Tag: ಬಲೂನ್ ಟಾಸ್ಕ್

  • ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ನಿನ್ನೆ ಬಿಗ್‍ಬಾಸ್, ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಿ ಇಬ್ಬರನ್ನು ನಾಯಕರಾಗಿ ಸುಚಿಸುವಂತೆ ಕ್ಯಾಪ್ಟನ್ ವಿಶ್ವನಾಥ್‍ಗೆ ಸೂಚಿಸಿದರು. ಅದರಂತೆ ವಿಶ್ವನಾಥ್ ದಿವ್ಯಾ ಉರುಡುಗ ಹಾಗೂ ಶುಭರನ್ನು ನಾಯಕರಾಗಿ ಆಯ್ಕೆ ಮಾಡಿದರು.

    ನಂತರ ದಿವ್ಯಾ ಉರುಡುಗ ತನ್ನ ತಂಡಕ್ಕೆ ಅರವಿಂದ್, ರಾಜೀವ್, ದಿವ್ಯಾ ಸುರೇಶ್, ಶಮಂತ್, ಶಂಕರ್‍ರನ್ನು ಆಯ್ಕೆ ಮಾಡಿಕೊಂಡು ತಂಡಕ್ಕೆ ‘ಅನುಬಂಧ’ ಎಂದು ಹೆಸರಿಟ್ಟರೆ, ಶುಭ ಪೂಂಜಾ, ಮಂಜು, ನಿಧಿ, ಪ್ರಶಾಂತ್, ವೈಷ್ಣವಿ, ರಘುರನ್ನು ಸೇರಿಸಿಕೊಂಡು ತಂಡಕ್ಕೆ ‘ಜಾತ್ರೆ’ ಎಂದು ಹೆಸರಿಡುತ್ತಾರೆ.

    ಬಳಿಕ ಎರಡು ತಂಡಕ್ಕೆ ಬಿಗ್‍ಬಾಸ್, ಗುಂಪು ಚಟುವಟಿಕೆಯನ್ನು ನೀಡುತ್ತಾರೆ. ಗಾರ್ಡನ್ ಏರಿಯದಲ್ಲಿ ಬಲೂನ್‍ಗಳನ್ನು ಇರಿಸಲಾಗಿದ್ದು, ಸದಸ್ಯರು ಬಲೂನ್‍ಗಳ ಮೇಲೆ ಕುಳಿತು ಹೊಡೆದು ಹಾಕಬೇಕು. ಆಗ ಬಲೂನ್‍ನಲ್ಲಿದ್ದ ಬೆಳ್ಳಿ ಹಾಗೂ ಚಿನ್ನದ ಚೀಟಿಗಳನ್ನು ಯಾವ ತಂಡ ಹೆಚ್ಚಾಗಿ ಸಂಗ್ರಹಿಸಿರುತ್ತಾರೋ ಅವರು ವಿಜೇತರಾಗಿರುತ್ತಾರೆ ಹಾಗೂ ಗೆದ್ದ ತಂಡಕ್ಕೆ ಬಹುಮಾನವಾಗಿ ಚಾಕಲೇಟ್ ನೀಡುವುದಾಗಿ ತಿಳಿಸಿರುತ್ತಾರೆ.

    ಅದರಂತೆ ಚಾಕಲೇಟ್ ತಿನ್ನುವ ಆಸೆಯಿಂದ ರೊಚ್ಚಿಗೆದ್ದ ಮನೆಮಂದಿ, ಒಂದು ಬಲೂನ್‍ನನ್ನು ಬಿಡದಂತೆ ಕುಳಿತು ಹೊಡೆದು ಹಾಕಿ ಚಿನ್ನದ ಹಾಗೂ ಬೆಳ್ಳಿಯ ಚೀಟಿಗಳನ್ನು ಸಂಗ್ರಹಿಸುತ್ತಾರೆ. ಈ ಟಾಸ್ಕ್‍ನಲ್ಲಿ ಶುಭ ಪೂಂಜಾರ ಜಾತ್ರೆ ಗ್ಯಾಂಗ್ 29 ಬಂಗಾರದ ಚೀಟಿಗಳನ್ನು ಸಂಗ್ರಹಿಸುವ ಮೂಲಕ ವಿಜೇತರಾಗುತ್ತಾರೆ. ಬಳಿಕ ಬಿಗ್‍ಬಾಸ್ ಜಾತ್ರೆ ತಂಡಕ್ಕೆ ಚಾಕಲೇಟ್ ಕಳುಹಿಸಿಕೊಡುತ್ತಾರೆ.

    ನಂತರ ಜಾತ್ರೆ ತಂಡದವರು ಎದುರಾಳಿ ತಂಡದವರಿಗೆ ಅಣುಕಿಸುತ್ತಾ ಚಾಕಲೇಟ್‍ನನ್ನು ಸವಿದು ಆನಂದಿಸುತ್ತಾರೆ. ಒಟ್ಟಾರೆ ಈ ವಾರದ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಜಾತ್ರೆ ತಂಡ ಸಿಹಿ ತಿನ್ನುವ ಮೂಲಕ ನ್ಯೂ ಗೇಮ್ ಸ್ಟಾರ್ಟ್ ಮಾಡಿದ್ದಾರೆ. ಆದರೆ ಮುಂದೆ ಹೇಗೆ ಆಟ ಆಡುತ್ತಾರೆ ಎಂದು ಕಾದು ನೋಡಬೇಕಾಗಿದೆ.