Tag: ಬಲ್ಬ್

  • ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಅಹಮ್ಮದಾಬಾದ್: ಮಧ್ಯಪ್ರದೇಶದ ರಟ್ಲಾಮ್‍ನಲ್ಲಿ 9 ತಿಂಗಳ ಪುಟ್ಟ ಕಂದಮ್ಮವೊಂದು ಆಕಸ್ಮಿಕವಾಗಿ ಆಟಿಕೆಯ ಸಣ್ಣ ಎಲ್‍ಇಡಿ ಬಲ್ಬ್ (LED Bulb) ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.

    ಮಗು ಬಲ್ಬ್ ನುಂಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ ಸಂಭ್ರಮಾಚರಣೆ ಮಾಡಿದವರ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳಿಂದ ಹಲ್ಲೆ

    ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್‍ನೊಂದಿಗೆ (Mobile phone) ಆಟವಾಡುತ್ತಿತ್ತು. ಈ ಮೊಬೈಲ್ ಫೋನ್‍ನಲ್ಲಿರುವ ಆಂಟೆನಾದಲ್ಲಿ ಎಲ್‍ಇಡಿ ಬಲ್ಬ್ ಇತ್ತು. ಆ ಬಲ್ಬ್ ಅನ್ನು ಕಂದಮ್ಮ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ನುಂಗಿಬಿಟ್ಟಿದೆ. ಬಲ್ಬ್ ನುಂಗಿದ ತಕ್ಷಣವೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

    ಸಿವಿಲ್ ಆಸ್ಪತ್ರೆಯ (Civil Hospital) ಚಿಕಿತ್ಸಾ ಮೇಲ್ವೀಚಾರಕ ಡಾ. ರಾಕೇಶ್ ಜೋಶಿ ಈ ಸಂಬಂಧ ಪ್ರತಿಕ್ರಿಯಿಸಿ, ಉಸಿರಾಟದ ಸಮಸ್ಯೆ ಕಣಿಸಿಕೊಂಡಿದ್ದರಿಂದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಮಗು ಬಲ್ಬ್ ನುಂಗಿರುವುದು ಬೆಳಕಿಗೆ ಬಂದಿದೆ. ಬ್ರಾಂಕೋಸ್ಕೋಪ್ ಬಳಸಿ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸಿದರೂ ತೆಗೆಯಲು ಸಾಧ್ಯವಾಗಿಲ್ಲ ಎಂದರು.

    ಎರಡನೇ ಪ್ರಯತ್ನದಲ್ಲಿ ಬಲ್ಬ್ ಹೊರತೆಗೆಯುವುದರಲ್ಲಿ ಯಶಸ್ವಿಯಾದೆವು. ಮಕ್ಕಳಿಗೆ ಆಟಿಕೆಗಳನ್ನು ಕೊಡುವಾಗ ಸ್ವಲ್ಪ ಎಚ್ಚರವಹಿಸಬೇಕು ಎಂಬುದನ್ನು ಈ ಮೂಲಕ ಎಲ್ಲಾ ತಾಯಂದಿರು ಎಚ್ಚರವಹಿಸಿಕೊಳ್ಳಬೇಕು ಎಂದು ಜೋಶಿ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೋಕಿಗೆ ಕಾರು, ಕದಿಯೋದು ಮಾತ್ರ ಬಲ್ಬ್ – ಕಿರಾತಕರ ಕೈಚಳಕ ಕ್ಯಾಮೆರಾದಲ್ಲಿ ಸೆರೆ

    ಶೋಕಿಗೆ ಕಾರು, ಕದಿಯೋದು ಮಾತ್ರ ಬಲ್ಬ್ – ಕಿರಾತಕರ ಕೈಚಳಕ ಕ್ಯಾಮೆರಾದಲ್ಲಿ ಸೆರೆ

    ಜೈಪುರ: ಆಲ್ಟೋ ಕಾರಿನಲ್ಲಿ ಬರುವ ಕಳ್ಳರ ಗ್ಯಾಂಗ್‍ವೊಂದು ರಾಜಸ್ಥಾನದ (Rajasthan) ಜುಂಜುನುದಲ್ಲಿರುವ (Jhunjhunu) ಅಂಗಡಿಗಳ ಹೊರಗಿನ ಬಲ್ಬ್‌ಗಳನ್ನು ಕದ್ದು ತೆಗೆದುಕೊಂಡು ಹೋಗುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಜುಂಜುನುವಿನ ನವಲಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಸಿಯಾ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ. ನಾಲ್ವರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು, ಅವರಲ್ಲಿ ಒಬ್ಬ ಕಾರಿನಿಂದ ಇಳಿದು ಮೊಬೈಲ್ ಅಂಗಡಿಯ ಹೊರಗಿನ ಬಲ್ಬ್ ಕದಿಯಲು ಪ್ರಯತ್ನಿಸುತ್ತಾನೆ. ಈ ವೇಳೆ ಮತ್ತೋರ್ವ ಅಂಗಡಿ ಮುಂದೆ ಇರಿಸಲಾದ ಕುರ್ಚಿಯನ್ನು ಎತ್ತಿಕೊಟ್ಟಾಗ ಅದರ ಮೇಲೆ ನಿಂತು ಬಲ್ಬ್ ಅನ್ನು ಕದಿಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಬಾಲಕಿ ಮೇಲೆ 6 ಹುಡುಗರಿಂದ ಅತ್ಯಾಚಾರ – ಕೃತ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತಿ

    ಇದೇ ವೇಳೆ ಅಂಗಡಿ ಪಕ್ಕದಲ್ಲಿ ಮಲಗಿದ್ದ ಅಂಗಡಿ ಮಾಲೀಕ ಮಹೇಂದ್ರ ದೂತ್, ಕಳ್ಳರ ಸದ್ದು ಕೇಳಿ ಎಚ್ಚರಗೊಂಡಿದ್ದಾರೆ. ನಂತರ ಜೋರಾಗಿ ಮಾತನಾಡಿದಾಗ ಕಳ್ಳರು ಕಾರಿನೊಳಗೆ ನುಗ್ಗಿ ಎಸ್ಕೇಪ್ ಆಗಿದ್ದಾರೆ. ನಂತರ ಬೆಳಗ್ಗೆ ಮಹೇಂದ್ರ ಅವರು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಕಳ್ಳರು ಬಲ್ಬ್ ಕದ್ದೊಯ್ದಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಜಾರಕಿಹೊಳಿಯವರು ವಾಮಾಚಾರದ ಫ್ಯಾಮಿಲಿಯವರು ಸ್ಮಶಾನ ಪ್ರೀತಿಸುವವರು: ಜಗ್ಗೇಶ್

    Live Tv
    [brid partner=56869869 player=32851 video=960834 autoplay=true]

  • ಕಳ್ಳನಂತೆ ಬಂದು ಅಂಗಡಿಯಲ್ಲಿದ್ದ ಬಲ್ಬ್ ಕದ್ದ ಪೊಲೀಸ್- ವೀಡಿಯೋ ವೈರಲ್

    ಕಳ್ಳನಂತೆ ಬಂದು ಅಂಗಡಿಯಲ್ಲಿದ್ದ ಬಲ್ಬ್ ಕದ್ದ ಪೊಲೀಸ್- ವೀಡಿಯೋ ವೈರಲ್

    ಲಕ್ನೋ: ಪೊಲೀಸ್‍ನೊಬ್ಬ ಕಳ್ಳನಂತೆ ಅಂಗಡಿಗೆ ಬಂದು ಬಲ್ಬ್ (Bulb) ಅನ್ನು ಕದಿಯುವ ವೀಡಿಯೋವೊಂದು (Video) ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ (Uttar Pradesh) ಪ್ರಯಾಗ್‍ರಾಜ್‍ನಲ್ಲಿ ಅಂಗಡಿಯೊಂದರ ಹೊರಗೆ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವೀಡಿಯೋ ವೈರಲ್ (Viral Video) ಆಗುತ್ತಿದ್ದಂತೆ ಪೊಲೀಸ್ ರಾಜೇಶ್ ವರ್ಮಾನನ್ನು ಅಮಾನತುಗೊಳಿಸಲಾಗಿದೆ. ಸಿಸಿಟಿವಿಯಲ್ಲಿ ಕಾನ್ಸ್‌ಟೆಬಲ್‍ (Constable) ರಾಜೇಶ್ ವರ್ಮಾ ಮುಚ್ಚಿರುವ ಅಂಗಡಿಯೊಂದರ ಕಡೆಗೆ ಆಕಸ್ಮಿಕವಾಗಿ ಆಚೆ ಈಚೆ ಅಡ್ಡಾಡ್ಡುತ್ತಿದ್ದ. ಈ ಸಂದರ್ಭದಲ್ಲಿ ಅಂಗಡಿಯ ಹೊರಗೆಯಿದ್ದ ಬಲ್ಬ್‌ನ್ನು ನೋಡಿದ ರಾಜೇಶ್ ವರ್ಮಾ ಬಲ್ಬ್‌ನ್ನು ತೆಗೆದು, ಯಾರಿಗೂ ತಿಳಿಯದಂತೆ ಜೇಬಿನೊಳಗೆ ಹಾಕಿಕೊಂಡಿದ್ದಾನೆ.

    ಮರುದಿನ ಬಲ್ಬ್ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಅಂಗಡಿಯಾತ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾನೆ. ಈ ವೇಳೆ ಸಾರ್ವಜನಿಕ ಸೇವೆ ಸಲ್ಲಿಸಬೇಕಾದ ಪೊಲೀಸ್ ಕಾನ್ಸ್‌ಟೆಬಲ್‍ ಬಲ್ಬ್‌ನ್ನು ಕದಿಯುತ್ತಿರುವ ವೀಡಿಯೋ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್‍ನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ಕಾನೂನು ಪ್ರಕಾರ ನಿರ್ಧಾರ: ಬೊಮ್ಮಾಯಿ

    ಆರೋಪಿ ರಾಜೇಶ್ ವರ್ಮಾ ಇತ್ತೀಚೆಗಷ್ಟೇ ಬಡ್ತಿ ಹೊಂದಿದ್ದು, ಕಳೆದ ಎಂಟು ತಿಂಗಳಿಂದ ಫುಲ್‍ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ

    Live Tv
    [brid partner=56869869 player=32851 video=960834 autoplay=true]

  • ಸೇವಂತಿ ಗಿಡ ಬೆಳೆಯೋಕೆ ರೈತನ ಸ್ಮಾರ್ಟ್ ಐಡಿಯಾ

    ಸೇವಂತಿ ಗಿಡ ಬೆಳೆಯೋಕೆ ರೈತನ ಸ್ಮಾರ್ಟ್ ಐಡಿಯಾ

    ಚಿಕ್ಕಬಳ್ಳಾಪುರ: ರಾತ್ರಿಯಾದರೆ ಸಾಕು ಆ ರೈತನ ಹೂದೋಟ ವಿದ್ಯುತ್ ದೀಪಗಳ ಬೆಳಕಿನಿಂದ ಪಳಪಳ ಅಂತ ಝಗಮಗಿಸಿರುತ್ತದೆ. ಈ ಹೂದೋಟದ ತುಂಬಾ ನೂರಾರು ದೀಪಗಳನ್ನು ಆಳವಡಿಸಲಾಗಿದ್ದರಿಂದ ರಾತ್ರಿಯಿಡೀ ಹೂದೋಟ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಅರೇ ಈ ರೈತನು ಜಮೀನಿಗೆ ಏಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದಾನೆ ಎಂಬುದು ಹಲವರ ಪ್ರಶ್ನೆಯಾಗಿದೆ.

    ಚಿಕ್ಕಬಳ್ಳಾಪುರ ನಗರ ಶಿಡ್ಲಘಟ್ಟ ಮಾರ್ಗದ ಜಿಲ್ಲಾಡಳಿತ ಭವನದ ಎದುರು ಪಟ್ರೇನಹಳ್ಳಿ ಗ್ರಾಮದ ಗಿರೀಶ್ ಎಂಬ ರೈತ ತನ್ನ ಎರಡೂವರೆ ಎಕರೆ ಸೇವಂತಿಗೆ ಹೂದೋಟಕ್ಕೆ ವಿದ್ಯುತ್ ದೀಪಗಳನ್ನ ಅಳವಡಿಸಿದ್ದಾರೆ. ರಾತ್ರಿಯಾದರೆ ಸಾಕು ವಿದ್ಯುತ್ ದೀಪಗಳಿಂದ ಸೇವಂತಿಗೆ ಹೂದೋಟ ಝಗಮಗಿಸುತ್ತಾ, ನೋಡುಗರ ಕಣ್ಣು ಕುಕ್ಕುವಂತೆ ಕಾಣಿಸುತ್ತದೆ. ಅಷ್ಟಕ್ಕೂ ಈ ಹೂ ದೋಟದ ತುಂಬಾ ಸಾಲು ಸಾಲು ವಿದ್ಯುತ್ ದೀಪಗಳನ್ನ ಅಳವಡಿಸಿರುವುದು ಸೇವಂತಿ ತೋಟದ ಅಲಂಕಾರಕ್ಕಾಗಿ ಅಲ್ಲ. ಬದಲಾಗಿ ಸೇವಂತಿ ಹೂ ಸೂಪರ್ ಕಲರ್ ಬಂಪರ್ ಇಳುವರಿ ಪಡೆಯುವುದಕ್ಕೆ ರೈತ ಗಿರೀಶ್ ಮಾಡಿರುವ ಸ್ಮಾರ್ಟ್ ಯೋಜನೆಯಾಗಿದೆ.

    ಎರಡೂವರೆ ಎಕರೆಯಲ್ಲಿ ರೈತ ಗಿರೀಶ್ ಸೇವಂತಿ ಗಿಡ ನಾಟಿ ಮಾಡಿದ್ದು, ಚಳಿಗಾಲದ ಸಂದರ್ಭದಲ್ಲಿ ಸೂರ್ಯನ ಶಾಖ ಕಡಿಮೆ ಜೊತೆಗೆ ಮಂಜು ಜಾಸ್ತಿ ಇರುತ್ತದೆ. ಹೀಗಾಗಿ ಗಿಡದ ಬೆಳವಣಿಗೆ ಕಡಿಮೆ ಆಗುತ್ತದೆ ಎಂದು ಸೇವಂತಿ ಗಿಡಕ್ಕೆ ಶಾಖ ಉಂಟು ಮಾಡುವ ಸಲುವಾಗಿ ಭಿನ್ನ ಭಿನ್ನವಾಗಿ ಯೋಚಿಸಿ ತಮ್ಮ ಎರಡೂವರೆ ಎಕರೆಗೆ ಸರಿ ಸುಮಾರು 500-600 ವಿದ್ಯುತ್ ದೀಪಗಳನ್ನು 10-ರಿಂದ 12 ಅಡಿ ದೂರ ದೂರ ಅಳವಡಿಸಿದ್ದಾರೆ.

    ಬೇರೆ ರೈತರು ಮಾಡಿದ್ದನ್ನು ತಿಳಿದಿದ್ದ ಗಿರೀಶ್ ಅವರ ಈ ಐಡಿಯಾ ಇದೀಗ ಸಕ್ಸಸ್ ಆಗಿದೆ. ಲೈಟಿಂಗ್ಸ್ ಹಾಕಿ ಗಿರೀಶ್ ಬೆಳೆದಿರುವ ಸೇವಂತಿ ಹೂ ಗಿಡ ಬಣ್ಣದಿಂದ ಕೂಡಿದ್ದು ಉತ್ತಮ ಗುಣಮಟ್ಟದ್ದಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಗಿರೀಶ್ ಬೆಳೆದ ಹೂಗೆ ಭಾರೀ ಬೇಡಿಕೆ ಜೊತೆಗೆ ಬಂಪರ್ ಬೆಲೆಯೂ ಸಿಗುತ್ತಿದೆ. ಒಟ್ಟಿನಲ್ಲಿ ಭಿನ್ನ ವಿಭಿನ್ನ ಆಲೋಚನೆ ಮಾಡಿ ರೈತ ಗಿರೀಶ್ ಸ್ಮಾರ್ಟ್ ಐಡಿಯಾದಿಂದ ಬಂಪರ್ ಸೇವಂತಿ ಬೆಳೆದು ಬಂಪರ್ ಲಾಭನೂ ಮಾಡುತ್ತಿರುವುದು ಇತರೇ ರೈತರು ಮಾಡವಂತೆ ಪ್ರೇರಣೆಯಾಗಿಯಾಗಿ ಇತರೆ ರೈತರು ಲೈಟಿಂಗ್ಸ್ ಐಡಿಯಾ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.

    ಇನ್ನೂ ಈ ಲೈಟಿಂಗ್ಸ್ ಗೆ ಎಂದು ಬೆಸ್ಕಾಂ ಇಲಾಖೆಯಿಂದ ಪ್ರತ್ಯೇಕ ಪವರ್ ಕನೆಕ್ಷನ್ ಪಡೆದಿದ್ದು, ಪ್ರತಿ ತಿಂಗಳು ಅಂದಾಜು 10,000 ರೂಪಾಯಿ ಕರೆಂಟ್ ಬಿಲ್ ಬರುತ್ತದೆ ಎಂದು ಗಿರೀಶ್ ತಿಳಿಸಿದ್ದಾರೆ.

  • ಮನೆ ಮೇಲೆ ಕಲ್ಲು, ಬಲ್ಬ್ ಎಸೀತಾನೆ- ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಒಂಟಿ ಕುಟುಂಬಕ್ಕೆ ಯುವಕನಿಂದ ಕಾಟ!

    ಮನೆ ಮೇಲೆ ಕಲ್ಲು, ಬಲ್ಬ್ ಎಸೀತಾನೆ- ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಒಂಟಿ ಕುಟುಂಬಕ್ಕೆ ಯುವಕನಿಂದ ಕಾಟ!

    ತುಮಕೂರು: ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಕ್ಷೇತ್ರ ಕೊರಟಗೆರೆಯಲ್ಲಿ ಒಂಟಿ ಕುಟುಂಬವೊಂದು ಯುವಕನೋರ್ವನ ಕಾಟದಿಂದ ಬೇಸತ್ತು ಹೋಗಿದೆ.

    ಯುವಕನ ಕಾಟದಿಂದಾಗಿ ಕುಟುಂಬ ಮನೆಯಿಂದ ಹೊರಕ್ಕೆ ಬಾರದೇ ಬೀಗ ಹಾಕಿಕೊಂಡು ಕೂರುವ ಅನಿವಾರ್ಯತೆ ಎದುರಾಗಿದೆ. ಮೋರಗಾನಹಳ್ಳಿಯ ವನಜಾಕ್ಷಿ ಕುಟುಂಬಕ್ಕೆ ಪಕ್ಕದ ಮನೆಯ ನಟೇಶ್ ಎಂಬ ಯುವಕ ಕಾಟ ಕೊಡುತ್ತಿದ್ದಾನೆ. ಇದ್ದಕಿದ್ದ ಹಾಗೆ ಮನೆ ಮೇಲೆ ಕಲ್ಲು ಎಸೀತಾನೆ. ಮನೆಯವರು ಹೊರಗಡೆ ಬಂದರೆ ವಿದ್ಯುತ್ ಬಲ್ಬ್ ಎಸೆದು ಹಲ್ಲೆ ಮಾಡಲು ಮುಂದಾಗ್ತಾನೆ.

    ಇದೀಗ ಈ ಯುವಕನ ಕಿರುಕುಳದಿಂದ ವನಜಾಕ್ಷಿ ಕುಟುಂಬ ನೊಂದುಹೋಗಿದೆ. ವನಜಾಕ್ಷಿ ಪತಿ ಬೆಂಗಳೂರಲ್ಲಿ ಕೆಲಸ ಮಾಡುತಿದ್ದು, ವಾರಕೊಮ್ಮೆ ಬಂದು ಹೋಗ್ತಾರೆ. ಪತಿ ಇಲ್ಲದೆ ಇದ್ದ ಸಂದರ್ಭ ನೋಡಿ ನಟೇಶ್, ವೃದ್ಧರು, ಮಕ್ಕಳು ಎನ್ನದೆ ಹಿಂಸೆ ನೀಡ್ತಾ ಇದ್ದಾನೆ. ಕಳೆದ ಎರಡು ತಿಂಗಳಿನಿಂದ ನಟೇಶ್ ಈ ವಿಚಿತ್ರ ವರ್ತನೆ ಮಾಡುತ್ತಿದ್ದಾನೆ. ಒಂದು ವಾರದ ಹಿಂದೆ ವನಜಾಕ್ಷಿ ಮನೆಯಿಂದ ಹೊರಕ್ಕೆ ಬಂದು ಮೊಬೈಲಲ್ಲಿ ಮಾತನಾಡುತ್ತಿದ್ದಾಗ ಮೈಮೇಲೆ ಬಲ್ಬ್ ಎಸೆದಿದ್ದಾನೆ. ಅದೃಷ್ಟವಶಾತ್ ಈ ವೇಳೆ ಬಚಾವ್ ಆಗಿದ್ದಾರೆ.

    ಅಷ್ಟಕ್ಕೂ ಈ ಯುವಕನ ವರ್ತನೆಗೆ ಹಳೆಯ ದ್ವೇಷ ಕಾರಣವಂತೆ. ವನಜಾಕ್ಷಿ ಅವರ ನೀರಿನ ಪೈಪ್ ಈತನೇ ಒಡೆದು ಹಾಕಿ ಪುನಃ ರಿಪೇರಿ ಮಾಡಿಕೊಟ್ಟಿದ್ದನಂತೆ. ಇದನ್ನೇ ನೆಪವಾಗಿಸಿಕೊಂಡು ದ್ವೇಷ ಸಾಧಿಸ್ತಾ ಇದ್ದಾನೆ. ಈ ಬಗ್ಗೆ ಕೋಳಾಲ ಪೊಲೀಸರಿಗೆ ದೂರು ನಿಡಿದ್ರೆ ಅವರು ಕೂಡಾ ದೂರು ಸ್ವೀಕರಿಸುತ್ತಿಲ್ಲ. ಅಲ್ಲದೇ ದೂರು ಕೊಟ್ಟರೆ ಊರಿನಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ದಿಕ್ಕು ಕಾಣದೇ ಊರು ತೊರೆಯುವ ನಿರ್ಧಾರ ಕೈಗೊಂಡಿರುವುದಾಗಿ ಕುಟುಂಬ ಪಬ್ಲಿಕ್ ಟಿವಿ ಜೊತೆ ತನ್ನ ಅಳಲು ತೋಡಿಕೊಂಡಿದೆ.

  • ಮಾರ್ನಿಂಗ್ ವಾಕ್‍ಗೆ ಬಂದ ವ್ಯಕ್ತಿ ಬಲ್ಬ್ ಕಳ್ಳತನ ಮಾಡಿದ್ದು ಹೇಗೆ ಗೊತ್ತಾ? ವಿಡಿಯೋ ವೈರಲ್

    ಮಾರ್ನಿಂಗ್ ವಾಕ್‍ಗೆ ಬಂದ ವ್ಯಕ್ತಿ ಬಲ್ಬ್ ಕಳ್ಳತನ ಮಾಡಿದ್ದು ಹೇಗೆ ಗೊತ್ತಾ? ವಿಡಿಯೋ ವೈರಲ್

    ಚೆನ್ನೈ: ಬೆಳಗಿನ ವಾಕ್ ಮಾಡಲು ಬಂದ ವ್ಯಕ್ತಿಯೊಬ್ಬ ಮನೆ ಮುಂದಿನ ಬಲ್ಬ್ ಕಳ್ಳತನ ಮಾಡಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವ್ಯಕ್ತಿಯೊಬ್ಬ ಬೆಳಗಿನ ವಾಕ್ ಮಾಡಲು ಆಗಮಿಸಿದ್ದು, ಈ ವೇಳೆ ರಸ್ತೆ ಪಕ್ಕದ ಮನೆ ಮುಂದೇ ಹಾಕಿದ್ದ ಬಲ್ಬ್ ಕಳ್ಳತನ ಮಾಡಲು ನಾ ನಾ ರೀತಿಯ ವ್ಯಾಯಾಮ ಮಾಡಿದ್ದಾನೆ. ಈ ವೇಳೆ ಕ್ಷಣ ಮಾತ್ರದಲ್ಲಿ ಬಲ್ಬ್ ಬಿಚ್ಚಿ ತನ್ನ ಪ್ಯಾಂಟ್ ಕಿಸೆಗೆ ಹಾಕಿಕೊಂಡ ಆತ ಬಳಿಕ ಏನು ತಿಳಿಯದಂತೆ ಅಲ್ಲಿಂದ ತೆರಳಿದ್ದಾನೆ. ಈ ದೃಶ್ಯಗಳು ಮನೆ ಮುಂದಿನ ಸಿಸಿಟಿವಿ ದೃಶ್ಯಗಲ್ಲಿ ಸೆರೆಯಾಗಿದೆ.

    ತಮಿಳುನಾಡಿನ ಖಾಸಗಿ ವಾಹಿನಿಯೊಂದು ಈ ದೃಶ್ಯಗಳನ್ನು ಪ್ರಸಾರ ಮಾಡಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅಂದಹಾಗೇ ಘಟನೆ ಜೂನ್ 23 ರಂದು ತಮಿಳು ನಾಡಿನ ಕೊಯಮತ್ತೂರು ನಗರದ ಚೆರನ್ ಮಾ ನಗರ್ ಎಂಬಲ್ಲಿ ನಡೆದಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಇದುವರೆಗೂ ದೃಶ್ಯಗಳಲ್ಲಿರುವ ವ್ಯಕ್ತಿ ಯಾರೆಂಬುವುದು ತಿಳಿದು ಬಂದಿಲ್ಲ.

  • ಕೇಂದ್ರದ ಕವರ್ ಚೇಂಜ್ ಮಾಡಿ, ರಮ್ಯಾ ಕೈಯಲ್ಲಿ ಬಲ್ಬ್ ಹಿಡಿಸಿದ್ರು: ಸಿಟಿ ರವಿ ಕಿಡಿ

    ಕೇಂದ್ರದ ಕವರ್ ಚೇಂಜ್ ಮಾಡಿ, ರಮ್ಯಾ ಕೈಯಲ್ಲಿ ಬಲ್ಬ್ ಹಿಡಿಸಿದ್ರು: ಸಿಟಿ ರವಿ ಕಿಡಿ

    ಮಂಡ್ಯ: ಭಾರತ ಸರ್ಕಾರದ ಬಲ್ಬನ್ನು ರಮ್ಯಾ ಕೈಯಲ್ಲಿ ಹಿಡಿಸಿ ಪಕ್ಕದಲ್ಲಿ ಡಿಕೆ ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

    ಮಂಡ್ಯ ಜಿಲ್ಲೆಯ, ನಾಗಮಂಗಲದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ತನ್ನದೆಂದು ಹೇಳುತ್ತಿದೆ. ಬೇರೆಯವರ ಮಕ್ಕಳನ್ನು ತನ್ನ ಮಕ್ಕಳೆಂದರೆ ಅವರ ಅಪ್ಪ ಅಮ್ಮ ಹಿಡಿದುಕೊಂಡು ಹೊಡೆಯುತ್ತಾರೆ ಅಂದ್ರು.

    ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ 32 ರೂಪಾಯಿಗೆ ಅಕ್ಕಿ ಖರೀದಿ ಮಾಡಿ 3 ರೂಪಾಯಿಗೆ ರಾಜ್ಯಕ್ಕೆ ಕೊಡುತ್ತೆ. 29 ರೂಪಾಯಿ ಕೇಂದ್ರ ಸರ್ಕಾರದ ಮೋದಿಯವರದು. ಆದ್ರೆ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿಕೊಂಡು ಅನ್ನಭಾಗ್ಯ ಯೋಜನೆ ತಮ್ಮದೆಂದು ಹೇಳುತ್ತಾರೆ ಅಂತ ಕಿಡಿಕಾರಿದ್ರು.

    ಎಲ್‍ಇಡಿ ಬಲ್ಬ್ ಕೊಡುವುದು ಕೇಂದ್ರದ ಪ್ರಕಾಶ್ ಪಥ್ ಯೋಜನೆ. ಈಗಲೂ ಬಲ್ಬ್‍ನಲ್ಲಿ ಭಾರತ ಸರ್ಕಾರ ಅಂತಾನೆ ಇದೆ. ಆದ್ರೆ ಹೊರಗೆ ಕವರ್ ಚೇಂಜ್ ಮಾಡಿ ರಮ್ಯಾ ಕೈಯಲ್ಲಿ ಬಲ್ಬನ್ನು ಹಿಡಿಸಿ ಪಕ್ಕದಲ್ಲಿ ಡಿಕೆ.ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ. ಅದೇ ರೀತಿ ಕೇಂದ್ರ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಹೇಳುತ್ತಿದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಅಂತ ಹೇಳಿದ್ರು.

    ಎಲ್ಲರಿಗಿಂತ ಹೆಚ್ಚು ಸಾಲ ಮಾಡಿದ ಸಿದ್ದರಾಮಯ್ಯ ಯಾವ ಕೆಲಸವೂ ಮಾಡದೇ ಕಳ್ಳಬಿಲ್ಲು ಸುಳ್ಳು ಲೆಕ್ಕಕ್ಕೆ ಸಾಲ ಮಾಡುತ್ತಿದ್ದಾರೆ. ದುಡ್ಡು ಹೊಡೆಯಲು ರಾಜ್ಯ ಸರ್ಕಾರದಲ್ಲಿ ನಾಲ್ಕೈದು ಜನ ಸಚಿವರಿದ್ದಾರೆ ಎಂದು ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.