Tag: ಬರೆ

  • ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಬೆಳಗಾವಿ: ಮಗು ಜಾಸ್ತಿ ಅಳುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬಳು ಚಮಚದಿಂದ ಮೂರು ವರ್ಷದ ಮುಗುವಿಗೆ ಬರೆ ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಗೋಕಾಕ್ ಪಟ್ಟಣದ ಮಲ್ದಾರ್ ಗ್ರಾಮದ ಅಂಗನವಾಡಿಯ ಶಿಕ್ಷಕಿ ರೇಣುಕಾ ಬರೆ ಹಾಕಿದ ಶಿಕ್ಷಕಿ. ಬಾಲಕ ಮೊಹಮ್ಮದ್ ಕಬೀರ್ ಅಂಗನವಾಡಿಯಲ್ಲಿ ಜೋರಾಗಿ ಅಳುತ್ತಿದ್ದ. ಈತನನ್ನು ಹೆದರಿಸುವ ಉದ್ದೇಶದಿಂದ ಚಮಚವನ್ನು ಬಿಸಿ ಮಾಡಿ ಕೈಗೆ ಬರೆ ಹಾಕಿದ್ದಾಳೆ.

    ಮಧ್ಯಾಹ್ನ ಮನೆಗೆ ಬಂದ ಮಗುವಿನ ಕೈ ಗಮನಿಸಿದ ಪೋಷಕರು ಗಾಬರಿಗೊಂಡು ಕೂಡಲೇ ಅಂಗನವಾಡಿಗೆ ಬಂದು ವಿಚಾರಿಸಿದಾಗ ಶಿಕ್ಷಕಿ ರೇಣುಕಾ ಕೃತ್ಯ ಬೆಳಕಿಗೆ ಬಂದಿದೆ. ನಂತರ ಮಗುವಿನ ಕೈಗೆ ತೀವ್ರ ಗಾಯವಾಗಿದ್ದರಿಂದ ಕೂಡಲೇ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಿದ್ದಾರೆ.

    ಶಿಕ್ಷಕಿ ರೇಣುಕಾಳ ಕೃತ್ಯಕ್ಕೆ ಪೋಷಕರು ಆಕ್ರೋಶಗೊಂಡಿದ್ದು ಇತ್ತ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಹೂವು ಕಿತ್ತಿದ್ದಕ್ಕೆ ಬಾಲಕಿ ಬಾಯಿಗೆ ಬರೆ ಇಟ್ಟ ನೀಚ!

    ಹೂವು ಕಿತ್ತಿದ್ದಕ್ಕೆ ಬಾಲಕಿ ಬಾಯಿಗೆ ಬರೆ ಇಟ್ಟ ನೀಚ!

    ಹಾಸನ: ಮನೆಯಲ್ಲಿದ್ದ ಹೂವನ್ನು ಕಿತ್ತಿದ್ದಕ್ಕೆ ವ್ಯಕ್ತಿಯೊಬ್ಬ 8 ವರ್ಷದ ಪುಟ್ಟ ಬಾಲಕಿಯ ಬಾಯಿಗೆ ಬರೆ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಶನಿವಾರದಂದು ನಡೆದಿದೆ.

    ಬಾಲಕಿಯ ನೆರೆ ಮನೆಯ ನಿವಾಸಿ ಜಯಕುಮಾರ್ ಈ ಕೃತ್ಯವೆಸಗಿದ್ದಾನೆ. ಶನಿವಾರದಂದು ಐಸ್‍ಕ್ರೀಮ್ ತರಲು ಬಾಲಕಿ ತನ್ನ ಮನೆ ಬಳಿ ಇದ್ದ ಅಂಗಡಿಗೆ ಹೋಗಿದ್ದಾಳೆ. ಆಗ ದಾರಿಯಲ್ಲಿ ಜಯಕುಮಾರ್ ಮನೆಯ ಆವರಣದಲ್ಲಿದ್ದ ಹೂವನ್ನು ಕಿತ್ತಿದ್ದಾಳೆ. ಈ ಚಿಕ್ಕ ವಿಷಯಕ್ಕೆ ಮನೆ ಮಾಲೀಕ ಬಾಲಕಿಯ ಬಾಯಿಗೆ ಬರೆ ಇಟ್ಟಿದ್ದಾನೆ.

    ತನ್ನ ಮನೆಯಲ್ಲಿ ಬೆಳೆದಿದ್ದ ಹೂವನ್ನು ನೆರೆಮನೆಯ ಬಾಲಕಿ ಕಿತ್ತಿದನ್ನು ಕಂಡು ಜಯಕುಮಾರ್ ಕೋಪಗೊಂಡಿದ್ದಾನೆ. ಬಳಿಕ ಬಾಲಕಿಯನ್ನು ಮನೆಯೊಳಗೆ ಎಳೆದೊಯ್ದು ಮಗಳ ಕೈಯಲ್ಲಿ ಹಂಚಿನ ಕಡ್ಡಿ ಕಾಯಿಸಿಕೊಂಡು ಬರಲು ಹೇಳಿದ್ದಾನೆ. ನಂತರ ಬಾಲಕಿಯ ಬಾಯಿಗೆ ಬರೆ ಇಟ್ಟಿದ್ದಲ್ಲದೆ, ಬೆಲ್ಟ್ ನಿಂದ ಹೊಡೆದಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದ ಬಾಲಕಿ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಬಾಲಕಿಯ ಮೇಲೆ ಹಲ್ಲೆ ಮಾಡಿರುವ ಆರೋಪಿ ಮೇಲೆ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸದ್ಯ ಬಾಲಕಿಯ ಪೋಷಕರು ಆರೋಪಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗು ಮೂತ್ರ ಮಾಡಿದ್ದಕ್ಕೆ ಕಾಲಿಗೆ ಬರೆ ಎಳೆದ ಅಂಗನವಾಡಿ ಸಹಾಯಕಿ!

    ಮಗು ಮೂತ್ರ ಮಾಡಿದ್ದಕ್ಕೆ ಕಾಲಿಗೆ ಬರೆ ಎಳೆದ ಅಂಗನವಾಡಿ ಸಹಾಯಕಿ!

    ಮೈಸೂರು: ಅಂಗನವಾಡಿಯಲ್ಲಿ ಮಗು ಮೂತ್ರ ಮಾಡಿದ್ದರಿಂದ ಸಿಟ್ಟುಗೊಂಡ ಸಹಾಯಕಿಯೊಬ್ಬರು ಬರೆ ಹಾಕಿರುವ ಅಮಾನವೀಯ ಘಟನೆ ನಗರದ ದೇವಯ್ಯನ ಹುಂಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ನಗರದ ದೇವಯ್ಯನ ಹುಂಡಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಅಂಗನವಾಡಿಯಲ್ಲಿ ಪುಟ್ಟ ಮಗುವೊಂದು ಮೂತ್ರ ಮಾಡಿತ್ತು. ಕೋಪಗೊಂಡ ಆಯಾ ನೀಲಮ್ಮ ಗ್ಯಾಸ್ ಸ್ಟೌವ್‍ನಲ್ಲಿ ಚಾಕು ಕಾಯಿಸಿ ಮಗುವಿನ ಕಾಲಿಗೆ ಬರೆ ಹಾಕಿದ್ದಾಳೆ. ಇದನ್ನೂ ಓದಿ: ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ವಿಷಯ ತಿಳಿಯುತ್ತಿದ್ದಂತೆಯೇ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಪೋಷಕರು ಆಯಾ ನೀಲಮ್ಮರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆಯಾ ಮಕ್ಕಳ ಮೇಲೆ ಯಾವಾಗಲೂ ಇದೇ ರೀತಿ ದೌರ್ಜನ್ಯ ನಡೆಸುತ್ತಾಳೆ ಎಂದು ಆರೋಪಿಸಿರುವ ಗ್ರಾಮಸ್ಥರು, ಕೂಡಲೇ ಆಯಾರನ್ನು ಅಮಾನತು ಮಾಡುವಂತೆ ಅಂಗನವಾಡಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿ ತಡವಾಗಿ ಬಂದಿದ್ದಕ್ಕೆ ಎರಡು ಕೈಗೆ ಬರೆ ಹಾಕಿದ್ಲು ಟ್ಯೂಷನ್ ಶಿಕ್ಷಕಿ!

    ವಿದ್ಯಾರ್ಥಿ ತಡವಾಗಿ ಬಂದಿದ್ದಕ್ಕೆ ಎರಡು ಕೈಗೆ ಬರೆ ಹಾಕಿದ್ಲು ಟ್ಯೂಷನ್ ಶಿಕ್ಷಕಿ!

    ವಿಜಯಪುರ: ಟ್ಯೂಷನ್ ಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಎರಡು ಕೈಗೆ ಬರೆ ಹಾಕಿದ ಅಮಾನವೀಯ ಘಟನೆ ವಿಜಯಪುರ ನಗರದ ಮಾರುತಿ ಕಾಲೊನಿಯಲ್ಲಿ ನಡೆದಿದೆ.

    ಆರು ವರ್ಷದ ವಿದ್ಯಾರ್ಥಿ ಶುಭಂ ರಾಠೋಡ್ ಮೇಲೆ ಟ್ಯೂಷನ್ ಶಿಕ್ಷಕಿ ಪಲ್ಲವಿ ಶರ್ಮಾ ಬರೆ ಹಾಕಿದ್ದಾಳೆ. ವಿಜಯಪುರದ ಮಾರುತಿ ನಗರದ ತನ್ನ ಮನೆಯಲ್ಲಿ ಪಲ್ಲವಿ ಶರ್ಮಾ ಟ್ಯೂಷನ್ ಹೇಳಿಕೊಡುತ್ತಿದ್ದು ಇಲ್ಲಿಗೆ ಒಂದನೇ ತರಗತಿ ಓದುತ್ತಿದ್ದ ಶುಭಂ ಕೂಡಾ ಟ್ಯೂಷನ್‍ಗೆ ಹೋಗುತ್ತಿದ್ದ.

    ಎರಡು ದಿನಗಳ ಹಿಂದೆ ಶುಭಂ ಟ್ಯೂಷನ್‍ಗೆ ತಡವಾಗಿ ಹೋಗಿದ್ದಕ್ಕೆ, ಆತನನ್ನು ಶಿಕ್ಷಕಿ ಪಲ್ಲವಿ ಹಿಡಿದು, ಕೂರಿಸಿ ಎರಡು ಕೈಗಳಿಗೆ ಬರೆ ಹಾಕಿದ್ದಾಳೆ. ಶಿಕ್ಷಕಿಯ ವರ್ತನೆಯಿಂದ ಕೋಪಗೊಂಡು ಏಕೆ ಹೀಗೆ ಮಾಡಿದ್ದು ಎಂದು ವಿಚಾರಿಸಿದ್ದಕ್ಕೆ ನಮ್ಮ ಮೇಲೆಯೇ ಪಲ್ಲವಿ ರೇಗಾಡಿ, ಧಮ್ಕಿ ಹಾಕಿದ್ದಾಳೆ ಎಂದು ವಿದ್ಯಾರ್ಥಿಯ ತಾಯಿ ಅನಿತಾ ರಾಠೋಡ ಆರೋಪಿಸಿದ್ದಾರೆ. ಈ ಕುರಿತು ಶುಭಂ ಪೋಷಕರು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೆಮ್ಮು, ಶೀತ ಗುಣಪಡಿಸಲು 4 ತಿಂಗಳ ಮಗುವಿಗೆ ಕಬ್ಬಿಣದ ರಾಡ್‍ನಿಂದ ಬರೆ- ಆಸ್ಪತ್ರೆಗೆ ದಾಖಲು

    ಕೆಮ್ಮು, ಶೀತ ಗುಣಪಡಿಸಲು 4 ತಿಂಗಳ ಮಗುವಿಗೆ ಕಬ್ಬಿಣದ ರಾಡ್‍ನಿಂದ ಬರೆ- ಆಸ್ಪತ್ರೆಗೆ ದಾಖಲು

    ಜೈಪುರ್: ಕೆಮ್ಮು ಹಾಗೂ ಶೀತ ವಾಸಿ ಮಾಡಲೆಂದು 4 ತಿಂಗಳ ಹೆಣ್ಣುಮಗುವಿಗೆ ಕಬ್ಬಿಣದ ರಾಡ್‍ನಿಂದ ಬರೆ ಹಾಕಿರೋ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ

    ಭಿಲ್ವಾರಾದ ರಾಮಾ ಖೇದಾ ಗ್ರಾಮದಲ್ಲಿ ಮಗುವಿಗೆ ಬರೆ ಹಾಕಲಾಗಿದೆ. ಮಗುವಿನ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಕೂಡಲೇ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಗುವಿಗೆ ಕೆಲವು ದಿನಗಳ ಹಿಂದೆ ಬರೆ ಹಾಕಲಾಗಿದೆ. ಆದ್ರೆ ಮಗುವನ್ನ ವೈದ್ಯರ ಬಳಿ ಕರೆದುಕೊಂಡು ಬಂದ ನಂತರ ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲಿಸರು ಹೇಳಿದ್ದಾರೆ. 4 ತಿಂಗಳ ಹೆಣ್ಣುಮಗು ನ್ಯುಮೋನಿಯಾ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ ಎಂದು ವರದಿಯಾಗಿದೆ.

    ಕೆಮ್ಮು ಶೀತ ವಾಸಿ ಮಾಡಲು ಬರೆ ಹಾಕುವಂತಹ ಕೆಲವು ಮೂಢನಂಬಿಕೆಗಳು ಭಿಲ್ವಾರಾದಲ್ಲಿ ಸಾಮಾನ್ಯವಾಗಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಮಹಾತ್ಮಾ ಗಾಂಧಿ ಆಸ್ಪತ್ರೆಯ ಶಿಶುತಜ್ಞರಾದ ಡಾ. ಓಪಿ ಅಗಲ್ ಹೇಳಿದ್ದಾರೆ.

    ಮಕ್ಕಳ ಕಲ್ಯಾಣ ಸಮಿತಿ ನೀಡಿದ ದೂರಿನನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಕಾರೋಯ್ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಸುನಿಲ್ ಚೌಧರಿ ಹೇಳಿದ್ದಾರೆ. ಮೂಢನಂಬಿಕೆಯಿಂದ ಮಕ್ಕಳ ಜೀವಕ್ಕೆ ಕುತ್ತು ಬಂದಿರುವುದು ಭಿಲ್ವಾರಾದಲ್ಲಿ ಇದೇ ಮೊದಲೇನಲ್ಲ ಎಂದು ಅವರು ಹೇಳಿದ್ದಾರೆ.

    ಈ ಹಿಂದೆಯೂ ಕೂಡ ಶೀತ, ಕೆಮ್ಮು ವಾಸಿ ಮಾಡಲು 10 ತಿಂಗಳ ಮಗುವಿನ ಅದರ ಅಜ್ಜ ಕಬ್ಬಿಣದ ರಾಡ್‍ನಿಂದ ಬರೆ ಹಾಕಿದ್ದು, ಮಗು ಸಾವನ್ನಪ್ಪಿತ್ತು ಎಂದು ವರದಿಯಾಗಿದೆ.