Tag: ಬರ್ತಡೆ

  • ಅಮೆರಿಕದಲ್ಲಿ ಅಪ್ಪು ಬರ್ತ್ ಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಅಮೆರಿಕದಲ್ಲಿ ಅಪ್ಪು ಬರ್ತ್ ಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ವಿಶೇಷವಾಗಿ ಆಚರಿಸಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಲ್ಲೂ ಒಟ್ಟಾಗಿ ಜೇಮ್ಸ್ ಜಾತ್ರೆ ಮತ್ತು ಅಪ್ಪು ಹುಟ್ಟುವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಮಾರ್ಚ್ 19 ರಂದು ನ್ಯೂಜೆರ್ಸಿ ನಾರ್ಥ್ ಬ್ರನ್ಸ್ವಿಕ್ ಉದ್ಯಾನವನದಲ್ಲಿ ಜರುಗಿದ ಅಪ್ಪು ಅಭಿಮಾನಿ ಸಂಘದ ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಹಿರಿಯ ಪುತ್ರ ದ್ರಿತಿ ಮುಖ್ಯ ಅಥಿಯಾಗಿ ಆಗಮಿಸಿದ್ದರು. ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಮೆರಿಕಾದ ನಾನಾ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಅಪ್ಪು ಅಭಿಮಾನಿಗಳು ಆಗಮಿಸಿದ್ದರು. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಅಪ್ಪು ಅವರ ಭಾವಚಿತ್ರ, ಅವರ ಹಾಡಿಗೆ ಅಲ್ಲಿನ ಮಕ್ಕಳ ನೃತ್ಯ ಮಾಡಿದರು. ನಾಗೇಶ್ ಕೆಂಪಯ್ಯನವರ ನೇತೃತ್ವದಲ್ಲಿ ಡೊಳ್ಳು ವಾದ್ಯ, ಹಲವು ಬಗೆಯ ಜಾನಪದ ಕುಣಿತ ಹೀಗೇ ಊರಿಗೆ ಹಬ್ಬ, ಜಾತ್ರೆಗಳಂತೆಯೇ ಹುಟ್ಟು ಹಬ್ಬವನ್ನು ಸಡಗರದಿಂದ ಅಲ್ಲಿನ ಅಭಿಮಾನಿಗಳು ಆಚರಿಸಿದರು.

    ಅಪ್ಪು ಅಮೆರಿಕಾಗೆ ಹೋದಾಗಲೆಲ್ಲ ಹಲವರನ್ನು ಭೇಟಿ ಮಾಡುತ್ತಿದ್ದರು. ಅಲ್ಲದೇ, ಮೊರ್ಗನ್ವಿಲ್ಲೆಯಲ್ಲಿರುವ ಕೃಷ್ಣ ದೇವಸ್ಥಾನದಲ್ಲಿ ಕೊಡುವ ಬಾದುಷಾ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಪ್ಪು ಅಮೆರಿಕಾಗೆ ಬಂದಿದ್ದಾರೆ ಅಂದರೆ, ದೇವಸ್ಥಾನದ ರಂಗಾ ಭಟ್ಟರು ಬಾದುಷಾ ಮಾಡಿ ಕೊಡುತ್ತಿದ್ದರು. ಹಾಗಾಗಿ ಈ ಹುಟ್ಟು ಹಬ್ಬದಂದು ರಂಗಾ ಭಟ್ಟರು ಬಾದುಷಾ ಮಾಡಿ ಕಳುಹಿಸಿದ್ದರು. ಅದೇ ತಿಂಡಿಯನ್ನೇ ಅಲ್ಲಿ ಎಲ್ಲರಿಗೂ ಹಂಚಲಾಯಿತು. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ನಂತರ ನೂರೈವತ್ತಕ್ಕೂ ಹೆಚ್ಚು ಕಾರುಗಳ ಮೆರವಣಿಗೆ ಕೂಡ ನಡೆಯಿತು. ರಸ್ತೆಯುದ್ದಕ್ಕೂ ಕಾರು ಚಲಾಯಿಸಿಕೊಂಡು ಅಪ್ಪುಗೆ ಗೌರವ ಸೂಚಿಸಿದರು. ಕೇವಲ ಅಮೆರಿಕಾದಲ್ಲಿರುವ ಭಾರತೀಯರು ಮಾತ್ರ ವಲ್ಲ, ಅಮೆರಿಕಾ ಪ್ರಜೆಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ಪುನೀತ್ ಹುಟ್ಟು ಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ ಮಂದಣ್ಣ- ಮತ್ತೆ ನೆಟ್ಟಿಗರು ಗರಂ

    ಪುನೀತ್ ಹುಟ್ಟು ಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ ಮಂದಣ್ಣ- ಮತ್ತೆ ನೆಟ್ಟಿಗರು ಗರಂ

    ನ್ನಡದ ಕಾರ್ಯಕ್ರಮಗಳಲ್ಲೂ ಇಂಗ್ಲಿಷ್ ಮಾತನಾಡಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗುತ್ತಿರುವ ರಶ್ಮಿಕಾ ಮಂದಣ್ಣ ಈಗ ಮತ್ತೆ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಅಲ್ಲದೇ, ಅಪ್ಪು ಅಭಿಮಾನಿಗಳು ಕೂಡ ಕರ್ನಾಟಕದಿಂದ ‘ಬೈಕಾಟ್ ರಶ್ಮಿಕಾ’ ಎಂದು ಹ್ಯಾಷ್ ಟ್ಯಾಗ್ ಹಾಕಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ದಾಖಲೆ ಬರೆದ ಜೇಮ್ಸ್ – ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಪುನೀತ್ ಚಿತ್ರ

    ಕನ್ನಡದಿಂದ ನೆರೆ ರಾಜ್ಯಕ್ಕೆ ಹೋದ ರಶ್ಮಿಕಾಗೆ ಬ್ರೇಕ್ ನೀಡಿದ್ದು ಕನ್ನಡ ಚಿತ್ರರಂಗ. ಪುನೀತ್ ಅವರ ಜತೆ ಅಂಜನೀಪುತ್ರ ಸಿನಿಮಾದಲ್ಲೂ ರಶ್ಮಿಕಾ ನಟಿಸಿದ್ದಾರೆ. ಮಾರ್ಚ್ 17 ರಂದು ಕೇವಲ ಕನ್ನಡ ಚಿತ್ರರಂಗದ ನಟ ನಟಿಯರು ಮಾತ್ರವಲ್ಲ, ನೆರೆಯ ತಮಿಳುನಾಡು, ಆಂಧ್ರ ಮತ್ತು ಕೇರಳ ಚಿತ್ರರಂಗದ ದಿಗ್ಗಜರು ಕೂಡ ಪುನೀತ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಕನ್ನಡದವರೇ ಆದ ರಶ್ಮಿಕಾ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. ಹಾಗಾಗಿ ಸಹಜವಾಗಿಯೇ ಅಪ್ಪು ಇಷ್ಟಪಡುವವರು ರಶ್ಮಿಕಾ ಅವರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

    ರಶ್ಮಿಕಾ ಮಂದಣ್ಣ ಈ ರೀತಿ ಮಾಡುತ್ತಿರುವುದು ಮೊದಲೇನೂ ಅಲ್ಲ. ಕನ್ನಡ ಸಿನಿಮಾಗಳ ಪ್ರಮೋಷನ್ ಗೆ ಸಿಗಲ್ಲ ಎಂದು ವಿವಾದ ಮಾಡಿಕೊಂಡಿದ್ದರು. ಕನ್ನಡದಲ್ಲಿ ಮಾತನಾಡಿಸಿದರೂ, ಅವರು ಕೊಡುವ ಉತ್ತರ ಇಂಗ್ಲಿಷಿನಲ್ಲಿ ಇರುತ್ತೆ ಎಂದು ಕನ್ನಡ ಪರ ಸಂಘಟನೆಗಳು ಕೂಡ ವಿರೋಧ ವ್ಯಕ್ತ ಪಡಿಸಿದ್ದರು. ಇದೀಗ ಅಪ್ಪು ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ ರಶ್ಮಿಕಾ.

  • ಜಗ್ಗೇಶ್ ಹುಟ್ಟು ಹಬ್ಬಕ್ಕೆ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್

    ಜಗ್ಗೇಶ್ ಹುಟ್ಟು ಹಬ್ಬಕ್ಕೆ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್

    ಪುನೀತ್ ರಾಜ್ ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಒಂದೇ ದಿನ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಪುನೀತ್ ಮತ್ತು ಜಗ್ಗೇಶ್. ಈ ವರ್ಷ ಪುನೀತ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಜಗ್ಗೇಶ್. ಹಾಗಾಗಿ ಇಂದು ಅವರು ಮಂತ್ರಾಲಯದ ರಾಯರ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.

    ಜಗ್ಗೇಶ್ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದೇ ಇದ್ದರೂ, ಅವರ ಮೂರು ಸಿನಿಮಾಗಳ ಪೋಸ್ಟರ್ ಗಳು ಇಂದು ಬಿಡುಗಡೆ ಆಗಿವೆ. ಮೂರು ವಿಭಿನ್ನ ರೀತಿಯಲ್ಲಿ ಡಿಸೈನ್ ಆಗಿದ್ದು ವಿಶೇಷ. ಸದ್ಯ ಜಗ್ಗೇಶ್ ‘ತೋತಾಪುರಿ’, ‘ರಂಗನಾಯಕ’ ಮತ್ತು ‘ರಾಘವೇಂದ್ರ ಸ್ಟೋರ್ಸ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೂ ಸಿನಿಮಾಗಳ ಪೋಸ್ಟರ್ ಇಂದು ರಿಲೀಸ್ ಆಗಿವೆ.

    ತೋತಾಪುರಿ

    ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಗಿಸುತ್ತಲೇ ಒಂದೊಳ್ಳೆ ಭಾವನಾತ್ಮಕ ಕಥೆಯನ್ನು ಈ ಸಿನಿಮಾ ಹೇಳಲಿದೆಯಂತೆ. ಹಿಂದೂ ಮುಸ್ಲಿಂ ಸಾಮರಸ್ಯವನ್ನು ಸಾರುವಂತಹ ಚಿತ್ರ ಕೂಡ ಇದಾಗಿದೆ. ಜಗ್ಗೇಶ್ ಹೀರೋ ಆಗಿ ನಟಿಸಿದ್ದರೆ, ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭುದೇವ್ ನಾಯಕಿ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರುತ್ತಿರುವುದು ವಿಶೇಷ. ಕೆ.ಎ. ಸುರೇಶ್ ಇದರ ನಿರ್ಮಾಪಕರು. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ರಂಗನಾಯಕ

    ಮಠದ ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಸಿನಿಮಾ ‘ರಂಗನಾಯಕ’. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ನಟನೊಬ್ಬನ ಬದುಕಿನ ಕುರಿತಾದ ಸಿನಿಮಾ ಇದಾಗಿದ್ದು, ಜಗ್ಗೇಶ್ ರಂಗನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಮತ್ತು ಗುರು ಪ್ರಸಾದ್ ಮತ್ತೆ ಸಿನಿಮಾ ಮಾಡುವುದಿಲ್ಲ ಎಂಬ ಗಾಂಧಿನಗರದ ಮಾತನ್ನು ಸುಳ್ಳು ಮಾಡಿದ ಚಿತ್ರವಿದು. ವಿಖ್ಯಾತ ಈ ಚಿತ್ರದ ನಿರ್ಮಾಪಕರು. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ರಾಘವೇಂದ್ರ ಸ್ಟೋರ್ಸ್

    ‘ರಾಜಕುಮಾರ’ ಸಿನಿಮಾ ಖ್ಯಾತಿಯ ಸಂತೋಷ್ ಆನಂದ್ ರಾಮ್, ಇದೇ ಮೊದಲ ಬಾರಿಗೆ ಜಗ್ಗೇಶ್ ಗಾಗಿ ಮಾಡಿದ ಚಿತ್ರ ‘ರಾಘವೇಂದ್ರ ಸ್ಟೋರ್ಸ್’. ಅನ್ನದ ಮಹತ್ವವನ್ನು ಇಟ್ಟುಕೊಂಡು ಕಥೆ ಬರೆದಿದ್ದಾರಂತೆ ನಿರ್ದಶಕರು. ಜಗ್ಗೇಶ್ ನಾಯಕನಾದರೆ, ಶ್ವೇತಾ ಶ್ರೀವಾತ್ಸವ್ ನಾಯಕಿ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದ, ಡಬ್ಬಿಂಗ್ ಕೆಲಸವನ್ನೂ ಮುಗಿಸಿದೆ ಚಿತ್ರತಂಡ. ಹೊಂಬಾಳೆ ಫಿಲ್ಮ್ಸ್ ಇದರ ನಿರ್ಮಾಪಕರು.

  • ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಪ್ರತಿ ಬಾರಿಯೂ ಅಭಿಮಾನಿಗಳ ಜತೆ ಅಥವಾ ಮಂತ್ರಾಲಯದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಜಗ್ಗೇಶ್, ಈ ಬಾರಿ ಬರ್ತಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಪುನೀತ್ ನಿಧನದ ನೋವಿನಲ್ಲಿರುವ ಅವರು ‘ಯಾವ ಸಡಗರಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕು’ ಎನ್ನುವ ಅರ್ಥದಲ್ಲಿ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    “ಈ ಬಾರಿ ನನ್ನ 59ನೇ ಹುಟ್ಟು ಹಬ್ಬವನ್ನು ಆಚರಿಸುವುದಿಲ್ಲ ಹಾಗೂ ಮನಸ್ಸೂ ಇಲ್ಲ. ಕಾರಣ ಪ್ರತಿ ಮಾರ್ಚ್ 17ಕ್ಕೆ ತಪ್ಪದೇ ಬರುತ್ತಿದ್ದ ಪುನೀತ್ ಕರೆ ಮತ್ತೆಂದೂ ಬರದಂತಾಗಿದೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗ್ಗೇಶ್, ಪುನೀತ್ ಜತೆ ತೆಗೆಸಿಕೊಂಡಿದ್ದ ಕೊನೆಯ ಚಿತ್ರವನ್ನೂ ಅವರು ಹಾಕಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಪುನೀತ್ ಮತ್ತು ಜಗ್ಗೇಶ್ ಮಾ.17ರಂದು ಹುಟ್ಟಿದವರು. ಹಾಗಾಗಿ ಎಷ್ಟೋ ಸಲ ಒಟ್ಟಿಗೆ ಮಂತ್ರಾಲಯದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡದ್ದು ಇದೆ. ಒಟ್ಟಿಗೆ ಅಲ್ಲಿಗೆ ಪ್ರಯಾಣ ಮಾಡಿದ್ದೂ ಇದೆ. ಜಗ್ಗೇಶ್ ಇರುವ ಮನೆ ಹತ್ತಿರ ಪುನೀತ್ ಅವರು ಬಂದರೆ, ತಪ್ಪದೇ ಜಗ್ಗೇಶ್ ಅವರಿಗೆ ಕರೆ ಮಾಡುತ್ತಿದ್ದರು. ಪುನೀತ್ ನಿಧನದ ಒಂದು ವಾರದ ಮುಂಚೆಯೇ ಒಟ್ಟಿಗೆ ಇದ್ದರು. ಇಬ್ಬರ ಮಧ್ಯೆ ಒಂದೊಳ್ಳೆ ಬಾಂಧವ್ಯ ಕೂಡ ಇತ್ತು. ಹೀಗಾಗಿ ಪುನೀತ್ ನಿಧನದ ನೋವಿನಲ್ಲಿರುವ ಜಗ್ಗೇಶ್ ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಸದ್ಯ ಜಗ್ಗೇಶ್, ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಪುನೀತ್ ಅವರ ಸಿನಿಮಾದ ಮೂಲಕ ಈ ಸಂಸ್ಥೆ ಹುಟ್ಟಿಕೊಂಡಿದ್ದು ಎನ್ನುವುದು ವಿಶೇಷ.

  • ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

    ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

    ಸ್ಯಾಂಡಲ್ ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ ಹುಟ್ಟು ಹಬ್ಬವನ್ನು ಆಪ್ತರಷ್ಟೇ ಸೇರಿಕೊಂಡು ಬೆಂಗಳೂರಿನಲ್ಲಿ ಆಚರಿಸಿದರು. ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದಾಗಿ ಈ ಬಾರಿ ಅದ್ಧೂರಿಯಾಗಿ ಆಚರಣೆ ಇರಲಿಲ್ಲ. ಹಾಗಾಗಿ ಕುಟುಂಬ ಮತ್ತು ಆಪ್ತರಷ್ಟೇ ಸೇರಿಕೊಂಡಿದ್ದರು.  ಇದನ್ನೂ ಓದಿ : ಬಾಲಯ್ಯನ ಕ್ಯಾಂಪ್ ನಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್

    ನಟ ಯಶ್ ಮತ್ತು ಇಬ್ಬರು ಮಕ್ಕಳು ರಾಧಿಕಾ ಪಂಡಿತ್ ಅವರಿಗೆ ಹುಟ್ಟು ಹಬ್ಬಕ್ಕಾಗಿ ವಿಶೇಷ ಉಡುಗೊರೆ ನೀಡಿದರು. ಅಲ್ಲದೇ, ವಿಶೇಷ ವಿನ್ಯಾಸದ ಕೇಕ್ ತಯಾರಿಸಲಾಗಿತ್ತು. ಇದನ್ನೂ ಓದಿ : ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರ

    ಈ ಬಾರಿಯ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಮತ್ತೆ ನಟನೆಗೆ ಮರಳುವಿರಾ ಎಂದೂ ಪ್ರಶ್ನೆ ಮಾಡಿದ್ದರು. ಆದರೆ, ರಾಧಿಕಾ ಮಾತ್ರ ಯಾವುದೇ ಉತ್ತರ ಕೊಟ್ಟಿಲ್ಲ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ಮಕ್ಕಳ ಕಾರಣದಿಂದಾಗಿ ಚಿತ್ರರಂಗದಿಂದ ದೂರ ಇರುವ ರಾಧಿಕಾ ಪಂಡಿತ್, ಮತ್ತೆ ಈಗ ಸಿನಿಮಾ ರಂಗಕ್ಕೆ ಬರುವ ಆಲೋಚನೆ ಮಾಡಿದ್ದಾರಂತೆ. ಆದರೆ, ಯಾರ ಸಿನಿಮಾದ ಮೂಲಕ ಅವರು ಕಮ್ ಬ್ಯಾಕ್ ಆಗುತ್ತಾರೆ ಎನ್ನುವುದೇ ಕುತೂಹಲ.