರ ರೂ. ವಂಚಿಸಿದ್ದ ಮಧ್ಯಪ್ರದೇಶ ಮೂಲದ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಹಣದ ಸಮೇತ ಅರೆಸ್ಟ್ ಆಗಿದ್ದಾನೆ.

    ಬಳ್ಳಾರಿಯ (Bellary) ಹಿಂದೂಸ್ತಾನ್ ಕ್ಯಾಲ್ಸೀನ್ಡ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಹೀಗಾಗಿ ಹಿಂದುಸ್ತಾನ್ ಕಂಪನಿ ಅಗರ್ವಾಲ್ ಕಂಪನಿಗೆ 2.11 ಕೋಟಿ ರೂ. ಕೊಡಬೇಕಿತ್ತು. ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಇದರ ಬಗ್ಗೆ ಮಾಹಿತಿ ಪಡೆದಿದ್ದ. ಅಗರ್ವಾಲ್ ಕಂಪನಿಯ ನಕಲಿ ಇ-ಮೇಲ್‌ ಕ್ರಿಯೇಟ್‌ ಮಾಡಿ ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಜ್ ಆಗಿದೆ ಅಂತಾ ಹಿಂದುಸ್ತಾನ್‌ಗೆ ಕಳಿಸಿದ್ದ. ಹೀಗಾಗಿ ಹಿಂದುಸ್ತಾನ್ ಕಂಪನಿಯವರು ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್‌ಗೆ ಹಣ ಹಾಕಿದ್ದರು. ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ತನ್ನ ಖಾತೆಗೆ ಬಂದ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಶವಗಳಿಗೆ ಶೋಧ – ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್!

    ವಂಚನೆ ಕುರಿತು ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದೂಸ್ತಾನ್ ಕಂಪನಿಯಿಂದ ದೂರು ದಾಖಲಿಸಲಾಗಿತ್ತು. ಕೂಡಲೇ ಬಳ್ಳಾರಿ ಎಸ್ಪಿ ಶೊಭಾರಾಣಿ ಅವರಿಂದ ಪ್ರಕರಣ ಭೇದಿಸಲು ಸೈಬರ್ ಕ್ರೈಮ್ ಡಿಎಸ್‌ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿದ್ರು. ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನ ಬಂಧಿಸಿದ್ದು, ಬಂಧಿತ ಆರೋಪಿಯಿಂದ 1 ಕೋಟಿ, 21 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

    ಅಲ್ಲದೇ ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ಹಣ ಫ್ರೀಜ್ ಮಾಡಿಸಿದ್ದಾರೆ. ಇನ್ನೂ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಹಿಂದೆ ದೆಹಲಿ ಮೂಲದ ಕುಖ್ಯಾತ ವ್ಯಕ್ತಿಯ ಕೈವಾಡ ಶಂಕೆ ಇದೆ ಎನ್ನಲಾಗಿದ್ದು, ಪೊಲೀಸರ ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

  • ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಅನುಮಾನಸ್ಪದ ಸಾವು – ಪೋಷಕರಿಂದ ಕೊಲೆ ಆರೋಪ!

    ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಅನುಮಾನಸ್ಪದ ಸಾವು – ಪೋಷಕರಿಂದ ಕೊಲೆ ಆರೋಪ!

    ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪಿರುವ ಘಟನೆ ವಿಜಯನಗರ (Vijayanagara) ಜಿಲ್ಲೆ ಹಡಗಲಿ ತಾಲೂಕಿನ ದುಂಗಾವತಿ ತಾಂಡಾದಲ್ಲಿ ಬೆಳಕಿಗೆ ಬಂದಿದೆ.

    ಅನಸೂಯಾ (10) ಮೃತ ಬಾಲಕಿ. ತಂದೆ ರವಿ ಹಾಗೂ ತಾಯಿ ಲಕ್ಷ್ಮಿ ದಂಪತಿಗೆ ಅನಸೂಯಾ ಒಬ್ಬಳೇ ಮಗಳು. ಬಾಲಕಿಯ ಮೃತ ದೇಹ ಕಂಡು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊಂಡದ ಪಕ್ಕದಲ್ಲಿ ಮೃತ ದೇಹ, ಮತ್ತೊಂದು ಕಡೆ ನೀರಿನ ತಂಬಿಗೆ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗಳ ಕೊಲೆಯಾಗಿದೆ, ನಮಗೆ ನ್ಯಾಯಾ ಸಿಗಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

    ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಹಾಗೂ ಶಾಸಕ ಕೃಷ್ಣಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: AR Wedding Celebrations: ಉದ್ಯಮಿ ಅಂತ ಹೇಳ್ಕೊಂಡು ಆಹ್ವಾನವಿಲ್ಲದೇ ಬಂದಿದ್ದ ಇಬ್ಬರ ವಿರುದ್ಧ ಕೇಸ್‌!

    ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ FSL ವರದಿ ಬಂದ ಬಳಿಕ ಸತ್ಯಾಸತ್ಯತೆ ಬೇಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಂಬಾನಿ ಮದುವೆಯಲ್ಲಿ ಯಶ್ ಜೊತೆ ‘ಜವಾನ್’ ಡೈರೆಕ್ಟರ್ ಮಾತುಕತೆ- ವಿಡಿಯೋ ವೈರಲ್

  • ಬಳ್ಳಾರಿಯ ಕೊಳಗಲ್ ಗ್ರಾಮದಲ್ಲಿ 144 ಸೆಕ್ಷನ್ ಜಾರಿ- 50 ಮಂದಿ ವಶಕ್ಕೆ

    ಬಳ್ಳಾರಿಯ ಕೊಳಗಲ್ ಗ್ರಾಮದಲ್ಲಿ 144 ಸೆಕ್ಷನ್ ಜಾರಿ- 50 ಮಂದಿ ವಶಕ್ಕೆ

    – ಸಮುದಾಯಗಳ ನಡುವಿನ ಜಗಳದಲ್ಲಿ ಪಿಎಸ್‍ಐ ಸೇರಿ 30 ಮಂದಿಗೆ ಗಾಯ

    ಬಳ್ಳಾರಿ: ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ನಡೆದ ಗಲಾಟೆಯಲ್ಲಿ ಪಿಎಸ್‍ಐ ಸೇರಿ 30ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಬಳ್ಳಾರಿ (Ballari) ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

    ಕೆಲವು ತಿಂಗಳ ಹಿಂದೆ ಎರ್ರೆಪ್ಪಸ್ವಾಮಿ ಮೂರ್ತಿಯನ್ನು ಎಸ್‍ಸಿ ಸಮುದಾಯದವರು ಪ್ರತಿಷ್ಠಾಪಿಸಿದ್ದರು. ಇದೀಗ ಕುರುಬ ಸಮುದಾಯದವರಿಂದ ಮೂರ್ತಿ ಪ್ರತಿಷ್ಠಾಪಿಸಲು ಮುಂದಾದಾಗ ಈ ಗಲಾಟೆ ನಡೆದಿದೆ. ಮಠದ ಮೂಲ ಸ್ವಾಮಿ ಎರ್ರಿಸ್ವಾಮಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಈಗ ಎಸ್‍ಸಿ ಸಮುದಾಯಕ್ಕೆ ಸೇರಿದ ಎರ್ರೆಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ ಎನ್ನುವ ವಿಚಾರಕ್ಕೆ ಗಲಾಟೆಯಾಗಿದೆ. ಈ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸರು ಸೇರಿದಂತೆ 30 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಿಂತಿದ್ದ ಕಸದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ – ಟೆಕ್ಕಿ ಸ್ಥಳದಲ್ಲೇ ಸಾವು!

    ಘಟನೆಯಲ್ಲಿ ಬಳ್ಳಾರಿ ಗ್ರಾಮೀಣ ಭಾಗದ ಸಿಪಿಐ ಸತೀಶ್, ಪಿಎಸ್‍ಐ ಸಂತೋಷ್, ಒಬ್ಬರು ಕಾನ್ಸ್‌ಟೇಬಲ್‌ಗೆ ಗಾಯಗಳಾಗಿವೆ. ಸಂತೋಷ್ ಅವರ ತಲೆಗೆ ಪೆಟ್ಟಾಗಿದ್ದು, ಅವರನ್ನು ಬಳ್ಳಾರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಒಂದು ಡಿಎಆರ್ ಹಾಗೂ ಕೆಎಸ್‍ಆರ್‌ಪಿ ತುಕಡಿ ಸೇರಿದಂತೆ 150 ಪೊಲೀಸರನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್‍ಪಿ ಮತ್ತು ಎಎಸ್‍ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಾಕ್ಷಿಗೆ ಸಂಗ್ರಹಿಸಿದ್ದ 10 ಕೆಜಿ ಗಾಂಜಾ, 9 ಕೆಜಿ ಭಾಂಗ್‌ ಇಲಿಗಳೇ ತಿಂದಿವೆ – ಕೋರ್ಟ್‌ಗೆ ವರದಿ ಸಲ್ಲಿಕೆ!

  • ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ

    ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ

    ಬಳ್ಳಾರಿ: ಇಲ್ಲಿನ ಬ್ರೂಸ್ ಪೇಟೆ ಪೊಲೀಸರು (Bellary Police) ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನ (Gold and Silver Jewellery) ಜಪ್ತಿ ಮಾಡಲಾಗಿದೆ.

    ಬಳ್ಳಾರಿಯ (Bellary) ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂಬಳಿ ಬಜಾರ್‌ನಲ್ಲಿರುವ ಹೇಮಾ ಜ್ಯೂವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಹಣ, ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಭರ್ಜರಿ ಕಾರ್ಯಾಚರಣೆಯಲ್ಲಿ 5 ಕೆಜಿ ಚಿನ್ನಾಭರಣ ಜಪ್ತಿ!

    ಒಟ್ಟು 5.60 ಕೋಟಿ ರೂ. ನಗದು, 3 ಕೆಜಿ ಬಂಗಾರ 103 ಕೆಜಿ ಬೆಳ್ಳಿ ಆಭರಣ, 21 ಕೆಜಿ ಕಚ್ಚಾ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ನಗದು ಹವಾಲಾಕ್ಕೆ ಸಂಬಂಧಿಸಿದ ಹಣ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಒಟ್ಟು 15.78 ಕೋಟಿ ಹಣ, 1.27 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

    ಪ್ರಕರಣ ಸಂಬಂಧ ಆರೋಪಿ ನರೇಶ್ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ