Tag: ಬಳ್ಲಾರಿ

  • ನಾಗೇಂದ್ರ ನಮ್ಮ ಹೀರೋ, ಬಿಜೆಪಿಗೆ ಮತ್ತೆ ಬರ್ತಾರೆ: ಈಶ್ವರಪ್ಪ

    ನಾಗೇಂದ್ರ ನಮ್ಮ ಹೀರೋ, ಬಿಜೆಪಿಗೆ ಮತ್ತೆ ಬರ್ತಾರೆ: ಈಶ್ವರಪ್ಪ

    ಬಳ್ಳಾರಿ: ಕಾಂಗ್ರೆಸ್ ಶಾಸಕ ನಮ್ಮ ಹೀರೋ. ಅವರು ಮತ್ತೆ ಬಿಜೆಪಿಗೆ ಬರುತ್ತಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

    ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಘನತ್ಯಾಜ್ಯ ಸಂಗ್ರಹಣಾ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.

    ವೇದಿಕೆಯಲ್ಲಿರುವ ಕಾಂಗ್ರಸ್ ಶಾಸಕ ನಾಗೇಂದ್ರ ಅವರು ನಮ್ಮ ಹೀರೋ, ಯಾಕೆ ಸಂಕೋಚ ಅವರು ನಮ್ಮ ಹೀರೋನೇ. ನಾಗೇಂದ್ರಗೆ ಒಂದು ಸಾರಿ ಎಲ್ಲರೂ ಚಪ್ಪಾಳೆ ಹೊಡಿಯಿರಿ. ಮೊದಲು ನಾಗೇಂದ್ರ ಅವರು ನಮ್ಮ ಜೊತೆ ಇದ್ದರು. ಇದೀಗ ಬೇರೆ ಕಡೆ ಇದ್ದಾರೆ. ಆದಷ್ಟು ಬೇಗ ಕರೆಸಿಕೊಳ್ತೀವಿ ಎಂದರು.

    ಈ ಹಿಂದೆ ನಡೆದ ಬಿಜೆಪಿ ಆಪರೇಷನ್ ಕಮಲದಲ್ಲಿ ನಾಗೇಂದ್ರ ಅವರ ಹೆಸರು ಕೇಳಿ ಬಂದಿತ್ತು, ನಾಗೇಂದ್ರ ಅವರೇ ಬಿಜೆಪಿ ಮೊದಲು ಹೋಗುತ್ತಾರೆ ಎನ್ನುವ ಅನುಮಾನ ಮೂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಸಚಿವ ಈಶ್ವರಪ್ಪ ಅವರು, ನಾಗೇಂದ್ರ ಸದ್ಯ ಕಾಂಗ್ರೆಸ್ ನಲ್ಲಿ ಇದ್ದಾರೆ. ಮುಂದೆ ನಮ್ಮ ಬಿಜೆಪಿಗೆ ಬರುತ್ತಾರೆ ಎಂದು ಹೇಳಿಕೆ ನೀಡಿ ನಾಗೇಂದ್ರ ಅವರು ಬಿಜೆಪಿಗೆ ಹೋಗುವುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ಸಿನ ನಾಗೇಂದ್ರ ಅವರು ಬಿಜೆಪಿ ಹೋಗುವುದು ಪಕ್ಕಾ ಆದಂತಿದೆ.

  • ಕುಟುಂಬ ಸಮೇತರಾಗಿ ಕುಮಾರಸ್ವಾಮಿ ದರ್ಶನ ಪಡೆದ ಈಶ್ವರಪ್ಪ

    ಕುಟುಂಬ ಸಮೇತರಾಗಿ ಕುಮಾರಸ್ವಾಮಿ ದರ್ಶನ ಪಡೆದ ಈಶ್ವರಪ್ಪ

    ಬಳ್ಳಾರಿ: ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೆ ಎಸ್ ಈಶ್ವರಪ್ಪ ಇಂದು ಬೆಳಗ್ಗೆ ಸಂಡೂರಿನ ಕುಮಾರಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    12ನೇ ಶತಮಾನದಲ್ಲಿ ನಿರ್ಮಿಸಿರುವ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಿಕೆ ಹೊತ್ತರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆ ಲಕ್ಷಾಂತರ ಭಕ್ತರದ್ದಾಗಿದೆ. ಹೀಗಾಗಿ ಸೋಮವಾರ ಮುಂಜಾನೆ ಈಶ್ವರಪ್ಪ ಕುಟುಂಬ ಸಮೇತವಾಗಿ ಕುಮಾರಸ್ವಾಮಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪತ್ನಿ, ಪುತ್ರಿ ಮೊಮ್ಮಕ್ಕಳು ಈಶ್ವರಪ್ಪ ಜೊತೆ ಉಪಸ್ಥಿತರಿದ್ದರು.

    ಸಂಡೂರಿನ ಘೋರ್ಪಡೆ ಕುಶಲ ಕಲಾ ಕೇಂದ್ರದಲ್ಲಿರುವ ಲಂಬಾಣಿ ಕೌಶಲ್ಯ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮುನ್ನ ಈಶ್ವರಪ್ಪ ಕುಮಾರಸ್ವಾಮಿ ದರ್ಶನ ಪಡೆದ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಹೀಗಾಗಿ ಯಾವ ಕಾರಣಕ್ಕೆ ಕುಮಾರಸ್ವಾಮಿ ದರ್ಶನ ಪಡೆದು ವಿಶೇಷವಾಗಿ ಪೂಜೆ ಸಲ್ಲಿಸಿದ್ರು ಅನ್ನೋದು ಇದೀಗ ಕಾರ್ಯಕರ್ತರಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪಕ್ಷದ ಮುಖಂಡರಿಗೂ ತಿಳಿಸದೇ ಬಂದಿದ್ದ ಈಶ್ವರಪ್ಪನವರ ಆಗಮನದ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಕುಮಾರನಾಯ್ಕ್ ಈಶ್ವರಪ್ಪ ಅವರಿಗೆ ಸಾಥ್ ನೀಡಿ ಸಂಡೂರಿನ ಬಗ್ಗೆ ಮಾಹಿತಿ ನೀಡಿದ್ರು. ಇದೇ ವೇಳೆ ಸ್ಥಳೀಯ ಬಿಜೆಪಿ ಟಿಕೆಟ್ ಆಕ್ಷಾಂಕಿಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಹೊರಗಿನ ಕ್ಷೇತ್ರದ ಮುಖಂಡರಿಗೆ ಸಂಡೂರಿನ ಟಿಕೆಟ್ ನೀಡಬಾರದೆಂದು ಪರೋಕ್ಷವಾಗಿ ಶ್ರೀರಾಮುಲು ಆಗಮನಕ್ಕೆ ವಿರೋಧ ವ್ಯಕ್ತಪಡಿಸಿ ಕೆ ಎಸ್ ಈಶ್ವರಪ್ಪನವರಿಗೆ ಮನವಿ ಸಲ್ಲಿಸಿದರು.

  • ಜಿಎಸ್‍ಟಿ ವಿರೋಧಿಸಿ ಹೋಟೆಲ್ ಬಂದ್- ತುರ್ತು ಔಷಧಿ ಬೇಕಂದ್ರೆ ಈ ನಂಬರಿಗೆ ಕರೆ ಮಾಡಿ

    ಜಿಎಸ್‍ಟಿ ವಿರೋಧಿಸಿ ಹೋಟೆಲ್ ಬಂದ್- ತುರ್ತು ಔಷಧಿ ಬೇಕಂದ್ರೆ ಈ ನಂಬರಿಗೆ ಕರೆ ಮಾಡಿ

    ಬೆಂಗಳೂರು: ಇಷ್ಟು ದಿನ ಅದೆಷ್ಟೋ ಬಂದ್‍ಗಳು ಬಂದು ಹೋಗಿವೆ. ಆದ್ರೆ ಯಾವತ್ತೂ ಹೋಟೆಲ್, ಮೆಡಿಕಲ್ ಸ್ಟೋರ್‍ಗಳು ಬಂದ್ ಆಗ್ತಿರ್ಲಿಲ್ಲ. ಆದ್ರೆ ಇವತ್ತು ದೇಶಾದ್ಯಂತ ಹೋಟೆಲ್‍ಗಳು, ಮೆಡಿಕಲ್ ಸ್ಟೋರ್‍ಗಳೇ ಬಂದ್ ಆಗ್ತಿವೆ. ಇದಕ್ಕೆ ಕಾರಣ ಮೋದಿ ಸರ್ಕಾರ.

    ಹೌದು. ಕೇಂದ್ರದ ಉದ್ದೇಶಿತ ಮಹತ್ವಾಕಾಂಕ್ಷಿ ಜಿಎಸ್‍ಟಿ ಬಿಲ್ ಜೂನ್ ಒಂದರಿಂದ ಜಾರಿಗೆ ಬರ್ತಿದೆ. ಆದ್ರೆ 25 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ಹೋಟೆಲ್‍ಗಳಿಗೆ ಹೆಚ್ಚಿನ ತೆರಿಗೆ ಮತ್ತು ಆನ್‍ಲೈನ್‍ನಲ್ಲಿ ಔಷಧಿ ಮಾರಾಟ ವಿರೋಧಿಸಿ ಇವತ್ತು ಬಂದ್ ನಡೀತಿದೆ. ಕೇಂದ್ರದ ಜೊತೆ ನಡೆದ ಮಾತುಕತೆ ವಿಫಲವಾದ ಕಾರಣ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಲಾಗ್ತಿದೆ. ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಪ್ರತಿಭಟನೆಗೆ ಬೆಂಗಳೂರು ಹೋಟೇಲ್ ಮಾಲೀಕರ ಸಂಘ ಸಾಥ್ ನೀಡ್ತಿದೆ. ಹೀಗಾಗಿ, ಹೋಟೆಲ್‍ಗಳು ಬಂದ್ ಆಗಲಿದ್ದು, ಕಾಫೀ, ಟೀ ಇಲ್ಲ, ಊಟನೂ ಸಿಗೋದಿಲ್ಲ.

    ಈ ನಂಬರಿಗೆ ಕರೆ ಮಾಡಿ: ಮೆಡಿಕಲ್ ಸ್ಟೋರ್‍ಗಳು ಬಂದ್ ಆಗುತ್ತಲ್ಲ ಅನ್ನೋ ಆತಂಕ ಬೇಡ. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ 6 ವಿಭಾಗಗಳಲ್ಲಿ ಸರ್ಕಾರ ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ. ಅಗತ್ಯ ಔಷಧಿಗಳ ಪೂರೈಕೆಗೆ ಸಾರ್ವಜನಿಕರು 104, 108ಗೆ ಕರೆ ಮಾಡಿ ತಿಳಿಸಬಹುದು. ಈ ನೋಡಲ್ ಅಧಿಕಾರಿಗಳು ಔಷಧಿಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕಿಮ್ಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ಕೆಲವು ನರ್ಸಿಂಗ್ ಹೋಮ್‍ಗಳಲ್ಲಿರೋ ಮೆಡಿಕಲ್ ಶಾಪ್‍ಗಳನ್ನು ಬಂದ್‍ನಿಂದ ಹೊರಗಿಡಲಾಗಿದೆ.

    ಮೆಡಿಕಲ್ ಸ್ಟೋರ್‍ಗಳು ಬಂದ್ ಆಗ್ತಿರೋದು ಇತಿಹಾಸದಲ್ಲಿ ಇದೇ ಮೊದಲು. ಹಾಗೇ ಎಲ್ಲಾ ಹೋಟೆಲ್‍ಗಳು ಬಂದ್ ಆಗೋದಿಲ್ಲ. ಆದ್ರೂ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.

    ಬಳ್ಳಾರಿಯಲ್ಲಿ ಹೋಟೆಲ್ ಬಂದ್ ಇಲ್ಲ: ರಾಜ್ಯದ ಹಲವೆಡೆ ಹೋಟೆಲ್ ಮಾಲೀಕರ ಸಂಘದವರು ಬಂದ್‍ಗೆ ಕರೆ ನೀಡಿದ್ರೆ, ಬಳ್ಳಾರಿಯಲ್ಲಿ ಬಂದ್ ಆಚರಿಸದಿರಲು ನಿರ್ಧರಿಸಿದ್ದಾರೆ. ಇವತ್ತು ಬಳ್ಳಾರಿಯಲ್ಲಿ ಹೋಟೆಲ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸೋಮವಾರ ರಾತ್ರಿ ಸಭೆ ನಡೆಸಿ ಬಂದ್ ಮಾಡದಿರಲು ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಮೆಡಿಕಲ್ ಸ್ಟೋರ್‍ಗಳು ಇಂದು ಪೂರ್ವ ನಿರ್ಧಾರದಂತೆ ಬಂದ್ ಆಗಿವೆ.