Tag: ಬಲೂಚಿಸ್ತಾನ್‌

  • ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಇಸ್ಲಾಮಾಬಾದ್: ಬಲೂಚಿಸ್ತಾನ್‌ ಪರ ಮಾತನಾಡಿದ್ದಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಪಾಕಿಸ್ತಾನವು ‘ಭಯೋತ್ಪಾದಕ’ ಎಂಬ ಹಣಪಟ್ಟಿ ಕಟ್ಟಿದೆ.

    ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಭಾರತೀಯ ಸಿನಿಮಾದ ಜಾಗತಿಕ ವ್ಯಾಪ್ತಿಯ ಬಗ್ಗೆ ಮಾತನಾಡುವಾಗ, ಬಲೂಚಿಸ್ತಾನ್ (Balochistan) ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದರು. ಹೀಗಾಗಿ, ಪಾಕಿಸ್ತಾನ (Pakistan) ಸರ್ಕಾರ ಅವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದೆ. ಇದನ್ನೂ ಓದಿ: ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಸಲ್ಮಾನ್ ಅವರನ್ನು ಪಾಕಿಸ್ತಾನದ 1997 ರ ಭಯೋತ್ಪಾದನಾ ನಿಗ್ರಹ ಕಾಯ್ದೆಯ 4ನೇ ವೇಳಾಪಟ್ಟಿಯ ಅಡಿಯಲ್ಲಿ ಸೇರಿಸಲಾಗಿದೆ. ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಕಟ್ಟುನಿಟ್ಟಿನ ನಿಗಾದಲ್ಲಿರುವ ವ್ಯಕ್ತಿಗಳಿಗೆ ಈ ವರ್ಗವನ್ನು ಕಾಯ್ದಿರಿಸಲಾಗಿದೆ.

    ‘ಈಗ ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ಗಳಿಸುತ್ತದೆ. ಏಕೆಂದರೆ ಇಲ್ಲಿ ಹಲವಾರು ದೇಶಗಳ ಜನರು ವಾಸಿಸುತ್ತಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಲ್ಮಾನ್‌ ಖಾನ್‌ ಸಮಾರಂಭದಲ್ಲಿ ಮಾತನಾಡಿದ್ದರು.

    ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸುವ ಅವರ ಹೇಳಿಕೆಯು ಪಾಕ್‌ನ ತೀವ್ರ ಟೀಕೆಗೆ ಗುರಿಯಾಗಿದೆ. ಏಕೆಂದರೆ ಪಾಕಿಸ್ತಾನ ಆ ಪ್ರಾಂತ್ಯವನ್ನು ದೇಶದ ಅವಿಭಾಜ್ಯ ಅಂಗವೆಂದು ನೋಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸಲ್ಮಾನ್ ಅವರ ಮಾತುಗಳನ್ನು ಶ್ಲಾಘಿಸಿದ್ದಾರೆ. ಬಲೂಚ್ ಸ್ವಾತಂತ್ರ್ಯದ ಪ್ರಮುಖ ವಕೀಲರಾದ ಮೀರ್ ಯಾರ್ ಬಲೂಚ್, ‘ನಟ ಆರು ಕೋಟಿ ಬಲೂಚ್ ಜನರಿಗೆ ಸಂತೋಷ ತಂದಿದ್ದಾರೆ’ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ: ಟ್ರಂಪ್ ಅದೇ ರಾಗ

    ಪಾಕಿಸ್ತಾನದ ಅತಿದೊಡ್ಡ ಆದರೆ ಕಡಿಮೆ ಅಭಿವೃದ್ಧಿ ಹೊಂದಿದ ಪ್ರಾಂತ್ಯವಾದ ಬಲೂಚಿಸ್ತಾನ್, ದೀರ್ಘಕಾಲದಿಂದ ಆರ್ಥಿಕ ನಿರ್ಲಕ್ಷ್ಯ, ರಾಜಕೀಯ ದಮನ ಮತ್ತು ಮಿಲಿಟರಿ ದಮನಗಳನ್ನು ಎದುರಿಸುತ್ತಿದೆ. ಅಪಾರ ಖನಿಜ ಸಂಪತ್ತಿನ ಹೊರತಾಗಿಯೂ, ಈ ಪ್ರದೇಶವು ಬಡತನದಿಂದ ಬಳಲುತ್ತಿದೆ. ಅದರ ಜನಸಂಖ್ಯೆಯ 70% ಕ್ಕಿಂತ ಹೆಚ್ಚು ಜನರು ಬಡತನ ರೇಖೆಯ ಕೆಳಗಿದ್ದಾರೆ.

  • ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್‌ನಿಂದ ಸೇನಾ ವಾಹನದ ಮೇಲೆ ದಾಳಿ – 10ಕ್ಕೂ ಹೆಚ್ಚು ಪಾಕ್ ಸೈನಿಕರ ಸಾವು

    ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್‌ನಿಂದ ಸೇನಾ ವಾಹನದ ಮೇಲೆ ದಾಳಿ – 10ಕ್ಕೂ ಹೆಚ್ಚು ಪಾಕ್ ಸೈನಿಕರ ಸಾವು

    ಕ್ವೆಟ್ಟಾ: ಬಲೂಚಿಸ್ತಾನದಲ್ಲಿ (Balochistan) ನಡೆಯುತ್ತಿರುವ ಪ್ರತಿರೋಧ ಚಳುವಳಿಯ ಭಾಗವಾಗಿ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ (Balochistan Liberation Front) ಪಾಕಿಸ್ತಾನದ ಸೇನಾ ವಾಹನದ ಮೇಲೆ ದಾಳಿ ನಡೆಸಿದೆ. ಪರಿಣಾಮ 10ಕ್ಕೂ ಹೆಚ್ಚು ಪಾಕ್ ಸೈನಿಕರು (Pakistan Army) ಸಾವನ್ನಪ್ಪಿದ್ದಾರೆ.

    ಪಾಕಿಸ್ತಾನ ಸೇನೆಯು ಬಲೂಚ್ ರಾಜಿ ಆಜೋಯ್ ಸಂಗರ್ ಎಂಬ ಬಲೂಚ್ ಸಶಸ್ತ್ರ ಗುಂಪುಗಳ ಒಕ್ಕೂಟದ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಆಕ್ರಮಣಕಾರಿಯಾಗಿ ಮುನ್ನುಗ್ಗಲು ಪ್ರಯತ್ನಿಸಿದಾಗ ಖುಜ್ದಾರ್‌ನ ಜೆಹ್ರಿ ಪ್ರದೇಶದಲ್ಲಿ ಭೀಕರ ದಾಳಿ ನಡೆದಿದೆ. ಇದನ್ನೂ ಓದಿ:ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತ, ಬೆಂಗ್ಳೂರು, ಪುಣೆ ಮಿನುಗುತ್ತೆ – ಬಾಹ್ಯಾಕಾಶದಿಂದ ಭಾರತ ಕಂಡ ಬಗೆ ಹಂಚಿಕೊಂಡ ಶುಕ್ಲಾ

    ಈ ಕುರಿತು ಬಲೂಚ್ ರಾಜಿ ಆಜೋಯ್ ಸಂಗರ್ ವಕ್ತಾರ ಬಲೂಚ್ ಖಾನ್ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಘರ್ಷಣೆ ಸಮಯದಲ್ಲಿ 10ಕ್ಕೂ ಅಧಿಕ ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆ. BRASನ ಆರು ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಬಲೂಚ್ ಲಿಬರೇಶನ್ ಆರ್ಮಿ, ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್, ಬಲೂಚ್ ರಿಪಬ್ಲಿಕನ್ ಗಾರ್ಡ್ ಮತ್ತು ಸಿಂಧು ದೇಶ್ ರೆವಲ್ಯೂಷನರಿ ಆರ್ಮಿಗಳನ್ನು ಒಳಗೊಂಡಿರುವ ಒಕ್ಕೂಟವು ಒಂದೇ ಧ್ವಜದ ಅಡಿಯಲ್ಲಿ ಒಗ್ಗಟ್ಟಿನಿಂದ ಉಳಿಯುತ್ತವೆ. ಎಲ್ಲ ಪ್ರತಿರೋಧಗಳ ನಡುವೆಯೂ BRAS ಏಕತೆಗೆ ಬದ್ಧರಾಗುವುದನ್ನು ಪುನರುಚ್ಛರಿಸುತ್ತದೆ ಎಂದಿದ್ದಾರೆ.

    ಬಲೂಚಿಸ್ತಾನ್ ದೀರ್ಘಕಾಲದಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಸಮಸ್ಯೆಗಳಿಗೆ ಕೇಂದ್ರಬಿಂದುವಾಗಿದೆ. ಈ ಪ್ರದೇಶವು ಪ್ರತ್ಯೇಕತಾವಾದಿ ಚಳುವಳಿಗಳು, ಬಲವಾದ ಮಿಲಿಟರಿ ಸಂಬಂಧಿಸಿದ ಹಿಂಸಾಚಾರಗಳನ್ನು ಎದುರಿಸಿದೆ.ಇದನ್ನೂ ಓದಿ: ದೀಪಾವಳಿ ಬೋನಸ್ ಕೊಟ್ಟಿಲ್ಲ ಅಂತ ಬೇಸರ; ಟೋಲ್ ಸಂಗ್ರಹಿಸದೇ ವಾಹನಗಳನ್ನ ಫ್ರೀ ಬಿಟ್ಟ ಸಿಬ್ಬಂದಿ

  • Pakistan Train Hijack | 150ಕ್ಕೂ ಹೆಚ್ಚು ಸೈನಿಕರ ಹತ್ಯೆ – 50ಕ್ಕೂ ಹೆಚ್ಚು ಒತ್ತೆಯಾಳುಗಳು ಗಲ್ಲಿಗೆ

    Pakistan Train Hijack | 150ಕ್ಕೂ ಹೆಚ್ಚು ಸೈನಿಕರ ಹತ್ಯೆ – 50ಕ್ಕೂ ಹೆಚ್ಚು ಒತ್ತೆಯಾಳುಗಳು ಗಲ್ಲಿಗೆ

    – ರೈಲು ಹೈಜಾಕ್ ಸ್ಥಳಕ್ಕೆ 200ಕ್ಕೂ ಹೆಚ್ಚು ಶವಪೆಟ್ಟಿಗೆಗಳ ರವಾನೆ

    ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಪ್ರಕರಣದಲ್ಲಿ (Pakistan Train Hijack Case) ಭಾರೀ ಸಾವು ನೋವು ಉಂಟಾಗಿದೆ. ಬಲೂಚ್ ಲಿಬರೇಷನ್ ಆರ್ಮಿ ವಶದಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಪಾಕ್ ಸೇನೆ (Pakistan Army) ಕೌಂಟರ್ ಆಪರೇಷನ್ ನಡೆದಿದೆ.

    ಈವರೆಗೂ 190 ಪ್ರಯಾಣಿಕರನ್ನು ರಕ್ಷಿಸಿದ ಭದ್ರತಾ ಪಡೆಗಳು, 30 ಪ್ರತ್ಯೇಕತಾವಾದಿಗಳನ್ನು ಕೊಂದಿದೆ. ಉಳಿದ ಪ್ರಯಾಣಿಕರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್, ಡ್ರೋನ್ ಬಳಸಿ ಪಾಕ್ ಸೇನೆ ಕಾರ್ಯಚರಣೆ ನಡೆಸಿದೆ. ಆದ್ರೆ, ಬಿಎಲ್‌ಎ ಪಟ್ಟುಬಿಡಲು ತಯಾರಿಲ್ಲ. ನೂರಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಬಿಎಲ್‌ಎ ಈವರೆಗೂ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೊಂದಿದೆ.

    50 ಒತ್ತೆಯಾಳುಗಳು ಗಲ್ಲಿಗೆ:
    ರೈಲು ಹೈಜಾಕ್‌ ಮಾಡಿ 200 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಬಲೂಚ್‌ ದಂಗೆಕೋರರು, ಪಾಕಿಸ್ತಾನ ಸೇನೆ ನಮ್ಮ ವಿರುದ್ಧ ನಡೆಸಿದ ದಾಳಿಗೆ ಪ್ರತೀಕಾರವಾಗಿ 50 ಒತ್ತೆಯಾಳುಗಳನ್ನ ಗಲ್ಲಿಗೇರಿಸಿರುವುದಾಗಿ ಹೇಳಿಕೊಂಡಿದೆ. ಮಿಲಿಟರಿ ಕಾರ್ಯಾಚರಣೆಯನ್ನು ರದ್ದುಗೊಳಿಸಿ, ಬಂಧಿಸಿರುವ ಬಲೂಚ್‌ ಕೈದಿಗಳನ್ನು 20 ಗಂಟೆಗೊಳಗೆ ಬಿಡುಗೆ ಮಾಡಬೇಕು. ಇಲ್ಲದಿದ್ದರೆ ಉಳಿದ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಧಂಗೆಕೋರರ ಗುಂಪು ಎಚ್ಚರಿಕೆ ನೀಡಿದೆ.

    ದಂಗೆಕೋರರು ಹೇಳುವ ಪ್ರಕಾರ, ಅವರ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳು ಪಾಕಿಸ್ತಾನದ ಸೇನೆ, ಪೊಲೀಸ್, ಫ್ರಾಂಟಿಯರ್ ಕಾರ್ಪ್ಸ್ ಮತ್ತು ಇತರ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: PUBLiC TV Exclusive | ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ಸಿಐಡಿ ವಿಚಾರಣೆ ಆದೇಶ ವಾಪಸ್ ಪಡೆದ ಸರ್ಕಾರ!

    ಮೊದಲು ವೈಮಾನಿಕ ದಾಳಿ ನಿಲ್ಲಿಸಬೇಕು. ಇಲ್ಲ ಅಂದ್ರೆ ಉಳಿದವರನ್ನು ಕೊಲ್ತೇವೆ. ನಮ್ಮ ಬಿಎಲ್‌ಎ ಸೈನಿಕರ ಮೇಲೆ ದಾಳಿ ಮಾಡಿದ್ರೆ ಇಡೀ ರೈಲನ್ನೇ ಸ್ಫೋಟಿಸ್ತೇವೆ. ನಮ್ಮ ಆತ್ಮಾಹುತಿ ಪಡೆ ರೈಲಲ್ಲಿ ಸಜ್ಜಾಗಿದೆ ಎಂದು 70 ರಿಂದ 80 ಮಂದಿ ಇರುವ ಮಜೀದ್ ಬ್ರಿಗೇಡ್ ಎಚ್ಚರಿಕೆ ನೀಡಿದೆ.  ಇದನ್ನೂ ಓದಿ: ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

    ಈಗಾಗಲೇ ರೈಲ್ವೇ ಹಳಿಯನ್ನು ಬಿಎಲ್‌ಎ ಸಂಪೂರ್ಣವಾಗಿ ಸ್ಫೋಟಿಸಿದೆ. ಒತ್ತೆಯಾಳುಗಳ ಪೈಕಿ ಕೆಲವರನ್ನು ಪರ್ವತ ಪ್ರದೇಶಕ್ಕೆ ಕರೆದೊಯ್ದಿದೆ. ತಮ್ಮ ಬೇಡಿಕೆ ಈಡೇರಿಕೆಗೆ 24 ಗಂಟೆಗಳ ಸಮಯ ಕೊಟ್ಟಿದೆ. ಬದುಕುವ ಆಸೆ ಇದ್ರೆ ಬಲೂಚ್‌ನಿಂದ ದೂರ ಇರಿ ಎಂದು ಚೀನಾ ಮತ್ತು ಪಾಕ್‌ಗೆ ಬಿಎಲ್‌ಎ ನೇರ ವಾರ್ನಿಂಗ್ ಕೊಟ್ಟಿದೆ. ಇದು ಪರ್ವತ ಪ್ರದೇಶವಾದ ಕಾರಣ ಸೇನಾ ಕಾರ್ಯಚರಣೆ ಜಟಿಲವಾಗಿದೆ. ಪ್ರತ್ಯೇಕತಾವಾದಿಗಳು ಚಿಕ್ಕ ಚಿಕ್ಕ ಗುಂಪುಗಳಾಗಿ ಬೇರ್ಪಟ್ಟಿರೋದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ರೈಲು ಹೈಜಾಕ್ ಆದ ಸ್ಥಳಕ್ಕೆ 200ಕ್ಕೂ ಹೆಚ್ಚು ಶವಪೆಟ್ಟಿಗೆಗಳನ್ನು ಸರ್ಕಾರ ರವಾನಿಸಿದೆ. ಈ ನಡುವೆ ಉಗ್ರರು 150ಕ್ಕೂ ಹೆಚ್ಚು ಪಾಕಿಸ್ತಾನದ ಸೈನಿಕರನ್ನ ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು

  • ಪಾಕ್‌ನಲ್ಲಿ ಉಗ್ರರ ದಾಳಿ | ಬಸ್ಸಿನಿಂದ ಇಳಿಸಿ ಗುರುತು ಚೆಕ್‌ ಮಾಡಿ ಶೂಟೌಟ್‌ – 23 ಮಂದಿ ಬಲಿ

    ಪಾಕ್‌ನಲ್ಲಿ ಉಗ್ರರ ದಾಳಿ | ಬಸ್ಸಿನಿಂದ ಇಳಿಸಿ ಗುರುತು ಚೆಕ್‌ ಮಾಡಿ ಶೂಟೌಟ್‌ – 23 ಮಂದಿ ಬಲಿ

    ಬಲೂಚಿಸ್ತಾನ್: ಪಾಕಿಸ್ತಾನದ (Pakistan) ಬಲೂಚಿಸ್ತಾನ್ ಮುಸಾಖೆಲ್ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಭಯೋತ್ಪಾದಕರು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಲು ಒತ್ತಾಯಿಸಿ, ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದ.ಕೊರಿಯಾ ಆಟಗಾರರ ಜೊತೆ ಸೆಲ್ಫಿ – ಕ್ರೀಡಾಪಟುಗಳ ವಿರುದ್ಧ ಕ್ರಮಕ್ಕೆ ಮುಂದಾದ ಉ.ಕೊರಿಯಾ

    ಮುಸಖೇಲ್‌ನ ರಾರಶಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಅಂತರ-ಪ್ರಾಂತೀಯ ಹೆದ್ದಾರಿಯನ್ನು ತಡೆದು ಪ್ರಯಾಣಿಕರನ್ನು ಬಸ್‌ಗಳಿಂದ ಕೆಳಗಿಳಿಸಿದರು ಎಂದು ಸಹಾಯಕ ಕಮಿಷನರ್ ಮುಸಖೈಲ್ ನಜೀಬ್ ಕಾಕರ್ ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಇದನ್ನೂ ಓದಿ: ಫುಟ್‌ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದ ಟ್ರಕ್ – ಮೂವರ ದುರ್ಮರಣ

     

    ಮೃತರು ಪಂಜಾಬ್ (Panjab) ಮೂಲದವರು ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಉಗ್ರರು 10 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇಲ್ಲಿಯವರೆಗೆ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆಯನ್ನು ಖಂಡಿಸಿರುವ ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಮೃತರ ಕುಟುಂಬಗಳಿಗೆ ಸಹಾನುಭೂತಿ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಡಾಖ್‌ನಲ್ಲಿ 5 ಹೊಸ ಜಿಲ್ಲೆಗಳ ಸ್ಥಾಪನೆ: ಅಮಿತ್ ಶಾ ಘೋಷಣೆ

    ಪಾಕಿಸ್ತಾನದ ಫೆಡರಲ್ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್, ಮುಸಖೈಲ್ ಬಳಿ ಮುಗ್ಧ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಭಯೋತ್ಪಾದಕರ ಕ್ರೂರತೆಯನ್ನು ತೋರಿಸಿದೆ. ಭಯೋತ್ಪಾದಕರು ಮತ್ತು ಅವರ ಸಹಾಯಕರನ್ನು ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ಚುನಾವಣೆ: ಇಂದು ಬೆಳಗ್ಗೆ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿ ಹಿಂಪಡೆದ ಬಿಜೆಪಿ

    ಸುಮಾರು ನಾಲ್ಕು ತಿಂಗಳ ಹಿಂದೆ ಇದೇ ರೀ ತಿಯ ಕ್ರೂರ ಘಟನೆ ನಡೆದಿತ್ತು. ಏಪ್ರಿಲ್‌ನಲ್ಲಿ(April) ಒಂಬತ್ತು ಪ್ರಯಾಣಿಕರನ್ನು ನೋಶ್ಕಿ ಬಳಿ ಬಸ್‌ನಿಂದ ಬಲವಂತವಾಗಿ ಹೊರ ಕರೆದು ಬಂದೂಕುಧಾರಿಗಳು ಐಡಿ ತಪಾಸಣೆಯನ್ನು ಮಾಡಿ, ಗುರುತನ್ನು ಪರಿಶೀಲಿಸಿದ ಬಳಿ ಹತ್ಯೆ ಮಾಡಿದ್ದರು ಎಂದು ಡಾನ್ ವರದಿ ಮಾಡಿದೆ. ಇದನ್ನೂ ಓದಿ: ಕೀಬೋರ್ಡ್‌ನಲ್ಲಿ ಡಾಲರ್ ಬದಲು ರೂಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ

  • ರಂಜಾನ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದಾಗ ಅಪಘಾತ – 17 ಮಂದಿ ದುರ್ಮರಣ

    ರಂಜಾನ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದಾಗ ಅಪಘಾತ – 17 ಮಂದಿ ದುರ್ಮರಣ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ (Accident) 17 ಯಾತ್ರಾರ್ಥಿಗಳು ಸಾವಿಗೀಡಾಗಿದ್ದು, 41 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಟ್ರಕ್ ಮಿತಿಮೀರಿದ ವೇಗದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. ಯಾತ್ರಾರ್ಥಿಗಳು ಈದ್ ಅಲ್-ಫಿತರ್ (Eid al-Fitr) ರಜೆಯ ಹಿನ್ನೆಲೆಯಲ್ಲಿ ನೈರುತ್ಯ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕೇಂದ್ರವೊಂದಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕ ಟ್ರಕ್‍ನಿಂದ ಜಿಗಿದಿದ್ದು, ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜೋತಿಷ್ಯ ಪ್ರಭಾವ – ಸಂಗಾತಿ, ಮಕ್ಕಳನ್ನ ಕೊಂದು ತಾನೂ ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

    ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 17 ಜನರ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ರಸ್ತೆ ಸುರಕ್ಷತಾ ಕ್ರಮಗಳು ಸಡಿಲವಾಗಿದ್ದು, ಚಾಲಕ ತರಬೇತಿಯು ಕಳಪೆಯಾಗಿದೆ. ಇದರೊಂದಿಗೆ ಸಾರಿಗೆ ಮೂಲಸೌಕರ್ಯವು ಕ್ಷೀಣಿಸುತ್ತಿದೆ. ಇದರಿಂದ ರಸ್ತೆ ಅಪಘಾತಗಳು ಪಾಕ್‍ನಲ್ಲಿ ಸಾಮಾನ್ಯವಾಗಿದೆ.

    ಜನವರಿ 2023 ರಲ್ಲಿ, ತೈಲದ ಕಂಟೇನರ್‍ಗಳನ್ನು ತುಂಬಿದ ಟ್ರಕ್ ಹಾಗೂ ಬಸ್ ಬಲೂಚಿಸ್ತಾನ್ ಪ್ರಾಂತ್ಯದ ಕಂದಕಕ್ಕೆ ಉರುಳಿ ಸಂಭವಿಸಿದ್ದ ಅಪಘಾತದಲ್ಲಿ 41 ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಯುದ್ಧಕ್ಕೆ ಸಿದ್ಧರಾಗುವ ಸಮಯ ಬಂದಿದೆ: ಕಿಮ್ ಜಾಂಗ್ ಉನ್

  • ಪಾಕ್‌ನಲ್ಲಿ ಪರ್ವತದಿಂದ ಕಮರಿಗೆ ಬಿದ್ದ ವ್ಯಾನ್‌ – 22 ಮಂದಿ ದುರ್ಮರಣ

    ಪಾಕ್‌ನಲ್ಲಿ ಪರ್ವತದಿಂದ ಕಮರಿಗೆ ಬಿದ್ದ ವ್ಯಾನ್‌ – 22 ಮಂದಿ ದುರ್ಮರಣ

    ಇಸ್ಲಾಮಾಬಾದ್‌: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವ್ಯಾನ್‌ 100 ಅಡಿಗೂ ಹೆಚ್ಚು ಆಳವಿದ್ದ ಕಮರಿಗೆ ಬಿದ್ದು 22 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಪಾಕಿಸ್ತಾನದ ಪರ್ವತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.

    ವ್ಯಾನ್ ನೂರಾರು ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಳಿತಪ್ಪಿದ ರೈಲು – 10 ಸಾವು, 50 ಮಂದಿಗೆ ಗಾಯ

    1,572 ಮೀಟರ್ ಎತ್ತರದಲ್ಲಿರುವ ಕಿಲ್ಲಾ ಸೈಫುಲ್ಲಾ ಬಳಿಯ ಅಖ್ತರ್‌ಜೈ ಎಂಬ ಪರ್ವತ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್‌ ಕಮರಿಗೆ ಉರುಳಿ ಅವಘಡ ಸಂಭವಿಸಿದೆ.

    PAK

    ಝೋಬ್ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಹಫೀಜ್ ಮಹಮ್ಮದ್ ಖಾಸಿಮ್, ಪ್ರಯಾಣಿಕರಿದ್ದ ವ್ಯಾನ್ ಲೊರಾಲಿಯಾದಿಂದ ಝೋಬ್ ಪಟ್ಟಣಕ್ಕೆ ಪ್ರಯಾಣಿಸುತ್ತಿತ್ತು ಎಂದು ತಿಳಿಸಿದ್ದಾರೆ.

    “ವಾಹನವು ಅಖ್ತರ್‌ಜೈ ಬಳಿ ಬೆಟ್ಟದ ತುದಿಯಿಂದ ಬಿದ್ದಿದೆ. ಪರ್ವತಗಳಲ್ಲಿನ ಆಳವಾದ ಕಮರಿಗೆ ವ್ಯಾನ್‌ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಯಿತು. ನಾವು ಇದುವರೆಗೆ 10 ಶವಗಳನ್ನು ಹೊರತೆಗೆದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಅಪಘಾತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮುಂದೆ ಇಂತಹ ಅವಘಡಗಳು ಸಂಭವಿಸಿದಂತೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.