Tag: ಬಲ್ಗೇರಿಯಾ

  • ಭಯಾನಕ ಹವಾಮಾನ ಘಟನೆ, ಭಯೋತ್ಪಾದಕ ದಾಳಿಗಳಲ್ಲಿ ಹೆಚ್ಚಳ: 2024 ಕ್ಕೆ ಬಾಬಾ ವಂಗಾ ಭವಿಷ್ಯವಾಣಿ

    ಭಯಾನಕ ಹವಾಮಾನ ಘಟನೆ, ಭಯೋತ್ಪಾದಕ ದಾಳಿಗಳಲ್ಲಿ ಹೆಚ್ಚಳ: 2024 ಕ್ಕೆ ಬಾಬಾ ವಂಗಾ ಭವಿಷ್ಯವಾಣಿ

    – ಪುಟಿನ್‌ ಮೇಲೆ ದೇಶವಾಸಿಯಿಂದ ಹತ್ಯೆ ಯತ್ನ ನಡೆಯಬಹುದು ಎಂದು ಭವಿಷ್ಯ

    ಸೋಫಿಯಾ: 2024 ಕ್ಕೆ ಭಯಾನಕ ಹವಾಮಾನ ಘಟನೆಗಳು ಹಾಗೂ ಭಯೋತ್ಪಾದಕ ದಾಳಿಗಳಲ್ಲಿ ಏರಿಕೆಯಾಗಲಿದೆ ಎಂದು ಬಾಬಾ ವಂಗಾ (Baba Vanga) ಅವರು ಭವಿಷ್ಯ ನುಡಿದಿದ್ದಾರೆ.

    ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಬಾಬಾ ವಂಗಾ ಅವರು, 9/11 ಭಯೋತ್ಪಾದಕ ದಾಳಿಗಳು, ರಾಜಕುಮಾರಿ ಡಯಾನಾ ಸಾವು, ಚೆರ್ನೋಬಿಲ್ ದುರಂತ ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ವಿಶ್ವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. 2024 ರಲ್ಲಿ ಅವರು ಏಳು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಇದನ್ನೂ ಓದಿ: 9 ಉಗ್ರರ ಹತ್ಯೆ – ಎಲ್ಲರನ್ನೂ ನರಕಕ್ಕೆ ಕಳುಹಿಸಿದ್ದೇವೆ ಎಂದ ಪಾಕ್‌ ಸೇನೆ

    ಮುಂದಿನ ವರ್ಷ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಸಹ ದೇಶವಾಸಿಯಿಂದ ಹತ್ಯೆಯ ಪ್ರಯತ್ನ ನಡೆಯಬಹುದು. ಯುರೋಪ್‌ನಲ್ಲಿ ಹೆಚ್ಚಿದ ಭಯೋತ್ಪಾದಕ ದಾಳಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮುಂದಿನ ವರ್ಷ “ದೊಡ್ಡ ದೇಶ” ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.

    ಮುಂದಿನ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಹೆಚ್ಚುತ್ತಿರುವ ಸಾಲದ ಮಟ್ಟಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂತಹ ಅಂಶಗಳು ಇದಕ್ಕೆ ಕಾರಣಗಳಾಗಿವೆ ಎಂದು ಬಾಬಾ ವಂಗಾ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸೋವಿಯತ್‌ ಒಕ್ಕೂಟದಂತೆ ಅಮೆರಿಕವೂ ನಾಶವಾಗುತ್ತದೆ – ಹಮಾಸ್‌ ಎಚ್ಚರಿಕೆ

    ಮುಂದಿನ ವರ್ಷ ಭಯಾನಕ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ. ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಸುಧಾರಿತ ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಾರೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದಿದ್ದಾರೆ.

    2024 ರಲ್ಲಿ ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಬರಲಿವೆ. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಪ್ರಮುಖ ಪ್ರಗತಿಯಾಗಲಿದೆ ಎಂದು ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Nepal Earthquake: ಕಟ್ಟಡದಡಿ ಸಿಲುಕಿ ಮಲಗಿದ್ದಲ್ಲೇ ಉಸಿರುಚೆಲ್ಲಿದ ಉಪಮೇಯರ್

    1911 ರಲ್ಲಿ ಜನಿಸಿದ್ದ ಉತ್ತರ ಮ್ಯಾಸಿಡೋನಿಯಾದಲ್ಲಿ ಜನಿಸಿದ್ದರು. ಅವರು 1996 ರಲ್ಲಿ ನಿಧನರಾಗಿದ್ದಾರೆ. ಕುರುಡರಾಗಿದ್ದ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಅವರ ಮರಣದ ನಂತರ ಬಹಳ ಕಾಲ ನಿಜವಾಯಿತು ಎಂದು ಹೇಳಲಾಗುತ್ತದೆ.

  • ಪೋಲೆಂಡ್, ಬಲ್ಗೇರಿಯಾ, ಜೆಕ್ ವಿಮಾನ ಪ್ರಯಾಣ ನಿಷೇಧಿಸಿದ ರಷ್ಯಾ

    ಪೋಲೆಂಡ್, ಬಲ್ಗೇರಿಯಾ, ಜೆಕ್ ವಿಮಾನ ಪ್ರಯಾಣ ನಿಷೇಧಿಸಿದ ರಷ್ಯಾ

    ಮಾಸ್ಕೋ: ರಷ್ಯಾದಾಳಿಯ ಬೆನ್ನಲ್ಲೆ ಇಡೀ ಉಕ್ರೇನ್ ದೇಶ ಸ್ಮಶಾನ ದಂತೆ ಆವರಿಸಿದೆ. ರಷ್ಯಾದ ಪಡೆಗಳು ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರಿಸಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧ ಸಂಘರ್ಷ ವಿಶ್ವದಲ್ಲೇ ಭಾರಿ ಆತಂಕವನ್ನುಂಟು ಮಾಡಿದೆ. ಇದೀಗ ಪೋಲೆಂಡ್, ಬಲ್ಗೇರಿಯಾ, ಜೆಕ್ ಗಣರಾಜ್ಯಗಳ ವಿಮಾನಯಾನ ಸಂಸ್ಥೆಗಳನ್ನು ರಷ್ಯಾ ನಿಷೇಧಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಜೆಕ್ ಗಣರಾಜ್ಯ, ಪೋಲೆಂಡ್ ಮತ್ತು ಬಲ್ಗೇರಿಯಾ ರಾಷ್ಟ್ರಗಳು ರಷ್ಯಾದ ವಿಮಾನಗಳಿಗೆ ತಮ್ಮ ವಾಯುಪ್ರದೇಶವನ್ನು ಮುಚ್ಚುವುದಾಗಿ ಹೇಳಿದ್ದವು. ಇದಕ್ಕೆ ಪ್ರತಿಕಾರವಾಗಿ ಈ ಮೂರು ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳನ್ನು ನಿಷೇಧಿಸಲಾಗಿದೆ ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ಈ ವಾರದ ಆರಂಭದಲ್ಲಿ ರಷ್ಯಾ ವಿಮಾನಗಳಿಗೆ ಬ್ರಿಟನ್ ಸಹ ನಿಷೇಧ ಹೇರುವ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಬ್ರಿಟನ್‍ಗೆ ತೆರಳುವ ಎಲ್ಲ ವಿಮಾನಗಳಿಗೆ ತಡೆಯೊಡ್ಡಿದೆ. ರಷ್ಯಾ ದಾಳಿ ಮಾಡಿದಾಗಿನಿಂದ ಈ ವರೆಗೆ 198 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಇದನ್ನೂ ಓದಿ: ಶತ್ರುಗಳನ್ನು ತಡೆಯಲು ಸೇತುವೆ ಜೊತೆ ತನ್ನನ್ನು ಸ್ಫೋಟಿಸಿಕೊಂಡ ಉಕ್ರೇನ್ ಯೋಧ

    ನಾವು ಶಸ್ತ್ರ ತ್ಯಾಗ ಮಾಡುವುದಿಲ್ಲ. ನಮ್ಮ ಸೈನ್ಯ ಮತ್ತು ನಮ್ಮ ದೇಶದ ಮೇಲೆ ನಾವು ವಿಶ್ವಾಸವಿಟ್ಟಿದ್ದೇವೆ. ನಾವು ಅದನ್ನು ರಕ್ಷಿಸುತ್ತೇವೆ. ಕೀವ್ ಅನ್ನು ಬಿಟ್ಟುಕೊಡುವ ಮಾತೇ ಇಲ್ಲ ಉಕ್ರೇನ್‍ನ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಮಕ್ಕಳು ಸೇರಿದಂತೆ 198 ಉಕ್ರೇನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಹೇಳಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದ್ದು, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‌ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಂಟರ್‍ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ.

  • ಚಿನ್ನದ ಪದಕವನ್ನು ಅಭಿನಂದನ್‍ಗೆ ಸಮರ್ಪಿಸಿ ಗೌರವ ಸಲ್ಲಿಸಿದ ಭಜರಂಗ್ ಪುನಿಯಾ

    ಚಿನ್ನದ ಪದಕವನ್ನು ಅಭಿನಂದನ್‍ಗೆ ಸಮರ್ಪಿಸಿ ಗೌರವ ಸಲ್ಲಿಸಿದ ಭಜರಂಗ್ ಪುನಿಯಾ

    ನವದೆಹಲಿ: ಭಾರತದ ಪ್ರಸಿದ್ಧ ಕುಸ್ತಿ ಪಟು ಭಜರಂಗ್ ಪುನಿಯಾ ಬಲ್ಗೆರಿಯಾ ಕುಸ್ತಿ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ಪದಕವನ್ನು ಪಾಕ್ ಕಪಿಮುಷ್ಟಿಯಿಂದ ಭಾರತಕ್ಕೆ ವಾಪಾಸ್ ಬಂದಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಸಮರ್ಪಿಸಿ ಗೌರವ ಸಲ್ಲಿಸಿದ್ದಾರೆ.

    ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯ 65 ಕೆಜಿ ವಿಭಾಗದಲ್ಲಿ ಭಾರತದ ಭಜರಂಗ್ ಅವರು ಅಮೆರಿಕಾದ ಜೋರ್ಡನ್ ಒಲಿವೇರ್ ಅವರನ್ನು ಮಣಿಸಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ ತಮಗೆ ಬಂದಿರುವ ಚಿನ್ನದ ಪದಕವನ್ನು ಅಭಿನಂದನ್ ಅವರಿಗೆ ಅರ್ಪಿಸಿ ವೀರ ಯೋಧನಿಗೆ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ:ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’

    ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಭಾರತದ ಕೆಚ್ಚೆದೆಯ ಈ ವೀರಯೋಧನ ಸ್ಪೂರ್ತಿಯಿಂದಲೇ ನಾನು ಇಂದು ಚಿನ್ನದ ಪದಕ ಗೆದ್ದಿದ್ದೇನೆ. ಹೀಗಾಗಿ ಈ ಪದಕವನ್ನು ಅವರಿಗೆ ಸಮರ್ಪಿಸಲು ಬಯಸಿದ್ದೇನೆ ಎಂದು ಭಜರಂಗ್ ಪುನಿಯಾ ತಿಳಿಸಿದ್ದಾರೆ.

    ಅಭಿನಂದನ್ ಅವರ ದೇಶಸೇವೆಗೆ ನನ್ನ ನಮನ, ಅವರನ್ನು ನಾನೂ ಒಮ್ಮೆ ಭೇಟಿಯಾಗಬೇಕು, ಕೈ ಕುಲಕಬೇಕು ಎನ್ನುವ ಆಸೆ ಇದೆ ಎಂದಿದ್ದಾರೆ. ಭಜರಂಗ್ ಪುನಿಯಾ ಒಲಂಪಿಕ್, ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಭಾರತದಿಂದ ಸ್ಪರ್ಧಿಸಿ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಕಳೆದ 5 ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ 4 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv