Tag: ಬರ್ಮ

  • ರಕ್ಷ ರಾಮ್ ಹುಟ್ಟು ಹಬ್ಬಕ್ಕೆ ‘ಬರ್ಮ’ ಹೊಸ ಪೋಸ್ಟರ್ ರಿಲೀಸ್

    ರಕ್ಷ ರಾಮ್ ಹುಟ್ಟು ಹಬ್ಬಕ್ಕೆ ‘ಬರ್ಮ’ ಹೊಸ ಪೋಸ್ಟರ್ ರಿಲೀಸ್

    ಟ್ಟಿಮೇಳ ಸೀರಿಯಲ್ ಮೂಲಕ ಕರುನಾಡ ಮನ-ಮನೆ ಗೆದ್ದಿರುವ ರಕ್ಷ್ ರಾಮ್ (Raksha Ram) ಇಂದು ಜನ್ಮದಿನದ ಸಂಭ್ರಮದಲ್ಲಿ ಇದ್ದಾರೆ. ಅವರ ಹುಟ್ಟುಹಬ್ಬದ (Birthday) ವಿಶೇಷವಾಗಿ ಬರ್ಮ ಚಿತ್ರತಂಡ ಹೊಸ ಪೋಸ್ಟರ್ ಉಡುಗೊರೆಯಾಗಿ ನೀಡಿದೆ. ರಕ್ಷ್ ಬರ್ತ್ ಡೇ ಅಂಗವಾಗಿ ಅವರು ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಬರ್ಮ (Burma) ನಯಾ ಲುಕ್ ಅನಾವರಣ ಮಾಡಿ ಚಿತ್ರತಂಡ ಶುಭಾಶಯ ಕೋರಿದೆ‌.

    ಬರ್ಮ ಹೊಸ ಪೋಸ್ಟರ್  (Poster) ಸಖತ್ ಇಂಪ್ರೆಸಿವ್ ಆಗಿದೆ. ಕೈಯಲ್ಲಿ ಕೊಡಲಿ ಹಿಡಿದು, ರಕ್ತಸಿಕ್ತ ಅವತಾರದಲ್ಲಿ ಮಾಸ್ ಗೆಟಪ್ ನಲ್ಲಿ ರಕ್ಷ್ ರಾಮ್ ಪ್ರತ್ಯಕ್ಷರಾಗಿದ್ದಾರೆ. ಅಂದಹಾಗೇ ಬರ್ಮ ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಈ ಸಿನಿಮಾ ಮೂಲಕ ಕಿರುತೆರೆ ನಟ ರಕ್ಷ್ ಪ್ಯಾನ್ ಇಂಡಿಯಾ ಸ್ಟಾರ್ ಎಮರ್ಜ್ ಆಗಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹೆಚ್ಚಿರುವ ರಕ್ಷ್ ರಾಮ್, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಶ್ರೀ ಸಾಯಿ ಆಂಜನೇಯ  ಕಂಪನಿಯಡಿ ಬರ್ಮ ಸಿನಿಮಾಗೆ ಹಣ ಹಾಕಿದ್ದಾರೆ.

    ಚೇತನ್ ಕುಮಾರ್ (Chetan Kumar) ನಿರ್ದೇಶಿಸುತ್ತಿರುವ ‘ಬರ್ಮ’ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಬಹದ್ದೂರ್’ ಹಾಗೂ ‘ಭರ್ಜರಿ’ ಸಿನಿಮಾದಲ್ಲಿ ಚೇತನ್ ಕುಮಾರ್ ಹಾಗೂ ಹರಿಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಬರ್ಮ ಮೂಲಕ ಮೂರನೇ ಬಾರಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

    ‘ಜೇಮ್ಸ್’ ಹೊರತುಪಡಿಸಿ ಚೇತನ್ ಕುಮಾರ್ ನಿರ್ದೇಶಿಸಿದ ಅಷ್ಟೂ ಸಿನಿಮಾಗಳೂ ‘ಬ’ ಇಲ್ಲವೇ ‘ಭ’ದಿಂದಲೇ ಆರಂಭ ಆಗಿರುವುದು ವಿಶೇಷ. ಇವರು  ನಿರ್ದೇಶಿಸಿರುವ ಜೇಮ್ಸ್ ಸೇರಿದಂತೆ  ‘ಬಹದ್ದೂರ್’, ‘ಭರ್ಜರಿ’ ಹಾಗೂ ‘ಭರಾಟೆ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿಟ್ ಲಿಸ್ಟ್ ಸೇರಿವೆ. ಈಗ ಹೊಸ ಸಿನಿಮಾ ‘ಬರ್ಮ’ ಅಂತ ಟೈಟಲ್‌ ಇಟ್ಟಿದ್ದಾರೆ. ಈ ಮೂಲಕ ಮತ್ತೆ ಯಶಸ್ಸನ್ನು ಹುಡುಕಿ ಹೊರಟಿದ್ದಾರೆ ಚೇತನ್.

     

    ಶೂಟಿಂಗ್ ಅಖಾಡದಲ್ಲಿರುವ ಬರ್ಮ ಸಿನಿಮಾದಲ್ಲಿ ಶಾವರ್ ಅಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ದೊಡ್ಡ ತಾರಾ ಬಳಗವೇ ಇದೆ. ಬರ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತದೆ. ಆ ನಿಟ್ಟಿನಲ್ಲಿಯೇ ದೊಡ್ಡಮಟ್ಟದಲ್ಲಿಯೇ ಈ ಚಿತ್ರ ತಯಾರಾಗುತ್ತಿದೆ.

  • ಸ್ಯಾಂಡಲ್ ವುಡ್ ಗೆ ಶಾವಲಿ ಅಲಿ ಎಂಟ್ರಿ: ಬರ್ಮಗಾಗಿ ಬಂದ ಬಾಲಿವುಡ್ ನಟ

    ಸ್ಯಾಂಡಲ್ ವುಡ್ ಗೆ ಶಾವಲಿ ಅಲಿ ಎಂಟ್ರಿ: ಬರ್ಮಗಾಗಿ ಬಂದ ಬಾಲಿವುಡ್ ನಟ

    ಚೇತನ್ ಕುಮಾರ್ (Chetan Kumar) ಹಾಗೂ ರಕ್ಷ್ ಜೋಡಿಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬರ್ಮ (Burma)ದ ಶೂಟಿಂಗ್ ಭರದಿಂದ ಸಾಗುತ್ತಿದೆ. ಟೈಟಲ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಅಂಗಳದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಬರ್ಮ ಬಳಗದಲ್ಲಿ ಯಾವ ಯಾವ ತಾರೆಯರು ಇರ್ತಾರೆ? ಯಾರು ಚಿತ್ರದ ಭಾಗವಾಲಿದ್ದಾರೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಆದ್ರೀಗ ನಿರ್ದೇಶಕ ಚೇತನ್ ಕುಮಾರ್ ಬರ್ಮಗಾಗಿ ಬಾಲಿವುಡ್ ತಾರೆಯನ್ನು ಕರೆದು ತಂದಿದ್ದಾರೆ.

    ಬರ್ಮ ಅಖಾಡಕ್ಕೀಗ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದೆ. ಹಿಂದಿ ಮಾತ್ರವಲ್ಲ ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಶಾವರ್ ಅಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಆದಿತ್ಯ ನಟನೆಯ ರೆಬಲ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಶಾವರ್ ಅಲಿ, ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿಯೂ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ ಆರು ವರ್ಷದ ನಂತ್ರ ಮಗದೊಮ್ಮೆ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ಸಿನಿಮಾರಂಗದಿಂದ ಬಣ್ಣದ ಬದುಕು ಆರಂಭಿಸಿದ್ದ ಅವರೀಗ ಟಾಲಿವುಡ್, ಸ್ಯಾಂಡಲ್ ವುಡ್ ನಲ್ಲಿಯೂ ಮಿಂಚುತ್ತಿದ್ದು, ಚೇತನ್ ಕುಮಾರ್ ಸಾರಥ್ಯದಲ್ಲಿ ತಯಾರಾಗುತ್ತಿರುವ ಬರ್ಮ ಸಿನಿಮಾದಲ್ಲಿ ಸ್ಪೆಷಲ್ ರೋಲ್ ನಲ್ಲಿ ಶಾವರ್ ಅಲಿ ನಟಿಸುತ್ತಿದ್ದಾರೆ.

    ರಕ್ಷ್ ರಾಮ್ ಆಕ್ಷನ್ ಹೀರೋ ಆಗಿ ಅಬ್ಬರಿಸಲಿರುವ ಬರ್ಮ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬರ್ಮ ತೆರೆಗೆ ಬರಲಿದೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಹಿಂದೆ ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳಲ್ಲಿ ಚೇತನ್ ಕುಮಾರ್ ಹಾಗೂ ವಿ ಹರಿಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ‘ಬರ್ಮ’ ಚಿತ್ರದ ಮೂಲಕ ಮೂರನೇ ಬಾರಿಗೆ ಚೇತನ್ ಕುಮಾರ್ – ವಿ ಹರಿಕೃಷ್ಣ ಒಂದಾಗಿದ್ದಾರೆ.

     

    ಕಿರುತೆರೆ ಲೋಕದಲ್ಲಿ ಜನಪ್ರಿಯ ನಟರಾಗಿರುವ ರಕ್ಷ್ ಈಗ ‘ಬರ್ಮ’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  • ರಕ್ಷ್ ರಾಮ್ ನಟಿಸುತ್ತಿರುವ  ‘ಬರ್ಮ’ ಚಿತ್ರಕ್ಕೆ ಚಾಲನೆ

    ರಕ್ಷ್ ರಾಮ್ ನಟಿಸುತ್ತಿರುವ ‘ಬರ್ಮ’ ಚಿತ್ರಕ್ಕೆ ಚಾಲನೆ

    ಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ಚಿತ್ರಗಳ ನಿರ್ದೇಶಕ ಹಾಗೂ ಖ್ಯಾತ ಗೀತರಚನೆಕಾರ ಚೇತನ್ ಕುಮಾರ್  (Chetan Kumar) ನಿರ್ದೇಶನದ ಹಾಗೂ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ (Raksh Ram) ನಾಯಕನಾಗಿ ನಟಿಸುತ್ತಿರುವ ‘ಬರ್ಮ’ (Burma) ಚಿತ್ರದ ಮುಹೂರ್ತ ಸಮಾರಂಭ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneet Raj Kumar) ಆರಂಭ ಫಲಕ ತೋರಿದರು. ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಿರ್ದೇಶಕ ಎ.ಪಿ.ಅರ್ಜುನ್, ನಟ ಧೀರನ್ ರಾಮಕುಮಾರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

    ಚೇತನ್ ಕುಮಾರ್ ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡಿರುತ್ತಾರೆ. ರಕ್ಷ್ ಈ ಸಿನಿಮಾ ಮೂಲಕ ನಾಯಕನಾಗುತ್ತಿದ್ದಾರೆ. ಇಡೀ ಬರ್ಮ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾರೈಸಿದರು. ಇದನ್ನೂ ಓದಿ:ನ.24ಕ್ಕೆ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಸ್ಟಾರ್ ಕಲಾವಿದರ ಸಾಥ್

    ಬರ್ಮ ನನ್ನ ನಿರ್ದೇಶನದ ಐದನೇ ಚಿತ್ರ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಚೇತನ್ ಕುಮಾರ್, ಬರ್ಮ ಎಂದರೆ ಬ್ರಹ್ಮ ವಾಸಿಸುವ ಜಾಗ ಹಾಗೂ ಒಂದು ಕಂಟ್ರಿಯ ಹೆಸರು ಕೂಡ. ಈ ಹೆಸರು ಚಿತ್ರದ ಕಥೆಗೆ ಪೂರಕವಾಗಿದೆ. ಹಾಗಾಗಿ ಬರ್ಮ ಎಂದು ಹೆಸರಿಟ್ಟಿದ್ದೇವೆ. ಚಿತ್ರದ ನಾಯಕ ರಕ್ಷ್ ಈಗಾಗಲೇ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಅವರೆ ಈ ಚಿತ್ರದ ನಿರ್ಮಾಪಕರು ಕೂಡ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಐದು ಭಾಷೆಗಳ ಆಡಿಯೋ ಹಕ್ಕನ್ನು ಡಿ ಬಿಟ್ಸ್ ಸಂಸ್ಥೆ ಪಡೆದುಕೊಂಡಿದೆ. ವಿ.ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸಂಕೇತ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ  ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ,  ಹೀಗೆ ಅನೇಕ ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅಕ್ಟೋಬರ್ 3 ರಿಂದ ಮಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆದಿತ್ಯ ಮೆನನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿನ ಹಾಗೂ ಬೇರೆ ಭಾಷೆಗಳ ಹೆಸರಾಂತ ಕಲಾವಿದರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.

    ಪುಟ್ಟಗೌರಿ ಮದುವೆಯಿಂದ ಗಟ್ಟಿಮೇಳ ಧಾರಾವಾಹಿ ತನಕ ಸುಮಾರು ಮೂರು ಸಾವಿರ ಎಪಿಸೋಡ್ ಗಳಲ್ಲಿ ನಟಿಸಿದ್ದೇನೆ. ಕನ್ನಡಿಗರು ನನ್ನ ಪಾತ್ರವನ್ನು ಮೆಚ್ಚಿ ತೋರಿರುವ ಪ್ರೀತಿಗೆ ನಾನು ಚಿರ ಋಣಿ. ನಾನು ಚೇತನ್ ಅವರನ್ನು ಬಹಳ ವರ್ಷಗಳಿಂದ ನನ್ನ ಜೊತೆ ಸಿನಿಮಾ ಮಾಡಿ ಎಂದು ಕೇಳಿದ್ದೆ. ಅದು ಈಗ ಕೂಡಿ ಬಂದಿದೆ. ಇಡೀ ಕುಟುಂದವರೆಲ್ಲಾ ಒಟ್ಟಾಗಿ ಕುಳಿತು ನೋಡುವಂತಹ ಒಳ್ಳೆಯ ಕಥೆಯನ್ನು ನಿರ್ದೇಶಕರು ಸಿದ್ದ ಮಾಡಿಕೊಂಡಿದ್ದಾರೆ. ನಮ್ಮ ಸಂಸ್ಥೆಯ ಮೂಲಕ ನಾನು ಹಾಗೂ ನನ್ನ ಪತ್ನಿ ಅನುಶಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ನಮಗಿರಲಿ ಎಂದರು ನಾಯಕ ರಕ್ಷ್ ರಾಮ್.

    ಗಟ್ಟಿಮೇಳ ಧಾರಾವಾಹಿ ನಿರ್ಮಾಣ ಮಾಡಿರುವ ನಮ್ಮ ಶ್ರೀ ಸಾಯಿ ಆಂಜನೇಯ ಕಂಪನಿ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನನ್ನ ಪತಿ ರಕ್ಷ್ ಅವರೆ ಈ ಚಿತ್ರದ ನಾಯಕನಾಗಿರುವುದು ಖುಷಿಯ ವಿಷಯ ಎನ್ನುತ್ತಾರೆ ನಿರ್ಮಾಪಕಿ ಅನುಶಾ. ಹಾಡುಗಳ ಬಗ್ಗೆ ಹರಿಕೃಷ್ಣ ಮಾಹಿತಿ ನೀಡಿದರು. ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್ ಈ ಚಿತ್ರದ ಐದು ಭಾಷೆಗಳ ಆಡಿಯೋ ಹಕ್ಕನ್ನು ಪಡೆದಿರುವುದಾಗಿ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೇಮ್ಸ್ ಡೈರೆಕ್ಟರ್ ಹೊಸ ಸಿನಿಮಾ ಅನೌನ್ಸ್: ಗಟ್ಟಿಮೇಳ ರಕ್ಷ್ ಹೀರೋ

    ಜೇಮ್ಸ್ ಡೈರೆಕ್ಟರ್ ಹೊಸ ಸಿನಿಮಾ ಅನೌನ್ಸ್: ಗಟ್ಟಿಮೇಳ ರಕ್ಷ್ ಹೀರೋ

    ಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳ ಸಾರಥಿ ಚೇತನ್ ಕುಮಾರ್ (Chetan Kumar) ಹೊಸ ಸಿನಿಮಾ ಇಂದು ಘೋಷಣೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ  ಚಿತ್ರತಂಡ ಶೀರ್ಷಿಕೆ ರಿವೀಲ್ ಮಾಡಿದೆ. ‘ಬರ್ಮ’ ಎಂಬ ವಿಭಿನ್ನ ಬಗೆಯ ಟೈಟಲ್ ಇರುವ ಸಿನಿಮಾಗೆ ಗಟ್ಟಿಮೇಳ ಧಾರಾವಾಹಿಯ ರಕ್ಷ್ ರಾಮ್ (Raksha Ram) ನಾಯಕ. ಅಂದಹಾಗೇ ಸಂಸ್ಕೃತದಲ್ಲಿ ಬರ್ಮ ಅಂದರೆ ಬ್ರಹ್ಮ ವಾಸಿಸುವ ಜಾಗ ಎಂದರ್ಥ.

    ಬರ್ಮ (Burma) ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ವಿ.ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಬಹದ್ದೂರ್, ಭರ್ಜರಿ ಮೂಲಕ ಮೋಡಿ ಮಾಡಿದ್ದ ಹರಿಕೃಷ್ಣ ಹಾಗೂ ಚೇತನ್ ಜೋಡಿ ಮೂರನೇ ಬಾರಿಗೆ ಒಂದಾಗುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬದಂದು ವೈಷ್ಣವಿ ಗೌಡ ಫ್ಯಾನ್ಸ್‌ಗೆ ಸಿಹಿಸುದ್ದಿ

    ಬರ್ಮ ಸಿನಿಮಾ ಅನೌನ್ಸ್ ದಿನವೇ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಇದಪ್ಪ ಚೇತನ್ ಸಿನಿಮಾಗಳ ರೆಕಾರ್ಡ್ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ. ಈಗಾಗಲೇ ರಕ್ಷ್ ರಾಮ್ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದು,  ಬರ್ಮ ಮೂಲಕ ಪ್ಯಾನ್ ಇಂಡಿಯಾ ಪ್ರಪಂಚದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

     

    ನಿರ್ದೇಶಕ ಚೇತನ್ ಕುಮಾರ್ ಪ್ರತಿ ಸಿನಿಮಾದಲ್ಲೊಂದು ಹೊಸತನ ಹೊತ್ತು ತರುತ್ತಾರೆ. ಅದೇ ನಿರೀಕ್ಷೆ ಬರ್ಮ ಸಿನಿಮಾ ಮೇಲೆಯೂ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್ ನಿಂದ ಶೂಟಿಂಗ್ ಅಖಾಡಕ್ಕೆ ಚಿತ್ರತಂಡ ಧುಮುಕಲಿದೆ. ಇನ್ನುಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಒಂದೊಂದಾಗಿ ಚಿತ್ರತಂಡ ನೀಡಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]